Chamarajanagar
ಕನಕರಂತವರು ಎಲ್ಲ ಸಮಸ್ಯೆಗಳಿಗೆ ಮದ್ದಾಗಬಲ್ಲರು : ಡಾ ತ್ರಿವೇಣಿ
 
																								
												
												
											ಕನಕದಾಸರು ನಡೆದಂತಹ ದಾರಿಯಲ್ಲಿ ನಡೆಯುವಂತಹ ಒಂದು ಸಣ್ಣ ಮಾರ್ಗವನ್ನು ಕಂಡುಕೋಬಹುದು ನಮ್ಮ ಬದುಕು
ತುಂಬಾ ವಿಪ್ರವಗಳಿಂದ ಕೂಡಿದೆ ಸಾಮಾಜಿಕವಾಗಿ ಅಸಮಾನತೆಯ ತಾಂಡವಾ ಆಡ್ತಾ ಇದೆ ಇಂತಹ ಸಂದರ್ಭದಲ್ಲಿ ಕನಕರಂತವರು ನಮ್ಮ ಎಲ್ಲ ಸಮಸ್ಯೆಗಳಿಗೆ ಮದ್ದಾಗಬಲ್ಲರು ಎಂದು ಮುಖ್ಯ ಭಾಷಣಕರಾರಾದ ಡಾ ತ್ರಿವೇಣಿ ತಿಳಿಸಿದರು .
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರು
ಒಬ್ಬ ವೀರ ಒಬ್ಬ ಶೂರ ಹಾಗೆ ಆ ವೀರತ್ವದಲ್ಲಿ ನಡೆಯುವಂತಹ ಅನೇಕ ಯುದ್ಧದ ಘೋರತೆಯನ್ನು ನೋಡಿ ಇನ್ನು ಯುದ್ಧವೇ ಬೇಡ ಮನುಷ್ಯನ ಪರವಾಗಿ ಯೋಚನೆ ಮಾಡಬೇಕು. ದಾಸರಾಗಿ ಭಕ್ತಿಯ ಒಂದು ಮಾರ್ಗದಲ್ಲಿ ನಡೆದಿದ್ದು ಒಂದು ದೊಡ್ಡ ಯೋಚನೆ ಮಾಡಿದ್ರಾ ಅಂತ ನೋಡೋದಾದ್ರೆ ಆ ನನ್ನಂತ ಪಾಠ ಮಾಡುವ ಮೇಷ್ಟ್ರು ತಲೆತಗ್ಗಿಸಬೇಕು ಅಂತ ಅನ್ಸುತ್ತೆ ಕನಕದಾಸರ ದೊಡ್ಡ ವೈಚಾರಿಕ ನಿಲುವು ಇಂತಹ ನಮ್ಮನ್ನ ಬೇರೆಯದೇ ಆದಂತಹ ದೇವರ ಪರಿಕಲ್ಪನೆಗೆ ತಂದು ನಿಲ್ಲಿಸಿ ಅದಕ್ಕೆ ಒಬ್ರು ಪೂಜೆ ಮಾಡುವವರು ಬೇಕು ಅವರು ತುಂಬಾ ಶ್ರೇಷ್ಠವಾದಂತವರು ಅವರ ಮುಖೇನ ನಾವು ದೇವರನ್ನ ಕಾಣ್ತೀವಿ ಬಯಲು ಆಲಯದೊಳಗ ಆಲಯದೊಳಗೆ ಬಯಲು ಅಂತ ಅವರೇ ಪ್ರಶ್ನೆ ಆ ಮೂಲಕ ದೇವಸ್ಥಾನದ ಒಳಗಡೆ ಬಂದಿಯಾಗಿದ್ದಂತಹ ದೇವರಿಗೆ ಬಿಡುಗಡೆ ಕಲ್ಪಿಸಿದಂತಹ ಒಂದು ಧರ್ಮದ ಪರಿಕಲ್ಪನೆಗೆ ಬದಲಾಗಿ ಜನಸಾಮಾನ್ಯರಿಗೆ ಅರ್ಥವಾಗುವ ತರಹ ಜನಸಾಮಾನ್ಯರಿಗೆ ಎಟುಕುವ ತರಹ ದೇವರು ಧರ್ಮ ಪೂಜೆ ಭಕ್ತಿಯನ್ನು ನಮ್ಮ ಮಟ್ಟಕ್ಕೆ ತಳಕ್ಕೆ ತಂದು ನಿಲ್ಲಿಸಿದಂತಹ ಮಹಾಚೇತನ ಅವರದು. ಹಾಗಾಗಿ ಕನಕದಾಸರು ಅಪ್ಪಟ ಜನಪದ ಆ ಕಾರಣಕ್ಕೆ ನಮ್ಮ ನಿಮ್ಮ ನಡುವೆ ಎಲ್ಲಾ ಎಷ್ಟು ಶತಮಾನಗಳು ಕಳೆದರೂ ಇವತ್ತು ಜೀವಂತವಾಗಿ ಇದ್ದಾರೆ. ಕನಕದಾಸರು ಉಡುಪಿಯ ಕೃಷ್ಣ ತನ್ನ ಮೂಲ ಸ್ಥಾನವನ್ನೇ ಬಿಟ್ಟು ಈ ಕಡೆ ತಿರುಗಿದ ಆ ಕಾರಣಕ್ಕಾಗಿ ಕನಕದಾಸರಿಗೆ ಗೋಡೆ ಹೊಡೆದು ದರ್ಶನ ಕೊಟ್ಟ ಅಂತೆಲ್ಲ ನಾವು ಕಥೆಗಳನ್ನು ಕೇಳಿದ್ದೇನೆ. ಕನಕದಾಸರು ಎಲ್ಲ ಸಾಮಾನ್ಯ ಜನರಿಗೂ ಕೃಷ್ಣ ದಕ್ಕುವ ಹಾಗೆ ಮಾಡಿದರು ಇನ್ನೊಂದು ಕನಕದಾಸರ ಮಹತ್ವ ವಿವಾಹ ವಿಚ್ಛೇದನಗಳಿಗೆ ಅದನ್ನು ತಡೆಯುವ ದೊಡ್ಡ ಮಾರ್ಗವಾಗಿ ನಮ್ಮ ಕನಕದಾಸರು ರಾಮಚರಿತೆಯನ್ನು ಬರಿತಾರೆ ಆ ಮೂಲಕ ಎಲ್ಲರೂ ಬಾಂಧವ್ಯದಿಂದ ಬದುಕಬೇಕು ದಾಂಪತ್ಯದ ಸವಿ ಏನು, ದಾಂಪತ್ಯದ ಉದ್ದೇಶ ಏನು ಹೇಳುವಂತಹ ಒಂದು ಮಹತ್ವದ ಸಂಗತಿ ಎಂದು ತಿಳಿಸಿದರು.

ಶಾಸಕ ಎ.ಆರ್ ಕೃಷ್ಣಮುರ್ತಿ ಮಾತನಾಡಿ ಕನಕದಾಸರ ಕೀರ್ತನೆಗಳು ಇಂದಿನ ಸಂದರ್ಭದಲ್ಲಿ ಪ್ರಸ್ತುತ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ,ಉಪಾಧ್ಯಕ್ಷ ಶಾಂತಮ್ಮ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೊಂಡೇಗೌಡ ,ತಹಶೀಲ್ದಾರ್ ಆರ್ ಜಯಪ್ರಕಾಶ್,
ಬಿ. ಇ.ಓ ಮಾರಯ್ಯ ,ಮುಖ್ಯಾಧಿಕಾರಿ ಮಹೇಶ್ ಕುಮಾರ್, ಮುಖಂಡರಾದ ಮಲ್ಲೂ ,ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
Chamarajanagar
ಆಹಾರಧಾನ್ಯ ವಿತರಣಾ ಪ್ರಮಾಣದ ವಿವರ
 
														ಚಾಮರಾಜನಗರ: ಆಗಸ್ಟ್ ಮಾಹೆಯಲ್ಲಿ ಅಂತ್ಯೋದಯ, ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಣಾ ಪ್ರಮಾಣವನ್ನು ನಿಗದಿಪಡಿಸಲಾಗಿದೆ.
ಅಂತ್ಯೋದಯ ಪಡಿತರ ಚೀಟಿದಾರರ ಒಂದರಿಂದ ಮೂವರು ಸದಸ್ಯರಿರುವ ಕುಟುಂಬಕ್ಕೆ 14 ಕೆ.ಜಿ ಅಕ್ಕಿ, 21 ಕೆ.ಜಿ ರಾಗಿ ಸೇರಿ ಒಟ್ಟು 35 ಕೆ.ಜಿ, ನಾಲ್ಕು ಸದಸ್ಯರ ಕುಟುಂಬಕ್ಕೆ 19 ಕೆ.ಜಿ ಅಕ್ಕಿ, 21 ರಾಗಿ ಹಾಗೂ ಐದು ಸದಸ್ಯರ ಕುಟುಂಬಕ್ಕೆ 29 ಕೆ.ಜಿ ಅಕ್ಕಿ, 21 ಕೆ.ಜಿ ರಾಗಿ ವಿತರಣೆ ಮಾಡಲಾಗುವುದು.

ಕೇಂದ್ರ ಬಿಪಿಎಲ್ ಪಡಿತರ ಚೀಟಿದಾರರ ಓರ್ವ ಸದಸ್ಯರಿರುವ ಕುಟುಂಬಕ್ಕೆ 7 ಕೆ.ಜಿ ಅಕ್ಕಿ, 3 ಕೆ.ಜಿ ರಾಗಿ, ಇಬ್ಬರು ಸದಸ್ಯರ ಕುಟುಂಬಕ್ಕೆ 14 ಕೆ.ಜಿ ಅಕ್ಕಿ, 6 ಕೆ.ಜಿ ರಾಗಿ, ಮೂವರು ಸದಸ್ಯರ ಕುಟುಂಬಕ್ಕೆ 21 ಕೆ.ಜಿ ಅಕ್ಕಿ 9 ಕೆ.ಜಿ ರಾಗಿ, ನಾಲ್ಕು ಸದಸ್ಯರ ಕುಂಟುಂಬಕ್ಕೆ 28 ಕೆ.ಜಿ ಅಕ್ಕಿ 12 ಕೆ.ಜಿ ರಾಗಿ, ಐದು ಸದಸ್ಯರ ಕುಟುಂಬಕ್ಕೆ 35 ಕೆ.ಜಿ ಅಕ್ಕಿ 15 ಕೆ.ಜಿ ರಾಗಿ ವಿತರಣೆ ಮಾಡಲಾಗುತ್ತದೆ.
ರಾಜ್ಯ ಬಿಪಿಎಲ್ ಪಡಿತರ ಚೀಟಿದಾರರ ಓರ್ವ ಸದಸ್ಯರಿರುವ ಕುಟುಂಬಕ್ಕೆ 10 ಕೆ.ಜಿ ಅಕ್ಕಿ, ಇಬ್ಬರು ಸದಸ್ಯರ ಕುಟುಂಬಕ್ಕೆ 20 ಕೆ.ಜಿ ಅಕ್ಕಿ, ಮೂವರು ಸದಸ್ಯರ ಕುಟುಂಬಕ್ಕೆ 30 ಕೆ.ಜಿ ಅಕ್ಕಿ, ನಾಲ್ಕು ಸದಸ್ಯರ ಕುಂಟುಂಬಕ್ಕೆ 40 ಕೆ.ಜಿ ಅಕ್ಕಿ, ಐದು ಸದಸ್ಯರ ಕುಟುಂಬಕ್ಕೆ 50 ಕೆ.ಜಿ ಅಕ್ಕಿ ವಿತರಿಸಲಾಗುತ್ತದೆ. ರಾಜ್ಯ ಬಿಪಿಎಲ್ (ಆದ್ಯತಾ ಪಡಿತರ) ಪಡಿತರ ಚೀಟಿಗೆ ರಾಗಿ ವಿತರಣೆ ಇರುವುದಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಯೋಗನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಬಿಡಾಡಿ ದನ, ಕರು, ನಾಯಿ, ಇತರೆ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡದಿರಲು ಸೂಚನೆ
 
														ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ವ್ಯಾಪ್ತಿಯ ರಸ್ತೆಗಳಲ್ಲಿ ಬಿಡಾಡಿ ದನ, ಕರು, ನಾಯಿ, ಹಂದಿಗಳನ್ನು ರಸ್ತೆಗೆ ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗುತ್ತಿದು ಸಾಕು ಪ್ರಾಣಿಗಳ ಮಾಲೀಕರು ತಮ್ಮ ಮನೆಯಲ್ಲೇ ಸಾಕು ಪ್ರಾಣಿಗಳನ್ನು ಕಟ್ಟಿಹಾಕಿಕೊಂಡು ಸಾಕಬೇಕು. ಇಲ್ಲವಾದಲ್ಲಿ ಪುರಸಭೆ ಕಾಯ್ದೆ ಅನುಸಾರ ಕ್ರಮವಹಿಸಲಾಗುವುದು ಎಂದು ಪುರಸಭೆ ತಿಳಿಸಿದೆ.

ಗುಂಡ್ಲುಪೇಟೆ ಪಟ್ಟಣದ ಪ್ರಮುಖ ರಸ್ತೆಗಳಾದ, ಚಾಮರಾಜನಗರ ರಸ್ತೆ, ಕೋಡಹಳ್ಳಿ ಸರ್ಕಲ್, ಬಿ.ಎನ್. ರಸ್ತೆ, ಕೆ.ಆರ್.ಸಿ ರಸ್ತೆ, ಕ್ಯಾಲಿಕೆಟ್ ರಸ್ತೆ, ಊಟಿ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ ಬಿಡಾಡಿ ದನ, ಕರು, ಹಂದಿ ಹಾಗೂ ಇತರೆ ಸಾಕು ಪ್ರಾಣಿಗಳು ರಸ್ತೆಯಲ್ಲಿ ಒಡಾಡುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗುವುದಲ್ಲದೇ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸದರಿ ಸಾಕು ಪ್ರಾಣಿಗಳ ಮಾಲೀಕರು ಸಾಕು ಪ್ರಾಣಿಗಳನ್ನು ತಮ್ಮ ತಮ್ಮ ಮನೆಯಲ್ಲಿ ಕಟ್ಟಿ ಹಾಕಿಕೊಂಡು ಸಾಕಬೇಕು. ತಪ್ಪಿದಲ್ಲಿ ಪುರಸಭಾ ಕಾಯ್ದೆ 1964ರ ಅಧಿನಿಯಮ ಕಲಂ (222), (223) ಮತ್ತು (239)ರ ರೀತ್ಯಾ ಸಾಕು ಪ್ರಾಣಿಗಳನ್ನು ಪುರಸಭೆ ವಶಕ್ಕೆ ಪಡೆದು ದಂಢ ವಿಧಿಸುವುದಲ್ಲದೇ ಪಿಂಜಾರ್ ಪೋಲ್‌ಗೆ ಬಿಡಲು ಕ್ರಮವಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಯಳಂದೂರು| ನಾಳೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ದಿನಾಚರಣೆ: ಅಂಬಳ ವೀರಭದ್ರನಾಯಕ
 
														ಯಳಂದೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆ.6ರ ಬುಧವಾರ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಾಲ್ಲೂಕು ಅಧ್ಯಕ್ಷ ಅಂಬಳ ವೀರಭದ್ರನಾಯಕ ತಿಳಿಸಿದ್ದಾರೆ.
ಪಟ್ಟಣದ ದೇವಾಂಗ ಬೀದಿಯಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದಿಂದ ಹಣ್ಣು ಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ನಾಲ್ವರು ಪತ್ರಕರ್ತರು, ಒಬ್ಬ ಪತ್ರಿಕಾ ವಿತರಕ ಸೇರಿದಂತೆ ಒಟ್ಟು ಐವರಿಗೆ ದತ್ತಿ ಪ್ರಶಸ್ತಿನೀಡಿಸನ್ಮಾನಿಸಲಾಗುವುದು. ಕಾರ್ಯಕ್ರಮ ವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಸಂಸದ ಸುನಿಲ್ ಬೋಸ್ ಉಪಸ್ಥಿತಿಯಲ್ಲಿ, ಡಿವಿಜಿ ಭಾವಚಿತಕ್ಕೆ ಪುಷ್ಪಾರ್ಚನೆಯನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಶಾಸಕರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ಮಾಜಿ ಶಾಸಕರಾದ ಎನ್.ಮಹೇಶ್, ಎಸ್. ಬಾಲರಾಜು, ಜಿ.ಎನ್.ನಂಜುಂಡಸ್ವಾಮಿ, ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಂಘ ರಾಜ್ಯ ಪರಿಷತ್ ಸದಸ್ಯ ಗೂಳಿಪುರ ನಂದೀಶ್, ಸಂಘದ ಉಪಾಧ್ಯಕ್ಷ ವಿ.ನಾಗರಾಜು, ಪ್ರಧಾನ ಕಾರ್ಯದರ್ಶಿ ಡಿ.ಪಿ.ಮಹೇಶ್, ಜಿಲ್ಲಾ ನಿರ್ದೇಶಕರಾದ ಫೈರೋಜ್ ಖಾನ್, ಸಹ ಕಾರ್ಯದರ್ಶಿ ಸೈಯದ್ ಇರ್ಫಾನ್, ಖಜಾಂಚಿ ನಾಗೇಂದ್ರ ನಿರ್ದೇಶಕರಾದ ಯರಿಯೂರು ನಾಗೇಂದ್ರ, ನಾಗರಾಜು, ಮದ್ದೂರು ಪುರುಷೋತ್ತಮ, ಬೂದಂಬಳ್ಳಿ ಗಿರೀಶ್, ಸೈಯದ್ ಮುಷರಫ್, ವಿವೇಕ್, ಕೊಮಾರನಪುರ ರಾಜಶೇಖರ್, ಇತರರು ಹಾಜರಿದ್ದರು.
- 
																	   Hassan12 hours ago Hassan12 hours agoಹುಡಾ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ಮುಖಂಡರಿಂದ ಪ್ರತಿಭಟನೆ: ಪಕ್ಷಗೋಸ್ಕರ ಕೆಲಸ ಮಾಡಿದವರಿಗೆ ಸ್ಥಾನ ನೀಡುವಂತೆ ಕಯುಮ್ ಆಗ್ರಹ 
- 
																	   Hassan14 hours ago Hassan14 hours agoನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸೈಯದ್ ತಾಜಿಂ ಬೃಹತ್ ಪ್ರತಿಭಟನೆ. 
- 
																	   Chikmagalur17 hours ago Chikmagalur17 hours agoರೈತನ ಮೇಲೆ ಕಾಡಾನೆ ದಾಳಿ, ಬದುಕುಳಿದ ರೈತ ಫಿಲಿಪ್ 
- 
																	   Hassan10 hours ago Hassan10 hours agoಹಾಸನ: ದುರ್ನಾಥ ಬೀರುತ್ತಿರುವ ರಜತಾ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆ 
- 
																	   Kodagu10 hours ago Kodagu10 hours agoಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ 
- 
																	   Hassan15 hours ago Hassan15 hours agoಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ 
- 
																	   Hassan13 hours ago Hassan13 hours agoಹಾಲುವಾಗಿಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ 
- 
																	   Manglore11 hours ago Manglore11 hours agoಧರ್ಮಸ್ಥಳ ಪ್ರಕರಣ- ಕಾಡಿನಲ್ಲಿ ಶೋಧನೆ ನಡೆಸಿ ತೆರಳಿದ ಎಸ್ಐಟಿ ತಂಡ 

 
											 
											 
											 
											 
											