Tourism
ರೈಲಿನಲ್ಲಿ ನೀಡಲಾಗುವ ಬ್ಲಾಂಕೆಟ್ಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ ಗೊತ್ತಾ?
 
																								
												
												
											ಸಾಮಾನ್ಯವಾಗಿ ರೈಲಿನಲ್ಲಿ ಎಲ್ಲರೂ ಪ್ರವಾಸ ಮಾಡಿರುತ್ತಾರೆ. ಆದರೆ ತುಂಬಾ ದೂರದ ಪ್ರಯಾಣ ಮಾಡುವವರಿಗೆ, ಮಾಡುವ ಆಲೋಚನೆ ಇರುವವರಿಗೆ ಈ ಸುದ್ದಿ ಸಹಕಾರಿಯಾಗಲಿದೆ.
ರೈಲ್ವೆ ಇಲಾಖೆಯಲ್ಲಿ ಪ್ರವಾಸಿಗರನ್ನು ಸೆಳೆಯಲು, ಉನ್ನತ ಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಇತ್ತ ಸುಗಮ ಪ್ರಯಾಣ ಮಾಡಲು ವಿವಿಧ ಸವಲತ್ತನ್ನು ನೀಡಿರುವ ರೈಲ್ವೆ ಇಲಾಖೆ, ರಾತ್ರಿ ಹಗಲು ಪ್ರಯಾಣ ಮಾಡುವ ಪ್ರಯಾಣಿಕರಿಗೆ ನೀಡಲಾಗುವ ಬ್ಲಾಂಕೆಟ್ (ಮೇಲುಹೊದಿಕೆ) ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಪ್ರಯಾಣದ ವೇಳೆ ರೈಲ್ವೆ ಇಲಾಖೆ ನೀಡಲಾಗುವ ಬ್ಲಾಂಕೆಟ್ಗಳ ಶುಚಿತ್ವದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಅನುಮಾನ ಮೂಡುತ್ತದೆ. ಅವುಗಳನ್ನು ಹೇಗೆ ಸ್ವಚ್ಛಗೊಳಿಸಲಾಗುತ್ತದೆ ಎಂಬ ಬಗ್ಗೆ ಸಾಮಾನ್ಯವಾಗಿ ಅನುಮಾನ ಮೂಡುತ್ತದೆ. ಈ ಎಲ್ಲಾ ವಿಚಾರಗಳಿಗೆ ಸ್ವತಃ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮಾತನಾಡಿದ್ದಾರೆ.
ಸಂಸತ್ನಲ್ಲಿ ಮಾತನಾಡಿರುವ ಅವರು, ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತದೆ. ಹೆಚ್ಚುವರಿ ಬೆಡ್ರೋಲ್ಗಳನ್ನು ಬೆಡ್ ಕಿಟ್ನಲ್ಲಿ ಇಡಲಾಗಿದ್ದು, ಅಗತ್ಯ ಸಮಯದಲ್ಲಿ ಬಳಸಲಾಗುತ್ತದೆ.
ಭಾರತೀಯ ರೈಲ್ವೆಯಲ್ಲಿ ಬಳಸಲಾಗುವ ಬ್ಲಾಂಕೆಟ್ಗಳು ತೆಳುವಾಗಿದ್ದು, ತೊಳೆಯಲು ಬಲು ಸುಲಭವಾಗುತ್ತದೆ. ಗುಣಮಟ್ಟದ ಯಂತ್ರಗಳು, ಲಾಂಡ್ರಿಗಳು, ಗುಣಮಟ್ಟದ ರಾಸಾಯನಿಕಗಳನ್ನು ಬಳಸಿ ಶುಚಿಗೊಳಿಸಲಾಗುತ್ತದೆ.
ಬ್ಲಾಂಕೆಟ್, ಬೆಡ್ರೋಲ್ಗಳನ್ನು ತೊಳೆದ ಮೇಲೆ ಅವುಗಳ ಗುಣಮಟ್ಟ ಪರೀಕ್ಷಿಸಲು ವೈಟೋ ಮೀಟರ್ ಬಳಸಿ ಪರೀಕ್ಷಿಸಲಾಗುತ್ತದೆ. ಎಲ್ಲವನ್ನು ಶುಚಿತ್ವವಾಗಿ ನೋಡಿಕೊಂಡು ಹೋಗಲಾಗುತ್ತಿದೆ ಎಂದು ಅಶ್ವಿನ್ ವೈಷ್ಣವ್ ಮಾಹಿತಿ ನೀಡಿದ್ದಾರೆ.
 
																	
																															- 
																	   Hassan12 hours ago Hassan12 hours agoಹುಡಾ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ಮುಖಂಡರಿಂದ ಪ್ರತಿಭಟನೆ: ಪಕ್ಷಗೋಸ್ಕರ ಕೆಲಸ ಮಾಡಿದವರಿಗೆ ಸ್ಥಾನ ನೀಡುವಂತೆ ಕಯುಮ್ ಆಗ್ರಹ 
- 
																	   Hassan14 hours ago Hassan14 hours agoನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸೈಯದ್ ತಾಜಿಂ ಬೃಹತ್ ಪ್ರತಿಭಟನೆ. 
- 
																	   Chikmagalur17 hours ago Chikmagalur17 hours agoರೈತನ ಮೇಲೆ ಕಾಡಾನೆ ದಾಳಿ, ಬದುಕುಳಿದ ರೈತ ಫಿಲಿಪ್ 
- 
																	   Hassan10 hours ago Hassan10 hours agoಹಾಸನ: ದುರ್ನಾಥ ಬೀರುತ್ತಿರುವ ರಜತಾ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆ 
- 
																	   Kodagu10 hours ago Kodagu10 hours agoಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ 
- 
																	   Hassan15 hours ago Hassan15 hours agoಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ 
- 
																	   Hassan13 hours ago Hassan13 hours agoಹಾಲುವಾಗಿಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ 
- 
																	   Manglore11 hours ago Manglore11 hours agoಧರ್ಮಸ್ಥಳ ಪ್ರಕರಣ- ಕಾಡಿನಲ್ಲಿ ಶೋಧನೆ ನಡೆಸಿ ತೆರಳಿದ ಎಸ್ಐಟಿ ತಂಡ 
 
											 
											 
											 
											 
											