Connect with us

Mandya

ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆಯ ಕಾರ್ಯಕ್ರಮಗಳ ವಿವರ

Published

on

ಡಿಸೆಂಬರ್ 21 ರಂದು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆಯ ಕಾರ್ಯಕ್ರಮಗಳ ವಿವರ

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಿಸೆಂಬರ್ 21 ರಂದು ನಡೆಯುವ ಪ್ರಧಾನ ವೇದಿಕೆಯ ಕಾರ್ಯಕ್ರಮಗಳ ವಿವರ ಇಂತಿದೆ:

ಗೋಷ್ಠಿಗಳು

ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ಪ್ರಧಾನ ವೇದಿಕೆಯಲ್ಲಿ ನೆಲ-ಜಲ ಸಾಕ್ಷಾರತೆ : ಅವಲೋಕನ ವಿಷಯದ ಬಗ್ಗೆ ಗೋಷ್ಠಿ -3 ನಡೆಯಲಿದೆ. ನೀರಾವರಿ ತಜ್ಞರು ಕ್ಯಾಪ್ಟನ್ ರಾಜಾರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಿಂತಕರು ಡಾ ಅಶೋಕ ದಳವಾಯಿ ಅವರು ಆಶಯ ನುಡಿ ನುಡಿಯಲಿದ್ದಾರೆ. ಕಾವೇರಿ ಅಚ್ಚುಕಟ್ಟಿನ ಕೆರೆಕಟ್ಟೆಗಳ ಸ್ಥಿತಿಗತಿಗಳು ವಿಷಯದ ಬಗ್ಗೆ ಡಾ ಎಂ ಎನ್ ತಿಮ್ಮೇಗೌಡ, ಕೃಷ್ಣಾ ಮತ್ತು ಮಹಾದಾಯಿ ವಿಷಯದ ಬಗ್ಗೆ ಡಾ ಕೃಷ್ಣ ಕೋಲ್ಹಾರಕುಲಕರ್ಣಿ ಹಾಗೂ ಕೃಷಿಕರು ಮತ್ತು ಜನಸಾಮಾನ್ಯರಲ್ಲಿ ಇರಬೇಕಾದ ನೆಲ-ಜಲ ಸಾಕ್ಷಾರತೆ ವಿಷಯದ ಬಗ್ಗೆ ಡಾ ಎ ಬಿ ಪಾಟೀಲ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಓಂ ಪ್ರಕಾಶ್ ದಡ್ಡೆ, ಸ್ವಾಗತ – ಬಿ ಟಿ ನಾಗೇಶ್, ನಿರೂಪಣೆ – ಬಿ ಎನ್ ವಾಸರೆ, ವಂದನಾರ್ಪಣೆ – ಬಿ ಹೆಚ್ ಸತೀಶ್ ಗೌಡ ಅವರು ಮಾಡಲಿದ್ದಾರೆ.

ಗೋಷ್ಠಿ – 4 : ಬೆಳಿಗ್ಗೆ 11 ರಿಂದ 12.30 ಗಂಟೆಯಯವರೆಗೆ ಸಾಹಿತ್ಯದಲ್ಲಿ ರಾಜಕೀಯ : ರಾಜಕೀಯದಲ್ಲಿ ಸಾಹಿತ್ಯ ವಿಷಯದ ಬಗ್ಗೆ ಗೋಷ್ಠಿ – 4 ನಡೆಯಲಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಾಜಕೀಯ ಚಿಂತಕರು ಡಾ ಬಿ ಎಲ್ ಶಂಕರ್ ಅವರು ಆಶಯ ನುಡಿಯನ್ನು ನೆರವೇರಿಸಲಿದ್ದಾರೆ. ರಾಜಕೀಯ ಚಿಂತಕ ಸಿ ಟಿ ರವಿ ಅವರು ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವುಗಳು, ರಾಜಕೀಯ ಚಿಂತಕ ಡಾ ಕೆ ಅನ್ನದಾನಿ ಅವರು ರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆ ಹಾಗೂ ರಾಜಕೀಯ ವಿಶ್ಲೇಷಕರು ರವೀಂದ್ರ ರೇಷ್ಮೆ ಅವರು ಸಾಹಿತ್ಯ ಕೃತಿಗಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಡಿ ಎಸ್ ಕೃಷ್ಣಾರೆಡ್ಡಿ, ಸ್ವಾಗತ – ಕೆ ಎಸ್ ಸಿದ್ಧಲಿಂಗಪ್ಪ, ನಿರೂಪಣೆ – ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ವಂದನಾರ್ಪಣೆ – ನಾಗೇಂದ್ರ ಎನ್ ಅವರು ನೆರವೇರಿಸಲಿದ್ದಾರೆ.

ಗೋಷ್ಠಿ – 5 : ಮಧ್ಯಾಹ್ನ 12.30 ರಿಂದ 1.30 ರವರೆಗೆ ಕರ್ನಾಟಕ -50: ಹಿನ್ನೋಟ -ಮುನ್ನೋಟ, ಕನ್ನಡವೆಂದರೆ ಬರೀ ನುಡಿಯಲ್ಲ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ. ಹಿರಿಯ ವಿದ್ವಾಂಸ ಡಾ ನರಹಳ್ಳಿ ಬಾಲಸುಬ್ರಮಣ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಂಕರ ಹಲಗತ್ತಿ ಅವರು ಹೆಸರಾಯಿತು ಕರ್ನಾಟಕ – ಉಸಿರಾಯಿತು ಕನ್ನಡ ವಿಷಯದ ಬಗ್ಗೆ ಹಾಗೂ ರಾಘವೇಂದ್ರ ಪಾಟೀಲ ಅವರು ಐದು ದಶಕಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನೋಟ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ನಿತ್ಯಶ್ರೀ ಎಂ ಎಸ್, ಸ್ವಾಗತ – ಸಿದ್ದಪ್ಪ ಹೊಟ್ಟಿ, ನಿರೂಪಣೆ – ಸುಮತಿ ಎ ಜಿ, ವಂದನಾರ್ಪಣೆ – ಹಣಮಂತ ಶೇರಿ ಖಚೋರಿ ಅವರು ನೆರವೇರಿಸಲಿದ್ದಾರೆ.

ಗೋಷ್ಠಿ -6: ಮಧ್ಯಾಹ್ನ 1.30 ರಿಂದ 3 ಗಂಟೆಯವರೆಗೆ ಮಂಡ್ಯ ನೆಲ ಮೂಲದ ಮೊದಲುಗಳು ವಿಷಯದ ಬಗ್ಗೆ ಗೋಷ್ಠಿ -6 ನಡೆಯಲಿದೆ. ಖ್ಯಾತ ವಾಗ್ಮಿಗಳು ಪ್ರೊ. ಎಂ ಕೃಷ್ಣೆಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪ್ರೊ ಬಿ ಶಿವಲಿಂಗಯ್ಯ ಅವರು ಕೆರೆ, ಅಣೆಕಟ್ಟೆ, ಸೇತುವೆ, ಕಾಲುವೆಗಳ ನಿರ್ಮಾಣ ವಿಷಯದ ಬಗ್ಗೆ, ಡಾ ವಿ ನಾಗೇಂದ್ರ ಪ್ರಸಾದ್ ಅವರು ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ವಿಷಯದ ಬಗ್ಗೆ, ಡಾ ಕೆಂಪಮ್ಮ ಅವರು ಜನಪದ, ನವೀನ್ ಕುಮಾರ್ ಅವರು ಜಲವಿದ್ಯುತ್ ವಿಷಯದ ಬಗ್ಗೆ ನವೀನ್ ಕುಮಾರ್ ಅವರು ವಿಷಯ ಮಂಡನೆ ಮಾಡಲಿದ್ದಾರೆ. ನಿವೃತ್ತ ಕನ್ನಡ ಪ್ರಾಧ್ಯಪಕರು ಡಾ ಎಚ್ ಎಸ್ ಮುದ್ದೇಗೌಡ ಅವರು ಕಾರ್ಯಕ್ರಮದ ವಿಶೇಷ ಉಪಸ್ಥಿತಿ ವಹಿಸಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಮಂಡ್ಯ ಮಿತ್ರ ಚನ್ನೇಗೌಡ, ಸ್ವಾಗತ – ಚಂದ್ರಲಿಂಗು, ನಿರೂಪಣೆ – ಮಂಜುನಾಥ ಎಚ್ ಎಸ್, ವಂದನಾರ್ಪಣೆ – ಗೂಳಪ್ಪ ಹುಲಿಮನಿ ಅವರು ನೆರವೇರಿಸಲಿದ್ದಾರೆ.

ಗೋಷ್ಠಿ – 7 : ಮಧ್ಯಾಹ್ನ – 3 ರಿಂದ 5.05 ಗಂಟೆಯವರೆಗೆ ಕರ್ನಾಟಕದ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ ವಿಷಯದ ಬಗ್ಗೆ ಗೋಷ್ಠಿ – 7 ನಡೆಯಲಿದೆ. ಹಿರಿಯ ಜಾನಪದ ತಜ್ಞ ಡಾ. ವೀರಣ್ಣ ದಂಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾ.ರಾಮೇಶ್ವರಪ್ಪ ಅವರು ಮಂಟೇಸ್ವಾಮಿ ಕಾವ್ಯ, ನಂಜುಂಡಸ್ವಾಮಿ ಪಿ.ಎಂ. ಅವರು ಮೂಡಲಪಾಯ, ಎಂ. ಮೋಹನ್ ಅವರು ಜುಂಜಪ್ಪ ಕಾವ್ಯ, ಮಲ್ಲವ್ವ ಮೇಗೇರಿ ಅವರು ಶ್ರೀಕೃಷ್ಣ ಪಾರಿಜಾತ, ನಾಗರಾಜ ತೋಂಬ್ರಿ ಅವರು ಜೋಗಿ ಕಥಾನಕ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಜಿ ವೈ ಪದ್ಮ, ಸ್ವಾಗತ – ಸುರೇಶ್ ಚನ್ನಶೆಟ್ಟಿ, ನಿರೂಪಣೆ -ಡಾ ರೇಷ್ಮಾ ಅಂಗಡಿ, ವಂದನಾರ್ಪಣೆ- ಕೆ ಆರ್ ಮಮತೇಶ್ ಅವರು ನೆರವೇರಿಸಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ

ಸಂಜೆ 5. 05 ರಿಂದ 6 ಗಂಟೆಯವರೆಗೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಾಧ್ಯಕ್ಷರು – ನಾಡೋಜ ಡಾ. ಗೊ. ರು. ಚನ್ನಬಸಪ್ಪ ಹಾಗೂ ಪ್ರಧಾನ ನಿರ್ವಹಣೆ – ಹಿರಿಯ ಜಾನಪದ ತಜ್ಞ ಡಾ ಕೆ ಆರ್ ಸಂಧ್ಯಾರೆಡ್ಡಿ ಮಾಡಲಿದ್ದಾರೆ.

ಸಂವಾದಕರು:- ಡಾ. ಬಸವರಾಜ್ ನೆಲ್ಲೀಸರ, ಮಾರುತಿ ಶಿಡ್ಲಾಪುರ, ಪ್ರೊ. ಟಿ.ವಿ, ಸುರೇಶ ಗುಪ್ತ, ಡಾ. ಅನಸೂಯಾ ಹೊಂಬಾಳೆ, ಶಂಕರ ಮಲ್ಲಪ್ಪ ಬೈಚಬಾಳ, ಶಾಂತಲಾ ಧರ್ಮರಾಜ, ಡಾ ಪಿ ನಾಗರಾಜು, ಡಾ ಕುರುವ ಬಸವರಾಜ್, ಪ್ರೊ. ಎಂ.ವೈ. ಶಿವರಾಂ, ಡಾ. ಸಂತೋಷ್ ಹಾನಗಲ್ ಅವರುಗಳು ಸಂವಾದಕರಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಶರಣು ಸಬರದ, ಸ್ವಾಗತ – ಸೂರಿ ಶ್ರೀನಿವಾಸ್, ನಿರೂಪಣೆ – ಡಾ. ಜಿನದತ್ತ ಹಡಗಲಿ, ವಂದನಾರ್ಪಣೆ – ವೆಂಕಟೇಶ ಬೇವಿನಬೆಂಚಿ ಅವರು ನೆರವೇರಿಸಲಿದ್ದಾರೆ.

 

ಸಾಧಕರಿಗೆ ಸನ್ಮಾನ

ಸಂಜೆ 6 ರಿಂದ 7.30 ಗಂಟೆಯವರೆಗೆ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಸುವರ್ಣ ಮಹೋತ್ಸವದ ನೆನಪಿನಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದಿವ್ಯ ಸಾನಿಧ್ಯ – ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಸನ್ನಿಧಾನ – ಶ್ರೀರಂಗಪಟ್ಟಣದ ಶ್ರೀ ಕ್ಷೇತ್ರ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಧ್ಯಕ್ಷರು ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಸನ್ಮಾನಿಸುವವರು – ವಿಶ್ರಾಂತ ಸರ್ವೋಚ್ಚ ನ್ಯಾಯಾಲಯ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಕರ್ನಾಟಕ ರಾಜ್ಯ ಗಡಿ ಮತ್ತು ನದಿಗಳ ರಕ್ಷಣಾ ಆಯೋಗ, ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲರು ಸನ್ಮಾನಿಸಲಿದ್ದಾರೆ.

ಸನ್ಮಾನಿತರುಗಳು: ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ (ನ್ಯಾಯಾಂಗ ಕ್ಷೇತ್ರ), ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ (ನ್ಯಾಯಾಂಗ ಕ್ಷೇತ್ರ), ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ (ನ್ಯಾಯಾಂಗ ಕ್ಷೇತ್ರ), ನ್ಯಾಯಾಧೀಶ ಬಿ. ಶಿವಲಿಂಗೇಗೌಡ (ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಸೇವೆ), ಎಸ್.ಆರ್. ಉಮಾಶಂಕರ್ ಭಾ.ಆ.ಸೇ. ಆಡಳಿತ (ಕನ್ನಡ), ಡಾ.ಬಿ.ಆ‌ರ್.ರವಿಕಾಂತೇಗೌಡ ಭಾ.ಪೊ.ಸೇ ಆಡಳಿತ (ಕನ್ನಡ), ಪೂರ್ಣಿಮಾ ಬಿ.ಆರ್ ಭಾ.ಆ.ಸೇ ಆಡಳಿತ (ಕನ್ನಡ), ಲತಾ ಭಾ.ಆ.ಸೇ ಆಡಳಿತ (ಕನ್ನಡ), ಬಾಲಚಂದ್ರ (ಭಾ.ಪೊ.ಸೇ. ಆಡಳಿತ ಕನ್ನಡ), ಡಿ.ಸಿ. ರಾಜಪ್ಪ ನಿವೃತ್ತ ಡಿ.ಐ.ಜಿ (ಕನ್ನಡ ಸೇವೆ), ಎಸ್.ಎ. ಚಿನ್ನೇಗೌಡ (ಚಲನಚಿತ್ರ ಕ್ಷೇತ್ರ), ಅರಕಲಗೂಡು ಪದ್ಮನಾಭ (ರಂಗಭೂಮಿ), ಪ್ರಕಾಶ ಶೆಟ್ಟಿ (ಕನ್ನಡ ಸಂಘಟನೆ), ಎ.ಸಿ. ಚಂದ್ರಪ್ಪ ಅಜ್ಜಂಪುರ (ಸಮಾಜಸೇವೆ), ರಾ.ಪಾ. ರವಿಶಂಕರ (ಸಹಕಾರ), ದಾನಿ ಬಾಬುರಾವ್ (ಶಿಕ್ಷಣ), ಡಾ.ಕೆ. ಸಿದ್ದಪ್ಪ (ಶಿಕ್ಷಣ), ಭಾರತಿ ಪಾಟೀಲ ಮತ್ತು ಡಾ. ಅನಿಲ ಪಾಟೀಲ ನ್ಯೂಯಾರ್ಕ್, ಅಮೆರಿಕಾ, ಕನ್ನಡ ಸಂಘಟನೆ, ವಿ. ಪ್ರಸನ್ನ ಕುಮಾರ್ ಮತ್ತು ಉಷಾ ಪ್ರಸನ್ನ ಕುಮಾರ್ ನ್ಯೂಜೆರ್ಸಿ, ಅಮೆರಿಕಾ, ಕನ್ನಡ ಸಂಘಟನೆ, ಬೋರೇಗೌಡ ಕ್ರೀಡೆ, ವಿಶೇಷ ಚೇತನರು, ಡಾ. ಕೆ. ಎಸ್. ಸೋಮಶೇಖರ್ (ಕನ್ನಡ ಸಂಘಟನೆ), ಮುದ್ದುಮೋಹನ್ (ಸಂಗೀತ ಕ್ಷೇತ್ರ), ನಾಗೇಶ್ವರ ರಾವ್ (ಚಲನಚಿತ್ರ ಕ್ಷೇತ್ರ), ಕನ್ನಡ ಕೂಟ ನ್ಯೂಯಾರ್ಕ್ ಅಮೆರಿಕಾ, ಕನ್ನಡ ಸಂಘಟನೆ ಸ್ವೀಕರಿಸುವವರು ಬದರಿನಾಥ ಅಂಬಟ್ಟಿ ಅಧ್ಯಕ್ಷರು, ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯ ಅಮೆರಿಕ, ಕನ್ನಡ ಸಂಘಟನೆ ಸ್ವೀಕರಿಸುವವರು : ವಸಂತ ಬೆಳಗೆರೆ ಅಧ್ಯಕ್ಷರು, ಬಹರೇನ್ ಕನ್ನಡ ಸಂಘ ಅರಬ್ ದೇಶ, ಕನ್ನಡ ಸಂಘಟನೆ, ಸ್ವಂತ ಕನ್ನಡ ಭವನ ಸ್ವೀಕರಿಸುವವರು : ಅಮರನಾಥ್ ರೈ ಅಧ್ಯಕ್ಷರು, ನಾಗಯ್ಯ (ಕಾನೂನು), ಸಿ.ವಿ. ಶಶಿಕುಮಾರ್ ನ್ಯೂಯಾರ್ಕ್, ಅಮೆರಿಕಾ, ಕನ್ನಡ ಸೇವೆ ಮತ್ತು ಸಮಾಜ ಸೇವೆ, ಎನ್ ಟಿ ಎರ್ರಿಸ್ವಾಮಿ (ಮಹಿಳಾ ಸಬಲೀಕರಣ), ಕೂತ್ಯಾಲ ನಾಗಪ್ಪ (ಸಾಹಿತ್ಯ), ರಾಮಚಂದ್ರ ಧೋಂಗಡೆ (ಸಾಹಿತ್ಯ), ಎಸ್‌.ಎಫ್.ಎನ್ ಗಾಜಿ ಗೌಡ್ರ (ಸಮಾಜ ಸೇವೆ), ಎಂ ಎಂ ಕಲಹಾಳ (ಕ್ರೀಡಾಕ್ಷೇತ್ರ), ಮಹಮದ್ ಇಬ್ರಾಹಿಂ (ಸಮಾಜ ಸೇವೆ), ಶೇಖರಗೌಡ ವೀ ಸರನಾಡಗೌಡರ್ (ಸಾಹಿತ್ಯ), ಕೆ.ಎಂ. ಮಹೇಶ್ವರಸ್ವಾಮಿ (ಕನ್ನಡಪರ ಹೋರಾಟಗಾರರು), ಶಶಿಧರ (ಸಾಹಿತ್ಯ), ವೈ. ವಿ. ಎಸ್. ರೆಡ್ಡಿ (ಸಮಾಜ ಸೇವೆ), ಯೋಗೇಶ್ ಎ ಎಂ ಭಾ.ಆ.ಸೇ ಆಡಳಿತ (ಕನ್ನಡ), ಕೃಷ್ಣಮೂರ್ತಿ ಮಂಜ (ಸಮಾಜ ಸೇವೆ), ಡಾ. ಹಂಪನಹಳ್ಳಿ ತಿಮ್ಮೇಗೌಡ (ಸಾಹಿತ್ಯ), ಅಂಚಿ ಸಣ್ಣಸ್ವಾಮಿ ಗೌಡ (ಕನ್ನಡ ಸೇವೆ), ಡಾ. ಸಾಂಬಮೂರ್ತಿ (ಸಾಹಿತ್ಯ), ಜನಾರ್ದನ ಪೂಜಾರಿ (ಸಮಾಜ ಸೇವೆ), ವೈ. ಕೃಷ್ಣಪ್ಪ (ಸಾಹಿತ್ಯ), ಡಾ. ಜಿ.ಬಿ. ಪಾಟೀಲ (ಸಾಂಸ್ಕೃತಿಕ ಸಂಘಟನೆ).

ಕಾರ್ಯಕ್ರಮದ ನಿರ್ವಹಣೆ – ಜಗದೀಶ್, ಸ್ವಾಗತ – ಡಾ. ಹೆಚ್.ಎಲ್. ಮಲ್ಲೇಶ ಗೌಡ, ನಿರೂಪಣೆ – ಲಿಂಗಯ್ಯ ಬಿ. ಹಿರೇಮಠ, ವಂದನಾರ್ಪಣೆ – ಡಾ ವಿ ಎಸ್ ಹಿರೇಮಠ ಅವರು ನೆರವೇರಿಸಲಿದ್ದಾರೆ.

ಸಂಜೆ 7:30 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

Continue Reading

Mandya

ವಿದ್ಯಾರ್ಥಿಗಳು ಸೋಲು ಗೆಲುವು ಲೆಕ್ಕಚಾರ ಹಾಕದೆ ಕ್ರೀಡೆಯಲ್ಲಿ ಭಾಗವಹಿಸಬೇಕು: ಧನಂಜಯ

Published

on

ಮದ್ದೂರು: ವಿದ್ಯಾರ್ಥಿಗಳು ಸೋಲು ಗೆಲುವು ಲೆಕ್ಕಚಾರ ಹಾಕದೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ತಿಳಿಸಿದರು.

ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದೈಹಿಕ ಶಿಕ್ಷಣ ವಿಭಾಗ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಪನಕುಪ್ಪೆ ವತಿಯಿಂದ ಬುಧವಾರ ಆಯೋಜಿಸಿದ್ದ 2025-26 ನೇ ಸಾಲಿನ ಆತಗೂರು ವೃತ್ತ ಹಾಗೂ ಹೋಬಳಿ ಮಟ್ಟದ 14 ವರ್ಷ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಯಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬಹುದು. ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಬೇಕು. ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕೆಂದು ಕಿವಿ ಮಾತು ಹೇಳಿದರು.

ಕ್ರೀಡಾಕೂಟದಲ್ಲಿ 1 ಸಾವಿರಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದರು ಗೆದ್ದವರು ಬಹುಮಾನ ಪಡೆದರೆ, ಸೋತವರು ಕ್ರೀಡಾ ಸ್ಪೂರ್ತಿ ಮೆರೆದರು.

ಗ್ರಾ.ಪಂ. ಅಧ್ಯಕ್ಷ ಗಿರಿಯಯ್ಯ, ಉಪಾಧ್ಯಕ್ಷ ವಾಸುದೇವ್, ಮಾಜಿ ಅಧ್ಯಕ್ಷರಾದ ಇಂದ್ರಮ್ಮ, ಡಿ.ರವಿಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಡಿ.ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಮಹದೇವಪ್ರಸಾದ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕಿ ರಾಜೇಶ್ವರಿ, ಮುಖ್ಯ ಶಿಕ್ಷಕ ನಾಗರಾಜು ಇದ್ದರು.

Continue Reading

Mandya

ಡಾ.ಜಿ.ಪರಮೇಶ್ವರ್‌ ಹುಟ್ಟುಹಬ್ಬ: ಶ್ರೀ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

Published

on

ಮದ್ದೂರು:  ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಂಠಿ ಸುರೇಶ್ ನೇತೃತ್ವದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿ, ಸಿಹಿ ವಿತರಿಸಲಾಯಿತು.

ಕಂಠಿ ಸುರೇಶ್ ಮಾತನಾಡಿ, ರಾಜ್ಯ ಕಂಡ ಅತ್ಯಂತ ಸರಳ, ಸಜ್ಜನಿಕೆಯ ಹಾಗೂ ಪ್ರಾಮಾಣಿಕರಾದ ಜಿ.ಪರಮೇಶ್ವರ್ ಅವರು, ಪಂಚ ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆ ಮೂಲಕ ಬಡ ಜನರ ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ನಾಡ ಕಂಡ ಧೀಮಂತ ನಾಯಕ, ಧ್ವನಿ ಇಲ್ಲದ ಸಮುದಾಯಗಳ ಪರ ಚಿಂತಿಸುವ ವ್ಯಕ್ತಿತ್ವ, ರಾಜ್ಯದ ಸವರ್ಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ದೂರ ದೃಷ್ಠಿಯ ರಾಜಕಾರಣಿ, ಖ್ಯಾತ ಶಿಕ್ಷಣ ತಜ್ಞ, ಮಾತೃ ಹೃದಯಿ ಹಾಗೂ ಯುವಕರ ಆಶಾ ಕಿರಣರಾದ ಜಿ.ಪರಮೇಶ್ವರ ಅವರಿಗೆ ಭಗವಂತ ಆಯಸ್ಸು, ಆರೋಗ್ಯ ನೀಡಿ ರಾಜಕೀಯದಲ್ಲಿ ಉನ್ನತ ಸ್ಥಾನ ಮಾನ ಸಿಗುವಂತೆ ಮಾಡಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮುಖಂಡರಾದ ರವಿಕುಮಾರ್, ಕರಡಗೆರೆ ಯೋಗೇಶ್, ರಾಜೇಂದ್ರ, ಮರಿದೇವರು, ಕುಮಾರ್, ಚೌಡಯ್ಯ ಸೇರಿದಂತೆ ಇತರರು ಇದ್ದರು.

Continue Reading

Mandya

ಜಿಲ್ಲಾಧಿಕಾರಿ ಡಾ: ಕುಮಾರ ಅವರು ಇಂದು ಮಳವಳ್ಳಿ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ

Published

on

ಮಳವಳ್ಳಿ : ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕು ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿ ಸ್ವೀಕರಿಸಿ ನಿಗದಿತ ಅವಧಿಯಲ್ಲಿ‌ ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ, RTC ತಿದ್ದುಪಡಿ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ತ್ವರಿತವಾಗಿ ಕ್ರಮವಹಿಸಿ, ವಿಲೇ ಮಾಡಲು ಸೂಚಿಸಿದರು.

ಟಪಾಲು ಶಾಖೆಗೆ ಬೇಟಿ ನೀಡಿ ಸ್ವೀಕೃತವಾಗಿದ್ದ ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಿದರು ಪ್ರತಿಯೊಂದು ಅರ್ಜಿಗಳನ್ನು ಇ-ಆಫೀಸ್ ತಂತ್ರಾಂಶದ ಮೂಲಕವೇ ರವಾನಿಸುತ್ತಿರುವ ಬಗ್ಗೆ ಪರಿಶೀಲಿಸಿಕೊಂಡು, ಯಾವುದೇ ಅರ್ಜಿಗಳು ಭೌತಿಕವಾಗಿ ಮಂಡನೆಯಾಗದಂತೆ ಕ್ರಮವಹಿಸುವಂತೆ ಸೂಚಿಸಿದರು.

ಅಭಿಲೇಖಾಯ ಶಾಖೆಗೆ ಭೇಟಿ ನೀಡಿ, ಶಾಖೆಯಲ್ಲಿ ಎ, ಬಿ, ಸಿ, ಡಿ ಹಾಗೂ ಇ ವರ್ಗವಾರು ಕಡತಗಳನ್ನು ನಿರ್ವಹಣೆ ಮಾಡುತ್ತಿರುವ ಬಗ್ಗೆ, ಕಾಲಕಾಲಕ್ಕೆ ಕಡತಗಳನ್ನು ವಿಲೇವಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಿದರು.

ಅಭಿಲೇಖಾಲಯ ಶಾಖೆಯಲ್ಲಿ ಸ್ವೀಕೃತವಾದ ಅರ್ಜಿಗಳ ಬಗ್ಗೆ ಮಾಹಿತಿ ಪಡೆದು, ಯಾವುದೇ ಕಾರಣವನ್ನೂ ನೀಡದೇ ಭೌತಿಕವಾಗಿ ದಾಖಲೆಗಳನ್ನು ವಿತರಿಸದಂತೆ ಸೂಚನೆ ನೀಡಿದರು. ತಂತ್ರಾಂಶದ ಮೂಲಕವೇ ಡಿಜಿಟಲ್ ದಾಖಲೆ ನೀಡಲು ಸೂಚಿಸಿದರು.

ಕಛೇರಿಯ ಎಲ್ಲಾ ಶಾಖೆಗಳಿಗೂ ಭೇಟಿ ನೀಡಿದ ಅವರು ಪ್ರತೀ ಅರ್ಜಿಗಳನ್ನು ಹಾಗೂ ಕಡತಗಳನ್ನು ಇ-ಆಫೀಸ್ ನಲ್ಲಿಯೇ ಮಂಡಿಸಬೇಕು. ಜಿಲ್ಲಾಧಿಕಾರಿಗಳ ಕಛೇರಿಯ ಹಾಗೂ ಮೇಲ್ಮಟ್ಟದ ಯಾವುದೇ ಕಛೇರಿಗಳಿಂದ ಕೋರುವ ಯಾವುದೇ ಮಾಹಿತಿಗೆ ವಿಳಂಬ ಮಾಡದೇ ಮಾಹಿತಿ ನೀಡಲು ಸೂಚಿಸಿದರು.

ವಂಶವೃಕ್ಷ ಮತ್ತು ಆರ್ ಟಿಸಿ ವಿತರಣೆ ಮಾಡುವಲ್ಲಿ ಯಾವುದೇ ವಿಳಂಬ ಮಾಡದೇ ತ್ವರಿತವಾಗಿ ವಿತರಿಸುವಂತೆ ಸಂಬಂಧಪಟ್ಟ ಶಿರಸ್ತೇದಾರರಿಗೆ ಸೂಚನೆ ನೀಡಿದರು.

ಕಂದಾಯ ಇಲಾಖೆಯ ಸೇವೆಗಳು ಶೀಘ್ರವಾಗಿ ಹಾಗೂ ನ್ಯಾಯಸಮ್ಮತವಾಗಿ ಸಾರ್ವಜನಿಕರಿಗೆ ತಲುಪುವಲ್ಲಿ ಶ್ರಮಿಸುವಂತೆ ಅಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಲೋಕೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು .

Continue Reading

Trending

error: Content is protected !!