Program
2020ರ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ
 
																								
												
												
											ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ
ಅಕ್ಷತಾ ಪಾಂಡವಪುರಅವರಿಗೆ ಅತ್ಯುತ್ತಮ ನಟಿ
ಬೆಂಗಳೂರು, ಮಾರ್ಚ್ ೧೨: ಕನ್ನಡ ಚಿತ್ರರಂಗ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಷ ಕನ್ನಡ ಉತ್ತಮ ಚಿತ್ರಗಳಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿಕೊಂಡು ಬಂದಿದೆ. ಕಳೆದ ಕೊರೊನಾ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ಬ್ರೇಕ್ ಆಗಿದ್ದು. ಎಲ್ಲಾ ವರ್ಷಗಳ ಪ್ರಶಸ್ತಿಗಳನ್ನು ಸರ್ಕಾರ ಘೋಷಣೆ ಮಾಡುತ್ತಿದೆ.
ಇತ್ತೀಚಿಗಷ್ಟೆ ೨೦೧೯ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿತ್ತು.
ಪೈಲ್ವಾನ್ ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅತ್ಯುತ್ತಮ ನಟ ಹಾಗೂ ದಯಾಳ್ ಪದ್ಮನಾಭನ್ ನಿರ್ದೇಶನದ ತ್ರಯಂಬಕA ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿತ್ತು. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ನಟ ಕಿಚ್ಚ ಸುದೀಪ್ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನಿರಾಕರಿಸಿದರು. ತಮಗಿಂತ ಅತ್ಯುತ್ತಮ ನಟರಿದ್ದಾರೆ ಅವರನ್ನು ಆರಿಸಿ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು. ಈ ಗೊಂದಲದ ನಡುವೆಯೇ ಇದೀಗ ೨೦೨೦ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ರಾಜ್ಯಾ ಸರ್ಕಾರ ಹಾಗೂ ಕನ್ನಡ ಚಲನಚಿತ್ರ ಮಂಡಳಿ , ನಿನ್ನೆ ಮಾರ್ಚ್ ೧೧ರದು ೨೦೨೦ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದೆ. ಜಂಟಲ್‌ಮ್ಯಾನ್ ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ಇನ್ನು ಪಿಂಕಿ ಎಲ್ಲಿ ಚಿತ್ರ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿದ್ದರೆ, ಇದೇ ಚಿತ್ರದ ನಟನೆಗಾಗಿ ನಟಿ ಅಕ್ಷತಾ ಪಾಂಡವಪುರಅವರಿಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಒಟ್ಟು ೨೦ಕ್ಕೂ ವಿಭಾಗಗಳಿಗೆ ೨೦೨೦ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಣೆ.
ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
* ಅತ್ಯುತ್ತಮ ನಟ: ಪ್ರಜ್ವಲ್ ದೇವರಾಜ್ (ಜಂಟಲ್‌ಮ್ಯಾನ್)
* ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ)
* ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ
* ೨ನೇ ಅತ್ಯುತ್ತಮ ಚಿತ್ರ: ವರ್ಣಪಟಲ
* ೩ನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು
* ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು
* ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್ ವಾಲ್ಸ್
* ಅತ್ಯುತ್ತಮ ಮಕ್ಕಳ ಚಿತ್ರ: ಪದಕ
* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ( ಗಣೇಶ್ ಹೆಗ್ಡೆ)
* ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ: ಜೀಟಿಗೆ ( ತುಳು)
* ಅತ್ಯುತ್ತಮ ಸಂಗೀತ ನಿರ್ದೇಶಕ: ಗಗನ್ ಬಡೇರಿಯಾ (ಮಾಲ್ಗುಡಿ ಡೇಸ್)
* ಅತ್ಯುತ್ತಮ ಪೋಷಕ ನಟ: ರಮೇಶ್ ಪಂಡಿತ್(ತಲೆದAಡ)
* ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತ ಪುರಾಣ)
* ಅತ್ಯುತ್ತಮ ಕಥೆ: ಶಶಿಕಾಂತ್ ಗಟ್ಟಿ (ರಾಂಚಿ)
* ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್ (ಚಾಂದಿನಿ ಬಾರ್)
*ಅತ್ಯುತ್ತಮ ಬಾಲ ನಟ: ಅಹಿಲ್ ಅನ್ಸಾರಿ (ದಂತ ಪುರಾಣ)
*ಅತ್ಯುತ್ತಮ ಬಾಲ ನಟಿ: ಬೇಬಿ ಹಿತೈಶಿ ಪೂಜಾರ (ಪಾರು)
*ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ (ಬಿಚ್ಚುಗತ್ತಿ)
*ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್ (ಮರಣೋತ್ತರ ಪ್ರಶಸ್ತಿ)
ರಾಜ್ಯ ಪ್ರಶಸ್ತಿಗಳ ಆಯ್ಕೆ ಸಮಿತಿಯನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಬಿ.ಎಸ್.ಲಿಂಗದೇವರು ನೇತೃತ್ವ ವಹಿಸಿದ್ದರು.
Hassan
ಅವ್ವ ದತ್ತಿ ಪ್ರಶಸ್ತಿಗೆ ಲೇಖಕ ಸಾಹಿತಿ ಹಾಗೂ ಶಿಕ್ಷಕ ಪರಮೇಶ್ ಮಡಬಲು ಆಯ್ಕೆ
 
														ಆಲೂರು:ಎಂ.ವಿ.ತ್ಯಾಗರಾಜ್ ಅಭಿನಂದನಾ ಸಮಿತಿ ಹಾಗೂ ಸುಮಂಗಲಿ ಸೇವಾಶ್ರಮ ಬೆಂಗಳೂರು ವತಿಯಿಂದ 2025 ನೇ ಸಾಲಿಗೆ ಕೊಡಮಾಡುವ “ಮಾಪಮ್ಮ ಎಸ್ ಹೊಸಮನಿ ಅವ್ವ ದತ್ತಿ ರಾಜ್ಯ ಪ್ರಶಸ್ತಿಗೆ” ಎಂ.ಜಿ.ಪರಮೇಶ್ ಮಡಬಲು ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ‘ಅವ್ವ’ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪರಮೇಶ್ ಅವರು ಪ್ರಸ್ತುತ ಹೊಳೆನರಸೀಪುರ ತಾಲೂಕು ಶಾಲಾ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಲೇಖನಗಳು, ವೈಜ್ಞಾನಿಕ ಲೇಖನಗಳು,ವಿಮರ್ಶಾ ಲೇಖನಗಳು ಹಾಗೂ ಕವನ ಕವಿತೆಗಳನ್ನು ಬರೆದಿದ್ದಾರೆ. ಇವರು ಈಗಾಗಲೇ ಹತ್ತು ಮೌಲ್ಯಯುತ ಕೃತಿಗಳನ್ನು ಹೊರತಂದಿದ್ದಾರೆ.ಈ ಮೇಲಿನ ಸಾಹಿತ್ಯಾತ್ಮಕ ಕಾರ್ಯ ವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇದೇ ಮೇ 10 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಎಂ.ವಿ.ತ್ಯಾಗರಾಜ್ ತಿಳಿಸಿದ್ದಾರೆ.
ವರದಿ ಸತೀಶ್ ಚಿಕ್ಕಕಣಗಾಲು
Education
ಉಚಿತ ಬಸ್ ಪ್ರಯಾಣ ಕೇವಲ ಮಹಿಳೆಯರಿಗಲ್ಲ! ವಿದ್ಯಾರ್ಥಿಗಳಿಗೂ ಕೂಡ ಉಚಿತ ಬಸ್ ಪ್ರಯಾಣ
 
														Free bus facility for Students : ಹೌದು, ಸದ್ಯಕ್ಕೆ ಮಹಿಳೆಯರಿಗೆ ಕರ್ನಾಟಕ ರಾಜ್ಯದಲ್ಲಿ “ಸ್ತ್ರೀ ಶಕ್ತಿ” ಎಂಬ ಹೆಸರಿನಲ್ಲಿ ಉಚಿತ ಬಸ್ ಪ್ರಯಾಣ ಸೌಲಭ್ಯವಿದ್ದು, ಇದೆ ರೀತಿ ಇದೀಗ ವಿದ್ಯಾರ್ಥಿಗಳಿಗೂ ಕೂಡ ಉಚಿತವಾಗಿ ಬಸ್ ಪ್ರಯಾಣ ಮಾಡಲು ಸರ್ಕಾರ ಅನುಮತಿ ನೀಡಿದೆ.
ಯಾವುದು ಇದು ಯೋಜನೆ?
ಇದು ಯಾವುದೇ ರೀತಿಯ ವಿಶೇಷ ಯೋಜನೆ ಅಲ್ಲ. ಬದಲಾಗಿ ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ SSLC ಪರೀಕ್ಷೆಗಳು ಆರಂಭವಾಗಲಿದ್ದು, ಇದರ ಸಲುವಾಗಿ ಈ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.
ಉಚಿತ ಪ್ರಯಾಣ ಈ ಅವಧಿಗೆ ಮಾತ್ರ :
ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ಪ್ರಯಾಣವು ಕೇವಲ ಪರೀಕ್ಷಾ ಸಮಯದಲ್ಲಿ ಮಾತ್ರವಾಗಿರುತ್ತದೆ. ಏಕೆಂದರೆ ಇದನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಸಹಾಯವಾಗಲಿ ಎಂಬ ಉದ್ದೇಶದಿಂದ ಜಾರಿಗೆ ತರಲಾಗಿದೆ.
• SSLC ವಿದ್ಯಾರ್ಥಿಗಳ ಪರೀಕ್ಷೆಯು ಮಾರ್ಚ್ 21 ರಿಂದ ಏಪ್ರಿಲ್ 4ನೇ ತಾರೀಕಿನವರೆಗೆ ಇರಲಿದ್ದು, SSLC ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶವಿದೆ.
• ಅದೇ ರೀತಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾರ್ಚ್ 1ನೇ ತಾರೀಕಿನಿಂದ ರಿಂದ 20 ರವರೆಗೆ ಇರಲಿದ್ದು, ಈ ಅವಧಿಯಲ್ಲಿ ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಉಚಿತ ಬಸ್ ಪ್ರಯಾಣಕ್ಕೆ ಬೇಕಾಗುವ ದಾಖಲಾತಿಗಳು :
ವಿದ್ಯಾರ್ಥಿಗಳು ಬಸ್ ಪ್ರಯಾಣದ ಸಂಧರ್ಭದಲ್ಲಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿದರೆ ಸಾಕು. ಅದೇ ರೀತಿ ವಿದ್ಯಾರ್ಥಿನಿಯರು ಆಧಾರ್ ಕಾರ್ಡ್ ಅಥವಾ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಬಹುದು.
Mandya
ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆಯ ಕಾರ್ಯಕ್ರಮಗಳ ವಿವರ
 
														ಡಿಸೆಂಬರ್ 21 ರಂದು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆಯ ಕಾರ್ಯಕ್ರಮಗಳ ವಿವರ
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಿಸೆಂಬರ್ 21 ರಂದು ನಡೆಯುವ ಪ್ರಧಾನ ವೇದಿಕೆಯ ಕಾರ್ಯಕ್ರಮಗಳ ವಿವರ ಇಂತಿದೆ:
ಗೋಷ್ಠಿಗಳು
ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ಪ್ರಧಾನ ವೇದಿಕೆಯಲ್ಲಿ ನೆಲ-ಜಲ ಸಾಕ್ಷಾರತೆ : ಅವಲೋಕನ ವಿಷಯದ ಬಗ್ಗೆ ಗೋಷ್ಠಿ -3 ನಡೆಯಲಿದೆ. ನೀರಾವರಿ ತಜ್ಞರು ಕ್ಯಾಪ್ಟನ್ ರಾಜಾರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಿಂತಕರು ಡಾ ಅಶೋಕ ದಳವಾಯಿ ಅವರು ಆಶಯ ನುಡಿ ನುಡಿಯಲಿದ್ದಾರೆ. ಕಾವೇರಿ ಅಚ್ಚುಕಟ್ಟಿನ ಕೆರೆಕಟ್ಟೆಗಳ ಸ್ಥಿತಿಗತಿಗಳು ವಿಷಯದ ಬಗ್ಗೆ ಡಾ ಎಂ ಎನ್ ತಿಮ್ಮೇಗೌಡ, ಕೃಷ್ಣಾ ಮತ್ತು ಮಹಾದಾಯಿ ವಿಷಯದ ಬಗ್ಗೆ ಡಾ ಕೃಷ್ಣ ಕೋಲ್ಹಾರಕುಲಕರ್ಣಿ ಹಾಗೂ ಕೃಷಿಕರು ಮತ್ತು ಜನಸಾಮಾನ್ಯರಲ್ಲಿ ಇರಬೇಕಾದ ನೆಲ-ಜಲ ಸಾಕ್ಷಾರತೆ ವಿಷಯದ ಬಗ್ಗೆ ಡಾ ಎ ಬಿ ಪಾಟೀಲ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮದ ನಿರ್ವಹಣೆ – ಓಂ ಪ್ರಕಾಶ್ ದಡ್ಡೆ, ಸ್ವಾಗತ – ಬಿ ಟಿ ನಾಗೇಶ್, ನಿರೂಪಣೆ – ಬಿ ಎನ್ ವಾಸರೆ, ವಂದನಾರ್ಪಣೆ – ಬಿ ಹೆಚ್ ಸತೀಶ್ ಗೌಡ ಅವರು ಮಾಡಲಿದ್ದಾರೆ.
ಗೋಷ್ಠಿ – 4 : ಬೆಳಿಗ್ಗೆ 11 ರಿಂದ 12.30 ಗಂಟೆಯಯವರೆಗೆ ಸಾಹಿತ್ಯದಲ್ಲಿ ರಾಜಕೀಯ : ರಾಜಕೀಯದಲ್ಲಿ ಸಾಹಿತ್ಯ ವಿಷಯದ ಬಗ್ಗೆ ಗೋಷ್ಠಿ – 4 ನಡೆಯಲಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಾಜಕೀಯ ಚಿಂತಕರು ಡಾ ಬಿ ಎಲ್ ಶಂಕರ್ ಅವರು ಆಶಯ ನುಡಿಯನ್ನು ನೆರವೇರಿಸಲಿದ್ದಾರೆ. ರಾಜಕೀಯ ಚಿಂತಕ ಸಿ ಟಿ ರವಿ ಅವರು ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವುಗಳು, ರಾಜಕೀಯ ಚಿಂತಕ ಡಾ ಕೆ ಅನ್ನದಾನಿ ಅವರು ರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆ ಹಾಗೂ ರಾಜಕೀಯ ವಿಶ್ಲೇಷಕರು ರವೀಂದ್ರ ರೇಷ್ಮೆ ಅವರು ಸಾಹಿತ್ಯ ಕೃತಿಗಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಡಿ ಎಸ್ ಕೃಷ್ಣಾರೆಡ್ಡಿ, ಸ್ವಾಗತ – ಕೆ ಎಸ್ ಸಿದ್ಧಲಿಂಗಪ್ಪ, ನಿರೂಪಣೆ – ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ವಂದನಾರ್ಪಣೆ – ನಾಗೇಂದ್ರ ಎನ್ ಅವರು ನೆರವೇರಿಸಲಿದ್ದಾರೆ.
ಗೋಷ್ಠಿ – 5 : ಮಧ್ಯಾಹ್ನ 12.30 ರಿಂದ 1.30 ರವರೆಗೆ ಕರ್ನಾಟಕ -50: ಹಿನ್ನೋಟ -ಮುನ್ನೋಟ, ಕನ್ನಡವೆಂದರೆ ಬರೀ ನುಡಿಯಲ್ಲ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ. ಹಿರಿಯ ವಿದ್ವಾಂಸ ಡಾ ನರಹಳ್ಳಿ ಬಾಲಸುಬ್ರಮಣ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಂಕರ ಹಲಗತ್ತಿ ಅವರು ಹೆಸರಾಯಿತು ಕರ್ನಾಟಕ – ಉಸಿರಾಯಿತು ಕನ್ನಡ ವಿಷಯದ ಬಗ್ಗೆ ಹಾಗೂ ರಾಘವೇಂದ್ರ ಪಾಟೀಲ ಅವರು ಐದು ದಶಕಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನೋಟ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮದ ನಿರ್ವಹಣೆ – ನಿತ್ಯಶ್ರೀ ಎಂ ಎಸ್, ಸ್ವಾಗತ – ಸಿದ್ದಪ್ಪ ಹೊಟ್ಟಿ, ನಿರೂಪಣೆ – ಸುಮತಿ ಎ ಜಿ, ವಂದನಾರ್ಪಣೆ – ಹಣಮಂತ ಶೇರಿ ಖಚೋರಿ ಅವರು ನೆರವೇರಿಸಲಿದ್ದಾರೆ.
ಗೋಷ್ಠಿ -6: ಮಧ್ಯಾಹ್ನ 1.30 ರಿಂದ 3 ಗಂಟೆಯವರೆಗೆ ಮಂಡ್ಯ ನೆಲ ಮೂಲದ ಮೊದಲುಗಳು ವಿಷಯದ ಬಗ್ಗೆ ಗೋಷ್ಠಿ -6 ನಡೆಯಲಿದೆ. ಖ್ಯಾತ ವಾಗ್ಮಿಗಳು ಪ್ರೊ. ಎಂ ಕೃಷ್ಣೆಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪ್ರೊ ಬಿ ಶಿವಲಿಂಗಯ್ಯ ಅವರು ಕೆರೆ, ಅಣೆಕಟ್ಟೆ, ಸೇತುವೆ, ಕಾಲುವೆಗಳ ನಿರ್ಮಾಣ ವಿಷಯದ ಬಗ್ಗೆ, ಡಾ ವಿ ನಾಗೇಂದ್ರ ಪ್ರಸಾದ್ ಅವರು ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ವಿಷಯದ ಬಗ್ಗೆ, ಡಾ ಕೆಂಪಮ್ಮ ಅವರು ಜನಪದ, ನವೀನ್ ಕುಮಾರ್ ಅವರು ಜಲವಿದ್ಯುತ್ ವಿಷಯದ ಬಗ್ಗೆ ನವೀನ್ ಕುಮಾರ್ ಅವರು ವಿಷಯ ಮಂಡನೆ ಮಾಡಲಿದ್ದಾರೆ. ನಿವೃತ್ತ ಕನ್ನಡ ಪ್ರಾಧ್ಯಪಕರು ಡಾ ಎಚ್ ಎಸ್ ಮುದ್ದೇಗೌಡ ಅವರು ಕಾರ್ಯಕ್ರಮದ ವಿಶೇಷ ಉಪಸ್ಥಿತಿ ವಹಿಸಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಮಂಡ್ಯ ಮಿತ್ರ ಚನ್ನೇಗೌಡ, ಸ್ವಾಗತ – ಚಂದ್ರಲಿಂಗು, ನಿರೂಪಣೆ – ಮಂಜುನಾಥ ಎಚ್ ಎಸ್, ವಂದನಾರ್ಪಣೆ – ಗೂಳಪ್ಪ ಹುಲಿಮನಿ ಅವರು ನೆರವೇರಿಸಲಿದ್ದಾರೆ.
ಗೋಷ್ಠಿ – 7 : ಮಧ್ಯಾಹ್ನ – 3 ರಿಂದ 5.05 ಗಂಟೆಯವರೆಗೆ ಕರ್ನಾಟಕದ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ ವಿಷಯದ ಬಗ್ಗೆ ಗೋಷ್ಠಿ – 7 ನಡೆಯಲಿದೆ. ಹಿರಿಯ ಜಾನಪದ ತಜ್ಞ ಡಾ. ವೀರಣ್ಣ ದಂಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾ.ರಾಮೇಶ್ವರಪ್ಪ ಅವರು ಮಂಟೇಸ್ವಾಮಿ ಕಾವ್ಯ, ನಂಜುಂಡಸ್ವಾಮಿ ಪಿ.ಎಂ. ಅವರು ಮೂಡಲಪಾಯ, ಎಂ. ಮೋಹನ್ ಅವರು ಜುಂಜಪ್ಪ ಕಾವ್ಯ, ಮಲ್ಲವ್ವ ಮೇಗೇರಿ ಅವರು ಶ್ರೀಕೃಷ್ಣ ಪಾರಿಜಾತ, ನಾಗರಾಜ ತೋಂಬ್ರಿ ಅವರು ಜೋಗಿ ಕಥಾನಕ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮದ ನಿರ್ವಹಣೆ – ಜಿ ವೈ ಪದ್ಮ, ಸ್ವಾಗತ – ಸುರೇಶ್ ಚನ್ನಶೆಟ್ಟಿ, ನಿರೂಪಣೆ -ಡಾ ರೇಷ್ಮಾ ಅಂಗಡಿ, ವಂದನಾರ್ಪಣೆ- ಕೆ ಆರ್ ಮಮತೇಶ್ ಅವರು ನೆರವೇರಿಸಲಿದ್ದಾರೆ.
ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ
ಸಂಜೆ 5. 05 ರಿಂದ 6 ಗಂಟೆಯವರೆಗೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಾಧ್ಯಕ್ಷರು – ನಾಡೋಜ ಡಾ. ಗೊ. ರು. ಚನ್ನಬಸಪ್ಪ ಹಾಗೂ ಪ್ರಧಾನ ನಿರ್ವಹಣೆ – ಹಿರಿಯ ಜಾನಪದ ತಜ್ಞ ಡಾ ಕೆ ಆರ್ ಸಂಧ್ಯಾರೆಡ್ಡಿ ಮಾಡಲಿದ್ದಾರೆ.
ಸಂವಾದಕರು:- ಡಾ. ಬಸವರಾಜ್ ನೆಲ್ಲೀಸರ, ಮಾರುತಿ ಶಿಡ್ಲಾಪುರ, ಪ್ರೊ. ಟಿ.ವಿ, ಸುರೇಶ ಗುಪ್ತ, ಡಾ. ಅನಸೂಯಾ ಹೊಂಬಾಳೆ, ಶಂಕರ ಮಲ್ಲಪ್ಪ ಬೈಚಬಾಳ, ಶಾಂತಲಾ ಧರ್ಮರಾಜ, ಡಾ ಪಿ ನಾಗರಾಜು, ಡಾ ಕುರುವ ಬಸವರಾಜ್, ಪ್ರೊ. ಎಂ.ವೈ. ಶಿವರಾಂ, ಡಾ. ಸಂತೋಷ್ ಹಾನಗಲ್ ಅವರುಗಳು ಸಂವಾದಕರಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದ ನಿರ್ವಹಣೆ – ಶರಣು ಸಬರದ, ಸ್ವಾಗತ – ಸೂರಿ ಶ್ರೀನಿವಾಸ್, ನಿರೂಪಣೆ – ಡಾ. ಜಿನದತ್ತ ಹಡಗಲಿ, ವಂದನಾರ್ಪಣೆ – ವೆಂಕಟೇಶ ಬೇವಿನಬೆಂಚಿ ಅವರು ನೆರವೇರಿಸಲಿದ್ದಾರೆ.
ಸಾಧಕರಿಗೆ ಸನ್ಮಾನ
ಸಂಜೆ 6 ರಿಂದ 7.30 ಗಂಟೆಯವರೆಗೆ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಸುವರ್ಣ ಮಹೋತ್ಸವದ ನೆನಪಿನಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಿವ್ಯ ಸಾನಿಧ್ಯ – ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಸನ್ನಿಧಾನ – ಶ್ರೀರಂಗಪಟ್ಟಣದ ಶ್ರೀ ಕ್ಷೇತ್ರ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಧ್ಯಕ್ಷರು ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಸನ್ಮಾನಿಸುವವರು – ವಿಶ್ರಾಂತ ಸರ್ವೋಚ್ಚ ನ್ಯಾಯಾಲಯ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಕರ್ನಾಟಕ ರಾಜ್ಯ ಗಡಿ ಮತ್ತು ನದಿಗಳ ರಕ್ಷಣಾ ಆಯೋಗ, ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲರು ಸನ್ಮಾನಿಸಲಿದ್ದಾರೆ.
ಸನ್ಮಾನಿತರುಗಳು: ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ (ನ್ಯಾಯಾಂಗ ಕ್ಷೇತ್ರ), ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ (ನ್ಯಾಯಾಂಗ ಕ್ಷೇತ್ರ), ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ (ನ್ಯಾಯಾಂಗ ಕ್ಷೇತ್ರ), ನ್ಯಾಯಾಧೀಶ ಬಿ. ಶಿವಲಿಂಗೇಗೌಡ (ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಸೇವೆ), ಎಸ್.ಆರ್. ಉಮಾಶಂಕರ್ ಭಾ.ಆ.ಸೇ. ಆಡಳಿತ (ಕನ್ನಡ), ಡಾ.ಬಿ.ಆರ್.ರವಿಕಾಂತೇಗೌಡ ಭಾ.ಪೊ.ಸೇ ಆಡಳಿತ (ಕನ್ನಡ), ಪೂರ್ಣಿಮಾ ಬಿ.ಆರ್ ಭಾ.ಆ.ಸೇ ಆಡಳಿತ (ಕನ್ನಡ), ಲತಾ ಭಾ.ಆ.ಸೇ ಆಡಳಿತ (ಕನ್ನಡ), ಬಾಲಚಂದ್ರ (ಭಾ.ಪೊ.ಸೇ. ಆಡಳಿತ ಕನ್ನಡ), ಡಿ.ಸಿ. ರಾಜಪ್ಪ ನಿವೃತ್ತ ಡಿ.ಐ.ಜಿ (ಕನ್ನಡ ಸೇವೆ), ಎಸ್.ಎ. ಚಿನ್ನೇಗೌಡ (ಚಲನಚಿತ್ರ ಕ್ಷೇತ್ರ), ಅರಕಲಗೂಡು ಪದ್ಮನಾಭ (ರಂಗಭೂಮಿ), ಪ್ರಕಾಶ ಶೆಟ್ಟಿ (ಕನ್ನಡ ಸಂಘಟನೆ), ಎ.ಸಿ. ಚಂದ್ರಪ್ಪ ಅಜ್ಜಂಪುರ (ಸಮಾಜಸೇವೆ), ರಾ.ಪಾ. ರವಿಶಂಕರ (ಸಹಕಾರ), ದಾನಿ ಬಾಬುರಾವ್ (ಶಿಕ್ಷಣ), ಡಾ.ಕೆ. ಸಿದ್ದಪ್ಪ (ಶಿಕ್ಷಣ), ಭಾರತಿ ಪಾಟೀಲ ಮತ್ತು ಡಾ. ಅನಿಲ ಪಾಟೀಲ ನ್ಯೂಯಾರ್ಕ್, ಅಮೆರಿಕಾ, ಕನ್ನಡ ಸಂಘಟನೆ, ವಿ. ಪ್ರಸನ್ನ ಕುಮಾರ್ ಮತ್ತು ಉಷಾ ಪ್ರಸನ್ನ ಕುಮಾರ್ ನ್ಯೂಜೆರ್ಸಿ, ಅಮೆರಿಕಾ, ಕನ್ನಡ ಸಂಘಟನೆ, ಬೋರೇಗೌಡ ಕ್ರೀಡೆ, ವಿಶೇಷ ಚೇತನರು, ಡಾ. ಕೆ. ಎಸ್. ಸೋಮಶೇಖರ್ (ಕನ್ನಡ ಸಂಘಟನೆ), ಮುದ್ದುಮೋಹನ್ (ಸಂಗೀತ ಕ್ಷೇತ್ರ), ನಾಗೇಶ್ವರ ರಾವ್ (ಚಲನಚಿತ್ರ ಕ್ಷೇತ್ರ), ಕನ್ನಡ ಕೂಟ ನ್ಯೂಯಾರ್ಕ್ ಅಮೆರಿಕಾ, ಕನ್ನಡ ಸಂಘಟನೆ ಸ್ವೀಕರಿಸುವವರು ಬದರಿನಾಥ ಅಂಬಟ್ಟಿ ಅಧ್ಯಕ್ಷರು, ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯ ಅಮೆರಿಕ, ಕನ್ನಡ ಸಂಘಟನೆ ಸ್ವೀಕರಿಸುವವರು : ವಸಂತ ಬೆಳಗೆರೆ ಅಧ್ಯಕ್ಷರು, ಬಹರೇನ್ ಕನ್ನಡ ಸಂಘ ಅರಬ್ ದೇಶ, ಕನ್ನಡ ಸಂಘಟನೆ, ಸ್ವಂತ ಕನ್ನಡ ಭವನ ಸ್ವೀಕರಿಸುವವರು : ಅಮರನಾಥ್ ರೈ ಅಧ್ಯಕ್ಷರು, ನಾಗಯ್ಯ (ಕಾನೂನು), ಸಿ.ವಿ. ಶಶಿಕುಮಾರ್ ನ್ಯೂಯಾರ್ಕ್, ಅಮೆರಿಕಾ, ಕನ್ನಡ ಸೇವೆ ಮತ್ತು ಸಮಾಜ ಸೇವೆ, ಎನ್ ಟಿ ಎರ್ರಿಸ್ವಾಮಿ (ಮಹಿಳಾ ಸಬಲೀಕರಣ), ಕೂತ್ಯಾಲ ನಾಗಪ್ಪ (ಸಾಹಿತ್ಯ), ರಾಮಚಂದ್ರ ಧೋಂಗಡೆ (ಸಾಹಿತ್ಯ), ಎಸ್.ಎಫ್.ಎನ್ ಗಾಜಿ ಗೌಡ್ರ (ಸಮಾಜ ಸೇವೆ), ಎಂ ಎಂ ಕಲಹಾಳ (ಕ್ರೀಡಾಕ್ಷೇತ್ರ), ಮಹಮದ್ ಇಬ್ರಾಹಿಂ (ಸಮಾಜ ಸೇವೆ), ಶೇಖರಗೌಡ ವೀ ಸರನಾಡಗೌಡರ್ (ಸಾಹಿತ್ಯ), ಕೆ.ಎಂ. ಮಹೇಶ್ವರಸ್ವಾಮಿ (ಕನ್ನಡಪರ ಹೋರಾಟಗಾರರು), ಶಶಿಧರ (ಸಾಹಿತ್ಯ), ವೈ. ವಿ. ಎಸ್. ರೆಡ್ಡಿ (ಸಮಾಜ ಸೇವೆ), ಯೋಗೇಶ್ ಎ ಎಂ ಭಾ.ಆ.ಸೇ ಆಡಳಿತ (ಕನ್ನಡ), ಕೃಷ್ಣಮೂರ್ತಿ ಮಂಜ (ಸಮಾಜ ಸೇವೆ), ಡಾ. ಹಂಪನಹಳ್ಳಿ ತಿಮ್ಮೇಗೌಡ (ಸಾಹಿತ್ಯ), ಅಂಚಿ ಸಣ್ಣಸ್ವಾಮಿ ಗೌಡ (ಕನ್ನಡ ಸೇವೆ), ಡಾ. ಸಾಂಬಮೂರ್ತಿ (ಸಾಹಿತ್ಯ), ಜನಾರ್ದನ ಪೂಜಾರಿ (ಸಮಾಜ ಸೇವೆ), ವೈ. ಕೃಷ್ಣಪ್ಪ (ಸಾಹಿತ್ಯ), ಡಾ. ಜಿ.ಬಿ. ಪಾಟೀಲ (ಸಾಂಸ್ಕೃತಿಕ ಸಂಘಟನೆ).
ಕಾರ್ಯಕ್ರಮದ ನಿರ್ವಹಣೆ – ಜಗದೀಶ್, ಸ್ವಾಗತ – ಡಾ. ಹೆಚ್.ಎಲ್. ಮಲ್ಲೇಶ ಗೌಡ, ನಿರೂಪಣೆ – ಲಿಂಗಯ್ಯ ಬಿ. ಹಿರೇಮಠ, ವಂದನಾರ್ಪಣೆ – ಡಾ ವಿ ಎಸ್ ಹಿರೇಮಠ ಅವರು ನೆರವೇರಿಸಲಿದ್ದಾರೆ.
ಸಂಜೆ 7:30 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
- 
																	   Hassan12 hours ago Hassan12 hours agoಹುಡಾ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ಮುಖಂಡರಿಂದ ಪ್ರತಿಭಟನೆ: ಪಕ್ಷಗೋಸ್ಕರ ಕೆಲಸ ಮಾಡಿದವರಿಗೆ ಸ್ಥಾನ ನೀಡುವಂತೆ ಕಯುಮ್ ಆಗ್ರಹ 
- 
																	   Hassan14 hours ago Hassan14 hours agoನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸೈಯದ್ ತಾಜಿಂ ಬೃಹತ್ ಪ್ರತಿಭಟನೆ. 
- 
																	   Hassan10 hours ago Hassan10 hours agoಹಾಸನ: ದುರ್ನಾಥ ಬೀರುತ್ತಿರುವ ರಜತಾ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆ 
- 
																	   Hassan15 hours ago Hassan15 hours agoಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ 
- 
																	   Hassan13 hours ago Hassan13 hours agoಹಾಲುವಾಗಿಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ 
- 
																	   Chikmagalur17 hours ago Chikmagalur17 hours agoರೈತನ ಮೇಲೆ ಕಾಡಾನೆ ದಾಳಿ, ಬದುಕುಳಿದ ರೈತ ಫಿಲಿಪ್ 
- 
																	   Kodagu10 hours ago Kodagu10 hours agoಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ 
- 
																	   Manglore11 hours ago Manglore11 hours agoಧರ್ಮಸ್ಥಳ ಪ್ರಕರಣ- ಕಾಡಿನಲ್ಲಿ ಶೋಧನೆ ನಡೆಸಿ ತೆರಳಿದ ಎಸ್ಐಟಿ ತಂಡ 

 
											 
											 
											 
											 
											