Sports
ಕೊನೆರು ಹಂಪಿಗೆ ಸೋಲುಣಿಸಿ ಚೆಸ್ ವಿಶ್ವಕಪ್ ಗೆದ್ದ 19ರ ಹರೆಯದ ದಿವ್ಯಾ ದೇಶ್‌ಮುಖ್
 
																								
												
												
											ಬಟುಮಿ(ಜಾರ್ಜಿಯಾ): ಭಾರತದ ಅನುಭವಿ ಗ್ರಾಂಡ್‌ಮಾಸ್ಟರ್ ಕೊನೆರು ಹಂಪಿಯನ್ನು ರೋಚಕವಾಗಿ ಮಣಿಸಿದ 19 ವರ್ಷದ ದಿವ್ಯಾ ದೇಶ್‌ಮುಖ್ 2025ರ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಈ ಮೂಲಕ ಮಹಿಳಾ ಚೆಸ್ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಮೊದಲ ಮಹಿಳಾ ಚೆಸ್ ಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಮೊದಲ ಟೈ ಬ್ರೇಕರ್ ಯಾಪಿಡ್ ಗೇಮ್ ಕೂಡಾ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಫಲಿತಾಂಶಕ್ಕಾಗಿ ಎರಡನೇ ಟೈ ಬ್ರೇಕರ್‌ನಲ್ಲಿ ಅನುಭವಿ ಚೆಸ್ ಗ್ರಾಂಡ್‌ಮಾಸ್ಟರ್ ಕೊನೆರು ಹಂಪಿ ಸಮಯದ ಒತ್ತಡದಲ್ಲಿ ಕೊಂಚ ಎಡವಿದರು.

ಇದರ ಲಾಭ ಪಡೆದ ದಿವ್ಯಾ ದೇಶ್‌ಮುಖ್ 1.5-0.5 ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಇದರ ಜತೆಗೆ ದಿವ್ಯಾ ದೇಶ್‌ಮುಖ್ ಗ್ರಾಂಡ್‌ಮಾಸ್ಟರ್ ಪಟ್ಟವನ್ನು ಅಲಂಕರಿಸಿದರು. ವಿಶ್ವ ಬ್ಯಾಂಕಿಂಗ್‌ನಲ್ಲಿ 16ನೇ ಸ್ಥಾನ ಪಡೆದಿದ್ದ ದಿವ್ಯಾ ದೇಶ್‌ಮುಖ್ ಇದೀಗ ಭಾರತದ 88ನೇ ಟ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.
Sports
ಭಾರತ-ಇಂಗ್ಲೆಂಡ್ 4th ಟೆಸ್ಟ್: ಟೀಂ ಇಂಡಿಯಾ ಆಟಗಾರರಾದ ಶುಭಮನ್, ರಾಹುಲ್ ಉತ್ತಮ ಜೊತೆಯಾಟದ ಮೂಲಕ ತಿರುಗೇಟು
 
														ಮ್ಯಾಂಚಿಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ 4th ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹಾಗೂ ಕೆ.ಎಲ್.ರಾಹುಲ್ ಅವರು ಉತ್ತಮ ಮೊತ್ತ ದಾಖಲಿಸುವ ಮೂಲಕ ಇಂಗ್ಲೆಂಡ್ ಆಟಗಾರರಿಗೆ ಭರ್ಜರಿ ತಿರುಗೇಟು ನೀಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಮ್ಯಾಂಚಿಸ್ಟರ್‌ನಲ್ಲಿ ನಡೆಯುತ್ತಿದ್ದು, ಶನಿವಾರ(ಜು.26) ದಿನದಾಟದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 544ರನ್‌ಗಳಿಂದ ಆಟ ಮುಂದುವರೆಸಿತ್ತು. ಲಿಯಾಮ್ ಡಾಸನ್(26) ಅವರಿಗೆ ವೇಗಿ ಜಸ್ಪ್ರೀತ್ ಬುಮ್ರಾ ಪೆವಿಲಿಯನ್‌ನ ವಿಕೆಟ್ ಪಡೆದು ದಾರಿ ತೋರಿಸಿದರು. 9ನೇ ವಿಕೆಟ್‌ಗೆ ನಾಯಕ ಬೆನ್ ಸ್ಟೋಕ್ಸ್ ಮತ್ತು ಬ್ರೈಡನ್ ಕಾರ್ಸೆ ಜೋಡಿ ಅಮೋಘ ಜೊತೆಯಾಟದ ಮೂಲಕ ಉತ್ತಮ ಮೊತ್ತವನ್ನು ಗಳಿಸಿದ್ದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಭಾರತದ ಬೌಲರ್‌ಗಳು ವಿಫಲರಾದರು. ಇವರಿಬ್ಬರು 97 ಎಸೆತಗಳಲ್ಲಿ 95 ರನ್ ಗಳಿಸಿದ್ದರು.

ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಪ್ರಮುಖ ಸಮಯದಲ್ಲಿ ಫಾರ್ಮ್‌ಗೆ ಮರಳಿ ತಂಡಕ್ಕೆ ಆಧಾರವಾಗಿದ್ದಾರೆ. ಸ್ಟೋಕ್ಸ್ 198 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಮತ್ತು 141 ರನ್ ಕಲೆಹಾಕಿದ್ದರು. ಅಂತಿಮವಾಗಿ ಇಂಗ್ಲೆಂಡ್ 669 ರನ್‌ಗಳಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಭಾರತ ಆರಂಭದಲ್ಲಿ ಕಳಪೆಯಾಟವಾಡಿತ್ತು. ಮೊದಲ ಓವರ್‌ನಲ್ಲೇ ಟೀಂ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸಾಯಿ ಸುದರ್ಶನ್ ಅವರು ಔಟಾದರು.
ಭಾರತ ತಂಡ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ನಾಯಕ ಶುಭಮನ್ ಗಿಲ್ ಮತ್ತು ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅವರ ಜೊತೆಯಾಟ ಉತ್ತಮ ಪ್ರದರ್ಶನ ನೀಡಿತ್ತು.

ಈ ಇಬ್ಬರು ಆಟಗಾರು 377 ಎಸೆತಗಳನ್ನು ಎದುರಿಸಿ ಅಜೇಯರಾಗಿ 174 ರನ್‌ಗಳ ಜೊತೆಯಾಟವನ್ನು ಆಡಿದರು. ಇನ್ನೂ ಕೆ.ಎಲ್.ರಾಹುಲ್ 8 ಬೌಂಡರಿ ಬಾರಿಸಿದ್ದು, 87 ರನ್‌ಗಳನ್ನು ಕಲೆ ಹಾಕಿದ್ದಾರೆ. ನಾಯಕ ಶುಭಮನ್ 10 ಬೌಂಡರಿ ಬಾರಿಸಿ 78 ರನ್ ಗಳಿಸುವ ಮೂಲಕ ಕೊನೆಯ ದಿನಕ್ಕೆ ಬ್ಯಾಟಿಂಗ್ ಅನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೇ ಭಾರತ ಇನ್ನಿಂಗ್ಸ್ ಮುನ್ನಡೆ ಸಾಧಿಸಲು 137 ರನ್‌ಗಳ ಅವಶ್ಯಕತೆ ಇದೆ.
Sports
ಏಷ್ಯಾಕಪ್-2025: ಆಪರೇಷನ್ ಸಿಂಧೂರ ಬಳಿಕ ಸೆ.14ಕ್ಕೆ ಭಾರತ-ಪಾಕ್ ಮುಖಾಮುಖಿ
 
														ನವದೆಹಲಿ: ಏಷ್ಯಾಕಪ್-2025 ಆಯೋಜನೆಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಹೊರಬಿದ್ದಿದ್ದು, 8 ತಂಡಗಳ ನಡುವೆ ನಡೆಯಲ್ಲಿರುವ ಈ ಪಂದ್ಯಾವಳಿ ಯುಎಇಯಲ್ಲಿ ನಡೆಯಲ್ಲಿದೆ.

ಈ ಟೂರ್ನಿಯ ಆಯೋಜಕತ್ವದ ಹಕ್ಕು ಬಿಸಿಸಿಐ ಬಳಿ ಇರಲಿದ್ದು, ಸೆಪ್ಟೆಂಬರ್. 9 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್. 28 ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಮೊದಲೇ ವರದಿಯಾದಂತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಪಂದ್ಯಾವಳಿಯಲ್ಲಿ ಒಂದೇ ಗುಂಪಿನಲ್ಲಿರಲಿದ್ದು, ಬದ್ಧವೈರಿಗಳು ಸೆಪ್ಟೆಂಬರ್. 14 ರಂದು ಮುಖಾಮುಖಿಯಾಗಲಿವೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು, ಇಂದು (ಜು. 26) ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಏಷ್ಯಾಕಪ್ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಪಂದ್ಯಾವಳಿ ಯುಎಇಯಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 9 ರಂದು ಪ್ರಾರಂಭವಾಗಲಿರುವ ಈ ಪಂದ್ಯಾವಳಿಯ ಫೈನಲ್ ಸೆಪ್ಟೆಂಬರ್. 28 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
Sports
WCL-2025: ಆಪರೇಷನ್ ಸಿಂಧೂರ ಬಳಿಕ ಭಾರತ-ಪಾಕ್ ಮುಖಾಮುಖಿ
 
														ನವದೆಹಲಿ: ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್ನ ಎರಡನೇ ಆವೃತ್ತಿ ಶುಕ್ರವಾರ(ಜು. 18 ) ಪ್ರಾರಂಭವಾಗಿದ್ದು, ಲೀಗ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಚಾಂಪಿಯನ್ ತಂಡವನ್ನು ಪಾಕಿಸ್ತಾನ ಚಾಂಪಿಯನ್ ತಂಡ ಸೋಲಿಸಿದೆ. ಆದರೆ ನಾಳೆ(ಜು.20) ಕಳೆದ ಆವೃತ್ತಿಯ ಚಾಂಪಿಯನ್ ಆಗಿದ್ದ ಭಾರತ ಚಾಂಪಿಯನ್ಸ್ ತಂಡವನ್ನು ಪಾಕಿಸ್ತಾನ ತಂಡ ಆಪರೇಷನ್ ಸಿಂಧೂರದ ನಂತರ ಪ್ರಥಮ ಬಾರಿಗೆ ಮುಖಾಮುಖಿಯಾಗಲಿವೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಪಂದ್ಯವೂ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಭಾರತದ ಸಮಯದ ಪ್ರಕಾರ ರಾತ್ರಿ 9:00 ಗಂಟೆಗೆ ನಡೆಯಲಿದೆ.

ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಪ್ರಸಾರವಾಗಲಿದೆ.
ಭಾರತ ಚಾಂಪಿಯನ್ ತಂಡದಲ್ಲಿ ಯಾರೆಲ್ಲಾ ಆಡಲಿದ್ದಾರೆ?
ಯುವರಾಜ್ ಸಿಂಗ್, ಶಿಖರ್ ಧವನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಪಿಯೂಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ವರುಣ್ ಆರೋನ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಸಿದ್ಧಾರ್ಥ್ ಕೌಲ್, ಗುರುಕೀರತ್ ಮಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನ ಚಾಂಪಿಯನ್ ಯಾರೆಲ್ಲಾ ಆಡಲಿದ್ದಾರೆ?
ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಸರ್ಫರಾಜ್ ಅಹ್ಮದ್, ಶಾರ್ಜೀಲ್ ಖಾನ್, ವಹಾಬ್ ರಿಯಾಜ್, ಆಸಿಫ್ ಅಲಿ, ಶಾಹಿದ್ ಅಫ್ರಿದಿ, ಕಮ್ರಾನ್ ಅಕ್ಮಲ್, ಅಮೇರ್ ಯಾಮಿನ್, ಸೊಹೈಲ್ ಖಾನ್, ಸೊಹೈಲ್ ತನ್ವೀರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
- 
																	   Hassan12 hours ago Hassan12 hours agoಹುಡಾ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ಮುಖಂಡರಿಂದ ಪ್ರತಿಭಟನೆ: ಪಕ್ಷಗೋಸ್ಕರ ಕೆಲಸ ಮಾಡಿದವರಿಗೆ ಸ್ಥಾನ ನೀಡುವಂತೆ ಕಯುಮ್ ಆಗ್ರಹ 
- 
																	   Hassan14 hours ago Hassan14 hours agoನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸೈಯದ್ ತಾಜಿಂ ಬೃಹತ್ ಪ್ರತಿಭಟನೆ. 
- 
																	   Chikmagalur17 hours ago Chikmagalur17 hours agoರೈತನ ಮೇಲೆ ಕಾಡಾನೆ ದಾಳಿ, ಬದುಕುಳಿದ ರೈತ ಫಿಲಿಪ್ 
- 
																	   Hassan10 hours ago Hassan10 hours agoಹಾಸನ: ದುರ್ನಾಥ ಬೀರುತ್ತಿರುವ ರಜತಾ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆ 
- 
																	   Kodagu10 hours ago Kodagu10 hours agoಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ 
- 
																	   Hassan15 hours ago Hassan15 hours agoಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ 
- 
																	   Hassan13 hours ago Hassan13 hours agoಹಾಲುವಾಗಿಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ 
- 
																	   Manglore11 hours ago Manglore11 hours agoಧರ್ಮಸ್ಥಳ ಪ್ರಕರಣ- ಕಾಡಿನಲ್ಲಿ ಶೋಧನೆ ನಡೆಸಿ ತೆರಳಿದ ಎಸ್ಐಟಿ ತಂಡ 

 
											 
											 
											 
											 
											