Connect with us

Manglore

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಓಣಂ ಹಬ್ಬದ ಆಚರಣೆ

Published

on

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಯಲ್ಲಿ ಸಂಭ್ರಮದಿಂದ ಓಣಂ ಹಬ್ಬವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಂತೋಷ್ ಕುಮಾ‌ರ್ ಜೆ. ಪಿ.ಮುರ, ಪುತ್ತೂರು ತೀಯಾ ಸಮಾಜ (ರಿ) ಇದರ ಅಧ್ಯಕ್ಷರು, ಬಿ ಎಂ ಮಾಧವ, ಕರ್ನಾಟಕ ರಾಜ್ಯ ಬ್ಯಾಂಕ್ ನೌಕರರ ಒಕ್ಕೂಟದ ಉಪಾಧ್ಯಕ್ಷರು ಮತ್ತು ಶ್ರೀಮತಿ ಸೋಫಿ ಕೃಷ್ಣನ್ ಪ್ರಾದೇಶಿಕ ಪ್ರಬಂಧಕರು ಕೆನರಾ ಬ್ಯಾಂಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾಲೇಜಿನಿಂದ ಸಂಪ್ಯದ ವರೆಗೆ ಆಯೋಜಿಸಿದ್ದ ಸಿಂಗಾರಿ ಮೇಳದೊಂದಿಗಿನ ಮೆರವಣಿಗೆಯಲ್ಲಿ ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮುಖ್ಯ ಅತಿಥಿ  ಬಿ.ಎಂ. ಮಾಧವ ಮಾತನಾಡಿ, ಓಣಂ ಕೇರಳದ ಸಾಂಸ್ಕೃತಿಕ ಮತ್ತು ಸುಗ್ಗಿ ಹಬ್ಬ. ಮಾತ್ರವಲ್ಲ, ಪ್ರಕೃತಿ ಜೊತೆಗಿನ ಅವಿನಾಭಾವ ಸಂಬಂಧವನ್ನು ಬೆಸೆಯುವ ಹಬ್ಬವಾಗಿದೆ. ಪ್ರಕೃತಿಯು ರಮಣೀಯತೆ ಹಾಗೂ ಸಮೃದ್ಧ ಫಸಲಿ ನಿಂದ ಕಂಗೊಳಿಸುವ ಈ ಸಂದರ್ಭದಲ್ಲಿ ಜನರು ಐಕ್ಯತೆಯಿಂದ ಶಾಂತಿ ನೆಮ್ಮದಿಯ ಮತ್ತು ಸಮೃದ್ಧಿಯ ಪ್ರತೀಕವಾಗಿ ಹಬ್ಬವನ್ನು ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂತೋಷ್ ಕುಮಾರ್ ಜೆ. ಪಿ. ಮುರ. ಮಾತನಾಡಿ ನಮ್ಮ ನೆರೆ ರಾಜ್ಯ ಕೇರಳದ ಜನತೆಯೊಂದಿಗೆ ದೇಶ, ವಿದೇಶಗಳಲ್ಲಿ ಓಣಂ ಹಬ್ಬವನ್ನು ಪೂಕಳನ್ನು ಹಾಕಿ ವಿವಿಧ ಸಾಂಸ್ಕೃತಿಕ,ಕ್ರೀಡಾ ಕೂಟದೊಂದಿಗೆ ಆಚರಿಸಿ, ಸಾಂಪ್ರದಾಯಿಕ ವಿಶೇಷ ಭಕ್ಷ್ಯಗಳೊಂದಿಗೆ ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಆಹಾರವನ್ನು ಸವಿಯುತ್ತಾ ಸಂಭ್ರಮಿಸುವ ಹಬ್ಬವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಜಯಂತ್ ನಡುಬೈಲ್ ಮುಂಗಾರಿನ ಮಳೆ ಕೊನೆಗೊಳ್ಳುವ ಮತ್ತು ಹಚ್ಚ ಹಸಿರಿನ ಮಧ್ಯೆ ಭತ್ತದ ಪೈರಿನ ಸಮೃದ್ಧಿಯ ಕಾಲದಲ್ಲಿ ಓಣಂ ಹಬ್ಬವನ್ನು ಜಾತಿ-ಮತ ಬಡವ -ಬಲ್ಲಿದ ಎಂಬ ಭೇದ ಭಾವವಿಲ್ಲದೆ ಆಚರಿಸಲಾಗುತ್ತದೆ.

ಅತ್ಯಂತ ಅಗಾಧವಾದ ಜೀವನ ಮೌಲ್ಯಗಳನ್ನು ಸಾರುವ ಈ ಹಬ್ಬವನ್ನು ಆಚರಿಸಿವುದರ ಮೂಲಕ ಸೌಹಾರ್ದತೆಗೆ ವೇದಿಕೆ ಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಆಡಳಿತ ಮಂಡಳಿಯ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಆಡಳಿತ ಮಂಡಳಿಯ ಸದಸ್ಯ ಪಿ. ವಿ.ನಾರಾಯಣನ್, ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ  ಅರ್ಪಿತ್ ಟಿ.ಆರ್. ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಉಪಸ್ಥಿತರಿದ್ದರು.

ಉಪನ್ಯಾಸಕಿಯರಾದ ಶ್ರೀಮತಿ ರಶ್ಮಿತ ಸ್ವಾಗತಿಸಿ, ಶ್ರೀಮತಿ ರಶ್ಮಿ ಕೆ ವಂದಿಸಿದರು. ಉಪನ್ಯಾಸಕ ರಾಕೇಶ್ ಕುಳದಪಾರೆ ಕಾರ್ಯಕ್ರಮ ನಿರೂಪಿಸಿದರು.

Continue Reading

Manglore

1 5ವರ್ಷ ಹಡಿಲು ಬಿದ್ದ 10ಎಕರೆ ಭೂಮಿಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

Published

on

ಮಂಗಳೂರು: ಹಡಿಲು ಬಿದ್ದ 10 ಎಕರೆ ಗದ್ದೆಯಲ್ಲಿ ನೇಜಿ ನಾಟಿ ನಡೆಸುವ ಕಾರ್ಯಕ್ರಮ ಸಜೀಪ ಮೂಡ ಗ್ರಾಮದ ಕಾಂತಾಡಿಯಲ್ಲಿ ನಡೆಯಿತು.

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಲೊರೋಟೋ ಹಿಲ್ಸ್ ಸ್ಥಾಪಕಾಧ್ಯಕ್ಷ, ಪ್ರಗತಿಪರ ಕೃಷಿಕ ಅವಿಲ್ ಮಿನೇಜಸ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ದಿವಂಗತ ಬಿ.ಸದಾನಂದ ಪೂಂಜ ಇವರ ಪುತ್ರ ಗ್ರಾ. ಪಂ. ಮಾಜಿ ಅಧ್ಯಕ್ಷ ಶೋಭಿತ್ ಪೂಂಜ ನೇತೃತ್ವದಲ್ಲಿ, ಮತ್ತು ಸಜೀಪ ದಸರಾ 2026 ಶತಮಾನೋತ್ಸವ ಸಮಿತಿ ಇದರ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.

ಬೆಲೆ ಏರಿಕೆ ನಡುವೆಯೂ ವಿವಿಧ ರೋಗ ಭಾದೆ ಯಿಂದ ಕಳೆಗುಂದುತ್ತಿರುವ ಅಡಿಕೆ ಬೆಳೆಗೆ ಪರ್ಯಾಯವಾಗಿ ಮರೆಯಾಗುತ್ತಿರುವ ಭತ್ತ ಬೇಸಾಯದತ್ತ ಇವರು ಚಿತ್ತ ಹರಿಸಿದ್ದು, ನೇಜಿ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಹಿ.ಪ್ರಾ. ಶಾಲೆ ವಿದ್ಯಾರ್ಥಿಗಳು ಕೂಡಾ ಭಾಗವಹಿಸಿದ್ದರು. ಸಜೀಪ ಮಾಗಣೆಯ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಹಾಗೂ ಸುಭಾಷ್ ಯುವಕ ಮಂಡಲ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ ಹಾಗೂ ಪ್ರಗತಿಪರ ಕೃಷಿಕ ಅವಿಲ್ ಮಿನೇಜಸ್ ಮತ್ತು ಶ್ರೀದೇವಿ ಪ್ರಸಾದ್ ಪೂಂಜ ಚಾಲನೆ‌ ನೀಡಿದರು. ಸಜೀಪ‌ಮೂಡ ಶಾಲೆಯ ಮಕ್ಕಳೂ ಕೂಡ ಈ ಸಂದರ ಕಾರ್ಯಕ್ರಮದಲ್ಲಿ ಗದ್ದೆಗಿಳಿದು ನೇಜಿ ನಾಟಿ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದಾರೆ.

 

Continue Reading

Manglore

ಎಂಡಿಎಂಎ ಮಾರಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್- 50ಲಕ್ಷ ಮೌಲ್ಯದ ಮಾದಕದ್ರವ್ಯ ವಶಕ್ಕೆ: ಸುಧೀರ್ ಕುಮಾರ್ ರೆಡ್ಡಿ

Published

on

ಮಂಗಳೂರು: ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು 50ಲಕ್ಷ ರೂ. ಮೌಲ್ಯದ ಸುಮಾರು 517.76ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ  ತಿಳಿಸಿದ್ದಾರೆ.

 

ಮಂಗಳೂರಿನಲ್ಲಿ ಇಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೈಂದೂರು ತಾಲೂಕಿನ ಕುಂದಾಪುರ ನಾವುಂದ ಗ್ರಾಮದ‌ ಮೊಹಮ್ಮದ್ ಶಿಯಾಬ್, ಉಳ್ಳಾಲ ತಾಲೂಕಿನ ಗ್ರಾಮದ ಮೊಹಮ್ಮದ್ ನೌಷದ್, ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್, ಬಂಟ್ವಾಳ ತಾಲೂಕಿನ ಬ್ರಹ್ಮರ ಕೊಟ್ಲುವಿನ ನಿಸಾರ್ ಅಹಮ್ಮದ್ ಬಂಧಿತ ಆರೋಪಿಗಳು.

ಮಂಗಳೂರು ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್ ನೇತೃತ್ವದ ಸಿ.ಸಿ.ಬಿ. ತಂಡ ಖಚಿತ ಮಾಹಿತಿಯ ಮೇರೆಗೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವಿನ್ಷನ್ ಹಾಲ್ ಬಳಿ ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ ಮಾದಕದ್ರವ್ಯವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಸುಮಾರು 50ಲಕ್ಷ ಮೌಲ್ಯದ ಸುಮಾರು 517.76 ಗ್ರಾಂ ಎಂ.ಡಿ.ಎಂ.ಎ., ಕೃತ್ಯಕ್ಕೆ ಬಳಸಿದ 10 ಲಕ್ಷ ಮೌಲ್ಯದ ಕಾರು ಹಾಗೂ 5 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮಾದಕವಸ್ತುವನ್ನು ಬೆಂಗಳೂರಿನಲ್ಲಿ ನೈಜೀರಿಯಾ ದೇಶದ ಪ್ರಜೆಯಿಂದ ಖರೀದಿಸಿದ್ದಾರೆ ಎಂದು ಆರೋಪಿಗಳು ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ. ಆರೋಪಿತರ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:124/2025 ಕಲಂ:22(ಸಿ) , 21(C) ಎನ್.ಡಿ.ಪಿ.ಎಸ್. ಕಾಯ್ದೆ ಜೊತೆಗೆ 3(5) ಬಿ.ಎನ್.ಎಸ್. ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

Continue Reading

Manglore

ಮಂಗಳೂರು: ಹೈಕೋರ್ಟ್ ಪೀಠ ಸ್ಥಾಪನೆಗೆ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ಪೂರಕ ಸ್ಪಂದನೆ

Published

on

ಮಂಗಳೂರು: ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹಾಗೂ ಮಂಗಳೂರಿನಲ್ಲಿ ಸಂಚಾರ ಹೈಕೋರ್ಟ್ ಪೀಠ ಸ್ಥಾಪನೆ ಉದ್ದೇಶಕ್ಕಾಗಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ನಿಯೋಗ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರನ್ನು ಉಡುಪಿ ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರೂ ವಿಧಾನ ಪರಿಷತ್ ನ ಸದಸ್ಯ ಐವನ್ ಡಿಸೋಜ ಮನವಿ ಸಲ್ಲಿಸಿದರು.

ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಕಾರ್ಯ ಬಹಳ ಮುಖ್ಯವಾಗಿದೆ. ಜನಸಾಮಾನ್ಯರಿಗೆ ದೂರದ ಬೆಂಗಳೂರಿಗೆ ಹೋಗಿ ಕಾನೂನು ಹೋರಾಟದಲ್ಲಿ ತೊಡಗಿಸಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಮಳೆಗಾಲದ ಸಂದರ್ಭ ದೂರದ ಬೆಂಗಳೂರಿನ ಸಂಪರ್ಕ ಆಗಾಗ ಕಡಿತಗೊಳ್ಳುತ್ತದೆ. ಇದರಿಂದ ಜನರು ಹೈಕೋರ್ಟಿಗೆ ಸಂಚರಿಸಲು ಕಷ್ಟ ಅನುಭವಿಸುತ್ತಿದ್ದಾರೆ.

ಅಲ್ಲದೆ ಕರಾವಳಿ ಭಾಗ ಉಡುಪಿ ಚಿಕ್ಕಮಂಗಳೂರು ಕೊಡಗು ಜಿಲ್ಲೆಗಳ ದಾವೆಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದು ಇದರಿಂದ ಈ ಭಾಗದ ಜನರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ವಿವರಿಸಿದರು.‌ ಸಿಎಂ ಸಿದ್ದರಾಮಯ್ಯ ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒಲವನ್ನು ತೋರಿಸಿರುವುದರಿಂದ, ಮೊದಲಿಗೆ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಸುಲು ಒಪ್ಪಿಗೆ ನೀಡಬೇಕೆಂದು ವಿನಂತಿಸಿದರು.

ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಯವರು ತಮ್ಮ ಮನವಿಯ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಮಿತಿಯ ನಿಯೋಗದಲ್ಲಿ ಮಂಗಳೂರು ವಕೀಲ ಸಂಘದ ಅಧ್ಯಕ್ಷ ರಾಘವೇಂದ್ರ ಹೆಚ್‍. ವಿ. ಮಂಗಳೂರಿನ ಪ್ರಧಾನ ಜಿಲ್ಲಾ ಸರಕಾರಿ ವಕೀಲ ಎಂ ಪಿ ನರೋನ್ಹ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷ ದೇವದಾಸ್ ವಿ. ಶೆಟ್ಟಿಗಾರ್, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.

Continue Reading

Trending

error: Content is protected !!