Connect with us

Hassan

ನಾವು ತೆರೆದ ಪುಸ್ತಕ ಎಲ್ಲವನ್ನೂ ಎದುರಿಸೋದಕ್ಕೆ‌ ಸಿದ್ಧರಿದ್ದೇವೆ: ಸಿಎಂ ಸಿದ್ದರಾಮಯ್ಯ

Published

on

ಹಾಸನ: ಅಹಿಂದ ಸಂಘಟನೆ ಮಾಡಿದ್ದು‌ ನಾನು, ಭಾಗ್ಯಗಳು, ಗ್ಯಾರೆಂಟಿ ಯೋಜನೆಗಳನ್ನು ಮಾಡಿರೋದು ಯಾರಿಗೆ, ಬಡವರಿಗೆ ದಲಿತರಿಗೆ ಹಿಂದುಳಿದವರಿಗೆ ಇದು ಅಹಿಂದಕ್ಕಾಗಿ ಅಲ್ವಾ? ಅಹಿಂದಕ್ಕೆ ಅವರದ್ದೇನು ಕೊಡುಗೆ? ರೈತರ ಮಗನ ಮಗ ಮಗ ಅಷ್ಟೇ ಅಲ್ವಾ? ಮೇಕೆದಾಟಿಗೆ ಒಪ್ಪಿಗೆ ಕೊಡೊಸೋಕೆ ಅವರಿಗೆ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

 

ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ಕಡಿಮೆ ಮಾಡಿದ್ದಕ್ಕೆ ನಮಗೆ ನಷ್ಟ ಎಷ್ಟು ಗೊತ್ತಾ? ಜಿಎಸ್‌ಟಿ ತಂದಿದ್ದು ನರೇಂದ್ರ ಮೋದಿಯವರು, ಮಧ್ಯದಲ್ಲಿ ಅದನ್ನು ಕಡಿಮೆ‌ ಮಾಡಿದ್ದಾರೆ. ಶೇ.12% ಗ್ರೋತ್ ಇತ್ತು, ಈಗ 3% ಗೆ ಬಂದಿದೆ, ಇದನ್ನೆಲ್ಲಾ ನೀವು ಕೇಳೋದೆ‌ ಇಲ್ಲ. ಭದ್ರ ಮೇಲ್ದಂಡೆ ಯೋಜನೆಗೆ ಮಿಸಸ್ ನಿರ್ಮಲಾ ಸೀತಾರಾಮನ್ ಹೇಳಿದ್ಲು, ಏಕವಚನದಲ್ಲೇ ಸಿಎಂ ವಾಗ್ದಾಳಿ ನಡೆಸಿದ್ದಾರೆ.

ಬಜೆಟ್ ನಲ್ಲೂ ಅದು ಪಾಸ್ ಆಗಿದೆ, ಇದರಬಗ್ಗೆ ಮೇಕೆದಾಟು ಬಗ್ಗೆ ಕುಮಾರಸ್ವಾಮಿ‌ ಮಾತನಾಡಿದ್ದಾರಾ? ನಮ್ಮ ನೆರವಿಗೆ ಬಂದಿದ್ದು ನ್ಯಾಯಾಲಯ. ಕಾವೇರಿ ಅಥಾರಿಟಿಯಲ್ಲಿ ಇವತ್ತಿನವರೆಗೆ ಪಾಸ್ ಮಾಡೋದಕ್ಕೆ ಆಗಿಲ್ಲ. ಇದು ಯಾರಿಗೆ ಅನ್ಯಾಯ ಇದು ಮಂಡ್ಯಕ್ಕೆ ಅನ್ಯಾಯ ಅಲ್ವಾ? ಜಿಎಸ್‌ಟಿನಲ್ಲಿ‌12 ಸಾವಿರ ಕೋಟಿ ನಷ್ಟ ಆಗಬಹುದು ಎಂಬ ನಿರೀಕ್ಷೆ ಇದೆ. 88 ಸಾವಿರ ಕೋಟಿ ತಲುಪೋದು ಕೂಡ ಕಷ್ಟ ಆಗುತ್ತಿದೆ ಎಂದರು.

ಸಿದ್ದರಾಮಯ್ಯ ಅಹಿಂದಾಕ್ಕೆ‌ ಏನು ಮಾಡಿದ್ದರು.. ಇದನ್ನೆಲ್ಲಾ ಯಾರು ಮಾಡಿರೋದು, ಇದರ ಬಗ್ಗೆ ಯಾವತ್ತಾದ್ರೂ ಪಾರ್ಲಿಮೆಂಟ್‌ನಲ್ಲಿ ಮಾತಾನಾಡಿದ್ದಾರಾ? ನಾವು ಗ್ಯಾರೆಂಟಿಗಾಗಿ ಲಕ್ಷ ಕೋಟಿ ಹಣ ನೀಡಿದ್ದೇವೆ. ಬೇಕಿದ್ದರೆ ವೆರಿಫಿಕೇಷನ್ ಮಾಡಲಿ, ಮೋದಿ‌ ಈ ಯೋಜನೆಯನ್ನು ನೀಡೋದಕ್ಕೆ ಆಗೊಲ್ಲ ಎಂದು ಹೇಳಿದರು.

ಕರ್ನಾಟಕ ಆರ್ಥಿಕ ದಿವಾಳಿ ಆಗುತ್ತದೆ ಎಂದು ಹೇಳಿದ್ದರು. ಈಗ ನಾವು ಕೊಟ್ಟಿಲ್ವಾ ಎಂದ ಸಿಎಂ, ಯಾವ ಅವುಶ್ವಾಸವಾದರೂ ತರಲಿ ಏನಾದರೂ ತರಲಿ. ನಾವು ಎದುರೊಸೋದಕ್ಕೆ ತಯಾರಾಗಿದ್ದೇವೆ ಎಂದು ತಿಳಿಸಿದರು.

 

Continue Reading

Hassan

ಕ್ರೀಡೆಯು ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು : ಡಾ. ಅಕ್ಷಯ್ ಎಸ್. ಗೌಡ.

Published

on

ಹಾಸನ: ಕ್ರೀಡೆಯು ಕೇವಲ ಮನರಂಜನೆಗೋ ಅಥವಾ ಆರೋಗ್ಯ ವರ್ಧನೆಗೂ ಮಾತ್ರವಲ್ಲ. ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತಮ್ಮಿಷ್ಟದ ಹೊರಾಂಗಣದ ಆಟವೊಂದನ್ನು ಅಳವಡಿಸಿಕೊಂಡರೆ, ಅದು ಅವರ ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು ಎಂದು ಚನ್ನರಾಯಪಟ್ಟಣದ ಆಯುರ್ವೇದ ತಜ್ಞ ವೈದ್ಯ ಡಾ. ಅಕ್ಷಯ್ ಎಸ್. ಗೌಡ ತಿಳಿಸಿದರು.

ನಗರದ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್ ನಲ್ಲಿ ನಡೆದ ವಾರ್ಷಿಕ ಕ್ರೀಡಾ ಸ್ಪರ್ಧೆಗಳ “ ಕ್ರೀಡಾ ತರಂಗ-2025 ಉದ್ಘಾಟಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಯುವಜನರು ಅನಾರೋಗ್ಯಕರ ಆಹಾರ, ದುಶ್ಚಟಗಳು, ಮೊಬೈಲ್ ದುರ್ಬಳಕೆಯಿಂದ ತಮ್ಮ ಅರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ನಿತ್ಯವೂ ನಡಿಗೆ, ಲಘುವ್ಯಾಯಾಮ, ಆಟ, ಯೋಗದಂತಹ ಕ್ರಿಯೆಗಳು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಲೇಬೇಕಿದೆ. ಆಯುರ್ವೇದದ ಚಿಕಿತ್ಸೆಗಳು ಕ್ರೀಡಾಳುಗಳ ಆರೋಗ್ಯದ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದ್ದು, ಈವರೆಗೂ 1000 ಕ್ಕೂ ಹೆಚ್ಚು ಕ್ರೀಡಾಪಟುಗಳ ವಿವಿಧ ನೋವಿನ ಸಮಸ್ಯೆಗಳನ್ನು ಆಯುರ್ವೇದ ಚಿಕಿತ್ಸಾ ಕ್ರಮಗಳ ಮೂಲಕವೇ ಚಿಕಿತ್ಸೆ ನೀಡಿರುವುದನ್ನು ನೆನೆಸಿಕೊಂಡರು. ತಾವು ವ್ಯಕ್ತಿಯಲ್ಲಿ ವೈದ್ಯರಾದರೂ ತಮ್ಮಲ್ಲಿ ಇಂದಿಗೂ ಕಡಾ ಆಸಕ್ತಿ ಇರಲು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ ಒಂದು ಬಲವಾದ ಕಾರಣ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಶೈಲಜಾ.ಉಪ್ಪಿನಕುದುರು ಅವರು ಮಾತನಾಡಿ, ಇತರ ವೃತ್ತಿಗಳಂತೆ ಆರೋಗ್ಯ ಕ್ಷೇತ್ರದ ವೃತ್ತಿಗಳಲ್ಲೂ ಒತ್ತಡ ಇರುತ್ತದೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಯನ್ನು ನಮ್ಮ ದಿನಚರಿಯ ಭಾಗವಾಗಿಸಬೇಕು ಎಂದರು. ಎಸ್.ಡಿ.ಎಂ.ಅಯುರ್ವೇದ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಪ್ರಸನ್ನ ನರಸಿಂಹ ರಾವ್ ಅವರು ಮಾತನಾಡಿ ಎಲ್ಲ ಕ್ರೀಡಾಳುಗಳಿಗೆ ಶುಭಹಾರೈಸಿದರು.

ಆ ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮುರಲೀಧರ್.ಪಿ.ಪೂಜಾರ್, ಉಪಪ್ರಾಂಶುಪಾಲರಾದ ಡಾ.ಅಶ್ವಿನಿಕುಮಾ‌ರ್.ಎಂ ಮತ್ತು ಡಾ.ಪ್ರಕಾಶ್. ಎಲ್. ಹೆಗಡೆ ಹಾಗು ದೈಹಿಕ ನಿರ್ದೇಶಕ ಶ್ರೀ ಗಣೇಶ್ ಉಪಸ್ಥಿತರಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು.

Continue Reading

Hassan

ಪಂಚ ಗ್ಯಾರಂಟಿಗಳನ್ನು ವಿರೋಧಿಸುತ್ತಿರುವವರಿಗೆ ಜನರೇ ಉತ್ತರ ನೀಡಬೇಕು: ಸಿಎಂ ಸಿದ್ದರಾಮಯ್ಯ

Published

on

ಹಾಸನ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳನ್ನು ವಿರೋಧಿಸುತ್ತಿರುವವರಿಗೆ ಜನರೇ ಉತ್ತರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಸರ್ಕಾರಿ ಸೇವೆ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು 2023 ರ ಚುನಾವಣೆಯಲ್ಲಿ ಒಟ್ಟು 492 ಭರವಸೆ ನಿಡಿದ್ದೆವು. ನಾವು ಅದಿಕಾರಕ್ಕೆ ಬಂದು 2 ವರ್ಷ ಆರು ತಿಂಗಳು ತಿಂಬಿದೆ. ಈ ಅವಧಿಯಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. 2013-18 ರಲ್ಲಿ 163 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ.ಪ್ರಮುಖವಾಗಿ ಪಂಚ ಗ್ಯಾರಂಟಿಗಳನ್ನು ನೀಡಿದ್ದೆವು. ಅದರಲ್ಲಿ ಶಕ್ತಿ ಯೋಜನೆಯಡಿ ಸಮಾರು 600 ಕೋಟಿಗೂ ಹೆಚ್ಚು ಮಹಿಳಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು.

ಹಾಸನ‌ ನನಗೆ ಪಕ್ಕದ ಜಿಲ್ಲೆ ನನಗೆ ಇಲ್ಲಿನ ರಾಜಕೀಯ ಹಾಗೂ ಸಮಸ್ಯೆಗಳು ಗೊತ್ತು. ನಾವು ಇಲ್ಲಿನ ಸಮಸ್ಯೆಗಳನ್ನು ಸಕಷ್ಟು ಬಗೆಹರಿಸಿದ್ದೇನೆ.

ಹೇಮಾವತಿ ಜಲಾಶಯದ ಕೆಳಗೆ 700 ಎಕರೆ ಜಾಗ ಇದ್ದು ಬೃಂದಾವನ ಮಾದರಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಮನವಿ ಮಾಡಿದ್ದಾರೆ. ನಮ್ಮ ಸರ್ಕಾರ ಉದ್ಯಾನವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಾನು ಮಾತು ಕೊಡೊಲ್ಲ ಕೊಟ್ಟ ಮೇಲೆ ಮಾಡೇ ಮಾಡುತ್ತೇವೆ.
ಕರ್ನಾಟಕ ಇತಿಹಾಸದಲ್ಲಿ ಕೊಟ್ಟ‌ ಮಾತಿನಂತೆ ನಡೆದುಕೊಂಡಿರುವ ಸರ್ಕಾರವಿದ್ದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.

ನಾವು ಒಂದು ವರ್ಷದೊಳಗೆ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ಲೋಕಸಭಾ ಚುನಾವಣೆ ಬಳಿಕ ಎಲ್ಲಾ ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಆದರೆ ನಾವು ಇಂದಿಗೂ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ವಾತಂತ್ರ್, ಸಮಾನತೆ ಮತ್ತು ಭ್ರಾತೃತ್ವ ಬಗ್ಗೆ ಹೇಳಿದ್ದಾರೆ. ಅದರಂತೆ ನಮ್ಮ ಸರ್ಕಾರ ಕೂಡ ನಡೆದುಕೊಳ್ಳುತ್ತಿದೆ. ಸಮಾಜದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಬೇಕು, ದೇಶದಲ್ಲ ಇನ್ನೂ ಸಮಾನತೆ ಸಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಜಾತಿ ವ್ಯವಸ್ಥೆ. ಎಲ್ಲಿಯವರೆಗೂ ಅಸಮಾನತೆಯನ್ನು ತೊಡೆದು ಹಾಕಲ್ಲ ಅಲ್ಲಿಯವರೆಗೂ ಸಮಾನತೆ ಬರಲು ಸಾದ್ಯವಿಲ್ಲ. ನಮ್ಮ ಸರ್ಕಾರ ಪಂಚ ಗ್ಯಾರಂಟಿ ಮೂಲಕ ಸಮಾತೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಯಾವತ್ತೂ ಸಂವಿಧಾನ ಪರವಾಗಿರುವ ಸರ್ಕಾರ, ರೈತರ, ಬಡವರ,‌ ದೀನ ದಲಿತರ, ಕಾರ್ಮಿಕರ ಪರ ಇರುವ ಸರ್ಕಾರ ಎಂದು ತಿಳಿಸಿದರು.

Continue Reading

Hassan

ಮನುಷ್ಯನ ಬದುಕು ಶಾಶ್ವತವಲ್ಲ, ಆತನು ಮಾಡಿರುವ ಕೆಲಸಗಳು ಶಾಶ್ವತ: ಡಿಸಿಎಂ ಡಿಕೆಶಿ

Published

on

ಹಾಸನ:  ಕೃಷ್ಣ ಬೈರೇಗೌಡರು ಜವಾಬ್ದಾರಿ ತೆಗೆದುಕೊಂಡ ಮೇಲೆ, ಈ ಬಾರಿ ಹಾಸನಂಬ ದೇವಿ ದರ್ಶನವನ್ನು ಲಕ್ಷಾಂತರ ಮಂದಿ ದರ್ಶನ ಮಾಡಿದ್ದಾರೆ. ಮೊನ್ನೆ ನಾನು ಕೂಡ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಗೆ ಹೋಗಿದ್ದು ಉತ್ತಮ ದರ್ಶನವಾಯಿತು. ಮನುಷ್ಯನ ಬದುಕು ಶಾಶ್ವತವಲ್ಲ ಆದರೆ ಮಾನವನು ಮಾಡಿರುವ ಕೆಲಸಗಳು ಮಾತ್ರ ಶಾಶ್ವತ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

 

ಹಾಸನದಲ್ಲಿ ಇಂದು ಸಮಾವೇಶವನ್ನು ಉದ್ದೇಶಿ ಮಾತನಾಡಿದ ಅವರು, ನಾವು ಹಿಂದೆ ಪಂಚ ಗ್ಯಾರಂಟಿಗಳನ್ನು ನೀಡಿದ್ದೇವು. ಕೃಷ್ಣ ಬೈರೇಗೌಡರು ರೈತರಿಗೆ 6ನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿಯನ್ನು ನೀಡಿದ್ದಾರೆ. ಇದು ಇತಿಹಾಸದ ಪುಟಗಳಲ್ಲಿ ಭೂದಾಖಲೆಗಳ ಗಣಕೀಕರಣ ದಾಖಲಾಗುವಂತದ್ದು,ನಮ್ಮ ಸರ್ಕಾರದ ಬದುಕಿನಲ್ಲಿ ಪ್ರತಿಹೆಜ್ಜೆಯಲ್ಲೂ ಒಂದೊಂದು ಸಾಕ್ಷಿ ಗುಡ್ಡಗಳನ್ನ ಬಿಟ್ಟು ಹೋಗುತ್ತಿದ್ದೇವೆ ಎಂದಿದ್ದಾರೆ.

ಪಂಚ ಗ್ಯಾರಂಟಿಗಳ ಮೂಲಕ ನಾವು ರೈತರಿಗೆ ಪ್ರತಿ ತಿಂಗಳು ಆರ್ಥಿಕ ಸಬಲೀಕರಣಕ್ಕೆ ಕಾರಣಿಭೂತರಾಗಿದ್ದೇವೆ. ಕೊಟ್ಟೋರಿ ಭೂಮಿ ಜಮೀನನ್ನ ಸಕ್ರಮ ಮಾಡಿಕೊಡುವ ಕಾರ್ಯಕ್ಕೆ ಒತ್ತು ಕೊಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಇವತ್ತು ಎತ್ತಿನಹೊಳೆ ನೀರನ್ನು ಹೊರಗಡೆ ನೀಡಲು ಸಹಕರಿಸಿದ ಹಾಸನ ಜಿಲ್ಲೆಯ ಇಬ್ಬರು ಮಹಿಳಾ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲೇಬೇಕು. ಅಲ್ಲದೇ ಈ ವೇಳೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ಸಿ. ಸತ್ಯಭಾಮ ಮತ್ತು ಹಾಲಿ ಎಸ್ ಪಿ ಮಹಮದ್ ಸುಜಾತಾ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ನಮಗೆ ನ್ಯಾಯ ದೊರಕಿಸಿಕೊಟ್ಟಿದೆ. ಎಲ್ಲಿಂದಲೇ ನಾನು ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್ ಗೆ ನಮಸ್ಕಾರ ಹೇಳುತ್ತೇನೆ ಎಂದು ಕೈ ಮುಗಿದ ಡಿಕೆಶಿ. ಮೇಕೆದಾಟು ಯೋಜನೆಗೆ ಯಾವ ರೀತಿ ಯೋಜನೆ ರೂಪಿಸಬೇಕು ಎಂಬುದರ ಬಗ್ಗೆ ನಾನು ಮತ್ತು ಮುಖ್ಯಮಂತ್ರಿ ಚರ್ಚೆ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳ ನಡುವೆ ನಮ್ಮ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.  ಸರ್ಕಾರ ಜನರ ಹೃದಯವನ್ನು ಗೆಲ್ಲಬೇಕು ಎಂಬ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದ್ದಾರೆ.

ಮಹಿಳೆಯರ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳ ಮೂಲಕ ಹೆಚ್ಚು ಒತ್ತು ನೀಡಲಾಗಿದೆ. ಅಕ್ಬರ್ ಮತ್ತು ಬೀರಬಲ್ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಾರೆ. ಇನ್ನು ಮೂಲಕ ಬಿಜೆಪಿ ಮತ್ತು ಜೆಡಿಎಸ್ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಮತ್ತು ಆರ್ ಅಶೋಕ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ನಮ್ಮ ಸರ್ಕಾರದ ಸಾಧನೆ ಬಗ್ಗೆ ಹಲವಾರು ಟೀಕೆ ಮಾಡುತ್ತಾರೆ ಆದರೆ ನಮಗೆ ಗುರು ಮುಖ್ಯ ಆ ಗುರಿಯನ್ನು ತಲುಪಲು ನಮ್ಮ ಗಮನ ಹರಿಸಿದ್ದೇವೆ. ಸರ್ಕಾರದ ಕಾರ್ಯಕ್ರಮಕ್ಕೆ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಬಂದಿರುವುದು ಖುಷಿಯ ವಿಚಾರ ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಹಾಸನಕ್ಕೆ ಮತ್ತೊಂದು ಹೊಸ ರೂಪ ಕೊಡಲು ಬಯಸಿದ್ದೇವೆ. ಈಗಾಗಲೇ ಜಿಲ್ಲೆಯಿಂದ ನಮ್ಮ ಪಕ್ಷದ ಸಂಸದರನ್ನ ಆಯ್ಕೆ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳು ಕಾಂಗ್ರೆಸ್ ನಾಯಕರ ಕೈ ಬಲಪಡಿಸಬೇಕು.

Continue Reading

Trending

error: Content is protected !!