Hassan
ನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
ಹಾಸನ: ಜಿಲ್ಲೆಯಲ್ಲಿ ಬಾಕಿ ಇದ್ದ 24 ಸಾವಿರ ಪ್ರಕರಣಗಳ ಪೈಕಿ ಈಗಾಗಲೇ 17 ಸಾವಿರ ಪ್ರಕರಣಗಳಲ್ಲಿ ಪೋಡಿ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಪೋಡಿ ಮಾಡಿಕೊಡಲಿದ್ದಾರೆ ಎಂದು ಕಂದಾಯ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ನಗರದ ಎಂಜಿಯರ್ ಕಾಲೇಜು ಆವರಣದಲ್ಲಿ ನಡೆದ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶದಲ್ಲಿ ಪ್ರಸ್ತಾವಿಕ ನುಡಿಯಲ್ಲಿ ಮಾತನಾಡಿದ ಸಚಿವರು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು 298 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಇಂದೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದರಲ್ಲಿ ಸರ್ಕಾರದಿಂದ ಅನುಮೋದನೆ ಆಗಿ ಆದೇಶ ಆಗದಿರುವ ಕಾಮಗಾರಿಗಳನ್ನು ಸೇರಿಸಿದರೆ 300 ಕೋಟಿ ಗೂ ಹೆಚ್ಚು ವೆಚ್ಚವಾಗದಲಿದೆ ಎಂದರು.

ಹಾಸನ ತಹಸೀಲ್ದಾರ್ ಕಚೇರಿ ಅನುದಾನವಿಲ್ಲದೆ ನೆನೆಗುದಿಗೆ ಬಿದ್ದಿತ್ತು. ಈ ಕಾಮಗಾರಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ.
ಕೆಲವೇ ದಿನಗಳಲ್ಲಿ ಹಿಮ್ಸ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆಯಾಗಲಿದೆ ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ದವಾಗಿದ್ದು ಜಿಲ್ಲೆಯ ಜನರ ಆಶೋತ್ತರಗಳನ್ನು ಈಡೇರಿಸುತ್ತಿದ್ದೇವೆ.
ಗ್ಯಾರಂಟಿ ಯೋಜನೆಯಿಂದ 1,8235 ಕೋಟಿ ಜನರ ಖಾತೆಗೆ ನೇರವಾಗಿ ಹಾಕಲಾಗಿದೆ.
ಇಡೀ ಪ್ರಪಂಚದಲ್ಲೇ ಯಾವ ಸರ್ಕಾರವೂ ಈ ರೀತಿಯ ಕೆಲಸ ಮಾಡಿಲ್ಲ ಎಂದರು.
ಕಂದಾಯ ಇಲಾಖೆ ಬೇರೆ ಇಲಾಖೆಗಳಿಗಿಂತ ಜಟಿಲ. ಆದರೆ ಸಿಎಂ, ಡಿಸಿಎಂ ಜನರಿಗೆ ಕೊಟ್ಟ ಮಾತಿನಂತೆ ಕಂದಾಯ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಸಹಕಾರದಿಂದ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ.
ಇದಕ್ಕಾಗಿ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಸಚಿವರಿಂದ ಸಿಎಂ- ಡಿಸಿಎಂಗೆ ಮನವಿ:
ಹಾಸನ ಜಿಲ್ಲೆಯ ವಿಮಾನ ನಿಲ್ದಾಣ ಕಾಮಗಾರಿ ಅನುದಾನವಿಲ್ಲದೆ ನೆನೆಗುದಿಗೆ ಬಿದ್ದಿದೆ. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಅನುದಾನ ನಿಡಬೇಕು. ಜಿಲ್ಲೆಯಲ್ಲಿ ನೀರಾವರಿ ನಾಲೆಗಳ ಆಧುನೀಕರಣಗೊಳ್ಳದೆ ಕೊನೆಯ ರೈತರಿಗೆ ನೀರು ತಲುಪುತ್ತಿಲ್ಲ. ನಾಲೆ, ಉಪನಾಲೆಗಳ ಆಧುನಿಕರಣಕ್ಕೆ ಒತ್ತು ನೀಡಬೇಕು,
ಹೇಮಾವತಿ ಜಲಾಶಯದ ಬಳಿ ಬೃಂದಾವನ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ, ಕಾವೇರಿ ನೀರಾವರಿ ನಿಗಮದಿಂದ ಗಂಡಸಿ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು ಅನುಮತಿ, ಹಾಸನ ಮಹಾನಗರಪಾಲಿಕೆಗೆ ಅನುದಾನ, ಮಾನವ ಪಪ್ರಾಣಿ ಸಂಘರ್ಷದಿಂದ ಬಹಳ ತೊಮದರೆಯಗುತ್ತಿದೆ, ಇದಕ್ಕೆ ಶಾಸ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಹಾಸನ ಜಿಲ್ಲೆಯವರು ಮಂತ್ರಿಯಾಗಬೇಕು ಎಂಬ ಕುಗು ಇದೆ. ಸಿಎಂ, ಡಿಸಿಎಂ ಈ ಬಗ್ಗೆ ಜಿಲ್ಲೆಯವರಿಗೆ ಮಂತ್ರಿಗಿರಿ ಕೊಡಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ, ವಸತಿ ಸಚಿವ ಜಮೀರ್ ಅಹಮ್ಮದ್, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಸಿಮೆಂಟ್ ಮಂಜು, ಎಚ್.ಕೆ. ಸುರೇಶ್, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಮತ್ತಿತರರು ಇದ್ದರು.
Hassan
ಡಾ.ಎಸ್. ಹರ್ಷಿತಾ ಅವರಿಗೆ ಪಿಎಚ್‌ಡಿ ಪದವಿ
ಹಾಸನ: ನಗರದದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕಿಯಾಗಿರುವ ಹರ್ಷಿತಾ ಎಸ್. ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು), ಬೆಳಗಾವಿಯಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿಯನ್ನು ಪಡೆದಿದ್ದಾರೆ.
ಇವರು ಕಂಪ್ಯೂಟರ್ ಮತ್ತು ಇನ್ನರ್ಮೇಷನ್ ಸೈನ್ಸಸ್ ವಿಭಾಗದಲ್ಲಿ, ಡಾ. ಪ್ರಮೋದ್ ಎಚ್.ಬಿ., ಅಸೋಸಿಯೇಟ್ ಪ್ರೊಫೆಸರ್, ಎಐಟಿ, ಚಿಕ್ಕಮಗಳೂರು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಮಷಿನ್ ಲರ್ನಿಂಗ್ ಟೆಕ್ನಿಕ್ಸ್ ಫಾರ್ ಡೇಟಾ ಅನಾಲಿಟಿಕ್ಸ್ ಇನ್ ನೆಟ್‌ವರ್ಕ್ ಇಂಟ್ಯೂಷನ್ ಡಿಟೆಕ್ಷನ್ ಸಿಸ್ಟಮ್ಸ್: ಮಲ್ವಿಲೆವೆಲ್ ಅಂಡ್ ಮಲ್ಟಿಸೋರ್ಸ್ ಡೇಟಾ ಪ್ಯೂಷನ್ ಅಪ್ರೋಚಸ್ ಎಂಬ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಈ ಸಂಶೋಧನೆಯು ನೆಟ್ವರ್ಕ್ ಇಂಟ್ಯೂಷನ್ ಡಿಟೆಕ್ಷನ್ ಸಿಸ್ಟಮ್ಗಳಲ್ಲಿ ಡೇಟಾ ಅನಾಲಿಟಿಕ್ಸ್ ಹಾಗೂ ಮೆಷಿನ್ ಲರ್ನಿಂಗ್ ತಂತ್ರಜ್ಞಾನಗಳ ಬಳಕೆಯ ಕುರಿತು ಕೇಂದ್ರೀಕೃತವಾಗಿದೆ. ಹರ್ಷಿತಾ ಎಸ್ ಅವರು ೧೨ ವರ್ಷಗಳ ಬೋಧನಾ ಅನುಭವ ಹೊಂದಿದ್ದು, ಪ್ರಸ್ತುತ ಹಾಸನದ ಮಲ್ನಾಡ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಸರ್ಕಾರಿ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀ ಸೋಮಶೇಖರ್ ಬಿ.ಕೆ. ಅವರ ಪುತ್ರಿಯಾಗಿದ್ದು, ಖ್ಯಾತ ವಕೀಲ ದಿ. ಬಿ.ವಿ. ಚನ್ನೇಗೌಡ ಅವರ ಸೊಸೆಯಾಗಿದ್ದಾರೆ. ಇವರ ಪತಿ ಡಾ. ಅರ್ಜುನ್ ಬಿ.ಸಿ., ಹಾಸನದ ಮಲ್ನಾಡ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ಶುಭಾಶಯಗಳನ್ನು ಕೋರಿದ್ದಾರೆ.
Hassan
ಎಪಿಎಂಸಿ ಮಾರುಕಟ್ಟೆ ಬಳಿ ಚರಂಡಿಗೆ ಸಿಲುಕಿದ ಗೂಡ್ಸ್ ವಾಹನ: ಮತ್ತೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
Hassan
ಹಾಸನದಲ್ಲಿ ನಟ ಯಶ್ ತಾಯಿ ಆಸ್ತಿ ಧ್ವಂಸ ಪ್ರಕರಣ: ಕೋರ್ಟ್ ಸೂಚನೆಯ ಬಳಿಕ ಎಫ್‌ಐಆರ್ ದಾಖಲು
ಹಾಸನ, ಜೂನ್ 2: ಹಾಸನದ ವಿದ್ಯಾನಗರದಲ್ಲಿರುವ ನಟ ಯಶ್ ಅವರ ತಾಯಿ ಪುಷ್ಪಾ ಅವರ ಮಾಲೀಕತ್ವದ ಶೆಡ್ ಕಾಂಪೌಂಡ್ ಧ್ವಂಸಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ ಸುಮಾರು ₹24 ಲಕ್ಷ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆರಂಭಿಕ ದೂರು ನೀಡಿದ್ದರೂ ಪ್ರಕರಣ ದಾಖಲಿಸದಿರುವ ಬಗ್ಗೆ ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿತ್ತು.

ಪುಷ್ಪಾ ಅವರ ಸಂಬಂಧಿ ದುರ್ಗಾಪ್ರಸಾದ್ ಅವರು ಡಿಜಿಟಲ್ ಸಾಕ್ಷ್ಯಾಧಾರಗಳೊಂದಿಗೆ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ನಡುವೆ ಪುಷ್ಪಾ ಅವರು ಒಂದು ವಾರದ ಹಿಂದೆ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿದ್ದು, ಮೇ 30ರಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶುಭನ್ವಿತಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ನ್ಯಾಯಾಲಯದ ನಿರ್ದೇಶನದಂತೆ ಎಫ್‌ಐಆರ್ ದಾಖಲಿಸುವಂತೆ ಎಸ್‌ಪಿ ಸೂಚನೆ ನೀಡಿದ ಬಳಿಕ ಬಡಾವಣೆ ಪೊಲೀಸ್ ಠಾಣೆ ಪೊಲೀಸರು ದೇವರಾಜು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 329(3) ಮತ್ತು 324(4) ಅಡಿಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧದ ಮೂಲ ದೂರುವನ್ನು ದುರ್ಗಾಪ್ರಸಾದ್ ಅವರು 2026ರ ಜನವರಿ 4ರಂದು ಬಡಾವಣೆ ಪೊಲೀಸ್ ಠಾಣೆಗೆ ಸಲ್ಲಿಸಿದ್ದರು.
ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಆಸ್ತಿ ಧ್ವಂಸಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
-
Special24 hours agoಕೃಷಿ ಇಲಾಖೆಯ AO ಹಾಗೂ AAO ನೇಮಕಾತಿ ಅಧಿಸೂಚನೆ ಪ್ರಕಟ: 1240 ಹುದ್ದೆಗಳ ಭರ್ತಿ!!
-
Special12 hours agoಬಳ್ಳಾರಿ ಡಿಸಿಸಿ ಬ್ಯಾಂಕ್ನಲ್ಲಿ ನೂರಾರು ಹುದ್ದೆಗಳ ನೇಮಕಾತಿ: ಪರಿಷ್ಕೃತ ಅಧಿಸೂಚನೆ ಪ್ರಕಟ!!
-
Hassan6 hours agoಹಾಸನದಲ್ಲಿ ನಟ ಯಶ್ ತಾಯಿ ಆಸ್ತಿ ಧ್ವಂಸ ಪ್ರಕರಣ: ಕೋರ್ಟ್ ಸೂಚನೆಯ ಬಳಿಕ ಎಫ್‌ಐಆರ್ ದಾಖಲು
-
Hassan9 hours agoಜೆಇಇ ಅಡ್ವಾನ್ಸ್ನಲ್ಲಿ ಹಾಸನಕ್ಕೆ ಹೆಮ್ಮೆ: ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತನೀಶ್ ಚಂದ್ರ
-
Kodagu5 hours agoರಸ್ತೆ ಗುಂಡಿಗಳನ್ನು ಮುಚ್ಚಿ ಮಾನವೀಯತೆ ಮೆರೆದ ಆಟೋ ಚಾಲಕ
-
Hassan11 hours agoವಾಸದ ಮನೆ ಬಳಿ ಬಂದ ಉಡಾ : ಉಡಾ ಭೇಟಿಯಾಡಿದ ಕಾಳಿಂಗ ಸರ್ಪ
-
National6 hours agoಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ
-
Kodagu4 hours agoಸುಂದರನಗರ: ರಸ್ತೆ ತ್ಯಾಜ್ಯ ನೀರು ಬಿಡುಗಡೆ, ಸಾರ್ವಜನಿಕರಿಂದಲೇ ಕ್ರಮ
