Connect with us

Cinema

ಮುದ್ದು ಮುದ್ದಾದ ವಿಭಿನ್ನ ಪ್ರೇಮ ಕಥೆ ಲವ್ ಯು ಮುದ್ದು

Published

on

ಮುದ್ದು ಮುದ್ದಾದ ವಿಭಿನ್ನ ಪ್ರೇಮ ಕಥೆ ಲವ್ ಯು ಮುದ್ದು

ವಿಮರ್ಶೆ : ಸಂಜಯ್ ಜಗನಾಥ್

ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಎಲ್ಲೆಡೆ ಸದ್ದು ಮಾಡ್ತಾ ಇರೋದು ನಿಜ. ಇದರ ಮಧ್ಯೆ ಕನ್ನಡಕ್ಕೆ ಮತ್ತೊಂದು ಅದ್ಭುತ ಪ್ರೀತಿ ಪ್ರೇಮ ಮತ್ತು ಪ್ರಾಣಾಯದೊಂದಿಗೆ ತೆರೆ ಕಾಣಲಿದೆ ಲವ್ ಯು ಮುದ್ದು.
ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ರಚಿಸಿ ನಿರ್ದೇಶಿಸಿ ಹಾಗೂ ಕಿಶನ್ ಟಿ. ಏನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಸಿನಿಮಾ ಲವ್ ಯು ಮುದ್ದು.


ಇಂದು ಲವ್‌ ಯು ಮುದ್ದು ಚಿತ್ರದ ಟ್ರೈಲರ್‌ ತೆರೆಕಂಡಿದ್ದು. ಪಾರು ಧಾರಾವಾಹಿ ಖ್ಯಾತಿಯ ಸಿದ್ದು ಅವರು (ಕರ್ಣ) ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಹಾಸನದ ಬೆಡಗಿ ರೇಷ್ಮಾ (ಸುಮತಿ) ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಾಜೇಶ್‌ ನಟರಂಗ, ತಬಲ ನಾಣಿ, ಗಿರೀಶ್‌ ಶಿವಣ್ಣ, ಸ್ವಾತಿ ಗುರುದತ್‌ ಹಾಗೂ ಶ್ರೀವತ್ಸ ಅವರು ಸಹ ನಟರಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿದ್ದು ಹಾಗೂ ರೇಷ್ಮಾ ಅವರ ಸಹನೆ ನಟನೆಯಿಂದ ಕರ್ನಾಟಕದ ಮನೆ ಮಾತಾಗಲಿದ್ದಾರೆ.
ಈಗಾಗಲೆ ಚಿತ್ರದ ಹಾಡುಗಳು ರಿಲೀಸ್‌ ಆಗಿದ್ದು ಅನಿರುದ್ಧ್ ಶಾಸ್ತ್ರಿ ಅವರ ಸಂಗೀತ ಕೈಚಳದಿಂದ ಸಿನಿಮಾದ ಎಲ್ಲಾ ಹಾಡುಗಳು ಹಾಗೂ ಚಿತ್ರದಲ್ಲಿ ಬರುವಂತ ಬ್ಯಾಗ್ರೌಂಡ್‌ ಸ್ಕೋರ್‌ ಟ್ರೈಲರ್‌ನಲ್ಲಿ ಅದ್ಭುತವಾಗಿ ಮೂಡಿಬಂದಿದೆ.


ಮತ್ತೊಂದೆಡೆ ಕೃಷ್ಣ ದೇಪಕ್‌ ಅವರ ಛಾಯಾಗ್ರಹಣ ಸಿ.ಎಸ್‌ ದೀಪು ಅವರ ಸಂಕಲದಿಂದ ನೋಡುಗರ ಹೃದಯ ಮುಟ್ಟಿದೆ
ಟ್ರೈಲರ್‌ ಮುಖಾಂತರ ಕನ್ನಡ ಸಿನಿ ಪ್ರಿಯರಿಗೆ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಚಿತ್ರತಂಡ ನವೆಂಬರ್‌ 7 ನೇ ತಾರೀಕು ರಾಜ್ಯಾದ್ಯಂತ ತೆರೆಕಾಣಲಿದೆ.
ಕನ್ನಡ ಸಿನಿಪ್ರಿಯರು ದಯವಿಟ್ಟು ಲವ್‌ ಯು ಮುದ್ದು ಸಿನಿಮಾವನ್ನು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ ಸಿನಿಮಾವನ್ನು ಯಶಸ್ವಿಗೊಳಿಸಿ.

ಸಿನಿಮಾದ ಟ್ರೈಲರ್‌ ನೋಡಲು ಲಿಂಕ್‌  ಕ್ಲಿಕ್‌ ಮಾಡಿ 

 

 

Continue Reading

Cinema

ಫೆ.7ಕ್ಕೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ

Published

on

ಬೆಂಗಳೂರು: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಜಿ.ಎಸ್ಸೆಸ್ ವಿಶ್ವಸ್ತ ಮಂಡಳಿ ಹಾಗೂ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಜಂಟಿಯಾಗಿ ಏರ್ಪಡಿಸಿರುವ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಫೆಬ್ರವರಿ 7 ಶನಿವಾರ ಬೆಳಗ್ಗೆ ಗಾಂಧಿ ಭವನದಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ ಇಡೀ ದಿನ ಜಿಎಸ್ಎಸ್ ಪ್ರಶಸ್ತಿ ಪ್ರಧಾನ ಸಮಾರಂಭ, ವಿಚಾರಗೋಷ್ಠಿಗಳು, ಕವಿ ಗೋಷ್ಠಿ, ಜಿಎಸ್ಎಸ್ ಕಾವ್ಯಾಧಾರಿತ “ವಿಪುಲರೂಪ ಧಾರಣಿ” ಕಾವ್ಯಾಭಿನಯದ ರೂಪಕವನ್ನು ಶಿವಮೊಗ್ಗದ ಹೊಂಗಿರಣ ತಂಡ ಅಭಿನಯಿಸುತ್ತದೆ. ಈ ರೂಪಕದ ನಿರ್ದೇಶಕರು ಡಾ. ಶ್ರೀಪಾದ ಭಟ್, ಡಾ. ಸಾಸ್ವೇಹಳ್ಳಿ ಸತೀಶ್.

ಈ ಶತಮಾನೋತ್ಸವದ ಉದ್ಘಾಟನೆಯನ್ನು ಚಿಂತಕ ಡಾ. ಕೆ.ವಿ. ನಾರಾಯಣ ಮಾಡುವರು. ವಿಚಾರಗೋಷ್ಠಿಯಲ್ಲಿ ಡಾ. ಎಚ್.ಎಸ್. ರಾಘವೇಂದ್ರರಾವ್, ರಾಜೇಂದ್ರ ಚೆನ್ನಿ, ವಿನಯಾ ವಕ್ಕುಂದ ಮೊದಲಾದವರು ಭಾಗವಹಿಸುತ್ತಿದ್ದಾರೆ. ಪ್ರಮುಖ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದು ಅಧ್ಯಕ್ಷತೆಯನ್ನು ಪ್ರೊ. ಎಸ್.ಜಿ. ಸಿದ್ದರಾಮಯ್ಯನವರು ವಹಿಸುತ್ತಾರೆ.

ಈಸಾರಿ “ಜಿಎಸ್ಎಸ್ ಪ್ರಶಸ್ತಿ” ಪುರಸ್ಕೃತರು – ಡಾ. ಎಚ್.ಎಸ್. ಶಿವಪ್ರಕಾಶ್, ಪ್ರೊ. ಕೃಷ್ಣಮೂರ್ತಿ ಹನೂರ್, ಡಾ. ವಿನಯಾ ವಕ್ಕುಂದ. ಕಾರ್ಯಕ್ರಮದಲ್ಲಿ ಡಾ. ಕೆ. ಮರುಳಸಿದ್ದಪ್ಪ, ವೂಡೆ ಪಿ. ಕೃಷ್ಣ ಮೊದಲಾದವರು ಭಾಗವಹಿಸುವರು ಎಂದು ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೊಂಡಜ್ಜಿ ಮೋಹನ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Cinema

ಚಿತ್ರೋತ್ಸವದ ಕೊನೆಯ ದಿನ ನೋಡಬಹುದಾದ ಅತ್ಯುತ್ತಮ 10 ಸಿನಿಮಾಗಳು

Published

on

ಬೆಂಗಳೂರು: ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕೊನೆಯ ದಿನ ಲುಲು ಮಾಲ್ ನಲ್ಲಿ ನೋಡಬಹುದಾದ ಅತ್ಯುತ್ತಮ 10 ಚಲನಚಿತ್ರಗಳ ಪಟ್ಟಿ ಇಲ್ಲಿದೆ:

1. ನೌವೆಲ್ ವಾಗ್
ಸಮಯ ಮತ್ತು ಸ್ಕ್ರೀನ್: ರಾತ್ರಿ 8:20 (ಸ್ಕ್ರೀನ್ 3), ರಾತ್ರಿ 7:30 (ಸ್ಕ್ರೀನ್ 6), ಅಥವಾ ಸಂಜೆ 7:20 (ಸ್ಕ್ರೀನ್ 8)
ವಿವರಣೆ: ಪ್ರಖ್ಯಾತ ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ ಈ 2025ರ ಚಿತ್ರವು ಫ್ರೆಂಚ್ ಸಿನಿಮಾ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.

2. ಶಂಕರ್ ಗುರು
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 2:00 (ಸ್ಕ್ರೀನ್ 6)
ವಿವರಣೆ: ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಈ 1978ರ ಮೈಲಿಗಲ್ಲು ಚಿತ್ರವನ್ನು ‘ಜನಪ್ರಿಯ ಮನರಂಜನಾ ಚಿತ್ರಗಳ’ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ.

3. ಅಂಕಲ್ ಬೂನ್ಮಿ ಹೂ ಕ್ಯಾನ್ ರಿಕಾಲ್ ಹಿಸ್ ಪಾಸ್ಟ್ ಲೈವ್ಸ್
ಸಮಯ ಮತ್ತು ಸ್ಕ್ರೀನ್: ಸಂಜೆ 4:10 (ವಿಐಪಿ ಸ್ಕ್ರೀನ್ 1)
ವಿವರಣೆ: ಅಪಿಚತ್‌ಪಾಂಗ್ ವೀರಸೇತಕುಲ್ ನಿರ್ದೇಶನದ ಈ ಥಾಯ್ ಚಿತ್ರವು ಆಧ್ಯಾತ್ಮಿಕ ಮತ್ತು ಪುನರ್ಜನ್ಮದ ಕುರಿತಾದ ಜಾಗತಿಕ ಮಟ್ಟದ ಶ್ರೇಷ್ಠ ಕಲಾಕೃತಿಯಾಗಿದೆ.

4. ದಿ ಪ್ರೆಸಿಡೆಂಟ್ಸ್ ಕೇಕ್
ಸಮಯ ಮತ್ತು ಸ್ಕ್ರೀನ್: ಸಂಜೆ 5:40 (ಸ್ಕ್ರೀನ್ 4)
ವಿವರಣೆ: ಹಸನ್ ಹಾದಿ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಇರಾಕ್‌ನ ಸಮಕಾಲೀನ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡುತ್ತದೆ.

5. ಮ್ಯಾನ್ ಆಫ್ ಮಾರ್ಬಲ್
ಸಮಯ ಮತ್ತು ಸ್ಕ್ರೀನ್: ಸಂಜೆ 6:50 (ವಿಐಪಿ ಸ್ಕ್ರೀನ್ 1)
ವಿವರಣೆ: ಪೋಲಿಷ್ ನಿರ್ದೇಶಕ ಅಂದ್ರೆಜ್ ವಾಜ್ದಾ ಅವರ ಈ 1977ರ ಚಿತ್ರವು ವಿಶ್ವ ಸಿನಿಮಾದ ಐತಿಹಾಸಿಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

6. ಡಿವೈನ್ ಕಾಮಿಡಿ
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 12:30 (ಸ್ಕ್ರೀನ್ 5)
ವಿವರಣೆ: ಅಲಿ ಅಸ್ಗರಿ ನಿರ್ದೇಶನದ ಈ 2025ರ ಪರ್ಷಿಯನ್ ಚಿತ್ರವು ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗದ ಅಡಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.

7. ದಿ ಮಾಸ್ಟರ್ ಮೈಂಡ್
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 2:30 (ಸ್ಕ್ರೀನ್ 5)
ವಿವರಣೆ: ಕೆಲ್ಲಿ ರೀಚಾರ್ಡ್ ನಿರ್ದೇಶನದ ಈ ಇಂಗ್ಲಿಷ್ ಚಿತ್ರವು ತನ್ನ ವಿಶಿಷ್ಟ ಕಥಾಹಂದರದಿಂದಾಗಿ ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿ ಗಮನಸೆಳೆಯುತ್ತಿದೆ.

8. ಡ್ರಾಗನ್‌ಫ್ಲೈ
ಸಮಯ ಮತ್ತು ಸ್ಕ್ರೀನ್: ಬೆಳಗ್ಗೆ 11:30 (ಸ್ಕ್ರೀನ್ 3)
ವಿವರಣೆ: ಪಾಲ್ ಆಂಡ್ರ್ಯೂ ವಿಲಿಯಮ್ಸ್ ನಿರ್ದೇಶನದ ಈ 2025ರ ಇಂಗ್ಲಿಷ್ ಚಿತ್ರವು ಗಂಭೀರ ಕಥಾಹಂದರ ಹೊಂದಿರುವ ಪ್ರಮುಖ ಚಿತ್ರವಾಗಿದೆ.

9. ಗಣರಾಜ್
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 3:00 (ವಿಐಪಿ ಸ್ಕ್ರೀನ್ 2)
ವಿವರಣೆ: ಭಾರತದ ಈಶಾನ್ಯ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಈ 2025ರ ಅಸ್ಸಾಮಿ ಚಿತ್ರವನ್ನು ದಿಪ್ ಭುಯಾನ್ ನಿರ್ದೇಶಿಸಿದ್ದಾರೆ.

10. ಕ್ಯಾಟನೇ
ಸಮಯ ಮತ್ತು ಸ್ಕ್ರೀನ್: ಸಂಜೆ 4:50 (ಸ್ಕ್ರೀನ್ 1)
ವಿವರಣೆ: ಅಯೋನಾ ಮಿಸ್ಚೀ ನಿರ್ದೇಶನದ ಈ 2025ರ ರೋಮೇನಿಯನ್ ಚಿತ್ರವು ಯುರೋಪಿಯನ್ ಸಿನಿಮಾದ ಆಧುನಿಕ ಶೈಲಿಯನ್ನು ಪ್ರತಿನಿಧಿಸುತ್ತದೆ.

Continue Reading

Cinema

ಫೆ. 7ರ ಸಂಜೆ ಕುವೆಂಪು ಸಿಗ್ತಾರೆ…

Published

on

ಕುವೆಂಪು ನಮ್ಮ ನಾಡಿನ “ಕಾಡಿನ ಕೊಳಲು”… ಅವರ ವೈಚಾರಿಕತೆ, ಕಾದಂಬರಿ, ನಾಟಕಗಳದ್ದೇ ಒಂದು ಲೋಕವಾದರೆ ಅವರ ಕಾವ್ಯದ್ದು ಬೇರೆಯದೇ ಆದ ಒಂದು ಅನನ್ಯ ಲೋಕ. ಅಂತಹ ರಸಋಷಿ, ಭಾವನೆಗಳ ಮಹಾಪೂರ ಕುವೆಂಪುರವರ ಕಾವ್ಯವನ್ನೇ ಕೇಂದ್ರವಾಗಿಟ್ಟುಕೊಂಡ ನೃತ್ಯರೂಪಕ ಹಾಸನದಲ್ಲಿ ಪ್ರದರ್ಶನವಾಗುತ್ತಿದೆ.

ವಿದುಷಿ ಡಾ. ಪಿ. ಮಾನಸ ಅವರ ಮನೋಜ್ಙ ನೃತ್ಯಕಲಾ ಅಕಾಡೆಮಿ ವತಿಯಿಂದ ಈ ಅದ್ಭುತ ನೃತ್ಯ ರೂಪಕ ರೂಪುಗೊಂಡಿದೆ.

ಫೆ. 7 ನೇ ತಾರೀಖಿನಂದು ಎಂ. ಜಿ. ರಸ್ತೆಯಲ್ಲಿರುವ ಬಿಜಿಎಸ್‌ ಆಂಗ್ಲ‌ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯಲಿದೆ. ಕುವೆಂಪು ಅವರನ್ನು ಹೀಗೂ ಮುಖಾಮುಖಿಯಾಗಬಹುದಾ ಅಂತ ಅಚ್ಚರಿ ಪಡುತ್ತೀರಿ… ಬನ್ನಿ ಸಂಭ್ರಮಿಸೋಣ.

Continue Reading

Trending

error: Content is protected !!