Connect with us

Cinema

ಅರಣ್ಯ ಇಲಾಖೆ ಪರಿಹಾರಕ್ಕಾಗಿ ಗಂಡನನ್ನೇ ಕೊಂ*ದ ಹೆಂಡತಿ

Published

on

ಮೈಸೂರು: ಹಣದ ಆಸೆಗೆ ಕೈ ಹಿಡಿದ ಪತಿಯನ್ನೇ ಕೊಲೆಗೈದು ಹುಲಿ ದಾಳಿ ಎಂದು ಬಿಂಬಿಸಲು ಹೋಗಿದ್ದ ಹೆಂಡತಿಯ ಸುಳ್ಳಿನ ಕಟ್ಟುಕತೆಯನ್ನು ಭೇದಿಸುವಲ್ಲಿ ಹುಣಸೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಚಿಕ್ಕಹೆಜ್ಜೂರು ಗ್ರಾಮದ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಕಡಂಪುರ ಗ್ರಾಮದ ವೆಂಕಟಸ್ವಾಮಿ (45) ಕೊಲೆಯಾದವರು. ಈತನ ಪತ್ನಿ ಸಲ್ಲಾಪುರಿ (40) ತನ್ನ ಕೈಹಿಡಿದ ಪತಿಯನ್ನೇ ಕೊಲೆಗೈದ ಆರೋಪಿಯಾಗಿದ್ದಾಳೆ.

ಹಲವು ವರ್ಷಗಳ ಹಿಂದೆ ವಿವಾಹವಾದ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರ ಶಿಕ್ಷಣಕ್ಕಾಗಿ ಬಿಡದಿಯಲ್ಲಿರುವ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದರು.

ಕಳೆದ ಆರು ತಿಂಗಳ ಹಿಂದಷ್ಟೆ ಬೆಂಗಳೂರಿನ ರವಿಕುಮಾರ್ ಮತ್ತು ಅರುಣ್‌ಕುಮಾರ್ ಅವರ ಒಡೆತನದ

ಚಿಕ್ಕಹೆಜ್ಜೂರಿನಲ್ಲಿರುವ 4.10 ಎಕರೆ ಅಡಿಕೆ ತೋಟವನ್ನು ನಿರ್ವಹಿಸುವ ಕೆಲಸವನ್ನು ನಿರ್ವಹಿಸಲು

ಮಾಸಿಕ 18 ಸಾವಿರ ರೂ. ವೇತನವನ್ನು ಈ ದಂಪತಿಗಳಿಗೆ ನಿಗದಿಪಡಿಸಿ ತೋಟದೊಳಗಿರುವ ಮನೆಯನ್ನು ವಾಸಕ್ಕೆ ನೀಡಿದ್ದರು.

ಕಾಡಂಚಿನ ಗ್ರಾಮಗಳಲ್ಲಿ ಆಗಿದ್ದಾಂಗೆ ಜನ ಜಾನುವಾರುಗಳ ಮೇಲೆ ಹುಲಿ, ಚಿರತೆಗಳ ದಾಳಿ ಆಗುತ್ತಿರುವ ಬಗ್ಗೆ ಹಾಗೂ ಹುಲಿ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಸರ್ಕಾರ ನೀಡುವ ಪರಿಹಾರದ ಬಗ್ಗೆ ಅಕ್ಕ ಪಕ್ಕದವರು ಕೆಲಸಕ್ಕೆ ಬರುತ್ತಿದ್ದವರಿಂದ ಮಾಹಿತಿ ಪಡೆದಿದ್ದ ಸಲ್ಲಾಪುರಿ ಹಣದ ದುರಾಸೆ ಬಿದ್ದು, ಸೆ.8ರಂದು ರಾತ್ರಿ ತನ್ನ ಗಂಡ ವೆಂಕಟಸ್ವಾಮಿಗೆ ವಿಷ ಬೆರೆಸಿದ  ಆಹಾರ ನೀಡಿ ಸಾಯಿಸಿದ್ದಾಳೆ.

ವಿಷ ಆಹಾರ ಸೇವಿಸಿದ ವೆಂಕಟಸ್ವಾಮಿ ಸತ್ತ ನಂತರ ಅವನ ದೇಹವನ್ನು ಮನೆಯಿಂದ ಹೊರಗೆ ಎಳೆದೊಯ್ದು ಮನೆಯ ಪಕ್ಕದಲ್ಲಿದ್ದ ಸಗಣಿ ಗುಂಡಿಯನ್ನು ಐದು ಅಡಿ ಆಳ ಅಗೆದು, ಶವವನ್ನು ಹೂತು ಹಾಕಿ ಸಗಣಿ, ಎಲೆಗಳು, ಜೋಳದ ಹುಲ್ಲು ಮತ್ತಿತರ ತ್ಯಾಜ್ಯಗಳಿಂದ ಮುಚ್ಚಿಹಾಕಿದ್ದಾಳೆ. ನಂತರ ಸೆ.9ರ ಮಂಗಳವಾರ ಸಂಜೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ

ಹುಲಿಯೊಂದು ತನ್ನ ಗಂಡ ವೆಂಕಟಸ್ವಾಮಿಯನ್ನು ಕೊಂದು ಅವನ ದೇಹವನ್ನು ಜೋಳದ ಹೊಲದ ಮೂಲಕ ಹತ್ತಿರದ ಕಾಡಿಗೆ ಎಳೆದುಕೊಂಡು ಹೋಗಿದೆ ಎಂದು ಕಥೆ ಕಟ್ಟಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣವನ್ನು ಹುಣಸೂರು ಗ್ರಾಮಾಂತರ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಶೋಧ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ಮುನಿಯಪ್ಪ

ತೋಟದಲ್ಲಿ ಅಳವಡಿಸಲಾದ ಸಿ.ಸಿ.ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ಅಪರಾಧದ ಸಮಯದಲ್ಲಿ ಸಲ್ಲಾಪುರಿಯ ಚಲನವಲನಗಳನ್ನು ಗಮನಿಸಿ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಆಕೆಯ ಹೇಳಿಕೆ ಮತ್ತು ದೃಢವಾದ ಪುರಾವೆಗಳನ್ನು ಸಂಗ್ರಹಿಸಿ ತನಿಖೆ ತೀವ್ರಗೊಳಿಸಿದ ಪರಿಣಾಮ ಹಣದ ದುರಾಸೆಗೆ ಬಿದ್ದು ಪತಿಯನ್ನೆ ಕೊಲೆಗೈದು ಶವವನ್ನು ತಿಪ್ಪೆ ಗುಂಡಿಯಲ್ಲಿ ಹೂತಕ್ಕಿರುವುದಾಗಿ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾಳೆ.

ಶವ ಪರೀಕ್ಷೆಗಾಗಿ ಶವವನ್ನು ಮೈಸೂರಿನ ಕೆ ಆರ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.

ಘಟನಾ ಸ್ಥಳಕ್ಕೆ ಮೈಸೂರು ಎಎಸ್ಪಿ ಮಲ್ಲಿಕ್, ಹುಣಸೂರು ಡಿ ವೈ ಎಸ್ ಪಿ ಗೋಪಾಲಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Continue Reading

Cinema

ಫೆ.7ಕ್ಕೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ

Published

on

ಬೆಂಗಳೂರು: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಜಿ.ಎಸ್ಸೆಸ್ ವಿಶ್ವಸ್ತ ಮಂಡಳಿ ಹಾಗೂ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಜಂಟಿಯಾಗಿ ಏರ್ಪಡಿಸಿರುವ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಫೆಬ್ರವರಿ 7 ಶನಿವಾರ ಬೆಳಗ್ಗೆ ಗಾಂಧಿ ಭವನದಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ ಇಡೀ ದಿನ ಜಿಎಸ್ಎಸ್ ಪ್ರಶಸ್ತಿ ಪ್ರಧಾನ ಸಮಾರಂಭ, ವಿಚಾರಗೋಷ್ಠಿಗಳು, ಕವಿ ಗೋಷ್ಠಿ, ಜಿಎಸ್ಎಸ್ ಕಾವ್ಯಾಧಾರಿತ “ವಿಪುಲರೂಪ ಧಾರಣಿ” ಕಾವ್ಯಾಭಿನಯದ ರೂಪಕವನ್ನು ಶಿವಮೊಗ್ಗದ ಹೊಂಗಿರಣ ತಂಡ ಅಭಿನಯಿಸುತ್ತದೆ. ಈ ರೂಪಕದ ನಿರ್ದೇಶಕರು ಡಾ. ಶ್ರೀಪಾದ ಭಟ್, ಡಾ. ಸಾಸ್ವೇಹಳ್ಳಿ ಸತೀಶ್.

ಈ ಶತಮಾನೋತ್ಸವದ ಉದ್ಘಾಟನೆಯನ್ನು ಚಿಂತಕ ಡಾ. ಕೆ.ವಿ. ನಾರಾಯಣ ಮಾಡುವರು. ವಿಚಾರಗೋಷ್ಠಿಯಲ್ಲಿ ಡಾ. ಎಚ್.ಎಸ್. ರಾಘವೇಂದ್ರರಾವ್, ರಾಜೇಂದ್ರ ಚೆನ್ನಿ, ವಿನಯಾ ವಕ್ಕುಂದ ಮೊದಲಾದವರು ಭಾಗವಹಿಸುತ್ತಿದ್ದಾರೆ. ಪ್ರಮುಖ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದು ಅಧ್ಯಕ್ಷತೆಯನ್ನು ಪ್ರೊ. ಎಸ್.ಜಿ. ಸಿದ್ದರಾಮಯ್ಯನವರು ವಹಿಸುತ್ತಾರೆ.

ಈಸಾರಿ “ಜಿಎಸ್ಎಸ್ ಪ್ರಶಸ್ತಿ” ಪುರಸ್ಕೃತರು – ಡಾ. ಎಚ್.ಎಸ್. ಶಿವಪ್ರಕಾಶ್, ಪ್ರೊ. ಕೃಷ್ಣಮೂರ್ತಿ ಹನೂರ್, ಡಾ. ವಿನಯಾ ವಕ್ಕುಂದ. ಕಾರ್ಯಕ್ರಮದಲ್ಲಿ ಡಾ. ಕೆ. ಮರುಳಸಿದ್ದಪ್ಪ, ವೂಡೆ ಪಿ. ಕೃಷ್ಣ ಮೊದಲಾದವರು ಭಾಗವಹಿಸುವರು ಎಂದು ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೊಂಡಜ್ಜಿ ಮೋಹನ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Cinema

ಚಿತ್ರೋತ್ಸವದ ಕೊನೆಯ ದಿನ ನೋಡಬಹುದಾದ ಅತ್ಯುತ್ತಮ 10 ಸಿನಿಮಾಗಳು

Published

on

ಬೆಂಗಳೂರು: ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕೊನೆಯ ದಿನ ಲುಲು ಮಾಲ್ ನಲ್ಲಿ ನೋಡಬಹುದಾದ ಅತ್ಯುತ್ತಮ 10 ಚಲನಚಿತ್ರಗಳ ಪಟ್ಟಿ ಇಲ್ಲಿದೆ:

1. ನೌವೆಲ್ ವಾಗ್
ಸಮಯ ಮತ್ತು ಸ್ಕ್ರೀನ್: ರಾತ್ರಿ 8:20 (ಸ್ಕ್ರೀನ್ 3), ರಾತ್ರಿ 7:30 (ಸ್ಕ್ರೀನ್ 6), ಅಥವಾ ಸಂಜೆ 7:20 (ಸ್ಕ್ರೀನ್ 8)
ವಿವರಣೆ: ಪ್ರಖ್ಯಾತ ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ ಈ 2025ರ ಚಿತ್ರವು ಫ್ರೆಂಚ್ ಸಿನಿಮಾ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.

2. ಶಂಕರ್ ಗುರು
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 2:00 (ಸ್ಕ್ರೀನ್ 6)
ವಿವರಣೆ: ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಈ 1978ರ ಮೈಲಿಗಲ್ಲು ಚಿತ್ರವನ್ನು ‘ಜನಪ್ರಿಯ ಮನರಂಜನಾ ಚಿತ್ರಗಳ’ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ.

3. ಅಂಕಲ್ ಬೂನ್ಮಿ ಹೂ ಕ್ಯಾನ್ ರಿಕಾಲ್ ಹಿಸ್ ಪಾಸ್ಟ್ ಲೈವ್ಸ್
ಸಮಯ ಮತ್ತು ಸ್ಕ್ರೀನ್: ಸಂಜೆ 4:10 (ವಿಐಪಿ ಸ್ಕ್ರೀನ್ 1)
ವಿವರಣೆ: ಅಪಿಚತ್‌ಪಾಂಗ್ ವೀರಸೇತಕುಲ್ ನಿರ್ದೇಶನದ ಈ ಥಾಯ್ ಚಿತ್ರವು ಆಧ್ಯಾತ್ಮಿಕ ಮತ್ತು ಪುನರ್ಜನ್ಮದ ಕುರಿತಾದ ಜಾಗತಿಕ ಮಟ್ಟದ ಶ್ರೇಷ್ಠ ಕಲಾಕೃತಿಯಾಗಿದೆ.

4. ದಿ ಪ್ರೆಸಿಡೆಂಟ್ಸ್ ಕೇಕ್
ಸಮಯ ಮತ್ತು ಸ್ಕ್ರೀನ್: ಸಂಜೆ 5:40 (ಸ್ಕ್ರೀನ್ 4)
ವಿವರಣೆ: ಹಸನ್ ಹಾದಿ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಇರಾಕ್‌ನ ಸಮಕಾಲೀನ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡುತ್ತದೆ.

5. ಮ್ಯಾನ್ ಆಫ್ ಮಾರ್ಬಲ್
ಸಮಯ ಮತ್ತು ಸ್ಕ್ರೀನ್: ಸಂಜೆ 6:50 (ವಿಐಪಿ ಸ್ಕ್ರೀನ್ 1)
ವಿವರಣೆ: ಪೋಲಿಷ್ ನಿರ್ದೇಶಕ ಅಂದ್ರೆಜ್ ವಾಜ್ದಾ ಅವರ ಈ 1977ರ ಚಿತ್ರವು ವಿಶ್ವ ಸಿನಿಮಾದ ಐತಿಹಾಸಿಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

6. ಡಿವೈನ್ ಕಾಮಿಡಿ
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 12:30 (ಸ್ಕ್ರೀನ್ 5)
ವಿವರಣೆ: ಅಲಿ ಅಸ್ಗರಿ ನಿರ್ದೇಶನದ ಈ 2025ರ ಪರ್ಷಿಯನ್ ಚಿತ್ರವು ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗದ ಅಡಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.

7. ದಿ ಮಾಸ್ಟರ್ ಮೈಂಡ್
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 2:30 (ಸ್ಕ್ರೀನ್ 5)
ವಿವರಣೆ: ಕೆಲ್ಲಿ ರೀಚಾರ್ಡ್ ನಿರ್ದೇಶನದ ಈ ಇಂಗ್ಲಿಷ್ ಚಿತ್ರವು ತನ್ನ ವಿಶಿಷ್ಟ ಕಥಾಹಂದರದಿಂದಾಗಿ ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿ ಗಮನಸೆಳೆಯುತ್ತಿದೆ.

8. ಡ್ರಾಗನ್‌ಫ್ಲೈ
ಸಮಯ ಮತ್ತು ಸ್ಕ್ರೀನ್: ಬೆಳಗ್ಗೆ 11:30 (ಸ್ಕ್ರೀನ್ 3)
ವಿವರಣೆ: ಪಾಲ್ ಆಂಡ್ರ್ಯೂ ವಿಲಿಯಮ್ಸ್ ನಿರ್ದೇಶನದ ಈ 2025ರ ಇಂಗ್ಲಿಷ್ ಚಿತ್ರವು ಗಂಭೀರ ಕಥಾಹಂದರ ಹೊಂದಿರುವ ಪ್ರಮುಖ ಚಿತ್ರವಾಗಿದೆ.

9. ಗಣರಾಜ್
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 3:00 (ವಿಐಪಿ ಸ್ಕ್ರೀನ್ 2)
ವಿವರಣೆ: ಭಾರತದ ಈಶಾನ್ಯ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಈ 2025ರ ಅಸ್ಸಾಮಿ ಚಿತ್ರವನ್ನು ದಿಪ್ ಭುಯಾನ್ ನಿರ್ದೇಶಿಸಿದ್ದಾರೆ.

10. ಕ್ಯಾಟನೇ
ಸಮಯ ಮತ್ತು ಸ್ಕ್ರೀನ್: ಸಂಜೆ 4:50 (ಸ್ಕ್ರೀನ್ 1)
ವಿವರಣೆ: ಅಯೋನಾ ಮಿಸ್ಚೀ ನಿರ್ದೇಶನದ ಈ 2025ರ ರೋಮೇನಿಯನ್ ಚಿತ್ರವು ಯುರೋಪಿಯನ್ ಸಿನಿಮಾದ ಆಧುನಿಕ ಶೈಲಿಯನ್ನು ಪ್ರತಿನಿಧಿಸುತ್ತದೆ.

Continue Reading

Cinema

ಫೆ. 7ರ ಸಂಜೆ ಕುವೆಂಪು ಸಿಗ್ತಾರೆ…

Published

on

ಕುವೆಂಪು ನಮ್ಮ ನಾಡಿನ “ಕಾಡಿನ ಕೊಳಲು”… ಅವರ ವೈಚಾರಿಕತೆ, ಕಾದಂಬರಿ, ನಾಟಕಗಳದ್ದೇ ಒಂದು ಲೋಕವಾದರೆ ಅವರ ಕಾವ್ಯದ್ದು ಬೇರೆಯದೇ ಆದ ಒಂದು ಅನನ್ಯ ಲೋಕ. ಅಂತಹ ರಸಋಷಿ, ಭಾವನೆಗಳ ಮಹಾಪೂರ ಕುವೆಂಪುರವರ ಕಾವ್ಯವನ್ನೇ ಕೇಂದ್ರವಾಗಿಟ್ಟುಕೊಂಡ ನೃತ್ಯರೂಪಕ ಹಾಸನದಲ್ಲಿ ಪ್ರದರ್ಶನವಾಗುತ್ತಿದೆ.

ವಿದುಷಿ ಡಾ. ಪಿ. ಮಾನಸ ಅವರ ಮನೋಜ್ಙ ನೃತ್ಯಕಲಾ ಅಕಾಡೆಮಿ ವತಿಯಿಂದ ಈ ಅದ್ಭುತ ನೃತ್ಯ ರೂಪಕ ರೂಪುಗೊಂಡಿದೆ.

ಫೆ. 7 ನೇ ತಾರೀಖಿನಂದು ಎಂ. ಜಿ. ರಸ್ತೆಯಲ್ಲಿರುವ ಬಿಜಿಎಸ್‌ ಆಂಗ್ಲ‌ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯಲಿದೆ. ಕುವೆಂಪು ಅವರನ್ನು ಹೀಗೂ ಮುಖಾಮುಖಿಯಾಗಬಹುದಾ ಅಂತ ಅಚ್ಚರಿ ಪಡುತ್ತೀರಿ… ಬನ್ನಿ ಸಂಭ್ರಮಿಸೋಣ.

Continue Reading

Trending

error: Content is protected !!