Connect with us

Mysore

ಡಿ.14ರಂದು ‘ಮೈಸೂರು ಭವಿಷ್ಯದ ಅಭಿವೃದ್ಧಿ’ ಸಾರ್ವಜನಿಕ ಸಂವಾದ

Published

on

ಮೈಸೂರು: ‘ಗ್ರೇಟರ್ ಮೈಸೂರು ಅಥವಾ ಗ್ರೇಟರ್ ವಿಷನ್: ನಗರದ ನಿಜವಾದ ಅಗತ್ಯವೇನು?’ ಶೀರ್ಷಿಕೆಯಡಿ ಡಿ.14ರಂದು ಸಾರ್ವಜನಿಕ ಸಂವಾದ ಆಯೋಜಿಸಲಾಗಿದೆ.
ನ್ಯೂರೋಜೋನ್ ಸಂಸ್ಥಾಪಕ ಡಾ.ಶುಶ್ರುತ ಗೌಡ ನೇತೃತ್ವದ ವಿ.ಆರ್ ಟ್ರಸ್ಟ್ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12.00ರವರೆಗೆ ಸಂವಾದ ನಡೆಯಲಿದೆ.

ಮೈಸೂರಿನ ದೀರ್ಘಕಾಲಿಕ ಅಭಿವೃದ್ಧಿ, ನಗರ ವಿಸ್ತರಣೆ, ಮೂಲಸೌಕರ್ಯ ಹಾಗೂ ಸುಸ್ಥಿರ ಬೆಳವಣಿಗೆ ಕುರಿತಾಗಿ ತಜ್ಞರು, ಆಡಳಿತಗಾರರು ಹಾಗೂ ನಾಗರಿಕರಲ್ಲಿ ಚರ್ಚೆ ಮೂಡಿಸುವುದು ಸಂವಾದದ ಉದ್ದೇಶವಾಗಿದೆ.

 

ನಗರಾಭಿವೃದ್ಧಿಗೆ ಗ್ರೇಟರ್ ಮೈಸೂರು ಮಾದರಿಯ ಭೌಗೋಳಿಕ ವಿಸ್ತರಣೆ ಅಗತ್ಯವೋ ಅಥವಾ ಸಮಗ್ರ ದೃಷ್ಟಿಕೋನ, ದೀರ್ಘಕಾಲಿಕ ಯೋಜನೆಗಳು ಮುಖ್ಯವೋ ಎಂಬುದರ ಕುರಿತು ತಜ್ಞರು ವಿಷಯ ಮಂಡಿಸಲಿದ್ದಾರೆ.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಡಿ. ಹರೀಶ್ ಗೌಡ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ, ನಿವೃತ್ತ ಮುಖ್ಯ ಕಾರ್ಯದರ್ಶಿ ಎ.ರವೀಂದ್ರ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜ, ರಂಗಾ ಗ್ರೂಪ್ಸ್ ನಿರ್ದೇಶಕ ಕಿರಣ್ ರಂಗ ಮಾತನಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Continue Reading

Mysore

ವಿದ್ಯಾರ್ಥಿ ಜೀವನದಲ್ಲಿ ಪ್ರತಿ ಕ್ಷಣವೂ ಅತ್ಯಮೂಲ್ಯವಾದದ್ದು: ಡಾ. ಶಿವಕುಮಾರ್

Published

on

ತಿ.ನರಸೀಪುರ: ವಿದ್ಯಾರ್ಥಿ ಜೀವನದಲ್ಲಿ ಪ್ರತಿ ಕ್ಷಣವೂ ಅತ್ಯಮೂಲ್ಯವಾದದ್ದು, ಕಾಲವನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೇಲೆ ವಿದ್ಯಾರ್ಥಿಗಳ ಸಾಧನೆ ಅವಲಂಬಿತವಾಗಿರುತ್ತದೆ ಎಂದು ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ. ಶಿವಕುಮಾರ್ ಹೇಳಿದರು.

 

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಅಂಗವಾಗಿ ಭಾರತೀಯ ವಿದ್ಯಾರ್ಥಿ ಸಂಘದ ವತಿಯಿಂದ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ /ಪಿಯುಸಿ ಫಲಿತಾಂಶದಲ್ಲಿ ಶೇ.90% ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ದಿನದ 24 ಗಂಟೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಕಾಲ ತಮ್ಮ ಓದಿಗೆ ಬಳಸಿಕೊಳ್ಳಬೇಕು. ಕಾಲದ ಮೌಲ್ಯವನ್ನು ಅರಿತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ ಎಂದರು.

ಶಿಕ್ಷಣದಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆದ ವಿದ್ಯಾರ್ಥಿಗಳು ದೊಡ್ಡ ಗುರಿಯನ್ನು ಹೊಂದಬೇಕು. 7 ಅಂಕಿಗಳ ವೇತನದ ಹುದ್ದೆಯನ್ನು ಪಡೆಯುವ ಗುರಿಯನ್ನು ನಿಗದಿಮಾಡಿಕೊಳ್ಳಬೇಕು. ಆಗಮಾತ್ರ ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ವ್ಯಕ್ತಿ ಎಲ್ಲ ವಯಸ್ಸಿನಲ್ಲೂ ಓದಿಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗುವುದಿಲ್ಲ.ಹಾಗಾಗಿ ವಿದ್ಯಾರ್ಥಿ ಜೀವನದಲ್ಲೇ ಸಾಧನೆಗೆ ಅಡಿಪಾಯ ಹಾಕಿಕೊಳ್ಳಬೇಕು ಎಂದರು.

 

ಆಸ್ತಿ, ಅಂತಸ್ತು, ಹಣ ಯಾವುದು ನಿಮ್ಮ ಬಳಿ ಇಲ್ಲದೆ ಇರುವಾಗ ಶಿಕ್ಷಣವನ್ನು ಹೆಚ್ಚು ಅವಲಂಬಿಸಬೇಕು. ಶಿಕ್ಷಣವನ್ನು ಹೆಚ್ಚು ಅವಲಂಬಿಸಿದರೆ ಅದು ಕಲ್ಪವೃಕ್ಷದಂತೆ ನಿರಂತರ ಪ್ರತಿಫಲ ನೀಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು. ಹೆಚ್ಚು ಮೊಬೈಲ್ ಅವಲಂಬಿತರಾದರೆ ಅದರಿಂದಾಗುವ ದುಷ್ಪರಿಣಾಮವನ್ನು 60 ವರ್ಷಗಳ ನಂತರ ಅನುಭವಿಸಬೇಕಾಗುತ್ತದೆ ಎಂದರು.

ಬುದ್ಧ ಧರ್ಮದ ನೀತಿಯುಕ್ತ ಪಂಚಶೀಲ ತತ್ವಗಳನ್ನು ವಿದ್ಯಾರ್ಥಿಗಳು ಅನುಸರಿಸಬೇಕು. ಮದ್ಯವ್ಯಸನ, ಧೂಮಪಾನಗಳಿಂದ ದೂರವಿರಬೇಕು. ಹಿರಿಯರನ್ನು ಗೌರವಯುತ ಕಾಣುವ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು. ಧನಾತ್ಮಕ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಬಲಿಷ್ಠವಾಗಲಿದೆ. ವಿದ್ಯಾರ್ಥಿಗಳು ಸ್ಥಿರ ಬುದ್ದಿಯನ್ನು ಹೊಂದಲು ಅಲ್ಪ ಮಾತು, ಓದುವಿನ ಕಡೆ ಹೆಚ್ಚು ಹೆಚ್ಚು ಗಮನಹರಿಸಬೇಕು ಎಂದರು.

 

ತಾಪಂ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ರಂಗಸ್ವಾಮಿ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರಮವನ್ನು ವೇದಿಕೆಗಳಲ್ಲಿ ಅಭಿನಂದಿಸಿದಾಗ ಅವರು ಮತ್ತಷ್ಟು ಉತ್ತಮ ಶಿಕ್ಷಣ ಪಡೆಯಲು ಸ್ಪೂರ್ತಿ ದೊರೆಯಲಿದೆ. ವಿದ್ಯಾರ್ಥಿಗಳಲ್ಲಿನ ಬಡತನ ಶೈಕ್ಷಣಿಕ ಸಾಧನೆ ಅಡ್ಡಿಯಾಗುವುದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಕಾಲಕ್ಕೆ ಹೆಚ್ಚು ಮಹತ್ವ ನೀಡಿದರೆ, ವಿದ್ಯಾರ್ಥಿಗಳನ್ನು ಗೌರವಿಸುವ ಕಾಲ ತಾನಾಗಿಯೇ ಬರಲಿದೆ. ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶಗಳನ್ನು ನಿರಂತರ ಪರಿಶ್ರಮ, ನಿರ್ದಿಷ್ಟ ಗುರಿ, ಮಾರ್ಗದರ್ಶನ ಪಡೆದು ಉತ್ತಮ ಸಾಧನೆ ಮಾಡಬೇಕಿದೆ. ಪ್ರತಿ ವಿದ್ಯಾರ್ಥಿಗಳು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು. ಇದು ತಮ್ಮಲ್ಲಿರುವ ಋಣಾತ್ಮಕ ಗುಣಗಳನ್ನು ತಿದ್ದಿಕೊಳ್ಳುವ ಅವಕಾಶ ನೀಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಉತ್ಕೃಷ್ಟ ಗುರಿಯನ್ನು ಹೊಂದಬೇಕು. ಆಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.

ಇದೇ ವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

 

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ರಂಗಸ್ವಾಮಿ,ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ್ , ನಾಗ ಮಾರ್ಷಲ್ ಆರ್ಟ್ಸ್ ಸಂಸ್ಥಾಪಕ ಅಧ್ಯಕ್ಷ ಹಾಗು ಬಿವಿಎಸ್ ಜಿಲ್ಲಾಧ್ಯಕ್ಷ ಸೋಸಲೆ ಸಿದ್ದರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ವಿ.ಉದಯ್ ಕುಮಾರ್, ಕರೋಹಟ್ಟಿ ಪ್ರಭುಸ್ವಾಮಿ, ಒಕ್ಕಲಿಗರ ವಿಕಾಸ ವೇದಿಕೆಯ ರಾಜ್ಯಾಧ್ಯಕ್ಷೆ ಯುಮುನಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕೋಟೆ ಮಹದೇವ್, ಜಿಲ್ಲಾ ಸಂಯೋಜಕ ಸಾಗರ್, ಶಿಕ್ಷಕ ಮೂಗೂರು ಮಹದೇವಸ್ವಾಮಿ, ಡಿ. ಎಸ್.ಪ್ರದೀಪ್, ಉತ್ತoಬಳ್ಳಿ ನಾಗರಾಜು, ಸಿದ್ದು ಮೇಗಡಹಳ್ಳಿ ಇತರರು ಹಾಜರಿದ್ದರು.

 

Continue Reading

Mysore

ನಂಜನಗೂಡಿನಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆ

Published

on

ನಂಜನಗೂಡು: ನಂಜನಗೂಡು ನಗರದಲ್ಲಿ ಹನುಮ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಆರ್.ಪಿ. ರಸ್ತೆ ಮತ್ತು ಎಂ.ಜಿ. ರಸ್ತೆ ಕೇಸರಿಮಯವಾಗಿ ಕಂಗೊಳಿಸಿದ್ದು, ಭವ್ಯ ಮೆರವಣಿಗೆ ಗಮನ ಸೆಳೆದಿತು.

ಮೆರವಣಿಗೆಯಲ್ಲಿ ಸಿದ್ದಲಿಂಗ ಮಹಾಸ್ವಾಮಿಗಳು, ಮಾಜಿ ಕಳಲೆ ಕೇಶವಮೂರ್ತಿ ಹಾಗೂ ಹರ್ಷವರ್ಧನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. ಬೃಹತ್ ಎತ್ತರದ ಹನುಮಂತನ ವಿಗ್ರಹವು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.

ಜಾನಪದ ಕಲಾ ತಂಡಗಳ ಪ್ರದರ್ಶನ, ಡಿಜೆ ಸಂಗೀತಕ್ಕೆ ಕುಣಿದ ಭಕ್ತರು ಹಾಗೂ ಸಹಸ್ರಾರು ಸಂಖ್ಯೆಯ ಜನರ ಭಾಗವಹಿಸುವಿಕೆ ಉತ್ಸವದ ಸಂಭ್ರಮವನ್ನು ಹೆಚ್ಚಿಸಿತು. ಮೆರವಣಿಗೆ ಆರ್.ಪಿ. ರಸ್ತೆ, ಹುಲ್ಲಹಳ್ಳಿ ವೃತ್ತ ಹಾಗೂ ಎಂ.ಜಿ. ರಸ್ತೆಯ ಮೂಲಕ ಸಾಗಿತು.

ಮೆರವಣಿಗೆ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

Continue Reading

Mysore

ತಾಲೂಕು ಆಡಳಿತದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಬೃಹತ್ ಬಾರು ಕೋಲು ಚಳುವಳಿ : ಜೂ.8 ರಂದು ರೈತ ಸಂಘ & ಹಸಿರು ಸೇನೆ ಪ್ರತಿಭಟನೆ

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ನಂಜನಗೂಡು ತಾಲೂಕು ವತಿಯಿಂದ ಜೂನ್ 8ರ ಸೋಮವಾರದಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ತಾಲೂಕು ಆಡಳಿತದ ಕಚೇರಿ ಮುಂಭಾಗ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಹೆಚ್.ಮಹದೇವನಾಯಕ ತಿಳಿಸಿದ್ದಾರೆ.

ಇಂದು ನಂಜನಗೂಡು ತಾಲೂಕು ಪತ್ರಕರ್ತರ ಭವನದಲ್ಲಿ ಮಹದೇವ ನಾಯಕ, ದೇವರಾಜ್, ಮೋಹನ್, ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕು ಆಡಳಿತವು ರೈತರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಪೂರೈಕೆ ಮಾಡುವ ಟನ್ ಕಬ್ಬಿಗೆ 4500 ರೂಗಳನ್ನು ರೈತರ ಖಾತೆಗೆ ಜಮಾ ಮಾಡಬೇಕು. ಮತ್ತು ಪೂರೈಕೆ ಮಾಡಿದ ಕಬ್ಬಿನ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸಾಕಷ್ಟು ಬಾರಿ ತಿಳಿಸಿದ್ರೂ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದರು.

ನಂಜನಗೂಡು ತಾಲೂಕಿನಲ್ಲಿ ಅಂತರ್ಜಲ ಬತ್ತು ಹೋಗಿ ನೂರಾರು ಬೋರ್ವೆಲ್ ಗಳು ಕೆಟ್ಟು ನಿಂತಿವೆ . ಇದರಿಂದ ಬೆಳೆ ನಷ್ಟವಾಗಿದೆ. ಇದಕ್ಕೆ ಪರಿಹಾರ ನೀಡಬೇಕು. ತಾಲೂಕಿನಲ್ಲಿ ಎಲ್ಲಾ ಕೆರೆಗಳ ಒತ್ತುವರಿ ತೆರೆಸಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕು.

ತಾಲೂಕಿನ ಎಲ್ಲಾ ಗ್ರಾಮದಲ್ಲಿ ಭೌತಿಕವಾಗಿ ಉಳುವೆ ಮಾಡುತ್ತಿರುವ ಸಾಗುವಳಿದಾರರಿಗೆ ಫಾರಂ ನಂಬರ್ 53,57, ರಲ್ಲಿ ಅರ್ಜಿ ಸಲ್ಲಿಸಿ ನೈಜ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ರೈತರು ಕೊಂಡುಕೊಳ್ಳುವ ರಸಗೊಬ್ಬರಕ್ಕೆ ಎಫ್ಐಡಿ ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕೆಂದು ಹಾಗೂ ರಸಗೊಬ್ಬರ ಡೀಸೆಲ್, ಪೆಟ್ರೋಲ್ ಗ್ಯಾಸ್ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಆರು ಸಾವಿರ ಸರ್ವೆಯರು ಕೆಲಸವಿಲ್ಲದೆ ಬೀದಿಯಲ್ಲಿ ಕುಳಿತಿದ್ದಾರೆ ಸರ್ವೆ ಕೆಲಸ ತಾಲೂಕಿನಲ್ಲಿ ನಡೆಯದೆ 7 ಲಕ್ಷ ಅರ್ಜಿಗಳು ನೆನೆಗುದಿಗೆ ಬಿದ್ದಿವೆ ಎಂದರು ರಸ್ತೆಗಳ ತೆರವು ಓಣಿಗಳ ಬಿಡಿಸಲು ಸಾಧ್ಯವಾಗದೆ ಕಂದಾಧಿಕಾರಿಗಳು ಇದುವರೆಗೂ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಗೋ ರಕ್ಷಣೆಗಾಗಿ ಮೇವು ಬ್ಯಾಂಕ್ ತುರ್ತಾಗಿ ಮಾಡಿಸಲೇಬೇಕು.

ಈ ಹಕ್ಕೋತ್ತಾಯಗಳನ್ನು ಒತ್ತಾಯಿಸಿ ಜೂನ್ 8 ರ ಸೋಮವಾರದಂದು 10:00ಗೆ ನಂಜನಗೂಡು ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಭೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಮುಖಾಂತರ ತಾಲೂಕು ಆಡಳಿತ ಕಚೇರಿವರೆಗೆ ತೆರಳಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಎಲ್ಲಾ ಹಕ್ಕೋತ್ತಾಯಗಳನ್ನು ಮಂಡನೆ ಮಾಡಲು ಸಾವಿರಾರು ಸಂಖ್ಯೆಯಲ್ಲಿ ರೈತ ಬಾಂಧವರು, ಮತ್ತು ಯುವಕರು, ಯುವತಿಯರು, ವಿದ್ಯಾರ್ಥಿಗಳು ದಲಿತ ಸಂಘಟನೆ, ಹಾಗೂ ಪ್ರಗತಿಪರ ಸಂಘಟನೆಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾ ಸಾಗರ್ ರಾಮೇಗೌಡ, ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್, ರೈತ ಸಂಘ ಹಸಿರು ಸೇನೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್, ಮೋಹನ್, ಮಾದಪ್ಪ, ವರದರಾಜು, ಸೇರಿದಂತೆ ಹಲವಾರು ಮುಖಂಡರು ಇದ್ದರು.

Continue Reading

Trending

error: Content is protected !!