Connect with us

Sports

IND vs SA ODI: 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ

Published

on

ಆಂಧ್ರ ಪ್ರದೇಶ: ವಿಶಾಖಪಟ್ಟಣಂನಲ್ಲಿ ಇಂದು ನಡೆದ ಟೀಂ ಇಂಡಿಯಾ ಮತ್ತು ಸೌತ್‌ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 9 ವಿಕೆಟ್​ಗಳಿಂದ ಗೆದ್ದುಕೊಳ್ಳುವ ಮೂಲಕ  ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡು ಭರ್ಜರಿ ಗೆಲುವು ಸಾಧಿಸಿದೆ.

ಕನ್ನಡಿಗ ಕೆ.ಎಲ್. ರಾಹುಲ್ ನೇತೃತ್ವದಲ್ಲಿ ಇಂದು ವಿಶಾಖಪಟ್ಟಣಂನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಪ್ರಿಕಾ ತಂಡ ಪೂರ್ಣ 50 ಓವರ್​ಗಳನ್ನು ಆಡದೆ 47.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು  ಕಳೆದುಕೊಂಡು 270 ರನ್ ಕಲೆಹಾಕಿತ್ತು.

ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 1 ವಿಕೆಟ್ ಕಳೆದುಕೊಂಡು 39.5 ಓವರ್​ಗಳಲ್ಲಿ ಜಯಗಳಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿನ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿದೆ.

Continue Reading

Sports

2027 ODI ವಿಶ್ವಕಪ್ ದಿನಾಂಕ ಬಹಿರಂಗ: ಅಕ್ಟೋಬರ್ 4ರಿಂದ ನವೆಂಬರ್ 21ರವರೆಗೆ ಕ್ರಿಕೆಟ್ ಮಹಾಸಮರ!

Published

on

ನವದೆಹಲಿ: 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗಾಗಿ ವಿಶ್ವದ ಕ್ರಿಕೆಟ್ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಈ ನಡುವೆ, ಪಂದ್ಯಾವಳಿಯ ತಾತ್ಕಾಲಿಕ ವೇಳಾಪಟ್ಟಿ ಬಹಿರಂಗವಾಗಿದ್ದು, ವಿಶ್ವಕಪ್ 2027ರ ಅಕ್ಟೋಬರ್ 4ರಿಂದ ನವೆಂಬರ್ 21ರವರೆಗೆ ನಡೆಯುವ ಸಾಧ್ಯತೆ ಇದೆ. ಈ ಕುರಿತು ಅಂತಿಮ ನಿರ್ಧಾರವನ್ನು ಐಸಿಸಿ ವಾರ್ಷಿಕ ಸಭೆಯಲ್ಲಿ ಕೈಗೊಳ್ಳುವ ನಿರೀಕ್ಷೆಯಿದೆ.

54 ಪಂದ್ಯಗಳು, 14 ತಂಡಗಳ ಸೆಣಸಾಟ

ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿದ್ದು, 54 ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯು ಸುಮಾರು ಒಂದೂವರೆ ತಿಂಗಳ ಕಾಲ ನಡೆಯಲಿದೆ. 2023ರ ವಿಶ್ವಕಪ್ ಮಾದರಿಯಿಂದ ಭಿನ್ನವಾಗಿ, 2003ರ ವಿಶ್ವಕಪ್‌ನಲ್ಲಿ ಬಳಸಿದ್ದ ಸೂಪರ್ ಸಿಕ್ಸ್ ಮಾದರಿಯನ್ನು ಮತ್ತೆ ಅಳವಡಿಸಿಕೊಳ್ಳಲಾಗುತ್ತಿದೆ.

ಟೂರ್ನಿ ಮಾದರಿ ಹೇಗಿರಲಿದೆ?

14 ತಂಡಗಳನ್ನು ತಲಾ 7 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶ ಪಡೆಯುತ್ತವೆ. ಅಲ್ಲಿಂದ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದು, ಜಯಶಾಲಿ ಎರಡು ತಂಡಗಳು ನವೆಂಬರ್ 21ರಂದು ನಡೆಯುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ.

ಮೂರು ದೇಶಗಳಲ್ಲಿ ವಿಶ್ವಕಪ್

2027ರ ವಿಶ್ವಕಪ್‌ಗೆ ಸೌತ್‌ ಆಫ್ರಿಕಾ, ಜಿಂಬಾಬ್ವೆ  ಹಾಗೂ ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿವೆ. ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಪಂದ್ಯಗಳು ಮತ್ತು ನಾಕೌಟ್ ಪಂದ್ಯಗಳು ನಡೆಯಲಿದ್ದು, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲೂ ಕೆಲವು ಪಂದ್ಯಗಳಿಗೆ ವೇದಿಕೆ ಸಿದ್ಧವಾಗಲಿದೆ.

ಅರ್ಹತೆ ಹೇಗೆ?

ಆತಿಥೇಯ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಈಗಾಗಲೇ ನೇರ ಅರ್ಹತೆ ಪಡೆದಿವೆ. ಉಳಿದ ತಂಡಗಳು ಐಸಿಸಿ ಅರ್ಹತಾ ಪ್ರಕ್ರಿಯೆ ಮತ್ತು ಶ್ರೇಯಾಂಕಗಳ ಆಧಾರದ ಮೇಲೆ ಸ್ಥಾನ ಪಡೆಯಲಿವೆ. ನಮೀಬಿಯಾ ಸಹ ಆತಿಥೇಯ ರಾಷ್ಟ್ರವಾಗಿದ್ದರೂ ಅರ್ಹತಾ ಹಾದಿ ಮೂಲಕವೇ ವಿಶ್ವಕಪ್ ಪ್ರವೇಶ ಪಡೆಯಬೇಕಿದೆ.

2003ರ ಬಳಿಕ ಮೊದಲ ಬಾರಿಗೆ ಪುರುಷರ ಏಕದಿನ ವಿಶ್ವಕಪ್ ಮತ್ತೆ ಆಫ್ರಿಕಾ ಖಂಡಕ್ಕೆ ಮರಳುತ್ತಿರುವುದು ಈ ಟೂರ್ನಿಯ ವಿಶೇಷತೆಯಾಗಿದೆ.

Continue Reading

National

ಭಾರತಕ್ಕೆ ಭರ್ಜರಿ ಟೆಸ್ಟ್ ಜಯ: ಅಫ್ಘಾನಿಸ್ತಾನ ವಿರುದ್ಧ ಇನ್ನಿಂಗ್ಸ್ ಹಾಗೂ 300 ರನ್‌ಗಳ ದಿಗ್ವಿಜಯ

Published

on

ಚಂಡೀಗಢ:  ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ಇನ್ನಿಂಗ್ಸ್ ಹಾಗೂ 300 ರನ್‌ಗಳ ಅಂತರದಿಂದ ಜಯ ಸಾಧಿಸಿ ಮೂರು ದಿನಗಳಲ್ಲೇ ಪಂದ್ಯವನ್ನು ಮುಕ್ತಾಯಗೊಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 564/8 ರನ್‌ಗಳಿಗೆ ಡಿಕ್ಲೇರ್ ಮಾಡಿತು. ಬೃಹತ್ ಮೊತ್ತದ ಒತ್ತಡದಲ್ಲಿ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ನಂತರ ಫಾಲೋ-ಆನ್‌ಗೆ ಒಳಗಾದ ಅಫ್ಘಾನ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲೂ 112 ರನ್‌ಗಳಿಗೆ ಸರ್ವಪತನ ಕಂಡಿತು.

ಭಾರತದ ಸ್ಪಿನ್ ದಾಳಿಯ ಮುಂದೆ ಅಫ್ಘಾನ್ ಬ್ಯಾಟರ್‌ಗಳು ನಲುಗಿದರು. ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದು ಮಿಂಚಿದರೆ, ಕುಲದೀಪ್ ಯಾದವ್ 3 ವಿಕೆಟ್ ಪಡೆದು ಪ್ರಮುಖ ಪಾತ್ರ ವಹಿಸಿದರು.

ಅಫ್ಘಾನಿಸ್ತಾನದ ಪರ ಸೆದಿಕುಲ್ಲಾ ಅಟಲ್ (42) ಮತ್ತು ರಹಮಾನುಲ್ಲಾ ಗುರ್ಬಾಜ್ (24) ಸ್ವಲ್ಪ ಪ್ರತಿರೋಧ ತೋರಿದರೂ, ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.

ಈ ಗೆಲುವಿನೊಂದಿಗೆ ಭಾರತ ತಂಡ ಟೆಸ್ಟ್ ಪಂದ್ಯವನ್ನು ಸಂಪೂರ್ಣ ಪ್ರಾಬಲ್ಯದಿಂದ ಗೆದ್ದು ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Continue Reading

National

ಗಿಲ್–ರಾಹುಲ್ ಶತಕದ ಹೊಳಪು: ಅಫ್ಘಾನಿಸ್ತಾನದ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತದ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ

Published

on

ಚಂಡೀಗಢ: ಅಫ್ಘಾನಿಸ್ತಾನದ ವಿರುದ್ಧ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ದಿನವೇ ಶಕ್ತಿಶಾಲಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಆರಂಭಿಕ ಕೆ.ಎಲ್‌.ರಾಹುಲ್‌ ಶತಕ ಸಿಡಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರೆ, ನಾಯಕ ಶುಭಮನ್‌ ಗಿಲ್‌ ಅಜೇಯ ಶತಕದೊಂದಿಗೆ ಮಿಂಚಿದ್ದಾರೆ. ಗಿಲ್ ಅವರು 138 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು.

ಮಧ್ಯಮ ಕ್ರಮಾಂಕದಲ್ಲಿ ರಿಷಬ್‌ ಪಂತ್‌ ಜೊತೆಗೂಡಿ ಗಿಲ್ ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟ ನಿರ್ಮಿಸಿದರು. ಇದಕ್ಕೂ ಮೊದಲು ರಾಹುಲ್ ಜೊತೆ 67 ರನ್ ಜೊತೆಯಾಟ ಕೂಡ ಮೂಡಿಬಂದಿತ್ತು.

ಸಾಯಿ ಸುದರ್ಶನ್ 81 ರನ್ ಗಳಿಸಿ ಔಟಾದ ನಂತರ ಭಾರತ 180 ರನ್‌ಗೆ ಎರಡನೇ ವಿಕೆಟ್ ಕಳೆದುಕೊಂಡಿದ್ದರೂ, ನಂತರದ ಶತಕ ಜೊತೆಯಾಟಗಳಿಂದ ಪಂದ್ಯ ಸಂಪೂರ್ಣವಾಗಿ ಭಾರತದ ಹಿಡಿತಕ್ಕೆ ಬಂದಿದೆ.

ಇದೇ ವೇಳೆ ಗಿಲ್ ಟೆಸ್ಟ್ ನಾಯಕನಾಗಿ 1,000ಕ್ಕೂ ಹೆಚ್ಚು ರನ್ ಪೂರೈಸಿ ಮಹತ್ವದ ಮೈಲಿಗಲ್ಲು ದಾಟಿದ್ದಾರೆ.

Continue Reading

Trending

error: Content is protected !!