Chikmagalur
ಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
ಚಿಕ್ಕಮಗಳೂರು : ಜಿಲ್ಲೆ ಸಖರಾಯಪಟ್ಟಣದಲ್ಲಿ ಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನನ್ನು ಕಳೆದ ರಾತ್ರಿ ಹತ್ಯೆ ಮಾಡಲಾಗಿದೆ.
ಸಖರಾಯಪಟ್ಟಣ ಗ್ರಾಮ ಪಂಚಾಯತಿ ಸದಸ್ಯನಾಗಿರುವ ಗಣೇಶ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ.
ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಸಂಜಯ್ ದಾಖಲಾಗಿದ್ದು, ಮಿಧುನ್ ವರಾರಿಯಾಗಿದ್ದಾನೆ. ಚಿಕ್ಕಮಗಳೂರಿನ ನಲರಾಯಪಟ್ಟಣದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ದತ್ತ ಜಯಂತಿ ಮುಗಿದ ಹಿನ್ನೆಲೆ ಸಖರಾಯಪಟ್ಟಣ ಬಸ್ ನಿಲ್ದಾಣ ಬಳಿ ಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮ್ಮೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ದುಷ್ಕರ್ಮಿಗಳು ಗಣೇಶ್ ಗೌಡ ಎಂಬುವವರನ್ನು ಹತ್ಯೆ ಮಾಡಿದ್ದಾರೆ.
ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಗಲಾಟೆಯಲ್ಲಿ ಭಾಗಿಯಾದ ಒಬ್ಬರು ಜಿಲ್ಲಾಪತ್ರೆಗೆ ದಾಖಲಾಗಿದ್ದಾರೆ.
Chikmagalur
ಜೆಸಿಐ ಬಿಳಾಲುಕೊಪ್ಪ ವತಿಯಿಂದ ತೋಟದ ಕಾರ್ಮಿಕರಿಗೆ ಉಚಿತ ಸ್ಟೀಲ್ ನೀರಿನ ಬಾಟಲಿ ವಿತರಣೆ
ಜಯಪುರ : ಪರಿಸರ ಸಂರಕ್ಷಣೆ ಹಾಗೂ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ, ಜೆಸಿಐ ಬಿಳಾಲುಕೊಪ್ಪ ವತಿಯಿಂದ ‘ಬಾಳೆಕೊಂಡ ಎಸ್ಟೇಟ್’ ನಲ್ಲಿ ತೋಟ ಕಾರ್ಮಿಕರಿಗೆ ಉಚಿತವಾಗಿ ಸ್ಟೀಲ್ ನೀರಿನ ಬಾಟಲಿಗಳನ್ನು ವಿತರಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
“ಆರೋಗ್ಯಕರ ಮತ್ತು ಸಂತೋಷದಾಯಕ ನಾಳೆಗಾಗಿ” ಎಂಬ ಆಶಯದೊಂದಿಗೆ ಈ ಪ್ರಾಜೆಕ್ಟ್ ಅನ್ನು ಹಮ್ಮಿಕೊಂಡಿದ್ದು, ತೋಟಗಳಲ್ಲಿ ದಿನನಿತ್ಯ ಕಷ್ಟಪಟ್ಟು ದುಡಿಯುವ ಕಾರ್ಮಿಕರು ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ, ದೀರ್ಘಕಾಲ ಬಾಳಿಕೆ ಬರುವ ಹಾಗೂ ಆರೋಗ್ಯಕ್ಕೆ ಸುರಕ್ಷಿತವಾದ ಸ್ಟೀಲ್ ಬಾಟಲಿಗಳನ್ನು ಬಳಸುವಂತೆ ಸಾಮಾಜಿಕ ಅಭಿವೃದ್ಧಿಯ ಅಧಿಕಾರಿ ಸುಜನ್. S ಈ ಕುರಿತು ಮಾತನಾಡಿದರು.
ಏಕಬಳಕೆಯ ಪ್ಲಾಸ್ಟಿಕ್ ತಡೆಗಟ್ಟಿ ಹಸಿರು ಪರಿಸರ ನಿರ್ಮಾಣ ಮಾಡುವುದು ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಶುದ್ಧ ನೀರಿನ ಸೇವನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜೆಸಿಐ ಬಿಳಾಲುಕೊಪ್ಪ ಈ ವಿಶಿಷ್ಟ ಹೆಜ್ಜೆಯನ್ನು ಇಟ್ಟಿದೆ.
ಕಾರ್ಯಕ್ರಮದಲ್ಲಿ ಜೆಸಿಐ ಬಿಳಾಲುಕೊಪ್ಪದ ಅಧ್ಯಕ್ಷರಾದ ವೈಶಾಖ ಶ್ರೇಣಿಕ್, ಅಶೋಕ್, ವಲಯಾಧಿಕಾರಿ ಸುಜನ್, ಶ್ರೀಕಾಂತ್, ನಿಕಟ ಪೂರ್ವಾದ್ಯಕ್ಷರಾದ ಅಶ್ವಥ್ ಜೈನ್, ಕಾರ್ಯದರ್ಶಿ ಸುಶಾಂತ್, ಸದಸ್ಯರುಗಳಾದ ಶ್ರೇಣಿಕ್ ಜೈನ್, ಗಿರೀಶ್, ರಂಗನಾಥ್, ಶುಭವಿಜಯರಂಗ, ನಮಿತ್ ಶೆಟ್ಟಿ ಇದ್ದರು.
ವರದಿ :- ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.
Chikmagalur
ಜಲಯೋಗ ಸಾಧನೆಯಲ್ಲಿ ವಿಶ್ವ ದಾಖಲೆ ಬರೆದ ವಕೀಲ ವಿ.ಕೆ. ರಘು
ಚಿಕ್ಕಮಗಳೂರು: ನಗರದ ವಕೀಲ ವಿ.ಕೆ.ರಘು ಅವರು ಜಲಯೋಗ ಸಾಧನೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ನೀರಿನ ಮೇಲೆ ೯೬೦ ಬಾರಿ ಶ್ರೀರಾಮನ ಮಂತ್ರಗಳನ್ನು ಪಠಿಸುತ್ತ ನಿರಂತರ ೨೩ ನಿಮಿಷ ೪೮ ಸೆಂಕೆಂಡ್ ವರೆಗೆ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದರು.

ಇದನ್ನು ಪರಿಗಣಿಸಿದ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ರಘು ಅವರಿಗೆ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಘೋಷಿಸಿದೆ. ಜಲಯೋಗ ಪ್ರದರ್ಶನದ ಸಂದರ್ಭದಲ್ಲಿ ರಘು ಅವರು ಶವಾಸನ, ತಾಡಾಸನ, ಪದ್ಮಾಸನ ಮತ್ತು ಧನುರಾಸನವನ್ನು ಪ್ರಸ್ತುತ ಪಡಿಸಿದ್ದರು. ಈ ನಾಲ್ಕೂ ಪ್ರಮುಖ ಆಸನಗಳು ಶ್ರೀರಾಮ ತಮ್ಮ ಜೀವನ ಶೈಲಿಯ ಭಾಗವಾಗಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ರಘು ತಿಳಿಸಿದ್ದಾರೆ.

ಜಲಯೋಗ ಸಾಧನೆಯಲ್ಲಿ ವಿಶ್ವದಾಖಲೆ ಬರೆದಿರುವ ರಘು ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಹಲವು ಗಣ್ಯರು, ಸಂಘ-ಸಂಸ್ಥೆಗಳು ಅಭಿನಂದಿಸಿವೆ.
ಇದೇ ವೇಳೆ ಕಾಫಿ ನಾಡು ಸ್ನೇಹಜೀವಿ ಕಲಾ ತಂಡವು ಜುಲೈ ೯ ರಂದು ನಗರದ ಟಿಎಂಎಸ್ ಸಭಾಂಗಣದಲ್ಲಿ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ ಜೊತೆಗೆ ವಿಶ್ವದಾಖಲೆಗೆ ಪಾತ್ರರಾಗಿರುವ ವಿ.ಕೆ.ರಘು ಅವರಿಗೆ ಅಭಿನಂದಾನ ಸಮಾರಂಭ ಏರ್ಪಡಿಸಿದೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಖ್ಯಾತ ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಜಿಲ್ಲಾಧ್ಯಕ್ಷ ಸುರೇಂದ್ರ ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಭ್ರಹ್ಮ ಕುಮಾರೀಸ್ ಸಂಸ್ಥೆಯ ಭಾಗ್ಯಕ್ಕ, ಯೋಗ ತಜ್ಞೆ ಡಾ.ಗೌರಿ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಸಿ.ಆರ್.ಪ್ರೇಂ ಕುಮಾರ್, ವರಸಿದ್ದಿ ವೇಣುಗೋಪಾಲ್ ಸೇರಿದಂತೆ ಹಲವು ಗಣ್ಯರು, ಯೋಗ ಸಾಧಕರು ಭಾಗವಹಿಸಲಿದ್ದಾರೆ.
Chikmagalur
ಶೃಂಗೇರಿ ಅಂಚೆ ಮತಗಳ ಮರು ಎಣಿಕೆ ಪ್ರಕರಣ: ಸುಪ್ರೀಂ ಕೋರ್ಟ್ ವಿಚಾರಣೆ ಆಗಸ್ಟ್ 19ಕ್ಕೆ ಮುಂದೂಡಿಕೆ
ಚಿಕ್ಕಮಗಳೂರು : ಜು. 30: 2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 19ಕ್ಕೆ ಮುಂದೂಡಿ ಆದೇಶಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಫಲಿತಾಂಶವನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಅಂಚೆ ಮತಗಳ ಮರು ಎಣಿಕೆಗೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಅಂಚೆ ಮತಗಳ ಮರು ಎಣಿಕೆ ನಡೆಸಿ ಹೊಸ ಫಲಿತಾಂಶ ಪ್ರಕಟಿಸುವಂತೆ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ ಮೇ 2ರಂದು ನಡೆದ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ವಿಜೇತರಾಗಿ ಘೋಷಿಸಲ್ಪಟ್ಟಿದ್ದರು. ಇದೇ ವೇಳೆ ಟಿ.ಡಿ. ರಾಜೇಗೌಡ ಅವರ ಮತಗಳ ಸಂಖ್ಯೆ 255ರಷ್ಟು ಕಡಿಮೆಯಾಗಿದ್ದು, ಅವರು ಸೋಲು ಅನುಭವಿಸಿದ್ದರು.
ಮರು ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಟಿ.ಡಿ. ರಾಜೇಗೌಡ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಂಚೆ ಮತಗಳ ಮರು ಎಣಿಕೆಗೆ ಮುನ್ನ ಬ್ಯಾಲೆಟ್ ಪೆಟ್ಟಿಗೆಯನ್ನು ತೆರೆಯಲಾಗಿದ್ದು, ಮತಗಳಲ್ಲಿ ಅಕ್ರಮ (ವೋಟ್ ಟ್ಯಾಂಪರಿಂಗ್) ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿ, ಅಂತಿಮ ತೀರ್ಪು ಬರುವವರೆಗೆ ಟಿ.ಡಿ. ರಾಜೇಗೌಡ ಅವರೇ ಶಾಸಕರಾಗಿ ಮುಂದುವರಿಯುವಂತೆ ಆದೇಶಿಸಿತ್ತು.

ಬುಧವಾರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಆಗಸ್ಟ್ 19ಕ್ಕೆ ಮುಂದೂಡಿ ಆದೇಶಿಸಿದೆ. ಪ್ರಕರಣದ ಅಂತಿಮ ತೀರ್ಪಿನತ್ತ ರಾಜ್ಯದ ರಾಜಕೀಯ ವಲಯದ ಗಮನ ನೆಟ್ಟಿದೆ.
-
Chamarajanagar4 hours agoಕಾರು ಸಾಲ ಮಂಜೂರಿಗೆ ₹15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಜಿಲ್ಲಾ ವ್ಯವಸ್ಥಾಪಕ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ
-
Manglore4 hours agoಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಪಂಜರ ಪ್ರಕರಣ: ಡಿಎನ್ಎ ಪರೀಕ್ಷೆಯಲ್ಲಿ ಮೂವರ ಗುರುತು ದೃಢ
-
Hassan44 minutes agoಅಮ್ಮನ ದರ್ಶನಕ್ಕೆ ಬಂದವರಿಗೆ ಕೃತಜ್ಞತೆ ಅರ್ಪಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ : ಜನಸಾಗರವನ್ನು ಕಂಡು ಗದ್ಗದಿತರಾದ ಕುಮಾರಸ್ವಾಮಿ
-
State13 hours agoಮತದಾರರ ಪಟ್ಟಿಯಲ್ಲಿ ಮಹಾ ಪರಿಷ್ಕರಣೆ: 86.64 ಲಕ್ಷ ಎಎಸ್ಡಿಡಿಒ, 20 ಲಕ್ಷ ಹೆಸರು ಶಾಶ್ವತ ಡಿಲೀಟ್ ಸಾಧ್ಯತೆ
-
Mandya5 hours agoನಕಲಿ ದಾಖಲೆ ನೀಡಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆ : ಕ್ರಮಕ್ಕೆ ಆಗ್ರಹ
-
Kodagu8 hours agoಮೇಕೇರಿಯಲ್ಲಿ ಯಶಸ್ವಿಯಾಗಿ ನಡೆದ ಮಾದರಿ ಮದುವೆ ಜಾಗೃತಿ ಕಾರ್ಯಗಾರ
-
Chamarajanagar24 hours agoಸಂವಿಧಾನ ಸರ್ವರ ರಕ್ಷಾಕವಚ: ಸುಭಾಷ್ ಮಾಡ್ರಹಳ್ಳಿ
-
Mysore3 hours agoಸುಳ್ಳು ದಾಖಲೆ ಸೃಷ್ಟಿಸಿ ಮೂಲ ಆದಿವಾಸಿಗಳಿಗೆ ವಂಚನೆ: ರಾಜ್ಯ ಮೂಲ ಆದಿವಾಸಿ ವೇದಿಕೆ ಗಂಭೀರ ಆರೋಪ
