Sports
IND v/s SA ODI: ದಕ್ಷಿಣ ಆಫ್ರಿಕಾ ಆಲೌಟ್, ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ
ರಾಂಚಿ: ವಿರಾಟ್ ಕೊಹ್ಲಿ ಶತಕ, ರೋಹಿತ್ ಹಾಗೂ ಟೀಂ ಇಂಡಿಯಾ ನಾಯಕ ಕೆ.ಎಲ್. ರಾಹುಲ್ ಅವರ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ 17 ರನ್‌ಗಳಿಂದ ಜಯಗಳಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಹೊಡೆಯಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 49.2 ಓವರ್‌ಗಳಲ್ಲಿ 332 ರನ್ ಗಳಿಸಿ ಆಲೌಟ್ ಆಯಿತು.
ಆಫ್ರಿಕಾ 11 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಹರ್ಷಿತ್ ರಾಣಾ ಅವರ ಮೊದಲ ಓವರ್‌ನಲ್ಲಿ 2 ವಿಕೆಟ್ ಕಿತ್ತು ದೊಡ್ಡ ಆಘಾತ ನೀಡಿದರು. ಈ ಹಂತದಲ್ಲಿ ಮ್ಯಾಥ್ಯೂ ಬ್ರೀಟ್ಜ್ಕೆ ಮತ್ತು ಟೋನಿ ಡಿ ಜೋರ್ಜಿ ನಿಧಾನವಾಗಿ ಇನಿಂಗ್ಸ್ ಕಟ್ಟತೊಡಗಿದರು. ಟೋನಿ ಡಿ ಜೋರ್ಜಿ 39 ರನ್ ನಂತರ ಡೆವಾಲ್ಡ್ ಬ್ರೆವಿಸ್ 37 ರನ್(2 ಬೌಂಡರಿ, 3 ಸಿಕ್ಸ್) ಹೊಡೆದು ಔಟಾದರು.

5 ವಿಕೆಟ್ ನಷ್ಟಕ್ಕೆ 130 ರನ್‌ಗಳಿಸಿ ಒತ್ತಡದಲ್ಲಿದ್ದಾಗ 6.5 ಅಡಿ ಎತ್ತರದ ಜಾನ್ಸೆನ್ ಕ್ರೀಸ್‌ಗೆ ಆಗಮಿಸಿದರು. ಇವರು ಸಿಕ್ಸರ್, ಬೌಂಡರಿ ಸಿಡಿಸಿದ ಪರಿಣಾಮ 6ನೇ ವಿಕೆಟಿಗೆ ಮ್ಯಾಥ್ಯೂ ಬ್ರೀಟ್ಜ್ಕೆ ಜೊತೆಗೂಡಿ 69 ಎಸೆತಗಳಲ್ಲಿ 97 ರನ್ ಚಚ್ಚಿದರು. ಈ ಮೊತ್ತದಲ್ಲಿ ಜಾನ್‌ಸೆನ್ 70 ರನ್(39 ಎಸೆತ, 8 ಬೌಂಡರಿ, 3 ಸಿಕ್ಸ್) ಸಿಡಿಸಿ ಹೋರಾಟ ತೋರಿದರು. ಆದರೆ 34 ಓವರ್ ಎಸೆದ ಕುಲದೀಪ್ ಮ್ಯಾಜಿಕ್ ಮಾಡಿದ್ದಾರೆ.
ಕುಲದೀಪ್ ಎಸೆದ 34ನೇ ಓವರ್ ಮೊದಲ ಸಿಕ್ಸ್ ಸಿಡಿಸಲು ಹೋಗಿ ಜಾನ್‌ಸೆನ್ ಜಡೇಜಾಗೆ ಕ್ಯಾಚ್ ನೀಡಿದರೆ ಅದೇ ಓವರ್‌ನ ಮೂರನೇ ಎಸೆತದಲ್ಲಿ72 ರನ್(80 ಎಸೆತ, 8 ಬೌಂಡರಿ, 1 ಸಿಕ್ಸ್) ಹೊಡೆದಿದ್ದ ಬ್ರೀಟ್ಜ್ಕೆ ಕೊಹ್ಲಿಗೆ ಕ್ಯಾಚ್ ನೀಡಿ ಔಟಾಗಿದ್ದಾರೆ.
Sports
IND vs SA ODI: 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ
ಆಂಧ್ರ ಪ್ರದೇಶ: ವಿಶಾಖಪಟ್ಟಣಂನಲ್ಲಿ ಇಂದು ನಡೆದ ಟೀಂ ಇಂಡಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 9 ವಿಕೆಟ್ಗಳಿಂದ ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡು ಭರ್ಜರಿ ಗೆಲುವು ಸಾಧಿಸಿದೆ.
ಕನ್ನಡಿಗ ಕೆ.ಎಲ್. ರಾಹುಲ್ ನೇತೃತ್ವದಲ್ಲಿ ಇಂದು ವಿಶಾಖಪಟ್ಟಣಂನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಪ್ರಿಕಾ ತಂಡ ಪೂರ್ಣ 50 ಓವರ್ಗಳನ್ನು ಆಡದೆ 47.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 270 ರನ್ ಕಲೆಹಾಕಿತ್ತು.

ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 1 ವಿಕೆಟ್ ಕಳೆದುಕೊಂಡು 39.5 ಓವರ್‌ಗಳಲ್ಲಿ ಜಯಗಳಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿನ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿದೆ.
Sports
IPL 2026; RCB ಖರೀದಿಗೆ ಪೈಪೋಟಿ; ರೇಸ್‌ನಲ್ಲಿ ಎಸ್‌ಐಐ, ಹೊಂಬಾಳೆ ಫಿಲ್ಮ್ಸ್ ಜೊತೆ ಇಂಗ್ಲೆಂಡ್‌ನ ಹಂಡ್ರೆಡ್ ಫ್ರಾಂಚೈಸಿ!
ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ಫ್ರಾಂಚೈಸಿಯನ್ನು 2 ಬಿಲಿಯನ್ ಡಾಲರ್ (ಸುಮಾರು 17,775 ಕೋಟಿ ರೂ.) ಗೆ ಮಾರಾಟ ಮಾಡಲು ಡಿಯಾಜಿಯೊ ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಐಪಿಎಲ್ 2026 ಕ್ಕೂ ಮುನ್ನ ಐಪಿಎಲ್ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಖರೀದಿಸಲು ಆಧಾರ್ ಪೂನಾವಾಲಾ ಮತ್ತು ಹೊಂಬಾಳೆ ಫಿಲ್ಮ್ಸ್ ಬಳಿಕ ಮತ್ತೊಂದು ಸಂಸ್ಥೆ ಆಸಕ್ತಿ ತೋರಿಸಿದೆ. ಸದ್ಯ ಡಯಾಜಿಯೊ (Diageo) ಒಡೆತನದ ಈ ಫ್ರಾಂಚೈಸಿ ಮಾರಾಟಕ್ಕೆ ಸಿದ್ಧವಾಗಿದ್ದು, ಈ ಪ್ರಕ್ರಿಯೆಯು 2026ರ ಮಾರ್ಚ್ 31 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈಗ, ದಿ ಹಂಡ್ರೆಡ್ ಫ್ರಾಂಚೈಸಿಯಾದ ವೆಲ್ಶ್ ಫೈರ್ ಆರ್‌ಸಿಬಿಯನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ತೋರಿಸಿದೆ ಎಂದು ಬೆಳಕಿಗೆ ಬಂದಿದೆ.
ದಿ ಟೆಲಿಗ್ರಾಫ್ ಯುಕೆ ಪ್ರಕಾರ, ಗ್ಲಾಮೋರ್ಗನ್ ಕ್ರಿಕೆಟ್ ಕ್ಲಬ್ ಮತ್ತು ಅಮೆರಿಕನ್ ಟೆಕ್ ಬಿಲಿಯನೇರ್ ಸಂಜಯ್ ಗೋವಿಲ್ ಒಡೆತನದ ಕ್ರಿಕೆಟ್ ತಂಡವಾದ ವೆಲ್ಷ್ ಫೈರ್, ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲಿ ಮುಂಬರುವ ತಂಡಗಳ ಮಾರಾಟದ ಮೇಲೆ ತೀವ್ರ ನಿಗಾ ಇಟ್ಟಿದ್ದು, ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಲು ಸಹ ಸಹ ಆಸಕ್ತಿ ಹೊಂದಿದೆ. ಐಪಿಎಲ್ ತಂಡವನ್ನು ಖರೀದಿಸಲು ತಮ್ಮ ಬಳಿ ಸಾಕಷ್ಟು ಹಣವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಹಿಂದೆ, ಆರ್‌ಸಿಬಿಯನ್ನು $2 ಬಿಲಿಯನ್‌ಗೆ ಮಾರಾಟ ಮಾಡಬಹುದು ಎಂದು ವರದಿಗಳು ತಿಳಿಸಿವೆ.
‘ಫೈರ್ ಮತ್ತು ಫ್ರೀಡಂ ನಿರ್ದಿಷ್ಟ ಪ್ರಕರಣಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದಾಗ್ಯೂ, ನಾವು ಜಾಗತಿಕ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿಸುವ, ನಿರ್ವಹಿಸುವ ಮತ್ತು ಅಭಿವೃದ್ಧಿಪಡಿಸುವ ವ್ಯವಹಾರದಲ್ಲಿದ್ದೇವೆ. ಜಾಗತಿಕ ಕ್ರಿಕೆಟ್ ಸ್ವತ್ತುಗಳಲ್ಲಿ ಏಕೀಕರಣದ ಕಡೆಗೆ ಪ್ರಸ್ತುತ ರಚನಾತ್ಮಕ ಪ್ರವೃತ್ತಿಗಳನ್ನು ನಾವು ಗಮನಿಸುತ್ತೇವೆ ಮತ್ತು ನಮ್ಮ ಷೇರುದಾರರಿಗೆ ಮೌಲ್ಯವನ್ನು ಸೃಷ್ಟಿಸುವಾಗ ಆ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಉದ್ದೇಶಿಸಿದ್ದೇವೆ’ ಎಂದು ಗ್ಲಾಮೋರ್ಗನ್ ಅಧ್ಯಕ್ಷ ಮಾರ್ಕ್ ರೈಡರ್ಚ್-ರಾಬರ್ಟ್ಸ್ ಪ್ರಕಟಣೆಗೆ ತಿಳಿಸಿದ್ದಾರೆ.
ಈ ಹಿಂದೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಧಾರ್ ಪೂನವಾಲಾ ಮತ್ತು ಬ್ರೋಕರೇಜ್ ಪ್ಲಾಟ್‌ಫಾರ್ಮ್ ಜೆರೋಧಾದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಗುಂಪಿನ (ಎಂಇಎಂಜಿ) ಅಧ್ಯಕ್ಷ ರಂಜನ್ ಪೈ ಅವರು ಆರ್‌ಸಿಬಿಯನ್ನು ಖರೀದಿಸಲು ಎದುರು ನೋಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ಫ್ರಾಂಚೈಸಿಯನ್ನು 2 ಬಿಲಿಯನ್ ಡಾಲರ್ (ಸುಮಾರು 17,775 ಕೋಟಿ ರೂ.) ಗೆ ಮಾರಾಟ ಮಾಡಲು ಡಿಯಾಜಿಯೊ ಯೋಜಿಸುತ್ತಿದೆ ಎಂದು ವರದಿಯಾಗಿದೆ.
Sports
IND v/s SA ODI : 4 ವಿಕೆಟ್‌ಗಳ ರೋಚಕ ಜಯಗಳಿಸಿದ ಸೌತ್ ಆಫ್ರಿಕಾ
ರಾಯ್‌ಪುರ: ಕಳಪೆ ಫೀಲ್ಡಿಂಗ್, ಬೌಲಿಂಗ್‌ಗೆ ಭಾರತ ಬೆಲೆತೆತ್ತಿದೆ. ಏಡನ್ ಮಾರ್ಕ್ರಂ ಅಮೋಘ ಶತಕದ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ರಲ್ಲಿ ಸಮಬಲ ಸಾಧಿಸಿದೆ.
ರಾಯ್‌ಪುರದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿತ್ತು. ಗೆಲುವಿಗೆ 359 ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ 49.2 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 362 ರನ್ ಸಿಡಿಸಿ ಗೆಲುವು ಸಾಧಿಸಿದೆ.
ಚೇಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಪಡೆದು ಆಘಾತ ನೀಡಿತ್ತು. ಆದ್ರೆ 2ನೇ ವಿಕೆಟ್‌ಗೆ ನಾಯಕ ಟೆಂಬಾ ಬವುಮಾ-ಮಾರ್ಕ್ರಂ 101 ರನ್‌ಗಳ (96 ಎಸೆತ) ಜೊತೆಯಾಟ, 3ನೇ ವಿಕೆಟಿಗೆ ಮಾರ್ಕ್ರಂ-ಬ್ರೀಟ್ಜ್ಕೆ 70 ರನ್‌ಗಳ ಜೊತೆಯಾಟ, 4ನೇ ವಿಕೆಟಿಗೆ ಬ್ರೀಟ್ಜ್ಕೆ-ಡೇವಾಲ್ಡ್ ಬ್ರೇವಿಸ್ 92 ರನ್‌ಗಳ ಬೃಹತ್ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಅಲ್ಲದೇ ರನೌಟ್, ಕ್ಯಾಚ್ ಕೈಚೆಲ್ಲಿದ ಜೊತೆಗೆ ಅನಗತ್ಯ ರನ್ ಬಿಟ್ಟುಕೊಟ್ಟ ಪರಿಣಾಮ ಗೆಲುವು ದಕ್ಷಿಣ ಆಫ್ರಿಕಾದ ಪಾಲಾಯಿತು.

ದಕ್ಷಿಣ ಆಫ್ರಿಕಾ ಪರ ಏಡನ್ ಮಾರ್ಕ್ರಂ 110 ರನ್ (98 ಎಸೆತ, 4 ಸಿಕ್ಸ್, 10 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 68 ರನ್ (64 ಎಸೆತ, 5 ಬೌಂಡರಿ), ಡೇವಾಲ್ಡ್ ಬ್ರೇವಿಸ್ 54 ರನ್ (34 ಎಸೆತ, 5 ಸಿಕ್ಸ್), ಟೋನಿ ಡಿ ಜೋರ್ಜಿ 17 ರನ್, ಕ್ವಿಂಟನ್ ಡಿಕಾಕ್ 8 ರನ್, ಮಾರ್ಕೋ ಜಾನ್ಸೆನ್ 2 ರನ್ ಗಳಿಸಿದ್ರೆ ಕಾರ್ಬಿನ್ ಬಾಷ್ 15 ಎಸೆತಗಳಲ್ಲಿ ಸ್ಫೋಟಕ 29 ರನ್, ಕೇಶವ್ ಮಹಾರಾಜ್ 10 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೇ ವೈಡ್, ನೋಬಾಲ್, ಲೆಗ್‌ಬೈಸ್‌ನಿಂದ 18 ರನ್ ಹೆಚ್ಚುವರಿಯಾಗಿ ತಂಡಕ್ಕೆ ಸೇರ್ಪಡೆಯಾಯಿತು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 358 ರನ್ ಸಿಡಿಸಿತ್ತು. ಹಿಟ್ ಮ್ಯಾನ್ ರೋಹಿತ್ ವಿಕೆಟ್ ಬೇಗನೇ ಸಿಕ್ಕಿತೆಂದು ನಿಟ್ಟುಸಿರು ಬಿಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಅನಿರೀಕ್ಷಿತ ಆಘಾತ ನೀಡಿದರು. ಋತುರಾಜ್ ಅವರು ತಮ್ಮ ಏಕದಿನ ಅಂತಾರಾಷ್ಟ್ರೀಯ ವೃತ್ತಿ ಜೀವನದ ಪ್ರಥಮ ಶತಕ ಗಳಿಸಿದ್ರೆ, ವಿರಾಟ್ ಕೊಹ್ಲಿ ಅವರು ಈ ಸರಣಿಯಲ್ಲಿ ಸತತ 2 ಶತಕ ಮತ್ತು ಏಕದಿನ ಕ್ರಿಕಟ್ ನ 53ನೇ ಶತಕ ಗಳಿಸಿದರು. ಕೊನೆಯಲ್ಲಿ ಕೆ.ಎಲ್ ರಾಹುಲ್ ಅವರ ಸ್ಫೋಟಕ ಅರ್ಧಶತಕದ ಪರಿಣಾಮ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 358 ರನ್ ಗಳನ್ನು ಕಲೆ ಹಾಕಿತು.
ಋತುರಾಜ್ -ವಿರಾಟ್ ಕೊಹ್ಲಿ ಶತಕಗಳ ಅಬ್ಬರ
ಇವರಿಬ್ಬರು 3ನೇ ವಿಕೆಟ್ ಗೆ ಅಮೂಲ್ಯ 195 ರನ್ ಗಳ ಜೊತೆಯಾಟವಾಡಿದರು. ಇದು ಭಾರತ ತಂಡದ ಇನ್ನಿಂಗ್ಸ್ ಗೆ ಭದ್ರ ಬುನಾದಿ ಹಾಕಿತು. ಕ್ರೀಸ್‌ಗೆ ಬಂದೊಡನೆ ಮೊದಲನೇ ಎಸೆತವನ್ನೇ ಬೌಂಡರಿಗಟ್ಟಿದ ಋತುರಾಜ್ ಅವರು ಕೇವಲ 77 ಎಸೆತಗಳಲ್ಲೇ ಶತಕ ಪೂರೈಸಿದರು. ಅದರಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದವು. ಅಂತಿಮವಾಗಿ ಅವರು 83 ಎಸೆತಗಳಿಂದ 105 ರನ್ ಗಳಿಸಿ ಔಟಾದರು. ಋತುರಾಜ್ ಗಾಯಕ್ವಾಡ್ ಔಟಾದ ಬಳಿಕ ವಿರಾಟ್ ಕೊಹ್ಲಿ ಅವರು ತಮ್ಮ ಬ್ಯಾಟಿಂಗ್ ಮುಂದುವರಿಸಿ 39ನೇ ಓವರ್ ನಲ್ಲಿ 90 ಎಸೆತಗಳಿಗೆ ಶತಕ ಪೂರೈಸಿದರು.
-
State11 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
State23 hours agoSSLC ಪಾಸ್ ಆದವರಿಗೆ ಸರ್ಕಾರಿ ನೌಕರಿ ಚಾನ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ…
-
Hassan7 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
National24 hours agoಪಲಾಶ್ ಮುಚ್ಚಲ್ರೊಂದಿಗೆ ಮದುವೆ ಮುಂದೂಡಿದ ನಂತರ ಮೊದಲ ಪೋಸ್ಟ್ ಹಂಚಿಕೆಕೊಂಡ ಸ್ಮೃತಿ ಮಂದಾನ
-
Chikmagalur13 hours agoಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
-
Hassan10 hours agoಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
-
Politics23 hours agoಡಿಕೆ ಬ್ರದರ್ಸ್ಗೆ ನೋಟಿಸ್ ಜಾರಿ ಮಾಡಿದ ದೆಹಲಿ ಪೊಲೀಸರು
-
Mysore11 hours agoಡ್ರೋನ್ ಕ್ಯಾಮರದ ರೆಕ್ಕೆ ತಗಲಿ ಶಾಸಕ ಅನಿಲ್ ಚಿಕ್ಕಮಾದು ಮುಖಕ್ಕೆ ಗಾಯ
