Agriculture
ರೈತರಿಗೆ ಸಿಹಿ ಸುದ್ದಿ : ಬೆಳೆ ನಷ್ಟ ಪರಿಹಾರ ದರ ಪರಿಷ್ಕರಣೆಗೆ ಸರ್ಕಾರದ ನಿರ್ಧಾರ
Crop Loss Compensation Increase : ಕರ್ನಾಟಕ ರಾಜ್ಯದಲ್ಲಿ ಒಟ್ಟು ಅಂದಾಜು 5.20 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದ್ದು, SDRF ಮಾರ್ಗ ಸೂಚಿಯ ಪ್ರಕಾರ ಸದ್ಯಕ್ಕೆ ನೀಡುತ್ತಿರುವ ಪರಿಹಾರವು ರೈತರಿಗೆ ಸಾಲುವುದಿಲ್ಲ ಎಂಬ ಅಭಿಪ್ರಾಯದ ಹಿನ್ನಲೆಯಲ್ಲಿ ಸರ್ಕಾರವು ಪರಿಹಾರ ಮೊತ್ತ ಪರಿಷ್ಕರಣೆಗೆ ನಿರ್ಧಾರ ತೆಗೆದುಕೊಂಡಿದೆ.
ಈ ನಿರ್ಧಾರವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವರ್ಷ ಉತ್ತಮ ಮುಂಗಾರು ಮಳೆ ಆದ ಕಾರಣ ರೈತರು ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿದ್ದರು. ಆದರೆ ಇದರ ಮಧ್ಯೆ ಮೂರರಿಂದ ನಾಲ್ಕು ವಾರ ಸರಿಯಾದ ಮಳೆ ಬರೆದ ಕಾರಣ ಹಲವಾರು ಕಡೆಯಲ್ಲಿ ಬೆಳೆ ಒಣಿಗಿದ್ದವು.

ಇದರಿಂದಾಗಿ ರೈತರು ಮರು ಬಿತ್ತನೆ ಮಾಡಿದರು. ಇದರ ಬೆನ್ನಲ್ಲೇ ಜುಲೈ ಮತ್ತು ಅಗಸ್ಟ್ ತಿಂಗಳಿನಲ್ಲಿ ಅತಿವೃಷ್ಟಿ ಮಳೆಯಾದ ಕಾರಣ ರಾಜ್ಯದ್ಯಂತ ಹಲವಾರು ಕಡೆ ವ್ಯಾಪಕ ಬೆಳೆ ಹಾನಿಯಾಗಿದೆ. ಇದರಿಂದಾಗಿ ರೈತರು ನಷ್ಟ ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದರಿಂದಾಗಿ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಪರಿಹಾರ ಮೊತ್ತ ಪರಿಷ್ಕರಣೆ ಅಂತಿಮ ಯಾವಾಗ?
ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ವತಿಯಿಂದ ನಷ್ಟದ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಗರಿಷ್ಠ 10 ದಿನದ ಒಳಗಾಗಿ ಸಮೀಕ್ಷೆ ಕಾರ್ಯ ಮುಗಿಸಿ ವರದಿ ಸಲ್ಲಿಸಲು ಸರ್ಕಾರ ಆದೇಶ ನೀಡಿದೆ. ಇದರ ನಂತರ ಪರಿಷ್ಕೃತ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ.
Agriculture
ಪಾರ್ಥೇನಿಯಂ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ವಿಧಾನ!
ಪಾರ್ಥೇನಿಯಂ (Congress Grass) ಎಂಬ ಕಳೆಗಿಡ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಇದು ಬೆಳೆಗಳ ಬೆಳವಣಿಗೆಗೆ ಅಡ್ಡಿಯಾಗುವುದಷ್ಟೇ ಅಲ್ಲದೆ ಮಣ್ಣಿನ ಗುಣಮಟ್ಟವನ್ನೂ ಹಾಳು ಮಾಡುತ್ತದೆ. ಆದರೆ ಇದೇ ಪಾರ್ಥೇನಿಯಂ ಗಿಡವನ್ನು ಸರಿಯಾದ ವಿಧಾನದಲ್ಲಿ ಬಳಸಿ ಉತ್ತಮ ಜೈವಿಕ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಬಹುದು.
ಪಾರ್ಥೇನಿಯಂ ಕಾಂಪೋಸ್ಟ್ ಎಂದರೇನು?
ಪಾರ್ಥೇನಿಯಂ ಗಿಡಗಳನ್ನು ಕುಲುಮೆಯಾಗಿ ಮಾಡಿಸಿ ಜೀವಾಣುಗಳ ಸಹಾಯದಿಂದ ತಯಾರಿಸುವ ಜೈವಿಕ ಗೊಬ್ಬರವನ್ನು ಪಾರ್ಥೇನಿಯಂ ಕಾಂಪೋಸ್ಟ್ ಎಂದು ಕರೆಯುತ್ತಾರೆ. ಈ ಗೊಬ್ಬರದಲ್ಲಿ ನೈಟ್ರೋಜನ್, ಫಾಸ್ಫರಸ್ ಮತ್ತು ಪೊಟ್ಯಾಶಿಯಂ ಸೇರಿದಂತೆ ಹಲವು ಪೋಷಕಾಂಶಗಳು ಇರುವುದರಿಂದ ಮಣ್ಣಿನ ಉರ್ವರತೆ ಹೆಚ್ಚುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆ ಉತ್ತಮವಾಗುತ್ತದೆ.
ಕಾಂಪೋಸ್ಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಪಾರ್ಥೇನಿಯಂ ಕಾಂಪೋಸ್ಟ್ ತಯಾರಿಸಲು ಪಾರ್ಥೇನಿಯಂ ಗಿಡಗಳು, ಗೋಮಯ, ಮಣ್ಣು, ಯೂರಿಯಾ ಅಥವಾ ರಾಕ್ ಫಾಸ್ಫೇಟ್ ಮತ್ತು ನೀರು ಅಗತ್ಯವಿರುತ್ತದೆ. ಇವುಗಳ ಸಹಾಯದಿಂದ ಸುಲಭವಾಗಿ ಗೊಬ್ಬರ ತಯಾರಿಸಬಹುದು.
ಕಾಂಪೋಸ್ಟ್ ತಯಾರಿಸುವ ವಿಧಾನ:
ಮೊದಲಿಗೆ ಸುಮಾರು 3 ಅಡಿ ಆಳ ಮತ್ತು 6–8 ಅಡಿ ಅಗಲದ ಗುಂಡಿಯನ್ನು ತೋಡಬೇಕು. ಗುಂಡಿಯ ತಳಭಾಗದಲ್ಲಿ ಪಾರ್ಥೇನಿಯಂ ಗಿಡಗಳನ್ನು ಒಂದು ಪದರವಾಗಿ ಹಾಕಬೇಕು. ನಂತರ ಅದರ ಮೇಲೆ ಸ್ವಲ್ಪ ಮಣ್ಣು ಮತ್ತು ಸಗಣಿಯನ್ನು ಹಾಕಬೇಕು. ಅದರ ಮೇಲೆ ಯೂರಿಯಾ ಅಥವಾ ರಾಕ್ ಫಾಸ್ಫೇಟ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಸಿಂಪಡಿಸಬೇಕು. ನಂತರ ನೀರನ್ನು ಹಾಕಿ ತೇವವಾಗುವಂತೆ ಮಾಡಬೇಕು. ಇದೇ ರೀತಿ ಪದರಗಳನ್ನು ಪುನರಾವರ್ತಿಸಿ ಗುಂಡಿ ತುಂಬುವವರೆಗೆ ಹಾಕಬೇಕು. ಕೊನೆಯಲ್ಲಿ ಮಣ್ಣಿನಿಂದ ಮುಚ್ಚಬೇಕು.
ಸುಮಾರು 3 ರಿಂದ 4 ತಿಂಗಳೊಳಗೆ ಪಾರ್ಥೇನಿಯಂ ಸಂಪೂರ್ಣವಾಗಿ ಕುಲುಮೆಯಾಗುತ್ತದೆ ಮತ್ತು ಉತ್ತಮ ಕಾಂಪೋಸ್ಟ್ ಗೊಬ್ಬರ ಸಿದ್ಧವಾಗುತ್ತದೆ.
ಪಾರ್ಥೇನಿಯಂ ಕಾಂಪೋಸ್ಟ್‌ನ ಪ್ರಯೋಜನಗಳು:
ಪಾರ್ಥೇನಿಯಂ ಕಾಂಪೋಸ್ಟ್ ಬಳಕೆ ಮಾಡುವುದರಿಂದ ಮಣ್ಣಿನ ಉರ್ವರತೆ ಹೆಚ್ಚುತ್ತದೆ. ಜೈವಿಕ ಪದಾರ್ಥಗಳ ಪ್ರಮಾಣ ಹೆಚ್ಚಾಗಿ ಬೆಳೆಗಳ ಬೆಳವಣಿಗೆ ಉತ್ತಮವಾಗುತ್ತದೆ. ಜೊತೆಗೆ ಕಳೆ ಸಮಸ್ಯೆಯನ್ನು ನಿಯಂತ್ರಿಸಲು ಸಹ ಇದು ಸಹಕಾರಿ.
ಒಟ್ಟಾರೆ, ರೈತರು ಪಾರ್ಥೇನಿಯಂ ಕಸವನ್ನು ವ್ಯರ್ಥವಾಗಿ ಬಿಡುವುದಕ್ಕಿಂತ ಕಾಂಪೋಸ್ಟ್ ಗೊಬ್ಬರವಾಗಿ ಬಳಸಿದರೆ ಕೃಷಿಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
Agriculture
ಮೆಕ್ಕೆಜೋಳಕ್ಕೆ ₹3,000 ಕನಿಷ್ಠ ಬೆಂಬಲ ಬೆಲೆ ಬೇಕು ಇಲ್ಲದಿದ್ದರೆ ಕಬ್ಬು ಬೆಳೆಗಾರರಂತೆ ಹೋರಾಟ : ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ
ಬೆಂಗಳೂರು : ಮೆಕ್ಕೆಜೋಳ ಬೆಳೆಗಾರರ ಹಿತಾಸಕ್ತಿಗಾಗಿ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಎಚ್ಚರಿಸಿದ್ದಾರೆ. ಸರ್ಕಾರವು ಮೆಕ್ಕೆಜೋಳಕ್ಕೆ ₹3,000 ಕನಿಷ್ಠ ಬೆಂಬಲ ಬೆಲೆ (MSP) ನಿಗದಿ ಮಾಡದಿದ್ದರೆ, ಕಬ್ಬು ಬೆಳೆಗಾರರಂತೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಿನ್ನೆಲೆ:
ಇತ್ತೀಚಿನ ವರ್ಷಗಳಲ್ಲಿ ಮೆಕ್ಕೆಜೋಳದ ಮಾರುಕಟ್ಟೆ ಬೆಲೆ ನಿರಂತರ ಕುಸಿತ ಕಂಡಿದ್ದು, ರೈತರು ನಷ್ಟದ ಬಲೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ₹3,000 MSP ನೀಡುವುದು ನ್ಯಾಯಸಮ್ಮತ ಎಂದು ರೈತ ಸಂಘಟನೆಗಳು ಆಗ್ರಹಿಸುತ್ತಿವೆ.

“ರೈತರ ದುಡಿಮೆ ಗೌರವಿಸಲ್ಪಡಬೇಕು. ಸರ್ಕಾರವು ಮೆಕ್ಕೆಜೋಳದ ಬೆಲೆ ಸ್ಥಿರಪಡಿಸದಿದ್ದರೆ, ಕಬ್ಬು ಬೆಳೆಗಾರರ ಶೈಲಿಯ ಹೋರಾಟ ಅನಿವಾರ್ಯವಾಗಲಿದೆ. ರೈತರ ಹಿತಕ್ಕಾಗಿ ನಾವು ಹೋರಾಟಕ್ಕೆ ಸಿದ್ಧರಾಗಿದ್ದೇವೆ,” ಎಂದು ರೇಣುಕಾಚಾರ್ಯ ಅವರು ಹೇಳಿಕೆ ನೀಡಿದ್ದಾರೆ.
ಮುಖ್ಯ ಬೇಡಿಕೆಗಳು:
ಮೆಕ್ಕೆಜೋಳಕ್ಕೆ ಕನಿಷ್ಠ ₹3,000 MSP ನಿಗದಿ
ರೈತರಿಗೆ ಸಮಯಕ್ಕೆ ಸರಿಯಾದ ಪಾವತಿ ಖಾತರಿ
ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರಗಳ ಸಂಖ್ಯೆಯ ಹೆಚ್ಚಳ
ರೈತರ ಶ್ರಮಕ್ಕೆ ನ್ಯಾಯ ದೊರಕಿಸಲು ಸರ್ಕಾರವು ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ರೈತ ನಾಯಕರ ಸ್ಪಷ್ಟ ಸಂದೇಶ. ಸರ್ಕಾರದ ನಿರ್ಧಾರವನ್ನು ಎದುರು ನೋಡುತ್ತಿರುವ ರೈತರ ನಂಬಿಕೆ ಈಗ ಸರ್ಕಾರದ ಮುಂದಿನ ಹೆಜ್ಜೆಯ ಮೇಲೆ ಅವಲಂಬಿತವಾಗಿದೆ.
Agriculture
ಸಕ್ಕರೆ ಕಾರ್ಖಾನೆಗಳ ಕಬ್ಬು ದರ ನಿಗದಿ: ರೈತರಿಗೆ ಸಿಹಿ ಸುದ್ದಿ : ಅಂತಿಮ ದರ ಪ್ರಕಟಣೆ
ಇತ್ತೀಚಿಗೆ ನಡೆದ ಪ್ರತಿಭಟನೆಯ ಫಲವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ನಡುವೆ ಚರ್ಚೆ ನಡೆದಿದ್ದು, ರಾಜ್ಯ ಸರ್ಕಾರವು ಕಬ್ಬಿಗೆ ಹೊಸ ದರ ನಿಗದಿ ಮಾಡುವುದರ ಮೂಲಕ ರಾಜ್ಯದ ರೈತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಎಷ್ಟು ಹೆಚ್ಚಳ?
ಹೊಸ ದರದ ಪ್ರಕಾರ, ಪ್ರತಿ ಟನ್ ಕಬ್ಬಿಗೆ ₹3,300 ನಿಗದಿ ಮಾಡಲಾಗಿದೆ. ಹಿಂದಿನ ದರವಾದ ₹3,200 ಗೆ ಹೋಲಿಸಿದರೆ ₹100ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಕಾರ್ಖಾನೆಗಳು ₹50 ಹೆಚ್ಚುವರಿ ಪಾವತಿಸಲಿದ್ದು, ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ ಮತ್ತೊಂದು ₹50 ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಇಳುವರಿ ಪ್ರಮಾಣವನ್ನು ಆಧರಿಸಿ ದರ ನಿಗದಿ ಮಾಡಲಾಗಿದ್ದು, ಶೇ.10.5 ಇಳುವರಿ ಪ್ರಮಾಣ ಇರುವ ಕಬ್ಬಿಗೆ ₹3,200 ಮತ್ತು ಶೇ.11.25 ಇಳುವರಿ ಪ್ರಮಾಣದ ಕಬ್ಬಿಗೆ ₹3,300 ದೊರೆಯಲಿದೆ. ಸಾಗಣೆ ಮತ್ತು ಕಟಾವು ವೆಚ್ಚಗಳನ್ನು ಹೊರತುಪಡಿಸಿ ಈ ದರ ನೀಡಲಾಗುತ್ತದೆ.
ಈ ನಿರ್ಧಾರದಿಂದ ರಾಜ್ಯದ ಕಬ್ಬು ರೈತರಿಗೆ ಆರ್ಥಿಕ ನೆರವಾಗಲಿದ್ದು, ಸಕ್ಕರೆ ಕಾರ್ಖಾನೆಗಳು ಸಹ ರೈತರೊಂದಿಗೆ ಸಹಕಾರದ ಮನೋಭಾವದಿಂದ ಕೆಲಸ ಮಾಡಲಿವೆ ಎಂದು ಸರ್ಕಾರ ಆಶಾಭಾವನೆ ವ್ಯಕ್ತಪಡಿಸಿದೆ
-
State23 hours agoಚೆನ್ನಮ್ಮ ಅಂತ್ಯಕ್ರಿಯೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಪ್ರಜ್ವಲ್ ರೇವಣ್ಣಗೆ ಅನುಮತಿ
-
Kodagu18 hours agoಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕುಶಾಲನಗರದ ಐಎಎಸ್ ಅಧಿಕಾರಿ ಎಸ್.ಎಸ್. ನಕುಲ್ ನೇಮಕ
-
Hassan17 hours agoಪಂಚಭೂತಗಳಲ್ಲಿ ಲೀನರಾದ ಚೆನ್ನಮ್ಮ ದೇವೇಗೌಡ
-
Politics12 hours agoಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: 3.68 ಲಕ್ಷಕ್ಕೂ ಅಧಿಕ ಅರ್ಜಿಗಳು – ಜಿಲ್ಲಾವಾರು ಅಂಕಿಅಂಶ ಪ್ರಕಟ!!
-
Politics15 hours agoಬಿಡದಿ ಟೌನ್ಶಿಪ್ ಭೂಸ್ವಾಧೀನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್; PIL ವಜಾ
-
National22 hours agoಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ
-
Kodagu18 hours agoಇಂದಿನಿಂದ ಪುಷ್ಯ ಮಳೆ : ಉತ್ತಮ ಮಳೆ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು
-
Hassan23 hours agoಚೆನ್ನಮ್ಮ ಅಂತಿಮ ದರ್ಶನಕ್ಕೆ ಪ್ರಜ್ವಲ್ ಬರಲ್ಲ:
