Connect with us

Chamarajanagar

ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ: 40 ಪ್ರಕರಣ ದಾಖಲು; 49 ಮಂದಿ ಬಂ*ಧನ

Published

on

ಚಾಮರಾಜನಗರ: ಸರ್ಕಾರದಿಂದ ಬಡವರಿಗೆ ಉಚಿತವಾಗಿ ವಿತರಣೆಯಾಗಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ ಜಾಲದ ವಿರುದ್ಧ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಜಿಲ್ಲಾದ್ಯಂತ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 40 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ 12,52,696 ರೂ. ಮೌಲ್ಯದ 52,014 ಕೆ.ಜಿ ಪಡಿತರ ಅಕ್ಕಿ ಹಾಗೂ ಸಾಗಣಿಕೆಗೆ ಬಳಸುತ್ತಿದ್ದ 35 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ 49 ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು.ಎಂ., ಐಪಿಎಸ್ ಅವರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಅಪರ ಪೊಲೀಸ್ ಅಧೀಕ್ಷಕ ಶಶಿಧರ್ ಎಂ.ಎನ್. ಹಾಗೂ ಕೊಳ್ಳೇಗಾಲ ಮತ್ತು ಚಾಮರಾಜನಗರ ಉಪವಿಭಾಗಗಳ ಡಿವೈಎಸ್‌ಪಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸಾರ್ವಜನಿಕರಿಗೆ ಮನವಿ: ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಣೆ ಅಥವಾ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಲ್ಲಿ ತಕ್ಷಣ ತುರ್ತು ಸಹಾಯವಾಣಿ 112 ಅಥವಾ ಜಿಲ್ಲಾ ಪೊಲೀಸ್ ನಿಯಂತ್ರಣ ಕೇಂದ್ರದ ದೂರವಾಣಿ ಸಂಖ್ಯೆ 08226-222383, 9480804600 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Continue Reading

Chamarajanagar

ಹುಲಿ ದಾಳಿಗೆ ಹಸು ಬ*ಲಿ: ಸಂಕಷ್ಟದಲ್ಲಿ ರೈತ

Published

on

ಗುಂಡ್ಲುಪೇಟೆ : ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಅರ್ಧಭಾಗ ತಿಂದಿರುವ ಘಟನೆ ತಾಲೂಕಿನ ಕೊಡಸೋಗೆ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಗ್ರಾಮದ ವೆಂಕಟಶೆಟ್ಟಿ ಅವರಿಗೆ ಸೇರಿದ ಹಸುವನ್ನು ಜಮೀನಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿತ್ತು. ರಾತ್ರಿ ವೇಳೆ ಕೊಟ್ಟಿಗೆಗೆ ನುಗ್ಗಿದ ಹುಲಿ ಹಸುವನ್ನು ಎಳೆದೊಯ್ದು ಕೊಂದು, ಅರ್ಧಭಾಗವನ್ನು ತಿಂದು ಹಾಕಿದೆ ಎನ್ನಲಾಗಿದೆ. ಮಾಹಿತಿ ತಿಳಿದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹುಲಿ ಸೆರೆಗೆ ಆಗ್ರಹ:
ಹುಲಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಜಾನುವಾರುಗಳನ್ನು ಮೇಯಿಸಲು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಬೋನ್ ಅಳವಡಿಸಿ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Continue Reading

Chamarajanagar

ಗುಂಡ್ಲುಪೇಟೆಯಲ್ಲಿ ಅಂದರ್-ಬಾಹರ್ ಜೂಜಾಟ: ನಾಲ್ವರು ವಶ, ₹8,350 ನಗದು ಜಪ್ತಿ

Published

on

ಗುಂಡ್ಲುಪೇಟೆ : ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ನಾಲ್ವರನ್ನು ಗುಂಡ್ಲುಪೇಟೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ನ.16ರಂದು ಗುಂಡ್ಲುಪೇಟೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಸ್ವಾಮಿ ಹೆಚ್.ವಿ. ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಠಾಣಾ ವ್ಯಾಪ್ತಿಯ ಹೊಸೂರು ಬಳಿಯ ಜಿ.ಟಿ.ಟಿ.ಸಿ ಕಾಲೇಜಿನ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದವರ ಮೇಲೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

ಈ ವೇಳೆ ಇಸ್ಮಾಯಿಲ್, ಅಜೀಜ್, ಜಕಾವುಲ್ಲಾ ಹಾಗೂ ಇನಾಯಿತ್ ಪಾಷಾ ಎಂಬುವವರನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು ₹8,350 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಮೊ.ಸಂ. 360/2026ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ದಾಳಿ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕ ಮುತ್ತುರಾಜು.ಎಂ., ಐಪಿಎಸ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿಯೂ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚಿ ನಿಗ್ರಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Continue Reading

Chamarajanagar

ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ : ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿಗೆ ಸಮಗ್ರ ಪ್ರಶಸ್ತಿ

Published

on

 ಚಾಮರಾಜನಗರ: ವಿ.ಎನ್.ಯೋಧ ಮಾರ್ಷಲ್ ಆಕಾಡೆಮಿ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 6ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ನಗರದ ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ಕರಾಟೆ ಪಟುಗಳು ಭಾಗವಹಿಸಿ  ಕಟಾ, ಕುಮಿತೆ ವಿಭಾಗದಲ್ಲಿ ಸ್ಪರ್ಧಿಸಿ ಉತ್ತಮ ಪ್ರದರ್ಶನ ನೀಡಿ ವಿಜೇತರಾಗಿ ಬಹುಮಾನಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.  ಕಟಾದಲ್ಲಿ  ಬಾಲಕಿಯರ ವಿಭಾಗದಲ್ಲಿ ಅಮರಾ,ಕಾಮಿಲಾ, ಸೋನು ಪ್ರಥಮ,  ಜೋಯಾ ದ್ವಿತೀಯ, ಫಾತಿಮಾ, ಇಖ್ರಾ, ಬಾಲಕರ ವಿಭಾಗದಲ್ಲಿ  ಮಹಮ್ಮದ್ ಅತೀಫ್, ಅವೇಜ್ ಕಮಲ್, ಸೈಯದ್ ರಿಹಾನ್, ಸೈಯದ್ ಜುಹೇರ್, ಮಹಮ್ಮದ್ ಹುಜೈಫಾ ಪ್ರಥಮ, ಎಂ.ಆರ್.ಭರತ್ ಕುಮಾನ್, ಚಿರಂತ್, ‌ಮಹಮ್ಮದ್ ನಿಹಾಲ್,  ಸೈಯದ್ ಆಯಾನ್ ದ್ವಿತೀಯ , ಮಹಮ್ಮದ್, ಮಹಮ್ಮದ್ ಜಿಷಾನ್, ಮಹಮ್ಮದ್ ಅಲಿ, ಕುಮಿತೆ ವಿಭಾಗದಲ್ಲಿ ಫಾತಿಮಾ ಪ್ರಥಮ ಮೊಹಮ್ಮದ್ ದ್ವಿತೀಯ, ಅತಿಫ್ , ಜುಹೇರ್ ಅಮರಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಅಭಿನಂದನೆ: ವಿಜೇತ ಕರಾಟೆ ಪಟುಗಳನ್ನು ಮುಖ್ಯ ಕರಾಟೆ ತರಬೇತುದಾರರು ಹಾಗೂ ವಕೀಲರಾದ ಸೆನ್ಸಾಯ್ ರಾಜೇಂದ್ರ, ತರಬೇತುದಾರರಾದ ಸೆನ್ಸಾಯ್ ಗಳಾದ ಯೋಗೀಶ್, ಅಬ್ದುಲ್ ಫೈಸಲ್,  ವಿಜಯ್ ಅಭಿನಂದಿಸಿದ್ದಾರೆ.

ಸನ್ಮಾನ:  ವಿಜೇತ ಕರಾಟೆ ಪಟುಗಳನ್ನು ಮುಖ್ಯ
ಕರಾಟೆ ತರಬೇತುದಾರರು ಹಾಗೂ ವಕೀಲರಾದ ಸೆನ್ಸಾಯ್ ರಾಜೇಂದ್ರ, ತರಬೇತುದಾರರಾದ ಸೆನ್ಸಾಯ್ ಗಳಾದ ಯೋಗೀಶ್, ಅಬ್ದುಲ್ ಫೈಸಲ್,  ವಿಜಯ್ ಅವರನ್ನು ಕರಾಟೆಪಟುಗಳ ಪೋಷಕರು ಸನ್ಮಾನಿಸಿದರು.

Continue Reading

Trending

error: Content is protected !!