Connect with us

Kodagu

ಕೊಯವ ಸಮಾಜದ 21ನೇ ಮಹಾಸಭೆ ಮತ್ತು ಕ್ರೀಡಾಕೂಟದ ಸಂಭ್ರಮ

Published

on

ಮಡಿಕೇರಿ : ಕೊಯವ ಸಮಾಜದ ೨೧ನೇ ಮಹಾಸಭೆ ಮತ್ತು ಕ್ರೀಡಾಕೂಟ ಸಮಾರಂಭ ಮೂರ್ನಾಡಿನಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಯವ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ ಸಮಾಜ ಬಾಂಧವರು ವರ್ಷಕ್ಕೊಮ್ಮೆಯಾದರೂ ಒಂದೆಡೆ ಸೇರುವುದರಿಂದ ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ದೊರೆಯುವುದರ ಜೊತೆಗೆ ಬಾಂಧವ್ಯ ಮತ್ತ? ಗಟ್ಟಿಯಾಗುತ್ತದೆ ಎಂದರು.

ಈಗಾಗಲೇ ಮೂರ್ನಾಡಿನಲ್ಲಿ ಸಮಾಜದ ವತಿಯಿಂದ ಜಾಗ ಖರೀದಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕರು ೫ ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ. ಭೂಮಿಪೂಜೆಯೂ ನೆರವೇರಿಸಲಾಗಿದ್ದು, ಕಟ್ಟಡ ಕಾಮಗಾರಿ ಆರಂಭಿಸುವ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಇನ್ನಷ್ಟು ಅನುದಾನ ಪಡೆಯುವ ನಿರೀಕ್ಷೆಯಿದ್ದು, ಸಂಸದರು ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಮೂಲಕ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಸಮಾಜದ ಉಪಾಧ್ಯಕ್ಷ ಮೇಚಿರ ಡಾ.ಸುಭಾಷ್‌ ನಾಣಯ್ಯ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ ’ಎ’ಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಶಿಕ್ಷಣ, ಉದ್ಯೋಗ ಹಾಗೂ ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಬೇಕು. ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಜಗತ್ತಿನ ಯಾವುದೇ ಮೂಲೆಗೆ ತೆರಳಿದರೂ ಕೊಡವ ಭಾ? ಮತ್ತು ಸಂಸ್ಕೃತಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಸಮಾಜದ ಗೌರವ ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ಅವರು ಸಮಾಜದ ಕಟ್ಟಡ ನಿರ್ಮಾಣದ ಪ್ರಗತಿಯ ಕುರಿತು ಸಭೆಗೆ ಮಾಹಿತಿ ನೀಡಿ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಜನಾಂಗ ಬಾಂಧವರು ಉದಾರವಾಗಿ ಧನಸಹಾಯ ನೀಡುವಂತೆ ಮನವಿ ಮಾಡಿದರು.

ಲೇಖಕಿ, ನಟಿ ಹಾಗೂ ಸಿನಿಮಾ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ, ಜಗತ್ತಿನ ಬೇರೆಡೆ ಕಾಣಸಿಗದ ವಿಶಿಷ್ಟ ಸಂಸ್ಕೃತಿ ನಮ್ಮದಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜದ ಯುವಜನತೆ ಮುಂದೆ ಬರಬೇಕು. ಉಮ್ಮತ್ತಾಟ್ ಮತ್ತು ಬೊಳಕಾಟ್ ನೃತ್ಯಗಳನ್ನು ಕಲಿಸಲು ನಾವು ಸಿದ್ಧರಿದ್ದು, ಆಸಕ್ತ ಯುವಕ-ಯುವತಿಯರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಇದೇ ಸಂದರ್ಭ ನಿವೃತ್ತ ಯೋಧ ಮುಕ್ಕಾಟಿರ ನಾಣಯ್ಯ ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನೌಕರರಾದ ನೇಂದುಮಂಡ ಸುಜ್ಯೋತಿ ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಕಳೆದ ಮಹಾಸಭೆಯ ವರದಿಗೆ ಅಂಗೀಕಾರ ಪಡೆಯಲಾಯಿತು. ಗೌರವ ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಆಡಳಿತ ಮಂಡಳಿಯ ವರದಿಯನ್ನು ಪುದಿಯೊಕ್ಕಡ ರೆಮಿತ ಸುಜಯ್ ವಾಚಿಸಿದರು.

೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ತೋರೆರ ಮೋನಿಶ್ ಮುತ್ತಣ್ಣ, ಕಳ್ಳಿರ ಚೋಂದಮ್ಮ, ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಲ್ಲಂಡ ಇಳಾ ತಂಗಮ್ಮ ಹಾಗೂ ಪದವಿ ವಿಭಾಗದಲ್ಲಿ ಸಾಧನೆ ಮಾಡಿದ ಈರಮಂಡ ಕೇಸರಿ ಭೋಜಮ್ಮ ಅವರಿಗೆ ಸಮಾಜದ ದತ್ತಿನಿಧಿಯಿಂದ ಪ್ರೋತ್ಸಾಹಧನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಕ್ರೀಡಾಕೂಟ ಮಧ್ಯಾಹ್ನ ಮೂರ್ನಾಡಿನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟವನ್ನು ಸಿಆರ್‌ಪಿಎಫ್ ಅಧಿಕಾರಿ ಅಮ್ಮಚಾಳಿಯಂಡ ಮುತ್ತಣ್ಣ ಉದ್ಘಾಟಿಸಿದರು. ಮಕ್ಕಳು, ಮಹಿಳೆಯರು ಹಾಗೂ ಪುರು?ರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕೊಡವ ಪಾಟ್ ಮತ್ತು ವಾಲಗತ್ತಾಟ್ ಸ್ಪರ್ಧೆಗಳು ಗಮನ ಸೆಳೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಂಜಂಗಡ ಸುಬ್ಬಯ್ಯ ನಿರೂಪಿಸಿ, ಮೇಚಿರ ರವಿಶಂಕರ್ ಪ್ರಾರ್ಥಿಸಿ, ಕಳ್ಳಿರ ನಾಣಯ್ಯ ವಂದಿಸಿದರು. ಮಲ್ಲಂಡ ಮಹೇಶ್, ಈರಮಂಡ ವಿಜಯ್, ಮೇಚಿರ ಹರೀಶ್, ನೆಂಡುಮಂಡ ಗೀತಾ ನಾಣಯ್ಯ, ಈರಮಂಡ ದಮಯಂತಿ ಮತ್ತಿತರರು ಉಪಸ್ಥಿತರಿದ್ದರು.

Continue Reading

Kodagu

ಕೊಡವಲ್ಯಾಂಡ್ ಸ್ವಾಯತ್ತತೆ ಕೊಡವರ ನ್ಯಾಯಸಮ್ಮತ ಹಕ್ಕು: ಎನ್.ಯು. ನಾಚಪ್ಪ

Published

on

ಮಡಿಕೇರಿ : ಕೊಡವ ಜನಾಂಗದ ವಿಶಿಷ್ಟ ಅಸ್ಮಿತೆ, ಸಾಂಪ್ರದಾಯಿಕ ಮಾತೃಭೂಮಿ, ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಭೂಮಿ ಮತ್ತು ಪರಿಸರದ ಸಂರಕ್ಷಣೆಗಾಗಿ ಸಂವಿಧಾನದ 5ನೇ ಮತ್ತು 6ನೇ ಅನುಸೂಚಿ ಹಾಗೂ 371ನೇ ವಿಧಿಯ ಆಶಯದಡಿ ಕೊಡವಲ್ಯಾಂಡ್ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಅಧ್ಯಕ್ಷ ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ.

ತಾಳೇರಿನಾಡಿನ ಟಿ. ಶೆಟ್ಟಿಗೇರಿಯಲ್ಲಿ ನಡೆದ ಸಿಎನ್ಸಿಯ 10ನೇ ಸಾರ್ವಜನಿಕ ಸಂಪರ್ಕ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡವ ಜನಾಂಗವು ಪ್ರಾಚೀನ ಕಾಲದಿಂದಲೂ ತನ್ನದೇ ಆದ ಮಾತೃಭೂಮಿ, ವಿಶಿಷ್ಟ ವಂಶಾವಳಿ, ಸಂಸ್ಕೃತಿ ಮತ್ತು ಪ್ರಕೃತಿ ಆರಾಧನೆಯ ನಂಬಿಕೆಗಳನ್ನು ಹೊಂದಿದೆ. ಕೊಡವರು ಜಾತಿ ಅಥವಾ ಧರ್ಮವಲ್ಲ. ಅವರಲ್ಲಿ ಜಾತಿ, ಉಪಜಾತಿ ಅಥವಾ ಒಳಪಂಗಡಗಳಿಲ್ಲ. ಆದ್ದರಿಂದ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ಗುರುತಿಸಿ ವಿಶೇಷ ಸಂವಿಧಾನಾತ್ಮಕ ರಕ್ಷಣೆ ನೀಡಬೇಕು ಎಂದರು.

ಕೊಡವಲ್ಯಾಂಡ್ ಸ್ವಾಯತ್ತತೆಯ ಬೇಡಿಕೆಗೆ ಸಂವಿಧಾನದ 14, 19, 21, 29, 30, 244 ಮತ್ತು 371ನೇ ವಿಧಿಗಳು ಹಾಗೂ 5ನೇ ಮತ್ತು 6ನೇ ಅನುಸೂಚಿಗಳ ಆಶಯ ಮತ್ತು ವಿಶ್ವಸಂಸ್ಥೆಯ ಆದಿಮಸಂಜಾತ ಜನರ ಹಕ್ಕುಗಳ ಘೋಷಣೆ ಆಧಾರವಾಗಿವೆ. ಈ ಹಕ್ಕುಗಳಿಗಾಗಿ ಸಿಎನ್ಸಿ ಶಾಂತಿಯುತ ಹಾಗೂ ಸಾಂವಿಧಾನಿಕ ಹೋರಾಟ ನಡೆಸುತ್ತಿದೆ. ಈ ಧ್ವನಿಯನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.

1956ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಕಾಯ್ದೆಯಡಿ ಕೂರ್ಗ್ನ ಪಾರ್ಟ್-ಸಿ ರಾಜ್ಯವನ್ನು ಕರ್ನಾಟಕದಲ್ಲಿ ವಿಲೀನಗೊಳಿಸಿದ್ದು ಕೊಡವರ ಐತಿಹಾಸಿಕ ಮಾತೃಭೂಮಿಯ ನಷ್ಟಕ್ಕೆ ಕಾರಣವಾಯಿತು. 1941ರ ನಂತರದ ಜನಗಣತಿಯಲ್ಲಿ ಕೊಡವರ ಪ್ರತ್ಯೇಕ ಜನಾಂಗೀಯ ಗುರುತಿಗೂ ಧಕ್ಕೆಯಾಗಿದೆ. ಜನಗಣತಿ ಅಸ್ಮಿತೆ, ಪಾರ್ಟ್-ಸಿ ರಾಜ್ಯದ ಮಾತೃಭೂಮಿ ಮತ್ತು ಪಿತ್ರಾರ್ಜಿತ ಆಸ್ತಿಗಳ ನಷ್ಟ ಸೇರಿದಂತೆ ಕೊಡವರು ತ್ರಿವಿಧ ಅಸ್ಮಿತೆಯ ನಷ್ಟ ಅನುಭವಿಸಿದ್ದಾರೆ ಎಂದು ಅವರು ವಿಷಾದಿಸಿದರು.

2027ರ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಜನಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ, ವಿಶಿಷ್ಟ ಜನಾಂಗೀಯ ಸಮುದಾಯವಾಗಿ ದಾಖಲಿಸಬೇಕು. 1871-72ರಿಂದ 1941ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ಪ್ರತ್ಯೇಕವಾಗಿ ಗುರುತಿಸಲಾಗಿತ್ತು. ಅದೇ ರೀತಿಯ ಮಾನ್ಯತೆ ಮತ್ತೆ ದೊರೆಯಬೇಕು ಎಂದು ಆಗ್ರಹಿಸಿದರು.

ಕೊಡವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಬಂದೂಕು ಅಥವಾ ತುಪಾಕಿ ಆಚರಣೆಗೆ ಸಂವಿಧಾನದ 25 ಮತ್ತು 26ನೇ ವಿಧಿಗಳಡಿ ರಕ್ಷಣೆ ನೀಡಬೇಕು. ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸಬೇಕು. ಕೊಡವರ ಆಧ್ಯಾತ್ಮಿಕ ನೆಲೆಗಳಾದ ಮಂದ್, ದೇವಬನ ಹಾಗೂ ಇತರ ಪಾರಂಪರಿಕ ಸ್ಥಳಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕು. ದೇವಟ್ಪರಂಬು ಕೊಡವ ನರಮೇಧದ ಸ್ಥಳದಲ್ಲಿ ಹಾಗೂ ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆ ಅರಮನೆಗೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳಲ್ಲಿ ಅಂತರರಾಷ್ಟ್ರೀಯ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಕೊಡವ ಪ್ರದೇಶದಲ್ಲಿ ಜನಸಂಖ್ಯಾ ಬದಲಾವಣೆ ತಡೆಯಲು ನಾಗಾಲ್ಯಾಂಡ್, ಮಿಜೋರಾಂ ಮಾದರಿಯಲ್ಲಿ ಇನ್ನರ್ ಲೈನ್ ಪರ್ಮಿಟ್ (ILP) ಜಾರಿಗೊಳಿಸಬೇಕು. ಕೊಡವ ಪ್ರದೇಶದ ಜನರಿಗೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ಕಲ್ಪಿಸುವ ಬಗ್ಗೆಯೂ ಗಮನಹರಿಸಬೇಕು. ಕಾವೇರಿ ನದಿಯ ನೀರಿನಲ್ಲಿ ಕೊಡವ ಮಣ್ಣಿನ ಪಾಲಿಗೆ ನ್ಯಾಯ ದೊರೆಯಬೇಕು ಮತ್ತು ತಲಕಾವೇರಿಯನ್ನು ಕೊಡವರ ಪವಿತ್ರ ತೀರ್ಥಕ್ಷೇತ್ರವೆಂದು ಗುರುತಿಸಬೇಕು ಎಂದು ಹೇಳಿದರು.

ಕೊಡಗಿನ ಪರಿಸರದ ಮೇಲಿನ ಆತಂಕ ವ್ಯಕ್ತಪಡಿಸಿದ ಅವರು, ವಾಣಿಜ್ಯ ಉದ್ದೇಶಗಳಿಗಾಗಿ ಕೃಷಿ ಭೂಮಿಗಳ ಪರಿವರ್ತನೆ, ಬೃಹತ್ ರೆಸಾರ್ಟ್ಗಳು, ಟೌನ್ಶಿಪ್ಗಳು ಮತ್ತು ಲೇಔಟ್ಗಳ ನಿರ್ಮಾಣದಿಂದ ಕಾಫಿ ತೋಟಗಳು, ನೈಸರ್ಗಿಕ ಜಲಮೂಲಗಳು ಹಾಗೂ ಕಾವೇರಿ ನದಿಯ ನೀರಿನ ಮೂಲಗಳಿಗೆ ಅಪಾಯ ಎದುರಾಗಿದೆ. ಬೆಟ್ಟಗುಡ್ಡಗಳನ್ನು ಕೊರೆಯುವುದು, ಹೊಳೆ-ತೊರೆಗಳನ್ನು ಮುಚ್ಚುವುದು ಮತ್ತು ಅರಣ್ಯ ಪ್ರದೇಶಗಳ ಮೇಲೆ ಒತ್ತಡ ಹೇರುವುದು ಕೊಡಗಿನ ಪರಿಸರ ಸಮತೋಲನಕ್ಕೆ ಮಾರಕವಾಗಲಿದೆ. ಕೊಡಗಿನ ಭೂಮಿ ಮತ್ತು ನೀರನ್ನು ಸಂರಕ್ಷಿಸಿದಾಗ ಮಾತ್ರ ಕಾವೇರಿ ನದಿ ನಿರಂತರವಾಗಿ ಹರಿಯಲು ಸಾಧ್ಯ. ಆದ್ದರಿಂದ ವಾಣಿಜ್ಯ ಉದ್ದೇಶದ ಭೂಪರಿವರ್ತನೆಗೆ ನಿಯಂತ್ರಣ ವಿಧಿಸಬೇಕು ಎಂದು ಒತ್ತಾಯಿಸಿದರು.

ಕೊಡವರ ಪಾರಂಪರಿಕ ಭೂಮಿಯನ್ನು ಮರಳಿ ಪಡೆಯುವ ಹಕ್ಕುಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಕೊಡವರನ್ನು ವಿಶಿಷ್ಟ ದೇಶೀಯ ಪ್ರಕೃತಿ ಆರಾಧಕ ಜನಾಂಗೀಯ ಸಮುದಾಯವಾಗಿ ಗುರುತಿಸಿ, ಕೊಡವಲ್ಯಾಂಡ್ಗೆ ಸ್ವಾಯತ್ತತೆ ನೀಡಿದಾಗ ಮಾತ್ರ ಭೂಮಿ, ನೀರು, ಸಂಸ್ಕೃತಿ, ಪರಂಪರೆ ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕೊಡವ ಪೂರ್ವಜರು, ಭೂಮಿತಾಯಿ, ವನದೇವಿ, ಕಾವೇರಿ ಜಲದೇವತೆ ಹಾಗೂ ಭಾರತದ ಸಂವಿಧಾನದ ಹೆಸರಿನಲ್ಲಿ ಸಿಎನ್ಸಿಯ ಹೋರಾಟಕ್ಕೆ ಬದ್ಧರಾಗಿರುವುದಾಗಿ ಭಾಗವಹಿಸಿದವರು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Continue Reading

Kodagu

ಖಾಯಂ ಹುದ್ದೆಗಾಗಿ ಅರ್ಜಿ ಆಹ್ವಾನ

Published

on

ಮಡಿಕೇರಿ : ಭಾರತ ಸರ್ಕಾರದ ಉದ್ಯಮವಾದ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ನಲ್ಲಿ ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಮತ್ತು ಫೌಂಡ್ರಿಮ್ಯಾನ್ ಟ್ರೇಡ್ಗಳಲ್ಲಿ 2 ವರ್ಷ ಐ.ಟಿ.ಐ ತರಬೇತಿ ಪಡೆದ ನಂತರ ಒಂದು ವರ್ಷ ಅಪ್ರೆಂಟಿಶಿಪ್ ತರಬೇತಿ ಪೂರ್ಣಗೊಳಿಸಿ ಸರ್ಟಿಫಿಕೇಟ್ ಪಡೆದಿರುವ ಹಾಗೂ ಒಂದು ವರ್ಷ ಅಪ್ರೆಂಟಿಶಿಪ್ ತರಬೇತಿ ಮಾಡುತ್ತಿರುವ ಐ.ಟಿ.ಐ ವಿದ್ಯಾರ್ಹತೆ ಹೊಂದಿದ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳಿಗೆ ಗ್ರೇಡ್-ಐವಿ ನಲ್ಲಿ ಖಾಯಂ ಹುದ್ದೆಗಾಗಿ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-11-2026. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿಎಚ್ಇಎಲ್ ಸಂಸ್ಥೆಯ ಅಧಿಕೃತ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಉದ್ಯೋಗಾಂಕ್ಷಿಗಳು ಈ ನೇಮಕಾತಿ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ, ಜಿಲ್ಲಾ ಉದ್ಯೋಗಾಧಿಕಾರಿ, ಸಿ.ಬಿ.ಮಂಜುನಾಥ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ. ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 8296020826, 9449692691 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಉದ್ಯೋಗಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.

Continue Reading

Kodagu

ಹಾರಂಗಿ ಹಿನ್ನೀರು ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

Published

on

ಮಡಿಕೇರಿ : ಕುಶಾಲನಗರ ತಾಲ್ಲೂಕಿನ ಹಾರಂಗಿ ಹಿನ್ನೀರು ಪ್ರದೇಶಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೋಮವಾರ ಭೇಟಿ ನೀಡಿ ವೀಕ್ಷಿಸಿದರು.
ಹಾರಂಗಿ ಹಿನ್ನೀರು ಪ್ರದೇಶದ ಜಲಸಹಾಸ ಕ್ರೀಡೆ ಸಂದರ್ಭದಲ್ಲಿ ಬೋಟ್ ಮುಳುಗಿ ದಂಪತಿಗಳು ಮೃತಪಟ್ಟ ಹಿನ್ನೆಲೆ ಆ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಜಲಸಾಹಸ ಕ್ರೀಡೆ ಸಂದರ್ಭದಲ್ಲಿ ದುರ್ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕಿತ್ತು. ಸದ್ಯ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಜಲಸಹಾಸ ಕ್ರೀಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ೨೦೨೩ ರಿಂದ ಖಾಸಗಿ ಕಂಪೆನಿಯು ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಜಲಸಹಾಸ ಕ್ರೀಡೆ ನಡೆಸುತ್ತಿದ್ದು, ಮೃತಪಟ್ಟ ದಂಪತಿ ಸ್ಪೀಡ್ ಬೋಟ್‌ನಲ್ಲಿ ತೆರಳುತ್ತಿದ್ದರು. ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೋಟ್ ಮಗುಚಿದೆ. ಅಷ್ಟರಲ್ಲಿ ಬೋಟ್‌ನಡಿ ಇಬ್ಬರು ಸಿಲುಕಿ ಮೃತಪಟ್ಟಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ದುಬಾರೆ ರಿವರ್ ರ್‍ಯಾಫ್ಟಿಂಗ್ ಬಳಿ ನಿರ್ಮಾಣವಾಗಿರುವ ಹೈಟೆಕ್ ಶೌಚಾಲಯ ಮಾಹಿತಿ ಪಡೆದರು.

ನಂತರ ಬಸವನಹಳ್ಳಿ ವಸತಿ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಎಸ್‌ಇ ಸತೀಶ್, ಎಇಇ ಪುಟ್ಟಸ್ವಾಮಿ, ತಹಶೀಲ್ದಾರ್ ರಮೇಶ್, ಲೋಕೋಪಯೋಗಿಯ ಕಾರ್ಯಪಾಲಕ ಎಂಜಿನಿಯರ್ ಪ್ರಭು ಇತರರು ಇದ್ದರು.

Continue Reading

Trending

error: Content is protected !!