Connect with us

PODCAST

ಬಂದ್‌ನಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ: ಪ್ರಿಯಾಂಕ್ ಖರ್ಗೆ

Published

on

ಬೆಂಗಳೂರು, ಆಗಸ್ಟ್ 12, 2026: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನು ಖಂಡಿಸಿ ನಾಳೆ ಕರೆ ನೀಡಲಾಗಿರುವ ಬಂದ್ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬಂದ್‌ನಿಂದ ಯಾರಿಗೂ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಕನ್ನಡಿಗರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ ತಮ್ಮ ಸಚಿವ ಖಾತೆಯ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ತಾವು ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿದ್ದಾರೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸಲು ಸಿದ್ಧನಿದ್ದೇನೆ. ಹೆಚ್ಚುವರಿ ಖಾತೆಯನ್ನು ತಾವು ಕೇಳಿಲ್ಲ; ಈಗ ನೀಡಿರುವ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುವುದೇ ಸಾಕು ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಕೆಲಸವನ್ನು ನೀಡಿದರೂ ಅದನ್ನು ಸಹ ನಿರ್ವಹಿಸಲು ಸಿದ್ಧನಿದ್ದೇನೆ. ಪಕ್ಷದ ಹೈಕಮಾಂಡ್ ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ನಿರ್ವಹಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Kodagu

ವಿಶ್ವ ಪರಿಸರ ದಿನಾಚರಣೆ: ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಚಾಲನೆ

Published

on

ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಿಜೆಪಿ ಮಂಡಲ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹದೇವಪ್ರಸಾದ್, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Continue Reading

PODCAST

ಸಾಲಿಗ್ರಾಮ ತಾಲೂಕು ದೇವಿತಂದ್ರೆ ಗ್ರಾಮಕ್ಕೆ ಕೆ ಆರ್ ನಗರ ಶಿಶು ಅಭಿವೃದ್ಧಿ ಇಲಾಖೆಯ ಸೂಪರ್ ವೈಸರ್ ಶೋಭಾ ರವರು ಭೇಟಿ

Published

on

ಸಾಲಿಗ್ರಾಮ ತಾಲೂಕು ದೇವಿತಂದ್ರೆ ಗ್ರಾಮಕ್ಕೆ ಕೆ ಆರ್ ನಗರ ಶಿಶು ಅಭಿವೃದ್ಧಿ ಇಲಾಖೆಯ ಸೂಪರ್ ವೈಸರ್ ಶೋಭಾ ರವರು ಭೇಟಿ ನೀಡಿ ಮಕ್ಕಳ ಹಾಜರಾತಿ ಹಾಗು ಮಕ್ಕಳು, ಬಾಣಂತಿಯರಿಗೆ ಸರ್ಕಾರ ನೀಡಿರುವ ಆಹಾರ ಧಾನ್ಯ ಗಳನ್ನು ಪರಿಶೀಲಿಸಿದರು. ಪತ್ರಿಕೆ ಯಲ್ಲಿ ವರದಿಯಾದ ಹಿನ್ನಲೆಯಲ್ಲಿ ಆಗಮಿಸಿದ ಅಧಿಕಾರಿಯು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ ಇವರು, ಶಿಕ್ಷಕಿಯು ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡರು. ಅಂಗನವಾಡಿ ಕೇಂದ್ರಕ್ಕೆ ಬರುವಾಗ ಯಾರೂ ಸಹ ಕೇಂದ್ರದ ಒಳಗಡೆ ಬ್ಯಾಗ್ ಮತ್ತು ಮೊಬೈಲ್ ಇತರೆ ಏನು ತರಬಾರದು, ನಿಗದಿತ ಸಮಯಕ್ಕೆ ಬಂದು ಮಕ್ಕಳಿಗೆ ಆಟೋಪಗಳನ್ನು ಕಲಿಸಿ, ಅಕ್ಷರಭ್ಯಾಸ ಮಾಡಿಸಬೇಕು ಎಂದು ಅಧಿಕಾರಿ ಶೋಭಾ ರವರು ಎಚ್ಚರಿಕೆ ನೀಡಿದರು. ನಂತರ ಮಾತನಾಡಿ ಈಗ ಆಗಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈ ಗೊಳ್ಳಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದ್ಯಸರುಗಳಾದ ಮಾರ್ಕಂಡೇಗೌಡ, ಚಂದ್ರ, ಮುಖಂಡರುಗಳಾದ ವೆಂಕಟೇಶ್,ಧರ್ಮ, ಶಿಕ್ಷಕಿ ಮಮತಾ, ಸಹಾಯಕಿ ಪ್ರಮೀಳಾ, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಇದ್ದಾರೆ.

Continue Reading

PODCAST

ಹಾಸನ : ಡಾಂಬರ್ ಹಾಕಿದ ಒಂದೇ ದಿನಕ್ಕೆ ಕಿತ್ತು ಬಂದ ರಸ್ತೆ – ಎರಡು ಕಿಲೋಮೀಟರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ

Published

on

ಹಾಸನ ಜಿಲ್ಲೆ, ಚನ್ನರಾಯಪಟ್ಟಣ
ತಾಲ್ಲೂಕಿನ, ಬಡಕನಹಳ್ಳಿ ಗ್ರಾಮದಿಂದ ಗೌಡಗೆರೆ ಗ್ರಾಮ ಸಂಪರ್ಕಿಸುವ ಕಲ್ಪಿಸುವ ರಸ್ತೆ
ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಅನೇಕ ವರ್ಷಗಳಿಂದ ಹೊಸ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದ ಗ್ರಾಮಸ್ಥರು
ಶಾಸಕರ ಅನುದಾನದಲ್ಲಿ ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆ
ಗೌಡಗೆರೆ ಗ್ರಾಮದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ
ರಸ್ತೆ ಕಾಮಗಾರಿ ಮಾಡಿದ ಒಂದೇ ದಿನಕ್ಕೆ ಕಿತ್ತು ಬರುತ್ತಿರುವ ಡಾಂಬರ್
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ
ಗುಣಮಟ್ಟದ ಹೊಸ ರಸ್ತೆ ನಿರ್ಮಾಣಕ್ಕೆ ಒತ್ತಾಯ

Continue Reading

Trending

error: Content is protected !!