Chamarajanagar
ಪಟ್ಟಣಕ್ಕೆ ಆಗಮಿಸಿದ್ದ ಕರ್ನಾಟಕ ಧಮ್ಮಾ ಜನಜಾಗೃತಿ ಯಾತ್ರೆ
ಕೊಳ್ಳೇಗಾಲ: ಪಟ್ಟಣಕ್ಕೆ ಆಗಮಿಸಿದ್ದ ಕರ್ನಾಟಕ ಧಮ್ಮಾ ಜನಜಾಗೃತಿ ಯಾತ್ರೆ ಪ್ರಚಾರ ರಥವನ್ನು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಅದ್ಧೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಡೆಸಿ, ಪ್ರಚಾರ ರಥದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಪ್ರವಾಸಿ ಮಂದಿರದಲ್ಲಿ ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರು ಮಾಂಕ್ ಡಾ.ಶಾಕು ಬೋಧಿಧಮ್ಮ ಹಾಗೂ ಭಿಕ್ಕುಗಳಿಗೆ ಶಾಸಕರು ಗೌರವ ಅಭಿನಂದಿಸಿ, ಚಾ.ನಗರದಲ್ಲಿ ನಡೆಯುವ ಬೌದ್ಧ ಸಮ್ಮೇಳನದ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.

ಈ ಸಂಧರ್ಭದಲ್ಲಿ ಮುಖಂಡರು ಮುಳ್ಳೂರು ಶಿವಮಲ್ಲ, ನಟರಾಜು ಮಾಳಿಗೆ, ನಗರಸಭೆ ಮಾಜಿ ಅಧ್ಯಕ್ಷರು ಸೆಲ್ವರಾಜು, ಬಸ್ತೀಪುರ ಶಾಂತರಾಜು, ಮಾಜಿ ಸದಸ್ಯರು ಹಾಗೂ ಇತರರು ಇದ್ದರು.
ವರದಿ:ಸುನೀಲ್ ಪ್ರಶಾಂತ್
Chamarajanagar
50ನೇ ದಿನಕ್ಕೆ ಕಾಲಿಟ್ಟ ರೈತರ ಆಹೋರಾತ್ರಿ ಧರಣಿ: ಜಿಲ್ಲಾಡಳಿತದ ವಿರುದ್ಧ ತಮಟೆ ಚಳುವಳಿ *ಅ.16ರಂದು ಬೃಹತ್ ಪ್ರತಿಭಟನೆಗೆ ಕರೆ
ಗುಂಡ್ಲುಪೇಟೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಕಚೇರಿ ಮುಂದೆ ನಡೆಸುತ್ತಿರುವ ಆಹೋರಾತ್ರಿ ಧರಣಿ 50ನೇ ದಿನಕ್ಕೆ ಕಾಲಿಟ್ಟರೂ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಮಟೆ ಚಳವಳಿ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ತಮಟೆ ಬಾರಿಸುತ್ತಾ ಹೊರಟ ರೈತರು, ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, 50 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಹಾಗೂ ತಾಲೂಕು ಆಡಳಿತ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ, ತಾಲೂಕು ಆಡಳಿತ ಜಡ್ಡು ಹಿಡಿದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುಮಾರು 70 ವರ್ಷಗಳಿಂದ ಭೂಮಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರು ಸಾಗುವಳಿ ಚೀಟಿಗಾಗಿ ಕಾಯುತ್ತಿದ್ದಾರೆ. 3,592 ರೈತರಿಗೆ ಸಾಗುವಳಿ ಹಕ್ಕು ನೀಡಲು ಸರ್ಕಾರಕ್ಕೆ ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದರು. ದಶಕಗಳಿಂದ ಉಳುಮೆ ಮಾಡುತ್ತಿರುವ ಭೂಮಿಗೆ ಸಾಗುವಳಿ ಪತ್ರ ಹಾಗೂ ಹಕ್ಕು ಪತ್ರ ನೀಡುವಂತೆ ಕೇಳುತ್ತಿದ್ದಾರೆ ಎಂದರು.
ಅ.16ರಂದು ಬೃಹತ್ ಪ್ರತಿಭಟನೆ: ಅಕ್ಟೋಬರ್ 16ರಂದು ತಾಲೂಕಿನ ಎಲ್ಲಾ ಗ್ರಾಮಗಳಿಂದ ರೈತರನ್ನು ಸಂಘಟಿಸಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳೊಂದಿಗೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಮಧ್ಯೆ, ಸ್ಥಳಕ್ಕೆ ಆಗಮಿಸಿದ ಆರ್‌ಎಫ್‌ಒ ಶಿವಕುಮಾರ್ ಹಾಗೂ ಪ್ರಭಾರ ಎಸಿಎಫ್ ವಿನೋದ್ ರೈತರ ಸಮಸ್ಯೆಗಳನ್ನು ಆಲಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮಲ್ಲಯನಪುರ ಶಿವಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಕೊಡಹಳ್ಳಿ ಪ್ರಸಾದ್, ಶಿವಕುಮಾರ್ ಪಿಕೆ, ಹಕ್ಕಲಪುರ ಕುಮಾರ್, ಗುರುಪ್ರಸಾದ್, ರೋಹನ್ ಗೌಡ, ಮನು, ಚಂದ್ರು, ಸುಭಾಸ್ ಸೇರಿದಂತೆ ಹಲವರು ಹಾಜರಿದ್ದರು.
Chamarajanagar
ಮಿಕ್ಸ್ ಬಾಕ್ಸಿಂಗ್: ಲಿಖಿತ್ ರಾಜ್ಯಮಟ್ಟಕ್ಕೆ ಆಯ್ಕೆ
ಗುಂಡ್ಲುಪೇಟೆ: ಜಿಲ್ಲಾ ಮಟ್ಟದ ಮಿಕ್ಸ್ ಬಾಕ್ಸಿಂಗ್ ಪಂದ್ಯದಲ್ಲಿ ದೈಹಿಕ ಶಿಕ್ಷಕ ಲಿಖಿತ್ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯಳಂದೂರಿನಲ್ಲಿ ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಮಿಕ್ಸ್ ಬಾಕ್ಸಿಂಗ್ ಪಂದ್ಯದಲ್ಲಿ ಟೈಗರ್ ಲ್ಯಾಂಡ್ ಮಾರ್ಷಲ್ ಅಕಾಡೆಮಿಯ ಹಾಗೂ ತಾಲೂಕಿನ ಬೇಗೂರಿನ ಲಿಟಲ್ ಪ್ಲವರ್ ಶಾಲೆಯ ದೈಹಿಕ ಶಿಕ್ಷಕರಾಗಿರುವ ಲಿಖಿತ್ ಜಯಶಾಲಿಯಾಗಿ ಕೊಡಗಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಮಿಕ್ಸ್ ಬಾಕ್ಸಿಂಗ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಲಿಖಿತ್ ರನ್ನು ತರಬೇತುದಾರರಾದ ಟೈಗರ್ ಲ್ಯಾಂಡ್ ಮಾರ್ಷಲ್ ಅಕಾಡೆಮಿ ಸಂಸ್ಥಾಪಕ ಸೆನ್ಸಾಯ್ ಉಮೇಶ್ ಹಾಗೂ ಬೇಗೂರು ಲಿಟಲ್ ಫ್ಲವರ್ ಶಾಲೆಯ ಫಾಧರ್ ಜೋಜಿ ಮಾಧೂ ಅಭಿನಂದನೆ ಸಲ್ಲಿಸಿದ್ದಾರೆ.
Chamarajanagar
ಚಾಮರಾಜನಗರ ದಸರಾ ಮಹೋತ್ಸವ : ಅ. 17 ರಿಂದ 19ರವರೆಗೆ ಆಹಾರ ಮೇಳ-ದರಪಟ್ಟಿ ಆಹ್ವಾನ
ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಅ. 17 ರಿಂದ 19ರವರೆಗೆ ಆಹಾರ ಮೇಳವನ್ನು ನಗರಸಭೆ ಹತ್ತಿರ ಆಯೋಜಿಸಲಾಗಿದ್ದು, ದರಪಟ್ಟಿ ಆಹ್ವಾನಿಸಲಾಗಿದೆ.

ಆಹಾರ ಮೇಳದಲ್ಲಿ ಭಾಗವಹಿಸಲು ಹಾಗೂ ವಿಶೇಷ ತಿಂಡಿ, ತಿನಿಸುಗಳನ್ನು ಮಾಡುವ ಮತ್ತು ಸಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲು ಆಸಕ್ತಿಯುಳ್ಳವರು ದರಪಟ್ಟಿ ಮತ್ತು ಆಹಾರ ಪರವಾನಗಿ ವಿವರಗಳನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಹಾರ ಇಲಾಖೆ ಕೊಠಡಿ ಸಂಖ್ಯೆ 113, 114 ಕಚೇರಿಗೆ ಅ. 15ರೊಳಗೆ ಸಲ್ಲಿಸುವಂತೆ ಆಹಾರ ಮತ್ತು ವಸತಿ ಸಮಿತಿ ಕಾರ್ಯಾಧ್ಯಕ್ಷರೂ ಆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
National20 hours agoಕಾವೇರಿ ನೀರು ವಿವಾದ: ‘ನೀರಿದ್ದರೆ ತಾನೇ ಬಿಡಲು ಸಾಧ್ಯ?’ ಸುಪ್ರೀಂ ಕೋರ್ಟ್ ಅಸಮಾಧಾನ-ಆದೇಶ ಕಾಯ್ದಿರಿಕೆ
-
Chamarajanagar22 hours agoನಿರ್ಗಮಿತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಗೆ ಆತ್ಮೀಯ ಬಿಳ್ಕೋಡುಗೆ
-
Chikmagalur21 hours agoಬೀರೂರು ಬಳಿ ಭೀಕರ ರಸ್ತೆ ಅಪಘಾತ: ಕೆಎಸ್ಆರ್ಟಿಸಿ ಬಸ್–ಬೈಕ್ ಡಿಕ್ಕಿ, ಇಬ್ಬರು ಯುವಕರ ಸಾ*ವು
-
Chikmagalur23 hours agoವಿಜಯಪುರ 3ನೇ ಅಡ್ಡರಸ್ತೆಯಲ್ಲಿ ಹದಗೆಟ್ಟ ನೈರ್ಮಲ್ಯ ವ್ಯವಸ್ಥೆ
-
Kodagu19 hours agoಮಡಿಕೇರಿಯಲ್ಲಿ 19ರಂದು ಮಹಿಳಾ ದಸರಾ: ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು
-
Hassan22 hours agoಜೆಡಿಎಸ್ಗೆ ಗುಡ್ಬೈ ಹೇಳ್ತಾರಾ ಕೆ.ಎಸ್. ಲಿಂಗೇಶ್: ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಭೇಟಿ ಕುತೂಹಲ
-
Kodagu1 hour agoರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಕೊಡಗಿನ ಇಬ್ಬರು ಬಾಕ್ಸರ್ಗಳು ಆಯ್ಕೆ
-
Hassan20 hours agoಹಾಸನ ಜಿಲ್ಲೆಯಲ್ಲಿ ಜನತಾದಳ ಪಕ್ಷದ ಸಂಘಟನೆ ಬಲಪಡಿಸಲು ಮಹಿಮಾ ಪಟೇಲ್ ಸೂಚನೆ
