Connect with us

Kodagu

ವಿಶ್ವ ಪರಿಸರ ದಿನಾಚರಣೆ: ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಚಾಲನೆ

Published

on

ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಿಜೆಪಿ ಮಂಡಲ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹದೇವಪ್ರಸಾದ್, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Continue Reading

Kodagu

ಕುಶಾಲನಗರ ತಾಲೂಕು ನೃತ್ಯ ಶಿಕ್ಷಕರ ಸಂಘ ರಚನೆ: ಹೊಸ ಪದಾಧಿಕಾರಿಗಳ ಆಯ್ಕೆ

Published

on

ವರದಿ.ಟಿ.ಆರ್.ಪ್ರಭುದೇವ್

ಕುಶಾಲನಗರ : ಕುಶಾಲನಗರ ತಾಲ್ಲೂಕು ನೃತ್ಯ ಶಿಕ್ಷಕರ ಮತ್ತು ನೃತ್ಯಗಾರರ ಸಭೆ ಭಾನುವಾರ ಸ್ಥಳೀಯ ರೆಸಾರ್ಟ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ನೃತ್ಯ ಶಾಲೆಗಳ ಸಾಮಾಜಿಕ ಬೆಳವಣಿಗೆಗಳು ಮತ್ತು ಸಂಸ್ಕೃತಿಯನ್ನು ಬೆಳೆಸುವ ಸಲುವಾಗಿ ತಾಲ್ಲೂಕಿನ ಎಲ್ಲಾ ನೃತ್ಯ ಶಾಲಾ ಶಿಕ್ಷಕರುಗಳು ಸೇರಿ ನೃತ್ಯ ಕಲಾವಿದರ ಸಂಘವನ್ನು ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಕುಶಾಲನಗರ ತಾಲ್ಲೂಕಿನ ಒಟ್ಟು 12 ನೃತ್ಯ ಶಾಲೆಯ ಮಾಲೀಕರು ಹಾಗೂ ತರಬೇತುದಾರರು ಪಾಲ್ಗೊಂಡಿದ್ದರು. ತಾಲ್ಲೂಕು ಶಿಕ್ಷಕರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ನೃತ್ಯ ಸಂಯೋಜಕ ಪ್ರದೀಪ್, ಉಪಾಧ್ಯಕರಾಗಿ ಟೀಮ್ ಡ್ರೀಮ್ ಸ್ಟಾರ್ ನೃತ್ಯ ಸಂಯೋಜಕ ಶರಣ್, ಕಾರ್ಯದರ್ಶಿಯಾಗಿ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಸಂಯೋಜಕ ಅಕ್ತರ್, ಸಂಚಾಲಕರಾಗಿ ತಾಂಡವಂ ಡ್ಯಾನ್ಸ್ ಸ್ಟುಡಿಯೋ ಚಂದನ್,

ಖಾಚಾಂಚಿಯಾಗಿ ಕುಂದನ ನೃತ್ಯಾಲಯ ಶ್ರೀಮತಿ ವಿನುತಾ, ಸಂಘದ ಮುಖ್ಯ ಸದಸ್ಯರಾಗಿ ಡಿ.ಸಿ ಡ್ಯಾನ್ಸ್ ಸ್ಟುಡಿಯೋ ನಿಸಾರ್ ಮತ್ತು ಸಂಘದ ಇತರೆ ಸದಸ್ಯರುಗಳಾಗಿ ನಟರಾಜ ಸಂಗೀತ ಕಲಾಕೇಂದ್ರದ ಸ್ಥಾಪಕರಾದ ವಿದ್ವಾನ್ ಶಂಕರಯ್ಯ, ನಾದಾಂತ ನಾಟ್ಯ ಮಯೂರಿ ನೃತ್ಯ ಸಂಯೋಜಕಿ ಶ್ರೀಮತಿ ಮಂಜು ಭಾರ್ಗವಿ, ಯುೂನಿಕ್ ಶಾರದಾ ಕಲಾಕೇಂದ್ರದ ನೃತ್ಯ ಸಂಯೋಜಕರು, ನಾಟ್ಯಾನಿಕೇತನ ನೃತ್ಯ ಸಂಯೋಜಕರು, ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಸಂಯೋಜಕರು ಮತ್ತು ನರ್ತನಾಲಯ ನೃತ್ಯ ಸಂಯೋಜಕರುಗಳು ತಾಲ್ಲೂಕು ಸಂಘಕ್ಕೆ ಆಯ್ಕೆಯಾದರು. ಮುಂದಿನ ದಿನಗಳಲ್ಲಿ ಕುಶಾಲನಗರ ತಾಲ್ಲೂಕು ನೃತ್ಯ ಶಿಕ್ಷಕರ ಸಂಘದ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ಏರ್ಪಡಿಸುವ ಬಗ್ಗೆ ಸಂಘದಲ್ಲಿ ಚರ್ಚಿಸಲಾಯಿತು ಮತ್ತು ನೃತ್ಯ ಶಾಲಾ ವಿದ್ಯಾರ್ಥಿಗಳ ಹಲವು ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

Continue Reading

Kodagu

ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುವ ಸರಕಾರ : ಸೋಮವಾರಪೇಟೆ ಬಿಜೆಪಿ ಅಸಮಾಧಾನ

Published

on

ಮಡಿಕೇರಿ: ಅನುದಾನದ ಕೊರತೆಯಿಂದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗದ ಸರಕಾರ ಇದೀಗ ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುವ ಮೂಲಕ ರಾಜ್ಯದ ಜನತೆಗೆ ವಿನಾಕಾರಣ ಕಿರುಕುಳ ನೀಡುತ್ತಿದೆ ಎಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಧಿಕಾರಕ್ಕೆ ಬರಬೇಕೆನ್ನುವ ಏಕೈಕ ಉದ್ದೇಶದಿಂದ ಆರ್ಥಿಕ ಹೊರೆಯ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ಇದೀಗ ಹಣ ಕ್ರೋಢೀಕರಣಕ್ಕಾಗಿ ಜನರಿಗೆ ತೊಂದರೆ ನೀಡುತ್ತಿದೆ. ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ನೀಡಲಾಗದೆ ಪರದಾಡುತ್ತಿರುವ ರಾಜ್ಯ ಸರಕಾರ ಜನರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಕಾಲಹರಣ ಮಾಡುತ್ತಿದೆ. ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪಡಿತರ ಚೀಟಿಗೆ ಜಾತಿ ಪ್ರಮಾಣ ಪತ್ರ ಒದಗಿಸಲು ಬಡವರು ಹಾಗೂ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅರ್ಜಿ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತ್ಯಾತೀತ ಸಿದ್ಧಾಂತದ ಆದರ್ಶಗಳ ಮುಖವಾಡ ತೊಟ್ಟಿರುವ ಕಾಂಗ್ರೆಸ್ ಸರಕಾರ ಪಡಿತರ ಚೀಟಿಯಲ್ಲೂ ಜಾತಿಯನ್ನು ಹುಡುಕುತ್ತಿದೆ ಎಂದು ಟೀಕಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸರಕಾರ ಸೌಲಭ್ಯ ನೀಡದೆ ವಂಚಿಸುತ್ತಿದೆ. ಅನರ್ಹರನ್ನು ಹೊರಗಿಡುವ ನೆಪವೊಡ್ಡಿ ದಾಖಲೆಗಳ ಪರಿಷ್ಕರಣೆಗೆ ಮುಂದಾಗಿರುವ ಸರಕಾರ ಕಾಲಹರಣ ಮಾಡುವ ಮೂಲಕ ಅರ್ಹರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ಪರದಾಡುತ್ತಿರುವ ಸರಕಾರ ಜನರಲ್ಲಿ ಗೊಂದಲ ಸೃಷ್ಟಿಸಿ ಉಳಿದಿರುವ ಎರಡು ವರ್ಷಗಳ ಅಧಿಕಾರವಧಿಯನ್ನು ತರಾತುರಿಯಲ್ಲಿ ಮುಗಿಸುವ ಯೋಜನೆ ರೂಪಿಸಿದಂತ್ತಿದೆ ಎಂದು ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ.


ಸರಕಾರದ ನಿರ್ಲಕ್ಷ್ಯದಿಂದ ರಸ್ತೆಗಳೆಲ್ಲವೂ ಗುಂಡಿಮಯವಾಗಿದ್ದು, ವಾಹನ ಸವಾರರು ಮಾತ್ರವಲ್ಲದೆ ಪಾದಾಚಾರಿಗಳಿಗೂ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿದೆ. ಸರಕಾರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ತಮಾಷೆ ನೋಡುವ ಬದಲು ರಸ್ತೆಗಳ ಅಭಿವೃದ್ಧಿಗೆ ಮೊದಲು ಅನುದಾನ ಬಿಡುಗಡೆ ಮಾಡಲಿ. ಪಡಿತರ ಚೀಟಿಗೆ ಜಾತಿ ಪ್ರಮಾಣ ಪತ್ರ ಪಡೆಯುವ ಆದೇಶವನ್ನು ಹಿಂದಕ್ಕೆ ಪಡೆಯಲಿ ಎಂದು ಒತ್ತಾಯಿಸಿದ್ದಾರೆ.

Continue Reading

Kodagu

ನಾಳೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಎಸ್ ವೈಎಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Published

on

ನಾಪೋಕ್ಲು :ಸಮಸ್ತ ಸೆಂಟಿನರಿಯ ಅಂಗವಾಗಿ ಸುನ್ನಿ ಯುವಜನ ಸಂಘ (ಎಸ್ ವೈಎಸ್) ಜಿಲ್ಲಾ ಸಮಿತಿಯ ವತಿಯಿಂದ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಾಳೆ(ಜು. 21) ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಎಸ್ ವೈ ಎಸ್ ಸಾಂತ್ವನ ಕಾರ್ಯದರ್ಶಿ ಬಷೀರ್ ಕೊಟ್ಟಮುಡಿ ತಿಳಿಸಿದ್ದಾರೆ.

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ನಾಳೆ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.ಎಸ್ ವೈಎಸ್ ನ 50ಕ್ಕೂ ಅಧಿಕ ಕಾರ್ಯಕರ್ತರು ರಕ್ತದಾನ ಮಾಡಿ ರಕ್ತದಾನ ಶಿಬಿರವನ್ನು ಯಶಸ್ವಿ ಗೊಳಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Trending

error: Content is protected !!