Connect with us

Mandya

ಆದಿಚುಂಚನಗಿರಿ ಮಠದಲ್ಲಿ ಶರನ್ನವರಾತ್ರಿ ಉತ್ಸವ: ಸಿದ್ಧ ಸಿಂಹಾಸನ ಪೂಜೆ

Published

on

ನಾಗಮಂಗಲ: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ ಉತ್ಸವದ ವಿಶೇಷ ಸಂದರ್ಭದಲ್ಲಿ ಸಿದ್ಧ ಸಿಂಹಾಸನ ಪೂಜೆ ಹಾಗೂ ಷೋಡಶೋಪಚಾರ ಪೂಜಾ ಕೈಂಕರ್ಯಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.


ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಗೆ ಶರನ್ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ಸಮರ್ಪಿಸಲಾಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಸದ್ಭಕ್ತರು ಉಪಸ್ಥಿತರಿದ್ದು, ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ, ಪೂಜ್ಯ ಮಹಾಸ್ವಾಮೀಜಿಯವರ ದರ್ಶನ ಪಡೆದು ಆಶೀರ್ವಾದ ಪಡೆದರು.

ಶರನ್ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ಭಕ್ತಿಪೂರ್ವಕವಾಗಿ ನೆರವೇರಿದವು.

Continue Reading

Mandya

ದೇವಲಾಪುರದಲ್ಲಿ ಮಳೆಗಾಗಿ ಪಾತ್ರರಾಯನಿಗೆ ವಿಶೇಷ ಪೂಜೆ

Published

on

ನಾಗಮಂಗಲ: ಮಳೆ ಕೈಕೊಟ್ಟು ಕೃಷಿ ಬೆಳೆಗಳಿಗೆ ನೀರಿನ ಅಭಾವ ಎದುರಾದ ಸಂದರ್ಭದಲ್ಲಿ, ವರುಣನ ಕೃಪೆಗಾಗಿ ದೇವಲಾಪುರ ಗ್ರಾಮಸ್ಥರು ಪೂರ್ವಿಕರ ಕಾಲದಿಂದಲೂ ನಡೆದುಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯವನ್ನು ಮುಂದುವರಿಸಿ ಪಾತ್ರರಾಯನಿಗೆ ವಿಶೇಷ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.


ಕೃಷಿಯನ್ನೇ ಪ್ರಧಾನ ಜೀವನಾಧಾರವನ್ನಾಗಿಸಿಕೊಂಡಿರುವ ಗ್ರಾಮೀಣ ಜನರಿಗೆ ಮಳೆ ಎಂದರೆ ಬದುಕಿನ ಭರವಸೆ. ಕಾಲಕಾಲಕ್ಕೆ ಮಳೆ ಸುರಿದು ಭೂಮಿ ಹಸಿರಿನಿಂದ ಕಂಗೊಳಿಸಬೇಕು, ಕೆರೆ-ಕಟ್ಟೆಗಳು ತುಂಬಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಬೇಕು ಹಾಗೂ ರೈತರ ಬದುಕು ಸಮೃದ್ಧಿಯಿಂದ ಕೂಡಿರಬೇಕು ಎಂಬ ಆಶಯದೊಂದಿಗೆ ಗ್ರಾಮಸ್ಥರು ಪಾತ್ರರಾಯನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಪೂರ್ವಿಕರ ಸಂಪ್ರದಾಯಕ್ಕೆ ಇಂದಿಗೂ ಮನ್ನಣೆ

ಮಳೆ ಬಾರದೆ ಬೆಳೆಗಳು ಒಣಗುವ ಆತಂಕ ಎದುರಾದಾಗ, ಮಳೆಗಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ದೇವಲಾಪುರ ಗ್ರಾಮದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಈ ಧಾರ್ಮಿಕ ಆಚರಣೆಯನ್ನು ಇಂದಿನ ತಲೆಮಾರಿನವರೂ ಮುಂದುವರಿಸಿಕೊಂಡು ಬರುತ್ತಿರುವುದು ಗ್ರಾಮದ ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಒಟ್ಟಾಗಿ ಸೇರಿ ಅಭಿಷೇಕ ಹಾಗೂ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಉತ್ತಮ ಮಳೆಯಾಗಿ ರೈತರ ಬೆಳೆಗಳು ಸಮೃದ್ಧವಾಗಿ ಬೆಳೆಯಲಿ, ಗ್ರಾಮದಲ್ಲಿ ಸುಖ-ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ಶ್ರೀ ಪಟ್ಟಲದಮ್ಮ ದೇವತೆಗೂ ವಿಶೇಷ ಪೂಜೆ

ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ಪಟ್ಟಲದಮ್ಮ ದೇವತೆಗೂ ಇದೇ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಜನರ ಒಳಿತಿಗಾಗಿ, ಕೃಷಿ ಚಟುವಟಿಕೆಗಳು ಸುಗಮವಾಗಿ ಸಾಗಲು ಹಾಗೂ ಸಕಾಲದಲ್ಲಿ ಮಳೆಯಾಗಿ ನಾಡು ಸಮೃದ್ಧಿಯಾಗಲು ದೇವಿಯ ಆಶೀರ್ವಾದ ಕೋರಲಾಯಿತು.

ಒಟ್ಟಿನಲ್ಲಿ, ಮಳೆಯ ನಿರೀಕ್ಷೆಯಲ್ಲಿರುವ ರೈತರ ಆಶಾಭಾವನೆ, ಪೂರ್ವಿಕರ ಧಾರ್ಮಿಕ ಸಂಪ್ರದಾಯ ಹಾಗೂ ಗ್ರಾಮಸ್ಥರ ಸಾಮೂಹಿಕ ಭಕ್ತಿಭಾವಕ್ಕೆ ದೇವಲಾಪುರದಲ್ಲಿ ನಡೆದ ಈ ವಿಶೇಷ ಪೂಜಾ ಕಾರ್ಯಕ್ರಮ ಸಾಕ್ಷಿಯಾಯಿತು

Continue Reading

Mandya

ಶ್ರೀರಂಗಪಟ್ಟಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Published

on

ಶ್ರೀರಂಗಪಟ್ಟಣ: ಮನುಷ್ಯರು ಒಬ್ಬರಿಗೊಬ್ಬರು ಬಾಂಧವ್ಯದಿಂದ ವರ್ತಿಸಿದರೆ ಮಾನಸಿಕ ರೋಗಗಳಿಂದ ದೂರವಿರಬಹುದು ಎಂದು ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಮೂರ್ತಿ ಕೃಷ್ಣಮೂರ್ತಿ ಎನ್ ರವರು ಕಿವಿ ಮಾತು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ತಾಲ್ಲೂಕು ಮಟ್ಟದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಜಗತ್ತಿಗೆ ಮಾರು ಹೋಗಿ ಜನತೆ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ ಚೇತನ ಎನ್ ಆರ್ ಮಾತನಾಡಿ, ಮಾನಸಿಕ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಸಂದರ್ಭದಲ್ಲಿ ಮನೋರೋಗ ತಜ್ಞರು ಜವಾಬ್ದಾರಿಯುತವಾಗಿ, ಬದ್ಧತೆಯಿಂದ ಚಿಕಿತ್ಸೆ ನೀಡಬೇಕಿದ್ದು ಮನೋರೋಗಿಗಳಿಗೆ ಸಾಮಾಜಿಕವಾಗಿ ಹಾಗೂ ಕೌಟುಂಬಿಕ ವಿಷಯಗಳಲ್ಲಿ ಎಲ್ಲಾ ರೀತಿಯ ಬೆಂಬಲ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದು ಒತ್ತಿ ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಮರಿಗೌಡ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಸಿ ಎಂ ಶ್ರೀಧರ್,ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ. ಚಂದನ್, ಡಾ ಸೂರ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ವೇತಲತಾ ಎ ಎನ್, ತಾಲೂಕಿನ ಎಲ್ಲಾ ಹಿರಿಯ /ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಯ್ದ ಹಿರಿಯ / ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು,ಆಶಾ ಕಾರ್ಯಕರ್ತೆಯರು ಹಾಗೂ ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ ಬಿ ಜಯರಾಮ್ ಸ್ವಾಗತಿಸಿದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ ವಂದಿಸಿದರು.

Continue Reading

Mandya

ಸಚಿವರ ಅಧಿಕಾರವಧಿಯಲ್ಲಿ ಜಿಲ್ಲಾಢಳಿತ ಹಾಗೂ ನಾಗಮಂಗಲ ತಾಲ್ಲೂಕು ಆಡಳಿತ ಭ್ರಷ್ಟಾಚಾರ : ಸಂತೋಷ್

Published

on

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ರವರ ಅಧಿಕಾರದ ಅವಧಿಯಲ್ಲಿ ಮಂಡ್ಯ ಜಿಲ್ಲಾಢಳಿತ ಹಾಗೂ ನಾಗಮಂಗಲ ತಾಲ್ಲೂಕು ಆಡಳಿತ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದು, ರೈತರ ಮೂಲ ಕಡತಗಳನ್ನೇ ನಾಶಪಡಿಸಿ ಕಸದ ತೊಟ್ಟಿಗೆ ಎಸೆದು ರೈತರ ಬದುಕನ್ನು ಬೀದಿಗೆ ಬೀಳುವಂತೆ ಮಾಡಲಾಗಿದೆ ಎಂದು ನಾಗಮಂಗಲ ತಾಲ್ಲೂಕು ಎಸ್ಸಿ, ಎಸ್ಟೀ ಘಟಕದ ಜೆಡಿಎಸ್ ಅಧ್ಯಕ್ಷ ಸಂತೋಷ್ ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಮತ್ತು ಪಾಂಡವಪುರ ಉಪವಿಭಾಗಾಧಿಕಾರಿಗಳು ಮಂತ್ರಿಗಳ ಕೈಗೊಂಬೆಗಳಾಗಿ ಸರ್ಕಾರಿ ನಿಯಮಗಳನ್ನೇ ಗಾಳಿಗೆ ತೂರಿ ಹಲವು ಅಕ್ರಮಗಳನ್ನು ಮಾಡಿರುವ ಬಗ್ಗೆ ಆರೋಪಿಸಿದರು.


ನಾಗಮಂಗಲ ತಾಲ್ಲೂಕಿನಲ್ಲಿ 2021-2023ರ ವರೆಗೆ ಬಗರ್ ಹುಕ್ಕುಂ ಸಾಗುವಳಿ ಸಕ್ರಮ ಸಮಿತಿಯೂ ಕಾನೂನು ಬದ್ಧವಾಗಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಿರುವುದನ್ನು ಸಹಿಸದೇ ಚಲುವರಾಯಸ್ವಾಮಿರವರು ಅಧಿಕಾರದ ದರ್ಪದಿಂದ ಅಧಿಕಾರಿಗಳನ್ನು ಬಳಸಿಕೊಂಡು ರಾಜಕೀಯ ದ್ವೇಷದಿಂದ ರೈತರ ಸಾಗುವಳಿ ಚೀಟಿಗಳನ್ನು ರದ್ದುಪಡಿಸಿದ್ದಾರೆ. ತಾಲ್ಲೂಕು ಕಛೇರಿಯಲ್ಲಿ ನಕಲು ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸುವ ದಂದೆ ಕೋರರ ಜೋತೆ ಶಾಮೀಲಾಗಿ ಕೆಲವು ಅಧಿಕಾರಿಗಳು ಹಣ ಪಡೆದು ತಾಲ್ಲೂಕು ಕಛೇರಿಯ ರೇಕಾರ್ಡ್ ರೋಂ ನಲ್ಲಿರುವ ರೈತರ ಜಮೀನಿನ ಮೂಲ ಕಡತಗಳನ್ನೇ ಕಸದ ತೊಟ್ಟಿಗೆ ಎಸೆದು ಮೂಲ ದಾಖಲೆಯನ್ನು ನಾಶ ಪಡಿಸುತ್ತಿದ್ದರೂ, ಚಲುವರಾಯಸ್ವಾಮಿ ರವರು ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಭೂಮಿ ಕಬಳಿಸುವವರಿಗೆ ಬೆಂಬಲವಾಗಿ ನಿಂತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗಮಂಗಲ ತಾಲ್ಲೂಕು ಕಸಬಾ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ಸರ್ವೆ ನಂಬರ್ 13ರ ಸರ್ಕಾರಿ ಗೋಮಾಳದ 8-10 ಎ-ಗು ಜಮೀನನ್ನು ಚಲುವರಾಯಸ್ವಾಮಿರವರ ಬೆಂಬಲಿಗ ವನರಾಜು ರವರ ತಂದೆ ಬಿ ಎನ್ ನಿಂಗೇಗೌಡ ಹಾಗೂ ವನರಾಜುವರವರ ಮಾವನವರಾದ ಹಾಲ್ತಿ ಗ್ರಾಮದ ಮೂಡ್ಲಿಗಿರಿಗೌಡ ರವರಿಗೆ ನಕಲು ದಾಖಲೆ ಸೃಷ್ಟಿಸಿ ಪಾಂಡವಪುರ ಉಪವಿಭಾಗಾಧಿಕಾರಿಗಳು ಆರ್.ಟಿ.ಸಿ ಇಂಡೀಕರಿಸಿರುತ್ತಾರೆ. ಈ ಅಕ್ರಮದಲ್ಲಿ ಸಚಿವರು ನೇರವಾಗಿ ಭಾಗಿಯಾರುತ್ತಾರೆ ಎಂದು ದೂರಿದರು.

ಚಲುವರಾಯಸ್ವಾಮಿರವರ ಬೆಂಬಲಿಗ ಕ್ರಷರ್ ಮಾಲಿಕ ಕರಿಗೌಡ ರವರ ಹೆಂಡತಿಯಾದ ಪ್ರೇಮಾ ಕೋಂ ಕರಿಗೌಡರವರ ಹೆಸರಿಗೆ ಹೊಣಕೆರೆ ಹೋಬಳಿಯ ಗಂಗಸಮುದ್ರ ಗ್ರಾಮದ ಸರ್ವೆ ನಂಬರ್ 143ರ ಅರಣ್ಯದ ಜಾಗವನ್ನು 3-18 ಎ-ಗು ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆಯಿಂದ ಎನ್.ಒ.ಸಿ ನೀಡದಿದ್ದರೂ, ಹಣ ಪಡೆದು ಜಿಲ್ಲಾಧಿಕಾರಿಗಳಾದ ಕುಮಾರ್ ರವರು ಅಕ್ರಮವಾಗಿ ಗಣಿಗಾರಿಕೆಗೆ ಅಕ್ರಾಂತ ಮಾಡಿರುತ್ತಾರೆ ಎಂದು ಆರೋಪಿಸಿದರು.

ಹೆಚ್.ಎನ ಕಾವಲ್ ಸರ್ವೆ ನಂ 106 ರಲ್ಲಿ ಸ್ಮಶಾನ ಮತ್ತು ಇತರರಿಗೆ ಮಂಜೂರಾಗಿರುವ ಜಾಗವನ್ನು ಚಲುವರಾಯಸ್ವಾಮಿರವರ ಬೆಂಬಲಿಗರು ಅತಿಕ್ರಮವಾಗಿ ಅದೇ ಜಾಗಕ್ಕೆ ತಂತಿಬೇಲಿ ಹಾಕಿಸಿ ದೌರ್ಜನ್ಯದಿಂದ ಕಬ್ಜ ಮಾಡಿಕೊಂಡಿರುತ್ತಾರೆ. ಇದರಿಂದ ಅಲ್ಲಿಯ ರೈತರಿಗೆ ತೊಂದರೆ ನಿಡುತ್ತಿರುತ್ತಾರೆ ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಂತೋಷ್ ಎನ್.ಆರ್ ಶಿವರಾಮಯ್ಯ, ಮುತ್ತಣ್ಣ ಶ್ರೀನಿವಾಸ್, ರಮೇಶ್ ಚನ್ನಕೇಶವ ಇದ್ದರು.

Continue Reading

Trending

error: Content is protected !!