Hassan
ಯುವ ಸಮುದಾಯಕ್ಕೆ ಸಂಸ್ಕೃತಿ, ಸಂಸ್ಕಾರ ಹಾಗೂ ಜೀವನ ಮೌಲ್ಯಗಳ ಪರಿಚಯಕ್ಕೆ ರಾಮಾಯಣ ಸೂಕ್ತ ಚಿತ್ರ: ಶಿವಕುಮಾರ್
ಅರಸೀಕೆರೆ: ಇಂದಿನ ಯುವ ಸಮುದಾಯಕ್ಕೆ ಭಾರತೀಯ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ ಹಾಗೂ ಜೀವನ ಮೌಲ್ಯಗಳ ಪರಿಚಯ ಮಾಡಿಕೊಡಲು ರಾಮಾಯಣ ಅತ್ಯಂತ ಸೂಕ್ತ ಚಿತ್ರವಾಗಿದೆ ಎಂದು ಸಮಾಜಸೇವಕ ಹಾಗೂ ಉದ್ಯಮಿ ಶಿವಕುಮಾರ್ ಅಭಿಪ್ರಾಯಪಟ್ಟರು. ನಗರದ ರತ್ನ ಚಿತ್ರಮಂದಿರದಲ್ಲಿ ಶಿವಕುಮಾರ್ ಅಭಿಮಾನಿಗಳ ಬಳಗ ಹಾಗೂ ರುದ್ರಾಕ್ಷ ಫೌಂಡೇಶನ್ ವತಿಯಿಂದ ನೂರಾರು ಜನರಿಗೆ ರಾಮಾಯಣ ಚಲನಚಿತ್ರ ವೀಕ್ಷಿಸಲು ಉಚಿತ ಟಿಕೆಟ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ರಾಮಾಯಣ ಕೇವಲ ಮನರಂಜನೆಯ ಚಿತ್ರವಲ್ಲ. ಇದು ಜೀವನದ ಮೌಲ್ಯಗಳು, ನೈತಿಕತೆ, ಕರ್ತವ್ಯಪ್ರಜ್ಞೆ ಹಾಗೂ ವ್ಯಕ್ತಿತ್ವ ವಿಕಸನದ ಮಹತ್ವವನ್ನು ತಿಳಿಸಿಕೊಡುವ ಉತ್ತಮ ಮಾಧ್ಯಮವಾಗಿದೆ ಎಂದರು.

ಶ್ರೀರಾಮನು ತಂದೆಯ ಮಾತಿಗೆ ಗೌರವ ನೀಡಿ ರಾಜಪದವಿಯನ್ನೇ ತ್ಯಜಿಸಿ ವನವಾಸಕ್ಕೆ ತೆರಳಿದ ಪ್ರಸಂಗವು ಹಿರಿಯರ ಮೇಲಿನ ಗೌರವ, ತ್ಯಾಗ ಮನೋಭಾವ ಹಾಗೂ ಕುಟುಂಬದ ಜವಾಬ್ದಾರಿಯನ್ನು ಕಲಿಸುತ್ತದೆ. ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ನಡುವಿನ ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವವು ಕುಟುಂಬದ ಒಗ್ಗಟ್ಟಿನ ಮಹತ್ವವನ್ನು ಸಾರುತ್ತದೆ. ಇಂತಹ ಮೌಲ್ಯಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರುದ್ರಾಕ್ಷ ಫೌಂಡೇಶನ್ ಅಧ್ಯಕ್ಷ ಜೈಪ್ರಕಾಶ್ ಗುರೂಜಿ, ಶ್ರೀರಾಮನ ಜೀವನವು ಕಷ್ಟದ ಸಂದರ್ಭಗಳಲ್ಲಿಯೂ ತಾಳ್ಮೆ, ಶಾಂತಚಿತ್ತ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವುದನ್ನು ಕಲಿಸುತ್ತದೆ. ಅಪಾರ ಜ್ಞಾನ ಮತ್ತು ಶಕ್ತಿ ಹೊಂದಿದ್ದ ರಾವಣ ಅಹಂಕಾರ ಹಾಗೂ ದುರಾಸೆಯಿಂದ ವಿನಾಶ ಹೊಂದಿದ ಪ್ರಸಂಗವು ಮನುಷ್ಯನಿಗೆ ಎಷ್ಟೇ ವಿದ್ಯೆ ಮತ್ತು ಅಧಿಕಾರವಿದ್ದರೂ ವಿನಯವಂತಿಕೆ ಮುಖ್ಯ ಎಂಬ ಸಂದೇಶ ನೀಡುತ್ತದೆ ಎಂದರು.

ನೂರಾರು ಜನರಿಗೆ ರಾಮಾಯಣ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಿರುವ ಶಿವಕುಮಾರ್ ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯ. ಇಂದಿನ ಯುವ ಸಮುದಾಯ ಇಂತಹ ಅರ್ಥಪೂರ್ಣ ಚಿತ್ರಗಳನ್ನು ವೀಕ್ಷಿಸುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು. ರಾಮಾಯಣ ಚಿತ್ರ ವೀಕ್ಷಿಸಲು ಅರಸೀಕೆರೆ ನಗರದ ಜನರೊಂದಿಗೆ ಅಗುಂದ, ಕಾಮಸಮುದ್ರ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಂದಲೂ ನೂರಾರು ಜನರು ಆಗಮಿಸಿದ್ದರು. ಯುವ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ನೈತಿಕ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
Hassan
ಬೇಲೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬ*ಲಿ: ಕಾಫಿ ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕ ಸಾ*ವು
ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿರುವ ಘಟನೆ ಬೇಲೂರು ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗೇನಹಳ್ಳಿ ಗ್ರಾಮದ ಐಬಿಸಿ ಎಸ್ಟೇಟ್‌ನಲ್ಲಿ ಅತ್‌ಬಾಬು (55) ಮೃತಪಟ್ಟ ವ್ಯಕ್ತಿ. ಇವರು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಎದುರಾದ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಆನೆ ಕಾಲಿನಿಂದ ತುಳಿದ ಪರಿಣಾಮ ಅತ್‌ಬಾಬು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ಬಳಿಕ ಮೃತದೇಹವನ್ನು ಬೇಲೂರು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Hassan
ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ದೇವೇಗೌಡರ ಕೊಡುಗೆ ಅಪಾರ: ಶಾಸಕ ಬಾಲಕೃಷ್ಣ
ಚನ್ನರಾಯಪಟ್ಟಣ : ಹಾಸನ ಜಿಲ್ಲೆಯ ಸಹಕಾರಿ ವ್ಯವಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಸಂಸ್ಥೆಯನ್ನು ಸದೃಢವಾಗಿ ನಡೆಸಲು ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರ ಆರ್ಥಿಕ ನೆರವಿನ ಕೊಡುಗೆಯನ್ನು ಪ್ರತಿಯೊಬ್ಬರೂ ಸ್ಮರಿಸುವುದು ಅಗತ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಭಾನುವಾರ ಹೇಳಿದರು.
ಶ್ರವಣಬೆಳಗೊಳದ ಪಿಎಸಿಸಿ ಎಸ್ ಕಛೇರಿ ಮುಂಭಾಗದಲ್ಲಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಜಿಲ್ಲೆಗಳ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ರಾಜ್ಯ ಸಹಕಾರ ಮಹಾಮಂಡಳಿ ಹಾಗು ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಮತ್ತು ಆಡಳಿತ ಮಂಡಳಿಗಳು ಆಯೋಜಿಸಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚನ್ನರಾಯಪಟ್ಟಣ ತಾಲ್ಲೂಕಿನ ಎಲ್ಲಾ ರೈತ ಕುಟುಂಬಗಳ ಸರ್ವಾಂಗೀಣ ಅಭಿವೃದ್ಧಿಗೆ ಯಾವುದೇ ರೀತಿಯ ತಾರತಮ್ಯ ಬೇಧಭಾವ ಮಾಡದೇ 52 ಸಾವಿರ ಜನ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳಸಾಲಗಳನ್ನು ವಿತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ರೈತರಿಗೆ 335 ಕೋಟಿ ಸಾಲ ವಿತರಿಸಿರುವುದರಿಂದಾಗಿ ಈ ಹಿಂದೆ ಬರಗಾಲ ಬೆಳೆ ನಷ್ಟದ ಸಮಯದಲ್ಲಿ 3 ಬಾರಿ ರಾಜ್ಯ ಸರ್ಕಾರದಿಂದ 550 ಕೋಟಿ ಸಾಲ ಮನ್ನಾ ಆಗಿದ್ದು, ಈ ಭಾಗದ ರೈತರಿಗೆ ಹೆಚ್ಚಿನ ಸಹಕಾರಿಯಾಗಿದೆ ಎಂದರು. ಸಹಕಾರಿ ಕ್ಷೇತ್ರದಿಂದ ಹಿಡಿದು ವ್ಯಾಪಾರ ವಹಿವಾಟುಗಳನ್ನೆಲ್ಲಾ ಹಣ ಪಾವತಿಸುವುದಕ್ಕೆ ಆನ್ಲೈನ್ ಅಳವಡಿಸಿರುವುದರಿಂದ ಸುಗಮವಾಗಿದ್ದು, ಭಾರತ ದೇಶ ಇಡೀ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿರುವ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 348 ಶಾಶ್ವತ ಸ್ವಂತ ಕಟ್ಟಡಗಳನ್ನು ಈಗಾಗಲೇ ನಿರ್ಮಿಸಲಾಗಿದೆ ಎಂದು ಹೈನುಗಾರಿಕೆಯಿಂದ 2 ಲಕ್ಷದ 75 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಅದರ ಗುಣಮಟ್ಟ ಕಾಪಾಡಲು ಡೈರಿ ನಿಗಮದ ಮೂಲಕ 53 ಬಲ್ಕ್ ಮಿಲ್ಕ್ ಕೂಲರ್ ಗಳನ್ನು ಕಲ್ಪಿಸಿರುವುದರಿಂದ ಹಾಲನ್ನು ಕರೆದು ತರಲು ರೈತರಿಗೆ ಹೆಚ್ಚಿನ ಸಮಯ ಸಿಗುತ್ತದೆ ಎಂದರು.

ಪಶು ವೈಧ್ಯರುಗಳ ಕೊರತೆ ಇದ್ದು, ಕೇವಲ 4 ಜನ ಖಾಯಂ ವೈಧ್ಯರಿಂದ ಜಾನುವಾರುಗಳ ತಪಾಸಣೆಗೆ ಬಹಳ ತೊಂದರೆಯಾಗಿದೆ. 25 ಪಶು ವೈಧ್ಯರುಗಳ ಹುದ್ದೆಗಳು ಖಾಲಿ ಇದ್ದು, ಸರ್ಕಾರ ಆದಷ್ಟು ಬೇಗನೇ ನೇರ ನೇಮಕಾತಿ ಮೂಲಕವಾದರೂ ಸಹ ಭರ್ತಿ ಮಾಡುವಂತೆ ಆಗ್ರಹಿಸಿದ್ದಾರೆ. ಸರ್ಕಾರ ಹಾಲಿನ ದರವನ್ನು ಹೆಚ್ಚಿಸಿರುವುದು ರೈತರಿಗೆ ಅನುಕೂಲವಾಗಿದ್ದು, ಸ್ವಾಗತಿಸುವುದಾಗಿ ತಿಳಿಸಿದರು. ಸಹಕಾರಿ ಸಂಘಗಳಿಗೆ ಜಿಲ್ಲಾ ಬ್ಯಾಂಕಿನ ಸಾಮರ್ಥ್ಯದ ಆಧಾರದ ಮೇಲೆ ಸಾಲ ವಿತರಿಸುತ್ತಿದ್ದು, ಹೆಚ್ಚಿಗೆ ಮಾಡಬೇಕಾದರೆ ಸ್ವಂತ ಬಂಡವಾಳ ಕ್ರೂಢೀಕರಣದತ್ತ ಆಧ್ಯತೆ ನೀಡಲು ಆಡಳಿತ ಮಂಡಳಿಗೆ ತಾಕೀತು ಮಾಡಿದ್ದು, ರೈತರು ಸಹ ಪಡೆದ ಸಾಲಗಳನ್ನು ಸಕಾಲದಲ್ಲಿ ಮರು ಪಾವತಿಸುವಂತೆ ಸೂಚಿಸಿದರು. ಕಳೆದ ಸಾಲಿನಲ್ಲಿ ಜಿಲ್ಲಾ ಬ್ಯಾಂಕ್ 15 ಕೋಟಿ ಆದಾಯ ಗಳಿಸಿತ್ತು ಎಂದರು.
900 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮೆಗಾ ಡೈರಿಯು ಜನವರಿ ತಿಂಗಳಲ್ಲಿ ಪ್ರಧಾನಿ, ಮಾಜಿ ಪ್ರಧಾನಿ, ರಾಜ್ಯದ ಮುಖ್ಯ ಮಂತ್ರಿಗಳಿಂದ ಲೋಕಾರ್ಪಣೆಗೊಳ್ಳಲಿದೆ ಎಂದರು. ಈ ನೂತನ ಡೈರಿಯಿಂದ 1040 ಕೋಟಿ ವಹಿವಾಟು ನಡೆಸಲಿದ್ದು, ಅದರ ಉತ್ಪನ್ನಗಳಾದ ಹಾಲಿನ ಪೆಟ್ ಬಾಟಲ್, ಐಸ್ ಕ್ರೀಮ್ಸ್, ಇನ್ನಿತರೆ ಮಾರಾಟವಾಗಲಿದ್ದು, ಹಾಸನ ಹಾಲು ಒಕ್ಕೂಟ ಗಳಿಸುವ ಲಾಭವನ್ನು ಮುಂದಿನ ದಿನಗಳಲ್ಲಿ ಉತ್ಪಾದಕರಿಗೆ ಹಂಚಿಕೆಯಾಗುತ್ತದೆ ಎಂದರು. ರೈತರುಗಳು ಪಹಣಿ ಇನ್ನಿತರೆ ರೆವಿನ್ಯೂ ದಾಖಲಾತಿಗಳನ್ನು ಸೋಸೈಟಿಯಲ್ಲಿ ಪಡೆಯಬಹುದೆಂದರು.
ಗಣಕೀರಣ, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೈಸೇಷನ್ ಪ್ರಕ್ರಿಯೆಗಳ ಸಹಕಾರಿ ಕ್ಷೇತ್ರಕ್ಕೆ ಹೇಗೆ ಸಹಕಾರಿ ಆಗಿದೆ ಎಂಬುದನ್ನು ಕುರಿತು ಉಪನ್ಯಾಸಕ ಗಿರೀಶ್ ಕುಮಾರ್ ಮಾತನಾಡಿ ಏಷ್ಯಾದಲ್ಲಿಯೇ ಮೊದಲ ಸಹಕಾರಿ ಸಂಸ್ಥೆ ತೆರೆದಿದ್ದು, ರಾಜ್ಯದ ಹೆಗ್ಗಳಿಕೆ ಎಂದರು. ಗ್ರಾಮೀಣ ಜನರಿಗೆ ಬಹುಪಯೋಗಿ ಬಹುಮುಖಿಯಾಗಿ ಸಹಕಾರಿ ಸಂಸ್ಥೆಗಳಿಗೆ ಆಧ್ಯತೆ ನೀಡಿದ್ದು, ಭಾರತದ ಅಸ್ತಿತ್ವದಲ್ಲಿರುವ 8 ಲಕ್ಷದ 53 ಸಾವಿರದ 430 ಇದ್ದು, ಪ್ರಸ್ತುತ 663ಸಾವಿರ ಸಂಘಗಳು ಕಾರ್ಯಾಚರಣೆಯಲ್ಲಿವೆ ಎಂದರು. ದೇಶದಲ್ಲಿ 363 ಸಂಘಗಳು ಲಾಭದಲ್ಲಿದ್ದು, 260 ನಷ್ಟದಲ್ಲಿ ಇವೆ ಎಂದರು. ಈ ದೇಶದಲ್ಲಿ 32 ಕೋಟಿ ಸಹಕಾರಿ ಸದಸ್ಯತ್ವ ಇದ್ದು, 63 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಚಾಲ್ತಿ ಇದ್ದು, ಅವುಗಳಿಗೆ ಪ್ರತ್ಯೇಕ ಸಚಿವಾಲಯವೂ ಇದೆ. ಇವುಗಳ ಮಾಹಿತಿಗೆ ಭಾರತ ಸರ್ಕಾರ 2500 ಕೋಟಿ ವೆಚ್ಚ ಮಾಡಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ವಿಂಧ್ಯಗಿರಿ ಮಹಾದ್ವಾರದ ಬಳಿ ಭವ್ಯ ಮೆರವಣಿಗೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಮೆರವಣಿಗೆಯಲ್ಲಿ 3 ಜೊತೆ ಅಲಂಕರಿಸಿದ ಹೋರಿಗಳು 101 ಕಳಸ ಹೊತ್ತ ಮಹಿಳೆಯರು ವೀರಗಾಸೆ ತಂಡ ಕೋಲಾಟ ತಂಡ, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ತಾಲ್ಲೂಕಿನ ಸದಹಕಾರಿ ಸಂಘಗಳ ಸದಸ್ಯರುಗಳು ಮೆರಗು ತಂದರು. ಶಾಸಕರು ತಾಲ್ಲೂಕಿನ ಸಹಕಾರಿ ಧುರೀಣರಿಗೆ ಅಧ್ಯಕ್ಷರಿಗೆ ಕಾರ್ಯದರ್ಶಿಗಳಿಗೆ ಈ ಹಿಂದೆ ಸೇವೆ ಸಲ್ಲಿಸಿದವರಿಗೆ ಆಡಳಿತ ಮಂಡಳಿಯವರಿಗೆ ಹಾಗು ಕಲಾ ತಂಡಗಳಿಗೆ ಗೌರವಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಜಿ.ಎಚ್.ಸಿದ್ದೇಶ್, ರಾಜ್ಯ ಸಹಕಾರ ಮಾರಾಟ ಮಂಡಳಿ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿ ಗೌಡ HSSK ಅಧ್ಗಯಕ್ಷ ತೋಟಿ ಜಯರಾಂ, ನಿರ್ದೇಶಕ ವಸಂತ್ ಶಿವಣ್ನ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶೇಖರಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಜಿ.ಎಸ್.ಕೌಶಿಕ್, ಟಿಎಪಿಸಿಎಂ ಎಸ್ ಅಧ್ಯಕ್ಷ ಕೆ.ಎನ್.ನಾಗರಾಜು ಕೋಟಿ, ಸ್ಥಳೀಯ ಅಧ್ಯಕ್ಷ ಎ.ಆರ್.ಜೀವನ್, ಉಪಾಧ್ಯಕ್ಷೆ ಕಮಲಮ್ಮ ಚಂದ್ರಶೇಖರ್, ನಿರ್ದೇಶಕ ಪ್ರಕಾಶ್, ಪ್ರಧಾನ ವ್ಯವಸ್ಥಾಪಕ ರೂಪೇಶ್ ಕುಮಾರ್, ಅಭಿವೃದ್ಧಿ ಅಧಿಕಾರಿ ವಿಜಯೇಂದ್ರ, ಡಿಜಿಎಂ ಬಿ.ಎಸ್.ರವಿ, ವ್ಯವಸ್ಥಾಪಕ ಶ್ರೀನಿವಾಸ್, ನಿರ್ದೇಶಕರುಗಳಾದ ಶರತ್ ಕುಮಾರ್, ಅಶೋಕ್, ಲಕ್ಕೇಗೌಡ, ಕುಮಾರ್, ಮಂಜೇಗೌಡ, ಧರ್ಮರಾಜು, ಪ್ರದೀಪ್, ಶೋಭಾ ಕೃಷ್ಣೇಗೌಡ, ನಾಗರಾಜ್ ನಾಯಕ್, ವೆಂಕಟೇಶ್, ಪಾಲ್ಗೊಂಡಿದ್ದರು.
ವರದಿ : ದಯಾನಂದ ಶೆಟ್ಟಿಹಳ್ಳಿ
Hassan
ಸರ್ಕಾರಿ ಪ್ರೌಢಶಾಲೆಯ 2000-2001ನೇ ಸಾಲಿನ ವಿದ್ಯಾರ್ಥಿಗಳಿಂದ ಜರುಗಿದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಅರಕಲಗೂಡು: ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಸರ್ಕಾರಿ ಪ್ರೌಢಶಾಲೆ, ಹೊಳೆ ನರಸೀಪುರ ತಾಲೂಕು ಸೋಮನಹಳ್ಳಿ 2000-2001ನೇ ಸಾಲಿನ ವಿದ್ಯಾರ್ಥಿಗಳ ಕೂಟದ ವತಿಯಿಂದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ದಿನಾಂಕ 15-11-2026ನೇ ಭಾನುವಾರದಂದು ಜರುಗಿತು.

ಆದರೆ, ಈ ಸ್ಮರಣೀಯ ಸಂದರ್ಭದಲ್ಲಿ ನಮ್ಮೆಲ್ಲರ ನೆಚ್ಚಿನ ಶಿಕ್ಷಕರಾದ ಟಿ. ಸೋಮಶೆಟ್ಟಿ ಹಾಗೂ ಸಹಪಾಠಿಗಳಾದ ಪ್ರೇಮ್‌ಕುಮಾರ್ ಬಿ.ಡಿ., ಕಲಾವತಿ ಇವರುಗಳನ್ನು ಕಳೆದುಕೊಂಡ ವಿಷಯ ಎಲ್ಲರಲ್ಲೂ ತೀವ್ರ ಬೇಸರ ತಂದಿದ್ದು, ಅವರಿಗೆ ಮೌನ ಅಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಗಳಾಗಿ ಡಾ. ಹೆಚ್.ಕೆ. ರಮೇಶ್ ರವರು ಹಾಗೂ ಶಿಕ್ಷಕರಾದ ಕೆ.ಪಿ. ಸೋಮಶೇಖರ್ ರವರು, ಬಲರಾಮೇಗೌಡರು, ಎಚ್.ಸಿ. ಚಿನ್ನಬಸಪ್ಪನವರು, ಎನ್. ನಂಜುಂಡಸ್ವಾಮಿಯವರು, ಎಚ್. ಶ್ರೀನಿವಾಸ, ಜಯಮ್ಮ ಹಾಗೂ ಇತರರು ಮತ್ತು 2000-2001ನೇ ಸಾಲಿನ ಸ್ನೇಹ ಸೈನ್ಯದ ಬಳಗ ಭಾಗವಹಿಸಿತ್ತು.
-
Kodagu15 hours agoಕೊಡಗು ಮುಸ್ಲಿಂ ಅಸೋಸಿಯೇಷನ್ ಸಂಘಟನೆ ಅಸ್ತಿತ್ವಕ್ಕೆ – ನೂತನ ಪದಾಧಿಕಾರಿಗಳ ಆಯ್ಕೆ
-
Kodagu18 hours agoಕೊಡವ ಮುಸ್ಲಿಮರ ಇತಿಹಾಸ ಸಂಶೋಧನಾ ವಿಷಯವಾಗಬೇಕು,ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎ. ಮಹಮ್ಮದ್ ಅಭಿಮತ
-
Mandya23 hours agoಯುವತಿಯ ಎಡವಟ್ಟು : ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಸಾ*ವು
-
Special17 hours agoರಾಮಾಯಣ ಭಾಗ 1ರ ಬಜೆಟ್ ₹800 ಕೋಟಿಗೂ ಕಡಿಮೆ: ರಾಮ್ ಗೋಪಾಲ್ ವರ್ಮಾ
-
Kodagu21 hours agoಗಾಂಜಾ ಸೇವಿಸಿ ಗಲಾಟೆ ಆರೋಪಿಗೆ ಸಮುದಾಯ ಸೇವೆ ಶಿಕ್ಷೆ ಸಿದ್ದಾಪುರ ಪಟ್ಟಣ ದಲ್ಲಿ ಒಂದು ಗಂಟೆ ಸಂಚಾರ ನಿಯಂತ್ರಿಸಿದ ಆರೋಪಿ
-
Hassan36 minutes agoಬೇಲೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬ*ಲಿ: ಕಾಫಿ ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕ ಸಾ*ವು
-
Kodagu20 hours agoತಿತಿಮತಿಯಲ್ಲಿ ಜನಜಾತೀಯ ಗೌರವ ದಿವಸ್ ಆಚರಣೆ
-
Kodagu23 hours agoರಾಜ್ಯಮಟ್ಟದ ಭಾಷಣ ಸ್ಪರ್ಧೆಗೆ ಸಿಐಟಿ ವಿದ್ಯಾರ್ಥಿನಿಯರ ಆಯ್ಕೆ
