Mandya
ವೃದ್ದ ನಾಪತ್ತೆ : ಪತ್ತೆಗಾಗಿ ಮನವಿ
ಶ್ರೀರಂಗಪಟ್ಟಣ : ಠಾಣಾ ವ್ಯಾಪ್ತಿಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಜನತಾ ಕಾಲೋನಿ ನಿವಾಸಿ ಸಿದ್ದನಾಯಕ(80) ಎಂಬ ವೃದ್ದ ಕಾಣೆಯಾಗಿದ್ದು, ಹುಡುಕಿಕೊಡುವಂತೆ ಆತನ ಮಗ ಮರಿಸ್ವಾಮಿ ಎಂಬುವವರು ದೂರು ನೀಡಿದ್ದಾರೆ.

ಇದೇ ನ.10 ರಂದು ಸಂಜೆ 5 ಗಂಟೆವರೆವಿಗೂ ಗ್ರಾಮದಲ್ಲಿಯೇ ಇದ್ದು, ಗ್ರಾಮದ ಅರಳಿಕಟ್ಟೆ ಮೇಲೆ ಮಲಗಿರುವುದನ್ನು ಹಲವರು ನೋಡಿದ್ದರೆ. ಆನಂತರ ನಮ್ಮ ತಂದೆ ಕಾಣೆಯಾಗಿದ್ದು, ಸಂಬಂಧಿಕರು ಹಾಗೂ ಗುರುತು ಇರುವವರ ಮನೆಗಳನ್ನೆಲ್ಲಾ ಹುಡುಕಿದರೂ ಇದುವರೆವಿಗೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕ್ಯಾತನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ಕಾಣೆಯಾಗಿರುವ ವೃದ್ದನ ಮಾತಿತಿ ಲಭ್ಯವಾದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ಮೂಲಕ ಕೋರಲಾಗಿದೆ.
Mandya
ಹಿಂದುಳಿದ ಶೋಷಿತ ವರ್ಗಗಳ ಸಂಘಟನೆಗೆ ಹೆಚ್ಚಿನ ಆದ್ಯತೆ : ಸಾವಿತ್ರಮ್ಮ
ನಾಗಮಂಗಲ : ಹಿಂದುಳಿದ ಶೋಷಿತ ವರ್ಗಗಳ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವ ಮುಖಾಂತರ ಅವರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಆಸಕ್ತಿ ನೀಡುವುದಾಗಿ ತಾಲೂಕು ಅಹಿಂದ ಘಟಕದ ನೂತನ ಅಧ್ಯಕ್ಷೆ ಸಾವಿತ್ರಮ್ಮ ತಿಳಿಸಿದರು
ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ತಾಲೂಕು ಅಹಿಂದ ಸಮಿತಿ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಹಿಂದ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಂಘಟನಾತ್ಮಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುವ ಮುಖಾಂತರ ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ್ದು, ತಾಲೂಕಿನಲ್ಲಿ ಹೆಚ್ಚಿನ ಸಂಘಟನಾತ್ಮಕ ಬೆಳವಣಿಗೆಗೆ ಆದ್ಯತೆ ಕೊಡುವುದಾಗಿ ಹೇಳಿದರು.

ಅಹಿಂದ ಮತ ಬ್ಯಾಂಕ್ ಮಾಡಿಕೊಳ್ಳದೆ, ಇವರ ಸಂಘಟನಾತ್ಮಕ ಬೆಳವಣಿಗೆಗೆ ಸಮಬಾಳು, ಸಮಪಾಲು ಸಮಾನತೆಗೆ ಅಧಿಕಾರಸ್ತರು ಹೆಚ್ಚಿನ ಕಾಳಜಿ ವಹಿಸಬೇಕೆಂದು ತಾಲೂಕು ಕಾರ್ಯದರ್ಶಿ ಎನ್ ಆರ್ ಚಂದ್ರಶೇಖರ್ ರವರು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾದ ತಾಲೂಕು ಉಪಾಧ್ಯಕ್ಷರಾದ ದೇವಲಾಪುರ ಶಾಂತಮ್ಮ. ನಾಗಮಂಗಲ ನೂರ್ ಮೊಹಮ್ಮದ್. ತುಪ್ಪದ ಮಡ ರಾಣಿ. ರವರುಗಳು ಉಪಸ್ಥಿತರಿದ್ದರು
Mandya
ಬೀದಿ ನಾಯಿಗಳ ದಾಳಿ: ಹಸು ಬ*ಲಿ
ವರದಿ : ಅಲ್ಲಾಪಟ್ಟಣ ಸತೀಶ್
ಶ್ರೀರಂಗಪಟ್ಟಣ : ಹಸುವೊಂದರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಹಸು ಬಲಿಯಾಗಿರುವ ಘಟನೆ ಶ್ರೀರಂಗಪಟ್ಟಣ ಟೌನ್ ನ ರಂಗನಾಥ ನಗರದಲ್ಲಿ ನಡೆದಿದೆ.
ಗಿರೀಶ್ ಎಂಬುವರಿಗೆ ಸೇರಿದ ಹಸು ನಾಯಿಗಳ ದಾಳಿಯಿಂದಾಗಿ ಸಾವನ್ನಪ್ಪಿದ್ದು, ಹಸುವಿನ ಕಿವಿ, ಮುಖ, ಹೊಟ್ಟೆ ಭಾಗವನ್ನು ನಾಯಿಗಳು ತಿಂದು ಹಾಕಿವೆ.
ಬೀದಿ ನಾಯಿಗಳ ದಾಳಿಯಿಂದಾಗಿ ನಿವಾಸಿಗಳಲ್ಲಿ ಆತಂಕವುಂಟಾಗಿದ್ದು, ಬೀದಿ ನಾಯಿಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.
Mandya
ಕ್ರೀಡೆ ಬಾಂಧವ್ಯವನ್ನ ಬೆಸೆಯುತ್ತದೆ: ಬಿಇಓ ಧನಂಜಯ.
ಮದ್ದೂರು: ಕ್ರೀಡೆಗಳು ದೈಹಿಕ, ಮಾನಸಿಕ ಸದೃಢತೆಯೊಂದಿಗೆ ಬಾಂಧವ್ಯ ಬೆಸೆಯುವ ಸಂಕೇತವಾಗಿದೆ ಎಂದು ಬಿಇಒ ಎಸ್.ಬಿ.ಧನಂಜಯ ತಿಳಿಸಿದರು.
ತಾಲೂಕಿನ ಸೋಮನಹಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಮೇರಾ ಯುವ ಭಾರತ್ ಮಂಡ್ಯ, ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ, ಜಾನಪದ ಪರಿಷತ್ತು ಮದ್ದೂರು, ಯುವ ಪರಿಷತ್ತು ಮದ್ದೂರು ವತಿಯಿಂದ ಶುಕ್ರವಾರ ಆಯೋಜನೆ ಮಾಡಿದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಜನರು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿಕೊಂಡು, ತರಬೇತಿ ಪಡೆದು ಕಠಿಣ ಪರಿಶ್ರಮಪಟ್ಟರೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದೆಂದು ಕಿವಿ ಮಾತು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ವಿ.ಹರ್ಷ ಮಾತನಾಡಿ, ಸರ್ಕಾರದ ಹಲವು ಸಂಸ್ಥೆಗಳೊಂದಿಗೆ ಯುವಕ ಸಂಘಗಳು ಸೇರಿ ಹಲವಾರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಮೆಚ್ಚುಗೆಯ ವಿಷಯವಾಗಿದ್ದು,

ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಮುಂಚೂಣಿಯಲ್ಲಿರುವ ಇರುವುದು ಹರ್ಷದಾಯಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವು ಹಾಗೂ ಕ್ರೀಡಾ ಸ್ಪೂರ್ತಿ ಮೆರೆಯುವುದು ಮುಖ್ಯವೆಂದರು.ಕ್ರೀಡಾಕೂಟದಲ್ಲಿ ಯುವಕರಿಗೆ ವಾಲಿಬಾಲ್, ಯುವತಿಯರಿಗೆ ಹಗ್ಗ ಜಗ್ಗಾಟ, ವೈಯಕ್ತಿಕ ಸ್ಪರ್ಧೆಗಳಾದ 100 ಮೀಟರ್ ಓಟ ಕೂಸುಮರಿ ಓಟವನ್ನ ಯುವಕ ಯುವತಿಯರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿತ್ತು. ಗೆದ್ದವರು ಬಹುಮಾನ ಪಡೆದರೆ, ಸೋತವರು ಕ್ರೀಡಾಸ್ಪೂರ್ತಿ ತೋರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಟಿಐ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶಿವಲಿಂಗಯ್ಯ ವಹಿಸಿದರು. ಐಟಿಐ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಚಂದ್ರ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಲಾರ ಪ್ರಸನ್ನ, ಸ್ವಾಮಿ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಪಿ.ಕಿಶನ್ ಗೌಡ, ಎಸ್ಸಿಎಮ್ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.
-
Mysore23 hours agoದೇಶದ ಮೊದಲ 8k ತಂತ್ರಜ್ಞಾನದ ತಾರಾಲಯ ‘ಕಾಸ್ಮೋಸ್ ಮೈಸೂರು’ ಲೋಕಾರ್ಪಣೆ
-
Kodagu22 hours agoಮಡಿಕೇರಿ ಸೇರಿದಂತೆ ವಿವಿಧೆಡೆ ನ.18 ಮತ್ತು 19 ರಂದು ವಿದ್ಯುತ್ ವ್ಯತ್ಯಯ
-
Hassan21 hours agoಶ್ರವಣಬೆಳಗೊಳಕ್ಕೆ ವಂದೇ ಭಾರತ್ ರೈಲು ಸಂಭ್ರಮದ ಸ್ವಾಗತ – ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ: ಚಾರುಶ್ರೀ
-
Mysore24 hours agoಮೈಸೂರು ಮೃಗಾಲಯಕ್ಕೆ ಆಹಾರ ಸಾಗಣೆ ವಾಹನ ದೇಣಿಗೆ: ವನ್ಯಜೀವಿ ಕಲ್ಯಾಣಕ್ಕೆ ಅದ್ವೈತ್ ಹ್ಯುಂಡೈ ಸಂಸ್ಥೆಯಿಂದ ನೆರವು
-
Hassan19 hours agoಹಾಸನ ರೈಲು ನಿಲ್ದಾಣಕ್ಕೆ ವಂದೇ ಭಾರತ್ ಆಗಮನ: ಕೇಂದ್ರ ಸಚಿವರಿಗೆ ಅದ್ದೂರಿ ಸ್ವಾಗತ
-
Mandya22 hours agoಹಾಲಿನ ಪುಡಿ ಕಲಬೆರಕೆ ಪ್ರಕರಣ: ಎರಡನೇ ಆರೋಪಿ ಬಂಧನ
-
State24 hours ago7 ಗಂಟೆಗಳಲ್ಲಿ ಬೆಂಗಳೂರು-ಮಂಗಳೂರು ಪ್ರಯಾಣ: ನ.15ರಿಂದ ವಾಣಿಜ್ಯ ಸಂಚಾರ ಆರಂಭ
-
Hassan24 hours agoವಿದೇಶದ ರೈಲು ವ್ಯವಸ್ಥೆ ಕಂಡು ಬೆರಗಾಗಿದ್ದೆ- ಇಂದು ನಮ್ಮೂರಲ್ಲೇ ವಂದೇ ಭಾರತ್ ಸಂಚಾರ: ಶಾಸಕ ಸಿಮೆಂಟ್ ಮಂಜು
