Kodagu
ಖಾಯಂ ಹುದ್ದೆಗಾಗಿ ಅರ್ಜಿ ಆಹ್ವಾನ
ಮಡಿಕೇರಿ : ಭಾರತ ಸರ್ಕಾರದ ಉದ್ಯಮವಾದ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ನಲ್ಲಿ ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಮತ್ತು ಫೌಂಡ್ರಿಮ್ಯಾನ್ ಟ್ರೇಡ್ಗಳಲ್ಲಿ 2 ವರ್ಷ ಐ.ಟಿ.ಐ ತರಬೇತಿ ಪಡೆದ ನಂತರ ಒಂದು ವರ್ಷ ಅಪ್ರೆಂಟಿಶಿಪ್ ತರಬೇತಿ ಪೂರ್ಣಗೊಳಿಸಿ ಸರ್ಟಿಫಿಕೇಟ್ ಪಡೆದಿರುವ ಹಾಗೂ ಒಂದು ವರ್ಷ ಅಪ್ರೆಂಟಿಶಿಪ್ ತರಬೇತಿ ಮಾಡುತ್ತಿರುವ ಐ.ಟಿ.ಐ ವಿದ್ಯಾರ್ಹತೆ ಹೊಂದಿದ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳಿಗೆ ಗ್ರೇಡ್-ಐವಿ ನಲ್ಲಿ ಖಾಯಂ ಹುದ್ದೆಗಾಗಿ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-11-2026. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿಎಚ್ಇಎಲ್ ಸಂಸ್ಥೆಯ ಅಧಿಕೃತ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಉದ್ಯೋಗಾಂಕ್ಷಿಗಳು ಈ ನೇಮಕಾತಿ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ, ಜಿಲ್ಲಾ ಉದ್ಯೋಗಾಧಿಕಾರಿ, ಸಿ.ಬಿ.ಮಂಜುನಾಥ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ. ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 8296020826, 9449692691 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಉದ್ಯೋಗಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.
Kodagu
ಹಾರಂಗಿ ಹಿನ್ನೀರು ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ
ಮಡಿಕೇರಿ : ಕುಶಾಲನಗರ ತಾಲ್ಲೂಕಿನ ಹಾರಂಗಿ ಹಿನ್ನೀರು ಪ್ರದೇಶಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೋಮವಾರ ಭೇಟಿ ನೀಡಿ ವೀಕ್ಷಿಸಿದರು.
ಹಾರಂಗಿ ಹಿನ್ನೀರು ಪ್ರದೇಶದ ಜಲಸಹಾಸ ಕ್ರೀಡೆ ಸಂದರ್ಭದಲ್ಲಿ ಬೋಟ್ ಮುಳುಗಿ ದಂಪತಿಗಳು ಮೃತಪಟ್ಟ ಹಿನ್ನೆಲೆ ಆ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಜಲಸಾಹಸ ಕ್ರೀಡೆ ಸಂದರ್ಭದಲ್ಲಿ ದುರ್ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕಿತ್ತು. ಸದ್ಯ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಜಲಸಹಾಸ ಕ್ರೀಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ೨೦೨೩ ರಿಂದ ಖಾಸಗಿ ಕಂಪೆನಿಯು ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಜಲಸಹಾಸ ಕ್ರೀಡೆ ನಡೆಸುತ್ತಿದ್ದು, ಮೃತಪಟ್ಟ ದಂಪತಿ ಸ್ಪೀಡ್ ಬೋಟ್‌ನಲ್ಲಿ ತೆರಳುತ್ತಿದ್ದರು. ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೋಟ್ ಮಗುಚಿದೆ. ಅಷ್ಟರಲ್ಲಿ ಬೋಟ್‌ನಡಿ ಇಬ್ಬರು ಸಿಲುಕಿ ಮೃತಪಟ್ಟಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ದುಬಾರೆ ರಿವರ್ ರ್‍ಯಾಫ್ಟಿಂಗ್ ಬಳಿ ನಿರ್ಮಾಣವಾಗಿರುವ ಹೈಟೆಕ್ ಶೌಚಾಲಯ ಮಾಹಿತಿ ಪಡೆದರು.
ನಂತರ ಬಸವನಹಳ್ಳಿ ವಸತಿ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಎಸ್‌ಇ ಸತೀಶ್, ಎಇಇ ಪುಟ್ಟಸ್ವಾಮಿ, ತಹಶೀಲ್ದಾರ್ ರಮೇಶ್, ಲೋಕೋಪಯೋಗಿಯ ಕಾರ್ಯಪಾಲಕ ಎಂಜಿನಿಯರ್ ಪ್ರಭು ಇತರರು ಇದ್ದರು.
Kodagu
ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026: ಕನ್ನಡ ಚೈತನ್ಯ ಪುರಸ್ಕಾರ ಸೇರಿ 31 ವಿದ್ಯಾರ್ಥಿಗಳಿಗೆ ಪ್ರಧಾನ
ಪೊನ್ನಂಪೇಟೆ: ಕೊಡವ ಮುಸ್ಲಿಂ ಅಸೋಸಿಯೇಷನ್ ಕೆಎಂಎ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ನೀಡಲಾದ ಕೆಎಂಎ ಶೈಕ್ಷಣಿಕ ಪುರಸ್ಕಾರ-2026 ಅನ್ನು ಒಟ್ಟು ಅರ್ಹ 31 ವಿದ್ಯಾರ್ಥಿಗಳು ಪಡೆದುಕೊಂಡರು. ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಪುರಸ್ಕಾರ ವಿತರಣಾ ಸಮಾರಂಭದಲ್ಲಿ, ಒಟ್ಟು ಏಳು ವಿಭಾಗಗಳಿಂದ ಆಯ್ಕೆಗೊಂಡಿದ್ದ ಈ ವಿದ್ಯಾರ್ಥಿಗಳಿಗೆ ಪ್ರಧಾನ ಮಾಡಲಾಯಿತು.
ಕೊಡಗು ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಓದಿ ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಾಗಿ ಡಿ.ಹೆಚ್. ಸೂಫಿಯವರು ತಮ್ಮ ಪೋಷಕರಾದ ದಿವಂಗತ ಡಿ.ಪಿ. ಹುಸೈನಾರ್ ಹಾಜಿ ಮತ್ತು ಆಮೀನಾ ಅವರ ಸ್ಮರಣಾರ್ಥಕವಾಗಿ ಪ್ರಾಯೋಜಿಸಿರುವ ‘ಕೆಎಂಎ ಕನ್ನಡ ಚೈತನ್ಯ ಪುರಸ್ಕಾರ-2026’ವನ್ನು ಈ ಬಾರಿ ಇಬ್ಬರು ವಿದ್ಯಾರ್ಥಿಗಳು ಪಡೆದುಕೊಂಡರು. ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ಮಾಲ್ದಾರೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಎಸ್. ಕೌಸಲ್ಯ ಮತ್ತು 125ಕ್ಕೆ 123 ಅಂಕಗಳನ್ನು ಪಡೆದ ಹೊದವಾಡದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯಾಗಿದ್ದ ಹೊದವಾಡ ಕೆ.ಎಂ. ಫಾತಿಮತ್ ಸಹ್ಲ ಅವರಿಗೆ ತಲಾ ರೂ. 52 ಸಾವಿರ ಮೊತ್ತದ ಕ್ರೋಮ್ ಬುಕ್ ಲ್ಯಾಪ್ಟಾಪ್ ಅನ್ನು ಕನ್ನಡ ಚೈತನ್ಯ ಪುರಸ್ಕಾರವಾಗಿ ನೀಡಿ ಗೌರವಿಸಲಾಯಿತು.

2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸೋಮವಾರಪೇಟೆ ವಿಶ್ವಮಾನವ ಕುವೆಂಪು ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಶಿವಾನಿ ಶಾರದಾಮಣಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ಸಂತ ಮೈಕಲರ ಪಿ.ಯು. ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಿಂಚನ ಪ್ರಸನ್ನ ಹೆಚ್. ಅವರಿಗೆ ಎನ್.ಸಿ.ಟಿ. ಗ್ರೂಪ್ ಮಾಲೀಕರಾದ ಕೆ.ಎಂ.ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು ಅವರು ತಮ್ಮ ಸಹೋದರ ದಿ. ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿರುವ ‘ಕೆ.ಎಂ.ಎ. ವಿಶೇಷ ಶೈಕ್ಷಣಿಕ ಪುರಸ್ಕಾರ’ವನ್ನು ತಲಾ ಹತ್ತು ಸಾವಿರ ರೂಪಾಯಿ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಂಸನಾ ಪತ್ರದೊಂದಿಗೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಎಂ.ಎ. ಮಹಮ್ಮದ್ ಅವರು ಪ್ರಾಯೋಜಿಸಿರುವ ‘ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ’ವನ್ನು ಎಸ್.ಎಸ್.ಎಲ್.ಸಿ. ವಿಭಾಗದಲ್ಲಿ ಕೊಟ್ಟಮುಡಿಯ ಮರ್ಕಜ್ಹ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಕುಂಜಿಲದ ಪಿ.ಯು. ಜುನೈಸ, ದ್ವಿತೀಯ ಪಿಯುಸಿ ವಿಭಾಗದಲ್ಲಿ ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕುಂಜಿಲದ ಎಂ.ಎಸ್. ಫರೀದಾ (ಶೇ. 98%) ಮತ್ತು ಮೂರ್ನಾಡು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕೆ.ಎಂ. ಜುಹರ (ಶೇ. 95%) ಅವರಿಗೆ ನೀಡಿ ಸನ್ಮಾನಿಸಲಾಯಿತು.
ಉಳಿದಂತೆ ಕೊಡವ ಮುಸ್ಲಿಂ ಅಸೋಸಿಯೇಷನ್ ನ ಸದಸ್ಯರ ಮಕ್ಕಳಿಗೆ 4 ವಿವಿಧ ವಿಭಾಗಗಳಲ್ಲಿ ನೀಡಲಾಗುವ ಕೆಎಂಎ ಶೈಕ್ಷಣಿಕ ಪುರಸ್ಕಾರವನ್ನು ಒಟ್ಟು 24 ಮತ್ತು ಪದವಿ ಪುರಸ್ಕಾರವನ್ನು ಓರ್ವ ಪದವೀಧರೆ ಪಡೆದುಕೊಂಡರು. ಮದರಸಾ ವಿಭಾಗದ 5ನೇ ತರಗತಿಯಲ್ಲಿ ಬೇಗೂರಿನ ಆಲೀರ ಫಾತಿಮಾ ನಜ (ಪ್ರಥಮ), 7ನೇ ತರಗತಿಯಲ್ಲಿ ಹೊದವಾಡದ ಪೊಟ್ಟಂಡ ಎಂ. ಫಾತಿಮತ್ ಶೈಮ (ಪ್ರಥಮ), ಗುಂಡಿಕೆರೆಯ ಮಂಡೇಂಡ ಹೆಚ್. ಫಾತಿಮತ್ ರಿಫಾ (ದ್ವಿತೀಯ), ಎಡಪಾಲದ ಕುಪ್ಪೋಡಂಡ ಕೆ. ಶೈಬ (ತೃತೀಯ), 10ನೇ ತರಗತಿಯಲ್ಲಿ ಕೊಳಕೇರಿಯ ಚೆರುಮಾನಿಕಾರಂಡ ಎ. ರಿನ್ಶಾ ಫಾತಿಮ (ಪ್ರಥಮ), ಹೊದವಾಡದ ಹರಿಶ್ಚಂದ್ರ ಹೆಚ್. ಆಫ್ನ (ದ್ವಿತೀಯ) ಕಾಟ್ರಕೊಲ್ಲಿಯ ಆಲೀರ ಯು. ಶಿಫ್ನ (ತೃತೀಯ) ಪುರಸ್ಕಾರ ಸ್ವೀಕರಿಸಿದರು. ಎಸ್. ಎಸ್. ಎಲ್. ಸಿ. ವಿಭಾಗದಲ್ಲಿ ಕೋಕೇರಿಯ ಕಿಕ್ಕರೆ ಎ. ಶೈಮಾ (ಪ್ರಥಮ), ಕೊಂಡಂಗೇರಿಯ ಪುಡಿಯಂಡ ಎಸ್. ಫಾತಿಮತ್ ಫಾಹಿಲ (ದ್ವಿತೀಯ), ಬೇಗೂರಿನ ಪೂಳುಮಾಡಂಡ ಯು. ಮೊಹಮ್ಮದ್ ಫರ್ಹನ್ (ತೃತೀಯ) ಸ್ಥಾನ ಪಡೆದರೆ, ಹೊದವಾಡದ ಹರಿಶ್ಚಂದ್ರ ಹೆಚ್. ಆಫ್ನ ಮತ್ತು ಗುಂಡಿಕೆರೆಯ ಮಿತಲ್ತಂಡ ಎಸ್. ಫಾತಿಮತ್ ಫಿಧಾ ಸಮಾಧಾನಕರ ಸ್ಥಾನದಲ್ಲಿ ಪುರಸ್ಕಾರ ಗಳಿಸಿದರು.
ದ್ವಿತೀಯ ಪಿಯುಸಿ ವಿಭಾಗದಲ್ಲಿ ಪೊನ್ನಂಪೇಟೆಯ ಆಲೀರ ಆರ್. ಫಾತಿಮತ್ ತಸ್ಫೀಯ (ಪ್ರಥಮ), ಕಾಟ್ರಕೊಲ್ಲಿಯ ಆಲೀರ ಎ. ಮೊಹಮ್ಮದ್ ನಹಿಮ್ (ದ್ವಿತೀಯ), ಪೊನ್ನಂಪೇಟೆಯ ಆಲೀರ ಮುಹಮ್ಮದ್ ಆದಿಲ್ (ತೃತೀಯ) ಸ್ಥಾನ ಗಳಿಸಿದರೆ ಇನ್ನುಳಿದಂತೆ ಹಳ್ಳಿಗಟ್ಟಿನ ಕೂತಂಬಟ್ಟೀರ ಎ. ಇರ್ಫಾನ್, ಗುಂಡಿಕೆರೆಯ ಮೀತಲ್ತಂಡ ಐ. ಸಮ್ನತ್, ಕೊಂಡಂಗೇರಿಯ ಕುಪ್ಪಂದಿರ ಅಸ್ನ ಫಾತಿಮ, ಚೆರಿಯಪರಂಬುವಿನ ಕೂವಲೇರ ಹೆಚ್. ಅಪ್ಲ, ಕೊಳಕೇರಿಯ ಚೆರುಮಾನಿಕಾರಂಡ ಎ. ರಿಫಾನ ಫಾತಿಮ, ಗುಂಡಿಕೆರೆಯ ಮಂಡೇಂಡ ಎಂ. ಮೊಹಮ್ಮದ್ ಮುಶ್ರಫ್, ಐಮಂಗಲದ ಮೀತಲ್ತಂಡ ಎಸ್. ಶೊಯಿಬಾ ಮತ್ತು ವಿರಾಜಪೇಟೆಯ ಪುಡಿಯಂಡ ಎಂ. ರಿಧಾ ಫಾತಿಮಾ ಕ್ರಮವಾಗಿ ಸಮಾಧಾನಕರ ಸ್ಥಾನದಲ್ಲಿ ಪುರಸ್ಕಾರ ಸ್ವೀಕರಿಸಿದರು. ಅಲ್ಲದೆ 2025ನೇ ಸಾಲಿನಲ್ಲಿ ಬಿ.ಕಾಂ. ಪದವೀಧರೆಯಾದ ನಲ್ವತ್ತೋಕ್ಲುವಿನ ಪಟ್ಟಿಯೊಡ ಹೆಚ್. ಶಮ್ಲ ಅವರು ಇದೇ ಸಂದರ್ಭದಲ್ಲಿ ಕೆಎಂಎ ಪದವಿ ಪುರಸ್ಕಾರ-2026 ರನ್ನು ಪಡೆದರು.
Kodagu
ಕರಾಟೆಯಲ್ಲಿ ಅದ್ವೈತ್‌ಗೆ ದ್ವಿತೀಯ ಸ್ಥಾನ
ಮಡಿಕೇರಿ: ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ವೆಲ್ಲೂರಿನಲ್ಲಿ ಜೆಎಸ್‌ಕೆಎ(ಜಪಾನ್ ಶೋಟೋಕನ್ ಕರಾಟೆ ಅಸೋಸಿಯೇಷನ್) ವತಿಯಿಂದ ಇತ್ತೀಚೆಗೆ ನಡೆದ ಅಂತರರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕೊಡಗಿನ ಪೊನ್ನಂಪೇಟೆಯ ಸಂತ ಆಂತೋಣಿ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಎಂ.ಎಲ್.ಅದ್ವೈತ್ ೧೧ರಿಂದ ೧೩ರ ವಯೋಮಾನದೊಳಗಿನ ಕುಮಿತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾನೆ.

ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದ ಮರಾಟಿ.ಎಸ್.ಲತಕುಮಾರ್ ಮತ್ತು ಎನ್.ಕೆ.ಸುಶೀಲಾ ಅವರ ಪುತ್ರನಾಗಿದ್ದು, ಸೆನ್ಸಾಯಿ ಬಿ.ಎಸ್.ಸಂತೋಷ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ದ್ವಿತೀಯ ಸ್ಥಾನಗಳಿಸಿದ ಅದ್ವೈತ್ ಅವರ ಭವಿಷ್ಯ ಉಜ್ವಲವಾಗಲಿ ಎಂದು ಪೋಷಕರು, ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸೆವರೀನ್ ಡಿಸೋಜಾ ಹಾಗೂ ಶಿಕ್ಷಕರು ಹಾರೈಸಿದ್ದಾರೆ.
-ಎಂ.ಎಲ್.ಅದ್ವೈತ್
-
Kodagu22 hours agoಕೊಡಗು ಮುಸ್ಲಿಂ ಅಸೋಸಿಯೇಷನ್ ಸಂಘಟನೆ ಅಸ್ತಿತ್ವಕ್ಕೆ – ನೂತನ ಪದಾಧಿಕಾರಿಗಳ ಆಯ್ಕೆ
-
Special24 hours agoರಾಮಾಯಣ ಭಾಗ 1ರ ಬಜೆಟ್ ₹800 ಕೋಟಿಗೂ ಕಡಿಮೆ: ರಾಮ್ ಗೋಪಾಲ್ ವರ್ಮಾ
-
State5 hours agoಕರ್ನಾಟಕ ವಾಯು ಗುಣಮಟ್ಟ ವರದಿ:ಕೊಡಗಿನಲ್ಲಿ ಅತ್ಯುತ್ತಮ ಶುದ್ಧಗಾಳಿ
-
Hassan8 hours agoಬೇಲೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬ*ಲಿ: ಕಾಫಿ ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕ ಸಾ*ವು
-
State6 hours agoಮೂರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
-
Kodagu57 minutes agoಕರಾಟೆಯಲ್ಲಿ ಅದ್ವೈತ್‌ಗೆ ದ್ವಿತೀಯ ಸ್ಥಾನ
-
Chikmagalur1 hour agoದೇವಿರಮ್ಮ ಬೆಟ್ಟದಲ್ಲಿ ಗಾಯಗೊಂಡ ಯುವಕನಿಗೆ 5 ಲಕ್ಷ ಪರಿಹಾರಕ್ಕೆ ಆಗ್ರಹ
-
Chamarajanagar21 hours agoಚಿರತೆ ದಾಳಿಗೆ ಹಸು ಬ*ಲಿ: ಮೂರು ಹಸುಗಳು ಪಾರು!
