Hassan
ಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
ಹಾಸನ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು, ತತ್ತ್ವಗಳು ಮತ್ತು ಕೊಡುಗೆಗಳನ್ನು ಎಷ್ಟು ಹೇಳಿದರೂ ಸಾಲದು. ವರ್ಷದಲ್ಲಿ 365 ದಿನವೂ ಅವರು ಬಗ್ಗೆ ಮಾತನಾಡಿದರೂ ಅವರ ಮಹತ್ವ ಮುಗಿಯುವುದಿಲ್ಲ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಭಾವುಕರಾಗಿ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೯ನೇ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಸಂಸದರು ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಸಲ್ಲಿಸಿದ ನಂತರ ಮಾತನಾಡಿ, ಸಂವಿಧಾನದ ಶಿಲ್ಪಿ, ಸಮಾನತೆಯ ಶಿಲ್ಪಿ, ಸಾಮಾಜಿಕ ನ್ಯಾಯದ ಹೋರಾಟಗಾರರಾದ ಡಾ. ಅಂಬೇಡ್ಕರ್ ನಮ್ಮನ್ನು ಸ್ವತಂತ್ರವಾಗಿ, ಮಾನವೀಯವಾಗಿ ಬದುಕುವ ದಾರಿ ತೋರಿಸಿದರು.

ಇಂದು ಜನರು ಹಕ್ಕು, ಸ್ವಾತಂತ್ರ್ಯಗಳೊಂದಿಗೆ ನೆಮ್ಮದಿಯಿಂದ ಬದುಕುತ್ತಿರುವುದು ಅವರ ನೀಡಿದ ಸಂವಿಧಾನದ ಬಲ ಎಂದು ಹೇಳಿದರು. ನಾವು ಎಲ್ಲರೂ ಮೊದಲು ಸಂವಿಧಾನವನ್ನು ತಿಳಿದುಕೊಳ್ಳುವುದು ಜವಾಬ್ದಾರಿ. ಅಂಬೇಡ್ಕರ್ ಅವರ ಆದರ್ಶಗಳು ನಮ್ಮನ್ನು ಇನ್ನಷ್ಟು ಪ್ರಗತಿಪರ ಸಮಾಜದತ್ತ ಕರೆದೊಯ್ಯುತ್ತವೆ. ಇಂತಹ ಲಕ್ಷ ಮಂದಿ ಅಂಬೇಡ್ಕರ್‌ಗಳು ಹುಟ್ಟಿ ಬರಲಿ ಎನ್ನುವುದು ನಮ್ಮ ಸಂಕಲ್ಪವಾಗಬೇಕು ಎಂದು ಸಂಸದ ಶ್ರೇಯಸ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಅಂಬೇಡ್ಕರ್ ರವರು ನಮ್ಮ ದೇಶದಲ್ಲಿ ಜನಿಸಿದ್ದು, ಅದರಲ್ಲಿ ಪರಿನಿರ್ವಾಣ ದಿನ ಕೂಡ ಒಂದಾಗಿದೆ. ಅಂಬೇಡ್ಕರ್ ನಮ್ಮ ದೇಶಕ್ಕೆ ದೊರೆತ ಅಪರೂಪದ ವರ. ಅವರ ಪರಿನಿರ್ವಾಣದ ದಿನವನ್ನು ನೆನಪಿಸಿಕೊಂಡಾಗ ನೋವುಂಟಾಗುತ್ತದೆ. ಇನ್ನೂ ಕೆಲವು ವರ್ಷಗಳು ದೇಶಕ್ಕೆ ಅವರು ಅಗತ್ಯವಿದ್ದರು. ಇಂದು ನಾವು ಅನುಭವಿಸುವ ಸಮಾನತೆ, ಹಕ್ಕುಗಳು ಅವರ ಕೊಡುಗೆ ಎಂದು ಭಾವುಕರಾದರು.
ಅಂಬೇಡ್ಕರ್ ನೀಡಿದ ಮೌಲ್ಯಗಳು ಮತ್ತು ಸಂವಿಧಾನದ ಜೀವಾಳ ಪ್ರಜಾಪ್ರಭುತ್ವದ ನೆಲೆ. ಅವರ ಆದರ್ಶಗಳನ್ನು ಉಳಿಸುವುದು, ಅನುಸರಿಸುವುದು ಮತ್ತು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯ ಎಂದು ಅವರು ತಿಳಿಸಿದರು.
ಇದೆ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ದಲಿತ ಸಮಾಜದ ಹಿರಿಯ ಮುಖಂಡರಾದ ಹೆಚ್.ಕೆ. ಸಂದೇಶ್, ಕೃಷ್ಣದಾಸ್, ಅಂಬೂಗ ಮಲ್ಲೇಶ್, ಪ್ರಕಾಶ್, ಶಿವಮ್ಮ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Hassan
ದೆಹಲಿ ನೋಟಿಸ್, ಕಾರ್ಟಿಯರ್ ವಾಚ್ ವಿವಾದದ ಬಗ್ಗೆ ಆತ್ಮವಿಶ್ವಾಸದ ನಿಲುವು ಘೋಷಿಸಿದ ಡಿಸಿಎಂ ಡಿಕೆಶಿ
ಹಾಸನ: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯವಿರಲಿಲ್ಲ. ನಮಗೆ ಕಿರುಕುಳ ನೀಡಲು ಈ ಸಮನ್ಸ್ ನೀಡಲಾಗಿದೆ. ಇದು ಸರಿಯಲ್ಲ, ನಾನು ಖಂಡಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಭಾಗದ ದೆಹಲಿ ಪೊಲೀಸರು ಸಮನ್ಸ್ ನೀಡಿರುವ ಬಗ್ಗೆ ಕೇಳಿದಾಗ, “ಇದು ನಮಗೆ ಆಘಾತ ತಂದಿದೆ. ನನಗೆ ಹಾಗೂ ಸಹೋದರ ಸುರೇಶ್ ಅವರಿಗೆ ನೋಟೀಸ್ ನೀಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಹಿಂದೆ ಇಡಿ ನಮಗೆ ಸಮನ್ಸ್ ನೀಡಿತ್ತು ಎಂದರು.

ನಾವು ಮೊದಲಿನಿಂದಲೂ ಇಡಿ ತನಿಖೆಗೆ ಸಹಕಾರ ನೀಡಿ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ಇದು ನಮ್ಮ ಪಕ್ಷದ ಸಂಸ್ಥೆ, ಕಾಂಗ್ರೆಸಿಗರಾಗಿ ಆ ಸಂಸ್ಥೆಗೆ ಬೆಂಬಲ ನೀಡಲು ದೇಣಿಗೆ ನೀಡುವುದರಲ್ಲಿ ತಪ್ಪಿಲ್ಲ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಈ ಸಂಸ್ಥೆ ಕಷ್ಟಕಾಲದಲ್ಲಿದ್ದಾಗ ನಮ್ಮ ಟ್ರಸ್ಟ್ ಗಳಿಂದ ನೆರವು ನೀಡಿದ್ದು, ನನ್ನಂತೆ ಅನೇಕರು ದೇಣಿಗೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಇಡಿ ಚಾರ್ಜ್ ಶೀಟ್ ಹಾಕಿದ್ದು, ಅದರಲ್ಲಿ ನಮ್ಮ ಹೆಸರನ್ನು ಸೇರಿಸಿರಲಿಲ್ಲ. ನಮ್ಮ ಬಳಿ ಹೇಳಿಕೆ ಪಡೆದು, ಬಿಟ್ಟಿದ್ದರು. ಹೀಗಿರುವಾಗ ದೆಹಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ. ನಮ್ಮ ಎಲ್ಲಾ ವ್ಯವಹಾರ ಪಾರದರ್ಶಕವಾಗಿದೆ. ನಾವು ನ್ಯಾಯಲಯದಲ್ಲಿ ಹೋರಾಟ ಮುಂದುವರೆಸುತ್ತೇವೆ. ನಾವು ಸರಿಯಾಗಿ ತೆರಿಗೆ ಕಟ್ಟಿದ್ದು, ನಮ್ಮ ಹಣವನ್ನು ನಾವು ಇಷ್ಟಪಡುವ ಯಾರಿಗೆ ಬೇಕಾದರೂ ನೀಡಬಹುದು” ಎಂದು ಹೇಳಿದರು.

ನನ್ನ ವಿರುದ್ಧ ಪಿಎಎಲ್ಎ ಪ್ರಕರಣ ದಾಖಲಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು. ಇಷ್ಟಾದ ಮೇಲೂ ಯಾವ ಕಾರಣಕ್ಕೆ ಸಮನ್ಸ್ ನೀಡಿದ್ದಾರೆ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ ನೀಡುವುದು, ಗೊಂದಲ ಮೂಡಿಸುವುದು ಇದರ ಉದ್ದೇಶ ” ಎಂದು ತಿಳಿಸಿದರು.
ನನ್ನನ್ನು ಬೆದರಿಸುವ ಪ್ರಯತ್ನ ಮಾಡಿದರೆ, ನಾನು ಬಗ್ಗುವುದಿಲ್ಲ
“ನನಗೆ ಶುಕ್ರವಾರ ನೋಟೀಸ್ ಸಿಕ್ಕಿದ್ದು, ಇದನ್ನು ವಕೀಲರ ಜತೆ ಚರ್ಚೆ ಮಾಡುತ್ತೇನೆ. ನನ್ನ ಸಹೋದರ ಕೂಡ ಸಂಸದನಾಗಿದ್ದಾಗ ಈ ಸಂಸ್ಥೆಗೆ ದೇಣಿಗೆ ನೀಡಿದ್ದ. ದೆಹಲಿ ಪೊಲೀಸರು ಡಿ.19 ರ ಒಳಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ನಾನು ಸಮಯ ನೋಡಿಕೊಂಡು ಒಂದು ದಿನ ಹೋಗಿ, ಅವರ ನೋಟೀಸ್ ಗೆ ಯಾವ ರೀತಿ ಉತ್ತರ ನೀಡಬೇಕೋ ನೀಡುತ್ತೇನೆ. ಅವರು ನನ್ನನ್ನು ಬೆದರಿಸುವ ಪ್ರಯತ್ನ ಮಾಡಿದರೆ ನಾನು ಬಗ್ಗುವುದಿಲ್ಲ” ಎಂದು ಹೇಳಿದರು
Hassan
ಕ್ರೀಡೆಯು ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು : ಡಾ. ಅಕ್ಷಯ್ ಎಸ್. ಗೌಡ.
ಹಾಸನ: ಕ್ರೀಡೆಯು ಕೇವಲ ಮನರಂಜನೆಗೋ ಅಥವಾ ಆರೋಗ್ಯ ವರ್ಧನೆಗೂ ಮಾತ್ರವಲ್ಲ. ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತಮ್ಮಿಷ್ಟದ ಹೊರಾಂಗಣದ ಆಟವೊಂದನ್ನು ಅಳವಡಿಸಿಕೊಂಡರೆ, ಅದು ಅವರ ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು ಎಂದು ಚನ್ನರಾಯಪಟ್ಟಣದ ಆಯುರ್ವೇದ ತಜ್ಞ ವೈದ್ಯ ಡಾ. ಅಕ್ಷಯ್ ಎಸ್. ಗೌಡ ತಿಳಿಸಿದರು.

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್ ನಲ್ಲಿ ನಡೆದ ವಾರ್ಷಿಕ ಕ್ರೀಡಾ ಸ್ಪರ್ಧೆಗಳ “ ಕ್ರೀಡಾ ತರಂಗ-2025 ಉದ್ಘಾಟಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಯುವಜನರು ಅನಾರೋಗ್ಯಕರ ಆಹಾರ, ದುಶ್ಚಟಗಳು, ಮೊಬೈಲ್ ದುರ್ಬಳಕೆಯಿಂದ ತಮ್ಮ ಅರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ನಿತ್ಯವೂ ನಡಿಗೆ, ಲಘುವ್ಯಾಯಾಮ, ಆಟ, ಯೋಗದಂತಹ ಕ್ರಿಯೆಗಳು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಲೇಬೇಕಿದೆ. ಆಯುರ್ವೇದದ ಚಿಕಿತ್ಸೆಗಳು ಕ್ರೀಡಾಳುಗಳ ಆರೋಗ್ಯದ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದ್ದು, ಈವರೆಗೂ 1000 ಕ್ಕೂ ಹೆಚ್ಚು ಕ್ರೀಡಾಪಟುಗಳ ವಿವಿಧ ನೋವಿನ ಸಮಸ್ಯೆಗಳನ್ನು ಆಯುರ್ವೇದ ಚಿಕಿತ್ಸಾ ಕ್ರಮಗಳ ಮೂಲಕವೇ ಚಿಕಿತ್ಸೆ ನೀಡಿರುವುದನ್ನು ನೆನೆಸಿಕೊಂಡರು. ತಾವು ವ್ಯಕ್ತಿಯಲ್ಲಿ ವೈದ್ಯರಾದರೂ ತಮ್ಮಲ್ಲಿ ಇಂದಿಗೂ ಕಡಾ ಆಸಕ್ತಿ ಇರಲು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ ಒಂದು ಬಲವಾದ ಕಾರಣ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಶೈಲಜಾ.ಉಪ್ಪಿನಕುದುರು ಅವರು ಮಾತನಾಡಿ, ಇತರ ವೃತ್ತಿಗಳಂತೆ ಆರೋಗ್ಯ ಕ್ಷೇತ್ರದ ವೃತ್ತಿಗಳಲ್ಲೂ ಒತ್ತಡ ಇರುತ್ತದೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಯನ್ನು ನಮ್ಮ ದಿನಚರಿಯ ಭಾಗವಾಗಿಸಬೇಕು ಎಂದರು. ಎಸ್.ಡಿ.ಎಂ.ಅಯುರ್ವೇದ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಪ್ರಸನ್ನ ನರಸಿಂಹ ರಾವ್ ಅವರು ಮಾತನಾಡಿ ಎಲ್ಲ ಕ್ರೀಡಾಳುಗಳಿಗೆ ಶುಭಹಾರೈಸಿದರು.
ಆ ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮುರಲೀಧರ್.ಪಿ.ಪೂಜಾರ್, ಉಪಪ್ರಾಂಶುಪಾಲರಾದ ಡಾ.ಅಶ್ವಿನಿಕುಮಾರ್.ಎಂ ಮತ್ತು ಡಾ.ಪ್ರಕಾಶ್. ಎಲ್. ಹೆಗಡೆ ಹಾಗು ದೈಹಿಕ ನಿರ್ದೇಶಕ ಶ್ರೀ ಗಣೇಶ್ ಉಪಸ್ಥಿತರಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು.
Hassan
ನಾವು ತೆರೆದ ಪುಸ್ತಕ ಎಲ್ಲವನ್ನೂ ಎದುರಿಸೋದಕ್ಕೆ ಸಿದ್ಧರಿದ್ದೇವೆ: ಸಿಎಂ ಸಿದ್ದರಾಮಯ್ಯ
ಹಾಸನ: ಅಹಿಂದ ಸಂಘಟನೆ ಮಾಡಿದ್ದು ನಾನು, ಭಾಗ್ಯಗಳು, ಗ್ಯಾರೆಂಟಿ ಯೋಜನೆಗಳನ್ನು ಮಾಡಿರೋದು ಯಾರಿಗೆ, ಬಡವರಿಗೆ ದಲಿತರಿಗೆ ಹಿಂದುಳಿದವರಿಗೆ ಇದು ಅಹಿಂದಕ್ಕಾಗಿ ಅಲ್ವಾ? ಅಹಿಂದಕ್ಕೆ ಅವರದ್ದೇನು ಕೊಡುಗೆ? ರೈತರ ಮಗನ ಮಗ ಮಗ ಅಷ್ಟೇ ಅಲ್ವಾ? ಮೇಕೆದಾಟಿಗೆ ಒಪ್ಪಿಗೆ ಕೊಡೊಸೋಕೆ ಅವರಿಗೆ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ಕಡಿಮೆ ಮಾಡಿದ್ದಕ್ಕೆ ನಮಗೆ ನಷ್ಟ ಎಷ್ಟು ಗೊತ್ತಾ? ಜಿಎಸ್‌ಟಿ ತಂದಿದ್ದು ನರೇಂದ್ರ ಮೋದಿಯವರು, ಮಧ್ಯದಲ್ಲಿ ಅದನ್ನು ಕಡಿಮೆ ಮಾಡಿದ್ದಾರೆ. ಶೇ.12% ಗ್ರೋತ್ ಇತ್ತು, ಈಗ 3% ಗೆ ಬಂದಿದೆ, ಇದನ್ನೆಲ್ಲಾ ನೀವು ಕೇಳೋದೆ ಇಲ್ಲ. ಭದ್ರ ಮೇಲ್ದಂಡೆ ಯೋಜನೆಗೆ ಮಿಸಸ್ ನಿರ್ಮಲಾ ಸೀತಾರಾಮನ್ ಹೇಳಿದ್ಲು, ಏಕವಚನದಲ್ಲೇ ಸಿಎಂ ವಾಗ್ದಾಳಿ ನಡೆಸಿದ್ದಾರೆ.

ಬಜೆಟ್ ನಲ್ಲೂ ಅದು ಪಾಸ್ ಆಗಿದೆ, ಇದರಬಗ್ಗೆ ಮೇಕೆದಾಟು ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರಾ? ನಮ್ಮ ನೆರವಿಗೆ ಬಂದಿದ್ದು ನ್ಯಾಯಾಲಯ. ಕಾವೇರಿ ಅಥಾರಿಟಿಯಲ್ಲಿ ಇವತ್ತಿನವರೆಗೆ ಪಾಸ್ ಮಾಡೋದಕ್ಕೆ ಆಗಿಲ್ಲ. ಇದು ಯಾರಿಗೆ ಅನ್ಯಾಯ ಇದು ಮಂಡ್ಯಕ್ಕೆ ಅನ್ಯಾಯ ಅಲ್ವಾ? ಜಿಎಸ್‌ಟಿನಲ್ಲಿ12 ಸಾವಿರ ಕೋಟಿ ನಷ್ಟ ಆಗಬಹುದು ಎಂಬ ನಿರೀಕ್ಷೆ ಇದೆ. 88 ಸಾವಿರ ಕೋಟಿ ತಲುಪೋದು ಕೂಡ ಕಷ್ಟ ಆಗುತ್ತಿದೆ ಎಂದರು.
ಸಿದ್ದರಾಮಯ್ಯ ಅಹಿಂದಾಕ್ಕೆ ಏನು ಮಾಡಿದ್ದರು.. ಇದನ್ನೆಲ್ಲಾ ಯಾರು ಮಾಡಿರೋದು, ಇದರ ಬಗ್ಗೆ ಯಾವತ್ತಾದ್ರೂ ಪಾರ್ಲಿಮೆಂಟ್‌ನಲ್ಲಿ ಮಾತಾನಾಡಿದ್ದಾರಾ? ನಾವು ಗ್ಯಾರೆಂಟಿಗಾಗಿ ಲಕ್ಷ ಕೋಟಿ ಹಣ ನೀಡಿದ್ದೇವೆ. ಬೇಕಿದ್ದರೆ ವೆರಿಫಿಕೇಷನ್ ಮಾಡಲಿ, ಮೋದಿ ಈ ಯೋಜನೆಯನ್ನು ನೀಡೋದಕ್ಕೆ ಆಗೊಲ್ಲ ಎಂದು ಹೇಳಿದರು.

ಕರ್ನಾಟಕ ಆರ್ಥಿಕ ದಿವಾಳಿ ಆಗುತ್ತದೆ ಎಂದು ಹೇಳಿದ್ದರು. ಈಗ ನಾವು ಕೊಟ್ಟಿಲ್ವಾ ಎಂದ ಸಿಎಂ, ಯಾವ ಅವುಶ್ವಾಸವಾದರೂ ತರಲಿ ಏನಾದರೂ ತರಲಿ. ನಾವು ಎದುರೊಸೋದಕ್ಕೆ ತಯಾರಾಗಿದ್ದೇವೆ ಎಂದು ತಿಳಿಸಿದರು.
-
State11 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
State23 hours agoSSLC ಪಾಸ್ ಆದವರಿಗೆ ಸರ್ಕಾರಿ ನೌಕರಿ ಚಾನ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ…
-
Hassan7 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
National24 hours agoಪಲಾಶ್ ಮುಚ್ಚಲ್ರೊಂದಿಗೆ ಮದುವೆ ಮುಂದೂಡಿದ ನಂತರ ಮೊದಲ ಪೋಸ್ಟ್ ಹಂಚಿಕೆಕೊಂಡ ಸ್ಮೃತಿ ಮಂದಾನ
-
Chikmagalur13 hours agoಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
-
Politics23 hours agoಡಿಕೆ ಬ್ರದರ್ಸ್ಗೆ ನೋಟಿಸ್ ಜಾರಿ ಮಾಡಿದ ದೆಹಲಿ ಪೊಲೀಸರು
-
Mysore11 hours agoಡ್ರೋನ್ ಕ್ಯಾಮರದ ರೆಕ್ಕೆ ತಗಲಿ ಶಾಸಕ ಅನಿಲ್ ಚಿಕ್ಕಮಾದು ಮುಖಕ್ಕೆ ಗಾಯ
-
Mysore5 hours agoಡಿ.14ರಂದು ‘ಮೈಸೂರು ಭವಿಷ್ಯದ ಅಭಿವೃದ್ಧಿ’ ಸಾರ್ವಜನಿಕ ಸಂವಾದ
