Chamarajanagar
ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿನಿಯರಿಂದ ಸಿಎಂಗೆ ಪತ್ರ
ಚಾಮರಾಜನಗರ: ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಶಾಲಾ ವಿಧ್ಯಾರ್ಥಿನಿಯರು ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಗೆ ಪತ್ರ ಬರೆದಿದ್ದಾರೆ.
ಪ್ರತಿನಿತ್ಯ 7 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಿಂದ ಶಾಲೆಗೆ ತೆರಳುವ ಗತಿ ಎದುರಿಸುತ್ತಿದ್ದಾರೆ.
ಕಾಡುಪ್ರಾಣಿಗಳಾದ ಹುಲಿ, ಕಾಡಾನೇ, ಚಿರತೆಗಳ ಸಂಚಾರ ಹೆಚ್ಚಿರುವ ಪ್ರದೇಶವಾಗಿರುವುದರಿಂದ, ಮಕ್ಕಳು ಪ್ರತಿದಿನ ಜೀವ ಭಯದ ನಡುವೆಯೇ ಶಾಲೆಗೆ ತೆರಳುತ್ತಿದ್ದಾರೆ.
ರಸ್ತೆ ಹಾಳಾಗಿದೆ – ಬಸ್ ವ್ಯವಸ್ಥೆ ಇಲ್ಲಗ್ರಾಮದ ರಸ್ತೆ ವ್ಯವಸ್ಥೆ ಹಾಳಾಗಿರುವುದರಿಂದ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ಬಸ್ ಸಂಚಾರ ಆರಂಭಿಸಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂಬ ಆರೋಪ ಪೋಷಕರಿಂದ ಕೇಳಿಬರುತ್ತಿದೆ.

ಜೀಪ್ ಸೇವೆ ನಿಂತು ಸಂಕಷ್ಟ ಹೆಚ್ಚಳ: ಹಿಂದೆ ಅರಣ್ಯ ಇಲಾಖೆ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಜೀಪ್ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಈಗ ಆ ಜೀಪ್ ಸಂಚಾರವನ್ನು ನಿಲ್ಲಿಸಲಾಗಿದೆ. ಇದರಿಂದ ಮಕ್ಕಳು ಮತ್ತೆ ಕಾಡಿನ ಮೂಲಕವೇ ನಡೆದು ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ: ಬದುಕಿಗೆ ಭಯವಾಗಿರುವ ಪರಿಸ್ಥಿತಿಯಲ್ಲಿ ಸಂಚಾರ ಮಾಡುತ್ತಿರುವ ಮಕ್ಕಳು ಮತ್ತು ಪೋಷಕರು ಸಮಸ್ಯೆಯನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ರಸ್ತೆ ದುರಸ್ತಿ ಹಾಗೂ ಬಸ್ ವ್ಯವಸ್ಥೆಯನ್ನು ತಕ್ಷಣ ಪುನರಾರಂಭ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Chamarajanagar
ಕಠಿಣ ಶ್ರಮದಿಂದ ಗೆಲುವು ಖಚಿತ: ಡಾ. ಶಾಂತರಾಜು
ಚಾಮರಾಜನಗರ: ಕಠಿಣ ಪರಿಶ್ರಮದಿಂದ ಕ್ರೀಡೆಯನ್ನು ಅಭ್ಯಾಸ ಮಾಡಿದರೆ ಗೆಲುವು ಖಚಿತವಾಗಲಿದೆ ಎಂದು ಚಾ.ನಗರ ವಿವಿ ದೈಹಿಕ ಶಿಕ್ಷಣದ ನಿರ್ದೇಶಕ ಡಾ.ಶಾಂತರಾಜು ಸಲಹೆ ನೀಡಿದರು.
ಚಾ.ನಗರ ವಿವಿಯ ಆವರಣದಲ್ಲಿ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಮಾತನಾಡಿದರು. ಡಿ.10 ರಿಂದ 14 ರ ವರೆಗೆ ಆಂಧ್ರಪ್ರದೇಶದಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯದ ತಂಡವು ಭಾಗವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಯ ಹಣಕಾಸು ಅಧಿಕಾರಿ ನಾಗೇಶ್ ಮಾತನಾಡಿ ಕ್ರೀಡಾಪಟುಯಲ್ಲಿ ಸೋಲು ಗೆಲುವು ಸಹಜ ಆದರೆ ಭಾಗವಹಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಂಡದ ತರಬೇತುದಾರ ಜಯಶಂಕರ್, ಪುಟ್ಟರಾಜು, ತಂಡದ ಮ್ಯಾನೇಜರ್ ಡಾ.ಶಂಕರ್, ಕ್ರೀಡಾ ಸಲಹಾ ಸಮಿತಿ ಸದಸ್ಯ ಜಿ ಬಂಗಾರು, ತಂಡದ ನಾಯಕ ಕಿರಣ್, ಕ್ರೀಡಾ ವಿದ್ಯಾರ್ಥಿಗಳಾದ ರಾಹುಲ್, ಅಭಿ, ವಿಕಾಸ್, ಯಶವಂತ್ ನಾಯಕ್, ಕಾರ್ತಿಕ್ ಯಶವಂತ್, ಮಹದೇವಪ್ರಸಾದ್, ಸಿದ್ದರಾಜು, ಸಂಜಯ್, ಪ್ರವೀಣ್ ಇತರ ವಿದ್ಯಾರ್ಥಿಗಳು ಹಾಜರಿದ್ದರು.
Chamarajanagar
ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯಲ್ಲಿ ಅಂಬೇಡ್ಕರ್ ರವರ 69 ನೇ ಪರಿನಿರ್ವಾಣ ದಿನ
ಚಾಮರಾಜನಗರ: ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಇತ್ತೀಚೆಗೆ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿದೆ. ಅಂಬೇಡ್ಕರ್ ಅವರನ್ನು ದೇಶದ ಮೂಲೆ ಮೂಲೆಗಳಲ್ಲಿ ನೆನೆಯುತ್ತಾರೆ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ಮಾದಯ್ಯ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ 69 ನೇ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದ ಮುಂದೆ ಕ್ಯಾಂಡಲ್ ಬೆಳಗಿಸಿ ನಮನ ಸಲ್ಲಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರಿಗೂ ನ್ಯಾಯವನ್ನು ಒದಗಿಸಿ ಕೊಟ್ಟಿದ್ದಾರೆ. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಅರಿತರೆ ಉತ್ತಮ ವಿದ್ಯಾಥಿಯಾಗಬಹುದು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರುದ್ರಮೂರ್ತಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರತ್ನಮ್ಮ, ದೈಹಿಕ ಶಿಕ್ಷಕ ರಂಗಸ್ವಾಮಿ, ಕುಮಾರ್ ಯಶ್ ಪಾಲ್, ಪರಶಿವಮೂರ್ತಿ ಮಂಜುಳ ಹಾಗೂ ಇತರರು ಉಪಸ್ಥಿತರಿದ್ದರು.
Chamarajanagar
ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ :ದೇವಸ್ಥಾನದ ಅರ್ಚಕರು,ಹಿಂದಿ ಪಂಡಿತರಾದ ಶ್ರೀನಿವಾಸ ಮೂರ್ತಿ ರವರಿಗೆ ಸನ್ಮಾನ
ವರದಿ : ಸುನೀಲ್ ಪ್ರಶಾಂತ್
ಕೊಳ್ಳೇಗಾಲ:ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಶಾಖೆಯ ಮೊದಲ ವರ್ಷದ ವಾರ್ಷಿಕೋತ್ಸವದಲ್ಲಿ ಹಿಂದಿ ಪಂಡಿತರಾದ ಶ್ರೀನಿವಾಸ ಮೂರ್ತಿ ರವರಿಗೆ ಸನ್ಮಾನ ಮಾಡಿರುವ ಬಗ್ಗೆ ಹಾಗೂ ಇತರೆ ವಿಚಾರ ಗಳ ಬಗ್ಗೆ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಿಂಗಾನಲ್ಲೂರು ಗ್ರಾಮದ ರೈತ ಸಂಘದ ಮೊದಲ ವರ್ಷದ ವಾರ್ಷಿಕೋತ್ಸವದಲ್ಲಿ ರೈತ ಸಂಘದ ಬೋರ್ಡಿಗೆ ಪುಷ್ಪಾರ್ಚನೆ ಮಾಡಿ ರಸ್ತೆಯುದ್ದಕ್ಕೂ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಗ್ರಾಮದ ಜನಾರ್ದನ ದೇವಸ್ಥಾನದ ಮುಂಭಾಗ ಸಭೆ ನಡೆಸಿ ದೇವಸ್ಥಾನದ ಅರ್ಚಕರು,ಹಿಂದಿ ಪಂಡಿತರು ಆದ ಶ್ರೀನಿವಾಸ ಮೂರ್ತಿ ರವರನ್ನು ಆತ್ಮೀಯವಾಗಿ ಕರೆಯಿಸಿಕೊಂಡು ಅವರಿಗೆ ಸನ್ಮಾನಿಸಲಾಯಿತು.
ನಂತರ ಮಾಜಿ ಯೋಧ ಮರಿಯಾ ಜೋಸೆಫ್ ಮಾತನಾಡಿ ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆ ಒಳಗೆ ಸಂವಿಧಾನ ಬದ್ಧವಾಗಿ ನಮಗೆ ದೊರಕಬಹುದಾದ ಮೂಲಭೂತ ಸೌಕರ್ಯಗಳನ್ನು ಪಡೆಯಬೇಕಾದರೆ ಹೋರಾಟ ಮಾಡಿ ಮೂಲಭೂತ ಸೌಲಭ್ಯಪಡೆಯ ಬೇಕಾದ ಪರಿಸ್ಥಿತಿ ಒಳಗೆ ನಾವು ಬದುಕುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಹನೂರು ತಾಲ್ಲೂಕು ಅಧ್ಯಕ್ಷ ಆರ್ ಅರ್ಪುದರಾಜ್ ಮಾತನಾಡಿ ರಾಜಕಾರಣಿಗಳು ಅವರ ಧೆಯೋದ್ದೇಶಗಳಿಗೆ ರಾಜಕಾರಣಕ್ಕೆ ಬರುತ್ತಿದ್ದಾರೆ ಹೊರತು ರೈತಕುಲ ಹಾಗೂ ನಾಗರೀಕರಿಗೆ ಸೌಲಭ್ಯಗಳನ್ನು ಒದಗಿಸಲು ಬರುತ್ತಿಲ್ಲ ಎಂದು ಆರೋಪಿಸಿದರು.
ರೈತ ಮುಖಂಡ ಲೂರ್ದುಸ್ವಾಮಿ ಮಾತನಾಡಿ ಜಮ್ಮುವಿನಲ್ಲಿ ವ್ಯವಸಾಯ ಮಾಡುವ ರೈತನಿಗೆ ತೊಂದರೆ ಆದರೆ ಕೊಳ್ಳೇಗಾಲದಲ್ಲಿರುವ ನಾವು ರೈತನ ಬೆಂಬಲವಾಗಿ ಹೋರಾಟ ಮಾಡಬೇಕು ಆಗಾದಾಗಾ ಮಾತ್ರ ರೈತರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ತಿಳಿಸಿದರು.
ಶೈಲೇಂದ್ರ ಮಾತನಾಡಿ ಪ್ರತಿ ಗ್ರಾಮ ಪಂಚಾಯಿತಿಗಳು ನಡೆಸುವ ಗ್ರಾಮ ಸಭೆಗೆ ಇಲ್ಲಿಯವರೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕರೆಯಿಸಿ ಆಯಾ ಇಲಾಖೆಗಳ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿಲ್ಲ ಅಂದರೆ ಲೋಕಾಯುಕ್ತದ ಜವಾಬ್ದಾರಿ, ಆರ್ ಟಿ ಐ ಜವಾಬ್ದಾರಿ ಬಗ್ಗೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಗಳಲ್ಲಿ ಮೇಲ್ಕಂಡ ಇಲಾಖೆಗಳನ್ನು ಕರೆಯಿಸಿ ಮಾಹಿತಿ ಒದಗಿಸಿದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ ಎಂದು ಮಾತನಾಡಿದರು.
ಸಭೆಯಲ್ಲಿ ಸಿಂಗಾನಲ್ಲೂರು ಗ್ರಾಮ ಶಾಖೆಯ ಅಧ್ಯಕ್ಷ ಬೆಟ್ಟೇಗೌಡ,ದೊಡ್ಡಿಂದುವಾಡಿ ಗ್ರಾಮ ಶಾಖೆಯ ವಸಂತ ಕುಮಾರ್,ಮೋಳೆ ರಾಜು, ತಾಲ್ಲೂಕು ಕಾರ್ಯದರ್ಶಿ ಪೆರಿಯನಾಯಗಂ, ಭಾಸ್ಕರ್, ಕುಟ್ಟಿ,ಸೂರಾಪುರ ವಾಸು,ಸತ್ತೇಗಾಲ ಕಛೇರಿ ಮಹದೇವ, ರವಿ, ಸುರೇಂದ್ರ, ರಾಜಣ್ಣ, ನಾಗೇಂದ್ರ,,ತನು, ಸಿಂಗಾನಲ್ಲೂರು ಗ್ರಾಮದ ಹಾಗೂ ದೊಡ್ಡಿಂದುವಾಡಿ ಗ್ರಾಮದ ಹೋರಾಟಗಾರರು ಭಾಗವಹಿಸಿದ್ದರು.
-
State7 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
Hassan4 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
State20 hours agoSSLC ಪಾಸ್ ಆದವರಿಗೆ ಸರ್ಕಾರಿ ನೌಕರಿ ಚಾನ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ…
-
Chikmagalur24 hours agoಬಿಜಿಎಸ್: ಚಿತ್ರಕಲೆಯಲ್ಲಿ ವರೇಣ್ಯ ಜಿಲ್ಲಾಮಟ್ಟಕ್ಕೆ ಆಯ್ಕೆ
-
Chikmagalur22 hours agoವಿದ್ಯಾರ್ಥಿಗಳಿಗೆ ಉಚಿತ ಪಠ್ಯ ನೋಟ್ ಪುಸ್ತಕ ವಿತರಣೆ, ಮುಂದಿನ ಶೈಕ್ಷಣಿಕ ವರ್ಷದಿಂದ ಅನುಷ್ಠಾನ: ಮಧು ಬಂಗಾರಪ್ಪ
-
Mysore22 hours agoನಾಳೆಯಿಂದ ಸಿಗ್ಮಾ ಆಸ್ಪತ್ರೆಯಲ್ಲಿ ಉಚಿತ ಥೈರಾಯ್ಡ್ ತಪಾಸಣೆ
-
National21 hours agoಪಲಾಶ್ ಮುಚ್ಚಲ್ರೊಂದಿಗೆ ಮದುವೆ ಮುಂದೂಡಿದ ನಂತರ ಮೊದಲ ಪೋಸ್ಟ್ ಹಂಚಿಕೆಕೊಂಡ ಸ್ಮೃತಿ ಮಂದಾನ
-
Hassan7 hours agoಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
