Connect with us

Mysore

ಡ್ರೋನ್ ಕ್ಯಾಮರದ ರೆಕ್ಕೆ ತಗಲಿ ಶಾಸಕ ಅನಿಲ್ ಚಿಕ್ಕಮಾದು ಮುಖಕ್ಕೆ ಗಾಯ

Published

on

ಹೆಚ್.ಡಿ.ಕೋಟೆ: ಪಟ್ಟಣದ ಆದರ್ಶ ವಿದ್ಯಾಲಯ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಮೂಗಿನ ಭಾಗಕ್ಕೆ ಡ್ರೋನ್ ಕ್ಯಾಮರಾ ತಗಲಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ 9 ಗಂಟೆಗೆ ಸಂಭವಿಸಿದೆ.

ಪಟ್ಟಣದ ಆದರ್ಶ ಶಾಲೆಯ ವಾರ್ಷಿಕೋತ್ಸವ, ವಾರ್ಷಿಕ ಹಾಗೂ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಾಸಕ ಅನಿಲ್ ಚಿಕ್ಕಮಾದು ಭಾಗವಹಿಸಿದ್ದರು. ಕಾರ್ಯಕ್ರಮದ ಚಿತ್ರೀಕರಣವನ್ನು ಡೋನ್ ಕ್ಯಾಮಾರಾ ಮತ್ತು ಸ್ಟಿಲ್ ಕ್ಯಾಮಾರಾ ಬಳಸಿ ಮಾಡಲಾಗುತ್ತಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕರು ಮಾತನಾಡುವ ಸಮಯದಲ್ಲಿ ಆಕಸ್ಮಿಕವಾಗಿ ಮುಖಕ್ಕೆ ಡ್ರೋನ್ ಕ್ಯಾಮರಾ ತಗಲಿ ಗಾಯವಾಗಿದೆ.

ಈ ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡರು. ತಕ್ಷಣ ಶಾಸಕರನ್ನು ಪಟ್ಟಣದಲ್ಲಿರುವ ಸೆಂಟ್ ಮೇರಿಸ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ ತಪಾಸಣೆ ತೆರಳಿದ್ದಾರೆ ಎನ್ನಲಾಗಿದೆ.

Continue Reading

Mysore

ಕಳಲೆ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು:  ತಾಲೂಕಿನ ಕಳಲೆ ಗ್ರಾಮದಲ್ಲಿ 75 ಲಕ್ಷ  ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ಇಂದು ಶಾಸಕ ದರ್ಶನ್ ಧ್ರುವನಾರಾಯಣ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ದಾರೆ.

ನಂತರ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಾಗ ಕಳಲೆ ಗ್ರಾಮದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಎರಡು ಕೋಟಿ ರೂ. ಅನುದಾನವನ್ನು ನೀಡಿದ್ದರು.

ಈ ಗ್ರಾಮದಲ್ಲಿ ಹತ್ತು ಸಾವಿರ ಜನರು ವಾಸ ಇದ್ದೀರಾ. ಮೂಲಸೌಕರ್ಗಳನ್ನು ಆಗಬೇಕಾಗಿರುವುದನ್ನು ತಿಳಿಸಿದ್ದೀರಾ , ಹಂತ ಹಂತವಾಗಿ ಕೆಲಸಗಳನ್ನು ಮಾಡುತ್ತೇನೆ ಸಹಕಾರ ಕೊಡಿ ಅಂತ ತಿಳಿಸಿದರು.

ಗ್ರಾಮದಲ್ಲಿ ಗರಡಿ ಮನೆ ಪೂಜೆಯಾಗಿ ಕೆಲಸ ಪ್ರಾರಂಭ ಆಗಿಲ್ಲ ಅಂತ ತಿಳಿಸಿದ್ದೀರಾ, ಈಗಾಗಲೇ ಅಧ್ಯಕ್ಷರು ನನ್ನ ಬಳಿ ಮಾತನಾಡಿ ಗ್ರಾಮದ ಯಜಮಾನರು ಒಪ್ಪುತ್ತಿಲ್ಲ ಆದ್ದರಿಂದ ಲೇಟಾಗಿದೆ ಅಂತ ತಿಳಿಸಿದ್ರು, ಅಧ್ಯಕ್ಷರು ಒಂದು ವಾರ ಗಡುವು ಸಮಯ ತೆಗೆದುಕೊಂಡಿದ್ದಾರೆ. ಒಂದು ವಾರ ನಂತರ ಕೆಲಸ ಪ್ರಾರಂಭವಾಗಲಿಲ್ಲ ಅಂದರೆ ನನಗೆ ಫೋನ್ ಮಾಡಿ ಎಂದು ಕ್ರೀಡಾ ಪೈಲ್ವಾನ್ಗಳಿಗೆ ಕಿವಿ ಮಾತು ಹೇಳಿದರು.

ಗ್ರಾಮದಲ್ಲಿ ದೇವಸ್ಥಾನದ ಅಭಿವೃದ್ಧಿ, ಮತ್ತು ರಸ್ತೆ ಅಭಿವೃದ್ಧಿಗಳು, ವೈದ್ಯರ ಸಮಸ್ಯೆ , ಇತರೆ ಮೂಲ ಸೌಕರ್ಸೌಯ ಲಭ್ಯಗಳ ಬಗ್ಗೆ ತಿಳಿಸಿದ್ದೀರಾ. ಇವೆಲ್ಲ ಕೆಲಸಗಳನ್ನು ಮಾಡಿಸಿಕೊಡುತ್ತೇನೆ ಸಹಕಾರ ಸಮಯ ಕೊಡಿ ಎಂದರು.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ 50 ಕೋಟಿ ನೀಡುತ್ತಾರೆ. ನಿಮ್ಮ ಗ್ರಾಮಕ್ಕೂ ಅನುದಾನ ನೀಡಿ ಹಂತ ಹಂತವಾಗಿ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಕಳಲೆ ಗ್ರಾಮ ಒಂದು ಇತಿಹಾಸ ಇದೆ. ಶ್ರೀಕಂಠೇಶ್ವರ ಸ್ವಾಮಿಯ ದೇವಸ್ಥಾನಕ್ಕಿಂತ ಮುಂಚೆ ಕಳಲೆ ಗ್ರಾಮದಲ್ಲಿ ಚೋಳರ ಕಾಲದಲ್ಲಿ ದೇವಸ್ಥಾನ ಸ್ಥಾಪನೆಯಾಗಿದ್ದು, ಕಡಲೆಪುರಿ, ಮತ್ತು ಹಳೆಯ ಹೆಸರು ವೇಣುಪುರಿ ಎಂದು ಕರೆಯುತ್ತಿದ್ದರು. ಈ ಗ್ರಾಮದಲ್ಲಿ 19 ಸಮುದಾಯದ ಜನಾಂಗ ಸಮರಸ್ಯದಿಂದ ಇದ್ದಾರೆ. ಈ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಎರಡು ಕೋಟಿ ಅನುದಾನವನ್ನು ನೀಡಿದ್ದರೂ. ಅದರಲ್ಲಿ ಹಲವು ರಸ್ತೆಗಳು ಪೂರ್ಣಗೊಂಡಿವೆ. ಇನ್ನು ಅಭಿವೃದ್ಧಿ ಆಗುವ ಕೆಲಸಗಳನ್ನು ಮುಂದಿನ ತಿಂಗಳು ಜನವರಿ 26ರಂದು ಪಂಚಾಯಿತಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿ ಕೆಲವು ಅಭಿವೃದ್ಧಿಗಳಿಗೆ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ ಅಂತ ಭರವಸೆ ನೀಡಿದರು.

 

ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಮಾತನಾಡಿ, ಈ ದಿವಸ ನಮ್ಮ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಾರ್ಯಾಲಯ ಉದ್ಘಾಟನೆ ಆಗಿರೋದು ತುಂಬಾ ಸಂತೋಷಕರ ವಿಷಯವಾಗಿದೆ. ಹಿಂದೆ ಕಟ್ಟಡ ಇಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಪಕ್ಷದ ಯುವ ಶಾಸಕರ ಬಳಿ ಹೇಳಿದ ಮೇಲೆ 75 ಲಕ್ಷ ಅನುದಾನ ನೀಡಿದರು. ಈ ಕೆಲಸ ಆರೇ ತಿಂಗಳಲ್ಲಿ ಪೂರ್ಣಗೊಳಿಸಿ ಶಾಸಕ ಉದ್ಘಾಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ಕೆಲಸಗಳಿಗೂ ಸ್ಪಂದಿಸುತ್ತಾರೆ ಸಹಕಾರ ನೀಡಿ ಎಂದರು.

ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲತಾ ಡಿ. ಮಹೇಶ್ , ಉಪಾಧ್ಯಕ್ಷರಾದ ಹರೀಶ್ , ಇಒ ಜೆರಾಲ್ಡ್ ರಾಜೇಶ್ , ಸದಸ್ಯರಾದ ಮಹೇಶ್, ಶಿವಣ್ಣ , ಸುಮಾ, ಲಕ್ಷ್ಮೀ , ಶಿವಕುಮಾರಿ, ರಾಜಮ್ಮ , ವಿಶಾಲಾಕ್ಷಮ್ಮ , ಶಾಂತಮ್ಮ , ರತ್ನಮ್ಮ, ಗೀತಾ, ಶಿವರಾಮ್, ಶಿವಕುಮಾರ್, ಮುಖಂಡರಾದ ಎನ್ ಮಹದೇವು, ಬೈರ ನಾಯಕ, ಕೆ. ಡಿ ಮಂಜು ರವರು, ದೊರೆಸ್ವಾಮಿ ನಾಯಕ , ಮಂಜುನಾಥ್, ಪ್ರದೀಪ್, ರಾಚ ನಾಯಕ, ಕಳಲೆ ರಾಜೇಶ್, ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

Continue Reading

Mysore

ಪಠ್ಯದಿಂದ ಡಾ.ಅಂಬೇಡ್ಕರ್ ಹೊರಗಿಡುವ ಹುನ್ನಾರ: ಪ್ರೊ.ಪ್ರಸನ್ನಕುಮಾರ್ ಕೆರಗೋಡು ಶಂಕೆ

Published

on

ಮೈಸೂರು: ಜ್ಞಾನದ ಪ್ರತಿರೂಪವಾಗಿ ಜಗತ್ತಿನಲ್ಲಿ ಮನ್ನಣೆ ಪಡೆಯುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಹಂತ ಹಂತವಾಗಿ ಪಠ್ಯಕ್ರಮಗಳಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದು ಚಿಂತಕ ಪ್ರೊ.ಪ್ರಸನ್ನಕುಮಾರ್ ಕೆರಗೋಡು ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಜ್ಞಾನ, ಪ್ರೌಢಿಮೆಯನ್ನು ಹರಿಸಿದವರು. ಅವರಿಗೆ ಸಂಬಂಧಪಟ್ಟ ವಿಷಯಗಳನ್ನು ಹಂತ ಹಂತವಾಗಿ ಪಠ್ಯದಿಂದ ತೆಗೆಯುವ ಮೂಲಕ ಹೊಸ ತಲೆಮಾರಿನ ವಿದ್ಯಾರ್ಥಿಗಳಿಂದ ದೂರಾಗಿಸುವ ಪ್ರಯತ್ನ ನಡೆಯುತ್ತಿವೆ ಎಂದು ಎಚ್ಚರಿಸಿದರು.

ಡಾ.ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬ ದಲಿತನೂ ಶಿಕ್ಷತನಾಗಿ ಉನ್ನತವಾದ ಜೀವನ ರೂಪಿಸಿಕೊಳ್ಳಬೇಕು. ಮತ್ತೆ ಹಳ್ಳಿಗಳ ಕಡೆ ಮುಖ ಮಾಡಿ ತಮ್ಮವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಆಗ ಮಾತ್ರ ಡಾ.ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ನಮ್ಮ ತಂದೆ ಸ್ವಾತಂತ್ರ‍್ಯ ಹೋರಾಟಗಾರರು. 1952ರಲ್ಲಿ ಡಾ.ರಾಜಕುಮಾರ್ ಅವರ ಭಕ್ತ ಚೇತ ಎಂಬ ಸಿನಿಮಾ ನಿರ್ದೇಶನ ಮಾಡಿ ಅಸ್ಪೃಶ್ಯತೆ ವಿರುದ್ಧ ಹೋರಾಡುವ ಬೀಜ ಬಿತ್ತಿದ್ದರು. ನಾನೂ ಸಹ ಕೃಷ್ಣ ನೀ ಬೇಗನೆ ಬಾರೋ, ಭೂಮಿ ತಾಯಿಯ ಚೊಚ್ಚಲ ಮಗ ಮುಂತಾದ ದಲಿತ ಮತ್ತು ಅಸ್ಪೃಶ್ಯತೆ ಕುರಿತ ಸಿನಿಮಾಗಳ ನಿರ್ದೇಶನ ಮಾಡಿದ್ದೇನೆ ಎಂದು ನೆನಪಿಸಿಕೊಂಡರು.


ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ರಮೇಶ್, ಸಿದ್ದರಾಜು, ಎಡತಲೆ ಮಂಜುನಾಥ್, ಶಿವಪ್ರಸಾದ್ ಎಂ., ಗಿರೀಶ್ ಪಿ.ತೊರೆಮಾವು, ಈಶ್ವರ್ ಚಕ್ಕಡಿ, ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಮೋದಮಣಿ, ಸುರೇಶ್ ಪಾಳ್ಯ, ಶಿವಶಂಕರಮೂರ್ತಿ, ಸಿದ್ದಯ್ಯ, ಮಹೇಶ್ ನಾಯಕ್, ಶಾಮ, ಯೋಗೇಶ್, ಎಂ.ಕೆ.ಅಶೋಕ್, ಮುರುಡೇಶ್, ರಾಮು, ಮೋಹನ್, ಸುಶೀಲಾ ಮುಂತಾದವರಿದ್ದರು.

Continue Reading

Mysore

ಬಾಬಾ ಸಾಹೇಬ್ ಅಂಬೇಡ್ಕರ್ ರವರ ದಿನನಿತ್ಯ ಸ್ಮರಣೆ ಮಾಡಿಕೊಂಡೆ ಕರ್ತವ್ಯಕ್ಕೆ ಹೋಗುತ್ತೇನೆ : ಶಾಸಕ ದರ್ಶನ್ ಧ್ರುವನಾರಾಯಣ್

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ಭಾರತ ರತ್ನ, ವಿಶ್ವದ ಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 69 ನೇ ‘ಮಹಾ ಪರಿನಿರ್ವಾಣ ದಿನ’ದ ಪ್ರಯುಕ್ತ ಇಂದು ನಂಜನಗೂಡು ಕ್ಷೇತ್ರದ ಯುವ ಶಾಸಕರಾದ ದರ್ಶನ್ ನಾರಾಯಣ್ ನಂಜನಗೂಡು ನಗರದ ಡಾ. ಬಿ. ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪರ್ಚನೆ ಮತ್ತು ಗೌರವ ಸಮರ್ಪಣೆ ಸಲ್ಲಿಸಿದರು.

ನಂತರ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲೂಆಯೋಜಿಸಲಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ “ಮಹಾ ಪರಿನಿರ್ವಾಣ ದಿನ ದ” ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಹಚ್ಚಿ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡುತ್ತಾ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ “ಮಹಾ ಪರಿನಿರ್ವಾಣ ದಿನ, ಈ ದಿವಸ ತಾಲೂಕಿನ ತಹಸೀಲ್ದಾರ್, ಜನಪ್ರತಿನಿಧಿಗಳು, ಸಂಘ ಸಂಸ್ಥೆಯ ಮುಖ್ಯಸ್ಥರು, ಎಲ್ಲರೂ ಒಟ್ಟಾರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆ ಮಾಡಿದ್ದೇವೆ. ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದಿನನಿತ್ಯ ಸ್ಮರಣೆ ಮಾಡಿಕೊಂಡು ಕರ್ತವ್ಯಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.

ನಾನು ಒಬ್ಬ ವಕೀಲನ ನಿಂತಿದ್ದೇನೆ ಅಂದರೆ ಅದಕ್ಕೆ ಬಾಬಾ ಸಾ ಅಂಬೇಡ್ಕರ್ ಅವರ ಸ್ಪೂರ್ತಿ, ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಹಲವಾರು ವಿವಿಧ ಧರ್ಮಗಳು ವಿಭಿನ್ನತೆ ಇವೆ. ಎಲ್ಲಾ ಒಗ್ಗಟ್ಟಿನಿಂದ ಸಮರಸ್ಯ ಇರಲು ಸಂವಿಧಾನ ಕಾರಣ, ನಮ್ಮ ಈ ದೇಶದ ಸಂವಿಧಾನ ರಚನೆಯಲ್ಲಿ ಮುಖ್ಯವಾದ ಪಾತ್ರವಹಿಸಿ ಸಂವಿಧಾನ ಶಿಲ್ಪಿಯಾಗಿ ಮಹಾ ಗ್ರಂಧವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ.ಬಾಬಾ ಸಾಹೇಬರು ಒಬ್ಬ ವಕೀಲರಾಗಿ, ಜನರಲ್ ಲಿಸ್ಟ್ ಆಗಿ, ಭಾರತದ ಮತ್ತು ವಿಶ್ವದ ಇತಿಹಾಸ ತಿಳಿದುಕೊಂಡು ಸಂವಿಧಾನ ಮೂಲಕ ಕಾನೂನು ರಚನೆ ರಚಿಸಿದ್ದಾರೆ.

ಬಾಬಾ ಸಾಹೇಬರು ಬುದ್ಧನ ತತ್ವವನ್ನು ಸ್ವೀಕರಿಸಿದ ಎರಡು ತಿಂಗಳ ಆದಮೇಲೆ ನಿಧನ ಹೊಂದಿದ್ದಾರೆ.ಆದರೆ ಸಂವಿಧಾನ ಮೂಲಕ ಬಾಬು ಸಾಹೇಬ್ ಅಂಬೇಡ್ಕರ್ ಅವರು ನಮ್ಮೊಡನೆ ಇದ್ದಾರೆ. ನಾನೊಬ್ಬ ಕಿರಿಯ ವಯಸ್ಸಿನಲ್ಲೇ ಶಾಸಕನಾಗಲು, ಮತ್ತು ಈ ದೇಶದಲ್ಲಿ ಟೀ ಚಾಯ ಒಬ್ಬ ಪ್ರಧಾನಿಯಾಗಿದ್ದಾರೆ ಅಂದರೆ ಅದಕ್ಕೆ ಕಾರಣ ಸಂವಿಧಾನ,ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡು ದೇಶದಲ್ಲಿ ಏಕತೆ ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಕರ್ನಾಟಕ ಮೃಗಲಾಯ ಪ್ರಾಧಿಕಾರ ಅಧ್ಯಕ್ಷರಾದ ರಂಗಸ್ವಾಮಿ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಸಿ ಬಸವರಾಜು, ವಕೀಲರು ನಾಗರಾಜುಯ್ಯ,ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ ಶಂಕರ್ , ಚಂದನಗೌಡ, ಕರಳಪುರ ವಿಜಯ್ ಕುಮಾರ್, ನಗರಸಭೆ ಸದಸ್ಯರುಗಳಾದ ರವಿ ,ಪ್ರದೀಪ್, ಗಂಗಾಧರ್, ಮಾಜಿ ಮಂಜುನಾಥ್, ಜಿ.ಟಿ.ರಂಗಸ್ವಾಮಿ , ST ಘಟಕದ ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ ನಾಯಕ , ಶ್ರೀಧರ್ , ಪ್ರದೀಪ್ , ಸೌಭಾಗ್ಯ , ಗೋವಿಂದ ರಾಜ್ , ಚಂದನ್ , ವಿಜಯ್ ಕುಮಾರ್, ನಾಗರಾಜಯ್ಯ, ಶಂಕರಪುರ ಸುರೇಶ್, ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ವಿವಿಧ ಪ್ರಗತಿಪರ ಸಂಘಟನೆಕರು, ಮತ್ತು ಪಕ್ಷದ ಮುಖಂಡರುಗಳು ಸೇರಿದಂತೆ ಇದ್ದರು.

Continue Reading

Trending

error: Content is protected !!