Chamarajanagar
ವಿದ್ಯಾರ್ಥಿಗಳಲ್ಲಿ ಸ್ಕಿಲ್ ಡೆವಲಪ್ಮೆಂಟ್ ಬಹಳ ಮುಖ್ಯ : ಸಚ್ಚಿತಾನಂದ ಸ್ವಾಮೀಜಿ. ಪೀಠಾಧ್ಯಕ್ಷರು , ಶ್ರೀ ವಾಸವಿ ವಿದ್ಯಾ ಪೀಠ
ಕೊಳ್ಳೇಗಾಲ: ಪಟ್ಟಣದ ಹೊರ ಭಾಗದ ಹೊಸ ಹಂಫಾಪುರ ಗ್ರಾಮದಲ್ಲಿ ಶಾಲೆ ಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿ ದ
ಸಚ್ಚಿದಾನಂದ ಸ್ವಾಮೀಜಿ ಈ ಗ್ರಾಮದಲ್ಲಿ ಸುಮಾರು 3.5 ಎಕರೆ ಜಮೀನು ಕರಿದೇ ಮಾಡಿ ಸ್ವಿಚ್ ಸುರ್ಜಿತವಾದ ಶಾಲೆ ಕಟ್ಟಡ 2028 ಕ್ಕೆ ನಿರ್ಮಾವಾಗಲಿದೆ, ಈ ಗಿನ ವಿದ್ಯಾಭ್ಯಾಸ ಹೇಗಿದೆ ಅಂದರೆ ಎಸ್ ಎಸ್ ಎಲ್ ಸಿ ಮತ್ತು ಡಿಗ್ರಿ ಗಳು ಕೇವಲ ಒಂದು ಪೇಪರ್ ಗೆ ಅಷ್ಟೇ ಸೀಮಿತ ವಾಗಿದೆ ಇ ವತಿನ ಪ್ರಪಂಚ ದಲ್ಲಿ ಎಲವೂ ಬದಲಾಗುತ್ತಿದೆ.

ಬದಲಾವಣೆ ಸೃಷ್ಟಿಯ ನಿಯಮ ಅದರಿಂದ ನಾವು ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಸ್ಕಿಲ್ ಡೆವಲಪ್ಮೆಂಟ್ ಬಹಳ ಮುಖ್ಯ ಅದರಿಂದ ಕೊಳ್ಳೇಗಾಲ ದ ನಮ್ಮ ವಾಸವಿ ಶಾಲೆ ಯಲ್ಲಿ ಸ್ಕಿಲ್ ಡೆವಲಪ್ಮೆಂಟ್ ಗೆ ಹೆಚ್ಚಿನ ಒತ್ತು ನೀಡಿ ವಿದ್ಯಾರ್ಥಿಗಳಲ್ಲಿ ಕಾನ್ಫಿಡೆನ್ಸ್ ಕಾಲೇಜ್ ಕಾರೇಜ್ ಟೂ ಅಚೀವ್ ಮುಖ್ಯ ಎಂಬ ಮಾತುಗಳನ್ನು ಹಾಡಿದರು.
ವರದಿ : ಸುನೀಲ್ ಪ್ರಶಾಂತ್
Chamarajanagar
ಕೋರ್ಟ್ ರಸ್ತೆಯಲ್ಲಿ ಅನಧಿಕೃತ ಪೆಟ್ಟಿಗೆ ಅಂಗಡಿ ತೆರವು
ಗುಂಡ್ಲುಪೇಟೆ: ಪಟ್ಟಣದ ಕೋರ್ಟ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುವಂತೆ ಅಳವಡಿಸಲಾಗಿದ್ದ ಅನಧಿಕೃತ ರೆಡಿಮೇಡ್ ಕಬ್ಬಿಣದ ಪೆಟ್ಟಿಗೆ ಅಂಗಡಿಯನ್ನು ಪುರಸಭೆ ಅಧಿಕಾರಿಗಳು ಬುಧವಾರ ಬೆಳಗ್ಗೆ ಕ್ರೇನ್ ಮೂಲಕ ತೆರವುಗೊಳಿಸಿದರು.

ಕೋರ್ಟ್ ರಸ್ತೆ ಬದಿಯಲ್ಲಿ ಅನುಮತಿ ಪಡೆಯದೆ ರಾತ್ರೋರಾತ್ರಿ ಕಬ್ಬಿಣದ ಪೆಟ್ಟಿಗೆಯನ್ನು ಅಳವಡಿಸಿ ಅಂಗಡಿ ಆರಂಭಿಸಲು ಸಿದ್ಧತೆ ನಡೆಸಲಾಗಿತ್ತು. ಈ ಕುರಿತು ಸಾರ್ವಜನಿಕರಿಂದ ಪುರಸಭೆಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ಮುಖ್ಯಾಧಿಕಾರಿ ಶರವಣ ಎಸ್. ಅವರ ಸೂಚನೆಯ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅನಧಿಕೃತ ಬಂಕ್ ಅನ್ನು ತೆರವುಗೊಳಿಸಿ ಜಪ್ತಿ ಮಾಡಿದರು.
ಸಾರ್ವಜನಿಕ ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ಅಂಗಡಿ ಅಥವಾ ಇತರೆ ನಿರ್ಮಾಣಗಳನ್ನು ಅಳವಡಿಸಿದರೆ ಮುಲಾಜಿಲ್ಲದೆ ತೆರವುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಇಂಜಿನಿಯರ್ ಮಂಜುನಾಥ್, ಮಹೇಶ್, ಹಿರಿಯ ಆರೋಗ್ಯ ನಿರೀಕ್ಷಕ ಪರಮೇಶ್, ಮೇಲ್ವಿಚಾರಕರಾದ ಸಿದ್ದರಾಜು, ಮೂರ್ತಿ, ಬಿಲ್ ಕಲೆಕ್ಟರ್‌ಗಳಾದ ಪುಟ್ಟಸ್ವಾಮಿ, ರವಿ, ರಮೇಶ್ ಸೇರಿದಂತೆ ಪೌರಕಾರ್ಮಿಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Chamarajanagar
ವಿದುರಾಶ್ವತ್ಥ ನಡಿಗೆ ಶಿಬಿರದಲ್ಲಿ ಭಾಗವಹಿಸಿದ್ದ ರೇಂಜರ್ಸ್ ವಿದ್ಯಾರ್ಥಿನಿಯರಿಗೆ ಅಭಿನಂದನೆ
ಚಾಮರಾಜನಗರ: ಸೆ.15ರಿಂದ 19ರವರೆಗೆ ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಂಸ್ಥೆಗಳ ಆಶ್ರಯದಲ್ಲಿ ಕೇಂದ್ರ ಕಚೇರಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯವರೆಗೆ ನಡೆದ ರಾಜ್ಯಮಟ್ಟದ “ವಿದುರಾಶ್ವತ್ಥ ನಡಿಗೆ – ಸ್ವಾತಂತ್ರ್ಯ ಸೇನಾನಿಗಳಿಗೆ ನಮನ” ಶಿಬಿರದಲ್ಲಿ ಭಾಗವಹಿಸಿ ಮರಳಿದ ಜೆಎಸ್ಎಸ್ ಮಹಿಳಾ ಕಾಲೇಜಿನ ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ಸ್ ಘಟಕದ ಹೊನ್ನಮ್ಮ, ಮಾನಸ ಬಿ.ಎಸ್. ಮತ್ತು ಶ್ವೇತಾ ಎಸ್. ಅವರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಪ್ರಭು, ಸಂಚಾಲಕಿ ಸಿ. ರೂಪಶ್ರೀ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದರು.
Chamarajanagar
ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ
ಚಾಮರಾಜನಗರ, ಸೆ.23: ಸಾರ್ವಜನಿಕ ಸುರಕ್ಷತೆ ಹಾಗೂ ರಸ್ತೆ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಪ್ರಮುಖ ಹೆದ್ದಾರಿಗಳಲ್ಲಿ ಎಎನ್‌ಪಿಆರ್ (Automatic Number Plate Recognition) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಎಎನ್‌ಪಿಆರ್ ಕ್ಯಾಮೆರಾಗಳು ವಾಹನಗಳ ನಂಬರ್ ಪ್ಲೇಟ್‌ಗಳನ್ನು ಸ್ವಯಂಚಾಲಿತವಾಗಿ ಗುರುತಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಹಾಗೂ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ನೆರವಾಗಲಿವೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
-
State10 hours agoರೇಷನ್ ಕಾರ್ಡ್ ಇ-ಕೆವೈಸಿಗೆ ಅಕ್ಟೋಬರ್ 20ರವರೆಗೆ ಅವಕಾಶ!!
-
Hassan6 hours agoಭಗತ್ಸಿಂಗ್ ಜನ್ಮದಿನದ ಅಂಗವಾಗಿ ಸೆ.27ರಂದು ರಾಜ್ಯಮಟ್ಟದ ವೈಚಾರಕ ಸಮಾವೇಶ
-
Mysore7 hours agoFIR ದಾಖಲಾದ ಬೆನ್ನಲ್ಲೇ ಪ್ರತಾಪ್ ಸಿಂಹ ಪ್ರತಿಕ್ರಿಯೆ
-
Kodagu9 hours agoಕರಿಕೆಯಲ್ಲಿ ಪೋಷಣ್ ವಾಟಿಕಾ ಉತ್ಪನ್ನ ಹಾಗೂ ಸ್ಥಳೀಯ ಆಹಾರ ಪ್ರದರ್ಶನ
-
Chamarajanagar2 hours agoಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ
-
State8 hours agoಕಸ್ತೂರಿ ರಂಗನ್ ವರದಿ; ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಅಭಿಪ್ರಾಯ ಮಂಡಿಸಲು ಹಿರಿಯ ವಕೀಲರ ನೇಮಕ: ಡಿಕೆಶಿ
-
National4 hours agoSIR ವಿಚಾರ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
-
Chikmagalur1 hour agoಸೆ. 30ರಂದು ಕೊಳ್ಳೇಗಾಲಕ್ಕೆ ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆ : ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಂದ ಸ್ಥಳ ಪರಿಶೀಲನೆ
