Connect with us

Mysore

ಮೂರು ವರ್ಷದ ಹೆಣ್ಣು ಹುಲಿ ಸಾ*ವು

Published

on

ಮೈಸೂರು: ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಮೂರು ವರ್ಷದ ಹೆಣ್ಣು ಹುಲಿ ಮೃತಪಟ್ಟಿರುವ ಘಟನೆ ನಡೆದಿದೆ.


ಗಟ್ಟವಾಡಿ ಗ್ರಾಮದ ಕೆರೆ ಪಕ್ಕದ ಬಯಲಿನಲ್ಲಿ ಹುಲಿಯ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತ ಹುಲಿ ಸುಮಾರು ಮೂರು ವರ್ಷ ಪ್ರಾಯದ್ದಾಗಿದ್ದು, ಇತ್ತೀಚೆಗೆ ತಾಯಿಯಿಂದ ಬೇರ್ಪಟ್ಟು ಕಾಡಿನಿಂದ ಹೊರಬಂದಿರಬಹುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಮತ್ತೊಂದು ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಗಾಯಗೊಂಡು, ಆಹಾರ ಮತ್ತು ನೀರು ಸಿಗದೆ ನರಳಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹುಲಿಯ ದೇಹದ ಮೇಲಿನ ಗಾಯಗಳ ಆಧಾರದ ಮೇಲೆ ಸಾವಿನ ನಿಖರ ಕಾರಣ ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕೌವಲಂದೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯ ಮರಣೋತ್ತರ ಪರೀಕ್ಷೆ ಹಾಗೂ ಇತರೆ ವೈಜ್ಞಾನಿಕ ಪರೀಕ್ಷೆಗಳ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

Continue Reading

Mysore

ಎಂಡಿಎ 50:50 ಅಕ್ರಮ, ರದ್ದಾದ ನಿವೇಶನಗಳ ಪಟ್ಟಿ ಪ್ರಕಟಿಸಿ -ಜಿಲ್ಲಾಧಿಕಾರಿಗೆ ಸೂಚನೆ

Published

on

ಮೈಸೂರು: ಶಾಸಕ ಟಿ.ಎಸ್‌. ಶ್ರೀವತ್ಸ ಅವರ ಮನವಿಗೆ ಸ್ಪಂದಿಸಿರುವ ಸರಕಾರ ಮೈಸೂರು ಅಭಿವೃದ್ಧಿ ಪ್ರಾಧಿ ಕಾರದಲ್ಲಿ (ಎಂಡಿಎ) ಶೇ.50:50 ಅನುಪಾತದಡಿ ರದ್ದುಗೊಂಡಿರುವ ನಿವೇಶನಗಳ ಸಂಪೂರ್ಣ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಹಾಗೂ ಸಾರ್ವಜನಿಕರ ನೆರವಿಗಾಗಿ ಪ್ರತ್ಯೇಕ ಸಹಾಯವಾಣಿ ಆರಂಭಿಸಬೇಕು ಎಂದು ಎಂಡಿಎ ಆಯುಕ್ತರು ಹಾಗೂ ಜಿಲ್ಲಾಧಿ ಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದೆ.

ಶಾಸಕ ಟಿ.ಎಸ್‌.ಶ್ರೀವತ್ಸ ಅವರು ನಗರಾಭಿವೃದ್ಧಿ ಇಲಾಖೆ ಹಾಗೂ ಸರಕಾರಕ್ಕೆ ಪತ್ರ ಬರೆದು ಮೈಸೂರು ಅಭಿವೃದ್ಧಿ ಪ್ರಾಧಿ ಕಾರದಲ್ಲಿ (ಎಂಡಿಎ) ಶೇ.50:50 ಅನುಪಾತದಡಿ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದುಗೊಳಿಸಿದರುವುದಕ್ಕೆ ಅಭಿನಂದನೆ ಸಲ್ಲಿಸಿರುವುದಲ್ಲದೇ ರದ್ದುಗೊಂಡ ನಿವೇಶನಗಳ ಪಟ್ಟಿಯನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು.
ಶಾಸಕರು ಸೆ.1ರಂದು ಬರೆದಿರುವ ಪತ್ರವನ್ನು ಉಲ್ಲೇಖಿಸಿರುವ ಸರಕಾರ, ಪತ್ರದಲ್ಲಿ ಪ್ರಸ್ತಾಪಿಸಿರುವ ವಿಷಯವನ್ನು ಚಾಲ್ತಿಯಲ್ಲಿರುವ ಕಾಯಿದೆ, ಸುತ್ತೋಲೆ ಹಾಗೂ ನಿಯಮಗಳನ್ವಯ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಮೈಸೂರು ಅಭಿವೃದ್ಧಿ ಪ್ರಾಧಿ ಕಾರ ಆಯುಕ್ತರು, ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರು ಮತ್ತು ಮೈಸೂರು ಜಿಲ್ಲಾಧಿ ಕಾರಿಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕೆ.ಲತಾ ಅವರು ಪತ್ರ ಬರೆದಿದ್ದಾರೆ.

ಮುಡಾದಲ್ಲಿ 50:50 ಅನುಪಾತ ಮತ್ತು ಬದಲಿ ನಿವೇಶನ ಹಂಚಿಕೆಗೆ ಸಂಬಂಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ದೊರೆಯುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರದ್ದುಗೊಳಿಸಲಾದ ನಿವೇಶನಗಳ ವಿವರ, ಸಂಬಂತ ದಾಖಲೆಗಳು ಹಾಗೂ ಕ್ರಮದ ಸ್ಥಿತಿಗತಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕೆಂದು ಸೂಚಿಸಿದ್ದಾರೆ.
ಸಹಾಯವಾಣಿ ಆರಂಭಿಸಲು ಆಗ್ರಹ :
ಮುಡಾ ನಿವೇಶನ ಹಂಚಿಕೆ ಹಾಗೂ ರದ್ದತಿ ಕುರಿತಂತೆ ಸಾರ್ವಜನಿಕರಿಂದ ಬರುವ ದೂರು, ಆಕ್ಷೇಪಣೆ ಮತ್ತು ಮಾಹಿತಿ ವಿನಂತಿಗಳನ್ನು ಸ್ವೀಕರಿಸಲು ಪ್ರತ್ಯೇಕ ಸಹಾಯವಾಣಿ ಆರಂಭಿಸಲು ಸೂಚಿಸಲಾಗಿದೆ. ಇದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಂಬಂಸಿದ ಅಧಿ ಕಾರಿಗಳ ಗಮನಕ್ಕೆ ತರಲು ಅನುಕೂಲವಾಗಲಿದೆ.

Continue Reading

Mysore

ಕಾನೂನು ಶಿಕ್ಷಣಕ್ಕೆ ಹೊಸ ಆಯಾಮ – ಮೈಸೂರಿನಲ್ಲಿ MIT ಲಾ ಕಾಲೇಜಿನ 5 ವರ್ಷದ BBA LL.B. ಪ್ರವೇಶಾತಿ ಆರಂಭ

Published

on

ಮೈಸೂರು: ಪ್ರತಿಷ್ಠಿತ ಮಹಾರಾಜ ಎಜುಕೇಶನ್ ಟ್ರಸ್ಟ್ (ರಿ) ವತಿಯಿಂದ ಹಳೆ ಕೇಸರೆಯ ಎಂಐಟಿಎಂ ಕ್ಯಾಂಪಸ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ MIT Law ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ 5 ವರ್ಷಗಳ ಸಂಯೋಜಿತ BBA LL.B. ಕೋರ್ಸ್‌ಗೆ ಪ್ರವೇಶಾತಿ ಪ್ರಾರಂಭವಾಗಿದೆ ಎಂದು MIT ಉಪಾಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದರು.


ನಂಜನಗೂಡು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಪಿಎಚ್‌ಡಿ ಪದವೀಧರರು ಹಾಗೂ ಶಿಕ್ಷಣ ತಜ್ಞರ ತಂಡದ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಮಹಾರಾಜ ಎಜುಕೇಶನ್ ಟ್ರಸ್ಟ್, ಗುಣಮಟ್ಟದ ಮತ್ತು ವೃತ್ತಿಪರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಉದ್ದೇಶದಿಂದ MIT ಲಾ ಕಾಲೇಜನ್ನು ಆರಂಭಿಸಿದೆ ಎಂದು ತಿಳಿಸಿದರು.

MIT ಲಾ ಕಾಲೇಜು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಮಾನ್ಯತೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಸಂಯೋಜನೆ ಹಾಗೂ ಕರ್ನಾಟಕ ಸರ್ಕಾರದ ಅನುಮೋದನೆ ಹೊಂದಿದ್ದು, ಆಧುನಿಕ ಮೂಲಸೌಕರ್ಯಗಳೊಂದಿಗೆ ಗುಣಮಟ್ಟದ ಕಾನೂನು ಶಿಕ್ಷಣವನ್ನು ಕೈಗೆಟುಕುವ ಶುಲ್ಕದಲ್ಲಿ ನೀಡುವ ಉದ್ದೇಶ ಹೊಂದಿದೆ.

ಪ್ರವೇಶಕ್ಕೆ ಅರ್ಹತೆ: ದ್ವಿತೀಯ ಪಿಯುಸಿ ಅಥವಾ ತತ್ಸಮಾನ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು 5 ವರ್ಷಗಳ ಸಂಯೋಜಿತ BBA LL.B. ಪದವಿ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಎಂಐಟಿ ಸಂಸ್ಥೆ ಕಾರ್ಯದರ್ಶಿ YT ಕೃಷ್ಣೇಗೌಡ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಅಭಿವೃದ್ಧಿಗೆ ಪೂರಕವಾಗುವಂತೆ ಕ್ಯಾಂಪಸ್‌ನಲ್ಲಿಯೇ ಸುರಕ್ಷಿತ ವಸತಿ ನಿಲಯ, ವೈ-ಫೈ ಸೌಲಭ್ಯ, ಆರೋಗ್ಯಕರ ಆಹಾರ, ಸುಸಜ್ಜಿತ ಜಿಮ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

100ಕ್ಕೂ ಹೆಚ್ಚು ಬಸ್‌ಗಳ ಮೂಲಕ ಮೈಸೂರು ಸೇರಿದಂತೆ ಮಂಡ್ಯ, ಚಾಮರಾಜನಗರ, ಪಾಂಡವಪುರ, ಮಳವಳ್ಳಿ, ಬನ್ನೂರು, ಕೆ.ಆರ್. ಪೇಟೆ, ಕೆ.ಆರ್. ನಗರ, ಕೆ.ಆರ್.ಎಸ್., ಹುಣಸೂರು, ನಂಜನಗೂಡು, ಕೊಳ್ಳೇಗಾಲ, ಎಚ್.ಡಿ. ಕೋಟೆ, ಟಿ. ನರಸೀಪುರ, ಪಿರಿಯಾಪಟ್ಟಣ, ಗುಂಡ್ಲುಪೇಟೆ, ನಾಗಮಂಗಲ, ಅಕ್ಕಿಹೆಬ್ಬಾಳು, ಕಿಕ್ಕೇರಿ, ಮಿಲ್ಕ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸುರಕ್ಷಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.

MIT Institute of Naturopathy and Yogic Sciences & Hospital ನಲ್ಲಿ BNYS ಕೋರ್ಸ್‌ಗೆ ಪ್ರವೇಶಾತಿ ಪ್ರಾರಂಭ ಮಾಡಲಾಗುತ್ತಿದೆ ಅಂತ ವಿವರಿಸಿದ್ರು.

ಗುಣಮಟ್ಟದ ಶಿಕ್ಷಣದೊಂದಿಗೆ ಆರೋಗ್ಯ ಕ್ಷೇತ್ರದ ಸಮಕಾಲೀನ ಅಗತ್ಯಗಳಿಗೆ ತಕ್ಕಂತಹ ಜ್ಞಾನ, ಕೌಶಲ್ಯ ಮತ್ತು ವೃತ್ತಿಪರ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ಮಹಾರಾಜ ಎಜುಕೇಶನ್ ಟ್ರಸ್ಟ್ (ರಿ), ಮೈಸೂರು ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿದೆ. ಇದರ ಅಂಗವಾಗಿ MIT Institute of Naturopathy and Yogic Sciences & Hospital ಸಂಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಇಲ್ಲಿ BNYS – Bachelor of Naturopathy and Yogic Sciences ಪದವಿ ಕೋರ್ಸ್‌ಗೆ ಪ್ರವೇಶಾತಿ ಪ್ರಾರಂಭವಾಗಿದೆ.

ಪಿಎಚ್‌.ಡಿ. ಪದವಿ ಹೊಂದಿರುವ ಶಿಕ್ಷಣ ತಜ್ಞರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಸೈದ್ಧಾಂತಿಕ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಕ್ಲಿನಿಕಲ್ ತರಬೇತಿಗೆ ವಿಶೇಷ ಆದ್ಯತೆ ನೀಡುತ್ತಿದೆ. ನೈಸರ್ಗಿಕ ಚಿಕಿತ್ಸೆ, ಯೋಗ ವಿಜ್ಞಾನ, ಧ್ಯಾನ, ಸಮಗ್ರ ಆರೋಗ್ಯ ನಿರ್ವಹಣೆ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ವೈಜ್ಞಾನಿಕ ಅರಿವು ಮೂಡಿಸುವುದು ಕೋರ್ಸ್‌ನ ಪ್ರಮುಖ ಉದ್ದೇಶವಾಗಿದೆ.

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ದೊರೆಯುವಂತೆ ಸುಸಜ್ಜಿತ ಪ್ರಯೋಗಾಲಯಗಳು, ಯೋಗ ಮತ್ತು ಧ್ಯಾನ ಸಭಾಂಗಣಗಳು, ಚಿಕಿತ್ಸಾ ಉಪಕರಣಗಳು ಹಾಗೂ ಕ್ಲಿನಿಕಲ್ ತರಬೇತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಪ್ರವೇಶಾತಿಗಾಗಿ ಸಂಪರ್ಕಿಸಲು 7204017455,

ಸುದ್ದಿಗೋಷ್ಠಿಯಲ್ಲಿ ಮಹಾರಾಜ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಡಾ.ಜಿ. ಹೇಮಂತ್ ಕುಮಾರ್, ಎಂಐಟಿ ಜಿಲ್ಲೆಯ ಕಾರ್ಯದರ್ಶಿಗಳಾದ ಡಾ. ವೈ.ಟಿ. ಕೃಷ್ಣೇಗೌಡ, ಕಾಲೇಜಿನ ಪ್ರಾಂಶುಪಾಲರಾದ ಡಾ. ಶಶಿಕಿರಣ್, ಸವಿತಾ ಆನಂದ್ ಸೇರಿದಂತೆ ಉಪಸ್ಥಿತರಿದ್ದರು.

ನಂಜನಗೂಡು ವರದಿ ಮಹದೇವಸ್ವಾಮಿ ಪಟೇಲ್

Continue Reading

Mysore

ಕಲಬುರಗಿಯಲ್ಲಿ ಸಿದ್ದರಾಮಯ್ಯ ಪುತ್ಥಳಿ ತೆರವು ಖಂಡಿಸಿ ನಂಜನಗೂಡಿನಲ್ಲಿ ಪ್ರತಿಭಟನೆ

Published

on

ನಂಜನಗೂಡು: ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ನಂಜನಗೂಡಿನಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಪ್ರತಿಭಟನೆ ನಡೆಯಿತು. ನಗರದಲ್ಲಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗಿ, ತೆರವುಗೊಳಿಸಿರುವ ಪುತ್ಥಳಿಯನ್ನು ಕೂಡಲೇ ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಅವರ ಪುತ್ಥಳಿ ಮತ್ತೆ ಸ್ಥಾಪಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅಭಿಮಾನಿಗಳು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Continue Reading

Trending

error: Content is protected !!