Connect with us

Hassan

ಶುಂಠಿ ಬೆಳೆಗೆ ನೀಡಿದ್ದ ಜಮೀನಿನ ಹಣ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ

Published

on

ಬೇಲೂರು: ಶುಂಠಿ ಬೆಳೆಯಲು ಜಮೀನು ನೀಡಿದ್ದಕ್ಕೆ ಬಾಕಿ ಹಣ ಕೇಳಲು ಹೋದ ವ್ಯಕ್ತಿಯ ಮೇಲೆ ಇಬ್ಬರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನೆಟ್ಟೇಕೆರೆ ಗ್ರಾಮದಲ್ಲಿ ನಡೆದಿದೆ.

ನೆಟ್ಟೇಕೆರೆ ಗ್ರಾಮದ ಅಣ್ಣೇಗೌಡ ಅವರ ಪುತ್ರ ಚಂದ್ರೇಗೌಡ ಗಾಯಾಳುವಾಗಿದ್ದು, ಹಲ್ಲೆಗೊಳಗಾಗಿದ್ದಾರೆ. ಪ್ರಕರಣದಲ್ಲಿ ಬಿಕ್ಕೋಡು ಗ್ರಾಮದ ಸಂತೋಷ ಹಾಗೂ ಆಲೂರು ತಾಲೂಕಿನ ಕೋಟಿಗನಹಳ್ಳಿ ಪಾಳ್ಯದ ಕುಮಾರ್ ಹಲ್ಲೆ ನಡೆಸಿರುವ ಆರೋಪಿಗಳು.

ಚಂದ್ರೇಗೌಡ ಅವರು ಶುಂಠಿ ಬೆಳೆ ಬೆಳೆಯಲು ತಮ್ಮ ಭೂಮಿಯನ್ನು ಆರೋಪಿಗಳಿಗೆ ನೀಡಿದ್ದರು. ಬೆಳೆಯ ಹಣದ ವಿಚಾರವಾಗಿ ಬಾಕಿ ಹಣ ನೀಡುವಂತೆ ಕೇಳಲು ಹೋದ ಸಂದರ್ಭದಲ್ಲಿ ಆರೋಪಿಗಳು ಹಣ ನೀಡಲು ನಿರಾಕರಿಸಿ, ‘ಹಣ ಕೊಡುವುದಿಲ್ಲ, ನಿಮ್ಮನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಲ್ಲಿ ಚಂದ್ರೇಗೌಡ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

Hassan

ಅಮಾನತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 29ನೇ ವಾರ್ಷಿಕ ಮಹಾಸಭೆ

Published

on

ಅರಸೀಕೆರೆ: ನಗರದ ಹುಳಿಯಾರು ರಸ್ತೆ ಪಕ್ಕದಲ್ಲಿರುವ ಮದೀನಾ ಶಾದಿಮಹಲ್‌ನಲ್ಲಿ ದಿ ಅಮಾನತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಯ 29ನೇ ವರ್ಷದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಅಲ್ ಹಜ್ ಯೂನುಸ್ ಮೊಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಂಸ್ಥೆಯ ಮುಂದಿನ ಬೆಳವಣಿಗೆ ಹಾಗೂ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಲವು ಸಲಹೆ–ಸೂಚನೆಗಳನ್ನು ನೀಡಿದರು.
ಸಂಘದ ವ್ಯವಸ್ಥಾಪಕ ಕೆ. ನಜೀರ್ ಅಹ್ಮದ್ ಅವರು 2025–26ನೇ ಸಾಲಿನಲ್ಲಿ ಸಂಘವು ರೂ, 9,62,141, ರೂಪಾಯಿಗಳನ್ನು ಲಾಭ ಗಳಿಸಿರುವ ಬಗೆ ಹಾಗೂ ಸಂಸ್ಥೆಯು ಜಮಾ–ಖರ್ಚು, ಲಾಭ–ನಷ್ಟ ಸೇರಿದಂತೆ ವಿವಿಧ ಆರ್ಥಿಕ ಚಟುವಟಿಕೆಗಳ ಕುರಿತು ಸದಸ್ಯರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಸಂಸ್ಥೆಯ ಸದಸ್ಯರ ಮಕ್ಕಳಲ್ಲಿ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷ ಅಪ್ರೋಜ್ ಪಾಷಾ, ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ದೇವರಾಜ್ ಜಿ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷ ಅಲ್ ಹಜ್ ಯೂನುಸ್ ಮೊಹಮ್ಮದ್ ಮಾತನಾಡಿ, ಸದಸ್ಯರು ಪಡೆದಿರುವ ಸಾಲವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಮೂಲಕ ಸಂಸ್ಥೆಯ ಆರ್ಥಿಕ ಸದೃಢತೆಗೆ ಸಹಕಾರ ನೀಡಬೇಕು. ಸದಸ್ಯರ ಸಹಕಾರದಿಂದ ಸಂಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಜಮೀಲ್ ಪಾಷಾ ಜೆ.ಕೆ.,, ನಿರ್ದೇಶಕರಾದ ಆರ್. ನಿಜಾಮುದ್ದೀನ್,, ರೋಷನ್,ತೌಸೀಫ್ ಖಾನ್ ಕೆ.ಕೆ. ಸೈಯದ್ ಅನ್ಸರ್, ಮುನಾಫ್ ಬೇಗ್, ನಸೀಮಾ ಬಾನು, ಸೀಮಾ ಖಾನಂ, ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

Continue Reading

Hassan

ಬೇಲೂರು ಪುರಸಭೆ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ

Published

on

​ಬೇಲೂರು : ಪಟ್ಟಣದ ನೈರ್ಮಲ್ಯ ಮತ್ತು ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಪಾರ. ನಗರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬ ನಾಗರಿಕರೂ ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಬೇಲೂರು ಪುರಸಭೆ ಅಧ್ಯಕ್ಷ ಆಕ್ರಂ ಶರೀಫ್ ಮನವಿ ಮಾಡಿದರು.


​ಪಟ್ಟಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,​ ಪ್ರತಿಯೊಬ್ಬರೂ ಮನೆಗಳಲ್ಲೇ ನಾಲ್ಕು ವಿಧದ ತ್ಯಾಜ್ಯಗಳನ್ನು ಕಡ್ಡಾಯವಾಗಿ ವಿಂಗಡಿಸಬೇಕು. ಈ ನಿಯಮವು ಈಗಾಗಲೇ ಕಾನೂನಾಗಿ ಜಾರಿಯಲ್ಲಿದ್ದು, ಸಾರ್ವಜನಿಕರು ಒಣ ತ್ಯಾಜ್ಯ, ಹಸಿ ತ್ಯಾಜ್ಯ ಸೇರಿದಂತೆ ವಿವಿಧ ಮಾದರಿಯ ಕಸವನ್ನು ಪ್ರತ್ಯೇಕವಾಗಿಯೇ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು,” ಎಂದು ವಿನಂತಿಸಿಕೊಂಡರು.

ಪುರಸಭೆ ಆರೋಗ್ಯ ಅಧಿಕಾರಿ ಜ್ಯೋತಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ‘ಕಸ ಮುಕ್ತ ಭಾರತ’ದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರ ಗಾಂಧಿ ಜಯಂತಿಯವರೆಗೆ ‘ಸ್ವಚ್ಛತೆಯೇ ಸೇವೆ’ ಅಭಿಯಾನ ಆಯೋಜಿಸಲಾಗಿದೆ ಎಂದರು.

​ಇದುವರೆಗೆ ಸಾರ್ವಜನಿಕರು ಮನೆಗಳಲ್ಲಿ ಹಸಿ ಮತ್ತು ಒಣ ಕಸವನ್ನು ಮಾತ್ರ ಪ್ರತ್ಯೇಕಿಸುತ್ತಿದ್ದರು. ಆದರೆ ಇನ್ಮುಂದೆ ತ್ಯಾಜ್ಯವನ್ನು ಹಸಿ ಕಸ, ಒಣ ಕಸ, ಅಪಾಯಕಾರಿ ತ್ಯಾಜ್ಯ ಹಾಗೂ ಇ-ತ್ಯಾಜ್ಯ ಎಂದು ನಾಲ್ಕು ಬಗೆಯಾಗಿ ವಿಂಗಡಿಸಿ ಪುರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.
​ಪಟ್ಟಣದ ನೈರ್ಮಲ್ಯ ನಿರ್ವಹಣೆಯ ಬಗ್ಗೆ ವಿವರ ನೀಡಿದ ಅವರು, “ನಮ್ಮ ವ್ಯಾಪ್ತಿಯಲ್ಲಿ ಪ್ರತಿದಿನ ಸರಾಸರಿ 8 ಮೆಟ್ರಿಕ್ ಟನ್ (TPD) ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ಸುಸೂತ್ರವಾಗಿ ವಿಲೇವಾರಿ ಮಾಡಲು 56 ಜನ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆಗಾಗಿ ಪ್ರಸ್ತುತ 2 ಟ್ರ್ಯಾಕ್ಟರ್ ಹಾಗೂ 5 ಆಟೋ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ,” ಎಂದು ವಿವರಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎ. ಏರ್ ಅಶೋಕ್ ಮಾತನಾಡಿ, “ಬೇಲೂರು ಇವತ್ತು ಸುಂದರವಾಗಿದೆ ಎಂದರೆ ಅದಕ್ಕೆ ಪೌರಕಾರ್ಮಿಕರೇ ಮುಖ್ಯ ಕಾರಣ. ಬೆಳಿಗ್ಗೆ 4 ಗಂಟೆಗೆ ಎದ್ದು, ವಿಶ್ವ ಪಾರಂಪರಿಕ ತಾಣವಾದ ಚೆನ್ನಕೇಶವಸ್ವಾಮಿ ದೇವಾಲಯದ ಮುಂಭಾಗ, ನೆಹರೂ ನಗರ, ಜ್ಯೋತಿ ನಗರ ಸೇರಿದಂತೆ ಪ್ರತಿಯೊಂದು ಗಲ್ಲಿ-ಗಲ್ಲಿಯಲ್ಲೂ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಶ್ರಮಕ್ಕೆ ಬೇಲೂರು ಜನತೆಯ ಪರವಾಗಿ ಧನ್ಯವಾದಗಳು ಸಲ್ಲಬೇಕು,” ಎಂದು ಶ್ಲಾಘಿಸಿದರು. ಅಲ್ಲದೆ, ಪುರಸಭೆಯ ಹಾಲಿ ಅವಧಿ ಮುಕ್ತಾಯದ ಹಂತದಲ್ಲಿದ್ದು, ಇದು ನಮಗೆ ಕೊನೆಯ ಅವಕಾಶವಾಗಿದೆ ಎಂದರು.
​ಈ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಉಷಾಸತೀಶ್, ಸದಸ್ಯರಾದ ತೀರ್ಥಕುಮಾರಿ, ಜಮಾಲ್ ಜಗದೀಶ್, ಜಾಮ್ಮಿಲಾ, ಸೌಮ್ಯ, ಮೀನಾಕ್ಷಿ, ಮಣಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.

Continue Reading

Hassan

ನಶಾಮುಕ್ತ ಸಮಾಜಕ್ಕೆ ಯುವಕರು ಕೈಜೋಡಿಸಲಿ: ಪ್ರಾಂಶುಪಾಲ ರಾಜಶೇಖರ್

Published

on

ಹಾಸನ: ಯುವಕರು ವಿದ್ಯಾಭ್ಯಾಸದ ಅವಧಿಯಲ್ಲಿ ಯಾವುದೇ ದುಶ್ವಟಕ್ಕೆ ಒಳಗಾಗಿದೆ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ಎಂದು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಜಿ. ರಾಜಶೇಖರ್ ಹೇಳಿದರು. ಹೊಳೆನರಸೀಪುರ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಘಟಕ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ಬುಧವಾರ ನಶಾ ಮುಕ್ತ ಅಭಿಯಾನದ ಅಂಗವಾಗಿ ನಡೆದ ಕಿರು ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಶಾ ಮುಕ್ತ ಯುವ ಎಂಬ ಘೋಷಣೆಯೊಂದಿಗೆ ದೇಶದಲ್ಲಿ ಯುವಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಜಾರಿಗೆ ತಂದಿದೆ. ಯುವಕರು ಮದ್ಯಪಾನ, ಧೂಮಪಾನ‌, ಡ್ರಗ್ಸ್ ಸೇರಿದಂತೆ ಯಾವುದೇ ನಶಾ ಪದಾರ್ಥಗಳನ್ನು ಸೇವಿಸದೆ ತಮ್ಮ ಪೋಷಕರಿಗೆ ಹಾಗೂ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಬೇಕು. ಇಂದು‌ ಸಣ್ಣ ಮಕ್ಕಳೆ ಇಂತಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ಆಘಾತಕಾರಿ ವಿಷಯ. ಇದರಿಂದಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವದರ ಜೊತೆಗೆ ಅನೇಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.


ಎನ್.ಸಿ.ಸಿ. ಘಟಕದ ಅಧಿಕಾರಿ ಡಾ.ಎಚ್.ಎನ್. ಹರೀಶ್ ಮಾತನಾಡಿ, ನಶಾ ಪದಾರ್ಥಗಳು ಚಿಕ್ಕ ಮಕ್ಕಳಿಗೆ ಸುಲಭವಾಗಿ ಸಿಗುತ್ತಿರುವುದು ಆಶ್ಚರ್ಯಕರ ಸಂಗತಿ. ದೇಶವನ್ನು ಮುನ್ನೆಡೆಸಬೇಕಾದ ಯುವ ಸಮುದಾಯ ಇಂದು ಇಂತಹ ಮಾದಕ ವಸ್ತುಗಳ ವ್ಯಸನಕ್ಕೆ ದಿನೆ ದಿನೇ ಒಳಗಾಗುತ್ತಿರುವುದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಳ್ಳಿ ಪಟ್ಟಣ ಎಲ್ಲಾ ಭಾಗದಲ್ಲೂ ಯುವಕರು ಹಾದಿ ತಪ್ಪಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ ಎಂಬ ವಿಷಕಾರಿ ಪದಾರ್ಥ ಎಲ್ಲೆಂದರಲ್ಲಿ ದೊರೆಯುತ್ತಿದ್ದು, ಯುವಕರು ಕ್ಷಣಿಕ ಸುಖಕ್ಕೆ ತಮ್ಮ ಇಡೀ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಅತ್ಯಂತ ಜಾಗೃತಿಯಿಂದ ಬೆಳೆಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಗಳು ನಶಾ ಮುಕ್ತ ಸಮಾಜ ನಿರ್ಮಾಣದ ಸಂದೇಶ ಸಾರುವ ಕಿರು ನಾಟಕ ಪ್ರದರ್ಶನ ಮಾಡಿದರು. ಹಾಗೆಯೇ ನಶಾ ಮುಕ್ತ ಅಭಿಯಾನದ ಘೋಷಣ ಕರ ಪತ್ರಗಳನ್ನು ಪ್ರದರ್ಶಿಸಿದರು. ಇದೇ ವೇಳೆ ನಶಾ ಮುಕ್ತ ಮಾಡುವ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Continue Reading

Trending

error: Content is protected !!