Chamarajanagar
ಮೆಕ್ಕೆಜೋಳ ಖರೀದಿಸಲು ನೊಂದಣಿ ಕೇಂದ್ರ ಕಾರ್ಯಾರಂಭ
ಚಾಮರಾಜನಗರ: ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ರೈತರಿಂದ ನೇರವಾಗಿ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಮೂಲಕ ಮೆಕ್ಕೆಜೋಳ ಖರೀದಿಸುತ್ತಿದ್ದು, ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಚಾಮುಲ್) ಸಹಕಾರ ಸಂಘಗಳ ಮೂಲಕವೂ ಖರೀದಿ ಕೇಂದ್ರ ತೆರೆಯಲಾಗಿದೆ.
ಚಾಮರಾಜನಗರದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ನಿಯಮಿತವು ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಒಡೆತನದ ಪಶು ಆಹಾರ ಘಟಕಗಳಿಗೆ ಪಶು ಆಹಾರ ಉತ್ಪಾದನೆಗೆ ಅವಶ್ಯವಿರುವ ಮೆಕ್ಕೆಜೋಳವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‍ಗೆ 2,400 ರೂ. ಗಳಂತೆ (ಮೂಲ ಬೆಲೆ, ಎರಡು ಗೋಣಿಚೀಲದ ಮೊತ್ತ ಮತ್ತು ಸಾಗಾಣಿಕೆ ಮೊತ್ತ ಸೇರಿದಂತೆ) ಗುಣಮಟ್ಟ ನಿಬಂಧನೆಗೊಳಪಟ್ಟು ರೈತರಿಂದ ನೇರವಾಗಿ ಖರೀದಿಸಲು ತೀರ್ಮಾನವಾಗಿರುತ್ತದೆ.

ಅದರಂತೆ ಜಿಲ್ಲೆಯ ರೈತರಿಂದ ಕರ್ನಾಟಕ ಹಾಲು ಮಹಾಮಂಡಳಿಯ ಹಾಸನ ಪಶು ಆಹಾರ ಘಟಕಕ್ಕೆ ನಿಗದಿಪಡಿಸಿದ ದರದಲ್ಲಿ ಮೆಕ್ಕೆಜೋಳ ಖರೀದಿಸಲು ಪ್ರಕ್ರಿಯೆ ಆರಂಭವಾಗಿರುತ್ತದೆ. ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಒಕ್ಕೂಟದ ನಿಯೋಜಿತ ಅಧಿಕಾರಿಗಳ ಸಮನ್ವಯದೊಂದಿಗೆ ಎನ್‍ಇಎಂಎಲ್ ಸಂಸ್ಥೆ ಅಭಿವೃದ್ಧಿಪಡಿಸಿದ ಇ-ಸಂವೃದ್ಧಿ ಹಾಗೂ ಸರ್ಕಾರದ ಫ್ರೂಟ್ಸ್ ತಂತ್ರಾಂಶದ ಮೂಲಕ ನೋಂದಣಿ ಮಾಡಿ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ನಂತರ ಖರೀದಿಸಲಾಗುವುದು.
ಮೆಕ್ಕೆಜೋಳ ಬೆಳೆದು ಬೆಳೆ ಸಮೀಕ್ಷೆಯಲ್ಲಿ ಮೆಕ್ಕೆಜೋಳ ಬೆಳೆ ಎಂದು ಆರ್.ಟಿ.ಸಿ ವಾರು ನಮೂದಾಗಿರುವ ರೈತರು ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ. ಯೋಜನೆಯಡಿ ಎಕರೆಗೆ 12 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಪ್ರಮಾಣದ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳವನ್ನು ಮಾತ್ರ ಖರೀದಿಸಲಾಗುವುದು. ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಡಿಬಿಟಿ ಮೂಲಕ ಹಣ ಪಾವತಿಸಲಾಗುವುದು.

ಮೆಕ್ಕೆಜೋಳ ಮಾರಾಟ ಮಾಡಲು ಆಸಕ್ತ ರೈತರು ಚಾಮರಾಜನಗರದ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ತಾಲೂಕು ಉಪ ಕಚೇರಿಗಳನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಚಾಮುಲ್ ಮೊ.ಸಂ. 6366824213, ಚಾಮರಾಜನಗರ ಮತ್ತು ಯಳಂದೂರು ಮೊ.ಸಂ. 9945828993, ಗುಂಡ್ಲುಪೇಟೆ ಮೊ.ಸಂ. 9606098335, ಹನೂರು ಮೊ.ಸಂ 9740576484, ಕೊಳ್ಳೇಗಾಲ ಮೊ.ಸಂ. 6366824224 ಸಂಪರ್ಕಿಸುವಂತೆ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ರಾಜ್‍ಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
Chamarajanagar
ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಚಾಮರಾಜನಗರ: ತಾಲೂಕಿನ ನಾಗವಳ್ಳಿ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಂಪ್ಯೂಟರ್, ಆರ್ಟ್ ಮತ್ತು ಕ್ರಾಫ್ಟ್, ನೃತ್ಯ ಮತ್ತು ಸಂಗೀತ ಹಾಗೂ ಇಂಗ್ಲೀಷ್ ವಿಷಯಕ್ಕೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಡಿ.7 ರಿಂದ ಡಿ.11ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ವಿದ್ಯಾರ್ಹತೆ ಉಳ್ಳವರು ತಮ್ಮ ಸ್ವ ವಿವರದೊಂದಿಗೆ ನೇರವಾಗಿ ಶಾಲೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 8310434085, 9886824852, 9036375844 ಸಂಪರ್ಕಿಸಬಹುದೆಂದು ನಾಗವಳ್ಳಿ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಆರೋಗ್ಯಕ್ಕೆ ಮೊಲದ ಆದ್ಯತೆ ನೀಡಿ: ಕಾಗಲವಾಡಿ ಚಂದ್ರು ಸಲಹೆ
ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ನಗರದಲ್ಲಿ ಇಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಅರವಿಂದ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ 300 ಮಂದಿ ತಪಾಸಣೆ ಮಾಡಿಸಿಕೊಂಡರು. 170 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರನ್ನು ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಬಿರದಲ್ಲಿ ವ್ಯವಸ್ಥೆ ಮಾಡಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಆರೋಗ್ಯಕ್ಕೆ ಮೊಲದ ಆಧ್ಯತೆ ನೀಡಬೇಕು. ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದ ಅಂಗವಾಗಿದೆ. ಕಣ್ಣುಗಳನ್ನು ರಕ್ಷಿಸಿಕೊಳ್ಳವುದರ ಮೂಲಕ ಅಂಧತ್ವ ನಿವಾರಣೆ ಮಾಡಿಕೊಳ್ಳಬೇಕಿದೆ ಎಂದರು.

ರೋಟರಿ ಸಂಸ್ಥೆಯು ಪ್ರತಿ ತಿಂಗಳು ಮೊದಲನೆಯ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಅಯೋಜಿಸುತ್ತಿದ್ದು, ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದದ್ದು ತುಂಬಾ ಸಂತಸವಾಗಿದೆ ಎಂದರು. ಈ ಶಿಬಿರದಲ್ಲಿ ಇಬ್ಬರು ವಿದ್ಯಾರ್ಥಿಗಳಾದ ಚಂದ್ರಶೇಖರ್, ಧನುಷ್ ಅವರಿಗೆ ಕನ್ನಡಕ ವಿತರಿಸಲಾಯಿತು.
ರೋಟರಿ ಸಂಸ್ಥಾಪಕ ಸದಸ್ಯರಾದ ಶ್ರೀನಿವಾಸಶೆಟ್ಟಿ, ಕೆ.ಎಂ.ಮಹಾದೇವಸ್ವಾಮಿ, ಸುರಬಿ ನಾಗರಾಜು, ಪ್ರಭಾಕರ್, ಸಿ.ಎ.ನಾರಾಯಣ್, ಸುರೇಶ್, ಅಂಕಶೆಟ್ಟಿ, ಎಲ್.ನಾಗರಾಜು, ಎ.ಶ್ರೀನಿವಾಸನ್, ರೂಪೇಶ್, ಮಹಾದೇವಸ್ವಾಮಿ, ಅಬ್ದುಲ್ ಅಜೀಜ್ ದೀನಾ, ರಾಜುವರ್ಗೀಸ್, ಡಾ.ಪರಮೇಶ್ವರಪ್ಪ, ಸವಿತಾ,
ಪಿಆರ್‌ಒ ವಿಜಯಕಾಂತ್ ಇತರರು ಹಾಜರಿದ್ದರು.
Chamarajanagar
ಗೃಹ ರಕ್ಷಕದಳ ದಿನಾಚರಣೆ ಕಾರ್ಯಕ್ರಮ
ಚಾಮರಾಜನಗರ:- ಗೃಹರಕ್ಷಕ ದಳವು ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕ ಕೆಲಸ ಮಾಡುವ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೊಳ್ಳೇಗಾಲ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಧರ್ಮೇಂದ್ರ ಹೇಳಿದರು.
ನಗರದ ಪೊಲೀಸ್ ಭವನದಲ್ಲಿ ಗೃಹರಕ್ಷಕ ದಳದ ವತಿಯಿಂದ ಆಯೋಜಿಸಲಾಗಿದ್ದ ಅಖಿಲ ಭಾರತ ಗೃಹ ರಕ್ಷಕದಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆಂತರಿಕ ಪರಿಸ್ಥಿತಿಯನ್ನು ನಿಭಾಯಿಸಲು ಗೃಹರಕ್ಷಕ ದಳವು ಸ್ವಯಂಸೇವಕರಾಗಿ ಶ್ರಮಿಸುತ್ತಿದೆ. ಪ್ರಾಮಾಣಿಕವಾಗಿ ಧೃಡಸಂಕಲ್ಪ ನಿಲುವನ್ನು ಹೊಂದುವ ಮೂಲಕ ಪೊಲೀಸ್ ಇಲಖೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತದೆ ಎಂದರು.
ಗೃಹರಕ್ಷಕ ದಳ ಸಿಬ್ಬಂದಿ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಶಿಸ್ತನ್ನು ಪಾಲಿಸಬೇಕು. ಸಾರ್ವಜನಿಕರ ಜೀವ ಮತ್ತು ಆಸ್ತಿ ಸಂರಕ್ಷಣೆ, ವಿಪತ್ತು ನಿರ್ವಹಣೆ, ಪುನರ್ವಸತಿ ಕಾರ್ಯಗಳು, ಅಗ್ನಿ ಅವಘಡ, ವೈಮಾನಿಕ ದಾಳಿ, ಸುನಾಮಿ, ಪ್ರಳಯ, ಭೂಕಂಪ, ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಸಂದರ್ಭದಲ್ಲಿ ಗೃಹರಕ್ಷಕ ದಳ ಪೊಲೀಸರು ಹಾಗೂ ಇನ್ನಿತರ ಕಾರ್ಯಾಚರಣೆಯಲ್ಲಿ ಜೊತೆಯಾಗಿ ನಿಲ್ಲುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಡಿವೈಎಸ್‍ಪಿ ಜಿ.ಆರ್. ಸೋಮಣ್ಣ, ಗೃಹರಕ್ಷಕ ದಳದ ಜಿಲ್ಲಾ ಸಮದೇಷ್ಟರಾದ ಜಿ.ಎಸ್. ಮಹಾಲಿಂಗಸ್ವಾಮಿ, ಗೃಹರಕ್ಷಕ ದಳದ ಬೋಧಕರಾದ ಆರ್.ಚಂದನ್ ಮಾತನಾಡಿದರು.
ಗೃಹರಕ್ಷಕದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗುಂಡ್ಲುಪೇಟೆ ವಿಭಾಗದ ಪಿ. ಶಂಕರ್, ವೈ.ಟಿ. ಕೃಷ್ಣೆಗೌಡ ಸಿದ್ದರಾಜು, ಯಳಂದೂರು ವಿಭಾಗದ ಆರ್.ಕೃಷ್ಣಮೂರ್ತಿ, ಚಾಮರಾಜನಗರ ವಿಭಾಗದ ಕೆ. ಪ್ರಭು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರಸ್ಥಾನ ಆರಕ್ಷಕ ಉಪನಿರೀಕ್ಷಕರಾದ ಬಿ.ಸಿ. ಕುಂಚನೂರು, ಗೃಹರಕ್ಷಕ ದಳದ ಸೋಮಣ್ಣ ಅವರು ಉಪಸ್ಥಿತರಿದ್ದರು.
-
Mysore57 minutes agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mysore4 hours agoಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
-
Chikmagalur4 hours agoಕಾಫಿನಾಡಲ್ಲಿ ನಿಲ್ಲದ ಕಾಡಾನೆ ದಾಳಿ: ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರು
-
Chikmagalur4 hours agoಗ್ರಾ.ಪಂ.ಸದಸ್ಯ ಗಣೇಶ್ ಕೊಲೆ ಪ್ರಕರಣ: ಐವರ ಬಂಧನ, ಮೂವರಿಗಾಗಿ ತೀವ್ರ ಶೋಧ
-
State6 hours agoನಾಳೆಯಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸುತ್ತ ಹೈ ಆಲರ್ಟ್ 6,000 ಪೊಲೀಸ್ ಭದ್ರತೆ
-
Hassan3 hours agoHKS PUC ಕಾಲೇಜಿನಲ್ಲಿ ಜರುಗಿದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಸಮಾರೋಪ ಸಮಾರಂಭ
-
Mysore9 hours agoಕೊಲ್ಕತ್ತಾದ ಮೈಸೂರು ಉದ್ಯಾನಕ್ಕೆ 10ನೇ ಚಾಮರಾಜ ಒಡೆಯರ್ ನಾಮಫಲಕ ಅಳವಡಿಸಲು ಪತ್ರ
-
Hassan9 hours agoರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಾಫಿ ಕಳ್ಳತನ
