Chamarajanagar
ಮೆಕ್ಕೆಜೋಳ ಖರೀದಿಸಲು ನೊಂದಣಿ ಕೇಂದ್ರ ಕಾರ್ಯಾರಂಭ
ಚಾಮರಾಜನಗರ: ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ರೈತರಿಂದ ನೇರವಾಗಿ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಮೂಲಕ ಮೆಕ್ಕೆಜೋಳ ಖರೀದಿಸುತ್ತಿದ್ದು, ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಚಾಮುಲ್) ಸಹಕಾರ ಸಂಘಗಳ ಮೂಲಕವೂ ಖರೀದಿ ಕೇಂದ್ರ ತೆರೆಯಲಾಗಿದೆ.
ಚಾಮರಾಜನಗರದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ನಿಯಮಿತವು ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಒಡೆತನದ ಪಶು ಆಹಾರ ಘಟಕಗಳಿಗೆ ಪಶು ಆಹಾರ ಉತ್ಪಾದನೆಗೆ ಅವಶ್ಯವಿರುವ ಮೆಕ್ಕೆಜೋಳವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‍ಗೆ 2,400 ರೂ. ಗಳಂತೆ (ಮೂಲ ಬೆಲೆ, ಎರಡು ಗೋಣಿಚೀಲದ ಮೊತ್ತ ಮತ್ತು ಸಾಗಾಣಿಕೆ ಮೊತ್ತ ಸೇರಿದಂತೆ) ಗುಣಮಟ್ಟ ನಿಬಂಧನೆಗೊಳಪಟ್ಟು ರೈತರಿಂದ ನೇರವಾಗಿ ಖರೀದಿಸಲು ತೀರ್ಮಾನವಾಗಿರುತ್ತದೆ.

ಅದರಂತೆ ಜಿಲ್ಲೆಯ ರೈತರಿಂದ ಕರ್ನಾಟಕ ಹಾಲು ಮಹಾಮಂಡಳಿಯ ಹಾಸನ ಪಶು ಆಹಾರ ಘಟಕಕ್ಕೆ ನಿಗದಿಪಡಿಸಿದ ದರದಲ್ಲಿ ಮೆಕ್ಕೆಜೋಳ ಖರೀದಿಸಲು ಪ್ರಕ್ರಿಯೆ ಆರಂಭವಾಗಿರುತ್ತದೆ. ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಒಕ್ಕೂಟದ ನಿಯೋಜಿತ ಅಧಿಕಾರಿಗಳ ಸಮನ್ವಯದೊಂದಿಗೆ ಎನ್‍ಇಎಂಎಲ್ ಸಂಸ್ಥೆ ಅಭಿವೃದ್ಧಿಪಡಿಸಿದ ಇ-ಸಂವೃದ್ಧಿ ಹಾಗೂ ಸರ್ಕಾರದ ಫ್ರೂಟ್ಸ್ ತಂತ್ರಾಂಶದ ಮೂಲಕ ನೋಂದಣಿ ಮಾಡಿ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ನಂತರ ಖರೀದಿಸಲಾಗುವುದು.
ಮೆಕ್ಕೆಜೋಳ ಬೆಳೆದು ಬೆಳೆ ಸಮೀಕ್ಷೆಯಲ್ಲಿ ಮೆಕ್ಕೆಜೋಳ ಬೆಳೆ ಎಂದು ಆರ್.ಟಿ.ಸಿ ವಾರು ನಮೂದಾಗಿರುವ ರೈತರು ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ. ಯೋಜನೆಯಡಿ ಎಕರೆಗೆ 12 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಪ್ರಮಾಣದ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳವನ್ನು ಮಾತ್ರ ಖರೀದಿಸಲಾಗುವುದು. ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಡಿಬಿಟಿ ಮೂಲಕ ಹಣ ಪಾವತಿಸಲಾಗುವುದು.

ಮೆಕ್ಕೆಜೋಳ ಮಾರಾಟ ಮಾಡಲು ಆಸಕ್ತ ರೈತರು ಚಾಮರಾಜನಗರದ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ತಾಲೂಕು ಉಪ ಕಚೇರಿಗಳನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಚಾಮುಲ್ ಮೊ.ಸಂ. 6366824213, ಚಾಮರಾಜನಗರ ಮತ್ತು ಯಳಂದೂರು ಮೊ.ಸಂ. 9945828993, ಗುಂಡ್ಲುಪೇಟೆ ಮೊ.ಸಂ. 9606098335, ಹನೂರು ಮೊ.ಸಂ 9740576484, ಕೊಳ್ಳೇಗಾಲ ಮೊ.ಸಂ. 6366824224 ಸಂಪರ್ಕಿಸುವಂತೆ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ರಾಜ್‍ಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
Chamarajanagar
ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವು ವಿಶೇಷಚೇತನರಲ್ಲಿ ಹೊಸಚೈತನ್ಯ : ಶ್ರೀರೂಪ
ಚಾಮರಾಜನಗರ: ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ವತಿಯಿಂದ ಆಯೋಜಿಸಿರುವ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವು ವಿಶೇಷಚೇತನರಲ್ಲಿ ಹೊಸಚೈತನ್ಯ ಮೂಡಿಸುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಬೆಂಗಳೂರು ಇವರ ವತಿಯಿಂದ ನಡೆದ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವನ್ನು ಉದ್ಘಾಟಿಸಿ, ವಿಶೇಷಚೇತನರಿಗೆ ಕೃತಕ ಕೈ-ಕಾಲು ಜೋಡಣೆ ಮಾಡಿ ಮಾತನಾಡಿದರು.

ಈ ಕಾರ್ಯಕ್ರಮವು ಒಂದು ಅರ್ಥಪೂರ್ಣ ಭಾಗವಾಗಿರುವುದು ಸಂತೋಷದ ವಿಷಯವಾಗಿದೆ. ಒಂದು ದೇಶ ಅಭಿವೃದ್ಧಿ ಆಗಬೇಕಾದರೆ ಒಂದು ರಸ್ತೆ, ಒಂದು ಉತ್ತಮ ಕಟ್ಟಡವಲ್ಲ ಸಮಾಜದಲ್ಲಿ ದುರ್ಬಲರಿಗೆ ಯಾವ ರೀತಿ ಸಹಾಯ ಮಾಡುತ್ತೇವೆ ಎಂಬುವುದು ದೊಡ್ಡ ವಿಷಯ. ಏಕೆಂದರೆ ದುರ್ಬಲ ವರ್ಗದವರನ್ನು ಗುರುತಿಸಿ ಕೃತಕ ಕೈ-ಕಾಲು ಜೋಡಣೆ ಮಾಡುತ್ತಿರುವುದು ಒಂದು ಅವಿಸ್ಮರಣೀಯವಾದದ್ದು ಎಂದು ರೋಟರಿ, ಎಂಎಸ್‌ಐಎಲ್ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷಚೇತನರಿಗೆ ಉಚಿತ ಕೈ-ಕಾಲು ಜೋಡಣೆಯಿಂದ ಅವರಲ್ಲಿ ಆತ್ಮವಿಶ್ವಾಸ, ಹೊಸಭವಿಷ್ಯ, ಹೊಸ ಜೀವನ, ಹೊಸ ಚೈತನ್ಯ ಬರುತ್ತದೆ. ಕೈ-ಕಾಲು ಜೋಡಣೆಯಿಂದ ಅವರು ತಮ್ಮ ಕಾಲಿನ ಮೇಲೆ ನಿಂತು ಕೆಲಸ ಮಾಡಬಹುದು. ಇಂತಹ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಜಿಲ್ಲಾ ಗೌರ್ವನರ್ ಪಿ.ಕೆ.ರಾಮಕೃಷ್ಣ ಮಾತನಾಡಿ, ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ವತಿಯಿಂದ ಅಯೋಜಿಸಿರುವ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ಒಂದು ಅದ್ಭುತವಾದ ಕಾರ್ಯಕ್ರಮವಾಗಿದೆ. ರೋಟರಿ ಸಂಸ್ಥೆಯು ಇಂಟರ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಸಮಾಜದಲ್ಲಿ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ.ರೋಟರಿ ಅಧ್ಯಕ್ಷ ಚಂದ್ರಶೇಖರ್ ಅವರು ತಮ್ಮ ಅವಧಿಯಲ್ಲಿ 300 ಕಾರ್ಯಕ್ರಮಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದಾರೆ ಚಾಮರಾಜನಗರ ರೋಟರಿ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಮಿನಿ ಜಿಲ್ಲಾ ಗೌರ್ನರ್ ಯಶಸ್ವಿ ಸೋಮಶೇಖರ್ ಮಾತನಾಡಿ, ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ಒಂದು ಸೇವಾ ಸಂಸ್ಥೆಯಾಗಿದ್ದು, ಕಳೆದ 120 ವರ್ಷಗಳಿಂದ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಗಡಿಜಿಲ್ಲೆಯಲ್ಲಿ ಸೇವಾ ಕಾರ್ಯಕ್ರಮ ಮಾಡುತ್ತಿದೆ. ಕೃತಕ ಕೈ-ಕಾಲು ಜೋಡಣೆಯೊಂದಿಗೆ ಕಡಿಮೆವೆಚ್ಚದಲ್ಲಿ ಡಯಾಲಿಸಸ್ ಮಾಡುತ್ತಿದೆ, ಅಲ್ಲದೆ ರಕ್ತದಾನ, ಉಚಿತ ಕಣ್ಣಿನ ತಪಾಸಣಾ ಶಿಬಿರ ಮಾಡುವ ಮೂಲಕ ರೋಟರಿ ಮೆರುಗು ಹೆಚ್ಚು ಮಾಡುತ್ತಿದೆ ಎಂದರು.

ರೋಟರಿ ಸಂಸ್ಥೆ ಮಾಜಿ ಜಿಲ್ಲಾ ಗೌರ್ನರ್ ಡಾ.ನಾಗಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಚಿತ ಕೃತಕ ಕೈ- ಕಾಲು ಶಿಬಿರಕ್ಕೆ 30 ಮಂದಿ ನಿರೀಕ್ಷೆ ಮಾಡಲಾಯಿತು. ಆದರೆ ನಿರೀಕ್ಷೆಗೂ ಮೀರಿ 115 ಮಂದಿ ಬಂದರು. ನಾವು ಈ ಕಾರ್ಯಕ್ರಮ. ರೂಪಿಸುವಾಗ 3 ಲಕ್ಷ ಆಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇವು ಆದರೆ ಆದರೆ ನಿರೀಕ್ಷೆಗೂ ಮೀರಿ ಬಂದದ್ದರಿಂದ 13 ಲಕ್ಷ ವೆಚ್ಚ ಆಯಿತು. ನಮ್ಮ ಮನವಿಗೆ ಸ್ಪಂದಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಎಂಎಸ್‌ಐಎಲ್ ವತಿಯಿಂದ 8 ಲಕ್ಷ ನೀಡಿದರು ಎಂದರು.
.ಡಯಾಲಿಸಸ್ ಏಕೆ ಆಗುತ್ತದೆ ಎಂಬುವುದರ ಬಗ್ಗೆ ಅರಿವು ಮೂಡಿಸಲು ಮುಂದಿನ ವರ್ಷ ಒಂದು ದೊಡ್ಡ ಕಾರ್ಯಕ್ರಮ ಮಾಡಲಾಗುತ್ತದೆ. ಅಲ್ಲದೆ 140 ದೂರದ ಕೊಯಮತ್ತೂರಿಗೆ ಹೋಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತದೆ. ಆಗಾಗಿ ಜಿಲ್ಲಾ ಕೇಂದ್ರದಲ್ಲಿ ಕಣ್ಣಿನ ಆಸ್ಪತ್ರೆ ತೆರೆದು ಇಲ್ಲಿಯ ಶಸ್ತ್ರಚಿಕಿತ್ಸೆ ಮಾಡಲು ರೋಟರಿ ಸಂಸ್ಥೆ ಚಿಂತನೆ ಆಗಿದೆ. ಆದ್ದರಿಂದ ಜಿಲ್ಲಾಡಳಿತ ಕೊಡಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ವತಿಯಿಂದ ಜಾಗ ಮಾಡಿದರು.

ರೋಟರಿ ಅಧ್ಯಕ್ಷ ಚಂದ್ರುಶೇಖರ್ ಮಾತನಾಡಿ, ಕಳೆದ ಒಂದು ವರ್ಷದಿಂದ ರೋಟರಿ ಸಂಸ್ಥೆಯ ಹಳೆಯ ಕಾರ್ಯಕ್ರಮಗಳನ್ನು ಮುಂದುವರಿಸುತ್ತಾ ಹಲವು ಹೊಸ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತೇನೆ. ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರವು 300ನೇ ಕಾರ್ಯಕ್ರಮವಾಗಿದೆ ಎಂದರು.
ರೋಟರಿ ಸದಸ್ಯ ರಾಮು ಅವರು ರೋಟರಿ ಸಂಸ್ಥೆಗೆ 1000 ಡಾಲರ್ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
Chamarajanagar
ಕನಕ ಭವನದ ಕಾಮಗಾರಿಗೆ 50 ಲಕ್ಷ ರೂ. ಅನುದಾನ: ಯುವ ಮುಖಂಡ ರಘು ಶ್ಲಾಘನೆ
ಗುಂಡ್ಲುಪೇಟೆ: ಪಟ್ಟಣದಲ್ಲಿ ಕನಕ ಭವನದ ಮುಂದುವರೆದ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂ. ಮಂಜೂರು ಮಾಡಿರುವುದು ಸ್ವಾಗತಾರ್ಹ ಎಂದು ಕುರುಬ ಸಮುದಾಯದ ಯುವ ಮುಖಂಡ ರಘು ಶ್ಲಾಘಿಸಿದರು.

ಪಟ್ಟಣದ ಊಟಿ ರಸ್ತೆಯಲ್ಲಿರುವ ಕನಕ ಭವನದ ನಿರ್ಮಾಣ ದಶಕಗಳಿಂದ ನೆನಗುದಿಗೆ ಬಿದ್ದಿತ್ತು. ಶಾಸಕರಾದ ಎಚ್.ಎಂ.ಗಣೇಶ್‍ಪ್ರಸಾದ್ ಅವರು ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಹಂತ ಹಂತವಾಗಿ ಕನಕ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
Chamarajanagar
ಬ್ಯಾಡಮೂಡ್ಲು ಸರ್ಕಾರಿ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ
ಚಾಮರಾಜನಗರ: ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನಾ ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ವೇಳೆ ಶಾಲೆ ಆವರಣದಲ್ಲಿ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಮರಿಸ್ವಾಮಿ, ಸದಸ್ಯ ಹನುಮಪ್ಪ, ಕೃಷಿ ಮೇಲ್ವಿಚಾರಕ ಸುಪ್ರೀತ್ ಕುಮಾರ್, ವಲಯ ಮೇಲ್ವಿಚಾರಕ ಶಶಿಕುಮಾರ್ , ಸೇವಾ ಪ್ರತಿನಿಧಿ ರತ್ನಮ್ಮ ರಾಜೇಶ್ವರಿ, ಪಲ್ಲವಿ ಸೇರಿದಂತೆ ಇತರರಿದ್ದರು
-
Special16 hours agoಆಟೋಮ್ಯಾಟಿಕ್ ಕಾರಿನ ಗೇರ್ಬಾಕ್ಸ್ ಹಾಳಾಗದಂತೆ ಕಾಪಾಡುವುದು ಹೇಗೆ?
-
Kodagu14 hours agoಕೊಡಗು ಜಿಲ್ಲೆಯ ಮಳೆ ವಿವರ
-
Kodagu5 hours agoನಾಪೋಕ್ಲು ಭಾಗಮಂಡಲ ರಸ್ತೆಯಲ್ಲಿ ಕಾರು – ಬೈಕ್ ನಡುವೆ ಅಪಘಾತ -ಸವಾರ ದುರ್ಮರಣ
-
Chikmagalur19 hours agoನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ಇನ್ನೋವಾ ಪಲ್ಟಿ: ಇಬ್ಬರ ದುರ್ಮರಣ, ಚಾಲಕ ವಿರುದ್ಧ ಪ್ರಕರಣ
-
National8 hours agoವಿಶಾಖ ಉಕ್ಕು ಕಾರ್ಖಾನೆ ದುರಂತ| ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಣೆ: ಎಚ್ಡಿಕೆ
-
Chikmagalur10 hours agoಚಿಕ್ಕಮಗಳೂರಿನಲ್ಲಿ ಶಾಲಾ ಮಕ್ಕಳಿದ್ದ ಓಮಿನಿ ಕಾರು ಪಲ್ಟಿ: ತಪ್ಪಿದ ಭಾರೀ ಅನಾಹುತ
-
Special6 hours agoKPSC ಅಭ್ಯರ್ಥಿಗಳಿಗೆ ಸಿಹಿಸುದ್ದಿ: ಶೀಘ್ರದಲ್ಲೇ ಪ್ರಕಟವಾಗಲಿವೆ ಎರಡು ಪ್ರಮುಖ ಆಯ್ಕೆಪಟ್ಟಿಗಳು!!
-
Mandya8 hours agoಸಾಲದ ಬಾಧೆಗೆ ಮನನೊಂದು ಪತ್ನಿ ಹಾಗೂ ಮಗನನ್ನು ಹತ್ಯೆಗೈದು ವ್ಯಕ್ತಿಯೋರ್ವ ಆತ್ಮಹ*ತ್ಯೆಗೆ ಶರಣು
