Connect with us

Hassan

ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಾಫಿ ಕಳ್ಳತನ

Published

on

50 ಕೆಜಿ ಕಾಫಿಗೆ ಬರೋಬ್ಬರಿ 30000 ದರ ಹೆಚ್ಚಳ ಹಿನ್ನೆಲೆ,

ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದಾರೆ ಕಾಫಿ ಕಳ್ಳರು,

*ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಗಿಡದಲ್ಲಿದ್ದ ಕಾಫಿಯನ್ನು ಕಳ್ಳತನ ಮಾಡುತ್ತಾರೆ ಖದೀಮರು*

ವಾಹನದಲ್ಲಿ ಬರ್ತಾರೆ ಸಿಕ್ಕಸಿಕ್ಕ ಕಡೆ ಕಾಫಿ ದೋಚಿ ಹೊರಡುವ ಕಳ್ಳರು,

ಸುದೀಪ್ ಹಾಗೂ ಮಧು ಎಂಬುವರ ಕಾಫಿ ತೋಟದಲ್ಲಿ ಗಿಡದಲ್ಲಿದ್ದ ಕಾಫಿಯನ್ನೇ ಕಳ್ಳತನ ಮಾಡಿದ ಚಾಲಾಕಿ ಕಳ್ಳರು,

ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಳ್ಳತನ ಮಾಡಿರೋ ಕಾಫಿ ಕಳ್ಳರು,

ಬೇಲೂರು ತಾಲೂಕು, ಚಿನ್ನೇನಹಳ್ಳಿ ಗ್ರಾಮದಲ್ಲಿ ಘಟನೆ,

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿನ್ನೇನಹಳ್ಳಿ ಗ್ರಾಮ,

ಒಂದು ಎಕರೆ ಎರಡು ಎಕರೆ ಇರೋ ತೋಟವನ್ನೇ ಟಾರ್ಗೆಟ್ ಮಾಡಿರುವ ಕಾಫಿ ಕಳ್ಳರು,

ಗಿಡದಲ್ಲಿದ್ದ ಕಾಫಿಯನ್ನು ಬಿಡುತ್ತಿಲ್ಲ ಕದೀಮರು

Continue Reading

Hassan

ಶಾಂತಿಗ್ರಾಮದಲ್ಲಿ ಅಂತರ ಶಾಲಾ ವಿಜ್ಞಾನ ವಸ್ತುಪ್ರದರ್ಶನ ಯಶಸ್ವಿ

Published

on

ಹಾಸನ: ತಾಲೂಕಿನ  ಶಾಂತಿಗ್ರಾಮ ಹೋಬಳಿಯಲ್ಲಿನ ದೇವಿಹಳ್ಳಿ ಹಾಸನ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ವತಿಯಿಂದ ತನ್ನ ‘ಸ್ಟೇಕ್‌ಹೋಲ್ಡರ್ ಎಂಗೇಜ್‌ಮೆಂಟ್’ (ಭಾಗಿದಾರರ ಸಂವಹನ) ಉಪಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂತರ ಶಾಲಾ ವಿಜ್ಞಾನ ವಸ್ತುಪ್ರದರ್ಶನವು ಯಶಸ್ವಿಯಾಗಿ ಜರುಗಿತು.

ಈ ಕಾರ್ಯಕ್ರಮವನ್ನು ಕೃಷಿ ಮಹಾವಿದ್ಯಾಲಯದ ಡೀನ್  ಡಾ. ಕೆ. ಎನ್. ಮುನಿಸ್ವಾಮಿ ಗೌಡ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಇದರಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನವೀನ ವಿಜ್ಞಾನ ಮಾದರಿಗಳು ಮತ್ತು ಸೃಜನಶೀಲ ವಿಚಾರಗಳನ್ನು ಪ್ರದರ್ಶಿಸಿದರು. ಗಣ್ಯರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಸಾಧನೆಯನ್ನು ಮೆಚ್ಚಿ ಅಮೂಲ್ಯವಾದ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ ಮತ್ತು ವಿಜ್ಞಾನ ಮಾದರಿಗಳು ಸಾರ್ವಜನಿಕರ ಹಾಗೂ ಭಾಗಿದಾರರ ಪ್ರಶಂಸೆಗೆ ಪಾತ್ರವಾದವು.

ಈ ಸಂದರ್ಭದಲ್ಲಿ ನಿವೃತ್ತ ಕರ್ನಲ್ ಹಾಗೂ ಸ್ವತಂತ್ರ ಇಂಜಿನಿಯರ್ ಕೆ. ಎಸ್.ನಟೇಶ್  ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹಾಸನದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಭಾಸ್ಕರ್, ಶಾಂತಿಗ್ರಾಮದ ಸಬ್ ಇನ್ಸ್‌ಪೆಕ್ಟರ್  ಅರುಣ್, ಶಿಕ್ಷಣ ಸಂಯೋಜಕ  ಹರೀಶ್ ಮತ್ತು ಕ್ಲಸ್ಟರ್ ಹೆಡ್  ಸತೀಶ್ ಕುಮಾರ್ ಕೆ. ವಿ. ಉಪಸ್ಥಿತರಿದ್ದರು.

Continue Reading

Hassan

ಅಮಾನತು ಆದೇಶಕ್ಕೆ ಕೋರ್ಟ್ ತಡೆ: ಅಶೋಕ ಹಾರನಹಳ್ಳಿ ಬಣಕ್ಕೆ ಮೇಲುಗೈ

Published

on

ಹಾಸನ: ನಗರದ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ನಡೆಯುತ್ತಿದ್ದ ಕಾನೂನು ಸಮರಕ್ಕೆ ಈಗ ದೊಡ್ಡ ತಿರುವು ಸಿಕ್ಕಿದ್ದು, ಸಂಸ್ಥೆಯ 3 ಜನ ಕಾರ್ಯಕಾರಿ ಸಮಿತಿ ಸದಸ್ಯರ ವಿರುದ್ಧ ಹೊರಡಿಸಲಾಗಿದ್ದ ಅಮಾನತು ಆದೇಶಕ್ಕೆ ಹಾಸನದ ನೇ ಹೆಚ್ಚುವರಿ ಸಿವಿಲ್ ಜಡ್ಜ್ (ಕಿರಿಯ ವಿಭಾಗ) ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಆಡಳಿತ ಮಂಡಳಿಯ ಬಲಾಬಲದ ಲೆಕ್ಕಾಚಾರವು ಸಂಪೂರ್ಣವಾಗಿ ಅದಲು ಬದಲಾದಂತಾಗಿದೆ.

ವಿವಾದದ ಹಿನ್ನೆಲೆ ಏನು?

ಈ ಹಿಂದೆ ಕೆಲವು ಸಣ್ಣಪುಟ್ಟ ನೆಪವೊಡ್ಡಿ ಕಾರ್ಯಕಾರಿ ಮಂಡಳಿಯ ಸದಸ್ಯರುಗಳಾಗಿದ್ದ ಶ್ರೀಧರ್, ಡಾ. ಅರವಿಂದ್ ಹಾಗೂ ಜಿ.ಆರ್.ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿತ್ತು. ತನ್ಮೂಲಕ ಆರ್.ಟಿ. ದ್ಯಾವೇಗೌಡ ತಂಡದ ಸದಸ್ಯರು ತಮ್ಮಲ್ಲಿ ಬಹುಮತ ಇದೆ ಎಂದು ತೋರಿಸುತ್ತಾ ಆಡಳಿತದಲ್ಲಿ ಮುಂದುವರಿದಿದ್ದರು. ಆದರೆ, ಶುಕ್ರವಾರದಂದು ಹೊರಬಿದ್ದ ನ್ಯಾಯಾಲಯದ ಈ ಆದೇಶವು ಈ ಹಿಂದಿನ ಅಮಾನತು ಪ್ರಕ್ರಿಯೆಗೆ ಬ್ರೇಕ್ ಹಾಕಿದೆ.

ನ್ಯಾಯಾಲಯದ ಆದೇಶ: ಪ್ರತಿವಾದಿಗಳು 2025 ಜೂ.9 ರಂದು ಅರ್ಜಿದಾರರ ವಿರುದ್ಧ ಹೊರಡಿಸಿದ್ದ ಅಮಾನತು ಆದೇಶವನ್ನು ನ್ಯಾಯಾಲಯವು ಈಗ ಅಮಾನತ್ತಿನಲ್ಲಿಟ್ಟಿದೆ. ಅರ್ಜಿದಾರರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಲು, ಸಭೆಗಳಲ್ಲಿ ಭಾಗವಹಿಸಲು ಮತ್ತು ಪ್ರತಿನಿಧಿಸಲು ಯಾವುದೇ ಅಡ್ಡಿಪಡಿಸದಂತೆ ಪ್ರತಿವಾದಿಗಳು ಮತ್ತು ಅವರ ಪರವಾಗಿರುವವರಿಗೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಲಾಗಿದೆ.

ಸಂಸ್ಥೆಯ ಹಿತದೃಷ್ಟಿಯಿಂದ ಸಭೆಗಳನ್ನು ನಡೆಸಲು ಅವಕಾಶವಿದ್ದರೂ, ಅಮಾನತಿನ ನೆಪವೊಡ್ಡಿ ಸದಸ್ಯರನ್ನು ಸಭೆಯಿಂದ ಹೊರಗಿಡುವಂತಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.


ಬದಲಾದ ಬಲಾಬಲ: ನ್ಯಾಯಾಲಯದ ಈ ಮಧ್ಯಂತರ ತೀರ್ಪಿನಿಂದಾಗಿ ಅಮಾನತುಗೊಂಡಿದ್ದ ಸದಸ್ಯರು ಮತ್ತೆ ಸಕ್ರಿಯರಾಗಲು ದಾರಿ ಸುಗಮವಾಗಿದೆ.

ಸದ್ಯ 24 ಜನ ಸದಸ್ಯರಿರುವ ಕಾರ್ಯಕಾರಿ ಮಂಡಳಿಯಲ್ಲಿ ಅಶೋಕ ಹಾರನಹಳ್ಳಿ ಹಾಗೂ ಗುರುದೇವ್ ಬಣದ ಕಡೆಗೆ 14 ಸದಸ್ಯರ ಬಲವಿದ್ದರೆ, ಚೌಡಳ್ಳಿ ಜಗದೀಶ್ ಮತ್ತು ಆರ್.ಟಿ. ದ್ಯಾವೇಗೌಡ ಬಣದ ಕಡೆಗೆ 10 ಜನ ಸದಸ್ಯರು ಇರುವಂತಾಗಿದೆ. ಈ ಬೆಳವಣಿಗೆಯಿಂದಾಗಿ ಆಡಳಿತ ಮಂಡಳಿಯಲ್ಲಿ ಈಗ ಅಶೋಕ ಹಾರನಹಳ್ಳಿ ಬಣಕ್ಕೆ ಸ್ಪಷ್ಟ ಬಹುಮತ ಲಭಿಸಿದಂತಾಗಿದೆ.

Continue Reading

Hassan

3ನೇ ನಾಗರಾಜ ರಾವ್ ಜಗದಾಲೆ ಶೂಟಿಂಗ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ -2026: ಬಿ.ಎಂ.ರವಿಕೀರ್ತಿಗೆ ಚಿನ್ನದ ಪದಕ

Published

on

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಮಾಳೇನಹಳ್ಳಿ ಗ್ರಾಮದ ಬಿ.ಎಂ.ರವಿಕೀರ್ತಿ S / O ಮಲ್ಲೇಶ್ ಅವರು, ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಬೆಂಗಳೂರಿನಲ್ಲಿ ನಡೆದಂತಹ ರಾಜ್ಯ ಮಟ್ಟದ  3ನೇ ನಾಗರಾಜ ರಾವ್ ಜಗದಾಲೆ ಶೂಟಿಂಗ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ -2026ನಲ್ಲಿ 10 ಮೀಟರ್ ಓಪನ್ ಸೈಟ್ ಏರ್ ರೈಫಲ್ ಟೀಮ್ ಇವೆಂಟ್ ನಲ್ಲಿ ಚಿನ್ನದ ಪದಕ   ಗೆದ್ದಿದ್ದಾರೆ.

ಬಿ.ಎಂ.ರವಿಕೀರ್ತಿ ಅವರು 10 ಮೀ. ಓಪನ್ ಸೈಟ್ ಏರ್ ರೈಫಲ್ ನಲ್ಲಿ ಕಂಚಿನ ಪದಕ, 50 ಮೀಟರ್ ಸ್ಮಾಲ್ ಬೋರ್ ರೈಫಲ್ ಓಪನ್ ಸೈಟ್ ನಲ್ಲಿ ಕಂಚಿನ ಪದಕ,  50 ಮೀಟರ್ ಸ್ಮಾಲ್ ಬೋರ್ ರೈಫಲ್ ಓಪನ್ ಸೈಟ್ ಟೀಮ್ ಇವೆಂಟ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಇನ್ನೂ ಬೇಲೂರು ತಾಲೂಕಿನ ಮಡೇನಹಳ್ಳಿ ಎಸ್ಟೇಟ್ನ  ಎಂ.ಯುಗೇಂದ್ರ S / O ಸುಧೀರ್ ಕುಮಾರ್  ಅವರು,10 ಮೀಟರ್ ಓಪನ್ ಸೈಟ್ ಏರ್ ರೈಫಲ್ ಟೀಮ್ ಇವೆಂಟ್ ನಲ್ಲಿ ಬೆಳ್ಳಿ ಪದಕ ಪಡೆದು ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Continue Reading

Trending

error: Content is protected !!