Connect with us

Mysore

ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಕೆ.ವಿ.ಪ್ರಭಾಕರ್

Published

on

ಮೈಸೂರು: ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿತರಿಸುವ ಜೊತೆಗೆ ಚಂದಾ ಹಣ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಾ ತಮ್ಮ ಆದಾಯದ ಜೊತೆಗೆ‌ ಸಂಸ್ಥೆಗೂ ಆದಾಯ ತಂದುಕೊಡುವ ಮೂಲಕ ರಾಜ್ಯದ ಆರ್ಥಿಕತೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಪ್ರಾಯಪಟ್ಟರು.

ವಿಶ್ವ ಪತ್ರಿಕಾ ವಿತರಕರ ದಿನದ ಅಂಗವಾಗಿ ಏರ್ಪಡಿಸಿದ್ದ ಪತ್ರಿಕಾ ವಿತರಕರ ಸಮ್ಮೇಳನ‌ ಉದ್ಘಾಟಿಸಿ ಮಾತನಾಡಿದರು.

ಕೊಳಚೆ ಪ್ರದೇಶಗಳಿಂದ ವಿಧಾನಸೌಧದವರೆಗೂ ವ್ಯಾಪಿಸಿರುವ ಪತ್ರಿಕಾ ವಿತರಕರು ಮುದ್ರಣ ಮಾಧ್ಯಮದ ಬೆನ್ನುಮೂಳೆ ಮತ್ತು ಪತ್ರಿಕಾ ಸಂಸ್ಥೆಗಳ ನರಮಂಡಲ ಆಗಿ ಕಲಸ ಮಾಡುತ್ತಾರೆ. ಪತ್ರಿಕೆಯ ಚಂದಾ ಹಣ ಸಂಗ್ರಹಿಸುವ ಜೊತೆಗೆ ಸಣ್ಣ ಜಾಹಿರಾತುದಾರರನ್ನೂ ಸಂಸ್ಥೆಯ ಜೊತೆ ಬೆಸೆಯುತ್ತಾರೆ. (ಪತ್ರಿಕೆಗಳ ಒಳಗೆ ಜಾಹಿರಾತು ಕರಪತ್ರ ಹಾಕುವ insertion) ಎಂದರು.

ಸುದ್ದಿಗಳು, ಪತ್ರಿಕೆಗಳು ಹಳತಾಗುವ ಮೊದಲು, ಓದುಗರ ಕೈಗೆ ಕಾಫಿ ಲೋಟ ಬರುವ ಮೊದಲು ಪತ್ರಿಕಾ ವಿತರಕರು ಓದುಗರ ಮನೆ ಬಾಗಿಲಿಗೆ ತಲುಪುತ್ತಾರೆ. ಇದಕ್ಕಾಗಿ ಕೋಳಿ ಕೂಗುವ ಮೊದಲೇ ಮನೆಯಿಂದ ಎದ್ದು ಹೊರಡುತ್ತಾರೆ. ನಾವು ಪತ್ರಕರ್ತರು ಬೆಚ್ಚಗೆ ಮಲಗಿರುವಾಗ ಮಳೆ, ಚಳಿ ಮತ್ತು ಪ್ರತೀಕೂಲ ವಾತಾವರಣ ಲೆಕ್ಕಿಸದೆ ಸೈಕಲ್ ತುಳಿಯಬೇಕಿದೆ ಎಂದರು.

ಒಬ್ಬ ಪತ್ರಿಕಾ ವಿತರಕನಿಗೆ ತಿಂಗಳಿಗೆ ಸಿಗುವುದು ಕೆಲವೇ ಸಾವಿರ ರೂಪಾಯಿ ಇರಬಹುದು. ಆದರೆ, ಸಾವಿರಾರು ಪತ್ರಿಕಾ ವಿತರಕರು ಸಂಗ್ರಹಿಸುವ ಚಂದಾ ಹಣ ಮತ್ತು ಸಣ್ಣ ಪ್ರಮಾಣದ ಜಾಹಿರಾತು ಹಣ ಎಲ್ಲಾ ಒಟ್ಟು ಲೆಕ್ಕ ಹಾಕಿದರೆ ಹತ್ತಾರು ಕೋಟಿ‌ ಆಗುತ್ತದೆ. ಹೀಗಾಗಿ ಪತ್ರಿಕೋದ್ಯಮದ ಮತ್ತು ರಾಜ್ಯದ ಆರ್ಥಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವ ಸಮುದಾಯವಾಗಿದೆ ಎನ್ನುವುದನ್ನು ನಾವು ಮರೆಯಬಾರದು ಎಂದರು.

ಅಸಂಘಟಿತವಾಗಿಯೇ ಉಳಿದಿದ್ದ ವಿತರಕ‌ ಸಮುದಾಯ ಒಟ್ಟಿಗೇ ಸಂಘಟಿತರಾಗುವ ಅನಿವಾರ್ಯತೆ ಸೃಷ್ಟಿಯಾಗಿದ್ದು ಕೋವಿಡ್ ಸಮಯದಲ್ಲಿ.

ಸದಾ ಪತ್ರಿಕಾ ಸಂಸ್ಥೆಗಳ ಪಾಲಿಗೆ ಅನಾಥ ರಕ್ಷಕರಾಗುವ ವಿತರಕರು, ಕೋವಿಡ್ ಸಂದರ್ಭದಲ್ಲಿ ತಾವೇ ಸ್ವತಃ ಅನಾಥರಾದರು. ಈ ಹೊತ್ತಲ್ಲಿ ಶಂಬುಲಿಂಗ ಅವರು ವಿತರಕರ ಸಂಘ ಮತ್ತು ಸಂಘಟನೆಗೆ ಜೀವ ತುಂಬಿದರು ಎಂದು ಮೆಚ್ಚುಗೆ ಸೂಚಿಸಿದರು.

ಸಂಘಟನೆ ಮೊದಲ ಹೆಜ್ಜೆ. ಸಂಘಟನೆ ಬೆನ್ನ ಹಿಂದೆಯೇ ನಿಮ್ಮ ಹಕ್ಕುಗಳಿಗೂ ಜೀವ ಬರುತ್ತದೆ. ಬಳಿಕ ಸರ್ಕಾರದ ಸವಲತ್ತುಗಳು ನಿಮ್ಮ ಹಕ್ಕು ಆಗಿ ಒಂದೊಂದಾಗಿ ಜಾರಿ ಆಗುತ್ತವೆ. ಜೊತೆಗೆ ಕೆಲಸದ ಅಭದ್ರತೆಯೂ ಕಡಿಮೆ ಆಗುತ್ತದೆ ಎಂದರು.

ವಿತರಕ ಸಮುದಾಯದ ಪರವಾಗಿ ಈ ಸಮ್ಮೇಳನದಲ್ಲಿ ಕೆಲವೊಂದು ಬೇಡಿಕೆಗಳನ್ನು ಇಡಲಾಗಿದೆ. ಅವೆಲ್ಲವನ್ನೂ ಪರಿಶೀಲಿಸಿ, ಹಂತ ಹಂತವಾಗಿ ಕ್ರಮ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತೇನೆ.

ಪತ್ರಿಕಾ ವಿತರಕರಿಗೆ ಸರ್ಕಾರದ ಸವಲತ್ತುಗಳು ಸಿಗಬೇಕು ಎನ್ನುವುದು ಒಂದು‌ ಕಡೆ ಇರಲಿ. ಜೊತೆಗೆ ಪತ್ರಿಕಾ ಸಂಸ್ಥೆಗಳೂ, ಇನ್ನಿತರೆ ಉದ್ಯಮಿಗಳ ಮೂಲಕ CSR ನಿಧಿಯಿಂದ ಈ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ಅವಕಾಶಗಳೂ ಇವೆ. ಈ ದಿಕ್ಕಿನಲ್ಲೂ‌ ಗಮನ ಹರಿಸುವ ಅಗತ್ಯವಿದೆ ಎಂದರು.‌

ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ KUWJ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಪತ್ರಿಕಾ ವಿತರಕರ ಮಹಾ ಸಂಘದ ಅಧ್ಯಕ್ಷ ಶಂಭುಲಿಂಗ ಅವರು ಸೇರಿ ಹಲವು ಮಹನೀಯರು ಉಪಸ್ಥಿತರಿದ್ದರು.

Continue Reading

Mysore

ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಸ್ಥೆ ಗಳು ನೆರವು ನೀಡಿ : ಲಯನ್ ಸಂಸ್ಥೆ ಅಧ್ಯಕ್ಷ ಜಯರಾಮ್

Published

on

ವರದಿ: ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ: ಸ್ವಯಂ ಸೇವಾ ಸಂಸ್ಥೆಗಳಿಗೆ ಉಳ್ಳವರು ನೆರವು ನೀಡುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗಬೇಕು ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜಯರಾಮ್ ಹೇಳಿದರು.
ತಾಲೂಕಿನ ಹೊಸೂರು ಸಮೀಪದ ಏಮ್ ಫಾರ್ ಸೇವಾ ಸಂಸ್ಥೆಯ ಬಾಲಕರ ವಸತಿ ನಿಲಯದ ವಿಧ್ಯಾರ್ಥಿಗಳಿಗೆ ಲಯನ್ಸ್ ಕಬ್ಲ್ ಅಪ್ ಮೈಸೂರು ಚಂದನ ಸಂಸ್ಥೆಯ ವತಿಯಿಂದ ಉಚಿತ ದಿನಸಿ ಸಾಮಗ್ರಿಗಳನ್ನು ವಿತರಿಸಿ ಅವರು ಮಾತಾನಾಡಿದರು.
ಸಮಾಜದಲ್ಲಿ ಇಂದಿಗೂ ಮೂಲಭೂತ ಸೌಲಭ್ಯಗಳನ್ನೇ ಅನುಭವಿಸದ ವರ್ಗದ ಮಕ್ಕಳು ಸಾಕಷ್ಟು ಪ್ರಮಾಣದಲ್ಲಿ ಇದ್ದು, ಅಂತಹ ಮಕ್ಕಳನ್ನೇ ಗುರುತಿಸಿ ಈ ಸಂಸ್ಥೆಯ ಮೂಲಕ ಅವರಿಗೆ ಉಚಿತ ಊಟ,ಶಿಕ್ಷಣ, ವಸತಿ ಒದಗಿಸುತ್ತಿರುವುದು ಸಂತಸದ ಸಂಗತಿಯಾಗಿದ್ದು, ಈ ಕಾರ್ಯಕ್ರಮದ ಮೂಲಕ ಸಂಸ್ಥೆಯ ಕಾರ್ಯಕ್ಕೆ ನಾವು ಕೈಜೋಡಿಸಿರುವುದು ಹೆಮ್ಮೆ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಎಚ್.ಎಸ್. ಸುರೇಶ್ ಬಾಬು, ಬಿ.ಎಸ್.ಸ್ವಾಮಿ, ಜಯಂತ್, ಚಿಕ್ಕಸಿದ್ದೇಗೌಡ, ರವಿಲಿಂಗಪ್ಪ,ಮಾದೇಶ, ಹೇಮಂತ್ ಕುಮಾರ್,, ಕಾರ್ಯದರ್ಶಿ ಎಚ್.ಎ.ರಾಘವೇಂದ್ರ, ಖಜಾಂಚಿ ಸಂಪತ್ ಕುಮಾರ್, ಸೇವಾ ಕಾರ್ಯ ಸಂಚಾಲಯ ಮಿರ್ಲೆ ಗಣೇಶ್, ಸದಸ್ಯರಾದ ಪುನೀತ್, ಲೋಹಿತ್,
ಕೆ.ಅರ್.ನಗರ ಚೆಸ್ಕಾಂ ಇಂಜಿನಿಯರ್ ಸಿರಿಯೂರು ಪ್ರಶನ್ನ, ಎಲ್.ಐ‌.ಸಿ.ಸಲಹೆಗಾರ ದೊಡ್ಡಕೊಪ್ಪಲು ರಮೇಶ್ ಮುಖಂಡ ಹೊಸೂರು ರಾಘವೇಂದ್ರ ಮುಂತಾದವರು ಹಾಜರಿದ್ದರು.

Continue Reading

Mysore

ಚಾಮುಂಡಿ ಕಪ್‌ ಗೆದ್ದ ಸಂಯುಕ್ತ ಮೇಟಗಳ್ಳಿ ತಂಡ

Published

on

ಮೈಸೂರು: ನಗರದ ಇಟ್ಟಿಗೆಗೂಡಿನ ಗುರುಕುಲ ಸ್ಪೋರ್ಟ್‌ ಕ್ಲಬ್‌ ವತಿಯಿಂದ ಚಾಮುಂಡೇಶ್ವರಿ ಕಪ್‌ ೨೧ವರ್ಷದೊಳಗಿನವರ ಮ್ಯಾಟ್‌ ಕಬ್ಬಡಿ ಪಂದ್ಯಾವಳಿಯಲ್ಲಿ ಸಂಯುಕ್ತ ಮೇಟಗಳ್ಳಿ ತಂಡದವರು ವಿಜೇತರಾದರು.
ಇಟ್ಟಿಗೆಗೂಡಿನ ಸಾವಿತ್ರಿ ಶಾಲೆಯಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಒಟ್ಟು ೧೧ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಸಂಯುಕ್ತ ಮೇಟಗಳ್ಳಿ(ಪ್ರಥಮ), ಗುರುಕುಲ ಸ್ಪೋರ್ಟ್ಸ್‌ ಕ್ಲಬ್‌(ದ್ವಿತೀಯ), ವಿಸ್ಮಯ(ತೃತೀಯ) ಹಾಗೂ ಸಿಆರ್‌ ಎಸ್‌ ಬಾಯ್ಸ್‌ ತಂಡ ನಾಲ್ಕನೇ ಬಹುಮಾನ ಪಡೆದುಕೊಂಡವು. ವಿಜೇತರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಬಹುಮಾನ ವಿತರಿಸಿ, ನಮ್ಮ ಗ್ರಾಮೀಣ ಕ್ರೀಡೆ ಉಳಿಸುವ ನಿಟ್ಟಿನಲ್ಲಿ ಇಂತಹ ಪಂದ್ಯಾವಳಿಗಳು ಪೂರಕ ಎಂದು ತಿಳಿಸಿದರು.
ರಾಜು, ಅಭಿ, ದರ್ಶನ್‌, ನಿಖಿತ್‌, ಪುಟ್ಟರಾಜ ಹೊನ್ನಾವರ ಲತಾ ಶ್ರೀನಿವಾಸ್, ರೇಣುಕಾ ರಾಜ್, ಪ್ರಿಯ ರಮೇಶ್ ಇನ್ನಿತರರು ಪಾಲ್ಗೊಂಡಿದ್ದರು.

Continue Reading

Mysore

ದಸರಾ, ಚಾಮುಂಡೇಶ್ವರಿ ಸುತ್ತಲೂ ರಾಜಕೀಯ: ಪ್ರಮೋದಾದೇವಿ ಒಡೆಯರ್ ಬೇಸರ

Published

on

ಮೈಸೂರು: ಚಾಮುಂಡೇಶ್ವರಿ ದೇವಸ್ಥಾನ ಮತ್ತು ಈ ವರ್ಷದ ಸರ್ಕಾರ ದಸರಾ ಆಚರಣೆಯ ಗೊಂದಲಕ್ಕೀಡಾದ ಸಂಗತಿ. ದಸರಾ, ಚಾಮುಂಡೇಶ್ವರಿ ಸುತ್ತಲೂ ರಾಜಕೀಯ ನಡೆಯುತ್ತಿದೆ ಎಂದು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ಸರ್ಕಾರವು ಈ ವರ್ಷ ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು, ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿರುವ ಪವಿತ್ರ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ರಾಜಕೀಯವು ನಡೆಯುತ್ತಿರುವ ಸಂಗತಿ ತೀವ್ರ ಬೇಸರ ತಂದಿದೆ.

ಈ ವರ್ಷದ ನಾಡ ಹಬ್ಬ (ಜನತಾ ದಸರಾ) ಉದ್ಘಾಟನೆಗೆ ಆಹ್ವಾನಿಸಲಾದ ಗಣ್ಯರ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿದ್ದು ಇದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ಧರ್ಮಕ್ಕೆ ಸೇರಿಲ್ಲ ಎಂಬಂತಹ ಹೇಳಿಕೆಗಳು ಅನಗತ್ಯ. ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಪದ್ಧತಿಗನುಗುಣವಾಗಿ ಪೂಜೆ ಆಚರಣೆ ನಡೆದರೂ ಹಿಂದಿನಿಂದಲೂ ಅನ್ಯ ಧರ್ಮೀಯರಿಗೆ ದೇವಸ್ಥಾನದಲ್ಲಿ ಪ್ರವೇಶದ ಅವಕಾಆಶಾವಿತ್ತು ಮತ್ತು ಈಗಲೂ ಇದೆ. ಅದು ಹಿಂದೂ ದೇವಸ್ಥಾನವಲ್ಲದಿದ್ದರೆ, ಅದನ್ನು ಎಂದಿಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ತರಲಾಗುತ್ತಿರಲಿಲ್ಲ.

ಸರ್ಕಾರದ ದಸರಾ ಒಂದು ಸಾಂಸ್ಕೃತಿಕ ಆಚರಣೆ ಎಂಬುದು ನಮ್ಮ ಪರಿಗಣಿತ ಅಭಿಪ್ರಾಯ. ಸರ್ಕಾರದ ವತಿಯಿಂದ ಯಾವುದೇ ಧಾರ್ಮಿಕ ಪಂಗಡದ ಆಚರಣೆಗಳಿಗೆ ಅವಕಾಶವಿಲ್ಲವಾಗಿದ್ದು ಅಂತಹ ಉತ್ಸವವನ್ನು ನಡೆಸುವಲ್ಲಿ ಧಾರ್ಮಿಕ ಪಾವಿತ್ರ್ಯ, ಸಂಪ್ರದಾಯ ಅಥವಾ ಪರಂಪರೆಯನ್ನು ಪಡೆಯಲು ಸಾಧ್ಯವಿಲ್ಲ. ಈ ಕಾರಣದಿಂದ ಕರ್ನಾಟಕ ಸರ್ಕಾರ ಆಯೋಜಿಸುವ ಆಚರಣೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೊರತು ಧಾರ್ಮಿಕ ಸಂಪ್ರದಾಯವಾಗಿಲ್ಲ.

ಆಶ್ವೀಯುಜ ಶರನ್ನವರಾತ್ರಿ ಸಮಯದಲ್ಲಿ ನಾವು ಖಾಸಗಿಯಾಗಿ ನವರಾತ್ರಿ ಸಂಬಂಧ ಧಾರ್ಮಿಕ ಆಚರಣೆಗಳನ್ನು ಹಳೆಯ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಅರಮನೆಯ ಒಳಾಂಗಣದಲ್ಲಿ ಮತ್ತು ಅರಮನೆಯ ಹೊರಾಂಗಳದಲ್ಲಿ ಶಾಸ್ತ್ರೋಕ್ತವಾಗಿ ಪಾಡ್ಯದಿಂದ ನವಮಿ ಪರ್ಯಂತ ಪೂಜೆನಡೆಸಿ ವಿಜಯದಶಮಿ ಆಚರಣೆಯೊಂದಿಗೆ ಪೂರ್ಣಗೊಳ್ಳುತ್ತದೆ.

ಇದೇ ದಿನಗಳಲ್ಲಿ ಕರ್ನಾಟಕ ಸರ್ಕಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಮುಂದೆ ಆಯೋಜಿಸಲಾಗಿರುವುದರಿಂದ, ನಮ್ಮ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸಮಯದ ಅತಿಕ್ರಮಣವನ್ನು ತಪ್ಪಿಸಲು, ಶ್ರೀ ಚಾಮುಂಡೇಶ್ವರಿಯ ಉದ್ಘಾಟನೆ ಮತ್ತು ಶ್ರೀ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆಗೆ ಶುಭ ಮತ್ತು ಸೂಕ್ತ ಸಮಯವನ್ನು ನಿಗದಿಪಡಿಸಲಾಗುತ್ತದೆ.

ಈ ನಿಟ್ಟಿನಲ್ಲಿ ಇಂದಿನ ಗಣೇಶ ಚತುರ್ಥಿಯ ಆಚರಣೆ ಮತ್ತು ಅನುಗ್ರಹದಿಂದ ಎಲ್ಲಾ ಅಡೆತಡೆಗಳು, ತಪ್ಪು ಕಲ್ಪನೆಗಳು ಮತ್ತು ಸಂಘರ್ಷಗಳನ್ನು ನಿವಾರಣೆಯಾಗಿ. ಶೀಘ್ರದಲ್ಲೇ ಒಮ್ಮತವನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ.

 

Continue Reading

Trending

error: Content is protected !!