Connect with us

Mandya

ಜಿನೀವಾ ಒಪ್ಪದ ದಿನಾಚರಣೆ 2025 ಕಾರ್ಯಕ್ರಮ

Published

on

ಮದ್ದೂರು : ಪ್ರವಾಹ, ಚಂಡಮಾರುತಗಳಂತಹ ವಿಪತ್ತುಗಳು ಸಂಭವಿಸಿದಾಗ, ರೆಡ್ ಕ್ರಾಸ್ ಸ್ಥಳೀಯ ಸಮುದಾಯಗಳಿಗೆ ಆಹಾರ, ಆಶ್ರಯ ಮತ್ತು ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸುವ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿದೆ ಎಂದು ಭಾರತೀಯ ರೆಡ್ ಕ್ರಾಸ್ ಜಿಲ್ಲಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ಮಹಿಳಾ ಸಕರ್ಾರಿ ಕಾಲೇಜಿನಲ್ಲಿ ಗುರುವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ಜಿನೀವಾ ಒಪ್ಪದ ದಿನಾಚರಣೆ 2025 ಉದ್ಘಾಟಿಸಿ ಮಾತನಾಡಿದರು.
ರೆಡ್ ಕ್ರಾಸ್ ಒಂದು ಅಂತರರಾಷ್ಟ್ರೀಯ ಮಾನವೀಯ ಚಳವಳಿಯಾಗಿದ್ದು, ಯುದ್ಧ ಮತ್ತು ವಿಪತ್ತುಗಳ ಸಮಯದಲ್ಲಿ ಬಳಲುತ್ತಿರುವ ಜನರಿಗೆ ತಾರತಮ್ಯವಿಲ್ಲದೆ ಸಹಾಯ ಮಾಡುತ್ತದೆ. ಇದರ ಮುಖ್ಯ ಉದ್ದೇಶಗಳು ಮಾನವ ದುಃಖವನ್ನು ನಿವಾರಿಸುವುದು, ಆರೋಗ್ಯವನ್ನು ಉತ್ತೇಜಿಸುವುದು, ವಿಪತ್ತು ಪರಿಹಾರ ಒದಗಿಸುವುದು ಮತ್ತು ಎಲ್ಲಾ ಜನರಲ್ಲಿ ತಿಳುವಳಿಕೆ ಮತ್ತು ಶಾಂತಿಯನ್ನು ಬೆಳೆಸುವುದು ಎಂದರು.
ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಹಾಗೂ ಭಾರತೀಯ ರೆಡ್ಕ್ರಾಸ್ ನಿದರ್ೇಶಕ ಕೆ.ಟಿ.ಹನಮಂತು ಮಾತನಾಡಿ, ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯು ಸ್ವಿಟ್ಜಲ್ಯಾರ್ಂಡ್ ದೇಶದ ಜಿನೀವ ನಗರದಲ್ಲಿ ಸ್ಥಿತವಾಗಿರುವ ಒಂದು ಜನಸೇವಾಪರ ಸಂಸ್ಥೆ. ಜಿನೀವ ಒಪ್ಪಂದಗಳಲ್ಲಿ ಭಾಗಿಯಾಗಿರುವ ದೇಶಗಳು ಯುದ್ಧ ಕಾಲದಲ್ಲಿ ಈ ಸಂಸ್ಥೆಗೆ ಯುದ್ಧದಿಂದ ಪ್ರಭಾವಿತರಾಗಿರುವವರನ್ನು ಚಿಕಿತ್ಸೆ ನೀಡುವ ಹಕ್ಕನ್ನು ನೀಡಿವೆ ಎಂದರು
1864 ಹೆನ್ರಿ ಡುನಾಂಟ್ ಅವರಿಂದ ಸ್ಥಾಪಿತವಾದ ಈ ಸಂಸ್ಥೆಗೆ 1917, 1944 ಮತ್ತು 1963ರ ನೊಬೆಲ್ ಶಾಂತಿ ಪುರಸ್ಕಾರಗಳು ದೊರಕಿರುವುದು ರೆಡ್ ಕ್ರಾಸ್ ಸಂಸ್ಥೆ ಯಾವ ರೀತಿ ಜನಪರ ಕೆಲಸಗಳನ್ನು ಮಾಡುತ್ತಿದೆ ಎಂಬುವುದು ತಿಳಿಯುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದು ಚಳವಳಿಯನ್ನು ಮಾಡುತ್ತಿರುವ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ವಿಶ್ವದ ಸಂಸ್ಥೆ. ಇದು ಬಹಳಷ್ಟು ಚಿರಪರಿಚಿತ ಸಂಸ್ಥೆಗಳಲ್ಲಿ ಒಂದಾಗಿದೆ. ಗಾಯಗೊಂಡ ಸೈನಿಕರನ್ನು ರಾಷ್ಟ್ರೀಯ ಪರಿಹಾರ ಸಮಾಜಗಳ ಅಡಿಪಾಯ ಸಹಾಯ ಮಾಡುತ್ತವೆ. ಗಾಯಗೊಂಡ ಸೈನಿಕರಿಗೆ ರಕ್ಷಣೆ ನೀಡುತ್ತದೆ ಎಂದರು.
ವಿದ್ಯಾಥರ್ಿಗಳು ಯುವ ರೆಡ್ ಕ್ರಾಸ್ ಘಟಕಕ್ಕೆ ಸೇರಿರುವ ಮೂಲಕ ನಾಯಕತ್ವ, ಮಾನವೀಯಮ ಗುಣಗಳು ಹಾಗೂ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಗುಣಗಳನ್ನು ಬಳಸಿಕೊಂಡು ದೇಶದ ಉತ್ತಮ ಪ್ರಜೆಯಾಗಲಿ ಸಹಕಾರಿಯಾಗುತ್ತದೆ ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಮಂಡ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎಸ್.ಮಂಜು ವಿಶೇಷ ಉಪನ್ಯಾಸ ನೀಡಿದರು.
ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ, ಯುವ ರೆಡ್ ಕ್ರಾಸ್ ಘಟಕ ಜಿಲ್ಲಾ ಜಿಂಟಿ ಕಾರ್ಯದಶರ್ಿ ರಂಗಸ್ವಾಮಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿದರ್ೇಶಕ ಮಂಗಲ ಯೋಗೇಶ್ ಹಾಗೂ ಕೃಷ್ಣ ಇದ್ದರು.

Continue Reading

Mandya

ಆ.31 ರಂದು ಪರಮಪೂಜ್ಯ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳ 16ನೇ ದಿನದ ಪುಣ್ಯರಾಧನೆ : ಎ.ಸಿ.ರಮೇಶ್

Published

on

ಮಂಡ್ಯ : ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಸಂಸ್ಥಾಪಕ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳ 16ನೇ ದಿನದ ಪುಣ್ಯರಾಧನೆಯನ್ನು ಮಠದ ಎರಡನೇ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿಶ್ಚಲಾನಂದನಾಥ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಆಗಸ್ಟ್ 31 ರಂದು ಬೆಳಿಗ್ಗೆ 11 ಗಂಟೆಗೆ ಮಠದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎ.ಸಿ.ರಮೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಪರಮಪೂಜ್ಯರು ಶಿಕ್ಷಣ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದು 81 ವರ್ಷಗಳ ತುಂಬ ಜೀವನ ನಡೆಸಿ ಸಮಾಜಕ್ಕೆ ಮಾರ್ಗದರ್ಶನ ನೀಡಿ ಶ್ರೀ ಕ್ಷೇತ್ರವನ್ನು ನಾಡಿಗೆ ಅರ್ಪಿಸಿ ಆಗಸ್ಟ್ 16ರಂದು ಭೈರವೈಕ್ಯರಾದರು ಎಂದು ತಿಳಿಸಿದರು.

ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ನಾಡಿನ ಹಲವಾರು ಆಧ್ಯಾತ್ಮಿಕ ಚಿಂತಕರು ಸಾಧು ಸಂತರು ಸಮಾಜದ ಮುಖಂಡರು ವಿವಿಧ ಸಂಘ ಸಂಸ್ಥೆಗಳು ಸಾಹಿತಿಗಳು ಹಾಗೂ ಕಲಾವಿದರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಆದ್ದರಿಂದ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮಹಾ ಮೇರು ಪಂಚಗಣಪತಿ ದೇವರ ಹಾಗೂ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೆ ಐದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು ಬಂದ ಎಲ್ಲಾ ಭಕ್ತಾದಿಗಳಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಮಂಗಲ ಲಂಕೇಶ್ , ಕನ್ನಿಕಾ ಶಿಲ್ಪ, ಶಿವಶಂಕರ್ , ಕೃಷ್ಣೇಗೌಡ ಕೀಲಾರ, ಕಾಳೇಗೌಡ ಹಾಜರಿದ್ದರು.

Continue Reading

Mandya

ಸೆ.01 ರಂದು ಕೊಳಗೇರಿ ಪ್ರದೇಶದ ನಿವಾಸಿಗಳಿಗೆ, ಭೂಮಿ ವಸತಿ ನಿವೇಶನ ಹಕ್ಕುಪತ್ರಗಳ ವಂಚಿತರಿಗೆ ಹಕ್ಕುಗಳನ್ನು ನೀಡಲು ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹ : ಸಿದ್ದರಾಜು

Published

on

ಮಂಡ್ಯ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಮಂಡ್ಯ ಜಿಲ್ಲಾ ಸಮಿತಿ ವತಿಯಿಂದ , ರಾಜ್ಯದ್ಯಂತ ಅರಣ್ಯ ಭಗರು ಹುಕುಂ ಸಾಗುವಳಿದಾರರಿಗೆ ಮತ್ತು ನಿವೇಶನ ಹಕ್ಕು ಪತ್ರ ವಸತಿ ವಂಚತರಿಗೆ ಒನ್ ಟೈಮ್ ಸೆಟ್ಲ್ಮೆಂಟ್ ಮೂಲಕ ಮಂಡ್ಯ ನಗರ ಜಿಲ್ಲೆಯ 65 ಹೆಚ್ಚು (ಸ್ಲಂ) ಕೊಳಗೇರಿ ಪ್ರದೇಶದ ನಿವಾಸಿಗಳಿಗೆ ಭೂಮಿ ವಸತಿ ನಿವೇಶನ ಹಕ್ಕುಪತ್ರಗಳ ವಂಚಿತರಿಗೆ ಹಕ್ಕುಗಳನ್ನು ನೀಡಲು ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಸೆಪ್ಟೆಂಬರ್ 01 ರಂದು ನಗರದ ಸಂಜೆಯ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿದ್ದರಾಜು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮಂಡ್ಯ ನಗರ ಮತ್ತು ಜಿಲ್ಲೆಯಲ್ಲಿ ಹಲವಾರು ಕೊಳಗೇರಿ ಪ್ರದೇಶಗಳು ಮತ್ತು ಅಕ್ಕಿ ಪಿಕ್ಕಿ ಕಾಲೋನಿಗಳು , ಶ್ರಮಿಕ ಬಡಾವಣೆಗಳು , ದಲಿತರು ಕಾರ್ಮಿಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭೂಮಿ ವಸತಿ ವಂಚಿತರಾಗಿದ್ದಾರೆ , ಮಂಡ್ಯ ನಗರದಲ್ಲೂ ಕೂಡ ಸುಮಾರು ಹತ್ತಾರು ವರ್ಷಗಳ ಕಾಲ ನಿರಂತರ ಧರಣಿ , ಪ್ರತಿಭಟನೆಗಳು ಮಾಡುವ ಮೂಲಕ ಒಂದಷ್ಟು ಹಕ್ಕುಗಳನ್ನು ಗಳಿಸಿಕೊಂಡಿದ್ದೇವೆ. ಆದರೆ ಸಂಪೂರ್ಣವಾಗಿ ಹಕ್ಕುಗಳು ಸಿಕ್ಕಿಲ್ಲ ಎಂದರು. ಕಾಂಗ್ರೆಸ್ , ಬಿಜೆಪಿ ಅಥವಾ ಯಾವುದೇ ಸರ್ಕಾರವಾಗಲಿ , ಜಿಲ್ಲಾಡಳಿತವಾಗಲಿ ನಗರದಲ್ಲಿರುವ ಲ್ಯಾಂಡ್ ಆರ್ಮಿ ಕಚೇರಿ ಸಮೀಪವಿರುವ ಅಂಬೇಡ್ಕರ್ ಬಡಾವಣೆಯನ್ನು 60-70 ವರ್ಷ ಕಳೆದು ಸ್ಲಂ ಎಂದು ಗೋಷಣೆ ಮಾಡಲಾಗಿಲ್ಲ. ಸದರಿ ವಿಚಾರವಾಗಿ ಸ್ಲಂ ವಿಚಾರವನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಮಧುರು ತಮಿಳು ಕಾಲೋನಿ ಜನರಿಗೆ ಜಿಲ್ಲಾಡಳಿತ ನೀಡಿರುವ ಮೂರು ಎಕರೆ ಜಾಗದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿರುವವರ ವಿರುದ್ಧ ಪ್ರಕರಣದ ಕಲಿಸಿ ಅವರನ್ನು ತಿರುಗು ಗೊಳಿಸಿ ತಕ್ಷಣ ಸ್ಥಳವನ್ನು ಅಭಿವೃದ್ಧಿಪಡಿಸಿ ಫಲಾನುಭವಕ್ಕೆ ಅಕ್ಕಪತ್ರ ನೀಡಿ ನಿವೇಶನ ಹಂಚಿಕೆ ಮಾಡಿ ಮೂಲಭೂತ ಸೌಲಭ್ಯಗಳೊಂದಿಗೆ ವಸತಿ ಯೋಜನೆ ಕಲ್ಪಿಸಬೇಕು , ಸೇರಿದಂತೆ ಇನ್ನಿತರ ಹಾಕ್ಕೋತಾಯಗಳನ್ನು ಆಗ್ರಹಿಸಿ ಸಪ್ಟೆಂಬರ್ 1 ರಂದು ಒಂದು ದಿನದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಇಂದು ಹೇಳಿದರು.

ಗೋಷ್ಠಿಯಲ್ಲಿ ವೈದುನ, ನಾಗರತ್ನಮ್ಮ , ಲತಾ, ಶಿವಣ್ಣ , ಚಿಕ್ಕು ಹಾಜರಿದ್ದರು.

Continue Reading

Mandya

ಆ.30 ರಂದು 2025 ವಿಜ್ಞಾನೋತ್ಸವ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆ : ಎಂ.ಜಿ. ದಿವ್ಯಶ್ರೀ

Published

on

ಮಂಡ್ಯ: ಆಧ್ಯಾಪನ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ , ಮಂಡ್ಯ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಮಂಡ್ಯ ಜಿಲ್ಲೆ ಇವರ ಸಂಯುತ್ತ ಆಶ್ರಯದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಸೇಷನ್ ಇವರ ಸಹಭಾಗಿತ್ವದಲ್ಲಿ 2025 ವಿಜ್ಞಾನೋತ್ಸವ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆಯನ್ನು ಅಗಸ್ಟ್ 30 ರಂದು ಮಧ್ಯಾಹ್ನ 2 ಗಂಟೆಗೆ ಮಂಡ್ಯ ಜಿಲ್ಲೆಯ ಮೇಲುಕೋಟೆ ರಸ್ತೆಯಲ್ಲಿರುವ ಎ ಅಂಡ್ ಎ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಅಧ್ಯಾಪನ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಎಂ.ಜಿ. ದಿವ್ಯಶ್ರೀ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಅಂದು ನಡೆಯುವ ಕಾರ್ಯಕ್ರಮದ ಘನ ಉಪಸ್ಥಿತಿಯನ್ನು , ಇಸ್ರೋ ಹಾಗೂ ಬಾಹ್ಯಾಕಾಶ ಆಯೋಗದ ಸದಸ್ಯರಾದ ಎ ಎಸ್ ಕಿರಣ್ ಕುಮಾರ್ ವಹಿಸಲಿದ್ದು , ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಮತ್ತು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸುವರು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ 7 ತಾಲೂಕಿನ ಶಾಸಕರುಗಳು ವಿಧಾನ ಪರಿಷತ್ ಸದಸ್ಯರುಗಳು ಸೇರಿದಂತೆ ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ವಹಿಸುವರು ಎಂದು ತಿಳಿಸಿದರು.

2024 25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ವಿದ್ಯಾರ್ಥಿನಿಯರಾದ ಧೃತಿ ಮತ್ತು ಪುನೀತ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದಿಸಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಕೂಡ ಇದೇ ಸಂದರ್ಭದಲ್ಲಿ ಮಾಡಿದರು.

ಗೋಷ್ಠಿಯಲ್ಲಿ ಅದ್ಯಪಾನ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಹಾಜರಿದ್ದರು.

Continue Reading

Trending

error: Content is protected !!