Hassan
ಉಚಿತ ನರ ಮತ್ತು ಮಾನಸಿಕ ರೋಗ ತಪಾಸಣಾ ಶಿಬಿರ
ಹಾಸನದ ಕೆ ಆರ್ ಪುರಂ ಒಂದನೇ ಕ್ರಾಸ್ ನಲ್ಲಿರುವ ಚೇತನ ನ್ಯೂರೋ ಸೆಂಟರ್ ನ 40 ನೇ ವಾರ್ಷಿಕೋತ್ಸವದ ಅಂಗವಾಗಿ. 31/8/25 ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಉಚಿತ ನರ ಮತ್ತು ಮಾನಸಿಕ ರೋಗ ತಪಾಷಣ ಶಿಬಿರವನ್ನು ಏರ್ಪಡಿಸಲಾಗಿದೆ.
ಖಿನ್ನತೆ, ಕಲಿಕೆಯಲ್ಲಿನ್ಯೂನ್ಯತೆ, ಬುದ್ಧಿಮಾಂದ್ಯತೆ, ನರಗಳ ಸೆಳೆತ/ದೌರ್ಬಲ್ಯ, ಮೂರ್ಛರೋಗ , ನಿದ್ರೆಯಲ್ಲಿ ಓಡಾಡುವುದು, ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು, ಮೈ ಮೇಲೆ ದೇವರು ದೆವ್ವ ಬರುವುದು, ಸದಾ ಮೈ ಕೈ ನೋವು, ಅರ್ಧ ಅಥವಾ ಪೂರ್ತಿ ತಲೆನೋವು, ಏಕಾಗ್ರತೆ ಇಲ್ಲದಿರುವುದು, ಗಾಬರಿ, ಎದೆ ಬಡಿತ.

ಮಧ್ಯಪಾನ ಧೂಮಪಾನ ಮಾದಕ ವಸ್ತುಗಳಂತಹ ದುಷ್ಟಗಳಿಗೆ ದಾಸರದವರು. ಮೊಬೈಲ್ ಟಿವಿ ಇತರೆ ಗೀಳುಗಳಿಂದ ಹೊರಬರಲು ಸಂಪರ್ಕಿಸಿ .
ವಿಶೇಷ ಸೂಚನೆ ಇಸಿಜಿ. ಇ ಇ ಜಿ ಹಾಗೂ ಕೆಲವು ರಕ್ತ ಪರೀಕ್ಷೆಗಳನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,08172267419. 8050698078. 9448900181.
Hassan
ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಐಡಿ ಕಾರ್ಡ್ ವಿತರಣೆ
ಸಕಲೇಶಪುರ: ತಾಲೂಕು ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ
ಗುರುವಾರ ಹೆಬ್ಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ 50 ಕ್ಕು ಹೆಚ್ಚು ಮಕ್ಕಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತ್ತು.

ಈ ಸಂದರ್ಭದಲ್ಲಿ ಡಿ ಕಂಪನಿಯ ತಾಲೂಕು ಅಧ್ಯಕ್ಷ ಶಶಿಕುಮಾರ್ ಹೆನ್ನಲಿ, ಉಪಾಧ್ಯಕ್ಷರು ಕೋಮಲೇಶ್, ಖಜಾಂಚಿ ಪ್ರೇಮಕುಮಾರ್, ಮೋಹನ್ ರೈಲ್ವೆ ಇಲಾಖೆ, ಧರಣಿ ಕೃಷ್ಣಾಪುರ ಹಾಗೂ ಸದ್ಯಸರಾದ ರಾಹುಲ್, ಶಿವು, ಮನೋಜ್, ವಿನಯ್,ಶ್ರೀಧರ್, ಪಾಲಾಕ್ಷ, ದಿನಿ, ಆಕಾಶ್ ಹಾಗೂ ಶಾಲೆಯ ಶಿಕ್ಷಕರು, ಎಸ್ಡಿಎಂಸಿ, ಅಧ್ಯಕ್ಷರು, ಸದ್ಯಸರು ಹಾಜರಿದ್ದರು.
Hassan
ಬಾಣಾವರ ಪಿಎಂಎವೈ ಯೋಜನೆ ಅವ್ಯವಹಾರ: ಶಾಸಕ ಶಿವಲಿಂಗೇಗೌಡ ರಾಜೀನಾಮೆಗೆ ಆಗ್ರಹ
ಹಾಸನ: ಕ್ಷೇತ್ರದ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ ಎಂಬುದನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡರು ತಾವೇ ಒಪ್ಪಿಕೊಂಡಿರುವುದಾಗಿ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಆರೋಪಿಸಿದಲ್ಲದೇ ಇನ್ನೊಂದು ವಾರದಲ್ಲಿ ಅರಸೀಕೆರೆಯಿಂದ ಜಿಪಂ ಕಛೇರಿ ವರೆಗೂ ಪಾದಯಾತ್ರೆ ನಡೆಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ತಮ್ಮದೇ ಸರ್ಕಾರವಿರುವಾಗಲೇ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ನೈತಿಕ ಹೊಣೆ ಹೊತ್ತು ಶಿವಲಿಂಗೇಗೌಡರು ರಾಜೀನಾಮೆ ನೀಡಲೇಬೇಕು,” ಎಂದು ಅವರು ಒತ್ತಾಯಿಸಿದರು. ಪಿಎಂಎವೈ ಯೋಜನೆಯಡಿ ೯೦ ಫಲಾನುಭವಿಗಳ ಹಣ ಬಿಡುಗಡೆ ವೇಳೆ ಬೋಗಸ್ ದಾಖಲೆ ಮಾಡಲಾಗಿದೆ. ಈ ಅವ್ಯವಹಾರಕ್ಕೆ ಕಾರಣರಾದ ಅಧಿಕಾರಿಗಳನ್ನು ಶಾಸಕರೇ ನೇಮಕ ಮಾಡಿದ್ದರು ಎಂದು ದೂರಿದರು. ಬಾಣಾವರ ಪಿಡಿಒ ಕುಮಾರಸ್ವಾಮಿ ಎನ್. ಅವರು ಹಬ್ಬನಘಟ್ಟ ಪಂಚಾಯಿತಿಯಲ್ಲಿ ಕರ್ತವ್ಯಲೋಪದಡಿ ಅಮಾನತುಗೊಂಡವರೇ ಆಗಿದ್ದು, ನಂತರ ಶಾಸಕರ ಶಿಫಾರಸ್ಸಿನಿಂದ ಬಾಣಾವರಕ್ಕೆ ವರ್ಗಾವಣೆಗೊಂಡರು. ಈ ಭ್ರಷ್ಟಾಚಾರದ ಹೊಣೆ ಕುಮಾರಸ್ವಾಮಿ ಹಾಗೂ ಅವರ ನೇಮಕಕ್ಕೆ ಕಾರಣರಾದ ಶಿವಲಿಂಗೇಗೌಡರದ್ದೇ ಎಂದು, ಮಾಜಿ ತಾಪಂ ಇಒ ನಾಗರಾಜ್ ನೀಡಿದ ವರದಿಯಲ್ಲಿಯೂ ಉಲ್ಲೇಖವಿದೆ ಎಂದು ಹೇಳಿದರು. “ಯಾವ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೋ, ಸಹಿ ಹಾಕುತ್ತಾರೋ ಅವರನ್ನುಲೇ ಪ್ರಮುಖ ಗ್ರಾಮ ಪಂಚಾಯಿತಿಗಳಿಗೆ ನೇಮಕ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಯಾವ ಅಧಿಕಾರಿಯೇ ಬರಲಿ, ಶಾಸಕರ ಅನುಮತಿ ಅನಿವಾರ್ಯವಾಗಿದೆ. ಇದರಿಂದಲೇ ಭ್ರಷ್ಟಾಚಾರ ಹೆಚ್ಚಾಗಿದೆ. ನರೇಗಾ ಅಡಿ ೫ ಕೋಟಿ ಬಿಲ್ ಪಾವತಿ ಯಾರ ಹೆಸರಿಗೆ ಆಗಿದೆ ಎಂಬುದನ್ನು ಶಾಸಕರು ಬಹಿರಂಗಪಡಿಸಲಿ,” ಎಂದು ಸವಾಲು ಹಾಕಿದರು.

“ಶಾಸಕರು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುತ್ತಾರೆ, ಆದರೆ ಇಷ್ಟು ದಿನ ಕ್ರಮ ಕೈಗೊಳ್ಳದೇ ಇದ್ದದ್ದು ಏಕೆ?” ಎಂದು ಪ್ರಶ್ನಿಸಿದ ಸಂತೋಷ್, “ಅರಸೀಕೆರೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಜಾಗವಿಲ್ಲ, ಶಾಸಕರ ತಾಳಕ್ಕೆ ಕುಣಿಯುವವರಿಗೇ ಮಣೆ ಹಾಕಲಾಗುತ್ತಿದೆ” ಎಂದು ಕಿಡಿಕಾರಿದರು. “ಕ್ಷೇತ್ರದಲ್ಲಿ ನಡೆದಿರುವ ಎಲ್ಲಾ ಭ್ರಷ್ಟಾಚಾರವನ್ನು ಹಂತ ಹಂತವಾಗಿ ಬಯಲು ಮಾಡುತ್ತೇನೆ. ಬಾಣಾವರ ಪಿಡಿಒ ಹಾಗೂ ತಾಪಂ ಇಒ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ವಾರದಿಂದ ತಾಪಂ ಕಚೇರಿ ಎದುರು ಧರಣಿ ನಡೆಸುತ್ತೇವೆ. ಜಿಪಂ ಸಿಇಒ ಕೂಡ ಕ್ರಮ ಕೈಗೊಳ್ಳದೇ ಇದ್ದರೆ, ಅರಸೀಕೆರೆಯಿಂದ ಹಾಸನವರೆಗೆ ಪಾದಯಾತ್ರೆ ನಡೆಸಿ, ಜಿಪಂ ಎದುರು ಧರಣಿ ಮಾಡಲಾಗುವುದು,” ಎಂದು ಎಚ್ಚರಿಸಿದರು. “ಭ್ರಷ್ಟಾಚಾರಕ್ಕೆ ಕಡಿವಾಣ, ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್, ಭೋಜನಾಯಕ, ಅಜ್ಜಪ್ಪ, ಉಮೇಶ್, ಜಯರಾಂ ಉಪಸ್ಥಿತರಿದ್ದರು.
Hassan
ಹಾಸನದಲ್ಲಿ ಚಂಡುಹೂ ಖರೀದಿ ಪಾವತಿ ಬಾಕಿ ? ವಿವಿಧ ಜಿಲ್ಲೆಗಳಿಂದ ರೈತರ ಪ್ರತಿಭಟನೆ
ಹಾಸನ: ರೈತರಿಂದ ಚಂಡು ಹೂ ಖರೀದಿ ಮಾಡಿದರೂ ಪಾವತಿ ನೀಡದೇ ಕಂಪನಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಂಪನಿ ಮುಂದೆ ಗುರುವಾರದಿಂದ ಅನಿರ್ಧಿಷ್ಟವಧಿ ಹೋರಾಟ ಆರಂಭಿಸಿದ್ದಾರೆ.

ನಗರದ ಹೊರ ವಲಯ ಕೈಗಾರಿಕ ಪ್ರದೇಶ ಹೊಳೆನರಸೀಪುರ ರಸ್ತೆ ಬಳಿ ಇರುವ ಓಮ್ನಿ ಆಕ್ಟಿವ್ ಹೆಲ್ತ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿ ಮುಂದೆ ಸುಮಾರು ೨೦೦ ಜನ ವ್ಯಾಪಾರ ಮಾಡುವ ರೈತರು ಜಮಾಯಿಸಿ ನ್ಯಾಯಾ ಕೇಳಿ ಪ್ರತಿಭಟಿಸಿದರು. ಇದೆ ವೇಳೆ ಹರಪನಹಳ್ಳಿಯ ಕುಭೇರಪ್ಪ ಇತರರು ಮಾಧ್ಯಮದೊಂದಿಗೆ ಮಾತನಾಡಿ, ರೈತರಿಂದ ಬೀಜ ಪಡೆದು ಬೆಳೆದ ಹೂವನ್ನು ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ಓಮ್ನಿ ಆಕ್ಟಿವ್ ಹೆಲ್ತ್ ಟೆಕ್ನಾಲಜೀಸ್ ಲಿಮಿಟೆಡ್ ಖರೀದಿಸುತ್ತಿದ್ದು, ಈಗಾಗಲೇ ಭಾಗಶಃ ಹೂ ಖರೀದಿ ಮಾಡಿದರೂ ಹಣ ಪಾವತಿಸಿಲ್ಲ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. “ಬೆಳಿಗ್ಗೆ ಹೂ ಕತ್ತರಿಸಿ ತಂದುಕೊಡಿ ಎಂದು ಹೇಳಿ, ಸಂಜೆ ವೇಳೆಗೆ ಬೇಡ ಎಂದು ತಿರಸ್ಕರಿಸುತ್ತಾರೆ. ಒಂದು ಎಕರೆಯಲ್ಲಿ ಎರಡು ಟನ್ ಮಾತ್ರ ತೆಗೆದುಕೊಂಡು, ಉಳಿದ ಆರು-ಏಳು ಟನ್ ಹೂವು ಹೊಲದಲ್ಲೇ ಬಾಡುತ್ತಿದೆ. ೨೦ ದಿನಗಳಿಂದ ಹಣ ಸಿಗದೆ ರೈತರು ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಅಡ್ವಾನ್ಸ್ ಹಣವನ್ನು ಕತ್ತರಿಸಿಕೊಂಡು ಈಗ ಪಾವತಿ ಮಾಡುವುದಿಲ್ಲ,” ಎಂದು ರೈತರು ದೂರಿದರು. ರೈತರು ಹಾವೇರಿ, ದಾವಣಗೆರೆ, ಹರಪನಹಳ್ಳಿ, ವಿಜಯನಗರ, ಕೊಪ್ಪಲ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದು, ಅಲ್ಲಿನ ಜಿಲ್ಲಾ ಆಡಳಿತಕ್ಕೂ ಅಳಲು ಹೇಳಿಕೊಂಡರೂ ಪರಿಹಾರ ಸಿಗಲಿಲ್ಲವೆಂದು ತಿಳಿಸಿದ್ದಾರೆ. “ರೈತರೊಂದಿಗೆ ಸರಿಯಾದ ಒಪ್ಪಂದ ಮಾಡಿಕೊಂಡು ಪಾವತಿ ಖಚಿತಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯುತ್ತದೆ. ಕಂಪನಿಯ ಎಂಡಿ ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು,” ಎಂದು ಆಗ್ರಹ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿರುವ ಕುಬೇರಪ್ಪ, ಪುಟ್ಟಪ್ಪ, ರಮೇಶ್, ಸುರೇಶ್, ಬಸವರಾಜು, ಕಿರಣ್ ಕುಮಾರ್, ಚೌಡೇಶ್ ಇತರರು ಉಪಸ್ಥಿತರಿದ್ದರು.
-
Mandya6 hours agoಮೂವರಿಗೆ ‘ದಲಿತ ಸಾಹಿತ್ಯ ರತ್ನ ‘ಪ್ರಶಸ್ತಿ ಪ್ರದಾನ
-
Mysore22 hours agoದಸರಾ, ಚಾಮುಂಡೇಶ್ವರಿ ಸುತ್ತಲೂ ರಾಜಕೀಯ: ಪ್ರಮೋದಾದೇವಿ ಒಡೆಯರ್ ಬೇಸರ
-
Hassan5 hours agoಯಾಚೇನಹಳ್ಳಿ ಚೇತು ಅಲಿಯಾಸ್ ಚೇತನ್ ಕೊಲೆ ಆರೋಪಿ ಸರಂಡರ್
-
Kodagu22 hours agoಮಳೆ ಸಂತ್ರಸ್ತರೊಂದಿಗೆ ಗಣೇಶ ಚತುರ್ಥಿ ಆಚರಿಸಿದ ಶಾಸಕ ಡಾ.ಮಂತರ್ ಗೌಡ
-
State24 hours agoವಾಲ್ಮೀಕಿ ಅಭಿವೃದ್ಧಿ ನಿಗಮದ 5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡ ಇಡಿ
-
Chikmagalur4 hours agoಚಿಕ್ಕಮಗಳೂರು :ಪೊಲೀಸರ ಜೀಪಿಗೇ ದಂಡ ವಿಧಿಸಿದ ಪೊಲೀಸರು
-
Hassan42 minutes agoಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಐಡಿ ಕಾರ್ಡ್ ವಿತರಣೆ
-
State4 hours agoಬೆಂಗಳೂರು ಮೂಲಸೌಕರ್ಯ: ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ, ಕಾಂಗ್ರೆಸ್ ಸರ್ಕಾರ ಈಗ ‘ಸರಿಪಡಿಸುತ್ತಿದೆ’- ಡಿಕೆ ಶಿವಕುಮಾರ್
