Connect with us

Special

ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಕೌ – ಮ್ಯಾಟ್ ಖರೀದಿಸಲು ಸಬ್ಸಿಡಿ : ಅರ್ಜಿ ಸಲ್ಲಿಸುವುದು ಹೇಗೆ?

Published

on

Subsidy Schemes for Farmers : ರೈತರಿಗೆ ಹೈನುಗಾರಿಕೆ ಮಾಡಲು ಸಹಾಯವಾಗುವಂತೆ ಕರ್ನಾಟಕ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ನೆಲಹಾಸು (Rubber Cow Mat) ಖರೀದಿಸಲು ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಿದೆ.

2025-26ನೇ ಸಾಲಿಗೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ರಾಜ್ಯದಂತ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಅರ್ಹ ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ಕೌ ಮ್ಯಾಟ್ ಖರೀದಿಸಲು ಸಹಾಯವಾಗುವಂತೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಿದೆ.

ಸಹಾಯಧನದ ವಿವರ :

• 2HP ಎಲೆಕ್ಟ್ರಿಕ್ ಮೇವು ಕತ್ತರಿಸುವ ಯಂತ್ರ ಖರೀದಿಸಲು ಘಟಕದ ವೆಚ್ಚ 34,000ರೂ. ಇದ್ದು, ಇದರ ಶೇಕಡಾ 50% ಹಣವನ್ನು ಅಂದರೆ 17,000ರೂ. ಹಣವನ್ನು ಸರ್ಕಾರ ಸಹಾಯಧನದ ರೂಪದಲ್ಲಿ ನೀಡುವುದು ಹಾಗೂ ಉಳಿದ 17,000ರೂ. ಮೊತ್ತವನ್ನು ಅರ್ಜಿದಾರರು ಪಾವತಿಸಬೇಕು.

• ರಬ್ಬರ್ ಕೌ – ಮ್ಯಾಟ್ ಖರೀದಿಸಲು ರೈತರು 2,850ರೂ. ಮಾತ್ರ ಪಾವತಿಸಿ, ಉಳಿದ ಹಣವನ್ನು ಸರ್ಕಾರ ಭರಿಸುವುದು.

ಯಾವ ರೈತರು ಅರ್ಜಿ ಸಲ್ಲಿಸಬಹುದು?

ರಾಜ್ಯದ ಎಲ್ಲಾ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನಿಮ್ಮ ತಾಲೂಕಿನ ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು 30 ಸೆಪ್ಟೆಂಬರ್ 2025 ಕೊನೆಯ ದಿನಾಂಕವಾಗಿದೆ.

Continue Reading

Special

ಒಳಮೀಸಲಾತಿ ಅನುಷ್ಠಾನದ ಬಳಿಕ ರಾಜ್ಯಾದ್ಯಂತ ವಿವಿಧ ಇಲಾಖೆಗಳಲ್ಲಿ 30 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳ ನೇಮಕಾತಿ

Published

on

Upcoming Recruitments in Karnataka Government : ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಒಳಮೀಸಲಾತಿ ಪ್ರಕರಣ ಮುಗಿದ ನಂತರ ರಾಜ್ಯದ್ಯಂತ ವಿವಿಧ ಇಲಾಖೆಗಳಲ್ಲಿ 30,000ಕ್ಕೂ ಅಧಿಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.

ಈ ಒಂದು ಲೇಖನದಲ್ಲಿ ಯಾವೆಲ್ಲಾ ಇಲಾಖೆಗಳಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು? ಯಾವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂಬ ಮಾಹಿತಿಯನ್ನು ತಿಳಿಸಲಾಗಿದೆ.

ಇಲಾಖಾವರು ಹುದ್ದೆಗಳ ವಿವರ :

* ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 2,000 ಕ್ಕೂ ಅಧಿಕ Police Constable (PC) ಹುದ್ದೆಗಳು ಖಾಲಿ ಇವೆ. ನೇಮಕಾತಿ ಮಾಡಿಕೊಳ್ಳಲು ಪೊಲೀಸ್ ಇಲಾಖೆಯು ಅತ್ಯಂತ ತುರ್ತು ಕ್ರಮ ವಹಿಸುತ್ತಿದೆ.
• ವಾಣಿಜ್ಯ ತೆರಿಗೆ ಇಲಾಖೆ, ಅರಣ್ಯ ಇಲಾಖೆ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾವಿರಕ್ಕೂ ಅಧಿಕ SDA & FDA ಹುದ್ದೆಗಳ ನೇಮಕಾತಿ.

* KPSC ಯಿಂದ ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ
• KEA ವತಿಯಿಂದಲೂ ಕೂಡ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವಂತಹ ಸಾವಿರಾರು ಹುದ್ದೆಗಳ ನೇಮಕಾತಿ:
* ಅಗ್ನಿಶಾಮಕ  ಇಲಾಖೆಯಲ್ಲಿ 66 Fire Station Officer ಸೇರಿದಂತೆ ಒಟ್ಟು 1,488 ಹುದ್ದೆಗಳ ನೇಮಕಾತಿ:

* ಸಣ್ಣ ನೀರಾವರಿ ಇಲಾಖೆಯಲ್ಲಿ AEE, AE, JE, SDA, SDAA, FDA, FDAA, Stenographer, Driver, Cook, Peon & Watchman ಸೇರಿದಂತೆ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಶೀಘ್ರದಲ್ಲಿಯೇ ಈ ಹುದ್ದೆಗಳಿಗೂ ಕೂಡ ನೇಮಕಾತಿ ನಡೆಯಲಿದೆ
* ಅಬಕಾರಿ ಇಲಾಖೆಯಲ್ಲಿ 265 Excise Sub Inspector & 942 Constable ಹುದ್ದೆಗಳ ನೇಮಕಾತಿ:
* ಹೈದರಾಬಾದ್ ಕರ್ನಾಟಕದ ಭಾಗದಲ್ಲಿ 5,267 ಸರ್ಕಾರಿ ಪ್ರಾಥಮಿಕ & ಪ್ರೌಢ ಶಾಲಾ ಶಿಕ್ಷಕರ ಹಾಗೂ 820 ವಸತಿ ಶಾಲೆ & 50 ಕಂಪ್ಯೂಟರ್ ಶಿಕ್ಷಕರ ನೇಮಕಾತಿ.

* ವಿವಿಧ ವಸತಿ ಶಾಲೆಗಳಲ್ಲಿ ಶಿಕ್ಷಕರು, ಪ್ರಾಂಶುಪಾಲರು & FDA Cum Computer Operator ಸೇರಿದಂತೆ ಹಲವಾರು ಬ್ಯಾಕ್ ಲಾಗ್ ಹುದ್ದೆಗಳು ಖಾಲಿ ಇವೆ.
* ಸಾರಿಗೆ ಇಲಾಖೆಯಲ್ಲಿ RTO Inspector, SDA, FDA, AE, JE & AEE ಹುದ್ದೆಗಳ ನೇಮಕಾತಿ.
* KEA ವತಿಯಿಂದ ವಿವಿಧ ಇಲಾಖೆಗಳಲ್ಲಿ 650 Assistant ಪ್ರೊಫೆಸರ್ ಹಾಗೂ 1,200 ಸ್ಟಾಫ್ ನರ್ಸ್ ಹುದ್ದೆಗಳ ನೇಮಕಾತಿ.

* ರಾಜ್ಯದ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯ 14,523 ಹುದ್ದೆಗಳ ನೇಮಕಾತಿ:
•ವಿವಿಧ ಗ್ರಾಮ ಪಂಚಾಯತಿಗಳಲ್ಲಿನ Water Operator & Cleaners, Clerk Cum Data Entry Operator, Bill Collector, ಹುದ್ದೆಗಳ ನೇಮಕಾತಿ:

* BCM Hostel ಗಳಲ್ಲಿ 150 ವಾರ್ಡನ್ ಹುದ್ದೆಗಳ ನೇಮಕಾತಿ.
• 350ಕ್ಕೂ ಅಧಿಕ ಗೆಜೆಟೆಡ್ ಪ್ರೊಬೆಷನಸ್೯ ಅಂದರೆ KAS ಹುದ್ದೆಗಳ ನೇಮಕಾತಿ:

ವಿಶೇಷ ಸೂಚನೆ: ಮೇಲೆ ನೀಡಿರುವ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿ ವಿವರವು ವಿವಿಧ ಮೂಲಗಳಿಂದ ಆಯ್ದುಕೊಂಡಿರುವ ಮಾಹಿತಿಯಾಗಿದ್ದು, ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕೃತ ಮಾಹಿತಿಯಿಂದ ಪರಿಶೀಲಿಸಿಕೊಳ್ಳಿ. ಅದೇ ರೀತಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆಗಳಿಗೆ ಈಗಿನಿಂದಲೇ ತಮ್ಮ ತಯಾರಿ ನಡೆಸಿ.

Continue Reading

Special

30 ದಿನದ ಉಚಿತ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ : ನಿರುದ್ಯೋಗಿ ಯುವಕರಿಗೆ ಉತ್ತಮ ಅವಕಾಶ

Published

on

Free Bike Repair Training 2025 : ನಿರುದ್ಯೋಗಿ ಯುವಕ ಯುವತಿಯರಿಗೆ ಹಲವಾರು ಸಂಘ ಸಂಸ್ಥೆಗಳಿಂದ ಉತ್ತಮ ಹಾಗೂ ಪ್ರಯೋಜನಕಾರಿ ಯೋಜನೆಗಳು ಜಾರಿಯಾಗುತ್ತಲೇ ಇವೆ. ಬೈಕ್ ಸರ್ವಿಸ್ ಉದ್ಯಮ ಆರಂಭಿಸುವವರಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸಲು ಸಹಾಯವಾಗುವಂತೆ ಹಾಗೂ ಅವರ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯೋಜನಕಾರಿಯಾಗಲು ಬೈಕ್ ರಿಪೇರಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

 

ಬೈಕ್ ರಿಪೇರಿ ತರಬೇತಿಯ ವಿವರ : ಇದು 30 ದಿನದ ಉಚಿತ ಬೈಕ್ ರಿಪೇರಿ ತರಬೇತಿಯಾಗಿದ್ದು, ಅಕ್ಟೋಬರ್ 08ನೇ ತಾರೀಕಿನಿಂದ ನವೆಂಬರ್ 06ನೇ ತಾರೀಕಿನವರೆಗೆ ನಡೆಯಲಿದೆ.

ತರಬೇತಿ ನಡೆಯುವ ವಿಳಾಸ :

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಇಂಡಸ್ಟ್ರೀಯಲ್ ಏರಿಯಾ ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ – 581343

ಉಚಿತ ತರಬೇತಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಗೂಗಲ್ ಫಾರಂ ಅನ್ನು ಭರ್ತಿ ಮಾಡಿ, ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಲಿಂಕ್ –
https://docs.google.com/forms/d/e/1FAIpQLSdeW9XR5dn9DCirwprM4Et1Q_YXBCaNQnZ_Q0_363dv4crt3w/viewform

ಅರ್ಜಿ ಸಲ್ಲಿಸಲುಬೇಕಾಗುವ ದಾಖಲಾತಿಗಳು :
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ರೇಷನ್ ಕಾರ್ಡ್
• ಪಾನ್ ಕಾರ್ಡ್
• 4 ಫೋಟೋ
• ಮೊಬೈಲ್ ನಂಬರ್

Continue Reading

Special

Nano Banana: “ನ್ಯಾನೋ ಬನಾನಾ” ಟ್ರೆಂಡ್ ಎಂದರೇನು?ಫೋಟೋಗಳನ್ನು 3D ಪ್ರತಿಮೆಗಳಾಗಿ ಮಾಡೋದು ಹೇಗೆ?

Published

on

Nano Banana: ಇತ್ತೀಚಿನ AI ಟ್ರೆಂಡ್ “ನ್ಯಾನೋ ಬನಾನಾ” (Nano Banana) ಫೋಟೊ ಟ್ರೆಂಡ್ ಆಗಿದ್ದು, ಇದನ್ನು ಗೂಗಲ್‌ನ ಜೆಮಿನಿ ನಡೆಸುತ್ತಿದೆ. ಉದಾಹರಣೆಗೆ ನೀವು ಒಬ್ಬ ವ್ಯಕ್ತಿಯ ಫೋಟೋವನ್ನು ಅಪ್ಲೋಡ್​ ಮಾಡಿ ‘3D Figurine’ ಎಂದು ಪ್ರಾಂಪ್ಟ್ ನೀಡಿದರೆ ಅದು ಆಕರ್ಷಕ ಫೋಟೋಗಳನ್ನು ರಚಿಸುತ್ತದೆ.

ಈ ವೈರಲ್ ಟ್ರೆಂಡ್ ಬಳಕೆದಾರರಿಗೆ ಕೇವಲ ಫೋಟೋ ಬಳಸಿ ತಮ್ಮ ಪೋಟೊಗಳ, ಸೆಲೆಬ್ರಿಟಿಗಳ ಅಥವಾ ಸಾಕುಪ್ರಾಣಿಗಳ ಹೈಪರ್-ರಿಯಲಿಸ್ಟಿಕ್ 3D ಪ್ರತಿಮೆಗಳನ್ನು ರಚಿಸಲು ಸಹಾಯ ಮಾಡುತ್ತೆ. ಇದಕ್ಕೆ ಯಾವುದೇ ತಾಂತ್ರಿಕ ಕೌಶಲ್ಯಗಳು ಅಥವಾ ಹಣದ ಅಗತ್ಯವಿಲ್ಲ. ಬಳಕೆದಾರರು ಕೇವಲ ಚಿತ್ರವನ್ನು ಅಪ್‌ಲೋಡ್ ಮಾಡುತ್ತಾರೆ ಮತ್ತು ಜೆಮಿನಿ ಪ್ಲಾಟ್‌ಫಾರ್ಮ್‌ನಲ್ಲಿ ಒದಗಿಸಲಾದ ಪ್ರಾಂಪ್ಟ್ ಅನ್ನು ಬಳಸುತ್ತಾರೆ, ಇದು ಹತ್ತಿರದ ಪರದೆಯಲ್ಲಿ ಮಾಡೆಲಿಂಗ್ ಪೂರ್ವವೀಕ್ಷಣೆಯೊಂದಿಗೆ ವರ್ಚುವಲ್ ಡೆಸ್ಕ್‌ಟಾಪ್‌ನಲ್ಲಿ 3D ಆಕೃತಿಯನ್ನು ರೆಂಡರ್ ಮಾಡುತ್ತದೆ. ಗೂಗಲ್ ಪ್ರಕಾರ, ಈ ವೈಶಿಷ್ಟ್ಯವು ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಜೆಮಿನಿ ಅಪ್ಲಿಕೇಶನ್ ಮೂಲಕ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ.

ನ್ಯಾನೋ ಬನಾನಾ 3D (Nano Banana)ಪ್ರತಿಮೆಯನ್ನು ಮಾಡುವುದು ಹೇಗೆ?

ಹಂತ 1: Google Gemini (ಅಥವಾ Google AI ಸ್ಟುಡಿಯೋ) ತೆರೆಯಿರಿ.

ಹಂತ 2: ನೀವು ರೂಪಾಂತರಗೊಳ್ಳಲು ಬಯಸುವ ಯಾವುದೇ ಫೋಟೋವನ್ನು ಅಪ್‌ಲೋಡ್ ಮಾಡಿ.

ಹಂತ 3: ನಿಮ್ಮ ಫೋಟೋ ಅಥವಾ ಪ್ರಾಂಪ್ಟ್ ಅನ್ನು ಅಪ್‌ಲೋಡ್ ಮಾಡಲು ‘+’ ಬಟನ್ ಅನ್ನು ಕ್ಲಿಕ್ ಮಾಡಿ. ಈ ಟೆಕ್ಸ್ಟ್​ ಅಲ್ಲಿ ಇಂಗ್ಲಿಷ್‌ನಲ್ಲಿ ಕಾಪಿ ಪೇಸ್ಟ್​ ಮಾಡಿ. (Build my 1/7 scale statue on the desk, with the ZBrush modeling screen behind, and a Bandai-style anime box on the side. Studio lighting is used for a photo-realistic effect.)

ಹಂತ 4: ಪ್ರತಿಮೆ ಸಿದ್ಧವಾದ ನಂತರ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Continue Reading

Trending

error: Content is protected !!