Hassan
ಜಾತಿ ಗಣತಿ ದಂಗಲ್ ವಿಚಾರ| ಅದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ: ಸಂತೋಷ್ ಲಾಡ್ ಸ್ಪಷ್ಟನೆ

ಹಾಸನ : ರಾಜ್ಯದಲ್ಲಿ ಜಾತಿ ಗಣತಿ ದಂಗಲ್ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷದ ವಿರುದ್ದ ವಿಪಕ್ಷಗಳು ಪ್ರತಿನಿತ್ಯ ಆರೋಪ ಮಾಡುತ್ತಿವೆ. ಈ ಮಧ್ಯೆ ಇದೀಗ ಸಚಿವ ಸಂತೋಷ್ ಲಾಡ್ ಅವರು ಅದು ಜಾತಿ ಗಣತಿ ಅಲ್ಲ ಅದೊಂದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಜಾತಿ ಸಮೀಕ್ಷೆ ಅಲ್ಲ. ಅದೊಂದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಷ್ಟೆ. ಜಾತಿ ಎಂಬುದು ಎರಡು ಪಾಯಿಂಟ್ ಇದ್ದರೆ ಶೇ.98% ರಷ್ಟು ಬೇರೆ ಪಾಯಿಂಟ್ ಇದೆ. ಹಿಂದೂಳಿದ ವರ್ಗಗಳ ಆಯೋಗ ಯಾರಿಗೂ ಸರ್ಟಿಫಿಕೇಟ್ ನೀಡಲ್ಲ ಎಂದಿದ್ದಾರೆ.
ಕೆಲವರು ಈ ವಿಚಾರವನ್ನು ರಾಜಕೀಯವಾಗಿ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತಿದ್ದು, ನಮ್ಮ ಸರ್ಕಾರ ಸಂಪೂರ್ಣವಾಗಿ ಸಮೀಕ್ಷೆ ಮಾಡುತ್ತಿದ್ದೇವೆ. ನೀವು ಹೇಳುವ ಮಾಹಿತಿ ರೆಕಾರ್ಡ್ ಆಗುತ್ತದೆ. ಏಳು ಕೋಟಿ ಜನ ಏನು ಹೇಳ್ತಾರೆ ನಾವು ನೀವು ಹೇಳಲು ಬರಲ್ಲ. ಸರ್ವೆಯಿಂದ ಬಹಳಷ್ಟು ಜನರಿಗೆ ಮಾಹಿತಿ ಸಿಗುತ್ತದೆ. ಜಾತಿಗಣತಿ ಬಗ್ಗೆ ಕೋರ್ಟ್‌ಗೆ ಹೋಗಿದ್ದಾರೆ. ಯಾರೂ ಬೇಕಾದರೂ ಕೋರ್ಟ್‌ಗೆ ಹೋಗಲು ಅವಕಾಶವಿದೆ. ಆದರೆ ಇದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಹಾಸನದಲ್ಲಿ ಇಂದು ಸಣ್ಣ ಸಣ್ಣ ಸಮುದಾಯದವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದ್ದೇವೆ. ಇದು ಮೊದಲ ಹಂತ, ಇದರಿಂದ ಸಣ್ಣ ಸಣ್ಣ ಕೆಲಸಗಾರರಿಗೆ ಹಲವು ಸೌಲಭ್ಯ ಸಿಗುತ್ತದೆ. ಕೇಂದ್ರ ಸರ್ಕಾರದಿಂದ ಯಾವುದೇ ಹಣ ಈ ಯೋಜನೆಗೆ ನೀಡಿಲ್ಲ. ಎಲ್‌ಐಸಿ ದುಡ್ಡು ಎಲ್ಲಿ ಹೋಗುತ್ತಿದೆ? 50 ರಿಂದ 60 ಸಾವಿರ ಕೋಟಿ ಅಂಬಾನಿ, ಅದಾನಿಗೆ ಇನ್ವೆಸ್ಟ್‌ಮೆಂಟ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಹಿಮ್ಸ್ ಆಸ್ಪತ್ರೆಯಲ್ಲಿ ಎಡಗಾಲಿನ ರಾಡ್ ತೆಗೆಯುವ ಬದಲು ಬಲಗಾಲು ಕುಯ್ದ ವಿಚಾರದ ಬಗ್ಗೆ ಮಾತನಾಡಿದ ಅವರು, ವೆರಿ ಸ್ಯಾಡ್ ಇಂತಹ ಘಟನೆ ಆಗಬಾರದಿತ್ತು. ನಾನು ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ.
ಇನ್ನು ಜಿಎಸ್‌ಟಿ ಕಡಿಮೆ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇವರು ಸ್ವದೇಶಿ ಬಟ್ಟೆ ಹಾಕಿಕೊಳ್ಳಲಿ. ಓಡಾಡುವುದು ಇಂಪೋರ್ಟೆಡ್ ಗಾಡಿಗಳಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಸರಿಯಲ್ಲ ಇವೇ ಇವರ ಮಾತುಗಳು. ವಿಶ್ವಗುರು ಒಂದು ಪ್ರೆಸ್‌ಮೀಟ್ ಮಾಡಿಲ್ಲ.ವಿಶ್ವಗುರು ಎಂದರೆ ಏನು ಅರ್ಥ? ರಾಹುಲ್‌ಗಾಂಧಿ ಮೂರು ಸಾವಿರ ಪ್ರೆಸ್‌ಮೀಟ್ ಮಾಡಿದ್ದಾರೆ. ಬಿಜೆಪಿ ಪಾರ್ಟಿ ಸಾಹುಕಾರ್ ಪಾರ್ಟಿ ಎಲ್ಲಾ ಮಾಧ್ಯಮಗಳಲ್ಲಿ ಅವರನ್ನೇ ತೋರಿಸುತ್ತೀರಾ ಎಂದು ವ್ಯಂಗ್ಯ ಮಾಡಿದರು
Hassan
ಹಾಸನ: ಯಶಸ್ವಿಯಾಗಿ ನಡೆದ ಪೆಂಡಲ್ ಗಣಪತಿ ಅನ್ನಸಂತರ್ಪಣೆ

ಹಾಸನ: 71ನೇ ವರ್ಷದ ಶ್ರೀ ಗಣಪತಿ ಸೇವಾ ಸಂಸ್ಥೆಯಿಂದ ನಡೆದ ಶ್ರೀ ಗಣೇಶ ವಿಸರ್ಜನಾ ಮಹೋತ್ಸವದ ಅಂಗವಾಗಿ ಮಂಗಳವಾರದಂದು ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಪೆಂಡಲ್ ಗಣಪತಿ ಆವರಣದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಸುಮಾರು 8 ಸಾವಿರಕ್ಕೂ ಹೆಚ್ಚು ಜನರು ಪ್ರಸಾದ ಸ್ವೀಕರಿಸಿದರು.
ಈ ವೇಳೆ ಶ್ರೀ ಗಣಪತಿ ಸೇವಾ ಸಂಸ್ಥೆ ಅಧ್ಯಕ್ಷ ಡಾ. ಹೆಚ್. ನಾಗರಾಜು ಮಾತನಾಡಿ, ಆಗಸ್ಟ್.27 ರಂದು 71ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು, ಸೆಪ್ಟಂಬರ್.20 ರವರೆಗೂ ವಿಜೃಂಭಣೆಯಿಂದ ನಡೆದು, ಪ್ರತಿನಿತ್ಯ ಪೂಜಾ ವಿಧಾನಗಳು, ಮದ್ಯಾಹ್ನ ಸಾರ್ವಜನಿಕರಿಗೆ ಪ್ರಸಾದ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲಾ ಯಶಸ್ವಿಯಾಗಿ ನೆರವೇರಿದೆ. ಶನಿವಾರದಂದು ನಡೆದಂತಹ ಶ್ರೀ ಗಣಪತಿ ವಿಸರ್ಜನಾ ಮಹೋತ್ಸವವು ಅದ್ಧೂರಿಯಾಗಿ ಮೈಸೂರಿನ ದಸರ ಮಾದರಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಕಲಾತಂಡಗಳೊಡನೆ ನಗರದ ಎಲ್ಲಾ ಪ್ರಮುಖ ಬೀದಿಗಳಲ್ಲಿ ಸಂಚರಿ ಕಲಾ ಪ್ರದರ್ಶನ ನೀಡಿದೆ ಎಂದರು. ಅಂದು ರಾತ್ರಿ ದೇವಿಗೆರೆಯಲ್ಲಿ ಶ್ರೀ ಗಣೇಶನನ್ನು ವಿಸರ್ಜನೆ ಮಾಡಲಾಯಿತು.
ಸಾವಿರಾರು ಜನರು ಈ ಮೆರವಣಿಗೆಯಲ್ಲಿ ಭಕ್ತಿಪೂರ್ಣವಾಗಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಮಂಗಳವಾರದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಗಣಪತಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಚನ್ನವಿರಪ್ಪ ಮಾತನಾಡಿ, ಗಣಪತಿ ಉತ್ಸವ ಹಿಂದಿನಿಂದ ನಡೆದುಕೊಂಡು ಬಂದಿದ್ದು, ಮೈಸೂರು ದಸರಾ ರೂಪದಲ್ಲಿ ಗಣಪತಿ ಉತ್ಸವ ನಡೆಸಲು ಈಗಾಗಲೇ ತೀರ್ಮಾನ ತೆಗೆದುಕೊಂಡಂತೆ ನಡೆಸಲಾಗಿದೆ. ಇಲ್ಲಿವರೆಗೂ ಗಣಪತಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇನ್ನು ಪಾರದರ್ಶಕವಾಗಿ ಲೆಕ್ಕಚಾರವನ್ನು ಕೊಡಲಾಗುತ್ತಿದೆ. ಸಾರ್ವಜನಿಕರ ವಂತಿಕೆಯಲ್ಲೇ ಈ ಉತ್ಸವ ನಡೆಸಲಾಗುತ್ತಿದ್ದು, ವಿವಿಧ ಸ್ಫರ್ಧೆಗಳನ್ನು ನಡೆಸಲಾಗುವುದು. ಈ ಉತ್ಸವದಲ್ಲಿ ಯಾವುದೇ ಜನಾಂಗ ಎಂದು ಹೇಳಲು ಬರುವುದಿಲ್ಲ. ಮುಸ್ಲಿಂ ಸೇರಿ ಸಹಕಾರ ಕೊಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಇದೆ ವೇಳೆ ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಚನ್ನವೀರಪ್ಪ, ಉಪ ಮೇಯರ್ ಹೇಮಾಲತ ಕಮಲ್ ಕುಮಾರ್, ಶ್ರೀ ಗಣಪತಿ ಸೇವಾ ಸಮಿತಿ ಧರ್ಮದರ್ಶಿಗಳಾದ ಲಲಾಟ್ ಮೂರ್ತಿ, ಬೂದೇಶ್, ಹೆಚ್.ಟಿ. ಶೇಖರ್, ಹೆಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರರಾವ್, ಹೆಚ್.ಎಂ.ಟಿ. ಸುರೇಶ್ ಕುಮಾರ್, ಎಂ.ಕೆ. ಕಮಲ್ ಕುಮಾರ್, ಹೆಚ್.ಡಿ. ದೀಪಕ್, ಲೀಲಾಕುಮಾರ್, ಗಿರೀಗೌಡ, ಸಿ. ರಾಮಚಂದ್ರಯ್ಯ, ಕೆ.ಪಿ.ಎಸ್. ಪ್ರಮೋದ್, ಹೆಚ್.ಪಿ. ಕಿರಣ್, ಪಿ.ಆರ್. ನಾಗೇಂದ್ರ, ಸಿ.ಕೆ. ಪದ್ಮನಾಭ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಹನುಮಂತೇಗೌಡ, ವಿಷ್ಣು ಸೇನೆ ಜಿಲ್ಲಾಧ್ಯಕ್ಷ ಮಹಂತೇಶ್, ಕುಮಾರ್ ಇತರರು ಉಪಸ್ಥಿತರಿದ್ದರು.
Hassan
ಹಾಸನ: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ ನಿಧನ

ಹಾಸನ: ನಗರದ ಶಂಕರಮಠ ರಸ್ತೆಯ, ಒಕ್ಕಲಿಗ ಹಾಸ್ಟೆಲ್ ಹಿಂಭಾಗದ ನಿವಾಸಿಯಾದ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ.ಶಿವಣ್ಣ ಇಂದು ನಿಧನರಾಗಿದ್ದಾರೆ.
ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ಕಳೆದ ಒಂದು ವರ್ಷದಿಂದ ತಿರುಗಾಡಲು ಸಾಧ್ಯವಿಲ್ಲದೆ ಹಾಸಿಗೆ ಹಿಡಿದಿದ್ದರು. ಇಂದು ಮಧ್ಯಾಹ್ನ3 ಗಂಟೆಯ ವೇಳೆ ನಗರದ ಖಾಸಗಿ ಅಸ್ಪತ್ರೆಯಾದ ಜನಪ್ರಿಯ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಸುಶೀಲಮ್ಮ ಮತ್ತು ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪಾರ್ಥಿವ ಶರೀರವನ್ನು ಅವರ ನಿವಾಸವಾದ ಶಂಕರಿಮಠ ರಸ್ತೆಯ ಒಂದನೇ ಅಡ್ಡ ರಸ್ತೆಯಲ್ಲಿರು ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ನಾಳೆ ಮಧ್ಯಾಹ್ನದ ವೇಳೆಗೆ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಬಳಿಯ ಬಳದಾರೆಯ ಅವರ ತೋಟದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಿವಣ್ಣ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಹಾಸನ ಜಿಲ್ಲಾ ಹೋಂ ಗಾರ್ಡ ಕಮೋಡೆಂಟ್, ಕಸ್ತೂರಬಾ ಕನ್ಯ ಟ್ರಸ್ಟ್ ಕಾರ್ಯದರ್ಶಿ ಅರಸೀಕೆರೆ, ಕಾರ್ಲೆ ಕಸ್ತೂರಬಾ ಕನ್ಯ ವಿದ್ಯಾಲಯ ಪ್ರೌಢಶಾಲಾ ಕಾರ್ಯದರ್ಶಿ ಯಾಗಿ ಅನೇಕ ವರ್ಷಗಳು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Hassan
ತಾಜಾ ಎಣ್ಣೆ, ಆರೋಗ್ಯಕರ ಕುಟುಂಬ

ಹಾಸನ : ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಮತ್ತು ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ
ಕಾರ್ಯಾನುಭವ ಶಿಬಿರ 2025-26 ರ ಅಂಗವಾಗಿ ಶಾಂತಿಗ್ರಾಮ ಹೋಬಳಿಯ ಕೆ. ಬ್ಯಾಡರಹಳ್ಳಿ ಗ್ರಾಮದಲ್ಲಿ ತಾಜಾ ಎಣ್ಣೆ ಆರೋಗ್ಯಕರ ಕುಟುಂಬ ಮತ್ತು ಮರುಬಳಕೆ ಎಣ್ಣೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳಾದ ದೀಕ್ಷಾ ,ಲಾವಣ್ಯ ಮತ್ತು ಲೇಖನ ಮಾತನಾಡಿದರು.
ಅಡುಗೆ ಎಣ್ಣೆಯೆಂದರೇನು, ತಾಜಾ ಎಣ್ಣೆಯ ಗುಣಲಕ್ಷಣಗಳು , ಕೆಟ್ಟ ಎಣ್ಣೆಯ ಪರೀಕ್ಷಣೆ ಮತ್ತು ಮರುಬಳಕೆ ಎಣ್ಣೆಯಿಂದಾಗುವ ಅನಾನುಕೂಲಗಳು ಮತ್ತು ಕಾಯಿಲೆಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಅನುಜ ದೇವ್ ಎಂ. ವಿ(ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ )ಮತ್ತು ಡಾ. ಭಾನು ಬಿ.ವೈ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ) ಅವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
-
Chamarajanagar9 hours ago
ಚಾರ್ಮಾಡಿ ಘಾಟಿಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ
-
Mysore7 hours ago
ವಾಸುದೇವಾಚಾರ್ಯ ಸ್ಮರಣಾರ್ಥ ಸರ್ಕಾರಿ ಕಾರ್ಯಕ್ರಮ: ಶಾಸಕ ಶ್ರೀವತ್ಸ ಮನವಿಗೆ ಸಿಎಂ ಸ್ಪಂದನೆ
-
Hassan2 hours ago
ತಾಜಾ ಎಣ್ಣೆ, ಆರೋಗ್ಯಕರ ಕುಟುಂಬ
-
Chikmagalur5 hours ago
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು : ಸಚಿವ ಸಂತೋಷ್ ಲಾಡ್
-
Hassan6 hours ago
ಹಾಸನದ ೧೫ ಕರ್ನಾಟಕ ಬೆಟಾಲಿಯನ್ ನಲ್ಲಿ ಎನ್ಸಿಸಿ ಕಾರ್ಯಗಾರ
-
Mysore22 hours ago
ವಸ್ತು ಪ್ರದರ್ಶನಕ್ಕೆ ಚಾಲನೆ: ಮೊದಲ ದಿನವೇ ವಸ್ತು ಪ್ರದರ್ಶನ ಭರ್ತಿ
-
Mysore6 hours ago
ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಲು ಮನವಿ, ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು
-
Chikmagalur1 hour ago
ಶರನ್ನವರಾತ್ರಿ ಉತ್ಸವ: ನೋಡುಗರ ಕಣ್ಮನ ಸೆಳೆಯುತ್ತಿರುವ ದಸರಾ ಗೊಂಬೆ ಪ್ರದರ್ಶನ