Chikmagalur
ಅಸಂಘಟಿತ ಕಾರ್ಮಿಕರ ಸೌಲಭ್ಯ ಸದುಪಯೋಗಕ್ಕೆ ಸಚಿವ ಸಂತೋಷ್ ಲಾಡ್ ಕರೆ

ಚಿಕ್ಕಮಗಳೂರು: ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದರು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಇಂದು ನಗರದ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಜೊತೆಗೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಕಲೆ, ಹೀಗೆ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿರುವ ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯ ಜಾರಿಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಆಟೋ ರಿಕ್ಷಾ ಚಾಲಕರು, ಪೇಯಿಂಟಿಂಗ್ ಮಾಡುವವರು ಸೇರಿದಂತೆ ಹಲವರಿಗೆ ಕಾರ್ಮಿಕ ಕಾಯ್ದೆ ಜಾರಿಗೊಳಿಸಲಾಗಿದ್ದು, ಅಸಂಘಟಿತ ಕಾರ್ಮಿಕರು ಅಪಘಾತದಲ್ಲಿ ಮೃತರಾದಲ್ಲಿ 5 ಲಕ್ಷ ರೂ.ವರೆಗೂ ಪರಿಹಾರ ವಿತರಿಸಲಾಗುತ್ತದೆ ಎಂದ ಅವರು, ಸ್ವಿಗ್ಗಿ, ಜೊಮೆಟೋಗಳಂತಹ ಸಂಸ್ಥೆಯಲ್ಲಿ ಆಹಾರ ಸರಬರಾಜು ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್‌ಕಾರ್ಟ್, ಪೋರ್ಟಲ್, ಫಾರ್ಮಸಿ, ಬ್ಲಿಂಕಿಟ್, ಬಿಗ್ ಬಾಸ್ಕೆಟ್, ಡೊಮಿನಾಜ್ ಮತ್ತಿತರ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡವರೆಲ್ಲರೂ ಅಸಂಘಟಿತ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ತಲಾ ಆದಾಯದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಜಿಎಸ್‌ಟಿ ಸಂಗ್ರಹದಲ್ಲೂ ಮುಂಚೂಣಿಯಲ್ಲಿದ್ದೇವೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಯಶಸ್ಸು ಕಾರಣ. ಆಶಾ ದೀಪ ಕಾರ್ಯಕ್ರಮದಲ್ಲಿ ಎಸ್‌ಸಿ, ಎಸ್‌ಟಿ ವರ್ಗದವರಿಗೆ ಕೆಲಸ ನೀಡುವವರಿಗೆ ರೂ. 7,500 ರವರೆಗೆ ನೆರವು ನೀಡಲಾಗುತ್ತಿದೆ. ಹೊರಗುತ್ತಿಗೆ ನೌಕರರು ಸೊಸೈಟಿ ಮೂಲಕ ಕಾರ್ಯ ನಿರ್ವಹಿಸಲಿದ್ದು, ಸಂಬಳ ಸಮಸ್ಯೆ ತಪ್ಪಲಿದೆ. ಮುಂದಿನ ದಿನಗಳಲ್ಲಿ ಮನೆ ಕೆಲಸ ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ “ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ”ಯನ್ನು ಅನು?ನಗೊಳಿಸಲಾಗುತ್ತಿದೆ ಎಂದರು.
ಪ್ರಾರಂಭಿಕವಾಗಿ 26 ವರ್ಗಗಳ ಅಸಂಘಟತ ಕಾರ್ಮಿಕರನ್ನು ನೋಂದಾಯಿಸಲಾಗುತ್ತಿತ್ತು. ಪ್ರಸ್ತುತ ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟಾರೆ ೯೧ ವರ್ಗಗಳ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಸುಮಾರು ೩೫ ಲಕ್ಷ ಕಾರ್ಮಿಕರು ಇರುವುದಾಗಿ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ದೇಶದಲ್ಲಿಯೇ ಮೊದಲು ಜಾರಿಗೆ ರಾಜ್ಯ ನಮ್ಮದು. ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ. 2 ಲಕ್ಷ ಹಾಗೂ ಜೀವ ವಿಮಾ ರೂ. 2 ಲಕ್ಷ ಸೇರಿ ಒಟ್ಟು ರೂ. 4 ಲಕ್ಷಗಳು, ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ. 2 ಲಕ್ಷಗಳವರೆಗೆ ಜೊತೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ರೂ. 1 ಲಕ್ಷಗಳವರೆಗೆ ಹಾಗೂ ಜೀವ ವಿಮಾ ರೂ. 2 ಲಕ್ಷಗಳು ನೀಡಲಾಗುತ್ತದೆ ಎಂದು ಹೇಳಿದರು.
ಶಾಸಕರಾದ ಹೆಚ್.ಡಿ.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ.109 ಅಸಂಘಟಿತ ಕಾರ್ಮಿಕರಿಗೆ ಅಪಘಾತ, ಸಹಜ ಮರಣವಾದವರಿಗೆ ಪರಿಹಾರ ಈ ರೀತಿಯ ಯೋಜನೆಗಳನ್ನು ನೀಡುವ ಮುಖಾಂತರ ಅವರ ಕುಟುಂಬದ ಭದ್ರತೆಯನ್ನು ಕಾಪಾಡಲಾಗಿದೆ ಎಂದ ಅವರು ೨೬ ಅಸಂಘಟಿತ ಕಾರ್ಮಿಕರ ವರ್ಗಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ವತಿಯಿಂದ ಈ ಅಸಂಘಟಿತ ಕಾರ್ಮಿಕರಿಗೆ ಖಾಸಗಿ ಅಥವಾ ಸ್ವಂತ ವಾಹನ ಮಾಲೀಕರು ಸೇರಿದಂತೆ ಎಲ್ಲಾ ರೀತಿಯ ಕೆಲಸಗಾರರಿಗೆ ಆಕಸ್ಮಿಕ ಮರಣ ಸಂಭಾವ್ಯ ಪ್ರಕರಣಗಳಲ್ಲಿ ರೂ. 5 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಈಗಾಗಲೇ 78,132 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಮಿಕ ಮಂಡಳಿಯಿಂದ 31,472 ಜನರಿಗೆ ಒಟ್ಟು ರೂ. 56.98 ಕೋಟಿಯನ್ನು ಕಾರ್ಮಿಕ ಇಲಾಖೆಯಿಂದ ನೇರವಾಗಿ ಕಾರ್ಮಿಕರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಜೊತೆಗೆ 21,262 ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ.19.95 ಕೋಟಿಯನ್ನು ನೀಡಲಾಗಿದೆ. ವೈದ್ಯಕೀಯ ಸೇವೆಗಾಗಿ 381 ಫಲಾಭವಿಗಳಿಗೆ ರೂ.1.49 ಕೋಟಿಯ ನೆರವು ನೀಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಅಸಂಘಟಿತ ವಲಯವನ್ನು ಗುರುತಿಸಿ ಅವರಿಗೆ ಜೀವನಕ್ಕೆ ಭದ್ರತೆ ಹಾಗೂ ವಿಶ್ವಾಸವನ್ನು ತೋರಿಸುವುದು ಒಂದು ಉತ್ತಮವಾದ ಕಾರ್ಯ. ವಿವಿಧ ವೃತ್ತಿಗಳಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವುದು ಸಾಮಾನ್ಯದ ಸಂಗತಿಯಲ್ಲ. ಅವರಿಗೆ ಮಾರ್ಗದರ್ಶನ ನೀಡುವುದು, ಅಗತ್ಯ ಸಹಾಯ ನೀಡುವುದು, ಆರೋಗ್ಯದ ರಕ್ಷಣೆ ಜೊತೆಗೆ ಅವರ ಕುಟುಂಬದ ಭದ್ರತೆ, ಅಪಘಾತವಾದರೆ. ಅನಾರೋಗ್ಯ ಆಕಸ್ಮಿಕ ಮರಣ ಹೊಂದಿದರೆ ಆ ಕುಟುಂಬಕ್ಕೆ ಭದ್ರತೆ ಒದಗಿಸಲು ಮುಂದಾಗಿರುವ ಈ ಕಾರ್ಯಕ್ರಮ ಉತ್ತಮವಾದುದು ಎಂದು ತಿಳಿಸಿದರು.
ಪ್ರತಿಯೊಬ್ಬ ಶ್ರಮಜೀವಿ ಕಾರ್ಮಿಕ ಇಲಾಖೆಯ ಅಧೀನದಲ್ಲಿ ಬರುತ್ತಾರೆ. ಕೆಲಸ ಮಾಡುವಂತಹ ಪ್ರತಿಯೊಬ್ಬರೂ ಅವರ ವೇತನ ಹೆಚ್ಚು ಕಡಿಮೆ ಇದ್ದರೂ ಕೂಡ ಶ್ರಮ ವಹಿಸುವವರು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುತ್ತಾರೆ. ಅದು ಬಹುಶಃ ವೇತನ ಎನ್ನುವುದು ಉನ್ನತ ಹುದ್ದೆಯಿಂದ ಹಿಡಿದು ಕಟ್ಟ ಕಡೆಯ ಮನು?ನವರೆಗೂ ಪ್ರತಿಯೊಬ್ಬ ಶ್ರಮಜೀವಿ ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಹೇಳಿದರು.
ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್ ಮಾತನಾಡಿದರು.
ಕಾರ್ಮಿಕ ಇಲಾಖೆಯ ಆಯುಕ್ತ ಹೆಚ್.ಎನ್.ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಂಟಿ ಕಾರ್ಮಿಕ ಆಯುಕ್ತ ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Chikmagalur
ಶರನ್ನವರಾತ್ರಿ ಉತ್ಸವ: ನೋಡುಗರ ಕಣ್ಮನ ಸೆಳೆಯುತ್ತಿರುವ ದಸರಾ ಗೊಂಬೆ ಪ್ರದರ್ಶನ

ಚಿಕ್ಕಮಗಳೂರು: ಶರನ್ನವರಾತ್ರಿ ಉತ್ಸವ ಹಿನ್ನಲೆಯಲ್ಲಿ ನಗರದ ರಂಗಣ್ಣನವರ ಛತ್ರದಲ್ಲಿ ಚಿಕ್ಕಮಗಳೂರು ಬ್ರಾಹ್ಮಣ ಮಹಾ ಸಭಾ ವತಿಯಿಂದ ಆಯೋಜಿಸಿರುವ ದಸರಾ ಗೊಂಬೆ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ.
ದಸರಾ ಗೊಂಬೆ ಪ್ರದರ್ಶನದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ 1,500 ರಿಂದ 2,000ಕ್ಕೂ ಹೆಚ್ಚು ಗೊಂಬೆಗಳನ್ನು ಪ್ರದ ರ್ಶನದಲ್ಲಿ ಇರಿಸಲಾಗಿದ್ದು, ಪುರಾಣ ಪ್ರಸಿದ್ಧ ರಾಮಾಯಣ, ಮಹಾಭಾರತ, ಮದುವೆ ಸಂಭ್ರಮ, ಜಾತ್ರೆ, ಉತ್ಸವ, ಧಾರ್ಮಿಕ ಸಮಾರಂಭಗಳು, ಹಿಂದಿನ ಕಾಲದ ಉಪಯೋಗಿಸಿರುವ ವಸ್ತುಗಳು ಸೇರಿದಂತೆ ನಮ್ಮ ಹಿಂದಿನ ಮತ್ತು ಇಂದಿನ ಜೀವನ ಕ್ರಮವನ್ನು ಪ್ರತಿಬಿಂಭಿಸುವ ಗೊಂಬೆಗಳನ್ನು ಜೋಡಿಸಲಾಗಿದ್ದು, ನೋಡುಗರ ಹುಬ್ಬೆರಿಸುವಂತೆ ಮಾಡಿದೆ.
ಇದೇ ಪ್ರಥಮ ಬಾರಿಗೆ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದಿಂದ ದಸರಾ ಗೊಂಬೆ ಪ್ರದರ್ಶನವನ್ನು ಬೃಹತ್ ಮಟ್ಟದಲ್ಲಿ ಏರ್ಪಡಿಸಲಾಗಿದ್ದು, ಗೊಂಬೆ ಪ್ರೀಯರನ್ನು ಕೈಬಿಸಿ ಕರೆಯಿತ್ತಿದೆ. ಮಕ್ಕಳು, ಮಹಿಳೆಯರು, ಅಬಾಲವೃದ್ದರಾಧಿಯಾಗಿ ಗೊಂಬೆ ಗಳನ್ನು ವೀಕ್ಷಿಸಿದವರು ಆಶ್ಚರ್ಯ ಚಕಿತರಾಗುತ್ತಿದ್ದಾರೆ.
ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಜತೆಗೆ ಸಿರಿನಟರಾಜ್, ಪನ ಜಾಕ್ಷಿ ನಾಗಶ್ರೀ ಕಿರಣ್ ಅವರು ದಸರಾ ಗೊಂಬೆ ಪ್ರದರ್ಶನದಲ್ಲಿ ಇವರುಗಳು ಗೊಂಬೆಗಳನ್ನು ಇರಿಸಿದ್ದು, ಶ್ರೀ ರಂಗಣ್ಣನವರ ಛತ್ರ ವಿವಿಧ ಬಣ್ಣಗಳ ವಿವಿಧ ವೈಭವದ ಗೊಂಬೆಗಳ ಮನೆಯಾಗಿ ಪರಿವರ್ತನೆಯಾಗಿ ಗೊಂಬೆ ಪ್ರೀಯರನ್ನು ಕೈಬೀಸಿ ಕರೆಯುತ್ತಿದೆ. ಬೃಹತ್ ಗೊಂಬೆ ಪ್ರದರ್ಶನ ಆಕರ್ಷಕ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.
ಶಾಸಕ ಎಚ್.ಡಿ.ತಮ್ಮಯ್ಯ ದಸರಾ ಗೊಂಬೆ ಪ್ರದರ್ಶನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಹಲವು ಮಹಾನೀಯರನ್ನು ಕಂಡಂತಹ ಜಿಲ್ಲೆಯಾಗಿದೆ. ಜತೆಗೆ ಸುಸಂಸ್ಕೃತ ಮತ್ತು ವೈವಿದ್ಯಮಯ ಕಲೆಗಳನ್ನು ಹೊಂದಿದ್ದು, ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಬೇಕು ಎಂದು ಹೇಳಿದರು.
ದಸರಾ ಗೊಂಬೆ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಅತ್ಯುತ್ತಮ ಕೆಲಸ ಮಾಡಿದೆ. ಪೋಷಕರು ತಮ್ಮ ಮಕ್ಕಳನ್ನು ಕರೆತಂದು ನಮ್ಮ ಸಂಸ್ಕೃತಿಯನ್ನು ಗೊಂಬೆಗಳ ಮೂಲಕ ಅವರಿಗೆ ಅರಿವು ಮೂ ಡಿಸಬೇಕೆಂದು ಕಿವಿಮಾತು ಹೇಳಿದ ಅವರು ನಮ್ಮ ನಾಡ ಹಬ್ಬ ಮೈಸೂರು ದಸರಾ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಮೈಸೂರು ದಸರಾ ಆಚರಣೆ ಧಾರ್ಮಿಕವಾಗಿ ಮಾತ್ರವಲ್ಲದೆ, ನಮ್ಮ ಸಂಪ್ರದಾಯ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಹೀಗೆ ಅನೇಕ ಕ್ಷೇತ್ರಗಳನ್ನು ಒಳಗೊಂಡಿದೆ. ದಸರಾ ರಾಜ್ಯ, ದೇಶ ಸೇರಿದಂತೆ ವಿದೇಶಿಗರ ಗಮನವನ್ನು ಸೆಳೆದಿದೆ ಎಂದು ಹೇಳಿ ದರು.
ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಉತ್ತ ಮ ಸಂದೇಶವನ್ನು ಹೊಂದಿರುವ ಹಾಗೂ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಭಿಸುವ ದಸರಾ ಗೊಂಬೆ ಪ್ರದರ್ಶನವನ್ನು ಏರ್ಪ ಡಿಸಿರುವುದು ಶ್ಲಾಘನೀಯ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಲ್ಲವಿ ಸಿ.ಟಿ.ರವಿ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ್ ಜೋಶಿ, ಕಾರ್ಯದರ್ಶಿ ಎನ್.ಕೆ.ಅಶ್ವಿನ್, ನಾಗಶ್ರೀ ಕಿರಣ್, ರಮಾ, ಸತೀಶ್ ಇದ್ದರು. ಚೈತ್ರಾ ಸ್ವಾಗತಿಸಿ, ನಿರೂಪಿಸಿದರು.
Chikmagalur
ಚಿಕ್ಕಮಗಳೂರು : ನೇಣು ಬಿಗಿದುಕೊಂಡು ಓರ್ವ ಯುವಕ ಆತ್ಮಹ*ತ್ಯೆ

ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಂಕ್ಲಾಪುರದಲ್ಲಿ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಂಕ್ಲಾಪುರ ನಿವಾಸಿ ಫಲಹ (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.
ಸೌಂಡ್ಸ್ ಕೆಲಸ ಮಾಡಿಕೊಂಡಿದ್ದ ಫಲಹ ಸಾಲ ಮಾಡಿಕೊಂಡಿದ್ದು ಇದರಿಂದ ಚಿಂತೆಗೀಡಾಗಿದ್ದ ಎನ್ನಲಾಗಿದೆ. ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Chikmagalur
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು : ಸಚಿವ ಸಂತೋಷ್ ಲಾಡ್

ಚಿಕ್ಕಮಗಳೂರು : ಜಾತಿಗಣತಿ ಮಾಡ್ತೀವಿ ಅಂತ ಹೇಳೀದ್ದು ಕೇಂದ್ರ ಸರ್ಕಾರ
ಪೆಹಲ್ಗಾಮ್ ದಾಳಿ, ವೋಟ್ ಚೋರಿ ಆರಂಭವಾದಾಗ ಜನರಿಗೆ ದಾರಿ ತಪ್ಪಿಸಲು ಯತ್ನಿಸಿದ್ದರು
ರಾತ್ರಿ ಮಲಗಿದ್ದವರಿಗೆ ಎಚ್ಚರವಾದಾಗ ಎದ್ದು ಬಂದು ನಾವು ಓಬಿಸಿ ಜಾತಿಗಣತಿ ಮಾಡ್ತೀವಿ ಎಂದ್ರು
ಚಿಕ್ಕಮಗಳೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು
ಬಹಳಷ್ಟು ಜನ ಜಾತಿ ಗಣತಿ ಅಂತಾರೆ, ಶೈಕ್ಷಣಿಕವಾಗಿ ಹೋದಾಗ ಅದೊಂದು ಪ್ಯಾರಾಮೀಟರ್
೬೦ ರಲ್ಲಿ 58 ಪ್ಯಾರಾಮೀಟರ್ ಬಿಟ್ಟಿದ್ದಾರೆ, ನೀವೆಲ್ಲಾ ಜಾತಿಗಣತಿ ಅಂತೀರಾ, ಜಾತಿಗಣತಿ ಅಲ್ಲ
ಓಬಿಸಿ ಜಾತಿಗಣತಿ ಮಾಡ್ತೀವಿ ಎಂದಿದ್ದು ಕೇಂದ್ರ ಸರ್ಕಾರ, ಆಗ ಅವ್ರು ಯಾವ ಜಾತಿಯನ್ನೂ ಒಡೆಯಲಿಲ್ಲ
ಕೇಂದ್ರ ಸರ್ಕಾರ ಆಲ್ ಓವರ್ ಇಂಡಿಯಾ ಮಾಡೋದು ಜಾತಿ ಹೊಡೆತ ಅಲ್ಲ, ನಾವು ಮಾಡಿದ್ರೆ ಜಾತಿ ಹೊಡೆತ
ಕಾಂಗ್ರೆಸ್ ಇರುವಲ್ಲಿ ಕಾಲು ಕರೆದು ಜಗಳ ಮಾಡಲು ಮುಂದಾಗ್ತಾರೆ, ಈಗ ಎಲ್ಲಾ ಮುಚ್ಕಂಡ್ ಹೋಗಬೇಕಲ್ವಾ
ಕಾಂಗ್ರೆಸ್ಸಿಗರಿಗೆ ತೊಂದರೆ ಕೊಡುವುದು ಬಿಟ್ಟರೆ ಬೇರೆ ಏನಿದೆ ಹೇಳಿ
ಚಿಕ್ಕಮಗಳೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ
-
Mysore6 hours ago
ವಾಸುದೇವಾಚಾರ್ಯ ಸ್ಮರಣಾರ್ಥ ಸರ್ಕಾರಿ ಕಾರ್ಯಕ್ರಮ: ಶಾಸಕ ಶ್ರೀವತ್ಸ ಮನವಿಗೆ ಸಿಎಂ ಸ್ಪಂದನೆ
-
Chamarajanagar8 hours ago
ಚಾರ್ಮಾಡಿ ಘಾಟಿಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ
-
Chikmagalur4 hours ago
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು : ಸಚಿವ ಸಂತೋಷ್ ಲಾಡ್
-
Hassan24 hours ago
ಶ್ರೀ ತಿರುಮಲ ರಂಗನಾಥ ಸ್ವಾಮಿ ದೇವಾಲಯದ ನವರಾತ್ರಿ ಉತ್ಸವಕ್ಕೆ 2 ವರ್ಷಗಳ ಬಳಿಕ ಚಾಲನೆ: ವಿನೋದ್ ಚೌಕಿದಾರ್
-
Hassan1 hour ago
ತಾಜಾ ಎಣ್ಣೆ, ಆರೋಗ್ಯಕರ ಕುಟುಂಬ
-
Hassan5 hours ago
ಹಾಸನದ ೧೫ ಕರ್ನಾಟಕ ಬೆಟಾಲಿಯನ್ ನಲ್ಲಿ ಎನ್ಸಿಸಿ ಕಾರ್ಯಗಾರ
-
Mysore20 hours ago
ವಸ್ತು ಪ್ರದರ್ಶನಕ್ಕೆ ಚಾಲನೆ: ಮೊದಲ ದಿನವೇ ವಸ್ತು ಪ್ರದರ್ಶನ ಭರ್ತಿ
-
Hassan22 hours ago
ವಿಶ್ವಮಾನವ ತತ್ತ್ವ ಸಾರುವ ಕುವೆಂಪು ಎಲ್ಲರಿಗೂ ಮಾದರಿ : ಹಿರಿಯ ಸಾಹಿತಿ ಪ್ರೊ. ಸೈಯದ್ ಶಹಬುದ್ದೀನ್