Mysore
ಯುವ ದಸರಾಗೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಯುವ ದಸರಾವನ್ನು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಚಾಲನೆ ನೀಡಿದರು.
ನಗರದ ಹೊರಹೊಲಯದ ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಸಮೀಪದ ಮೈದಾನದಲ್ಲಿ ಮಂಗಳವಾರ ಯುವ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ, ಸೌಹಾರ್ದತೆಯನ್ನು ಸಾರುವ, ಜನರ ಜೀವನದ ಮಜಲುಗಳು, ಸಾಂಸ್ಕೃತಿಕ ಜೀವನ, ನಡೆ-ನುಡಿ ಅಭಿವ್ಯಕ್ತಿಗೊಳಿಸುವ ಆಚರಣೆಯೇ ದಸರಾ ಎಂದರು.
ಯುವ ಜನತೆಯು ಸಾಂಸ್ಕತಿಕ, ಜಾನಪದ ಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಾಂಸ್ಕೃತಿಕ ನಾಯಕತ್ವ ಬೆಳೆಸಿಕೊಂಡು ದೇಶ ವಿದೇಶದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಂವಿಧಾನ ಆಶಯ ಬಲವಾಗಿ ನೆಲೆಯೂರುವಂತೆ ಮಾಡಬೇಕು ಎಂದರು.
ಪ್ರತಿ ವರ್ಷದಂತೆ ಈ ಬಾರಿಯು ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ವೈಯಕ್ತಿಕ ಆಸಕ್ತಿಯಿಂದ ಹಗಲು-ರಾತ್ರಿ ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿರುವ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಜಿ.ಟಿ.ದೇವೇಗೌಡ ಮೈಸೂರು ದಸರಾ… ಎಷ್ಟೊಂದು ಸುಂದರ…. ಹಾಡಿನ ಮೂಲಕ ಮಾತು ಆರಂಭಿಸಿ, ಯುವ ದಸರಾ ಕಾರ್ಯಕ್ರಮದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯು ಬರದಂತೆ, ಶಾಂತಿ, ಶಿಸ್ತಿಯಿಂದ ಯುವ ಜನತೆ ಕಾರ್ಯಕ್ರಮವನ್ನು ಸವಿದು ಪೋಲೀಸ್ ಹಾಗೂ ಆಧಿಕಾರಿಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.
ಶಾಸಕ ಕೆ.ಹರೀಶ್ ಗೌಡ, ರವಿಶಂಕರ್ ಡಿ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಪುಷ್ಪಾವತಿ ಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಯುಕೇಶ್ ಕುಮಾರ್ ಸೇರಿದಂತೆ ಇತರರು ಇದ್ದರು.
ಯುವ ಜನತೆಗೆ ಅರ್ಜುನ್ ಜನ್ಯ ಮೋಡಿ…
ಕನ್ನಡ ಚಲನಚಿತ್ರದ ಮ್ಯಾಜಿಕಲ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತದ ಮೋಡಿ ಮಾಡಿದರು.
ಡ್ರಮ್ ಬ್ಯಾಂಡ್ ನೊಂದಿಗೆ ಸುದೀಪ್ ಅಭಿಯನದ ‘ಬಂದ ನೋಡು ಪೈಲ್ವಾನ್’ ಹಾಡಿನೊಂದಿಗೆ ಹಾಗೂ ತಂಡದ ಗಾಯಕರು ಒಂದೊಂದು ಹಾಡಿನ ಮೂಲಕ ವೇದಿಕೆಯ ಮೇಲೆ ಪರಿಚಯಿಸಿದರು.
‘ನೆನ್ನೆ ಮೊನ್ನೆವರೆಗೂ ನಾ ಶೊನ್ನೆಯಾಗಿದ್ದೆನಾ’ ಹಾಡಿನ ಮೂಲಕ ಸರಿಗಮಪ ಖ್ಯಾತಿಯ ಸುನೀಲ್, ಜಸ್ ಕರಣ್ ಹಾಡಿ ಯುವಕರು ತಲೆದೂಗುವಂತೆ ಮಾಡಿದರು. ಗಾಯಕಿ ಇಂದು ನಾಗರಾಜ್ ‘ಅರಳದ ಕಿರು ಮಲ್ಲಿಗೆ, ಆಯಿತೆ ಮಡಿ ಮೈಲಿಗೆ’ ಹಾಡಿ ರಂಜಿಸಿದರು.
ಐಶ್ವರ್ಯ ರಂಗರಾಜನ್ ಮತ್ತು ತಂಡ ನೃತ್ಯದ ಮೂಲಕ ನಟ ಚೇತನ್ ಅಭಿಯನದ ಆದಿನಗಳು ಚಿತ್ರದ ಇತ್ತೀಚಿಗೆ ಸಾಕಷ್ಟು ವೈರಲ್ ಆದ ‘ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡಿನ ಸಾಲಿನಲ್ಲಿ’ ಹಾಡು ಯುವ ಮನಸ್ಸುಗಳ ಮನ ಮುಟ್ಟುವಂತೆ ಮಾಡಿತು.
ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ಮತ್ತು ಅವರ ತಂಡ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹಾಡುಗಳನ್ನು ಹಾಡಿ ಯುವ ಜನತೆಯ ಮನ ಗೆದ್ದರು.
ಬೆಂಗಳೂರಿನ ಲಗೋರಿ ಬ್ಯಾಂಡ್ ತಂಡದವರು ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮೇಲೆ ತುಂಡು ಮಲ್ಲಿಗೆ ಎಂದು ಮಹದೇಶ್ವರ ಜಪ ಮಾಡಿದರು. ಸಪ್ತ ಸಾಗರಾದಚೆ ಎಲ್ಲೋ, ಬೆಳಗೆದ್ದು ಯಾರ ಮುಖನಾ ನೋಡಲಿ, ಕುಲದಲ್ಲಿ ಕೀಳ್ಯಾವುದು…ಮೇಲ್ಯಾವುದೊ, ಶಂಕರ್ ನಾಗ್ ಅಭಿಯನದ ಸಂತೋಷಕ್ಕೆ ಹಾಡು ಸಂತೋಷಕ್ಕೆ, ಮಾರಿ ಕಣ್ಣು ಹೋರಿ ಮ್ಯಾಗೆ ಕಟುಕನ ಕಣ್ಣು ಕುರಿ ಮ್ಯಾಗೆ ಹಾಡುಗಳಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿದರು.
Mysore
ಥೈಕ್ಕೂಡಂ ಬ್ರಿಡ್ಜ್ ರಾಕ್ ಬ್ಯಾಂಡ್ ಮೋಡಿ ಅರಮನೆ ಆವರಣದಲ್ಲಿ ಮನಸೋತ ಪ್ರೇಕ್ಷಕರು

ಮೈಸೂರು: ದಸರಾ ಮಹೋತ್ಸವ ಹಿನ್ನಲೆ ಅರಮನೆ ಆವರಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನ 30 ದೇಶಗಳಲ್ಲಿ 800 ಕಾರ್ಯಕ್ರಮಗಳನ್ನು ನೀಡಿರುವ ಇಂಡಿಯನ್ ಫೋಕ್ ಫ್ಯೂಷನ್ ಥೈಕ್ಕೂಡಂ ಬ್ರಿಡ್ಜ್ ರಾಕ್ ಬ್ಯಾಂಡ್ ಮೋಡಿ ಮಾಡಿತು.
ಕೇಳದೆ ನಿಮಗೀಗ, ತಾರಾ ತಕಧಿಮಿತಾ, ತೇರಿ ದಿವಾನೀ, ಓಂ ಶಿವೋಹಂ, ಗಾಯನಕ್ಕೆ ನೋಡುಗರು ಶಿಳ್ಳೆ ಚಪ್ಪಾಳೆ ಹಾಕಿ ಸಂಭ್ರಮಿಸಿದರು. ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಹಲವಾರು ಆಲ್ಬಂ ಹಾಡುಗಳನ್ನು ಹಾಡಿ ಹಾಗೂ ತಮ್ಮ ವಿಶಿಷ್ಟ ರಾಕ್ ಬ್ಯಾಂಡ್ ಮ್ಯೂಸಿಕ್ ಮೂಲಕ ನೋಡುಗರನ್ನು ರಂಜಿಸಿದರು.
ಇದಕ್ಕೂ ಮುನ್ನ ರಘುರಾಮ್ ಮತ್ತು ತಂಡ ಕರ್ನಾಟಕ ಶಾಸ್ತ್ರಿಯ ಸಂಗೀತದ ಮೂಲಕ ಶಾಸ್ತ್ರಿಯ ಸಂಗೀತ ರಸಿಕರಿಗೆ ಸಂಗೀತ ರಸದೌತಣ ನೀಡಿದರು ಹಾಗೂ ಡಾ. ಶ್ವೇತಾ ಮಡಪ್ಪಾಡಿ ಅವರು ಜನಪದ ಶೈಲಿಯಲ್ಲಿ ಮಾದಪ್ಪನ ಜನಪದ ಗೀತೆ ಹಾಗೂ ಹಲವು ದೇವರ ಗೀತೆಗಳನ್ನು ತಮ್ಮದೇ ವಿಶಿಷ್ಟ ಶೈಲಿ ಗಾಯನದಿಂದ ಮೋಡಿ ಮಾಡಿದರು.
ಎರಡನೇ ದಿನ ಅರಮನೆ ಆವರಣದಲ್ಲಿ ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ಆಸನಗಳೆಲ್ಲ ಭರ್ತಿ ಆಗಿದ್ದು, ಸಾವಿರಾರು ಮಂದಿ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಣೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರು, ಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು ಉಪಸ್ಥಿತರಿದ್ದರು.
Mysore
ಪೌರಕಾರ್ಮಿಕರಿಂದ ನಂಜನಗೂಡು ನಗರ ಸ್ವಚ್ಛತೆ, ಸೌಂದರ್ಯ ಕಾಪಾಡಿಕೊಂಡಿದೆ: ದರ್ಶನ್ ಧ್ರುವನಾರಾಯಣ್

ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಪೌರಕಾರ್ಮಿಕರಿಂದ ನಂಜನಗೂಡು ನಗರ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಂಡಿದೆ, ನಾಗರಿಕರಿಗೂ ಕೂಡ ಕಸದ ವಿಚಾರದಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತರೆ ಈ ನಗರ ಇನ್ನಷ್ಟು ಸೌಂದರ್ಯ ಮತ್ತು ಸ್ವಚ್ಛತೆಯಿಂದ ಕೂಡಿರುತ್ತದೆ ಎಂದು ಪೌರ ಕಾರ್ಮಿಕರ ಕಾರ್ಯವೈಖರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ನಂಜನಗೂಡು ನಗರದ ನಂದಿ ಕನ್ವರ್ಷನ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪೌರಕಾರ್ಮಿಕರು ನಮ್ಮ ಹೀರೋಗಳು ಪೌರಕಾರ್ಮಿಕರ ಪರಿಶ್ರಮದಿಂದ ನಗರದಲ್ಲಿ ಸ್ವಚ್ಛತೆಯನ್ನು ಕಾಣುತ್ತಿದ್ದೇವೆ. ನಾಗರಿಕರು ಪೌರಕಾರ್ಮಿಕರ ಜೊತೆ ಕೈಜೋಡಿಸಿದರೆ ನಂಜನಗೂಡು ನಗರ ಇನ್ನಷ್ಟು ಸ್ವಚ್ಛತೆಯಿಂದ ಕೂಡಿರುತ್ತದೆ. ಸರ್ಕಾರ ಪೌರಕಾರ್ಮಿಕರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ ಮುಂದಿನ ದಿನಗಳಲ್ಲೂ ಪೌರಕಾರ್ಮಿಕರ ಈತ ಕಾಯಲು ಸರ್ಕಾರ ಬದ್ಧವಾಗಿದೆ. ಪಟ್ಟಣದ ನಾಗರಿಕರು ಮತ್ತು ಪೌರಕಾರ್ಮಿಕರು ತಮ್ಮ ಜವಾಬ್ದಾರಿ ಹೀಗೆ ಮುಂದುವರಿಸಿ ನಗರದ ಸುಚಿತವನ್ನು ಕಾಪಾಡಿ ಎಂದು ಮನವಿ ಮಾಡಿ ಪೌರಕಾರ್ಮಿಕರಿಗೆ ಮತ್ತು ಕುಟುಂಬದ ಸದಸ್ಯರಿಗೆ ಶುಭವನ್ನು ಹಾರೈಸಿದರು.
ಪೌರಾಯುಕ್ತಧಿಕಾರಿ ವಿಜಯ್ ಮಾತನಾಡಿ ನಂಜನಗೂಡು ನಗರದಲ್ಲಿ ಪೌರಕಾರ್ಮಿಕರು ನಿರಂತರ ಸೇವೆ ಸಾಕಷ್ಟು ಇದೆ. ವರ್ಷ ಇಡೀ ಪೌರಕಾರ್ಮಿಕರು ಹಬ್ಬಗಳನ್ನು ಮರೆತು ಕೆಲಸ ಮಾಡುತ್ತಾರೆ. ಅವರಿಗೆ ಒಂದು ದಿನ ಮಟ್ಟಿಗೆ ಹಬ್ಬ ರೀತಿ ಆಚರಣೆ ಮಾಡಬೇಕೆಂದು ಸರ್ಕಾರ ನಿಗದಿ ಮಾಡಿತು. 1964ರಲ್ಲಿ ಪೌರಕಾರ್ಮಿಕರ ಸಂಘ ಉದ್ಘಾಟನೆ ಯಾಗಿತ್ತು. ಪೌರಕಾರ್ಮಿಕರ ಸೇವಾ ಸಂಘ ಉದ್ಘಾಟನೆಯಾಗಿ ಸಂಘದವರಿಂದ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಆಚರಣೆ ಮಾಡಲು ಜಾರಿಗೆ ತರಲಾಯಿತು. ನಗರಸಭೆ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರ ಗಳಿಗೆ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ನಂಜನಗೂಡು ನಗರದಲ್ಲಿ ಇರುವ ಪೌರಕಾರ್ಮಿಕರ ಹಕ್ಕುಗಳಿಗೆ ಹಾಗೂ ಅವರ ಜೀವನಕ್ಕಾಗಿ ಸರ್ಕಾರದ ಯೋಜನೆಗಳನ್ನ ಒದಗಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ನಗರಸಭೆಯ ಎಲ್ಲಾ ಪೌರಕಾರ್ಮಿಕರುಗಳಿಗೆ 14.31 ಲಕ್ಷದ ವೆಚ್ಚದಲ್ಲಿ ಇನ್ಸುರೆನ್ಸ್ ಸೌಲಭ್ಯವನ್ನು ನಂಜನಗೂಡು ನಗರದ ಎಲ್ಲಾ ಪೌರಕಾರ್ಮಿಕರಿಗೂ ನೀಡುವ ಮಹತ್ವಾಕಾಂಕ್ಷೆ ಯೋಜನೆಯನ್ನು ಅನುಷ್ಠಾನ ಗೊಳಿಸುತ್ತಿರುವ ಮಾಹಿತಿಯನ್ನು ತಿಳಿಸಿದರು .ಪೌರಕಾರ್ಮಿಕರಿಗೆ ನಗರಸಭೆ ನಿಮ್ಮ ಜೊತೆ ಯಾವಾಗಲೂ ಇರುತ್ತದೆ ಎಂದು ಭರವಸೆಯನ್ನು ನೀಡಿದರು.
ಸಮಾರಂಭದಲ್ಲಿ ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭೆ ಸದಸ್ಯರುಗಳಾದ ಬಸವರಾಜು, ರವಿ, ಗಂಗಾಧರ್, ಮಹೇಶ್, ಖಾಲಿದ್, ನಗರಸಭೆ ಅಧಿಕಾರಿಗಳಾದ ಪರಿಸರದ ಅಭಿಯಂತರು ಬಿ.ಎನ್.ಮೈತ್ರಾವತಿ, ಹಿರಿಯ ಆರೋಗ್ಯ ನಿರೀಕ್ಷಕರು ರೇಖಾ, ಪ್ರ .ದ.ಕಂ ಮಹೇಶ್, ಡಿ. ದರ್ಜೆ ನೌಕರರು ಎಂ.ಮಹೇಶ್, ಪೌರಕಾರ್ಮಿಕರ ಜಿಲ್ಲಾ ಕಾರ್ಯದರ್ಶಿ ನಾರಾಯಣ್ , ಮಾಜಿ ನಗರಸಭೆ ಅಧ್ಯಕ್ಷ ಚೆಲುರಾಜು, ಶ್ರೀನಿವಾಸ್, ಸಿದ್ದರಾಜ ,ಮಹದೇವ ಪ್ರಸಾದ್, ಗಾಯತ್ರಿ ಮೋಹನ್, ಯೋಗೇಶ್ (ಗುಂಡ), ಶ್ವೇತಾ ಸತೀಶ್ ಗೌಡ, ಸೌಭಾಗ್ಯ, ಸಿದ್ದಿಕ್, ಸೇರಿದಂತೆ ನಗರಸಭೆ ಅಧಿಕಾರಿಗಳು ಉಪಸ್ಥಿತಿಯಲ್ಲಿದ್ದರು.
Mysore
ಬಾನು ಮುಷ್ತಾಕ್ ಬದುಕು- ಬರಹ: ಪುಸ್ತಕ ಮೇಳದಲ್ಲಿ ಚರ್ಚೆ

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಜಂಟಿಯಾಗಿ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ಪುಸ್ತಕ ಮಾರಾಟ ಮೇಳದಲ್ಲಿ ಮಂಗಳವಾರ ಬಾನು ಮುಷ್ತಾಕ್ ಬದುಕು ಬರಹ ಕುರಿತ ಚರ್ಚೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಖ್ಯಾತ ಬರಹಗಾರ ವಸುಧೇಂದ್ರ ಪುಸ್ತಕ ಖರೀದಿಸುವ ಮೂಲಕ ಉದ್ಘಾಟಿಸಿದರು. ಅತಿಥಿಗಳಾಗಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಭಾಗವಹಿಸಿದ್ದರು.
ಬಾನು ಮುಷ್ತಾಕ್ ಬದುಕು- ಬರಹ ಕೃತಿ ಕುರಿತು ಪ್ರೀತಿ ನಾಗರಾಜ್, ಮಂಜುಳಾ ಕಿರುಗಾವಲು ಹಾಗೂ ಡಾ. ಸಿದ್ದರಾಮ ಹೊನ್ಕಲ್
ಅವರು ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೃತಿಯ ಲೇಖಕ ಬಿ ಶಿವಾನಂದ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್, ಮಾರಾಟ ಮೇಳದ ಸಮನ್ವಯಾಧಿಕಾರಿಗಳಾದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಡಾ. ನಂಜಯ್ಯ ಹೊಂಗನೂರು ಉಪಸ್ಥಿತರಿದ್ದರು.
ರವೀಂದ್ರನಾಥ ಸಿರಿವರ ಕಾರ್ಯಕ್ರಮ ನಿರೂಪಿಸಿದರು.
-
Chamarajanagar12 hours ago
ಚಾರ್ಮಾಡಿ ಘಾಟಿಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ
-
Mysore10 hours ago
ವಾಸುದೇವಾಚಾರ್ಯ ಸ್ಮರಣಾರ್ಥ ಸರ್ಕಾರಿ ಕಾರ್ಯಕ್ರಮ: ಶಾಸಕ ಶ್ರೀವತ್ಸ ಮನವಿಗೆ ಸಿಎಂ ಸ್ಪಂದನೆ
-
Chikmagalur9 hours ago
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು : ಸಚಿವ ಸಂತೋಷ್ ಲಾಡ್
-
Hassan6 hours ago
ತಾಜಾ ಎಣ್ಣೆ, ಆರೋಗ್ಯಕರ ಕುಟುಂಬ
-
Kodagu4 hours ago
ಬಾಳೆಯಡ ಕಿಶನ್ ಪೂವಯ್ಯ ರಚಿತ ’ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ’ ಬಿಡುಗಡೆ
-
Hassan10 hours ago
ಹಾಸನದ ೧೫ ಕರ್ನಾಟಕ ಬೆಟಾಲಿಯನ್ ನಲ್ಲಿ ಎನ್ಸಿಸಿ ಕಾರ್ಯಗಾರ
-
Special1 hour ago
ಅಂಗನವಾಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ..
-
Mandya4 hours ago
ಮದ್ದೂರು ನಗರವನ್ನು 100 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿ ಪಡಿಸಲಾಗುವುದು: ಕೆ.ಎಂ.ಉದಯ್