Connect with us

Kodagu

ಕೊಡಗು ಪತ್ರಕರ್ತರ ಸಂಘ(ರಿ) ಕ್ಷೇಮಾಭಿವೃದ್ಧಿ ಸಮಿತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Published

on

ಕೊಡಗು : ಜಿಲ್ಲಾ ಪತ್ರಕರ್ತರ ಸಂಘ(ರಿ.) ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯಿಂದ 2025 ರ ಸೆಪ್ಟೆಂಬರ್‌ 19ನೇ ತಾರೀಕು ಶುಕ್ರವಾರದಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಪತ್ರಕರ್ತರು, ಪತ್ರಕರ್ತರ ಕುಟುಂಬ ವರ್ಗದವರು, ಪತ್ರಿಕಾ ಕ್ಷೇತ್ರದ ಸಿಬ್ಬಂದಿಗಳು, ಪತ್ರಿಕಾ ವಿತರಕರು ಹಾಗೂ ಕುಟುಂಬದವರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆಯ 15 ವಿಭಾಗಗಳ ನುರಿತ ತಜ್ಞರುಗಳು ಹಾಗೂ ವೈದ್ಯರುಗಳು ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ನೇತ್ರ ತಜ್ಞರು, ಜನರಲ್ ಮೆಡಿಸಿನ್, ಮೂಳೆ ತಜ್ಞರು, ಇ.ಎನ್.ಟಿ. ತಜ್ಞರು, ಶ್ವಾಸಕೋಶ ತಜ್ಞರು, ದಂತ ವೈದ್ಯಕೀಯ, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಶ್ರವಣ ಆರೋಗ್ಯ ತಜ್ಞರು, ಮಾನಸಿಕ ಆರೋಗ್ಯ ತಜ್ಞರು ಮುಂತಾದ 15 ವಿಭಾಗಗಳ ನುರಿತ ತಜ್ಞರು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಆರೋಗ್ಯಕ್ಕೆ ಸಂಬಂಧಿಸಿದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಆಯುಷ್ಮಾನ್ ಭಾರತ್ ಯೋಜನಾಧಿಕಾರಿ ಕೂಡ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಡಿಕೇರಿಯ ಪತ್ರಿಕಾ ಭವನ ಸಮೀಪದ ಕಾವೇರಿ ಹಾಲ್ ನಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರಗೆ ಈ ಶಿಬಿರ ನಡೆಯಲಿದ್ದು, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್‌ ಗೌಡ ಉದ್ಘಾಟಿಸಲಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆಯ ಡೀನ್ ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ, ವೈದ್ಯಕೀಯ ಅಧೀಕ್ಷಕರಾದ ಡಾ. ಹೆಚ್.ಕೆ. ಸೋಮಶೇಖರ್, ಜಿಲ್ಲಾ ಸರ್ಜನ್ ಡಾ. ನಂಜುಂಡಯ್ಯ ಹಾಗೂ ತುರ್ತು ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಮೋಹನ್‌ ಅಪ್ಪಾಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ನಿಡಲಿದ್ದಾರೆ.

ಕೊಡಗು ಪತ್ರಕರ್ತರ ಸಂಘ(ರಿ) ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಈ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಪತ್ರಕರ್ತರು, ಪತ್ರಕರ್ತರ ಕುಟುಂಬ ವರ್ಗದವರು, ಪತ್ರಿಕಾ ಕ್ಷೇತ್ರದ ಸಿಬ್ಬಂದಿಗಳು, ಪತ್ರಿಕಾ ವಿತರಕರು , ಕುಟುಂಬ ವರ್ಗದವರು, ಸಾರ್ವಜನಿಕರು ಬಂದು ಎಲ್ಲಾ ವಿಭಾಗಗಳ ನುರಿತ ತಜ್ಞರಿರುವ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೊಡಗು ಪತ್ರಕರ್ತರ ಸಂಘ, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಕುಮಾರ್ ಜಿ.ವಿ. ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‌ ಕೂರ್ಗ್ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.

Continue Reading

Kodagu

ಸೆಪ್ಟೆಂಬರ್ 13, ಮತ್ತು 14 ರಂದು ಚೋಕಂಡಳ್ಳಿಯಲ್ಲಿ ಅದ್ಧೂರಿ ಕಂದೂರಿ‌ ಕಾರ್ಯಕ್ರಮ

Published

on

ಮಡಿಕೇರಿ: ಸೆಪ್ಟೆಂಬರ್ 13 ಶನಿವಾರ ಮತ್ತು 14ರ ಭಾನುವಾರ ಪ್ರವಾದಿ ಮೊಹಮ್ಮದ್ (ಸ.ಅ) ಅವರ ಮುಹಜಿಸತ್ತಿನಿಂದ ಪ್ರಸಿದ್ದಿ ಹೊಂದಿರುವ ದಶಕಗಳಿಂದ ವಿರಾಜಪೇಟೆ ಸಮೀಪದ ಚೋಕಂಡಳ್ಳಿಯಲ್ಲಿ ನಡೆಸಿಕೊಂಡು ಬರುತ್ತಿರುವ “ಚೋಕಂಡಳ್ಳಿ ಕಂದೂರಿ” (ಈದ್-ಮಿಲಾದ್ )‌ಕಾರ್ಯಕ್ರಮವು ನಡೆಯಲಿದೆ ಎಂದು ಚೋಕಂಡಳ್ಳಿ ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಪಿ‌ಎ ಸಿರಾಜುದ್ದೀನ್ ತಿಳಿಸಿದ್ದಾರೆ.

ಚೋಕಂಡಳ್ಳಿಯ ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚೋಕಂಡಳ್ಳಿಯ ಕಂದೂರಿ ಕಾರ್ಯಕ್ರಮಕ್ಕೆ ಹಲವು ದಶಕಗಳ ಇತಿಹಾಸವೊಂದಿದೆ.ಕಂದೂರಿ ಕಾರ್ಯಕ್ರಮಕ್ಕೆ ಜಾತಿ,ಧರ್ಮ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಿದ್ದಾರೆ.

ಸೆಪ್ಟೆಂಬರ್ 13ರ ಶನಿವಾರ ಅಸರ್ ನಮಾಝಿನ ಬಳಿಕ ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ ರಫಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಸಂಜೆ 07 ಗಂಟೆಗೆ ನಡೆಯುವ ಕಾರ್ಯಕ್ರಮದ ಮುಖ್ಯ ಪ್ರಭಾಷಣವನ್ನು ರಫೀಕ್ ಸಹದಿ ದೇಲಂಪಾಡಿ ಮಾಡಲಿದ್ದು,ಪ್ರಾರ್ಥನೆಯನ್ನು ಸೈಯದ್ ಮಹ್ ದಿ ಅಹಮದ್ ತಂಙಲ್ ಅಂದ್ರೋತ್ ಲಕ್ಷದೀಪ ನೆರವೇರಿಸಲಿದ್ದಾರೆ‌.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈದ್-ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ ರಫಿ ವಹಿಸಲಿದ್ದಾರೆ‌.
ಕಾರ್ಯಕ್ರಮದ ಉದ್ಘಾಟನೆಯನ್ನು ಚೋಕಂಡಳ್ಳಿ ಜುಮಾ ಮಸೀದಿ ಮುದರಿಸ್ ಮುಬಶ್ಶಿರ್ ಅಹ್ಸನಿ ಅಲ್ ಕಾಮಿಲ್ ಮಾಡಲಿದ್ದಾರೆ ಎಂದು ಸಿರಾಜುದ್ದೀನ್ ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ 14ರ ಭಾನುವಾರ ಬೆಳಗ್ಗೆ 05 ಗಂಟೆಗೆ ಮೌಲಿದ್ ಪಾರಾಯಣ, ಬೆಳಗ್ಗೆ 08 ಗಂಟೆಗೆ ರಿಫಾಯಿ ರಾತೀಬ್ ಸಂಘದವರಿಂದ ಮನೆಗಳಿಗೆ ಸಂದರ್ಶನ,ಬೆಳಗ್ಗೆ 10 ಗಂಟೆಗೆ ಈದ್-ಮಿಲಾದ್ ಸಂದೇಶ ಜಾಥಾ,11.30 ಗಂಟೆಗೆ ಆಕರ್ಷಕ ದಫ್ ಪ್ರದರ್ಶನ ನಡೆಯಲಿದೆ.


ಮಧ್ಯಾಹ್ನ 12 ಗಂಟೆಗೆ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಪ್ರಭಾಷಣವನ್ನು ಕರ್ನಾಟಕ ರಾಜ್ಯ ಎಸ್.ಎಸ್.ಎಫ್ ಅಧ್ಯಕ್ಷ ಹಾಫಿಝ್ ಸುಫಿಯಾನ್ ಸಖಾಫಿ‌ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ‌ ರಫಿ ವಹಿಸಲಿದ್ದಾರೆ.
ಪ್ರಾರ್ಥನ ಹಾಗೂ ಉದ್ಘಾಟನೆಯನ್ನು ಸೈಯದ್ ಮಹದಿ‌ ತಂಙಲ್ ಅಂದ್ರೋತ್ ಲಕ್ಷದೀಪ ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ವಿಧಾನಸಭಾ ‌ಕ್ಷೇತ್ರದ ಶಾಸಕ ಎಎಸ್ ಪೊನ್ನಣ್ಣ, ವಿರಾಜಪೇಟೆ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ,ಚೋಕಂಡಳ್ಳಿ ಜುಮಾ ಮಸೀದಿ ಅಧ್ಯಕ್ಷ ಪಿ.ಎ ಹನೀಫ್,ರಿಫಾಯಿ ರಾತೀಬ್ ಸಂಘದ ಅಧ್ಯಕ್ಷ ಡಿ.ಎಚ್ ಸೂಫಿ ಹಾಜಿ,ಬಿಳುಗುಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿಲ್ಲವಂಡ ಕಾವೇರಪ್ಪ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಧಕರಿಗೆ‌ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ 02 ಗಂಟೆಗೆ ಅನ್ನದಾನ ನಡೆಯಲಿದೆ‌ ಎಂದು ಸುದ್ದಿಗೋಷ್ಠಿಯಲ್ಲಿ‌ ಪಿ.ಎ ಸಿರಾಜುದ್ದೀನ್ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ‌ ರಫಿ,ಸಹ ಕಾರ್ಯದರ್ಶಿ ಕೆ.ವೈ ನಾಸರ್,ಸದಸ್ಯರಾದ ಆಶಿಂ,ಇಸ್ಮಾಯಿಲ್, ಸೈಫುದ್ದೀನ್,ಶಿಹಾಬ್ ಸಹದಿ ಇದ್ದರು.

Continue Reading

Kodagu

ಕಕ್ಕಬ್ಬೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ 23.09ಲಕ್ಷ ನಿವ್ವಳ ಲಾಭ: ಸೆ. 20ಕ್ಕೆ ಮಹಾಸಭೆ

Published

on

ವರದಿ: ಝಕರಿಯ ನಾಪೋಕ್ಲು

ನಾಪೋಕ್ಲು : ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ (ನಂ 2779) ಸಹಕಾರ ಸಂಘವು 2024 -25 ನೇ ಸಾಲಿನಲ್ಲಿ 1186 ಜನ ಸದಸ್ಯರನ್ನು ಹೊಂದಿದ್ದು ಸುಮಾರು 1 ಕೋಟಿ 26 ಲಕ್ಷ ಪಾಲುಬಂಡವಾಳ ಹಾಗೂ ಸುಮಾರು 19 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷ ಕಲ್ಯಾಟಂಡ ಎ.ತಮ್ಮಯ್ಯ ತಿಳಿಸಿದ್ದಾರೆ.

ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸಂಘದಲ್ಲಿ ಒಟ್ಟು 11 ಕೋಟಿಯಷ್ಟು ಕೆಸಿಸಿ ಸಾಲ, ಸ್ವಸಹಾಯ ಗುಂಪು ಸಾಲ, ಜಾಮೀನು ಸಾಲ, ಗೊಬ್ಬರ ಸಾಲ, ನಿರಖು ಠೇವಣಿ ಸಾಲ ನೀಡಿದ್ದೇವೆ. 2 ಕೋಟಿ ಮೊಬಲಗನ್ನು ಕೆಡಿಸಿಸಿ ಬ್ಯಾಂಕಿನಲ್ಲಿ ಪಾಲುಬಂಡವಾಳ ಕ್ಷೇಮನಿಧಿ ಹಾಗೂ ನಿರಖು ಠೇವಣಿಯಾಗಿ ಧನವಿನಿಯೋಗ ಮಾಡಲಾಗಿದೆ ಎಂದರು.

ಸಂಘವು ವ್ಯಾಪಾರ ವಹಿವಾಟು, ಸಾಲ ವಿತರಣೆ, ಸಾಲ ವಸೂಲಾತಿಯಿಂದ ಸುಮಾರು 23.09ಲಕ್ಷ ನಿವ್ವಳ ಲಾಭವನ್ನು ಹೊಂದಿದೆ. ಸದರಿ ಲಾಭವನ್ನು ಎಲ್ಲಾ ನಿಧಿಗಳಿಗೆ ಹಂಚಿ ಶೇಕಡಾ 8ರಷ್ಟು ಡಿವಿಡೆಂಟ್ ವಿತರಣೆಗಾಗಿ ಇಟ್ಟಿದ್ದೇವೆ. ಸಂಘದಲ್ಲಿ ಈಗಾಗಲೇ ಕೆಡಿಸಿಸಿ ಬ್ಯಾಂಕಿನ ನೂತನ ಶಾಖೆಯನ್ನು ಸಂಘದ ಕಟ್ಟಡದಲ್ಲಿ ತೆರೆಯುವುದರಿಂದ ಅದರ ಕಾಮಗಾರಿ ಪ್ರಗತಿಯಲ್ಲಿದ್ದು ಸಂಘದ ಮಹಾಸಭೆಯು ಸೆ.20 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕಲ್ಯಾಟಂಡ ತಮ್ಮಯ್ಯ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಎ.ಎಸ್. ಅಯ್ಯಪ್ಪ, ನಿರ್ದೇಶಕರಾದ ಬಿ. ಎಂ. ಬೆಳ್ಯಪ್ಪ, ಕೆ.ಎಂ. ಬೋಪಣ್ಣ,ಎನ್.ಸಿ. ಪೂವಯ್ಯ, ಎನ್. ಬಿ. ಸುನಿತಾ,ಎ. ಎನ್. ಲಕ್ಷ್ಮಣ,ಪಿ. ಯು. ಕರುಂಬಯ್ಯ,ಕೆ. ಬಿ.ಅಚ್ಚಯ್ಯ, ಕೆಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರಾದ ನವೀನ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಹಾಜರಿದ್ದರು.

Continue Reading

Kodagu

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

Published

on

ಕುಶಾಲನಗರ : ನಗರದ ಹಾರಂಗಿಯಲ್ಲಿರುವ ಕಾವೇರಿ ನೀರಾವರಿ ನಿಗಮದ ಎಸ್‌ಡಿಎ ಆರ್ ಕೃಷ್ಣ ಎಂಬ ಅಧಿಕಾರಿ ಗುತ್ತಿಗೆದಾರ ಪ್ರಸನ್ನ ಅವರಿಂದ 20,000 ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

30,000 ರೂ. ಬೇಡಿಕೆಯಿಟ್ಟು ಬಳಿಕ 20,000 ರೂ. ಲಂಚ ಪಡೆಯುವ ವೇಳೆ ಕೊಡಗು ಲೋಕಾಯುಕ್ತ ಡಿವೈಎಸ್ಪಿ ದಿನಕರಶೆಟ್ಟಿ ನೇತೃತ್ವದ ತಂಡ ಅಧಿಕಾರಿ ಕೃಷ್ಣನನ್ನು ದಾಳಿಮಾಡಿ ಹಣ ಸಹಿತ ಬಂಧಿಸಿದ್ದಾರೆ.

Continue Reading

Trending

error: Content is protected !!