Connect with us

National

ಟಿ-20 ಏಷ್ಯಾಕಪ್‌| ಭಾರತ-ಪಾಕ್‌ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ

Published

on

ನವದೆಹಲಿ: ಸೆ.14ರಂದು ಭಾರತ ಹಾಗೂ ಪಾಕಿಸ್ತಾನ  ನಡುವೆ  ನಡೆಯಲಿರುವ ಟಿ-20 ಏಷ್ಯಾಕಪ್‌ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ತಿರಸ್ಕರಿಸಿದೆ.

2025ರ ಟಿ20 ಏಷ್ಯಾಕಪ್‌  ವೇಳಾಪಟ್ಟಿ ಪ್ರಕಟವಾದಾಗಿನಿಂದಲೂ ಭಾರತ – ಪಾಕ್‌ ನಡುವಿನ ಪಂದ್ಯಕ್ಕೆ ಭಾರೀ ವಿರೋಧ ಕೇಳಿ ಬರುತ್ತಿದೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ಹೀಗಾಗಿ ಇಂಡೋ-ಪಾಕ್‌ ಪಂದ್ಯ ನಿಲ್ಲಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಅದೇ ರೀತಿ ಭಾರತ-ಪಾಕಿಸ್ತಾನ ನಡುವಿನ ಏಷ್ಯಾಕಪ್‌ ಪಂದ್ಯವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆದ್ರೆ ಅರ್ಜಿಯನ್ನ ವಿಚಾರಣೆಗೆ ಪರಿಗಣಿಸೋದಕ್ಕೂ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಈ ಅರ್ಜಿ ವಿಚಾರಣೆಯನ್ನು ಇಂದು ನಡೆಸಿದ  ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠವು ಅರ್ಜಿ ವಿಚಾರ ಕೇಳೋದಕ್ಕೂ ನಿರಾಕರಿಸಿದ್ದು, ಇದು‌ ಕೇವಲ ಒಂದು ಪಂದ್ಯ ಅಷ್ಟೇ ಎಂದು ಹೇಳಿದೆ.
ಊರ್ವಶಿ ಜೈನ್‌ ನೇತೃತ್ವದಲ್ಲಿ ನಾಲ್ವರು ಕಾನೂನು ವಿದ್ಯಾರ್ಥಿಗಳ ಪರವಾಗಿ ಸಂವಿಧಾನದ 32ನೇ ವಿಧಿ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿತ್ತು. ಸೆ.14ರಂದು ದುಬೈನಲ್ಲಿ ಏಷ್ಯಾಕಪ್‌ ಭಾಗವಾಗಿ ನಡೆಯಲಿರುವ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್‌ ಪಂದ್ಯವನ್ನ ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ತುರ್ತು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಈ ವೇಳೆ ನ್ಯಾ. ಮಹೇಶ್ವರಿ ತುರ್ತು ಏನಿದೆ? ಅಂತ ಪ್ರಶ್ನಿಸಿದರಲ್ಲದೇ ಅದು ಒಂದು ಅಷ್ಟೇ.. ಭಾನುವಾರ ಪಂದ್ಯ ಇದೆ, ಏನು ಮಾಡೋಕಾಗುತ್ತೆ? ಎಂದು ತಿಳಿಸಿದ್ದಾರೆ.

ಅರ್ಜಿದಾರರ ವಾದ ಏನು?

ಪಹಲ್ಗಾಮ್‌ ದಾಳಿ ಹಾಗೂ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಪಾಕಿಸ್ತಾನದೊಂದಿಗೆ ಕ್ರಿಕೆಟ್‌ ಪಂದ್ಯವನ್ನ ಆಯೋಜಿಸುವುದು ರಾಷ್ಟ್ರೀಯ ಘನತೆ ಮತ್ತು ಸಾರ್ವಜನಿಕ ಭಾವನೆಗೆ ತಪ್ಪು ಸಂದೇಶ ನೀಡುತ್ತದೆ. ಭಯೋತ್ಪಾದನೆಗೆ ಆಶ್ರಯ ನೀಡುವ ರಾಷ್ಟ್ರಗಳೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಸೈನಿಕರ ನೈತಿಕತೆಯನ್ನ ಹಾಳು ಮಾಡಿದಂತಾಗುತ್ತದೆ. ಕ್ರಿಕೆಟ್‌ ರಾಷ್ಟ್ರದ ಹಿತಾಸಕ್ತಿ, ನಾಗರಿಕರ ಜೀವನ ಹಾಗೂ ಸೈನಿಕರ ತ್ಯಾಗಕ್ಕಿಂತ ಹೆಚ್ಚಿನದ್ದಲ್ಲ ಎಂದು ಅರ್ಜಿದಾರರು ವಾದಿಸಿದರು. ಆದಾಗ್ಯೂ ಕೋರ್ಟ್‌ ತುರ್ತು ವಿಚಾರಣೆಗೆ ಅರ್ಜಿಯನ್ನು ನಿರಾಕರಿಸಿತು.

2008ರ ಮುಂಬೈ ದಾಳಿ ಬಳಿಕ ಭಾರತ ಮತ್ತು ಪಾಕ್‌ ನಡುವಿನ ಸಂಬಂಧ ಹದಗೆಟ್ಟಿತು. ಪಹಲ್ಗಾಮ್‌ ದಾಳಿ ನಂತರ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು.

National

ಭಾರತ, ಸೌರಶಕ್ತಿಗೆ 3ನೇ ಅತಿದೊಡ್ಡ ಕೊಡುಗೆದಾರ ರಾಷ್ಟ್ರ : ಪ್ರಹ್ಲಾದ್‌ ಜೋಶಿ

Published

on

ನವದೆಹಲಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಜಾಗತಿಕವಾಗಿ ಭಾರತ ಪ್ರಮುಖ ಪಾತ್ರ ವಹಿಸಿದ್ದು, 2025-26ನೇ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು 31.25 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸೇರ್ಪಡೆಯಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ನವದೆಹಲಿಯಲ್ಲಿ ಇಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಒಡಿಶಾದ ಪುರಿಯಲ್ಲಿ ನಡೆದ ಗ್ಲೋಬಲ್ ಎನರ್ಜಿ ಲೀಡರ್ಸ್ ಶೃಂಗಸಭೆ ಉದ್ದೇಶಿಸಿ ಮಾತನಾಡಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ 24.28 GW ಸೌರಶಕ್ತಿ ಸೇರಿದಂತೆ 31.25 GW ಪಳೆಯುಳಿಕೆಯೇತರ ಸಾಮರ್ಥ್ಯವನ್ನು ದಾಖಲಿಸಿದೆ ಎಂದರು.
2022 ರಲ್ಲಿ 1 TW ನವೀಕರಿಸಬಹುದಾದ ಇಂಧನ ಸಾಮರ್ಥ್ಯಕ್ಕೆ 70 ವರ್ಷಗಳನ್ನು ತೆಗೆದುಕೊಂಡಿದ್ದರೆ, ಎರಡೇ ವರ್ಷದಲ್ಲಿ ಅಂದರೆ 2024ರ ವೇಳೆಗೆ 2 TW ಅನ್ನು ಸಾಧಿಸಲಾಗಿದೆ. ಜಾಗತಿಕವಾಗಿ ಈ ಸ್ಫೋಟಕ ಏರಿಕೆಗೆ ಭಾರತ ಪ್ರಮುಖ ಚಾಲಕವಾಗಿದೆ ಎಂದು ಹೇಳಿದರು.

ಕಳೆದ 11 ವರ್ಷಗಳಲ್ಲಿ ದೇಶದ ಸೌರ ಸಾಮರ್ಥ್ಯ ಕೇವಲ 2.8 GW ಇತ್ತು. ಇದೀಗ ಸುಮಾರು 130 GW ಗೆ ಬೆಳೆದಿದೆ. 2022 ಮತ್ತು 2024ರ ನಡುವೆ, ಭಾರತ ಜಾಗತಿಕ ಸೌರ ಸೇರ್ಪಡೆಗಳಿಗೆ 46 GW ಕೊಡುಗೆ ನೀಡಿದ್ದು, ಮೂರನೇ ಅತಿದೊಡ್ಡ ಕೊಡುಗೆದಾರ ರಾಷ್ಟ್ರವಾಗಿದೆ ಎಂದು ಹೇಳಿದರು.

ಭಾರತ ವಿಶ್ವದ 5ನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದ್ದಲ್ಲದೆ, ಕಲ್ಲಿದ್ದಲಿನ ಎರಡನೇ ಅತಿದೊಡ್ಡ ಬಳಕೆದಾರ ರಾಷ್ಟ್ರವಾಗಿದೆ. ಹೇರಳ ಕಲ್ಲಿದ್ದಲು ಇದ್ದರೂ ನವೀಕರಿಸಬಹುದಾದ ಇಂಧನ ಪರಿವರ್ತನೆ ವೇಗ ಪಡೆಯುತ್ತಿದೆ. ಕಲ್ಲಿದ್ದಲು ಮತ್ತು ನವೀಕರಿಸಬಹುದಾದ ಶಕ್ತಿಯೊಂದಿಗೆ ಸ್ಥಿರವಾಗಿ ಸಮತೋಲನಗೊಳಿಸುತ್ತಿದೆ ಎಂದರು.

2025ರ ಜಾಗತಿಕ ಇಂಧನ ನಾಯಕರ ಶೃಂಗಸಭೆ: ಪುರಿಯಲ್ಲಿ ನಡೆಯುವ ಜಾಗತಿಕ ಇಂಧನ ನಾಯಕರ ಶೃಂಗಸಭೆ (GELS) ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ನೀತಿ ನಿರೂಪಕರು, ನಾವಿನ್ಯಕಾರರು ಮತ್ತು ಉದ್ಯಮ ನಾಯಕರನ್ನು ಒಟ್ಟುಗೂಡಿಸುವಲ್ಲಿ ಮಹತ್ತರ ಹೆಜ್ಜೆಯಾಗಿದೆ ಎದು ತಿಳಿಸಿದರು.

ಒಡಿಶಾ ಬಲವಾದ ಶುದ್ಧ ಇಂಧನ ಅಳವಡಿಕೆಯನ್ನು ಪ್ರದರ್ಶಿಸುತ್ತಿದೆ. 3.1 GW ಗಿಂತ ಹೆಚ್ಚು ನವೀಕರಿಸಬಹುದಾದ ಸಾಮರ್ಥ್ಯದೊಂದಿಗೆ ಈಗ ರಾಜ್ಯದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.34ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ ಎಂದು  ಸಂತಸ ವ್ಯಕ್ತಪಡಿಸಿದರು.

ಪಿಎಂ ಸೂರ್ಯ ಘರ್ ಯೋಜನೆಯಡಿ 1.6 ಲಕ್ಷ ಮನೆಗಳು ಮೇಲ್ಛಾವಣಿ ಸೌರಶಕ್ತಿಗಾಗಿ ಅರ್ಜಿ ಸಲ್ಲಿಸಿದ್ದು, 23,000ಕ್ಕೂ ಹೆಚ್ಚು ಸ್ಥಾಪನೆಗಳು ಪೂರ್ಣಗೊಂಡಿವೆ ಮತ್ತು 19,200ಕ್ಕೂ ಹೆಚ್ಚು ಕುಟುಂಬಗಳು 147 ರೂ. ಕೋಟಿಗಿಂತ ಹೆಚ್ಚಿನ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಡೆದಿವೆ ಎಂದು ಹೇಳಿದರು.

ಹೊಸ ಯುಟಿಲಿಟಿ-ಲೆಡ್ ಅಗ್ರಿಗೇಷನ್ (ಯುಎಲ್‌ಎ) ಮಾದರಿಯಡಿ ಒಡಿಶಾದಲ್ಲಿ ಮುಂದಿನ ದಿನಗಳಲ್ಲಿ 1.5 ಲಕ್ಷ ರೂಫ್‌ಟಾಪ್ ಸೌರ ಘಟಕಗಳು ಸ್ಥಾಪನೆಯಾಗಲಿದ್ದು, 7-8 ಲಕ್ಷ ನಾಗರಿಕರನ್ನು ಸಬಲೀಕರಣಗೊಳಿಸುತ್ತದೆ ಎಂದು ತಿಳಿಸಿದರು.

Continue Reading

National

ಲೋಕಸಭೆಯಲ್ಲಿ Right to Disconnect Bill ಮಂಡಿಸಿದ ಸಂಸದೆ ಸುಪ್ರಿಯಾ ಸುಳೆ

Published

on

ನವದೆಹಲಿ: ಆಫೀಸ್‌ ಕೆಲಸದ ನಂತರವೂ ಉದ್ಯೋಗಿಗಳು ಕರೆ, ಇಮೇಲ್‌ಗಳಿಗೆ ಹಾಜರಾಗುವುದನ್ನು ತಡೆಯಲು ಅವಕಾಶ ನೀಡುವ ರೈಟ್‌ ಟು ಡಿಸ್‌ಕನೆಕ್ಟ್‌ ಬಿಲ್‌ ಲೋಕಸಭೆಯಲ್ಲಿ ಮಂಡನೆಯಾಗಿದೆ.

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಈ ಖಾಸಗಿ ಮಸೂದೆಯನ್ನು ಮಂಡಿಸಿದ್ದಾರೆ. ಅಧಿಕೃತ ಕೆಲಸದ ಅವಧಿ ಮೀರಿ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು ಮತ್ತು ಇಮೇಲ್‌ಗಳಿಂದ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಪ್ರತಿ ಉದ್ಯೋಗಿಗೆ ಈ ಮಸೂದೆ ನೀಡುತ್ತದೆ. ಇದರೊಂದಿಗೆ ನೌಕರರ ಕಲ್ಯಾಣ ಪ್ರಾಧಿಕಾರವನ್ನು ಸ್ಥಾಪಿಸಬೇಕೆಂಬ ಅಂಶ ಈ ಮಸೂದೆಯಲ್ಲಿದೆ.

ಸರ್ಕಾರ ಈ ಮಸೂದೆಯನ್ನು ಅಂಗೀಕರಿಸುವ ಸಾಧ್ಯತೆ ಬಹಳ ಕಡಿಮೆಯಿದೆ. ಹೆಚ್ಚಿನ ಸಂದರ್ಭಗಳಲ್ಲಿ ಸರ್ಕಾರವು ಪ್ರಸ್ತಾವಿತ ಮಸೂದೆಗೆ ಪ್ರತಿಕ್ರಿಯಿಸಿದ ನಂತರ ಖಾಸಗಿ ಸದಸ್ಯರ ಮಸೂದೆಗಳನ್ನು ಹಿಂಪಡೆಯಲಾಗುತ್ತದೆ.

ಏನಿದು ಖಾಸಗಿ ಮಸೂದೆ?

ಸಚಿವರಲ್ಲದ ಸಂಸತ್ ಸದಸ್ಯರು ಮಂಡಿಸುವ ಮಸೂದೆ ಇದಾಗಿದ್ದನ್ನು ಇದನ್ನು ಸರ್ಕಾರೇತರ ಮಸೂದೆ ಎಂದು ಕರೆಯುತ್ತಾರೆ. ಇದು ಸಾರ್ವಜನಿಕ ಮಸೂದೆಯ ವಿರುದ್ಧವಾಗಿದ್ದು, ಇದು ಒಬ್ಬ ವ್ಯಕ್ತಿ, ಗುಂಪು ಅಥವಾ ಪ್ರದೇಶದ ಮೇಲೆ ಪರಿಣಾಮ ಬೀರುವ ಕಾನೂನಿನ ಪ್ರಸ್ತಾವನೆಯಾಗಿರುತ್ತದೆ. ಸಂಸತ್ತಿನ ಖಾಸಗಿ ಸದಸ್ಯರು ಮಂಡಿಸುವ ಈ ಮಸೂದೆಯನ್ನು ಅಂಗೀಕರಿಸುವ ಪ್ರಕ್ರಿಯೆಯಲ್ಲಿ ಸರ್ಕಾರಿ ಮಸೂದೆಯಂತೆಯೇ ಅಂಗೀಕರಿಸಬೇಕಾಗುತ್ತದೆ.

Continue Reading

National

 ಪಲಾಶ್ ಮುಚ್ಚಲ್‌ರೊಂದಿಗೆ ಮದುವೆ ಮುಂದೂಡಿದ ನಂತರ ಮೊದಲ ಪೋಸ್ಟ್‌ ಹಂಚಿಕೆಕೊಂಡ ಸ್ಮೃತಿ ಮಂದಾನ

Published

on

ನವದೆಹಲಿ: ಪಲಾಶ್ ಮುಚ್ಚಲ್ ಅವರೊಂದಿಗೆ ಮದುವೆ ಮುಂದೂಡಿದ ಬಳಿಕ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಸ್ಮೃತಿ ಮಂದಾನ  ಅವರು ಮೊದಲ ಪೋಸ್ಟ್‌ ಹಂಚಿಕೊಂಡಿದ್ದು, ಕೈಯಲ್ಲಿ ಎಂಗೇಜ್‌ಮೆಂಟ್‌ ರಿಂಗ್‌ ಕಾಣಿಸುತ್ತಿಲ್ಲ ಯಾಕೆ ಎಂದು ಫ್ಯಾನ್ಸ್‌ ಪ್ರಶ್ನಿಸಿದ್ದಾರೆ.

ಮಂದಾನ ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಪ್ರಮುಖ ಟೂತ್‌ಪೇಸ್ಟ್‌ ಬ್ರ್ಯಾಂಡ್‌ವೊಂದರ ಜಾಹೀರಾತು ಪ್ರಚಾರವಾಗಿದೆ. ಆದರೆ, ಈ ವೀಡಿಯೋದಲ್ಲಿ ಮಂಧಾನ ಕೈ ಬೆರಳಿನಲ್ಲಿ ಉಂಗುರ ಇಲ್ಲದಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಜಾಹೀರಾತನ್ನು ನಿಶ್ಚಿತಾರ್ಥ ನಡೆಯುವ ಮೊದಲು ಚಿತ್ರೀಕರಿಸಲಾಗಿದೆಯೇ ಎಂಬುದು ತಿಳಿದಿಲ್ಲ. ಆದಾಗ್ಯೂ, ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

12 ದಿನಗಳ ಹಿಂದೆ ಪಲಾಶ್‌ ಮುಚ್ಚಲ್‌ ಜೊತೆಗಿನ ಮದುವೆ ಮುಂದೂಡಲಾಯಿತು. ಏತನ್ಮಧ್ಯೆ, ಸ್ಮೃತಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ತೆಗೆದುಹಾಕಿದ್ದರು. ಇದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಯಿತು. ಎರಡೂ ಕುಟುಂಬಗಳ ಸದಸ್ಯರು ಆರೋಗ್ಯ ತುರ್ತು ಪರಿಸ್ಥಿತಿಗಳಿಂದಾಗಿ ವಿವಾಹ ಮುಂದೂಡಿಕೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನ.23 ರಂದು ಸಾಂಗ್ಲಿಯಲ್ಲಿ ಸ್ಮೃತಿ ಹಾಗೂ ಪಲಾಶ್‌ ಅವರ ಮದುವೆ ನಿಶ್ಚಯವಾಗಿತ್ತು. ಮದುವೆ ದಿನ ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೀಗಾಗಿ, ಮದುವೆ ಮುಂದೂಡಲಾಯಿತು. ಅದಾದ ಕೆಲ ದಿನಗಳ ಬಳಿಕ ಪಲಾಶ್‌ ಸಹ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.

ಸ್ಮೃತಿ ಮಂದಾನ ಮದುವೆ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಇದುವರೆಗೂ ಮಂದಾನ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

Continue Reading

Trending

error: Content is protected !!