Mandya
ಸಮೀಕ್ಷೆಯಲ್ಲಿ ಬಣಜಿಗ (ಬಲಿಜ) ಸಮುದಾಯದವರು ಜಾತಿ ಕಾಲಂನಲ್ಲಿ ಬಲಿಜ ಎಂದು ನಮೂದಿಸಿ : ಕೆ.ಎನ್.ಮೋಹನ್‌ಕುಮಾರ್

ಮಂಡ್ಯ: ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆಯಲ್ಲಿ ಬಣಜಿಗ (ಬಲಿಜ) ಸಮುದಾಯದವರು ಜಾತಿ ಕಾಲಂನಲ್ಲಿ ಬಲಿಜ ಎಂದು ನಮೂದಿಸಬೇಕು ಎಂದು ಸರ್ವ ಬಣಜಿಗ (ಬಲಿಜ)ರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಮೋಹನ್‌ಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸೆ.22ರಿಂದ ಆರಂಭವಾಗಿರುವ ಸಮೀಕ್ಷೆಯ ಕಾಲಂ ನಂ 09ರಲ್ಲಿ ಕಡ್ಡಾಯವಾಗಿ ಕ್ರಮಸಂಖ್ಯೆ 0120 ಜೊತೆಗೆ ಬಲಿಜ ಎಂದು ನಮೂದಿಸಿ ಸಮುದಾಯದ ಒಳಿತಿಗೆ ಸಹಕರಿಸಬೇಕೆಂದು ಕೋರಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ನಾಗಾನಂದ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಶಾಂತ್, ಕಾರ್ಯದರ್ಶಿ ಎಚ್.ಪಿ.ಮೋಹನ್, ಖಜಾಂಚಿ ಎಂ.ವಿ.ಸ್ವರ್ಣಕುಮಾರ್ ಇದ್ದರು.
Mandya
ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಶಿವಾರ್ಚಕ, ಉಪಜಾತಿ ಕಾಲಂನಲ್ಲಿ ಯಾವುದು ಇಲ್ಲ ಎಂದು ನಮೂದಿಸಿ : ಎಂ.ಮಲ್ಲಣ್ಣ

ಮಂಡ್ಯ: ರಾಜ್ಯಾದ್ಯಂತ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ರಾಜ್ಯದ ಶಿವಾರ್ಚಕ ಬಂಧುಗಳು ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಶಿವಾರ್ಚಕ, ಉಪಜಾತಿ ಕಾಲಂನಲ್ಲಿ ಯಾವುದು ಇಲ್ಲ ಎಂದು ನಮೂದಿಸಬೇಕೆಂದು ಕರ್ನಾಟಕ ರಾಜ್ಯ ಶಿವಾಚಾರ್ಯ ಸಂಘದ ಅಧ್ಯಕ್ಷ ಎಂ.ಮಲ್ಲಣ್ಣ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22ರಿಂದ ಸಮೀಕ್ಷೆ ಆರಂಭಗೊಂಡಿದ್ದು, ಶಿವಾಚಾರ್ಯ ಸಮುದಾಯದಲ್ಲಿ ಯಾವುದೇ ಉಪಜಾತಿ ಇರುವುದಿಲ್ಲ ಆದ್ದರಿಂದ ಜಾತಿ ಕಾಲಂನಲ್ಲಿ ಕ್ರಮಸಂಖ್ಯೆ ಎ-1320 ಶಿವಾರ್ಚಕ ಎಂದು ಬರೆಸಬೇಕೆಂದು ಕೋರಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಟಿ.ಎನ್.ನಾಗೇಂದ್ರ, ಬೋಳಪ್ಪ, ಪಟೇಲ್, ಕುಮಾರ, ನವೀನ್ ಇದ್ದರು.
Mandya
ಜಾತಿಗಣತಿಯಲ್ಲಿ ಸವಿತ ಸಮಾಜ ಎಂದು ನಮೂದಿಸಿ : ಬಿ.ಕೆಂಪರಾಜು

ಮಂಡ್ಯ: ಕರ್ನಾಟಕ ಸರಕಾರ ನಡೆಸುತ್ತಿರುವ ಜಾತಿಗಣತಿಯಲ್ಲಿ ಸವಿತ ಸಮಾಜ ಎಂದು ನಮೂದಿಸುವಂತೆ ಮಂಡ್ಯ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಬಿ.ಕೆಂಪರಾಜು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22ರಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ಸವಿತ ಸಮಾಜದ ಸಮುದಾಯದವರು ಜಾತಿ ಕಾಲಂನಲ್ಲಿ ಕ್ರಮಸಂಖ್ಯೆ ಎ-1282 ಸವಿತ ಸಮಾಜ ಮತ್ತು ಉಪಜಾತಿಯಲ್ಲಿ ತಮ್ಮ ತಮ್ಮ ಉಪಜಾತಿಯ್ನನು ನಮೂದಿಸಬೇಕು ಕೋರಿದರು.
ಪಾಂಡವಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಶಶಿಧರ್ ಮಾತನಾಡಿ, ಮುಖಂಡರು ಸಮುದಾಯದ ಜನರಲ್ಲಿ ಅರಿವು ಮೂಡಿಸಿ, ಸಮೀಕ್ಷೆಯ ವೇಳೆ ಖುದ್ದು ಹಾಜರಾಗಿ ಸರಿಯಾಗಿ ನಮೂದಿಸುವಂತೆ ಸಹಕರಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷರಾದ ರಾಮಲಿಂಗಯ್ಯ, ಜಗದೀಶ್, ಮಂಜುನಾಥ್, ಸದಸ್ಯರಾದ ಬೋರಪ್ಪ, ಬಾಲು ಇದ್ದರು.
Mandya
ಹಲ್ಲೆ ಮಾಡಿದ ಮಿಮ್ಸ್ ನೌಕರನ ವಿರುದ್ದ ರೌಡಿ ಶೀಟರ್ ತೆರೆಯಲು ಆಗ್ರಹ : ಎಚ್.ಎಸ್.ಸಾಗರ್

ಮಂಡ್ಯ: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲು ಮಂಡ್ಯ ಮಿಮ್ಸ್ ನ ಮಾಹಿತಿ ಕಛೇರಿಗೆ ತೆರಳಿದ ಸಂದರ್ಭದಲ್ಲಿ ಏಕಾಏಕಿ ಹಲ್ಲೆ ಮಾಡಿದ ಮಿಮ್ಸ್ ನೌಕರ ಬಿ.ಕೆ.ಚಂದ್ರಶೇಖರ್ ವಿರುದ್ಧ ರೌಡಿ ಶೀಟರ್ ತೆರೆಯಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಸ್.ಸಾಗರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.19ರಂದು ಮಿಮ್ಸ್ ನ ಮಾಹಿತಿ ಕೇಂದ್ರದಲ್ಲಿ ಬಲರಾಮ್ ಅವರ ಬಳಿ ಸಾರ್ವಜನಿಕ ಮಾಹಿತಿ ನೀಡುವಂತೆ ಮನವಿ ಮಾಡಿದ್ದು, ವಿಷಯ ತಿಳಿದ ಬಿ.ಕೆ.ಚಂದ್ರಶೇಖರ್ ಅವಾಚ್ಯ ಶಬ್ದಗಳಿಂದ ನಿಂಧಿಸಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಅದು ಮಾತ್ರವಲ್ಲದೇ ನನ್ನ ಮೊಬೈಲ್ ಜಖಂ ಮಾಡಿದ್ದು, ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಆತಂಕಕ್ಕೊಳಗಾಗಿ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡು ತೆರಳಿದಾಗ, ಅಲ್ಲಿನ ಪೊಲೀಸರು ಲಿಖಿತ ದೂರು ಕೊಡು ತಿಳಿಸಿದ್ದು, ಲಿಖಿತ ದೂರು ಸ್ವೀಕರಿಸದ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ ನಂತರ ಮಾಡಿದ ತಪ್ಪಿಗಿಂತಲೂ ಕಡಿಮೆ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ದೂರಿದರು.
2007ರಲ್ಲಿ ಮಿಮ್ಸ್ ನೇಮಕವಾದ ಬಿ.ಕೆ.ಚಂದ್ರಶೇಖರ್ ದಾಖಲಾತಿಗಳು ಅಕ್ರಮವಾಗಿದ್ದು, ಅವರು ಮಿಮ್ಸ್ ನಲ್ಲಿ ಹುದ್ದೆ ಪಡೆದ ವಿಚಾರ ಹಲವು ಅನುಮಾನಗಳನ್ನು ಮೂಡಿಸಿದೆ. ಈ ಸಂಬಂಧ ಲೋಕಾಯುಕ್ತರಲ್ಲಿ ದೂರು ನೀಡಿದ್ದೇನೆ. ಅಲ್ಲಿಯೂ ನೀನು ಏನು ಮಾಡಲಾಗುವುದಿಲ್ಲ ಎಂದು ಬಿ.ಕೆ.ಚಂದ್ರಶೇಖರ್ ಸವಾಲು ಹಾಕಿದ್ದಾರೆ ಎಂದು ಹೇಳಿದರು.
ಕೂಡಲೇ ನಖಲಿ ದಾಖಲಾತಿ ನೀಡಿ ಹುದ್ದೆ ಪಡೆದ ಅವರ ವಿರುದ್ಧ ಉನ್ನತ ತನಿಖೆಯಾಗಬೇಕು, ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಬೇಕು. ಈ ಹಿಂದೆಯೂ ಹಲವರ ಮೇಲೆ ಹಲ್ಲೆ ಮಾಡಿರುವ ಬಿ.ಕೆ.ಚಂದ್ರಶೇಖರ್ ವಿರುದ್ಧ ರೌಡಿ ಶೀಟರ್ ತೆರೆಯಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರೈತ ಹೋರಾಟಗಾರ ಅಣ್ಣಯ್ಯ, ಸಾಮಾಜಿಕ ಹೋರಾಟಗಾರ ಶಿವರಾಮು ಇದ್ದರು.
-
Mysore4 hours ago
ವಾಸುದೇವಾಚಾರ್ಯ ಸ್ಮರಣಾರ್ಥ ಸರ್ಕಾರಿ ಕಾರ್ಯಕ್ರಮ: ಶಾಸಕ ಶ್ರೀವತ್ಸ ಮನವಿಗೆ ಸಿಎಂ ಸ್ಪಂದನೆ
-
Chamarajanagar6 hours ago
ಚಾರ್ಮಾಡಿ ಘಾಟಿಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ
-
Chikmagalur3 hours ago
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು : ಸಚಿವ ಸಂತೋಷ್ ಲಾಡ್
-
Hassan22 hours ago
ಶ್ರೀ ತಿರುಮಲ ರಂಗನಾಥ ಸ್ವಾಮಿ ದೇವಾಲಯದ ನವರಾತ್ರಿ ಉತ್ಸವಕ್ಕೆ 2 ವರ್ಷಗಳ ಬಳಿಕ ಚಾಲನೆ: ವಿನೋದ್ ಚೌಕಿದಾರ್
-
Hassan3 hours ago
ಹಾಸನದ ೧೫ ಕರ್ನಾಟಕ ಬೆಟಾಲಿಯನ್ ನಲ್ಲಿ ಎನ್ಸಿಸಿ ಕಾರ್ಯಗಾರ
-
Mysore19 hours ago
ವಸ್ತು ಪ್ರದರ್ಶನಕ್ಕೆ ಚಾಲನೆ: ಮೊದಲ ದಿನವೇ ವಸ್ತು ಪ್ರದರ್ಶನ ಭರ್ತಿ
-
Mysore3 hours ago
ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಲು ಮನವಿ, ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು
-
Hassan21 hours ago
ವಿಶ್ವಮಾನವ ತತ್ತ್ವ ಸಾರುವ ಕುವೆಂಪು ಎಲ್ಲರಿಗೂ ಮಾದರಿ : ಹಿರಿಯ ಸಾಹಿತಿ ಪ್ರೊ. ಸೈಯದ್ ಶಹಬುದ್ದೀನ್