Connect with us

Politics

ದ್ವೇಷ ಬಿತ್ತುವ ಹೇಳಿಕೆ: ಛಲವಾದಿ ನಾರಾಯಣಸ್ವಾಮಿ, ಶ್ರೀವತ್ಸ ವಿರುದ್ಧ FIR ದಾಖಲು

Published

on

ಬೆಂಗಳೂರು: ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮತ್ತು ಮೈಸೂರಿನ ಕೆ.ಆರ್‌.ಕ್ಷೇತ್ರದ ಶಾಸಕ ಶ್ರೀವತ್ಸ ಅವರು ಕುರುಬರ ಎಸ್ಟಿ ಮೀಸಲಾತಿಯ ಬಗ್ಗೆ ಮಾತನಾಡಿದ್ದ ಹಿನ್ನೆಲೆ ಎಫ್‌ಐಆರ್‌ ದಾಖಲಾಗಿದೆ.

 

ಇವರಿಬ್ಬರ ವಿರುದ್ಧ ಕುರುಬ ಸಮುದಾಯದ ಮುಖಂಡ ಸಿದ್ದಣ್ಣ ತೇಜಿ, ಡಿಜಿ ಮತ್ತು ಐಜಿಪಿಗೆ ದೂರು‌ ನೀಡಿದ್ದರು. ಹಾಗಾಗಿ ಬೆಂಗಳೂರಿನ  ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಪರಿಶಿಷ್ಟ ಪಂಗಡ ಮತ್ತು ವಾಲ್ಮೀಕಿ ಸಮುದಾಯದವರು ಕುರುಬ ಸಮುದಾಯದ ಬಗ್ಗೆ ದಂಗೆ ಏಳಬೇಕೆಂದು ಎಂಎಲ್‌ಸಿ ಹಾಗೂ ಶಾಸಕರು ಹೇಳಿಕೆ ನೀಡಿದ್ದರು.

ಈ ದೂರಿನ ಅನ್ವಯ ಬಿಎನ್‌ಎಸ್‌ 353(2) (ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಹೇಳಿಕೆ) ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Politics

ಸಿಎಂ ಸಿದ್ದರಾಮಯ್ಯರವರ ಮತಾಂತರ ಹೇಳಿಕೆ: ಆರ್‌.ಅಶೋಕ್‌ ವಾಗ್ದಾಳಿ

Published

on

ಬೆಂಗಳೂರು: ಸನಾತನ ಹಿಂದೂ ಧರ್ಮವನ್ನ, ಹಿಂದೂಗಳನ್ನು ಅವಹೇಳನ ಮಾಡುವ ನಿಮ್ಮ ಎಡಪಂಥೀಯ ಕನ್ನಡಕವನ್ನು ಒಮ್ಮೆ ಪಕ್ಕಕ್ಕಿಟ್ಟು ವಸ್ತುನಿಷ್ಠವಾಗಿ ಯೋಚನೆ ಮಾಡಿ. ನಿಮ್ಮ ಅಕ್ಕಪಕ್ಕದಲ್ಲಿರುವ ಎಡಪಂಥೀಯ ಬುದ್ಧಿಜೀವಿಗಳ ತಾಳಕ್ಕೆ ಕುಣಿಯದೆ, ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಮಾತನಾಡುವುದನ್ನು ಕಲಿಯಿರಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಸಮಾನತೆಯ ವಿಚಾರದಲ್ಲಿ ಹಿಂದೂ ಧರ್ಮವನ್ನು ಗುರಿಯಾಗಿಸಿ ಮಾತನಾಡುತ್ತೀರಲ್ಲ ಸಿಎಂ ಸಿದ್ದರಾಮಯ್ಯ ಅವರೇ, ಸಮಾನತೆಯ ಬಗ್ಗೆ ಮುಸ್ಲಿಮರನ್ನು ಪ್ರಶ್ನಿಸುವ ಧೈರ್ಯ ಇದೆಯಾ? ಇಸ್ಲಾಂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ, ಇಸ್ಲಾಂ ಶಾಂತಿ ಪ್ರಿಯ ಮತವಾಗಿದ್ದರೆ, ಮುಸ್ಲಿಮರಲ್ಲಿ ಭ್ರಾತೃತ್ವದ ಭಾವನೆ ಇದ್ದಿದ್ದರೆ ಪಹಲ್ಗಾಮ್ ನಲ್ಲಿ ಉಗ್ರವಾದಿಗಳು ಪ್ರವಾಸಿಗರ ಹೆಸರು ಕೇಳಿ, ಹೆಣ್ಣು ಮಕ್ಕಳ ಹಣೆಯಲ್ಲಿ ಕುಂಕುಮ ನೋಡಿ, ಕಲ್ಮಾ ಪಠಣೆ ಮಾಡಲು ಹೇಳಿ, ಹಿಂದುಗಳನ್ನು ಮಾತ್ರ ಯಾಕೆ ಕೊಲ್ಲುತ್ತಿದ್ದರು, ಎಂದು ಕೇಳುವ ಧೈರ್ಯ ಇದೆಯಾ ? ಇಸ್ಲಾಂ ಮತದಲ್ಲಿ ಸಮಾನತೆ ಇದ್ದಿದ್ದರೆ ಮಹಿಳೆಯರಿಗೆ ಯಾಕೆ ಮಸೀದಿಗೆ ಪ್ರವೇಶವಿಲ್ಲ, ಎಂದು ಕೇಳುವ ಧೈರ್ಯ ಇದೆಯಾ? ಎಂದು ಪ್ರಶ್ನಿಸಿದರು.

ಇಸ್ಲಾಂ ಮತದಲ್ಲಿ ಸಮಾನತೆ ಇದ್ದಿದ್ದರೆ, ತ್ರಿವಳಿ ತಲಾಖ್ ನಿಷೇಧ ಮಾಡಲು ವಿರೋಧವೇಕೆ ಎಂದು ಮುಸ್ಲಿಂ ಮುಖಂಡರನ್ನು ಕೇಳುವ ಧೈರ್ಯ ಇದೆಯಾ? ಇಸ್ಲಾಂ ಮತದಲ್ಲಿ ಸಮಾನತೆ ಇದ್ದಿದ್ದರೆ, ಖುರಾನ್ ನಲ್ಲಿ ಹಿಂದೂಗಳು ಸೇರಿದಂತೆ ಮುಸ್ಲಿಮೇತರರನ್ನು ಕಾಫಿರರು ಅಂತ ಯಾಕೆ ಕರೆಯುತ್ತಾರೆ ಎಂದು ಕೇಳುವ ಧೈರ್ಯ ಇದೆಯಾ ? ಎಂದು ಕಿಡಿಕಾರಿದರು.

ಹೌದು ಹಿಂದೂ ಸಮಾಜದಲ್ಲಿ ಜಾತಿ ಪದ್ಧತಿ ಎಂಬ ಪಿಡುಗು ಇರುವುದು ವಾಸ್ತವ. ಹಿಂದೂ ಸಮಾಜದಲ್ಲಿ ಇರುವ ಲೋಪದೋಷಗಳನ್ನು ತಿದ್ದಲು, ಕಾಲಕ್ಕೆ ತಕ್ಕಂತೆ ಬದಲಾಗಲು ಅನೇಕ ಯುಗ ಪುರುಷರು ಜನ್ಮ ತಾಳಿದ್ದಾರೆ. ತನ್ನನ್ನು ತಾನು ತಿದ್ದುಕೊಳ್ಳುವ, ಪರಿವರ್ತನೆ ಆಗುವ ಶಕ್ತಿ ಹಿಂದೂ ಸಮಾಜಕ್ಕೆ ಇದೆ. ಬಸವಣ್ಣನವರಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗೆ, ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಹಿಡಿದು ಇಲ್ಲಿಯವರೆಗೆ ಅನೇಕರು ಹಿಂದೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ ಎಂದು ಹೇಳಿದ್ದಾರೆ.

ಆದರೆ ಇಸ್ಲಾಂ ಮತದಲ್ಲಿ ಬೇರೂರಿರುವ ಮೂಲಭೂತವಾದವನ್ನು, ಜಿಹಾದಿ ಮಾನಸಿಕತೆಯನ್ನು ಪ್ರಶ್ನಿಸುವ, ತಿದ್ದುವ ಯಾವ ಪರಿವರ್ತಕನೂ ಹುಟ್ಟಿಲ್ಲ, ಹುಟ್ಟಿದರೂ ಅಂತಹ ಪರಿವರ್ತನೆಯನ್ನು ಮುಸ್ಲಿಮರು ಒಪ್ಪುವುದೂ ಇಲ್ಲ. ಅದಕ್ಕೆ ಮುಸ್ಲಿಮರಿಗೆ ಔರಂಗಜೇಬ್, ಟಿಪ್ಪು ಸುಲ್ತಾನನಂತಹ ಮತಾಂಧರೇ ಸದಾ ಮಾದರಿಯಾಗುತ್ತಾರೆಯೇ ಹೊರತು ಸಂತ ಶಿಶುನಾಳ ಶರೀಫರು, ಡಾ.ಅಬ್ದುಲ್ ಕಲಾಂ ಅಂತಹವರು ಮಾದರಿ ಆಗುವುದೇ ಇಲ್ಲ. ಸನಾತನ ಹಿಂದೂ ಧರ್ಮವನ್ನ, ಹಿಂದೂಗಳನ್ನು ಅವಹೇಳನ ಮಾಡುವ ನಿಮ್ಮ ಎಡಪಂಥೀಯ ಕನ್ನಡಕವನ್ನು ಒಮ್ಮೆ ಪಕ್ಕಕ್ಕಿಟ್ಟು ವಸ್ತುನಿಷ್ಠವಾಗಿ ಯೋಚನೆ ಮಾಡಿ. ನಿಮ್ಮ ಅಕ್ಕಪಕ್ಕದಲ್ಲಿರುವ ಎಡಪಂಥೀಯ ಬುದ್ಧಿಜೀವಿಗಳ ತಾಳಕ್ಕೆ ಕುಣಿಯದೆ, ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಮಾತನಾಡುವುದನ್ನು ಕಲಿಯಿರಿ ಎಂದು ತಿಳಿಸಿದ್ದಾರೆ.

Continue Reading

Politics

ಮದ್ದೂರು ಕಲ್ಲು ತೂರಾಟ ಪ್ರಕರಣ|ಬಿಜೆಪಿ ಸತ್ಯಶೋಧನಾ ತಂಡ ರಚನೆ: ಬಿ.ವೈ.ವಿಜಯೇಂದ್ರ

Published

on

ಬೆಂಗಳೂರು: ಮದ್ದೂರು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ರಾವ್‌ ನೇತೃತ್ವದಲ್ಲಿ ಸತ್ಯಶೋಧನಾ ತಂಡ ರಚನೆ ಮಾಡಿದ್ದು, ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಬಳಿಕ ವರದಿ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮದ್ದೂರಿನಲ್ಲಿ ಪೊಲೀಸ್‌ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ತುಘಲಕ್‌ ದರ್ಬಾರ್‌ ನಡೆದಿದೆ. ನಿಜಾಮರ ಆಡಳಿತವನ್ನು ನಿನ್ನೆ ಪ್ರಕರಣ ನೆನೆಪು ಮಾಡಿದೆ ಎಂದು ವ್ಯಂಗ್ಯ ಮಾಡಿದರು.

ಸಿಎಂ ಮತ್ತು ಗೃಹ ಸಚಿವರು ತಮ್ಮ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದರೆ ರಾಕ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗುತ್ತದೆ. ಅದಕ್ಕ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಗಣೇಶ ಮೆರವಣಿಗೆಯಲ್ಲಿ ಕೇಸರಿ ಶಾಲು ಹಾಕಿ ವರ್ತಿಸಿದ ಪಿಎಸ್‌ಐ ಒಬ್ಬರನ್ನು ಅಮಾನತು ಮಾಡಿರುವ ಮಾಹಿತಿ ಇದೆ. ನಾನೇನು ಪಾಕಿಸ್ತಾನದಲ್ಲಿ ಇದ್ದೇವಾ? ಎಂದು ಪ್ರಶ್ನಿಸಿದರು.

ನಮ್ಮ ರಾಜ್ಯದಲ್ಲಿ ಇವತ್ತು ಏನಾಗುತ್ತಿದೆ? ದಿನನಿತ್ಯ ಯಾವ ರೀತಿ ಪರಿಸ್ಥಿತಿ ಹದಗೆಡುತ್ತಿದೆ? ಕಾನೂನು ಸುವ್ಯವಸ್ಥೆ ಮುರಿದುಬಿದ್ದಿದೆ. ಕಾಂಗ್ರೆಸ್ ಸರ್ಕಾರಕ್ಕೆ ಯಾಕೆ ಇಂಥ ದುರ್ಬುದ್ಧಿ ಬಂದಿದೆ? ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಏನು ಅನ್ಯಾಯ ಮಾಡಿದ್ದಾರೆ ಎಂದು ರಾಜ್ಯದ ಅಸಂಖ್ಯಾತ ಹಿಂದೂ ಕಾರ್ಯಕರ್ತರು ಸಿಎಂ ಅವರನ್ನು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಸುತ್ತ ಅಯೋಗ್ಯರನ್ನೇ ಇಟ್ಟುಕೊಂಡಂತಿದೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂಗಳ ಮೇಲೆ ಕಲ್ಲೆಸೆತ, ಹಲ್ಲೆ ನಡೆಯುತ್ತಿದೆ. ಗಣಪತಿ ಮಹೋತ್ಸವವನ್ನೂ ಹಿಂದೂಗಳು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವು ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ ಎಂದು ಟೀಕಿಸಿದರು.

Continue Reading

Politics

ಭಾರತವನ್ನು ಮುನ್ನಡೆಸುವುದಕ್ಕೆ ಪ್ರಧಾನಿ ಮೋದಿ ಅವರಿಂದ ಸಾಧ್ಯ: ಬಿ.ವೈ. ವಿಜಯೇಂದ್ರ

Published

on

ಬೆಂಗಳೂರು: ಪ್ರಧಾನಿ ಮೋದಿ ಅವರಿಂದ ಮಾತ್ರ ಭಾರತವನ್ನು ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಸಾರ್ವಜನಿಕರು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ. ವಿಜಯೇಂದ್ರ ತಿಳಿಸಿದರು.

ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಜನತೆ ಕಾಂಗ್ರೆಸ್ ಪಕ್ಷದ  ಬಗ್ಗೆ ಏಕೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಚರ್ಚಿಸಬೇಕು ಅಥವಾ ಚಿಂತನೇ ಮಾಡಬೇಕೆ ವಿನಾಃ ಇವಿಎಂ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ಮುರ್ಖತನದ ಪರಮಾವಧಿ. ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಜೀ ಅವರಿಂದ ಮಾತ್ರ ಭಾರತವನ್ನ ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಜನ ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ  ಅವರು ಇದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದೆ ಪ್ರಸ್ತುತ ಇವಿಎಂ  ಮೇಲೆ ದೂರುವುದು ಮತ್ತು ದೋಷಪೂರಿತ ಎಂದು ಕಾಂಗ್ರೆಸ್ ಹೇಳುತ್ತಿರುವುದು ಹುಚ್ಚುತನದ ಪರಮಾವಧಿ ಎಂದು ಲೇವಡಿ ಮಾಡಿದರು.

ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರಿಗೆ ಇವಿಎಂ ಮೇಲೆ ಏಕೆ ವಿಶ್ವಾಸ ಕಡಿಮೆ ಆಗಿದೆ? ರಾಹುಲ್ ಗಾಂಧಿಯವರು ಸತತವಾಗಿ 3 ಬಾರಿ ಕೇಂದ್ರ ಲೋಕಸಭಾ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದರು.

ಬ್ಯಾಲೆಟ್ ಪೇಪರ್ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯು ಬ್ಯಾಲೆಟ್ ಪೇಪರ್‌ಗೆ ಹೆದರುವುದಿಲ್ಲ, ನಾವು ಏಕೆ ಹೆದರಬೇಕು? ಎಂದು ಕೇಳಿದರಲ್ಲದೇ ಕೇಂದ್ರದಲ್ಲಿ ಸತತವಾಗಿ 3 ಬಾರಿ ನರೇಂದ್ರ ಮೋದಿ ಜೀ ಅವರ ಸರ್ಕಾರ ಇದೆ. ಬಿಜೆಪಿ ಬ್ಯಾಲೆಟ್ ಪೇಪರ್‌ಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಇವಿಎಂ ಬಗ್ಗೆಯೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

Continue Reading

Trending

error: Content is protected !!