Hassan
ಹಣದ ಆಮಿಷಕ್ಕೆ ಬಲಿಯಾದ ಸರ್ವೆಯರ್, ತೋಟದ ಪೋಡಿ ಸ್ಕೆಚ್ನಲ್ಲಿ ಅಕ್ರಮ ಆರೋಪ : ನ್ಯಾಯ ಕೊಡಿಸುವಂತೆ ಹೆಚ್.ಎನ್. ಬೋಜೇಗೌಡ ಮನವಿ
 
																								
												
												
											ಹಾಸನ: ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿ ಗೊದ್ದು ಗ್ರಾಮದಲ್ಲಿ ತೋಟದ ಭೂಮಿ ಸರ್ವೆ ಪ್ರಕ್ರಿಯೆಯಲ್ಲಿ ಸರ್ವೆಯರ್ ಹಣದ ಆಮಿಷಕ್ಕೆ ಒಳಗಾಗಿ ಸುಳ್ಳು ಸ್ಕೆಚ್ ಸಿದ್ಧಪಡಿಸಿರುವುದರಿಂದ ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ತೋಟ ಮಾಲೀಕರಾದ ಹೆಚ್.ಎನ್. ಬೋಜೇಗೌಡ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಹಾಸನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಸರ್ವೆ ನಂ. ೯೩/೨ರಲ್ಲಿ ನನಗೆ ೪.೩೮ ಗುಂಟೆ ತೋಟವಿದೆ. ನನ್ನ ಚಿಕ್ಕಪ್ಪ ಜಿ.ಆರ್. ಮಲ್ಲೇಶ್ ಅವರು ಇದನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಕುರಿತು ಸಕಲೇಶಪುರ ಸಿವಿಲ್ ಹಿರಿಯ ನ್ಯಾಯಾಲಯದಲ್ಲಿ ದಾವೆ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಆದೇಶದಂತೆ ಸಕಲೇಶಪುರ ಭೂಮಾಪನ ಕಚೇರಿಯಿಂದ ಮನು ಎಂಬ ಸರ್ವೆಯರ್ ತೋಟಕ್ಕೆ ಬಂದು ಮೂಲ ಟಿಪ್ಪಣಿಯಂತೆ ಸರ್ವೆ ಮಾಡುವುದಾಗಿ ಹೇಳಿದ್ದ. ಆದರೆ ಬಳಿಕ ಮಲ್ಲೇಶ್ ಹಾಗೂ ಅವರ ಮಗ ಸಂತೋಷ್ ಇವರ ಒತ್ತಾಯಕ್ಕೆ ಮಣಿದು ಸುಳ್ಳು ಹೇಳಿ ತೋಟದ ಮೂಲ ಸ್ಕೆಚ್ ಇಲ್ಲವೆಂದು ಹೇಳಿ ತಪ್ಪು ವರದಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ನ್ಯಾಯಾಲಯದ ಗೌರವಕ್ಕೂ ಧಕ್ಕೆ ತಲುಪಿದೆ. ಸುಮಾರು ಹದಿನೈದು ವರ್ಷಗಳ ಹಿಂದೆ ಮೂಲ ಟಿಪ್ಪಣಿಯಂತೆ ಸರ್ವೆ ನಡೆಸಿ, ಎಲ್ಲಾ ಅಣ್ಣತಮ್ಮಂದಿರ ಒಪ್ಪಿಗೆಯೊಂದಿಗೆ ಕಾನೂನುಬದ್ಧ ದಾಖಲೆಗಳೂ ಸಿದ್ಧವಾಗಿದ್ದವು. ಆದರೆ ಇದೀಗ ಅದನ್ನೇ ನಿರ್ಲಕ್ಷಿಸಿ ಹೊಸ ಸುಳ್ಳು ಸ್ಕೆಚ್ ತಯಾರಿಸಿ ನ್ಯಾಯಾಲಯಕ್ಕೂ ಸಲ್ಲಿಸುವ ಮೂಲಕ ನಮಗೆ ಅಪಾರ ಮಾನಸಿಕ ಕಿರುಕುಳ ಹಾಗೂ ಆರ್ಥಿಕ ಹಾನಿ ಉಂಟಾಗಿದೆ. ಕಳೆದ ಹತ್ತು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ, ಆದರೆ ಅಧಿಕಾರಿಗಳ ಅಕ್ರಮದಿಂದ ನಮ್ಮ ಪರಿಶ್ರಮ ವ್ಯರ್ಥವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಸರ್ವೆಯರ್ ಮನು ಹಾಗೂ ನಂತರ ನೇಮಿಸಲ್ಪಟ್ಟ ಪುನಿತ್ ಇಬ್ಬರೂ ಮಲ್ಲೇಶ್ ಹಾಗೂ ಅವರ ಮಗ ಸಂತೋಷ್ ಅವರ ಒತ್ತಾಯಕ್ಕೆ ತಲೆಬಾಗಿದ್ದು, ಸತ್ಯವನ್ನು ಬದಲಾಯಿಸಿ ನ್ಯಾಯಾಲಯಕ್ಕೆ ತಪ್ಪು ವರದಿ ನೀಡಿದ್ದಾರೆ. ಇದರಿಂದ ನಮ್ಮ ಹಕ್ಕು ಕಳೆದುಹೋಗುವಂತಾಗಿದೆ. ಸರ್ಕಾರದ ಮೂಲ ದಾಖಲೆಗಳೇ ಇದನ್ನು ಸಾಬೀತು ಮಾಡುತ್ತವೆ. ಆದ್ದರಿಂದ ಇಂತಹ ತಪ್ಪು ಸ್ಕೆಚ್ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸುಳ್ಳು ವರದಿ ಸಲ್ಲಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಬೋಜೇಗೌಡ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೋಜೇಗೌಡರ ಪತ್ನಿ ಜ್ಯೋತಿ, ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.
Hassan
ಮದ್ದೂರು ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಗಲಾಟೆ ಕೇಸ್: ಇನ್ಸ್ ಪೆಕ್ಟರ್ ಶಿವಕುಮಾರ್ ಸಸ್ಪೆಂಡ್
 
														ಮಂಡ್ಯ: ಜಿಲ್ಲೆಯ ಮದ್ದೂರಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದು, ಗಲಾಟೆಯಾಗಿತ್ತು. ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಪೋಲೀಸ್ ಠಾಣೆಯ ಇನ್ಸೆಕ್ಟರ್ ಶಿವಕುಮಾರ್ ತಲೆದಂಡವಾಗಿದೆ. ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.
ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಮದ್ದೂರು ಗಲಭೆ ಪ್ರಕರಣದಲ್ಲಿ ಎಎಸ್ಪಿ ವರ್ಗಾವಣೆ ವಿಚಾರವಾಗಿ ಮಾತನಾಡಿ ಅವರ ಅವಧಿ ಮುಗಿದಿತ್ತು. ಡಿಸೆಂಬರ್ ವರೆಗೂ ಮುಂದುವರೆಸಲು ಹೇಳಿದ್ದೆ. ಎಎಸ್ಪಿ ವರ್ಗಾವಣೆಗೂ ಮದ್ದೂರು ಪ್ರಕರಣಕ್ಕೂ ಸಂಬಂಧ ಇಲ್ಲ. ಸಾಮಾನ್ಯ ವರ್ಗಾವಣೆಯಂತೆ ವರ್ಗವಾಗಿದೆ. ತಿಮ್ಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಸರ್ಕಾರದಲ್ಲಿ ವರ್ಗಾವಣೆ ಪ್ರಕ್ರಿಯೆ ಸಹಜ. ನೂರಕ್ಕೆ ಲಕ್ಷ ಪರ್ಸೆಂಟ್ ಮದ್ದೂರು ಗಲಾಟೆಗೂ ವರ್ಗಾವಣೆಗೂ ಸಂಬಂಧ ಇಲ್ಲ ಎಂದರು.

ಈ ಘಟನೆಗೆ ಪೊಲೀಸ್ ವೈಫಲ್ಯ ಕಾರಣ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು ಇನ್ನು ವರದಿ ಬಂದಿಲ್ಲ. ವರದಿ ಬಂದ ನಂತರ ಆ ಬಗ್ಗೆ ಮಾಹಿತಿ ನೀಡುವೆ. ಘಟನೆ ಸಂಬಂಧ ಮತ್ತೋರ್ವ ಪೊಲೀಸ್ ಅಧಿಕಾರಿ ತಲೆದಂಡವಾಗಿದೆ. ಮದ್ದೂರು ಟೌನ್ ಇನ್ಸ್ ಪೆಕ್ಟರ್ ಶಿವಕುಮಾರ್ ಸಸ್ಪೆಂಡ್ ಮಾಡಲಾಗಿದೆ. ಘಟನೆ ನಡೆದಾಗ ಸ್ಥಳದಲ್ಲಿ ಇಲ್ಲದ ಕಾರಣಕ್ಕೆ ಇನ್ಸ್ ಪೆಕ್ಟರ್ ಸಸ್ಪೆಂಡ್ ಮಾಡಲಾಗಿದತೆ, ಶಾಂತಿ ಸಭೆಯಲ್ಲೇ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಹೆಚ್ಚಿನ ಗಮನಹರಿಸಿ ಬಂದೋಬಸ್ತ್ ಮಾಡುವಂತೆ. ಇನ್ಮುಂದೆ ಇಂತಹ ಯಾವುದೇ ಇಂತಹ ಘಟನೆ ನಡೆಯಬಾರದು. ನಡೆದರೆ ನಿಮ್ಮನ್ನೇ ನೇರ ಹೊಣೆ ಮಾಡುವುದಾಗಿ ವಾರ್ನಿಂಗ್. ಡಿಸಿ, ಎಸ್ಪಿಗೆ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.

ಕಲ್ಲು ತೂರಾಟ ನಡೆಸಿದ 22 ಜನರನ್ನ ಬಂಧಿಸಲಾಗಿದೆ. ಘಟನೆಗೆ ಕಾರಣ ಏನು? ಯಾರು ಕಾರಣ ಅನ್ನೋ ಬಗ್ಗೆ ಇನ್ನು ವರದಿ ಬಂದಿಲ್ಲ. ಮೊನ್ನೆ ಬಿಜೆಪಿ ನಾಯಕರು ಬಂದಿದ್ದರು, ನಿನ್ನೆ ಬಿಜೆಪಿಯ ವರ್ಯಾಯ ನಾಯಕರು ಬಂದಿದ್ರು. ಅವರ ಹೋರಾಟ ಯಶಸ್ವಿಯಾಗಿದೆ ಎಂದು ವ್ಯಂಗ್ಯವಾಡಿದರು.
ಘಟನಾ ಸ್ಥಳಕ್ಕೆ ಗೃಹ ಸಚಿವರು ಬಾರದ ವಿಚಾರ ಮಾತನಾಡಿ ಗೃಹ ಸಚಿವರು ನನ್ನಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಾನು ಅವರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ನಿನ್ನೆ ಕ್ಯಾಬಿನೆಟ್ ನಲ್ಲೂ ಚರ್ಚೆ ಆಗಿ, ಘಟನೆಯ ಮಾಹಿತಿ ವಿವರಿಸಿದ್ದೇನೆ. ನಾವು, ಜಿಲ್ಲಾಡಳಿತ ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಗೃಹ ಸಚಿವರು ಬರುವ ಅವಶ್ಯಕತೆಯಿಲ್ಲ. ನಾನೇ ಬರೋದು ಬೇಡ ಅಂತಾ ಹೇಳಿದ್ದೇನೆ. ಯತ್ನಾಳ್ ಯಾವ ಪಾರ್ಟಿ ಅನ್ನೋದನ್ನ ಸ್ಪಷ್ಟಪಡಿಸಲಿ. ಯತ್ನಾಳ್ ಹೊಸ ಪಕ್ಷಕ್ಕೆ ನಮ್ಮದು ಶುಭ ಹಾರೈಕೆ ಎಂದರು.
Hassan
ನಗರದ ಬಿಓ ಕಛೇರಿ ಮುಂದೆ ಹೆಚ್ಚುವರಿ ಶಿಕ್ಷಕರ ಧರಣಿ – ಕೌನ್ಸಲಿಂಗ್ ಪ್ರಕ್ರಿಯೆ ವಿರೋಧಿಸಿ ಆಕ್ರೋಶ
 
														ಹಾಸನ: ತಾಲೂಕು ಹೆಚ್ಚುವರಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಹಾಸನ ತಾಲೂಕಿನ ಶಿಕ್ಷಕರು ಬಿಇಒ ಕಚೇರಿ ಎದುರು ಶುಕ್ರವಾರ ಭಾರಿ ಪ್ರತಿಭಟನೆ ನಡೆಸಿ ಧರಣಿ ನಡೆಸಿದರು. ಕೌನ್ಸಲಿಂಗ್ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇಲಾಖೆ ತೆಗೆದುಕೊಂಡ ನಿರ್ಧಾರವು ಶಿಕ್ಷಕರ ಜೀವನದಲ್ಲಿ ಅಶಾಂತಿ ಉಂಟುಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕರಾದ ಜಯರಾಮ್ ಮಾತನಾಡಿ, “ತಾಲೂಕಿನಲ್ಲಿ ನೂರಾರು ಹೆಚ್ಚುವರಿ ಶಿಕ್ಷಕರು ಇದ್ದಾರೆ. ಇನ್ನೂ ಮುನ್ನೂರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಹುದ್ದೆಗಳನ್ನು ರದ್ದು ಮಾಡಲಾಗಿದೆ. ಇದು ನಮ್ಮಿಗೆ ಬಹಳ ಅನ್ಯಾಯ. ಮಹಿಳಾ ಶಿಕ್ಷಕರಿಗೆ ಅನುಕೂಲವಾಗುವಂತೆ ಹುದ್ದೆಗಳನ್ನು ಸ್ಥಳೀಯವಾಗಿ ನೀಡಿದರೆ ಎಲ್ಲರಿಗೂ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ನಮ್ಮನ್ನು ಹೊರ ತಾಲೂಕಿಗೆ ಕಳುಹಿಸಿದರೆ ಕುಟುಂಬ ಹಾಗೂ ಮಕ್ಕಳ ಶಿಕ್ಷಣದ ವಿಷಯದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಸ್ಯೆಗೆ ಬಿಇಒ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೂ ಹಾಸನ ತಾಲೂಕಿನಲ್ಲಿಯೇ ಹುದ್ದೆ ನೀಡಬೇಕು. ಇಲ್ಲದಿದ್ದರೆ ನಾವು ಕೌನ್ಸಲಿಂಗ್‌ಗೆ ಹಾಜರಾಗದೆ ಬಹಿಷ್ಕಾರ ಮಾಡುತ್ತೇವೆ. ಇದರ ಹೊಣೆ ಇಲಾಖೆಯದ್ದಾಗಿರುತ್ತದೆ. ಮುಂದೆ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೋ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮತ್ತೋರ್ವ ಹಿರಿಯ ಶಿಕ್ಷಕ ಅಣ್ಣೇಗೌಡ ಮಾತನಾಡಿ, “50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ಬೇರೆಡೆಗೆ ವರ್ಗ ಮಾಡುವುದು ಇಲಾಖೆಯ ನಿರ್ಧಾರ ತುಂಬಾ ಅನ್ಯಾಯಕರ. ನಾವು ವಯಸ್ಸಾದವರು, ಮಕ್ಕಳು ಕುಟುಂಬ ಎಲ್ಲವೂ ಇಲ್ಲಿ ಇವೆ. ಇಂತಹ ಸಂದರ್ಭದಲ್ಲಿ ದೂರದೂರಿಗೆ ಕಳುಹಿಸುವುದು ಅಸಮಂಜಸ. ಈ ತಾಲ್ಲೂಕಿನಲ್ಲಿಯೇ ನಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿಕ್ಷಕರ ಸಂಘದ ಅಧ್ಯಕ್ಷ ಚೈತ್ರ ಮಂಜೇಗೌಡ ಅವರು ಶಿಕ್ಷಕರ ಅಹವಾಲುಗಳನ್ನು ಆಲಿಸಿ, “ನಿಮ್ಮ ಸಮಸ್ಯೆ ನ್ಯಾಯಸಮ್ಮತವಾಗಿದೆ. ಈ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಿಕ್ಷಕರಾದ ಪರಮೇಶ್, ಕಲ್ಲಹಳ್ಳಿ ಹರೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಧರಣಿ ಸಮಯದಲ್ಲಿ ಶಿಕ್ಷಕರು ಘೋಷಣೆಗಳನ್ನು ಕೂಗುತ್ತಾ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Hassan
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ
 
														ಹಾಸನ : ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಬಾಲಕಿಯರ ಪ್ರೌಢಶಾಲೆ ಶಾಲೆಯ ಎ ಸೆಕ್ಷನ್ ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ, 4×100 ರಿಲೇ ದ್ವಿತೀಯ ಸ್ಥಾನ, ಹೈ ಜಂಪ್ ನಲ್ಲಿ ಪ್ರಥಮ ಸ್ಥಾನ , ವಾಕಿಂಗ್ ರೇಸ್ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಂತ ಫಿಲೋಮಿನಾ ಬಾಲಕಿಯರ ಪ್ರೌಢಶಾಲಾ ತಂಡವು 30 ಅಂಕಗಳೊಂದಿಗೆ ಕ್ರೀಡಾಕೂಟದ ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ ಅದೇ ರೀತಿ ನಮ್ಮ ಶಾಲೆಯ ಬಾಸ್ಕೆಟ್ ಬಾಲ್ ತಂಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಸ್ಕೆಟ್ ಬಾಲ್ ನಲ್ಲಿ ಪ್ರಥಮ ಸ್ಥಾನವನ್ನು.

ಕರಾಟೆ ತಂಡವು ಅರಕಲಗೂಡಿನಲ್ಲಿ ನಡೆದಂತ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಸಂತ ಫಿಲೋಮಿನಾ ಬಾಲಕಿಯರ ಪ್ರೌಢಶಾಲೆ 2025- 26ನೇ ಸಾಲಿನಲ್ಲಿ ಕ್ರೀಡೆಯಲ್ಲಿ ತನ್ನದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ತಿಳಿಸಲು ತುಂಬಾ ಹರ್ಷದಾಯಕವಾಗಿದೆ
- 
																	   Hassan4 hours ago Hassan4 hours agoರೈಲ್ವೆ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ 
- 
																	   Chamarajanagar18 hours ago Chamarajanagar18 hours agoಚಾಮರಾಜನಗರ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ ಮುಂದುವರೆಸಲು ಸಂಸದ ಸುನೀಲ್ ಬೋಸ್ ಮಾಡಿದ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ 
- 
																	   Hassan24 hours ago Hassan24 hours agoಸಾಲ ಬಾಧೆ ತಾಳಲಾರದೆ ಯುವ ರೈತ ಆತ್ಮಹ*ತ್ಯೆ 
- 
																	   Mandya2 hours ago Mandya2 hours agoಶ್ರೀರಂಗಪಟ್ಟಣ ದಸರಾ ಲೋಗೋ ಬಿಡುಗಡೆ 
- 
																	   Manglore21 hours ago Manglore21 hours agoವಿದ್ಯಾಭಾರತಿ ರಾಜ್ಯ ಮತ್ತು ಪ್ರಾಂತಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ 
- 
																	   National23 hours ago National23 hours agoಟಿ-20 ಏಷ್ಯಾಕಪ್| ಭಾರತ-ಪಾಕ್ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ 
- 
																	   Manglore18 hours ago Manglore18 hours agoನಗರದ ಒಳಾಂಗಣ ಸಂಕೀರ್ಣದ ಬಳಿಯ ವಾಲೀಬಾಲ್ ಕ್ರೀಡಾಂಗಣ ಸ್ಥಳದಲ್ಲಿ ಕನ್ನಡ ಭವನ ನಿರ್ಮಿಸುವ ನಿರ್ಧಾರವನ್ನು ಕೈಬಿಡಬೇಕು : ಶಿವಲಿಂಗಯ್ಯ 
- 
																	   Hassan2 hours ago Hassan2 hours agoಮದ್ದೂರು ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಗಲಾಟೆ ಕೇಸ್: ಇನ್ಸ್ ಪೆಕ್ಟರ್ ಶಿವಕುಮಾರ್ ಸಸ್ಪೆಂಡ್ 

 
											 
											 
											 
											 
											