Connect with us

Mysore

ವಾಸುದೇವಾಚಾರ್ಯ ಸ್ಮರಣಾರ್ಥ ಸರ್ಕಾರಿ ಕಾರ್ಯಕ್ರಮ: ಶಾಸಕ ಶ್ರೀವತ್ಸ ಮನವಿಗೆ ಸಿಎಂ ಸ್ಪಂದನೆ

Published

on

ಮೈಸೂರು: ಸಂಗೀತ ಕಲಾನಿಧಿ ಮೈಸೂರು ಕೆ.ವಾಸುದೇವಾಚಾರ್ಯರ ನೆನಪಿನಲ್ಲಿ ಸರ್ಕಾರದಿಂದ ಕಾರ್ಯಕ್ರಮ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.
ಅರಮನೆ ಅಂಗಳದಲ್ಲಿ ನಡೆದ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಂದರ್ಭದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಲಿಖಿತ ಮನವಿ ಸಲ್ಲಿಸಿದರು.

ಭಾಷಣದಲ್ಲೂ ವಾಸುದೇವಾಚಾರ್ಯರಿಗೆ ಸರ್ಕಾರದಿಂದ ಗೌರವ ಸೂಚಿಸಲು ಕಾರ್ಯಕ್ರಮ ರೂಪಿಸಬೇಕೆಂದು ಒತ್ತಾಯಿಸಿದರು. ಈ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ವಾಸುದೇವಾಚಾರ್ಯರ ಬಗ್ಗೆ ಶ್ರೀವತ್ಸ ಮನವಿ ಮಾಡಿದ್ದಾರೆ. ಜನ್ಮ ದಿನ ಅಥವಾ ಕಾಲವಾದ ದಿನದಲ್ಲಿ ಯಾವುದು ಸೂಕ್ತ ಎಂಬುದನ್ನು ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಮನವಿಯಲ್ಲಿ ಏನಿದೆ?: ಟಿ.ಎಸ್.ಶ್ರೀವತ್ಸ ಸಲ್ಲಿಸಿದ ಮನವಿಯ ಪೂರ್ಣಪಾಠ ಇಲ್ಲಿದೆ.
ಅಭಿನವ ತ್ಯಾಗರಾಜ, ಸಂಗೀತ ಕಲಾನಿಧಿ ಮೈಸೂರಿನ ಕೆ. ವಾಸುದೇವಾಚಾರ್ಯರು ಮೈಸೂರಿನಲ್ಲಿ 1865 ಮೇ 28 ರಂದು ಜನಿಸಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ 200ಕ್ಕಿಂತಲೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಅವುಗಳಲ್ಲಿ ಜನಪ್ರಿಯ ಕೃತಿಗಳಾದ “ಬೋಚಿವಾರವರುರಾ’ ಕಾಮಾಸ್ ರಾಗದಲ್ಲಿ, ‘ದೇವಾಧಿದೇವ’ ಸುನಾದ ವಿನೋದಿನಿಯಲ್ಲಿ, ‘ಮಾಮವತು ಶ್ರೀ ಸರಸ್ಪತಿ’ ಹಿಂದೋಳದಲ್ಲಿ, ‘ಭಜರೇ ರೇ ಮಾನಸಾ’ ಆಧೇರಿಯಲ್ಲಿ ಹಾಗೂ ಮೋಹನ ರಾಗದಲ್ಲಿ ರಚಿಸಲ್ಪಟ್ಟ ‘ರಾರಾ ರಾಜೀವಲೋಚನ ರಾಮ’ ಮುಂತಾದ ಖ್ಯಾತ ಕೀರ್ತನೆಗಳು ನೆನಪಾಗುತ್ತದೆ.
ಆಚಾರ್ಯರು ಮೈಸೂರು ಸಂಸ್ಥಾನದ ವಿದ್ವಾಂಸರು ಹಾಗೂ ಮಹಾರಾಜ ಜಯಚಾಮರಾಜ ಒಡೆಯರ್ ಅವರಿಗೆ ಗುರುಗಳೂ ಆಗಿದ್ದವರು ಹಾಗೂ ಪ್ರಸಿದ್ಧ ವಿದ್ವಾಂಸರಾದ ಬಿಡಾರಂ ಕೃಷ್ಣಪ್ಪ, ವೀಣೆ ಶೇಷಣ್ಣ ಮತ್ತು ಮೈಸೂರು ಪಿಟೀಲು ಚೌಡಯ್ಯ ಅವರ ಸಮಕಾಲೀನರು. ಇವರ ಪ್ರತಿಭೆಯನ್ನು ಗುರುತಿಸಿ ಮದ್ರಾಸ್ ಮ್ಯುಸಿಕ್ ಅಕಾಡೆಮಿಯವರು “ಸಂಗೀತಕಲಾನಿಧಿ” ಎಂಬ ಬಿರುದು ಕೊಟ್ಟು ಸನ್ಮಾನಿಸಿದ್ದರು.

ಮೈಸೂರಿನಲ್ಲಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಮಹಾರಾಜ ಸಂಸ್ಕೃತ ಪಾಠಶಾಲೆಯ ಹತ್ತಿರವಿರುವ ಮನೆಯೊಂದರಲ್ಲಿ ಜನಿಸಿದ್ದು, ಈಗಲೂ ಸದರಿಯವರ ಮನೆಯಲ್ಲಿ ಹಿರಿಯ ಕಿರಿಯ ಸಂಗೀತಗಾರರು ಆಗಾಗ್ಗೆ ಬಂದು ಕೀರ್ತನೆಯನ್ನು ಹಾಡಿ ಗೌರವ ಸೂಚಿಸಿ ಹೋಗುತ್ತಿರುವುದು ವಿಶೇಷವಾಗಿದೆ. ಅಂತಹ ಮಹಾನ್ ಮೈಸೂರು ಕೆ. ವಾಸುದೇವಾಚಾರ್ಯರು ಅವರ 96ನೇ ವಯಸ್ಸಿನಲ್ಲಿ ಅಂದರೆ 17.05.1961 ರಲ್ಲಿ ಇಹಲೋಕ ತ್ಯಜಿಸಿರುತ್ತಾರೆ.

ಅವರ ಕೃತಿಗಳಲ್ಲಿ ‘ಪರಮಪೂಜ್ಯ ವಾಸುದೇವ’ ಅಥವಾ ‘ವಾಸುದೇವ’ ಎಂಬ ಶಬ್ದಗಳನ್ನು ಕಾಣಬಹುದು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮಾರ್ಗಪದ್ಧತಿಯಲ್ಲಿ ಸ್ವರಜತಿ, ವರ್ಣ, ಕೃತಿ, ತಿಲ್ಲಾನ, ಜಾವಳಿ ಹಾಗೂ ಪದಂ ಶ್ಲೋಕಗಳನ್ನು ರಚಿಸಿರುವ ಏಕೈಕ ವಾಗ್ಗೇಯಕಾರರಾಗಿದ್ದು ‘ಅಭಿನವ ತ್ಯಾಗರಾಜ’ ಎಂಬ ಖ್ಯಾತಿಗೆ ಅನ್ನರ್ಥರಾಗಿದ್ದಾರೆ.

ಇಂತಹ ಮಹಾನ್ ಸಂಗೀತಗಾರರಿಗೆ ಸರ್ಕಾರದ ವತಿಯಿಂದ ಅವರ ಜನ್ಮದಿನ ಅಥವಾ ಪುಣ್ಯತಿಥಿಯಂದು ಸದರಿಯವರ ನೆನಪಿನಾರ್ಥ ಕರ್ನಾಟಕ ಸರ್ಕಾರವು ಯಾವುದಾದರೂಂದು ಕಾರ್ಯಕ್ರಮವನ್ನು ಆಳವಡಿಸಿ ಗೌರವಿಸಲು ಕೋರುತ್ತೇನೆ. ಶ್ರೇಷ್ಠ ಸಂಗೀತಗಾರರಿಗೆ ತಮ್ಮ ನೇತೃತ್ವದ ಘನ ಸರ್ಕಾರ ಗೌರವಿಸಬೇಕೆಂದು ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Continue Reading

Mysore

ಅರಮನೆ ಅಂಗಳಕ್ಕೆ ರಂಗೋಲಿಯ ಚಿತ್ತಾರ

Published

on

ಮೈಸೂರು: ಇತ್ತೀಚಿನ ದಿನಗಳಲ್ಲಿ‌ ಬಹಳಷ್ಟು‌ ಮಕ್ಕಳು ಮೊಬೈಲ್ ಗೀಳಿಗೆ ಪ್ರಭಾವಿತರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುತ್ತಾರೆ. ಹಾಗಾಗಿ ಅದರ ಪರಿಕಲ್ಪನೆಯಲ್ಲಿ ಡೋಂಟ್ ಬಿ ಅಡಿಕ್ಟೆಡ್ ಎಂಬ ಶೀರ್ಷಿಕೆಯಲ್ಲಿ ನಂಜನಗೂಡು ತಾಲ್ಲೂಕಿನ ಶ್ವೇತಾ ಟಿ.ಡಿ ಅವರು ಬಿಡಿಸಿದ್ದರೆ, ಸರ್ಕಾರದ‌ ಗೃಹ ಜ್ಯೋತಿ ಯೋಜನೆಯಿಂದ‌ ಸಾಕಷ್ಟು ಮನೆಗಳಲ್ಲಿ ದೀಪ ಬೆಳಗಿದೆ ಎಂಬ ನಿಟ್ಟಿನಲ್ಲಿ ಮೈಸೂರಿನ ಸ್ಪಂದನ ಅವರು ಮಹಿಳೆ ಮತ್ತು ದೀಪದ ರಂಗೋಲಿಯನ್ನು ಚಿತ್ತಾಕರ್ಷಕವಾಗಿ ಬಿಡಿಸಿದ್ದರು.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಮಹಿಳಾ ದಸರಾ ಉಪ‌ಸಮಿತಿ ವತಿಯಿಂದ ಅಂಬಾ ವಿಲಾಸ ಅರಮನೆ ಮುಂಭಾಗ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ‌ ಮಹಿಳೆಯರು ತಮ್ಮದೇ ಆದ ವಿಭಿನ್ನ ಕಲ್ಪನೆಯಲ್ಲಿ ರಂಗೋಲಿಗಳನ್ನು ಬಿಡಿಸುವ ಮೂಲಕ ಅತ್ಯುತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ದಸರಾ ಅಂಗವಾಗಿ ಹುಲಿ ಮೇಲೆ ಕುಳಿತ ಚಾಮುಂಡೇಶ್ವರಿ ತಾಯಿಯನ್ನು ತುಮಕೂರಿನ ನಿರ್ಮಲಾ ಅವರು ಬಿಡಿಸುವ ಮೂಲಕ ಸ್ಪರ್ಧೆಗೆ ಜೀವ ತುಂಬಿಸಿದ್ದರು. ದುರ್ಗಾ ದೇವಿ ಮತ್ತು ದೇವಿಗೆ ಕಾವಲಾಗಿರುವ ಆನೆಯ ಚಿತ್ರವನ್ನು ಸಿಂಧೂ ಲಕ್ದ್ಮಿ ಅವರು ಬಿಡಿಸಿದ್ದರೆ, ಹೆಣ್ಣಾಗಿ ಹುಟ್ಟಿರುವುದಕ್ಕೆ ನಾವೆಲ್ಲಾ ಹೆಮ್ಮೆ ಪಡೋಣ ಎಂಬ ಪರಿಕಲ್ಪನೆಯಲ್ಲಿ ದಾವಣಗೆರೆಯ ಲಕ್ಷ್ಮಿ ಅವರು ಚಿತ್ತಾಕರ್ಷಕವಾಗಿ ಬಿಡಿಸಿದ್ದರು. ನಂದಿ ಮತ್ತು ಶಿವಲಿಂಗವನ್ನು ವಿಜಯನಗರದ ಸುನಿತಾ ಅವರು ಬಿಡಿಸಿದ್ದರು.

ಹೀಗರ ಚುಕ್ಕಿ ಲೆಕ್ಕಾಚಾರ ಒಂದೆಡೆಯಾದರೆ ಯಾವ ಗೆರೆಗೆ ಎಲ್ಲಿಂದ ಗೆರೆ ಹಾಕಬೇಕು, ಯಾವ ಹೂವಿಗೆ ಯಾವ ಬಣ್ಣ ತುಂಬಬೇಕು ಎಂಬ ನಾನಾ ಬಗೆಯ ಕುತೂಹಲದೊಂದಿಗೆ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು ತಾವು ಬಿಡಿಸುವ ಚಿತ್ತಾರದ ಅಂದ ಹೆಚ್ಚಿಸುವಲ್ಲಿ ಮುಳುಗಿದ್ದರು. ಅಂತೆಯೇ ಚಾಮುಂಡಿ ಬೆಟ್ಟದ ಗೋಪುರ, ಓಂನಲ್ಲು ಮೂಡಿರುವ ಗಣೇಶ, ಅರಸರ ಲಾಂಛನವಾದ ಗಂಡ ಬೇರುಂಡ, ನವಿಲಿನ ಚಿತ್ರ, ದಸರಾ ಆನೆ, ರಥ, ಬಾಲಕೃಷ್ಣ ಹೀಗೆ ನಾನಾ ರೀತಿಯ ರಂಗೋಲಿಗಳನ್ನು ಈ ಸ್ಪರ್ಧೆಯಲ್ಲಿ ಬಿಡಿಸಲಾಗಿತ್ತು.

ಇದಕ್ಕೂ ಮುನ್ನ ಶಾಸಕ ಟಿ.ಎಸ್. ಶ್ರೀವತ್ಸ ಅವರು
ಕುರುಬಾರಹಳ್ಳಿಯ ಕಲಾವಿದ ಪುನೀತ್ ಅವರು ಅರ್ಜುನನ‌ ನೆನಪಿನಲ್ಲಿ ಮೂಡಿಸಿದ್ದ ಅರ್ಜುನ‌ ಆನೆಗೆ ಪುಷ್ಪಾರ್ಚನೆ‌ ಸಲ್ಲಿಸಿ ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳಾ ದಸರಾ ಉಪ‌ ಸಮಿತಿಯಿಂದ ಆಯೋಜಿಸಲಾಗಿರುವ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸುಮಾರು 150ಕ್ಕೂ ಹೆಚ್ಚು‌ ಮಹಿಳೆಯರು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ. ದಸರಾ‌ ಮಹೋತ್ಸವದ‌ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ರಂಗೋಲಿ ಸ್ಪರ್ಧೆಯಿಂದ ನಾಡಹಬ್ಬ ದಸರಾಗೆ ಮತ್ತಷ್ಟು ಕಳೆಕಟ್ಟಿದೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಸಮಿತಿ‌ ಉಪ ವಿಶೇಷಾಧಿಕಾರಿ ಬಿ.ಎಂ.ಸವಿತಾ, ಕಾರ್ಯಾಧ್ಯಕ್ಷ ಬಿ.ಬಸವರಾಜು, ತೀರ್ಪುಗಾರರಾದ ಮೀನಾಕ್ಷಿ‌ ರವಿಕುಮಾರ್, ಸ್ತ್ರೀ‌ಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಪ್ರೇಮಕುಮಾರಿ, ದಸರಾ ಉಪ‌ಸಮಿತಿ ಕಾರ್ಯದರ್ಶಿ ಚರಿತಾ, ಸಮಿತಿ ಸದಸ್ಯರು ಸೇರಿದಂತೆ‌ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

Continue Reading

Mysore

ಎಂಐಟಿ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ 10 ನೇ ಒರಿಯಂಟೇಷನ್ ಡೇ ಕಾರ್ಯಕ್ರಮ

Published

on

 ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ತಾಲೂಕಿನ ತಾಂಡವಪುರ ಎಂಐಟಿ ಕಾಲೇಜಿನಲ್ಲಿ 2025 ರ 10ನೇ ವರ್ಷದ ಒರಿಯಂಟೇಷನ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೈಸೂರಿನ ರಾಮಕೃಷ್ಣ ಮಠ ಸ್ವಾಮಿ ಸರ್ವಾಜಯಾನಂದಜಿ ಮಹಾರಾಜ, ಐಐಟಿ ಧಾರವಾಡದ ಪ್ರೊಫೆಸರ್ ಹಾಗೂ ಹಿರಿಯ ವಿಜ್ಞಾನಿ ಡಾಕ್ಟರ್ ಎಸ್. ಎಂ. ಶಿವಪ್ರಸಾದ್, ಮತ್ತು ಎಂಐಟಿ ಪ್ರಾಂಶುಪಾಲರಾದ ಡಾ .ವೈ.ಟಿ. ಕೃಷ್ಣೇಗೌಡ, ಸೇರಿದಂತೆ ಇನ್ನಿತರ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮೈಸೂರಿನ ರಾಮಕೃಷ್ಣ ಮಠದ ಸ್ವಾಮಿ ಸರ್ವಾಜಯಾನಂದಜಿ ಮಹಾರಾಜ ಮಾತನಾಡಿ ಇಲ್ಲಿನಿಂದ ನವರಾತ್ರಿ ಆರಂಭ ಒಂದು ಕಡೆ ತಾಯಿ ಚಾಮುಂಡೇಶ್ವರಿಯ ನವರಾತ್ರಿಯ ಸಂಭ್ರಮ ಮತ್ತೊಂದೆಡೆ ಶ್ರೀಕಂಠೇಶ್ವರ ಸ್ವಾಮಿಯ ಇವೆರಡರ ಮಧ್ಯ ಒಂದರಲ್ಲಿ ಈ ಕಾಲೇಜು ಪ್ರತಿಷ್ಠೆ ಶಿಕ್ಷಣ ಸಂಸ್ಥೆಗಳಲ್ಲಿ ಒಂದು, ಇಲ್ಲಿಂದ ಅನೇಕ ಜನ ವಿದ್ಯಾರ್ಥಿಗಳು ಇಂಜಿನಿಯರ್ ಆಗಲು ಉತ್ಸಾಹಕ್ಕೆ ಇದ್ದೀರಾ , ಶಿಕ್ಷಣ ಜೊತೆ ಮಾನವೀನ ಮೌಲ್ಯಗಳ ಬೆಳೆಸಿಕೊಳ್ಳುವಂತಹ ವಿದ್ಯಾರ್ಥಿಗಳು ಮನಸ್ಸು ಮಾಡಬೇಕು. ಸ್ವಾಮಿ ವಿವೇಕಾನಂದ ಅವರ ತತ್ವ ಆದರ್ಶ ಕೂಡ ಇದೇ ಆಗಿದೆ, ಬದುಕಲು ಕಲಿಯರಿ ಎಂಬ ಸ್ವಾಮಿ ವಿವೇಕಾನಂದರ ಪುಸ್ತಕ ಇಂದಿನ ಯುವ ಪೀಳಿಗೆ ಓದಬೇಕಾದ ಮನಸ್ಸನ್ನ ಮಾಡಬೇಕಿದೆ. ನೀವು ಎಷ್ಟೇ ಉನ್ನತ ಸ್ಥಾನಮಾನ ಕೇಳಿ ವಿದೇಶಗಳಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದರು. ಇಲ್ಲಿನ ಸಂಸ್ಕೃತಿ ಮರೆಯಬಾರದು. ಜಗತ್ತಿನ ಹಲವು ದೇಶಗಳು ಕಂಡಾಗ ಭಾರತ ದೇಶ ಇಷ್ಟೊಂದು ಸದೃಢವಾಗದೆ ಅಂದರೆ ಅದಕ್ಕೆ ಇಲ್ಲಿನ ಸಂಸ್ಕೃತಿ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗುವ ಜೊತೆ ಇಲ್ಲಿನ ಸಂಸ್ಕೃತಿ ಮಾನವಿಯತೆ ಮೌಲ್ಯಗಳನ್ನ ಜಗತ್ತಿಗೆ ಪರಿಚಯಿಸುವಂತಹ ಕೆಲಸವನ್ನು ಮಾಡಬೇಕೆಂದು ತಿಳಿಸಿದರು.

ವಿವೇಕಾನಂದರವರು ಅಷ್ಟೊಂದು ಜ್ಞಾನವಂತರಾಗಿದ್ದರು ಕೂಡ ಇಲ್ಲಿನ ಸಂಸ್ಕೃತಿ ಧಾರ್ಮಿಕ ಸಂಪ್ರದಾಯಗಳನ್ನು ಮರೆಯಲಿಲ್ಲ. ಅವುಗಳನ್ನ ಇಡೀ ಜಗತ್ತಿಗೆ ಸಾರುವ ಮೂಲಕ ತಾವು ಒಬ್ಬ ಮಹಾ ಸಂತ ಸಾಬೀತು ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಎಲ್ಲಾ ವಿದ್ಯಾರ್ಥಿಗಳಿಗೂ ಮುಂದಿನ ಭವಿಷ್ಯ ಶುಭಕರವಾಗಲಿ ಎಂದು ಶುಭ ಹಾರೈಸಿದರು.

ಧಾರವಾಡದ ಎಸ್.ಎಂ. ಶಿವಪ್ರಸಾದ್ ಮಾತನಾಡಿ, ಇಡೀ ಜಗತ್ತು ಟೆಕ್ನಾಲಜಿ ಮೇಲೆ ನಿಂತಿದೆ. ಪ್ರಸ್ತುತ ಸಮಾಜ ತಂತ್ರಜ್ಞಾನದ ಸಮಾಜವಾಗಿದೆ. ತಂತ್ರಜ್ಞಾನ ಬೆಳದಂತೆ ನಿರುದ್ಯೋಗ ಸಮಸ್ಯೆಗಳು ಎದುರಾಗುತ್ತಿದ್ದು ಮುಂದೆ ಇದು ಇನ್ನು ಇನ್ನಷ್ಟು ಹೆಚ್ಚಲಾಗಲಿದೆ. ವೈದ್ಯಕೀಯ ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರ, ಡ್ರೈವಿಂಗ್ , ಇನ್ನಿತರ ಸೇರಿದಂತೆ ಹಲೋ ಕ್ಷೇತ್ರಗಳಲ್ಲಿ ನಿರುದ್ಯೋಗ ಸಮಸ್ಯೆ ಆವರಿಸಲಿದೆ. ಜಗತ್ತಿನಲ್ಲಿ ತಂತ್ರಜ್ಞಾನಗಳು ಎಷ್ಟು ಮುಂದುವರಿದಿದೆ ಅಂದರೆ ಕೆಲವೇ ಕೆಲವು ವರ್ಷಗಳಲ್ಲಿ ಮನುಷ್ಯನಿಗೆ ತಾವೇ ಇಲ್ಲ ಎಂಬುವಂತಹ ಆವಿಸ್ಕಾರಗಳು ನಡಿತಿವೆ. ನಾಲಕ್ಕು ವರ್ಷಗಳಲ್ಲಿ ಆ ಪ್ರಯೋಗಕ್ಕೂ ಕೂಡ ನಡೆಯಲಿದ್ದು, ಒಂದು ವೇಳೆ ಅದು ಯಶಸ್ವಿ ಆದರೆ ಇಲ್ಲಿ ಕುಳಿತಿರುವಂತಹ ವಿದ್ಯಾರ್ಥಿಗಳು ಸೇರಿ ಹಲವರು 100 ವರ್ಷದಷ್ಟು ಬದುಕಬಹುದು. ಇಂತಹ ತಂತ್ರಜ್ಞಾನಗಳು ನಡಿತಾ ಇರುವುದು ನಿಜಕ್ಕೂ ಒಂದು ರೀತಿ ಹೆಮ್ಮೆ. ಹೀಗಾಗಿ ಇಂಜಿನಿಯರ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ಡಿಮ್ಯಾಂಡ್ ಹೆಚ್ಚಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎಂಐಟಿ ಪ್ರಾಂಶುಪಾಲ ವೈ.ಟಿ. ಕೃಷ್ಣೇಗೌಡ ಮಾತನಾಡಿ ಪ್ರಸ್ತುತ ಮೊದಲಿಗೆ ತಾಂಡವಪುರ ಎಂಐಟಿ ಕಾಲೇಜಿನ ನಿರ್ಮಿಸಿದ ಹಿಂದೆ ಇರುವ ಕಥೆಯನ್ನು ತಿಳಿಸಿದರು. ಇಡೀ ದೇಶದಲ್ಲೇ ತಾಂಡವಪುರ ಕಾಲೇಜು ಹೇಗೆ ವಿಭಿನ್ನ ಎನ್ನುವುದನ್ನು ತೋರಿಸಿಕೊಟ್ಟಿದೆ. ನಾನು ಸೇರಿ ನನ್ನ ಜೊತೆಯಲ್ಲಿ ಸೇವೆ ಮಾಡುತ್ತಿದ್ದ ಇತರೆ ಅಧ್ಯಾಪಕರು ಚರ್ಚೆ ಮಾಡಿ ಈ ರೀತಿ ಕಾಲೇಜನ್ನು ಸ್ಥಾಪಿಸಬೇಕೆಂದು ಇದನ್ನು ನಿರ್ಮಾಣ ಮಾಡಿದ್ದ
ಪರಿಣಾಮ ಇಲ್ಲಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ವಿಶ್ವದ ಹಲವೆಡೆ ಸೇವೆಯನ್ನು ಸಲ್ಲಿಸಿ ಇದ್ದಾರೆ .ಈ ಕಾಲೇಜಿನ ಮತ್ತೊಂದು ವಿಶೇಷ ಏನೆಂದರೆ ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಉತ್ತರ ಕರ್ನಾಟಕದಿಂದ ಹಲವು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಅವರಿಗೆ ಊಟ ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ಅಚ್ಚುಗಟ್ಟಾಗಿ ಮಾಡಿದ್ದೇವೆ ಎಂದರು.

ನಮ್ಮ ಕಾಲೇಜಿನಲ್ಲಿ ಐಎಎಸ್ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯನ್ನು ಗಮನಿಸಿ ದೇಶದ ಹಾಗೂ ವಿಶ್ವದ ಹಲವು ಶಿಕ್ಷಣ ಸಂಸ್ಥೆಗಳು ಇದನ್ನ ಅನುಸರಿಸ್ತಾ ಇವೆ. ಈ ಕಾಲೇಜಿನ ಹಿಂದೆ ಪ್ರಾಧ್ಯಾಪಕ ವರ್ಗದ ಹುಡುಗಿ ಕೂಡ ಇದೆ ಕುಟುಂಬ ವರ್ಗ ಸ್ನೇಹಿತರು ಹಿತೈಷಿಗಳು ಮಾರ್ಗದರ್ಶಕರು ಎಲ್ಲರ ಸಹಕಾರದಿಂದ ಕಾಲೇಜು ಎಂಹಾರವಾಗಿ ನಿಂತಿದೆ. ಇದಕ್ಕೆ ಇಲ್ಲಿ ಆಗಮಿಸಿರುವ ಧನ್ಯಶ್ರೀ ಎಂಬ ಯುವತಿ ವಿಶೇಷ ಆಹ್ವಾನಿತಳಾಗಿ ಇಲ್ಲಿಗೆ ಆಗಮಿಸಿದ್ದಾಳೆ ಇವತ್ತು ಇಲ್ಲಿರುವ ಕುಳಿತಿರುವ ಪೋಷಕರಂತೆ ಆಕೆಯ ಪೋಷಕರು ಹುಡುಗಿಯನ್ನ ನಮ್ಮ ಕಾಲೇಜಿಗೆ ಸುಪರ್ದಿಗೆ ವಹಿಸಿ ಹಾಕೇನ ಮುಂದಿನ ಜೀವನವನ್ನ ರೂಪಿಸುವಂತೆ ಮನವಿ ಮಾಡಿದರು.

ಇವತ್ತು ಈ ಕಾಲೇಜಿನ ಶಿಕ್ಷಣ ಪಡೆದ ಧನ್ಯಶ್ರೀ ಬೆಂಗಳೂರಿನಲ್ಲಿ ಕಂಪನಿಗಳನ್ನು ಸ್ಥಾಪಿಸಿ ಅನೇಕ ಜನರಿಗೆ ಉದ್ಯೋಗ ನೀಡಿದ್ದಾಳೆ. ಈಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಮುಂದಿನ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ ಸಿಗುತ್ತದೆ ಎಂದು ಕಾಲೇಜಿನ ಯಶಸ್ವಿನ ಬಗ್ಗೆ ಹಾಗೂ ಮುಂದಿನ ಕಾಲೇಜಿನ ಉನ್ನತಿಕರಣದ ಬಗ್ಗೆ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ತಿಳಿಸಿದರು.

ಸಮಾರಂಭದಲ್ಲಿ ಎಂಇಟಿ ಅಧ್ಯಕ್ಷತೆ ವಹಿಸಿದ್ದ ಬಿ.ಎಸ್. ನರೇಶ ಕುಮಾರ್ ಮಾತನಾಡಿ ಮನುಷ್ಯ ಏನಾದರೂ ಆಗಲಿ, ಬದಲು ಮಾನವನಾಗಿ ನೀವು ಏನೇ ಸಾಧಿಸಿದರು. ಮೊದಲು ತಂದೆ ತಾಯಿಗಳಿಗೆ ನೆನಪಿಸಿಕೊಳ್ಳಿ ಹಾಗೂ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.

ಎಂಐಟಿ. ಸಂಸ್ಥೆಯ ಖಜಾಂಚಿ ಡಿ.ಎಸ್. ಗುರು ಮಾತನಾಡಿ ಎಂಐಟಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ಜೀವನವನ್ನು ರೂಪಿಸಿಕೊಳ್ಳುವಂತೆ ಮನವಿ ಮಾಡಿ ಸೀಟ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು‌.

ಎಂಇಟಿ ಉಪಾಧ್ಯಕ್ಷರಾದ ಹೇಮಂತ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ತಪಸ್ಸು ಎಂದು ಭಾವಿಸಿ, ಅದರಂತೆ ಇಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತಕೊಟ್ಟು ಗುರಿ ಮುಟ್ಟಬೇಕು ಎಂದು ಶುಭ ಹಾರೈಸಿದರು .

ಎಂಐಟಿ ಜಂಟಿ ಕಾರ್ಯದರ್ಶಿ ಹೆಚ್. ಕೆ. ಚೇತನ್ ರವರು ಸ್ವಾಗತಿಸಿ ಪ್ರಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಎಂಐಟಿ ಕಾಲೇಜಿನ ಅಧ್ಯಾಪಕರುಗಳು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Continue Reading

Mysore

ವಸ್ತು ಪ್ರದರ್ಶನಕ್ಕೆ ಚಾಲನೆ: ಮೊದಲ ದಿನವೇ ವಸ್ತು ಪ್ರದರ್ಶನ ಭರ್ತಿ

Published

on

ಮೈಸೂರು: ದಸರಾ ಮಹೋತ್ಸವ 2025 ರ ದಸರಾ ವಸ್ತು ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದರು.

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐ.ಎನ್.ಎಸ್ ಕದಂಬ ಸೇನಾ ಸಿಬ್ಬಂದಿ ಬ್ಯಾಂಡ್ ಸೆಟ್ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಿದರು.

ಸಾಮಾನ್ಯವಾಗಿ ಪ್ರತಿ ವರ್ಷವೂ ಖಾಲಿ ಮಳಿಗೆಗಳಿಗೆ ಚಾಲನೆ ನೀಡಲಾಗುತ್ತಿತ್ತು. ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಪರಿಶ್ರಮದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮೊದಲು ಎಂಬಂತೆ ಉದ್ಘಾಟನೆ ದಿನವೇ ಭಾಗಶಃ ಎಲ್ಲ ಮಳಿಗೆಗಳೂ ಭರ್ತಿಯಾಗಿದ್ದು ವಿಶೇಷವಾಗಿತ್ತು.

ನಂತರ ಈ ಬಾರಿ ವಸ್ತು ಪ್ರದರ್ಶನದಲ್ಲಿ ಪ್ರವಾಸಿಗರ ತನ್ನತ್ತ ಸೆಳೆಯುವ ವಿಶೇಷ ಅಜೀಜ್ ಸೇಠ್ ಸಂಗೀತ ಕಾರಂಜಿಗೂ ಸಿಎಂ ಚಾಲನೆ ನೀಡಿದರು. ಆವರಣದಲ್ಲಿ 20 ಕೋಟಿ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ದರಾಮಯ್ಯ ಅಂಗಳ ಹೆಸರಿನ ಶಾಶ್ವತ ಮಳಿಗೆಗಳನ್ನು ಉದ್ಘಾಟಿಸಿ ಸಚಿವರು ಶಾಸಕರೊಡನೆ ವೀಕ್ಷಣೆ ಮಾಡಿದರು.

ಇಂದಿನಿಂದ ಮೈಸೂರು ಪ್ರವಾಸಿಗರಿಗೆ ವಸ್ತು ಪ್ರದರ್ಶನ ತೆರೆದಿದ್ದು, ಬಟ್ಟೆಗಳ ಮಳಿಗೆ, ತಿಂಡಿ ತಿನಿಸುಗಳ ಮಳಿಗೆ, ಮಕ್ಕಳಿಗೆ ಆಟದ ವ್ಯವಸ್ಥೆ, ಸಂಗೀತ ಕಾರ್ಯಕ್ರಮಗಳು ಹೀಗೆ ಹಲವು ವೈವಿಧ್ಯತೆಯಿಂದ ಕೂಡಿದ್ದು ಎಲ್ಲರಿಗೂ ಇಷ್ಟವಾಗಲಿದೆ. ಇನ್ನು ಪ್ರಾರಂಭವಾದ ಮೊದಲ ದಿನವೇ ಸಾವಿರಾರು ಮಂದಿ ವಸ್ತು ಪ್ರದರ್ಶನ ಕಣ್ತುಂಬಿಕೊಂಡರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್ ಕೆ ಪಾಟೀಲ್, ಶಿವರಾಜ್ ತಂಗಡಗಿ, ಕೆ.ವೆಂಕಟೇಶ್ ಶಾಸಕರಾದ ತನ್ವೀರ್ ಸೇಠ್, ಡಿ ರವಿಶಂಕರ್, ಟಿ.ಎಸ್. ಶ್ರೀವತ್ಸ, ಅನಿಲ್ ಚಿಕ್ಕಮಾದು, ಎ.ಆರ್ ಕೃಷ್ಣಮೂರ್ತಿ, ಸಂಸದರಾದ ಸುನೀಲ್ ಬೋಸ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್ ಹಾಗೂ ಇನ್ನಿತರರು ಇದ್ದರು.

Continue Reading

Trending

error: Content is protected !!