Hassan
ಗಣೇಶ ವಿಗ್ರಹಕ್ಕೆ ಅಪಮಾನ ಪ್ರಕರಣ : ಬೇಲೂರಿನಲ್ಲಿ ಎಸ್ಪಿ ಮಹಮದ್ ಸುಜೇತಾ ಸುದ್ದಿಗೋಷ್ಠಿ

ಹಾಸನ : ಹಾಸನ ಜಿಲ್ಲೆ ಬೇಲೂರಿನಲ್ಲಿ ಗಣೇಶ ವಿಗ್ರಹಕ್ಕೆ ಅಪಮಾನ ಪ್ರಕರಣ
ಬೇಲೂರಿನಲ್ಲಿ ಎಸ್ಪಿ ಮಹಮದ್ ಸುಜೇತಾ ಸುದ್ದಿಗೋಷ್ಠಿ
ಬೇಲೂರು ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ
ಪುರಸಭೆ ಆವರಣದಲ್ಲಿರುವ ದೇವಾಲಯದಲ್ಲಿ ದೇವರ ಮೇಲೆ ಚಪ್ಪಲಿ ಹಾಕಿದ ಘಟನೆ ಸಂಬಂಧ ಕೇಸ್ ದಾಖಲು ಮಾಡಲಾಗಿದೆ
ಈ ಕೃತ್ಯ ರಾತ್ರಿ ವೇಳೆಯಲ್ಲಿ ನಡೆದಿದೆ
ಓರ್ವ ಮಹಿಳೆ ದೇವಾಲಯಕ್ಕೆ ಹೋಗಿ ವಾಪಸ್ ಬಂದಿರುವುದು ಗೊತ್ತಾಗಿದೆ
ಆಕೆಯ ಕಾಲಿನಲ್ಲಿ ಇದ್ದ ಚಪ್ಪಲಿಯೇ ದೇವರ ಮೇಲೆ ಇದ್ದಿರುವುದು ಕೂಡ ಗೊತ್ತಾಗಿದೆ
ಆಕೆ ಮಾನಸಿಕವಾಗಿ ಸ್ಥಿಮಿತ ಇರಲಿಲ್ಲ ಎನ್ನುವ ಮಾಹಿತಿ ಇದೆ
ಆ ಮಹಿಳೆ ಎಲ್ಲಿಂದ ಬಂದರು ಎನ್ನುವ ಮಾಹಿತಿ ಕಲೆ ಹಾಕಲಾಗುತ್ತಿದೆ
ಎಂಟು ತಂಡ ರಚನೆ ಮಾಡಲಾಗಿದೆ
ಮಹಿಳೆ ಮೂಲತಃ ಎಲ್ಲಿಯವರು ಎನ್ನುವುದು ಇನ್ನೂ ಖಾತ್ರಿ ಆಗಬೇಕಿದೆ
ಆಕೆ ಯಾಕೆ ಹೀಗೆ ಮಾಡಿದರು ಎನ್ನುವುದು ಗೊತ್ತಾಗಬೇಕಿದೆ
ಆಕೆ ವಶಕ್ಕೆ ಪಡೆಯಲು ಕ್ರಮ ವಹಿಸಲಾಗಿದೆ
ಆಕೆ ಆಗಾಗ ಇಲ್ಲಿ ಓಡಾಡಿದ ಬಗ್ಗೆ ಕೆಲವರು ಹೇಳಿದ್ದಾರೆ
ಆಕೆ ಒಳಗೆ ಹೋದಾಗ ಚಪ್ಪಲಿ ಇತ್ತು ಆದರೆ ವಾಪಸ್ ಬರುವಾಗ ಇರಲಿಲ್ಲ
ಆದರೆ ಆಕೆಯ ಕಾಲಿನಲ್ಲಿ ಇದ್ದ ಚಪ್ಪಲಿಯೇ ದೇವರ ಮೇಲಿದ್ದ Let’s ಮಾಹಿತಿ ಲಭ್ಯವಾಗಿದೆ
ಚಪ್ಪಲಿಗೆ ದಾರ ಕಟ್ಟಿ ದೇವರ ಮೇಲೆ ಹಾಕಿಲ್ಲ
ಆದರೆ ಎರಡು ಚಪ್ಪಲಿಗಳನ್ನ ದೇವರ ಮೇಲೆ ಇಡಲಾಗಿದೆ ಎಂದು ಮಾಹಿತಿ ನೀಡಿದ ಎಸ್ಪಿ
ಆಕೆ ದೇವರ ಮೇಲಿನ ಹೂ ತೆಗೆದು ಮಾರಾಟ ಮಾಡುತ್ತಿದ್ದ ಬಗ್ಗೆ ಕೆಲವರು ಹೇಳಿದ್ದಾರೆ
ಈ ಬಗ್ಗೆ ಕೂಡ ಪರಿಶೀಲನೆ ನಡೆಸುತ್ತಿರುವುದಾಗಿ ಎಸ್ಪಿ ಮಾಹಿತಿ
Hassan
ಪ್ರತಿಭಟನೆಯಲ್ಲಿ ಎಂಎಲ್‌ಸಿ ಸಿ.ಟಿ.ರವಿ ಹೇಳಿಕೆ

ಹಾಸನ : ಪ್ರತಿಭಟನೆಯಲ್ಲಿ ಎಂಎಲ್‌ಸಿ ಸಿ.ಟಿ.ರವಿ ಹೇಳಿಕೆ
ನಾವು ಕಾನೂನು ಪಾಲಿಸುವವರು, ಆದ್ದರಿಂದ ತಾಳ್ಮೆಯಿಂದ ಇದ್ದೇವೆ
ಸಂಜೆಯೊಳಗೆ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಿ
ಅವರ ಹಿಂದೆ ಯಾರಾದರೂ ಇದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಿ
ಯಾರು ತಪ್ಪು ಮಾಡುತ್ತಾರೋ ಅವರಿಗೆ ಬುಲ್ಡೋಜರ್ ರೆಡಿ ಇದೆ ಎಂದು ಸರ್ಕಾರ ಹೇಳಲಿ
ನಾಳೆ ಮನುಷ್ಯರ ಮೇಲೆ ಚಪ್ಪಲಿ ಹಾಕುತ್ತಾರೆ
ಸಂಜೆಯವರೆಗೂ ಸಮಯ ಕೊಟ್ಟಿದ್ದೇವೆ
ಇನ್ಮುಂದೆ ಇಂತಹ ಕೃತ್ಯವನ್ನು ಹಿಂದೂ ಸಮಾಜ ಸಹಿಸಿಕೊಳ್ಳುವುದಿಲ್ಲ
ನಾಳೆ ಹೋರಾಟಕ್ಕೆ ಕರೆ ಕೊಟ್ಟಿದ್ದೇವೆ, ಚಿಕ್ಕಮಗಳೂರು ಜಿಲ್ಲೆಯಿಂದಲೂ ಬೆಂಬಲ ಕೊಡಿತ್ತೇವೆ
ಇಡೀ ಪ್ರಕರಣದ ಆರೋಪಿ ಬಂಧಿಸಿ ಒಂದು ಸಂದೇಶ ಹೋಗಬೇಕು
ಬರೀ ಗಣಪತಿ ಆಗಿರುವ ಅವಮಾನವಲ್ಲ
ಇಡೀ ಹಿಂದೂ ಸಮಾಜಕ್ಕೆ ಆಗಿರುವ ಅನ್ಯಾಯ
ಕೂಡಲೇ ಆರೋಪಿಯನ್ನು ಬಂಧಿಸಿ ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು
Hassan
ಹಾಸನದಲ್ಲಿ ಬಸವಣ್ಣನವರ ತತ್ವಜ್ಞಾನ ಸಾರಿದ ಸಾಂಸ್ಕೃತಿಕ ಅಭಿಯಾನ

ಹಾಸನ: ಮನುಷ್ಯನ ದೇಹವೇ ದೇವಾಲಯ, ಶಿರವೇ ಕಳಸ. ಈ ಭಾವನೆಗೆ ಜೀವ ತುಂಬಿದವರು ಬಸವಣ್ಣ. ದೇವಾಲಯಕ್ಕೆ ಹೋಗುವುದೇ ಧರ್ಮವಲ್ಲ, ಇಷ್ಟಲಿಂಗವೇ ಶಾಶ್ವತ ದೇವಾಲಯ. ಪೂಜಾರಿ ಮಾಡಿದ ಪೂಜೆಯ ಬದಲು ಪ್ರತಿಯೊಬ್ಬರೂ ತಾವೇ ಮಾಡುವ ಪೂಜೆಯೇ ನಿಜವಾದ ಧರ್ಮಾಚರಣೆ. ಇದನ್ನು ಬಸವಣ್ಣನವರು ಕೊಟ್ಟ ಸಂದೇಶ ಎಂದು ಗದಗದ ಯಡಿಯೂರು ಶ್ರೀ ತೊಂಟದರ್ಯ ಸಂಸ್ಥಾನ ಮಠದ ಮಠಾಧೀಶರಾದ ಶ್ರೀ ಡಾ. ತೊಂಟದ ಸಿದ್ದರಾಮ ಮಹಾಸ್ವಾಮೀಜಿ ತತ್ವಜ್ಞಾನ ಮಿಡಿದರು.
ನಗರದ ಹಾಸನಾಂಬ ಕಲಾಕ್ಷೇತ್ರ ಭಾನುವಾರ ಬಸವ ತತ್ವದ ನಾದದಿಂದ ಗರ್ಜಿಸಿ, ನಡೆದ ವಿಶ್ವಗುರು ಜಗಜ್ಯೋತಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮದಲ್ಲಿ ಮಹಾಸ್ವಾಮೀಜಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ ಸಾನಿದ್ಯ ವಹಿಸಿ ಮಾತನಾಡಿದ ಅವರು, ದೇಹವೆ ದೇಗುಲವಿದೆ. ಶಿರವೆ ಒಂದು ಕಳಸ, ಈ ಪ್ರಚಾರಕ್ಕಾಗಿಯೇ ಬಸವ ಸಂಸ್ಕೃತಿಯ ಅಧ್ಯಾಯನ ಹೊರಟಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ನಾವು ಹೆಚ್ಚೆಚ್ಚು ಪ್ರಚಾರ ಮಾಡಿದರೇ ನಮ್ಮ ಸಂಸ್ಕೃತಿ ಬಗ್ಗೆ ತಿಳಿಯುತ್ತದೆ. ದೇವಾಲಯಕ್ಕೆ ಹೋಗುವ ಸಂಖ್ಯೆ ಕಡಿಮೆ ಆಗಲು ನಾವು ಜಾಗೃತಿ ಮಾಡಬೇಕು ಎಂದು ಕಿವಿಮಾತು ಹೇಳಿದರು. ಮನೆ ಮನೆ ಒಳಗೆ ಜಾಗೃತಿ ಮಾಡುವ ಅವಶ್ಯಕತೆ ಇದೆ. ಲಷ್ಟ ಲಿಂಗವನ್ನು ಬಸವಣ್ಣನವರು ಕೊಟ್ಟಿದ್ದು, ಪೂಜಾರಿ ಪೂಜೆ ಮಾಡಿದರೇ ನಿಮಗೆ ಪ್ರಯೋಜನವಿಲ್ಲ. ನಾವು ಯಾವಾಗ ಬೇಕು ಅವಾಗ ಪೂಜೆ ಮಾಡಬಹುದು. “ಕೊರೋನಾ ಸಮಯದಲ್ಲಿ ಎಲ್ಲ ದೇವಾಲಯಗಳ ಬಾಗಿಲುಗಳು ಮುಚ್ಚಿದ್ದಾಗಲೂ, ಜನರ ಹೃದಯದಲ್ಲಿದ್ದ ಇಷ್ಟಲಿಂಗವೇ ತೆರೆದಿತ್ತು. ಬಸವಣ್ಣನವರ ದಾರಿ ಅದು ರಾಜ ಮತ್ತು ಸತ್ಯದ ಮಾರ್ಗವಾಗಿತ್ತು. ಸಮಾನಮಾಜವನ್ನು, ಸಮಾನತೆಯನ್ನು ಸ್ಥಾಪಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಮನುಷ್ಯರೆಲ್ಲರೂ ಒಂದೆ ಎಂಬುದರ ಸಂದೇಶ ಕೊಡಬೇಕಾಗಿತ್ತು. ಇದರಿಂದಲೇ ಜಾತಿ ಜಾತಿ ನಡುವೆ ಸಾಮರಸ್ಯ ಸಾಧಿಸಲು ಮುಂದಾದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸ್ವಾಮೀಜಿಗಳಿಗೆ ತತ್ವಸಂಬಂಧಿ ಹಲವಾರು ಪ್ರಶ್ನೆಗಳನ್ನು ಕೇಳಿದರು. “ಇಂದಿನ ಯುಗದಲ್ಲಿ ಬಸವಣ್ಣನವರ ಸಂದೇಶ ಹೇಗೆ ಪ್ರಸ್ತುತ?ಜಾತಿ ಭೇದ ನಿವಾರಣೆಗೆ ಏನು ಮಾಡಬೇಕು?” ಎಂಬಂತಹ ಪ್ರಶ್ನೆಗಳಿಗೆ ಸ್ವಾಮೀಜಿಗಳು ತಾಳ್ಮೆಯಿಂದ ಉತ್ತರಿಸಿ, ಸತ್ಯ ಮತ್ತು ಧರ್ಮದ ಮಾರ್ಗವೇ ಸಮಾಜಕ್ಕೆ ಬೆಳಕು ಎಂದು ತಿಳಿಸಿದರು.
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಅನುಭವ ಮಂಟಪವನ್ನು ೧೨ನೇ ಶತಮಾನದಲ್ಲಿ ದಯಪಾಲಿಸಿದವರು ಬಸವಣ್ಣನವರು. ಈ ಪ್ರಪಂಚದ ಜನಸಂಖ್ಯೆ ೮೫೦ ಕೋಟಿ ಇದ್ದು, ಅದರಲ್ಲಿ ಭಾರತದ ನಮ್ಮ ಜನಸಂಖ್ಯೆ ೧೫೦ ಕೋಟಿ ಇದೆ. ಒಂದು ಗಟ್ಟಿತನದ ಪ್ರಜಾಪ್ರಭುತ್ವ ಎಂಬುದು ತಳಹದಿಗೆ ಬಸವೇಶ್ವರರ ಆಶೀರ್ವಾದ ನಮ್ಮೆಲ್ಲರಿಗೂ ಕೂಡ ಅವಕಾಶವಾಗಿದೆ. ಶ್ರೀ ಮಠಗಳ ಆಶೀರ್ವಾದದಿಂದ ಧರ್ಮದ ಜಾಗೃತಿ, ಸಾಮಾಜಿಕ ಪ್ರಗತಿ ಆಗಿದ್ದು, ಶೈಕ್ಷಣಿಕ ಪ್ರಗತಿಯಾಗಿ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಹೋಗುತ್ತಿದೆ ಎಂದರೇ ಇಂತಹ ಪರಮಪೂಜ್ಯರ ಆಶೀರ್ವದದಿಂದ ಮಾತ್ರ ಎಂದರು. ಇಂತಹ ಮಹತ್ವವಾದದ ಕಾರ್ಯಕ್ರಮದಲ್ಲಿ ಸಂವಾದ ಕಾರ್ಯಕ್ರಮ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಬಸವೇಶ್ವರರ ಸಂದೇಶಗಳನ್ನ ತಿಳಿಸಬೇಕಾಗಿದ್ದು, ಶ್ರೀ ಬಸವೇಶ್ವರರ ಪುತ್ಥಳಿಯನ್ನು ಹಾಸನದಲ್ಲಿ ಕೂಡ ನಿರ್ಮಾಣ ಮಾಡಲು ಶಾಸಕರಾದ ಹೆಚ್.ಪಿ. ಸ್ವರೂಪ್ ಕೂಡ ಚಿಂತನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದಲ್ಲೂ ಕೂಡ ಪ್ರತಿಮೆ ನಿಮಾಣ ಮಾಡಲು ಮುಂದಾಗಿ ಅನಾವರಣ ಮಾಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ವಾಮೀಜಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಶಕ್ತಿ ಬಂದಂತಾಗಿದೆ. ಮಹಾಲಯ ಅಮಾವಸೆ ವಿಶೇಷ ದಿನದಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮದಲ್ಲಿ ಸಾವಿರಾರು ಜನರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಮಾಜದ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳಿಂದ ಕೇಳಿದ ಪ್ರತಿಯೊಂದು ಪ್ರಶ್ನೆಗೂ ಸ್ವಾಮೀಜಿಗಳಿಂದ ಬಂದ ಉತ್ತರ ಸಭಿಕರ ಮನಸ್ಸಿನಲ್ಲಿ ಸ್ಪೂರ್ತಿಯ ಅಲೆಗಳನ್ನು ಎಬ್ಬಿಸಿತು. ಇದಕ್ಕೆ ಮೊದಲು ಬಸವಣ್ಣನವರ ರಥ ಯಾತ್ರೆ ಆಗಮಿಸಿದಾಗ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಇದೆ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಸಾಣೇನಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಗುರುಬಸವ ಮಹಾಸ್ವಾಮೀಜಿ, ಶಿವಾನಂದ ಮಹಾಸ್ವಾಮೀಜಿ, ಜ್ಞಾನಪ್ರಭು ಸಿದ್ದರಾಮ ದೇಸಿ ಕೇಂದ್ರ ಮಹಾಸ್ವಾಮೀಜಿ, ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿ, ಪುಷ್ಪಗಿರಿ ಮಠದ ಶ್ರೋ ಸೋಮಶೇಖರ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಮಹಾಸ್ವಾಮೀಜಿ, ಶ್ರೀ ಜಯಚಂದ್ರಶೇಖರ ಮಹಾಸ್ವಾಮೀಜಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ನವೀಲೆ ಪರಮೇಶ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇತರರು ಉಪಸ್ಥಿತರಿದ್ದರು.
Hassan
ಎನ್ ಆರ್ ಸಂತೋಷ್ ಅವರಿಗೆ ಕ್ಷಮೆ ಕೇಳಲು ಸಿದ್ದ : ಅರಸೀಕೆರೆ ನಗರಸಭೆ ಅಧ್ಯಕ್ಷ ಸಮೀವುಲ್ಲಾ

ವರದಿ : ಹೇಮಂತ್ ಕುಮಾರ್ ಎಸಿ
ಅರಸೀಕೆರೆ: ನಾನು ಎನ್ ಆರ್ ಸಂತೋಷ್ ಅವರ ಬಗ್ಗೆ ಕೆಳಹಂತದ ಒಂದು ಪದವನ್ನು ಬಳಸಿರುವುದು ತಪ್ಪಾಗಿದೆ. ಅದಕ್ಕೆ ನಾನು ಕ್ಷಮೆಯಾಚಿಸಲು ಸಿದ್ಧ. ಅವರಿಗೆ ಯಾವುದೇ ” ಸಂದರ್ಭದಲ್ಲಿ ಆದರೂ ನಾನು ಕ್ಷಮೆ ಕೇಳಲು ಸಿದ್ದ ಎಂದು ನಗರಸಭೆ ಅಧ್ಯಕ್ಷ ಸಮೀವುಲ್ಲಾ ತಿಳಿಸಿದರು.
ಅವರು ಮಾತನಾಡಿ ನನಗೆ ವೀರಶೈವ ಸಮಾಜದ ಬಗ್ಗೆ ಗೌರವವಿದೆ ನನಗೆ ಎಲ್ಲಾ ಸಮಾಜದಲ್ಲೂ ಸಹ ವಿಶ್ವಾಸದ ಸ್ನೇಹಿತರಿದ್ದಾರೆ. ಆದ್ದರಿಂದ ನಾನು ಈ ಪದವನ್ನು ಬಳಸಿರುವುದು ತಪ್ಪಾಗಿದೆ ಎಂದು ನನಗೆ ಮನವರಿಕೆಯಾಗಿದ್ದು ನಾನು ಕ್ಷಮೆಯನ್ನು ಕೇಳಲು ಸಿದ್ಧನಾಗಿದ್ದೇನೆ ಆದರೆ ಎನ್. ಆರ್. ಸಂತೋಷ್ ರವರು ಮತ್ತು ಮಾಜಿ ಸಚಿವ ಈಶ್ವರಪ್ಪ ಅವರ ಆಪ್ತ ಸಹಾಯಕನ ನಡುವೆ ಒಂದು ಕೇಸ್ ದಾಖಲಾಗಿದ್ದು ಆ ಕೇಸ್ ಯಾವುದಕ್ಕೋಸ್ಕರ ದಾಖಲಾಗಿದೆ ಎಂದು ಎನ್ ಆರ್ ಸಂತೋಷ್ ಅವರು ಬಹಿರಂಗಪಡಿಸಿದರೆ ನಾನು ಅವರಿಗೆ ತಲೆಬಾಗಿ ಕೈಮುಗಿದು ಕ್ಷಮೆ ಕೇಳಿಕೊಳ್ಳಲು ಯಾವಾಗಲೂ ಸಿದ್ಧನಾಗಿದ್ದೇನೆ ಎಂದು ತಿಳಿಸಿದರು.
ಅಭಿವೃದ್ಧಿ ವಿಚಾರದಲ್ಲಿ ಅವರು ಏನೇ ಕೇಳಿದರೂ ನಾನು ಸದಾ ಅವರಿಗೆ ಮಾಹಿತಿಯನ್ನು ನೀಡಲು ಸಿದ್ಧ ಅವರು ಯಾವುದೇ ಅಭಿವೃದ್ಧಿ ಕೆಲಸ ಹೇಳಲಿ ಕೆಲಸವನ್ನು ಮಾಡಲು ನಾನು ಸಹಕರಿಸುತ್ತೇನೆ ಅವರು ಅದನ್ನು ಬಿಟ್ಟು ಸುಖಾ ಸುಮ್ಮನೆ ನಮ್ಮ ಶಾಸಕರ ಬಗ್ಗೆ ನಮ್ಮ ಬಗ್ಗೆ ಕೆಲವು ಪದಗಳನ್ನು ಬಳಸುತ್ತಾರೆ. ಆ ಪದಗಳನ್ನು ಬಳಸುವುದನ್ನು ಅವರು ನಿಲ್ಲಿಸಲಿ ನಾವು ನಿಲ್ಲಿಸುತ್ತೇವೆ.
ಇಲ್ಲಿಗೆ ಇದರ ಬಗ್ಗೆ ನಾವು ಯಾವುದೇ ರೀತಿಯ ದ್ವೇಷದ ರಾಜಕಾರಣವನ್ನು ಮುಂದುವರಿಸಿಕೊಂಡು ಹೋಗುವುದು ಬೇಡ ಇಲ್ಲಿಗೆ ಇದನ್ನು ನಿಲ್ಲಿಸಿ ಬಿಡೋಣ.
ಎನ್ ಆರ್ ಸಂತೋಷ್ ಅವರು ನಮಗೆ ಫೋನ್ ಕರೆ ಮಾಡಿ ಕೇಳಿದರು ನಮ್ಮ ಬಗ್ಗೆ ವೈಯಕ್ತಿಕವಾಗಿ ಮತ್ತು ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದೀರಿ.
ಎಂದು ನಾನು ಯಾವುದೇ ರೀತಿ ನಿಮ್ಮ ಕುಟುಂಬದ ಬಗ್ಗೆ ನಾವು ಮಾತನಾಡಿಲ್ಲ ಯಾವುದೇ ಅಂತಹ ಹೇಳಿಕೆ ಇದ್ದರೆ ನನಗೆ ತಿಳಿಸಿ ನಾನು ಅದರ ಬಗ್ಗೆ ಸ್ಪಷ್ಟಿಕರಣ ಕೊಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದೇನೆ.ಅಭಿವೃದ್ಧಿ ಕೆಲಸದಲ್ಲಿ ಅರಸಿಕೆರೆಯಲ್ಲಿ ನಗರಸಭೆ ಅಧ್ಯಕ್ಷನಾಗಿ ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ ಯಾವುದೇ ಕೆಲಸಗಳನ್ನು ನಾವು ಮಾಡಲಿಲ್ಲ ಎಂದರೆ ಅಭಿವೃದ್ಧಿ ಮಾಡಿಲ್ಲ ಎಂದರೆ ಅವರು ನಮ್ಮನ್ನು ಪ್ರಶ್ನಿಸಲಿ ಅವರು ನಮ್ಮ ನಗರಸಭಾ ಕಚೇರಿಗೆ ಬಂದು ಕೇಳಲಿ ಯಾವುದೇ ಅಭಿವೃದ್ಧಿ ಕೆಲಸ ಕೇಳಿದರು ನಾವು ಮಾಡಲು ಸಿದ್ಧ.
ಅದನ್ನು ಬಿಟ್ಟು ಬೇರೆ ಮೂಲಕ ಹೇಳಿಕೆ ಕೊಡಿಸುವುದು ವಿಚಾರ ಈ ರೀತಿ ಹಿಂಬಾಲಕರ
ಸರಿಯಲ್ಲ ಇದರ ಬಗ್ಗೆ ನಮಗೂ ಬೇಜಾರಾಗುತ್ತದೆ ಆದ್ದರಿಂದ ಇದನ್ನು ಬಿಡಬೇಕು ನಾವು ಸಹ ಮುಂದುವರೆಸಿಕೊಂಡು ಹೋಗುವುದಿಲ್ಲ ಎಂದರು.
ಎಲ್ಲಾ ಸಮಾಜದವರ ಬಗ್ಗೆ ನನಗೆ ಕಾಳಜಿ ಇದೆ ಹಾಗಾಗಿ ನಾನು ಅಭಿವೃದ್ಧಿಪರ ಕೆಲಸಗಳಿಗೆ ಮಾತ್ರ ಹೆಚ್ಚಾಗಿ ಹೊತ್ತನ್ನು ನೀಡುತ್ತೇನೆ. ಎಲ್ಲಾ ಹೆಣ್ಣುಮಕ್ಕಳ ಬಗ್ಗೆ ಇಲ್ಲಸಲ್ಲದ ಮಾತನಾಡುವುದು. ಅವರ ಹಿಂಬಾಲಕರಿಂದ ಕೆಲವು ಪದಗಳನ್ನು ಬಳಸುವುದು ಇದು ಸಮಂಜಸವಲ್ಲ.ಈ ಪದಬಳಕೆಯಿಂದ ಸುಮ್ಮನೆ ಹೆಣ್ಣುಮಕ್ಕಳಿಗೆ ಅವಮಾನ ತರುವಂತ ಕೆಲಸವನ್ನು ಮಾಡಬಾರದು.
ನಮ್ಮ ಶಾಸಕರಿಗೆ ರಾಗಿಕಳ್ಳ ಮನೆಕಳ್ಳ ಎಂದು ಯಾವಾಗಲೂ ಹೇಳುತ್ತಿರುತ್ತಾರೆ ಇದನ್ನು ಸಹ ಅವರು ನಿಲ್ಲಿಸಬೇಕು.
ಎಲ್ಲದಕ್ಕೂ ಸಮಾಜವನ್ನು ಮುಂದೆ ತರುತ್ತಾರೆ. ಸಮಾಜವನ್ನು ಮುಂದೆ ತರಬಾರದು ಯಾವುದೇ ಕೆಲಸ ಮಾಡಬೇಕಾದರೂ ನಾವು ರಾಜಕೀಯ ಮಾಡಬೇಕಾದರೂ ವೈಯಕ್ತಿಕವಾಗಿ ಮಾಡಿಕೊಳ್ಳೋಣ ನಮ್ಮ ಸಮಾಜದವರು ನಮಗೆ ಬೈದಾಗ ಯಾರಾದರೂ ಬಂದು
ನಿಮ್ಮನ್ನು ಪ್ರಶ್ನಿಸಿದ್ದಾರೆಯೇ ನೀವು ಮಾತ್ರ ಯಾಕೆ ಎಲ್ಲದಕ್ಕೂ ಸಮಾಜವನ್ನು ಮುಂದೆ ತರುತ್ತೀರಾ ಎಂದು ಪ್ರಶ್ನೆ ಮಾಡಿದರು.
ಬ್ಯಾಡರಹಳ್ಳಿ ಜಯರಾಮ ಮತ್ತು ಅಜಯ್ ಅವರು ಮತ್ತು ಕಾಟಿಕೆರೆ ಮೋಹನ್ ಅವರು ನಗ ರಸಭಾ ಮಾಜಿ ಅಧ್ಯಕ್ಷರಾದ ಗಿರೀಶ್ ಅವರು ನಮ್ಮ ಬಗ್ಗೆ ಮಾತನಾಡಿದ್ದಾರೆ
ನಮಗೆ ಅದರ ಬಗ್ಗೆ ಬೇಸರ ತಂದಿದೆ ಈ ತರ ಮಾತನ್ನು ಅವರು ಆಡಬಾರದು ಅವರು ಈ ರೀತಿಯ ಪದಗಳನ್ನು ಬಳಸುವುದನ್ನು ನಿಲ್ಲಿಸಬೇಕು.
ಸಂತೋಷ್ ಅವರ ಹಿಂಬಾಲಕರು ಈ ರೀತಿಯ ಹೇಳಿಕೆ ನೀಡಿ ನೀಡಿ ಅರಸಿಕೆರೆಯ ಜನತೆಗೆ ಸುಮ್ಮನೆ ಪ್ರಚೋದನೆ ಮಾಡಿದಂತೆ ಆಗುತ್ತದೆ ಇನ್ನೂ ಮುಂದೆ ಯಾರು ಸಹ ಈ ರೀತಿ ಮಾಡಬಾರದು ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ದರ್ಶನ್, ರಾಜಶೇಖರ್, ಯುವರಾಜ್, ಅವಿನಾಶ್, ಮುಖಂಡರಾದ ಮಲ್ಲಿಕಾರ್ಜುನ್, ವಟ್ಸ್ ಬೋರ್ಡ್ ಅಧ್ಯಕ್ಷ ಸಯ್ಯದ್
-
Mandya21 hours ago
ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಕುರಿತು ವರದಿ ಸಲ್ಲಿಸಿ: ಆಶಿತ್ ಮೋಹನ್ ಪ್ರಸಾದ್
-
Hassan22 hours ago
19 ನೇ ವಾರ್ಡ್ ಅರಳೇಪೇಟೆ ನಿವಾಸಿಗಳಿಂದ ಪ್ರಸಾದ ವಿತರಣೆ
-
Manglore20 hours ago
ಧರ್ಮಸ್ಥಳದಲ್ಲಿ ರುದ್ರಪಾರಾಯಣ
-
Kodagu21 hours ago
ಕೊಡವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ : ಬಿಜೆಪಿ ಮನವಿ
-
Mysore18 hours ago
ಜಾತಿ ಗಣತಿ ಸಮೀಕ್ಷೆಯಲ್ಲಿ ಗೆಜ್ಜಗಾರರೆಂದು ನಮೂದಿಸಿ : ಗೋಳೂರು ಸ್ನೇಕ್ ಬಸವರಾಜು ಮನವಿ
-
Hassan3 hours ago
ಎನ್ ಆರ್ ಸಂತೋಷ್ ಅವರಿಗೆ ಕ್ಷಮೆ ಕೇಳಲು ಸಿದ್ದ : ಅರಸೀಕೆರೆ ನಗರಸಭೆ ಅಧ್ಯಕ್ಷ ಸಮೀವುಲ್ಲಾ
-
Chikmagalur20 hours ago
ಅರಣ್ಯ ಇಲಾಖೆಯಿಂದ ಬೈಕ್ಗಳ ಮುಟ್ಟುಗೋಲಿಗೆ ಕ್ರಮ
-
State16 hours ago
ಅನಗತ್ಯವಿರುವ ಅಂಶಗಳನ್ನು ತೆಗೆದುಹಾಕಲು ಹಿಂದುಳಿದ ವರ್ಗಗಳ ಆಯೋಗವೇ ನಿರ್ಧರಿಸುತ್ತದೆ: ಸಿಎಂ ಸಿದ್ದರಾಮಯ್ಯ