Connect with us

Hassan

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ

Published

on

ಹಾಸನ : ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಬಾಲಕಿಯರ ಪ್ರೌಢಶಾಲೆ ಶಾಲೆಯ ಎ ಸೆಕ್ಷನ್‌ ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ,  4×100 ರಿಲೇ ದ್ವಿತೀಯ ಸ್ಥಾನ, ಹೈ ಜಂಪ್ ನಲ್ಲಿ ಪ್ರಥಮ ಸ್ಥಾನ , ವಾಕಿಂಗ್ ರೇಸ್ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಸಂತ ಫಿಲೋಮಿನಾ ಬಾಲಕಿಯರ ಪ್ರೌಢಶಾಲಾ ತಂಡವು 30 ಅಂಕಗಳೊಂದಿಗೆ ಕ್ರೀಡಾಕೂಟದ ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ ಅದೇ ರೀತಿ ನಮ್ಮ ಶಾಲೆಯ ಬಾಸ್ಕೆಟ್ ಬಾಲ್ ತಂಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಸ್ಕೆಟ್ ಬಾಲ್ ನಲ್ಲಿ ಪ್ರಥಮ ಸ್ಥಾನವನ್ನು.

ಕರಾಟೆ ತಂಡವು ಅರಕಲಗೂಡಿನಲ್ಲಿ ನಡೆದಂತ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಸಂತ ಫಿಲೋಮಿನಾ ಬಾಲಕಿಯರ ಪ್ರೌಢಶಾಲೆ 2025- 26ನೇ ಸಾಲಿನಲ್ಲಿ ಕ್ರೀಡೆಯಲ್ಲಿ ತನ್ನದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ತಿಳಿಸಲು ತುಂಬಾ ಹರ್ಷದಾಯಕವಾಗಿದೆ

Continue Reading

Hassan

ರೈಲ್ವೆ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ

Published

on

ಹಾಸನ: ನಗರದ ರಾಜಘಟ್ಟದಲ್ಲಿ ರೈಲ್ವೆ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿದರು.
ರಾಜಘಟ್ಟ, ಗವೇನಹಳ್ಳಿ ಸೇರಿದಂತೆ ಸುತ್ತಲಿನ ಬಡಾವಣೆಗಳಿಗೆ ಸಂಪರ್ಕಿಸುವ ರಸ್ತೆಗೆ ತೊಂದರೆ ಆಗುವ ರೀತಿಯಲ್ಲಿ ರೈಲ್ವೆ ಇಲಾಖೆ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿದ್ದರು.


ಈ ಹಿನ್ನೆಲೆಯಲ್ಲಿ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದ ಸಂಸದರು,ಈ ಬಗ್ಗೆ ಈಗಾಗಲೇ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನಾಳೆಯೇ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ತೊಂದರೆ ಆಗುವ ಯಾವುದೇ ಕೆಲಸವನ್ನು ಮುಂದುವರಿಸಲು ಬಿಡುವುದಿಲ್ಲ‌ ಎಂದು ಭರವಸೆ ನೀಡಿದ ಶ್ರೇಯಸ್, ಸ್ಥಳೀಯರು ಆತಂಕಕ್ಕೆ ಒಳಗಾಗದೆ ನಿರ್ಭೀತಿಯಿಂದ ಇರುವಂತೆ ಧೈರ್ಯ ತುಂಬಿದರು.

Continue Reading

Hassan

ಇಸ್ಪೀಟ್ ಅಡ್ಡೆ ಮೇಲೆ ಡಿಸಿಆರ್‌ಬಿ ಪೊಲೀಸರ ದಾಳಿ

Published

on

ಹಾಸನದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಡಿಸಿಆರ್‌ಬಿ ಪೊಲೀಸರ ದಾಳಿ – 11 ಮಂದಿ ಬಂಧನ, 19.99 ಲಕ್ಷ ನಗದು ವಶ

ಹಾಸನ ನಗರದಲ್ಲಿ ಜೂಜಾಟ ಅಡ್ಡೆ ಮೇಲೆ ಡಿಸಿಆರ್‌ಬಿ ಪೊಲೀಸರು ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ ಪೆನ್‌ಷನ್‌ಮೊಹಲ್ಲಾದ ಹುಣಸಿನಕೆರೆ ಕೋಡಿಯಲ್ಲಿರುವ ಅಡ್ಡೆಯಲ್ಲಿ ಜೂಜಾಟ ನಡೆಯುತ್ತಿತ್ತು. ಈ ವೇಳೆ ಡಿಸಿಆರ್‌ಬಿ ಇನ್ಸ್‌ಪೆಕ್ಟರ್ ವಿನಯ್‌ಕುಮಾರ್ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು.

ಕಾರ್ಯಾಚರಣೆಯಲ್ಲಿ 19,99,680 ರೂ. ನಗದು ಹಾಗೂ ಜೂಜಾಡುತ್ತಿದ್ದ 11 ಮಂದಿಗಳನ್ನು ಬಂಧಿಸಲಾಗಿದೆ.

ಬಂಧಿತರು: ತಮ್ಮಯ್ಯ, ಜಿತೇಂದ್ರ, ಜಲೇಂದ್ರ, ವಿಜಯಕುಮಾರ, ಶಾಂತಪ್ಪ, ಶಶಿಕುಮಾರ, ಅಶೋಕ, ಸರ್ವರ್‌ಖಾನ್, ಸುಮನ್, ಕುಮಾರ್.

ದಾಳಿಯ ವೇಳೆ ಕೆಲವು ಮಂದಿ ಹಣದೊಂದಿಗೆ ಪರಾರಿಯಾಗಲು ಯತ್ನಿಸಿದರೂ, 11 ಜನರನ್ನು ಸ್ಥಳದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡಿಸಿಆರ್‌ಬಿ ಪೊಲೀಸರು ಬಂಧಿತರಿಗೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Continue Reading

Hassan

ತವರು ಮನೆಗೆ ಮಗಳ ಕರೆದೊಯ್ದಿದ್ದಕ್ಕೆ ಅತ್ತೆಯ ಕೊ*ಲೆ

Published

on

ಹಾಸನ: ಅತ್ತೆಯನ್ನೆ ಕೊಂದ
ಅಳಿಯ

ತವರು ಮನೆಗೆ ಮಗಳ ಕರೆದೊಯ್ದಿದ್ದಕ್ಕೆ ಅತ್ತೆಯ ಕೊಲೆ

ಫೈರೋಜಾ (58) ಕೊಲೆಯಾದ ಅತ್ತೆ

ಹಾಸನ ಜಿಲ್ಲೆ ರಾಮನಾಥಪುರದಲ್ಲಿ ಘಟನೆ

ಪತಿ- ಪತ್ನಿ ನಡುವೆ ಆಗಾಗ್ಗೆ ನಡೆಯುತ್ತಿದ್ದ ಜಗಳ

ಅಳಿಯ ಕೊಡುತ್ತಿದ್ದ ಕಿರುಕುಳ ಸಹಿಸದೆ ಮಗಳನ್ನು ಮನೆಗೆ ಕರೆದೊಯ್ದಿದ್ದ ತಾಯಿ

ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ ಪತಿ

ರಸುಲ್ಲಾ, ಅತ್ತೆ ಕೊಂದಿರೋ ಅಳಿಯ

ಫೈರೋಜಾ ಮಗಳು ಶೆಮಿನಾ ಭಾನುಳನ್ನು ಮದುವೆಯಾಗಿದ್ದ ರಸುಲ್ಲಾ

10 ವರ್ಷದ ಹಿಂದೆ ರಸುಲ್ಲಾ- ಶೆಮಿನಾ ಭಾನು ಮದುವೆಯಾಗಿತ್ತು

ರಾಮನಾಥಪುರದ ಶೆಮಿನಾಳನ್ನು ಬೆಟ್ಟದಪುರದ ರಸುಲ್ಲಾ ಜೊತೆ ಮದುವೆ ಮಾಡಿಕೊಡಲಾಗಿತ್ತು

ವಿವಾಹವಾಗಿ 10 ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ

ನಿನ್ನೆ ಬೆಳಗ್ಗೆ ಮಗಳನ್ನು ಬೆಟ್ಟದ ಪುರದಿಂದ ರಾಮನಾಥಪುರಕ್ಕೆ ಕರೆದುಕೊಂಡು ಬಂದಿದ್ದ ತಾಯಿ ಫೈರೋಜಾ

ನಿನ್ನೆ ಸಂಜೆ ಮನೆಗೆ ಬಂದು ಗಲಾಟೆ ಮಾಡಿದ್ದ ಅಳಿಯ

ಅತ್ತೆಯ ಮೇಲೆ ಸಿಟ್ಟಾಗಿ ಚಾಕುವಿನಿಂದ ಇರಿದು ಕೊಲೆ

ಪತ್ನಿ ಗೂ ಹಲ್ಲೆ ಮಾಡಿದ್ದ ಪತಿ

ಅತ್ತೆ ಕೊಂದು ಎಸ್ಕೇಪ್ ಆಗಿರೋ ಅಳಿಯ

ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Continue Reading

Trending

error: Content is protected !!