Chikmagalur
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು : ಸಚಿವ ಸಂತೋಷ್ ಲಾಡ್

ಚಿಕ್ಕಮಗಳೂರು : ಜಾತಿಗಣತಿ ಮಾಡ್ತೀವಿ ಅಂತ ಹೇಳೀದ್ದು ಕೇಂದ್ರ ಸರ್ಕಾರ
ಪೆಹಲ್ಗಾಮ್ ದಾಳಿ, ವೋಟ್ ಚೋರಿ ಆರಂಭವಾದಾಗ ಜನರಿಗೆ ದಾರಿ ತಪ್ಪಿಸಲು ಯತ್ನಿಸಿದ್ದರು
ರಾತ್ರಿ ಮಲಗಿದ್ದವರಿಗೆ ಎಚ್ಚರವಾದಾಗ ಎದ್ದು ಬಂದು ನಾವು ಓಬಿಸಿ ಜಾತಿಗಣತಿ ಮಾಡ್ತೀವಿ ಎಂದ್ರು
ಚಿಕ್ಕಮಗಳೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು
ಬಹಳಷ್ಟು ಜನ ಜಾತಿ ಗಣತಿ ಅಂತಾರೆ, ಶೈಕ್ಷಣಿಕವಾಗಿ ಹೋದಾಗ ಅದೊಂದು ಪ್ಯಾರಾಮೀಟರ್
೬೦ ರಲ್ಲಿ 58 ಪ್ಯಾರಾಮೀಟರ್ ಬಿಟ್ಟಿದ್ದಾರೆ, ನೀವೆಲ್ಲಾ ಜಾತಿಗಣತಿ ಅಂತೀರಾ, ಜಾತಿಗಣತಿ ಅಲ್ಲ
ಓಬಿಸಿ ಜಾತಿಗಣತಿ ಮಾಡ್ತೀವಿ ಎಂದಿದ್ದು ಕೇಂದ್ರ ಸರ್ಕಾರ, ಆಗ ಅವ್ರು ಯಾವ ಜಾತಿಯನ್ನೂ ಒಡೆಯಲಿಲ್ಲ
ಕೇಂದ್ರ ಸರ್ಕಾರ ಆಲ್ ಓವರ್ ಇಂಡಿಯಾ ಮಾಡೋದು ಜಾತಿ ಹೊಡೆತ ಅಲ್ಲ, ನಾವು ಮಾಡಿದ್ರೆ ಜಾತಿ ಹೊಡೆತ
ಕಾಂಗ್ರೆಸ್ ಇರುವಲ್ಲಿ ಕಾಲು ಕರೆದು ಜಗಳ ಮಾಡಲು ಮುಂದಾಗ್ತಾರೆ, ಈಗ ಎಲ್ಲಾ ಮುಚ್ಕಂಡ್ ಹೋಗಬೇಕಲ್ವಾ
ಕಾಂಗ್ರೆಸ್ಸಿಗರಿಗೆ ತೊಂದರೆ ಕೊಡುವುದು ಬಿಟ್ಟರೆ ಬೇರೆ ಏನಿದೆ ಹೇಳಿ
ಚಿಕ್ಕಮಗಳೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ
Chikmagalur
ಕಡೂರು: 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿದುಷಿ ಡಾ. ಪಿ. ಹೆಚ್. ವಿಜಯಲಕ್ಷ್ಮೀ ಆಯ್ಕೆ

ಕಡೂರು: ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಟೋಬರ್. 12ರ ಭಾನುವಾರದಂದು ದೊಡ್ಡ ಪಟ್ಟಣಗೆರೆ ಗ್ರಾಮದ ಕಟ್ಟೇ ಹೊಳೆಯಮ್ಮ ಜಾತ್ರಾ ಮೈದಾನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಚಿಕ್ಕನಲ್ಲೂರು ಎಸ್. ಪರಮೇಶ್ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರಾಗಿ ವಿದುಷಿ ಡಾ. ಪಿ. ಹೆಚ್. ವಿಜಯಲಕ್ಷ್ಮಿ ಅವರು ಸರ್ವಾನು ಮತದಿಂದ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ವಿದುಷಿ ಡಾ. ಪಿ. ಹೆಚ್. ವಿಜಯಲಕ್ಷ್ಮಿ ಅವರು ಕಡೂರು ತಾಲೂಕಿನ ಪಂಚೆ ಹೊಸಹಳ್ಳಿ ಕುಗ್ರಾಮದ ವರಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಪಂಚೆಹೊಸಹಳ್ಳಿಯಲ್ಲೂ ಪ್ರೌಢ ಶಿಕ್ಷಣವನ್ನು ಸಿರಿಗೆರೆ ಮಠದಲ್ಲಿ ಹಾಗೂ ಮೈಸೂರಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಸಂಸ್ಕೃತ ನಾಥಕೋತರ ಪದವಿಯನ್ನು ಪಡೆದು ವೇದಕಾಲೀನ ಸ್ತ್ರೀ ಒಂದು ಅಧ್ಯಯನ ಎಂಬ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಮೈಸೂರಿನ ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ವೇದಕಾಲೀನ ಸ್ತ್ರೀ, ಗಾಂಧೀಜಿ ಮತ್ತು ಅಧ್ಯಾತ್ಮ ಗಾಂಧೀಜಿಯವರ ಜೀವನದಲ್ಲಿ ಪಂಚಶೀಲಗಳು ನೆನಪಿರಲಿದಾಗ ಅವನ ಸಂಕಲನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಐವತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳ ಪ್ರಕಟಣೆಗೊಂಡಿವೆ.
ಇವರಿಗೆ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳು ಲಭಿಸಿವೆ, ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ರಾಜ್ಯ ಸರ್ವ ಜನ ಮಹಿಳಾ ಹಿತ ರಕ್ಷಣಾ ವೇದಿಕೆಯಿಂದ ಶಿಕ್ಷಣ ರತ್ನ ಪ್ರಶಸ್ತಿ, ವೆಂಕಟಗಿರಿ ಪ್ರಕಾಶನದಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಅತ್ಯುತ್ತಮ ಸಂಶೋಧನಾ ಪ್ರಬಂಧ ಎನ್ನುವ ಗ್ರಂಥ ಪುರಸ್ಕಾರ, ಕಡೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸೇರಿ ಪ್ರಶಸ್ತಿ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ ಎಂದು ಅವರು ತಿಳಿಸಿದರು.
Chikmagalur
ವಿಶ್ವದೆದುರು ಭಾರತವು ಮೂರನೇ ಆರ್ಥಿಕ ಶಕ್ತಿಯಾಗಿದೆ : ಸಿ.ಟಿ. ರವಿ

ಚಿಕ್ಕಮಗಳೂರು: ವಿಶ್ವದೆದುರು ಭಾರತ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊ ಮ್ಮಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ, ಜನಪರ ಯೋಜನೆಗಳು ಯಶಸ್ವಿಗೊಂಡಿರುವ ಕಾರಣ ಭವಿಷ್ಯದಲ್ಲಿ ಭಾರತವು ವಿಶ್ವಗುರುವಾಗಲಿದೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಲಕ್ಷ್ಮೀಶನಗರದಲ್ಲಿ ಬಿಜೆಪಿ ಯುವಮೋರ್ಚಾದ ನಗರ ಮಂಡಲದಿಂದ ಸೋಮವಾರ ಆ ಯೋಜಿಸಿದ್ಧ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ಶಿಬಿ ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿಗಳ ಜನ್ಮದಿನದಂದು ವೈದ್ಯಕೀಯ ಶಿಬಿರ, ಸ್ವಚ್ಚತಾ ಆಂದೋಲನವೆಂಬ ಸೇವಾ ಯಜ್ಞದಲ್ಲಿ ನಾ ವೆಲ್ಲರೂ ತೊಡಗಿಸಿಕೊಳ್ಳಬೇಕು. ಸ್ವತಃ ಪ್ರಧಾನಿಗಳೇ ತಾವು ಪ್ರಧಾನಿಯಲ್ಲ. 140 ಕೋಟಿ ಜನರ ಪ್ರಧಾನ ಸೇವಕನೆಂದು ಹೇಳಿದ್ದಾರೆ. ಹಾಗಾಗಿಯೇ ಮೊದಲ ಬಾರಿ ಪ್ರಧಾನಿಯಾದ ಮೋದಿ ಸಂವಿಧಾನ ಪುಸ್ತಕ ಹಾ ಗೂ ಪ್ರಜಾಪ್ರಭುತ್ವದ ದೇಗುಲ ಸಂಸತ್‌ನ್ನು ನಮಸ್ಕರಿಸಿ ಮುನ್ನೆಡೆದರು ಎಂದರು.
ಹನ್ನೊಂದು ವರ್ಷ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ನರೇಂದ್ರ ಮೋದಿಯವರು ಜಗತ್ತಿ ನ ಮುಂದೆ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಬಡವರ ಕಲ್ಯಾಣದ ಯೋಜನೆಯ ಹಣವನ್ನು ಮದ್ಯ ವರ್ತಿಗಳಿಂದ ತಪ್ಪಿಸಿ ಪ್ರಾಮಾಣಿಕವಾಗಿ ಖಾತೆಗೆ ಜಮೆಗೊಳಿಸುವ ಕಾರ್ಯಕ್ಕೆ ಮುನ್ನುಡಿ ಬರೆದವರು ಎಂದರು.
ದೇಶದ ಬಡವ, ಮದ್ಯಮ, ಶೋಷಿತ ವರ್ಗದವರಿಗೆ ಉಜ್ವಲ ಯೋಜನೆಯಡಿ ಶೇ. 90 ಮಂದಿಗೆ ಗ್ಯಾ ಸ್ ಸೌಲಭ್ಯ, ಇನ್ಸೂರೆನ್ಸ್ ಯೋಜನೆ, ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಆಯುಷ್ಮಾನ್ ಯೋಜನೆಯಡಿ 5 ಲಕ್ಷ ರೂ. ಉಚಿತ ಚಿಕಿತ್ಸೆ, ವಿಶ್ವಕರ್ಮ ಯೋಜನೆಯಡಿ ಶೇ.90 ವಿವಿಧ ಸೌಲಭ್ಯವನ್ನು ಜಾರಿಗೊಳಿಸಿ ಹೊಸ ಬದ ಲಾವಣೆಯ ಅಲೆಯನ್ನು ಮೋದಿ ಸರ್ಕಾರ ಬೀಸುತ್ತಿದೆ ಎಂದು ಹೇಳಿದರು.
ಚೀನಾ ಹಾಗೂ ಅಮೇರಿಕಾದಂಥ ಬಲಾಡ್ಯ ದೇಶವನ್ನು ಹಿಂದಿಕ್ಕಲು ಪ್ರತಿ ಭಾರತೀಯರು ದುಡಿಯು ವ ಮೂಲಕ ಉತ್ಪಾದಕ ರಾಷ್ಟ್ರವಾದರೆ ವಿಶ್ವದೆದುರು ಭಾರತವು ಮೊದಲ ಸ್ಥಾನ ಪಡೆದುಕೊಳ್ಳಲಿದೆ. ಇಂದಿ ಗೂ ಪ್ರಪಂಚದ ಅನೇಕ ದೇಶದ ಪ್ರಧಾನಿಗಳು ಮೋದಿಯವರೊಂದಿಗೆ ಸೆಲ್ಪಿ ಕಿಕ್ಲಿಸಿಕೊಳ್ಳಲು ವ್ಯಕ್ತಿತ್ವ ಹಾಗೂ ಕಾರ್ಯವೈಖರಿಯೇ ಮೂಲ ಕಾರಣವಾಗಿದೆ ಎಂದು ತಿಳಿಸಿದರು.
ದೇಶದ ನಾಗರೀಕ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವ ಮೋದಿಯವರು ಒಂದೇ ಒಂದು ರಜೆವ ನ್ನು ಮಾಡದೇ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೇ ಇಂದಿಗೂ ಪ್ರಧಾನಿಗಳು ಪ್ರಪಂಚದ ಯಾವುದೇ ದೇಶಕ್ಕೆ ತೆರಳಿದರೂ ಭಾರತ್ ಮಾತಾಕೀ ಜೈ ಎಂಬ ಘೋಷಣೆಗಳು, ಮೋದಿ ಮೋದಿ ಎಂಬ ಅಭಿಮಾನ ಕೂಗುಗಳು ಕೇಳಿಬರುತ್ತಿವೆ ಎಂದು ತಿಳಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ ಸೆ.೧೭ ರಿಂದ ಆರಂಭ ಗೊಂಡ ಸೇವಾ ಪಾಕ್ಷಿಕ ಅಭಿಯಾನವು ಆರು ಕಡೆಗಳಲ್ಲಿ ರಕ್ತದಾನ ಶಿಬಿರ, ಎರಡು ಕಡೆ ಆರೋಗ್ಯ ಶಿಬಿರ ಆಯೋಜಿಸುವ ಮುಖೇನಾ ಮೋದಿಯವರ ಜನ್ಮದಿನವನ್ನು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಗುಜರಾತಿನ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಮೋದಿಯವರ ರಾಜಕಾರಣದಲ್ಲಿ ಒಂದೇ ಒಂದು ಕಪ್ಪುಚುಕ್ಕೆಯಿಲ್ಲ. ಭ್ರಷ್ಟಚಾರದ ಆರೋಪವಿಲ್ಲದೇ, ಜನಪ್ರಿಯ ಪ್ರಧಾನ ಸೇ ವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದೆ ಭಾರತವು ವಿಶ್ವದ ನಂ.೧ ಆರ್ಥಿಕ ಶಕ್ತಿಯಾಗಿ ಹೊರಹೊ ಮ್ಮಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ಜೀವನ್ ರಂಗನಾಥ್ ಜನಸಾಮಾನ್ಯರ ಆರೋಗ್ಯ ಸುಧಾರಿಸಲು, ಅವಶ್ಯವಿರುವ ರಕ್ತದಾನಿಗಳಿಗೆ ನೆರವಾಗಲು ಶಿಬಿರ ವನ್ನು ಮೋದಿಯವರ ಜನ್ಮದಿನದಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ನಗರಸಭೆ ಸದಸ್ಯರಾದ ಕವಿತಾ ಶೇಖರ್, ಗೋಪಿ, ಮುಖಂಡರುಗಳಾದ ಪಾಂಡುರಂಗ, ಬಿ.ಸಿ.ಪುನೀತ್, ಪಾರ್ಥೀಬ ನ್, ಕಿಶೋರ್, ತಿಲಕ್, ಪುನೀತ್ ದೇವಾಂಗ, ಎಸ್‌ಡಿಎಂ ಮಂಜು, ಜಗದೀಶ್ ಮತ್ತಿತರರಿದ್ದರು.
Chikmagalur
ಬಿದಿರು ಕಡಿದು ಕಳ್ಳಸಾಗಣೆ: ಇಬ್ಬರ ಬಂಧನ

ಚಿಕ್ಕಮಗಳೂರು: ಪ್ರಾದೇಶಿಕ ವಲಯದ, ಉದ್ದೇಬೋರನಹಳ್ಳಿ ಶಾಖೆಯ, ಉದ್ದೇಬೋರನಹಳ್ಳಿ ಗಸ್ತಿನ, ಹಿರೇಬಿದರೆ ವ್ಯಾಪ್ತಿಯ ಕಾಮೇನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಹಸಿರು ಬಿದಿರು ಕಡಿದು ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಉಪ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಬಿದಿರು ಕಡಿದು ಟಾಟಾ ಇಂಟ್ರ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿರುವಾಗ, ಖಚಿತ ಮಾಹಿತಿ ಮೇರೆಗೆ ಅಲ್ಲಿನ ಉಪ ವಲಯ ಅರಣ್ಯಧಿಕಾರಿ ನಾರಾಯಣ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ, ಕರಿಸಿದ್ದನಹಳ್ಳಿ ಗ್ರಾಮದ ಬಳಿ ಬಿದಿರು ಗೂಟಗಳನ್ನು ತುಂಬಿದ ವಾಹನವನ್ನು ಅಡ್ಡಗಟ್ಟಿ ಬಿದಿರು ಸಮೇತ ವಶಕ್ಕೆ ಪಡೆಯಲಾಗಿದೆ.
ಹಿರೇಬಿದರೆ ಗ್ರಾಮದ ಪ್ರಸನ್ನ ಹಾಗೂ ಮದನ್ ಎಂಬುವವರನ್ನು ಬಂಧಿಸಿ, ಅರಣ್ಯ ಮೊಕದ್ದಮ್ಮೆ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಎಸಿಫ್ ಮೋಹನ್, ವಲಯ ಅರಣ್ಯಾಧಿಕಾರಿ ತನುಜ್ ಕುಮಾರ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿಗಳಾದ ಅರಣ್ಯ ಪಾಲಕ ಗಣೇಶ ,ಅರಣ್ಯ ವೀಕ್ಷಕರಾದ ದೂತೇಶ್ ಗೌಡ, ಅಶೋಕ್, ನವೀನ್ ಪಾಲ್ಗೊಂಡಿದ್ದರು.
-
Mysore2 hours ago
ವಾಸುದೇವಾಚಾರ್ಯ ಸ್ಮರಣಾರ್ಥ ಸರ್ಕಾರಿ ಕಾರ್ಯಕ್ರಮ: ಶಾಸಕ ಶ್ರೀವತ್ಸ ಮನವಿಗೆ ಸಿಎಂ ಸ್ಪಂದನೆ
-
Chamarajanagar4 hours ago
ಚಾರ್ಮಾಡಿ ಘಾಟಿಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ
-
Hassan19 hours ago
ಶ್ರೀ ತಿರುಮಲ ರಂಗನಾಥ ಸ್ವಾಮಿ ದೇವಾಲಯದ ನವರಾತ್ರಿ ಉತ್ಸವಕ್ಕೆ 2 ವರ್ಷಗಳ ಬಳಿಕ ಚಾಲನೆ: ವಿನೋದ್ ಚೌಕಿದಾರ್
-
Mandya22 hours ago
ತಿಗಳ ಜನಾಂಗವು ಜಾತಿ ಕಾಲಂನಲ್ಲಿ “ತಿಗಳ” ವೆಂದು, ಉಪಜಾತಿ ಕಾಲಂನಲ್ಲಿ “ಅಗ್ನಿವಂಶ ಕ್ಷತ್ರಿಯ” ಎಂದು ನಮೂದಿಸಿ : ಎಸ್.ಕೆ.ಸಿದ್ದಯ್ಯ
-
Hassan51 minutes ago
ಹಾಸನದ ೧೫ ಕರ್ನಾಟಕ ಬೆಟಾಲಿಯನ್ ನಲ್ಲಿ ಎನ್ಸಿಸಿ ಕಾರ್ಯಗಾರ
-
Chamarajanagar22 hours ago
ಗ್ರಾಮಸ್ಥರಿಗೆ ನರೇಗಾ ಯೋಜನೆ ಬಗ್ಗೆ ತಿಳುವಳಿಕೆ ಮುಖ್ಯ: ಶೋಭಾ
-
Mysore16 hours ago
ವಸ್ತು ಪ್ರದರ್ಶನಕ್ಕೆ ಚಾಲನೆ: ಮೊದಲ ದಿನವೇ ವಸ್ತು ಪ್ರದರ್ಶನ ಭರ್ತಿ
-
Mandya23 hours ago
ರಾಜ್ಯದ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬಲೆ ಇಳಿಕೆಗೆ ಮುಂದಾಗಲಿ : ಆರ್.ಅಶೋಕ್