Kodagu
ಜಾತಿ ಜನಗಣತಿ ಸಂದರ್ಭ ಕೊಡವ ಎಂದು ನಮೂದಿಸಲು ಸಿಎನ್‌ಸಿ ಮನವಿ
 
																								
												
												
											ಮಡಿಕೇರಿ: ರಾಜ್ಯ ಸರಕಾರದ ವತಿಯಿಂದ ನಡೆಯುವ ಜಾತಿ ಜನಗಣತಿ ಸಂದರ್ಭ ನಗಣ್ಯ ಆನಿಮಿಸ್ಟೆಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಜಾತಿ, ಭಾಷೆ, ಮಾತೃಭಾಷೆ ಮತ್ತು ಧರ್ಮದ ಕಾಲಂ ನಲ್ಲಿ ಸರ್ವ ಕೊಡವರು “ಕೊಡವ” ಎಂದು ನಮೂದಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಇದೇ ಸೆ.೨೨ ರಿಂದ ನಡೆಸುವ ಜಾತಿ ಜನಗಣತಿಯಲ್ಲಿ ಉತ್ತಮ ನಾಳೆಗಾಗಿ ಮತ್ತು ಕೊಡವರ ಸಮಗ್ರ ಸಬಲೀಕರಣಕ್ಕಾಗಿ “ಕೊಡವ” ಎಂದು ನಮೂದಿಸುವುದು ಅತ್ಯವಶ್ಯಕವಾಗಿದೆ. ಆದಿಮಸಂಜಾತ ಏಕ-ಜನಾಂಗೀಯ ಕೊಡವರ ಹಕ್ಕುಗಳು ಖಾತ್ರಿಯಾಗಬೇಕಾದಲ್ಲಿ ಕೊಡವ ಎಂದು ದಾಖಲಿಸಿ ಎಂದು ಕರೆ ನೀಡಿದ್ದಾರೆ.
ಕೊಡವರು ಯಾವುದೇ ಪಂಥಗಳು ಅಥವಾ ಉಪಪಂಗಡಗಳಿಲ್ಲದ ಏಕೈಕ, ಏಕ-ಜನಾಂಗೀಯ ಗುಂಪಾಗಿದ್ದಾರೆ. ವಿಭಿನ್ನ ಗುರುತು, ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ವಿಶಿಷ್ಟ ಜನಾಂಗೀಯ ಸಮುದಾಯವಾಗಿದ್ದಾರೆ. ಜನಗಣತಿದಾರರು ನಿಮ್ಮ ಮನೆ ಮನೆಗೆ ಭೇಟಿ ನೀಡುವಾಗ, ಪ್ರತಿಯೊಬ್ಬ ಕೊಡವರೂ ಜಾತಿ, ಭಾಷೆ, ಧರ್ಮದ ಕಾಲಂನಲ್ಲಿ “ಕೊಡವ” ಎಂದೇ ನಮೂದಿಸಬೇಕು. ಇದು ರಾಜಕೀಯ, ಆರ್ಥಿಕ ಸಬಲೀಕರಣ ಮತ್ತು ಸಾಂಸ್ಕೃತಿಕ, ಜಾನಪದ ಉನ್ನತಿಯನ್ನು ಸಾಧಿಸಲು ನಿರ್ಣಾಯಕವಾಗಿದೆ. ಅಲ್ಲದೆ ನಮ್ಮ ಸೂಕ್ಷ್ಮತೀಸೂಕ್ಷ್ಮ ಡೇಟಾವನ್ನು ದೃಢೀಕರಿಸುತ್ತದೆ.
ಈ ಪ್ರಕ್ರಿಯೆಯು ಕೇಂದ್ರ ಸರಕಾರದ ೨೦೨೬-೨೭ ರ ರಾಷ್ಟ್ರೀಯ ಜನಸಂಖ್ಯಾ ಗಣತಿಯ ಪ್ರಸ್ತಾವಿತ ಅನುಷ್ಠಾನಕ್ಕೆ ಮತ್ತು ಅಖಿಲ ಭಾರತ ಜಾತಿ ಗಣತಿಗೆ ಆಧಾರವಾಗಿ ಸಾಂವಿಧಾನಿಕ ಖಾತರಿಯನ್ನು ಪಡೆಯಲು ಮತ್ತಷ್ಟು ಆಧಾರವಾಗಲಿದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸಿಎನ್‌ಸಿ ಸಂಘಟನೆ ತನ್ನ ನಿರಂತರ ಹೋರಾಟದ ಪ್ರಯಾಣದಲ್ಲಿ ಕರ್ನಾಟಕ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷರಾಗಿದ್ದ ಡಾ.ದ್ವಾರಕನಾಥ್ ಆಯೋಗವನ್ನು ಭೇಟಿಯಾಗಿ ಕೊಡವರ ಹಕ್ಕುಗಳ ಕುರಿತು ಪ್ರತಿಪಾದಿಸುತ್ತಿತ್ತು. “ಕೊಡಗರು” ಎಂದು ಇದ್ದ ’ಕೊಡವ’ ಪದದ ಬಗ್ಗೆ ೨೦೦೮ ರಲ್ಲಿ ಅವರಿಗೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಕೊಡವರ ನೈಜ ಹಕ್ಕೊತ್ತಾಯಕ್ಕೆ ಸ್ಪಂದಿಸಿದರು. ಗಂಭೀರ ದೋಷವನ್ನು ವಿವೇಚನಾಯುಕ್ತ ಮನಸ್ಸಿನಿಂದ ಸರಿಪಡಿಸಲು ಮುಂದಾದರು. ಇದಲ್ಲದೆ, ೨೦೧೦ ರಲ್ಲಿ “ಕೊಡಗರು” ಎನ್ನುವ ವಿಚಿತ್ರವಾದ ಪದವನ್ನು ಕಿತ್ತೊಗೆದು “ಕೊಡವ” ಎನ್ನುವ ಜಾನಪದ-ಶಾಸ್ತ್ರೀಯ ಪದವನ್ನು ಪುರಸ್ಕರಿಸಿ ತಿದ್ದುಪಡಿ ಮಾಡಲು ಶಿಫಾರಸ್ಸು ಮಾಡಿದರು.
ಆದರೆ ನಿಯಮಗಳ ಉಲ್ಲಂಘನೆಯ ಮೂಲಕ ಆಡಳಿತ ವ್ಯವಸ್ಥೆ ನಮ್ಮ ಕಾನೂನುಬದ್ಧ ಹಕ್ಕುಗಳನ್ನು ನಿರಾಕರಿಸಿತು. ಮತ್ತೆ ಸಿಎನ್‌ಸಿ ತನ್ನ ವಕೀಲ ಬಲ್ಲಚಂಡ ಬೊಳ್ಳಿಯಪ್ಪ ಅವರ ಸಹಕಾರದೊಂದಿಗೆ ರಾಜ್ಯ ಶ್ರೇಷ್ಠ ನ್ಯಾಯಾಲಯವನ್ನು ಸಂಪರ್ಕಿಸಿತು. ಸಿಎನ್‌ಸಿಯ ಸುದೀರ್ಘ ಕಾನೂನು ಹೋರಾಟದ ಫಲವಾಗಿ ೨೦೨೧ ಡಿ.೮ ರಂದು ಕೊಡವ ಶಾಸ್ತ್ರೀಯ ನಾಮಕರಣದ ಹಕ್ಕನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ನೀಡಿದ ಮಹತ್ವದ ಹೈಕೋರ್ಟ್ ತೀರ್ಪಿನ ಅನುಸಾರ ಎತ್ತಿಹಿಡಿಯಲಾಯಿತು. ಅಂತಿಮವಾಗಿ ೨೦೨೩ ರಲ್ಲಿ ಹಾಲಿ ಸರಕಾರ ತನ್ನ ಗೆಜೆಟ್ ಅಧಿಸೂಚನೆಯ ಮೂಲಕ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ನಮ್ಮನ್ನು “ಕೊಡವ” ಎಂದು ದಾಖಲಿಸಿತು.
೧೮೭೧-೭೨ ರಿಂದ ೨೦೩೧ ರವರೆಗೆ ಬ್ರಿಟಿಷ್ ರಾಜ್ ಸರ್ಕಾರ ನಡೆಸಿದ ಮೊದಲ ಜಾತಿವಾರು ಜನಗಣತಿಯಲ್ಲಿ ಕೊಡವರನ್ನು ಕೊಡವ ಜನಾಂಗ ಎಂದು ದಾಖಲಿಸಲಾಗಿದೆ. ಇದೊಂದು ಮಹತ್ವಪೂರ್ಣ ಅಧ್ಯಾಯ ಎಂಬುವುದನ್ನು ನಾವು ನಿಮ್ಮ ಗಮನಕ್ಕೆ ತರುತ್ತೇವೆ. ೧೮ನೇ ಶತಮಾನದಲ್ಲಿ ಕೊಡವ ಲ್ಯಾಂಡ್‌ನ ಹೊರ ಪ್ರದೇಶದ ಆಡಳಿತಗಾರ ಲಿಂಗರಾಜ ಕೂಡ ತನ್ನ “ಹುಕುಮ್ನಾಮ” ದಲ್ಲಿ ಕೊಡವರನ್ನು ಪ್ರತ್ಯೇಕ ಅಸ್ತಿತ್ವವೆಂದು ಎಣಿಸಿ ದಾಖಲಿಸಿದ್ದಾರೆ. ೧೯೪೧ ರ ಜನಗಣತಿಯ ನಂತರ ಕೊಡವರನ್ನು ಇತರ ಬಹುಸಂಖ್ಯಾತ ಗುಂಪುಗಳೊಂದಿಗೆ ವಿಲೀನಗೊಳಿಸಲಾಯಿತು. ಇದರಿಂದಾಗಿ ನಾವು ಸರ್ಕಾರಿ ದಾಖಲೆಗಳಲ್ಲಿ ನಮ್ಮ ವಿಶಿಷ್ಟ ಗುರುತನ್ನು ಕಳೆದುಕೊಂಡಿದ್ದರಿಂದ ನಮ್ಮ ಭವಿಷ್ಯವು ಕತ್ತಲೆಯಾಯಿತು ಎಂದು ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಹಾನ್ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು, ಜನಗಣತಿ ಪಟ್ಟಿಯ ಎಲ್ಲಾ ಕಾಲಂಗಳಲ್ಲಿ ಕೊಡವ ಎಂದು ನಮೂದಿಸಬೇಕಾಗಿದೆ. ಈ ಸಮೀಕ್ಷೆ ಸೆ.೨೨ ರಿಂದ ಅ.೭ ರವರೆಗೆ ೧೫ ದಿನಗಳ ಕಾಲ ನಡೆಯಲಿದೆ. ಈಗ ನಾವು ಸಾಂವಿಧಾನಿಕ ರಕ್ಷಣೆಗಾಗಿ ಸರಕಾರಿ ದಾಖಲೆಗಳನ್ನು ಸರಿಯಾಗಿ ನಮೂದಿಸಬೇಕು. ನಾಗರಿಕ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ನಾವು ಕೊಡವರು ಎಂದು ರಾಜ್ಯ ದಾಖಲೆಯಲ್ಲಿ ನಮೂದಿಸಲಾಗದ ಹೊರತು ನಮ್ಮ ಸಮಗ್ರ ಸಬಲೀಕರಣಕ್ಕಾಗಿ ನಾವು ಅಪೇಕ್ಷೆಪಡಲು ಸಾಧ್ಯವಾಗುವುದಿಲ್ಲ.
ಆದ್ದರಿಂದ, ೨೦೨೫ ರ ಜಾತಿವಾರು ಜನಗಣತಿಗಾಗಿ ಕರ್ನಾಟಕ ಹಿಂದುಳಿದ ವರ್ಗ ಆಯೋಗವು ಸೂಚಿಸಿದ ಜಾತಿ-ಭಾಷಾ-ಧರ್ಮದ ಎಲ್ಲಾ ಅಂಕಣಗಳಲ್ಲಿ ಕೊಡವರು ಎಂದು ನಮೂದಿಸುವಂತೆ ಎಲ್ಲಾ ಕೊಡವರು ಹಾಗೂ ಕೊಡವತಿಯರಿಗೆ ಮನವಿ ಮಾಡಿಕೊಳ್ಳುವುದಾಗಿ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
Kodagu
ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ -ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
 
														ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲುವಿನಲ್ಲಿ ನಡೆದ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಾಪೋಕ್ಲು ಬಳಿಯ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಸಿದ್ದಾಪುರದ ಇಕ್ರ ಪಬ್ಲಿಕ್ ಶಾಲಾವಿದ್ಯಾರ್ಥಿಗಳ ತಂಡವನ್ನು ಪೆನಾಲ್ಟಿ ಶೂಟ್ ಔಟ್ ನಲ್ಲಿ 3-2 ಅಂತರದ ಗೋಲುಗಳಿಂದ ಮಣಿಸಿ ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯಲ್ಲಿ ದೈಹಿಕ ಶಿಕ್ಷಕರಾಗಿ ಶಾಲೆಯ ಶಿಕ್ಷಕರಾದ ಸುನಿಲ್ ಹಾಗೂ ಕಿರಣ್ ಅವರು ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಅಧ್ಯಕ್ಷರು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಶಿಕ್ಷಕವೃಂದ ಅಭಿನಂದನೆಸಲ್ಲಿಸಿದ್ದಾರೆ.
Kodagu
ಕೊಡಗು ಪತ್ರಕರ್ತರ ಸಂಘ(ರಿ) ಕ್ಷೇಮಾಭಿವೃದ್ಧಿ ಸಮಿತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
 
														ಕೊಡಗು : ಜಿಲ್ಲಾ ಪತ್ರಕರ್ತರ ಸಂಘ(ರಿ.) ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯಿಂದ 2025 ರ ಸೆಪ್ಟೆಂಬರ್ 19ನೇ ತಾರೀಕು ಶುಕ್ರವಾರದಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಪತ್ರಕರ್ತರು, ಪತ್ರಕರ್ತರ ಕುಟುಂಬ ವರ್ಗದವರು, ಪತ್ರಿಕಾ ಕ್ಷೇತ್ರದ ಸಿಬ್ಬಂದಿಗಳು, ಪತ್ರಿಕಾ ವಿತರಕರು ಹಾಗೂ ಕುಟುಂಬದವರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆಯ 15 ವಿಭಾಗಗಳ ನುರಿತ ತಜ್ಞರುಗಳು ಹಾಗೂ ವೈದ್ಯರುಗಳು ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ನೇತ್ರ ತಜ್ಞರು, ಜನರಲ್ ಮೆಡಿಸಿನ್, ಮೂಳೆ ತಜ್ಞರು, ಇ.ಎನ್.ಟಿ. ತಜ್ಞರು, ಶ್ವಾಸಕೋಶ ತಜ್ಞರು, ದಂತ ವೈದ್ಯಕೀಯ, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಶ್ರವಣ ಆರೋಗ್ಯ ತಜ್ಞರು, ಮಾನಸಿಕ ಆರೋಗ್ಯ ತಜ್ಞರು ಮುಂತಾದ 15 ವಿಭಾಗಗಳ ನುರಿತ ತಜ್ಞರು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಆರೋಗ್ಯಕ್ಕೆ ಸಂಬಂಧಿಸಿದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಆಯುಷ್ಮಾನ್ ಭಾರತ್ ಯೋಜನಾಧಿಕಾರಿ ಕೂಡ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಡಿಕೇರಿಯ ಪತ್ರಿಕಾ ಭವನ ಸಮೀಪದ ಕಾವೇರಿ ಹಾಲ್ ನಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರಗೆ ಈ ಶಿಬಿರ ನಡೆಯಲಿದ್ದು, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆಯ ಡೀನ್ ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ, ವೈದ್ಯಕೀಯ ಅಧೀಕ್ಷಕರಾದ ಡಾ. ಹೆಚ್.ಕೆ. ಸೋಮಶೇಖರ್, ಜಿಲ್ಲಾ ಸರ್ಜನ್ ಡಾ. ನಂಜುಂಡಯ್ಯ ಹಾಗೂ ತುರ್ತು ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಮೋಹನ್ ಅಪ್ಪಾಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ನಿಡಲಿದ್ದಾರೆ.

ಕೊಡಗು ಪತ್ರಕರ್ತರ ಸಂಘ(ರಿ) ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಈ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಪತ್ರಕರ್ತರು, ಪತ್ರಕರ್ತರ ಕುಟುಂಬ ವರ್ಗದವರು, ಪತ್ರಿಕಾ ಕ್ಷೇತ್ರದ ಸಿಬ್ಬಂದಿಗಳು, ಪತ್ರಿಕಾ ವಿತರಕರು , ಕುಟುಂಬ ವರ್ಗದವರು, ಸಾರ್ವಜನಿಕರು ಬಂದು ಎಲ್ಲಾ ವಿಭಾಗಗಳ ನುರಿತ ತಜ್ಞರಿರುವ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೊಡಗು ಪತ್ರಕರ್ತರ ಸಂಘ, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಕುಮಾರ್ ಜಿ.ವಿ. ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕೂರ್ಗ್ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.
Kodagu
ಸೆಪ್ಟೆಂಬರ್ 13, ಮತ್ತು 14 ರಂದು ಚೋಕಂಡಳ್ಳಿಯಲ್ಲಿ ಅದ್ಧೂರಿ ಕಂದೂರಿ ಕಾರ್ಯಕ್ರಮ
 
														ಮಡಿಕೇರಿ: ಸೆಪ್ಟೆಂಬರ್ 13 ಶನಿವಾರ ಮತ್ತು 14ರ ಭಾನುವಾರ ಪ್ರವಾದಿ ಮೊಹಮ್ಮದ್ (ಸ.ಅ) ಅವರ ಮುಹಜಿಸತ್ತಿನಿಂದ ಪ್ರಸಿದ್ದಿ ಹೊಂದಿರುವ ದಶಕಗಳಿಂದ ವಿರಾಜಪೇಟೆ ಸಮೀಪದ ಚೋಕಂಡಳ್ಳಿಯಲ್ಲಿ ನಡೆಸಿಕೊಂಡು ಬರುತ್ತಿರುವ “ಚೋಕಂಡಳ್ಳಿ ಕಂದೂರಿ” (ಈದ್-ಮಿಲಾದ್ )ಕಾರ್ಯಕ್ರಮವು ನಡೆಯಲಿದೆ ಎಂದು ಚೋಕಂಡಳ್ಳಿ ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಪಿಎ ಸಿರಾಜುದ್ದೀನ್ ತಿಳಿಸಿದ್ದಾರೆ.
ಚೋಕಂಡಳ್ಳಿಯ ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚೋಕಂಡಳ್ಳಿಯ ಕಂದೂರಿ ಕಾರ್ಯಕ್ರಮಕ್ಕೆ ಹಲವು ದಶಕಗಳ ಇತಿಹಾಸವೊಂದಿದೆ.ಕಂದೂರಿ ಕಾರ್ಯಕ್ರಮಕ್ಕೆ ಜಾತಿ,ಧರ್ಮ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಿದ್ದಾರೆ.

ಸೆಪ್ಟೆಂಬರ್ 13ರ ಶನಿವಾರ ಅಸರ್ ನಮಾಝಿನ ಬಳಿಕ ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ ರಫಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಸಂಜೆ 07 ಗಂಟೆಗೆ ನಡೆಯುವ ಕಾರ್ಯಕ್ರಮದ ಮುಖ್ಯ ಪ್ರಭಾಷಣವನ್ನು ರಫೀಕ್ ಸಹದಿ ದೇಲಂಪಾಡಿ ಮಾಡಲಿದ್ದು,ಪ್ರಾರ್ಥನೆಯನ್ನು ಸೈಯದ್ ಮಹ್ ದಿ ಅಹಮದ್ ತಂಙಲ್ ಅಂದ್ರೋತ್ ಲಕ್ಷದೀಪ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈದ್-ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ ರಫಿ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಚೋಕಂಡಳ್ಳಿ ಜುಮಾ ಮಸೀದಿ ಮುದರಿಸ್ ಮುಬಶ್ಶಿರ್ ಅಹ್ಸನಿ ಅಲ್ ಕಾಮಿಲ್ ಮಾಡಲಿದ್ದಾರೆ ಎಂದು ಸಿರಾಜುದ್ದೀನ್ ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 14ರ ಭಾನುವಾರ ಬೆಳಗ್ಗೆ 05 ಗಂಟೆಗೆ ಮೌಲಿದ್ ಪಾರಾಯಣ, ಬೆಳಗ್ಗೆ 08 ಗಂಟೆಗೆ ರಿಫಾಯಿ ರಾತೀಬ್ ಸಂಘದವರಿಂದ ಮನೆಗಳಿಗೆ ಸಂದರ್ಶನ,ಬೆಳಗ್ಗೆ 10 ಗಂಟೆಗೆ ಈದ್-ಮಿಲಾದ್ ಸಂದೇಶ ಜಾಥಾ,11.30 ಗಂಟೆಗೆ ಆಕರ್ಷಕ ದಫ್ ಪ್ರದರ್ಶನ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಪ್ರಭಾಷಣವನ್ನು ಕರ್ನಾಟಕ ರಾಜ್ಯ ಎಸ್.ಎಸ್.ಎಫ್ ಅಧ್ಯಕ್ಷ ಹಾಫಿಝ್ ಸುಫಿಯಾನ್ ಸಖಾಫಿ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ ರಫಿ ವಹಿಸಲಿದ್ದಾರೆ.
ಪ್ರಾರ್ಥನ ಹಾಗೂ ಉದ್ಘಾಟನೆಯನ್ನು ಸೈಯದ್ ಮಹದಿ ತಂಙಲ್ ಅಂದ್ರೋತ್ ಲಕ್ಷದೀಪ ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಎಸ್ ಪೊನ್ನಣ್ಣ, ವಿರಾಜಪೇಟೆ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ,ಚೋಕಂಡಳ್ಳಿ ಜುಮಾ ಮಸೀದಿ ಅಧ್ಯಕ್ಷ ಪಿ.ಎ ಹನೀಫ್,ರಿಫಾಯಿ ರಾತೀಬ್ ಸಂಘದ ಅಧ್ಯಕ್ಷ ಡಿ.ಎಚ್ ಸೂಫಿ ಹಾಜಿ,ಬಿಳುಗುಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿಲ್ಲವಂಡ ಕಾವೇರಪ್ಪ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ 02 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪಿ.ಎ ಸಿರಾಜುದ್ದೀನ್ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ ರಫಿ,ಸಹ ಕಾರ್ಯದರ್ಶಿ ಕೆ.ವೈ ನಾಸರ್,ಸದಸ್ಯರಾದ ಆಶಿಂ,ಇಸ್ಮಾಯಿಲ್, ಸೈಫುದ್ದೀನ್,ಶಿಹಾಬ್ ಸಹದಿ ಇದ್ದರು.
- 
																	   Hassan2 hours ago Hassan2 hours agoರೈಲ್ವೆ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ 
- 
																	   Chamarajanagar16 hours ago Chamarajanagar16 hours agoಚಾಮರಾಜನಗರ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ ಮುಂದುವರೆಸಲು ಸಂಸದ ಸುನೀಲ್ ಬೋಸ್ ಮಾಡಿದ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ 
- 
																	   Hassan22 hours ago Hassan22 hours agoಸಾಲ ಬಾಧೆ ತಾಳಲಾರದೆ ಯುವ ರೈತ ಆತ್ಮಹ*ತ್ಯೆ 
- 
																	   Uncategorized24 hours ago Uncategorized24 hours agoಪ್ರತಿಯೊಬ್ಬ ಶಿಕ್ಷಕನೂ ನಿರಂತರ ವಿದ್ಯಾರ್ಥಿ – ಶ್ರೀಮತಿ ತಾರ ಎಸ್.ಸ್ವಾಮಿ 
- 
																	   Manglore20 hours ago Manglore20 hours agoವಿದ್ಯಾಭಾರತಿ ರಾಜ್ಯ ಮತ್ತು ಪ್ರಾಂತಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ 
- 
																	   National22 hours ago National22 hours agoಟಿ-20 ಏಷ್ಯಾಕಪ್| ಭಾರತ-ಪಾಕ್ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ 
- 
																	   Hassan24 minutes ago Hassan24 minutes agoಮದ್ದೂರು ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಗಲಾಟೆ ಕೇಸ್: ಇನ್ಸ್ ಪೆಕ್ಟರ್ ಶಿವಕುಮಾರ್ ಸಸ್ಪೆಂಡ್ 
- 
																	   Mysore23 hours ago Mysore23 hours agoಜಾತಿಗಣತಿಯಲ್ಲಿ ಬ್ರಾಹ್ಮಣ ಸಮಾಜ ವಿಂಗಡಿಸದಿರಿ 

 
											 
											 
											 
											